Moving text

Mandya District Police

DAILY CRIME REPORT DATED : 08-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-04-2013 ರಂದು ಒಟ್ಟು 45 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  2 ರಾಬರಿ ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ ವರದಕ್ಷಿಣೆ ಕಿರುಕುಳ ಪ್ರಕರಣ,  3 ಹಗಲು/ರಾತ್ರಿ ಕಳ್ಳತನ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    

ಯು.ಡಿ.ಆರ್. ಪ್ರಕರಣಗಳು :

1. ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಸಿದ್ದಮ್ಮ ಕೋಂ. ನಿಂಗಯ್ಯ, ದೊಡ್ಡಕೊತ್ತಗೆರೆ ಗ್ರಾಮ, ಬಸರಾಳು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಸೊಸೆ ಲಕ್ಷ್ಮಿ ಕೋಂ .ಲೇ|| ರಮೇಶ, 26ವರ್ಷ, ದೊಡ್ಡಕೊತ್ತಗೆರೆ ಗ್ರಾಮ, ಬಸರಾಳು ಹೋಬಳಿ ರವರು ಯಾವುದೋ ವಿಷ ಹಾಗೂ ಟ್ಯಾಬ್ಲೇಟ್ಸ್ ಸೇವಿಸಿದ್ದು ಲಕ್ಷ್ಮಿಗೆ ಚಿಕಿತ್ಸೆ ಕೊಡಿಸಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗಿರದೇ ಈ ದಿನ ಬೆಳಿಗ್ಗೆ 10:20 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ಲಕ್ಷ್ಮಿಯು ವಿಷ ಸೇವನೆ ಅಥವಾ ವಿಷ ಮಾತ್ರೆ ಸೇವನೆಯಿಂದ ಸಾವನ್ನಪ್ಪಿರುತ್ತಾರೆ ವಿನಹ ಬೇರೇನು ಇರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್.ನಂ. 10/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಸಣ್ಣಯ್ಯ ಬಿನ್. ಲೇ|| ತಾಣಯ್ಯ, ಶಿರಮಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-04-2013 ರಂದು ಶಿವಣ್ಣ, ಶಿರಮಹಳ್ಳಿ ಗ್ರಾಮರವರು ಹೊಟ್ಟೆನೋವು ಜಾಸ್ತಿಯಾದಾಗ ಕ್ರಿಮಿನಾಶಕ ಔಷದಿಯನ್ನು ತೆಗೆದುಕೊಂಡು ಹೊಟ್ಟೆಉರಿ ಎಂದು ಒದ್ದಾಡುತ್ತಿದ್ದಾಗ ಪಿರ್ಯಾದಿಯವರು ಇದನ್ನು ನೋಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ನಿನ್ನೆ ದಿನಾಂಕ: 07-04-2013 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 394 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಧನಂಜಯ, ಕೋಣಹಳ್ಳಿ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ದಿನಾಂಕ: 07-04-2013 ರಂದು ಕಲ್ಲಹಳ್ಳಿಯಿಂದ ಕೋಣನಹಳ್ಳಿ  ಗ್ರಾಮಕ್ಕೆ ಹೋಗುವ ಕೆರೆ ಏರಿ ರಸ್ತೆಯಲ್ಲಿ ರಾತ್ರಿ  10 ರಿಂದ 11  ಗಂಟೆ ಸಮಯದಲ್ಲಿ ಊರಿಗೆ ಬರುವಾಗ ಯಾರೋ ದುಷ್ಕರ್ಮಿಗಳು  ನಮ್ಮಣ್ಣನ ಬೈಕ್ ಅನ್ನು  ಅಡ್ಡಗಟ್ಟಿ ಅವನ ತಲೆಗೆ ದೊಣ್ಣೆಯಿಂದ ಹೊಡೆದು ರಕ್ತಗಾಯ ಮಾಡಿ ಮೋಟಾರ್ ಸೈಕಲ್ ಅನ್ನು  ಬೇಲಿಗೆ ತಳ್ಳಿ, ಕೋಳಿಯ ವ್ಯಾಪಾರದಿಂದ ಬಂದಿದ್ದ ನಗದು ಹಣ, ಆತನ ಬಳಿ ಇದ್ದ ಚಿನ್ನದ ಚೈನು ಒಂದು ಉಂಗುರವನ್ನು ದೋಚಿಕೊಂಡು ಹೋಗಿರುತ್ತಾರೆ ಇವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 154/13 ಕಲಂ. 384 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಕೆಂಪಮ್ಮ ಬಿನ್ ಬೊಮ್ಮಯ್ಯ, ಕಾಗೇಹಳ್ಳದದೊಡ್ಡಿ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-04-13 ರ ಮದ್ಯರಾತ್ರಿ 02-30 ಗಂಟೆ ಸಮಯದಲ್ಲಿ ಕಾಗೇಹಳ್ಳದದೊಡ್ಡಿ ಗ್ರಾಮದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಂದು ತನ್ನನ್ನು ಅಡ್ಡಗಟ್ಟಿ ಚಿನ್ನದ ಚೈನನ್ನು ಕೊಡು ಇಲ್ಲದಿದ್ದರೆ ಸಾಯಿಸಿಬಿಡುವುದಾಗಿ ಹೆದರಿಸಿದಾಗ ಪಿರ್ಯಾದಿರವರು ಹೆದರಿ ತಮ್ಮ ಕತ್ತಿನಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಚೈನನ್ನು ಬಿಚ್ಚಿಕೊಟ್ಟಿರುವುದಾಗಿ ಇದರ ಅಂದಾಜು ಬೆಲೆ 65000-00 ರುಗಳಾಗುತ್ತದೆ ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 152/13 ಕಲಂ. 498(ಎ), 323-506  ಐಪಿಸಿ 3 & 4 ಡಿ.ಪಿ. ಆಕ್ಟ್ ಕೂಡ 34 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಕವಿತಾ ಕೋಂ. ಶಿವಲಿಂಗ, 23 ವರ್ಷ, ಹಳೆಬೂದನೂರು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ   ಅವರ ಗಂಡ 1] ಶಿವಲಿಂಗ ಬಿನ್ ಮಂಚಯ್ಯ, ಇತರೆ 2] ಮಂಚಯ್ಯ, 3] ಶಾರದಮ್ಮ ಹಳೆಬೂದನೂರು ಗ್ರಾಮ, ಮಂಡ್ಯ ತಾ. ರವರುಗಳು ಪಿರ್ಯಾದಿಯವರಿಗೆ 200000/- ರೂ. ವರದಕ್ಷಿಣೆ ಹಣವನ್ನು ತಂದರೆ ಮನೆಗೆ ಬಾ ತರದೆ ಹೋದರೆ ಮನೆಗೆ ಬರಲೇ ಬೇಡವೆಂದು ನಿನ್ನನ್ನು ಈ ದಿನ ಸಾಯಿಸದೆ ಬಿಡುವುದಿಲ್ಲವೆಂದು ಕಿರುಚಾಡಿದರು, ಆರೋಪಿತರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


ಹಗಲು/ರಾತ್ರಿ ಕಳ್ಳತನ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 153/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 08-04-2013 ರಂದು ಪಿರ್ಯಾದಿ ಬಿ. ಮಹದೇವಯ್ಯ,  ಮುಖ್ಯ  ಶಿಕ್ಷಕರು, ಇಂಡುವಾಳು ಸರ್ಕಾರಿ  ಫ್ರೌಡಶಾಲೆ ರವರುಗಳು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-04-2013 ರಾತ್ರಿ ವೇಳೆಯಲ್ಲಿ ಇಂಡುವಾಳು ಗ್ರಾಮದ ಸಕರ್ಾರಿ ಫ್ರೌಡಶಾಲೆಯ ಬಾಗಿಲನ್ನು ಯಾರೋ ಕಳ್ಳರು, ಯಾವುದೋ ಆಯುಧದಿಂದ ಮೀಟಿ ಕಂಪ್ಯೂಟರ್ ಕೊಠಡಿಯಲ್ಲಿಟ್ಟಿದ್ದ 4 ಭಾರತ್ ಕಂಪನಿಯ ಸಿಲಿಂಡರ್ಗಳು ಮತ್ತು ಯುಪಿಎಸ್.ಗೆ ಆಳವಡಿಸಿದ್ದ 3 ಹಳೆಯ ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 115/13 ಕಲಂ. 454,457,380 ಐ.ಪಿ.ಸಿ.

       ದಿನಾಂಕ: 08-04-2013 ರಂದು ಪಿರ್ಯಾದಿ ಲಕ್ಷ್ಮಿ, ಮುಖ್ಯೊಪಾದ್ಯಾಯರು, ಸರ್ಕಾರಿ  ಪ್ರೌಢಶಾಲೆ, ದೊಡ್ಡಪಾಳ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06-04-2013    08-04-2013 ರಂದು ದೊಡ್ಡಪಾಳ್ಯ ಸರ್ಕಾರಿ  ಪ್ರೌಡಶಾಲೆಯ ಕಂಪ್ಯೂಟರ್ ಕೊಠಡಿಯ ಬೀಗವನ್ನು ಯಾರೋ ಕಳ್ಳರು ಯಾವುದೊ ಆಯುಧದಿಂದ ಮೀಟಿ ಒಳಗೆ ಪ್ರವೇಶಮಾಡಿ ಈ ಹದಿನಾರು ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಬೆಲೆ 24.300/ -ರೂ ಬಾಳುತ್ತೆ ಇವುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 457-380 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಎಂ.ಎನ್. .ಗಿರಿಜ, ಅಂಗನವಾಡಿ ಕಾರ್ಯಕರ್ತೆ, ಸಿ.ಬಂಗ್ಲೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 06-04-2013  ರಿಂದ ದಿನಾಂಕ: 07-04-2013 ರಲ್ಲಿ,  ರಾತ್ರಿ ಸಮಯದಲ್ಲಿ ಅಂಗನವಾಡಿ ಕೇಂದ್ರ,  ಸಿ.ಬಂಗ್ಲೆ ಯ ಬಾಗಿಲ ಬೀಗವನ್ನು ಯಾರೋ ಕಳ್ಳರು ಯಾವುದೊ ಆಯುಧದಿಂದ ಚಚ್ಚಿ, ಒಳಪ್ರವೇಶಿಸಿ ಅಂಗನವಾಡಿ ಕೇಂದ್ರದಲ್ಲಿದ್ದ ಸುಮಾರು 2,580/- ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹ ಕಳವು ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 52/13 ಕಲಂ. 379 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಚಂದ್ರಶೇಖರ್ ಎಸ್.ಡಿ ಬಿನ್. ಶಂಭೂನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 07-04-2013 ರ ರಾತ್ರಿ 9-00 ಹಾಗು ದಿನಾಂಕ ಃ 08-04-2013 ರ ಬೆಳಿಗ್ಗೆ 6-00 ಗಂಟೆಯ ನಡುವೆ, ಶಂಭೂನಹಳ್ಳಿ ಗ್ರಾಮದ ಪಿರ್ಯಾದಿಯ ಮನೆ ಮುಂದೆ ಮೋಟಾರ್ ಸೈಕಲ್ನ್ನು ನಿಲ್ಲಿಸಿ ದಿನಾಂಕ: 08-04-2013 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಲಾಗಿ ನನ್ನ ಮೋಟಾರ್ ಸೈಕಲ್ ಅನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಇದರ ಮೌಲ್ಯ 58.000/- ರೂ.ಗಳಾಗಿರುತ್ತದೆ ಇವುಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ : 

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 90/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 08-04-2013 ರಂದು ಪಿರ್ಯಾದಿ ತೀರ್ಥ ಬಿನ್. ಮಂಜೇಗೌಡ, 21ವರ್ಷ, ಮಂಚೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಜೇಗೌಡ, 30ವರ್ಷ ರವರು ದಿನಾಂಕಃ 06-04-2013 ಬೆಳಿಗ್ಗೆ 06-00 ಗಂಟೆಯಲ್ಲಿ ಮಂಚೆನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಇವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment