ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-05-2013 ರಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು, 2 ಕಳವು ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣಿ ಕಿರುಕುಳ ಪ್ರಕರಣ, 1 ಯು.ಡಿ.ಆರ್. ಪ್ರಕರಣ, 1 ಕಳ್ಳತನ ಪ್ರಕರಣ ಹಾಗು ಚುನಾವಣಾ ಅಕ್ರಮ/ಮುಂಜಾಗ್ರತಾ ಪ್ರಕರಣಗಳು, ಅಬಕಾರಿ ಕಾಯಿದೆ ಪ್ರಕರಣಗಳು ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
1. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 95/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 01-05-2013 ರಂದು ಪಿರ್ಯಾದಿ ರಮೇಶ ಬಿನ್. ಲೇಟ್. ದೊಡ್ಡಕರೀಗೌಡ, ಒಕ್ಕಲಿಗರು, ವ್ಯವಸಾಯ, ಅರಗಿನಮೆಳೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 29-04-13 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಪಿರ್ಯಾದಿಯವರು ಅವರ ಜಮೀನಿಗೆ ಹೋಗಿ ನೀರು ಕಟ್ಟಿ ನಂತರ ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ಮನೆಗೆ ವಾಪಸ್ ಮನೆಗೆ ಬಂದಾಗ ನನ್ನ ಹೆಂಡತಿ ಮಂಗಳಮ್ಮ ಮನೆಯಲ್ಲಿರಲಿಲ್ಲ. ಅವಳನ್ನು ನಾನು ಎಲ್ಲಾ ಕಡೆ ಹುಡುಕಾಡಿ ಸ್ನೇಹಿತರು ಸಂಬಂಧಿಕರುಗಳ ಬಳಿ ವಿಚಾರಿಸಿ ಮಾಹಿತಿ ಸಿಗದ ಕಾರಣ ಈ ದಿವಸ ತಡವಾಗಿ ದೂರು ನೀಡಿರುತ್ತೇನೆ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆರಗೂಡು ಪೊಲೀಸ್ ಠಾಣೆ ಮೊ.ನಂ. 68/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.
ದಿನಾಂಕ:01-05-2013ರಂದು ಪಿರ್ಯಾದಿ ಕುಮಾರ ಬಿನ್. ಲೇಟ್. ಕೆಂಚಶೆಟ್ಟಿ, ಆಲಕೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಹೆಂಡತಿ ಶೈಲಾ ಮತ್ತು ಮಗಳು ಲಾವಣ್ಯ ರವರುಗಳು ಆಲಕೆರೆ ಗ್ರಾಮದ ತನ್ನ ಮನೆಯಿಂದ ಮಂಡ್ಯಕ್ಕೆ ಆಸ್ಪತ್ರೆಗೆ ಹೋಗುವುದಾಗಿ ಪಕ್ಕದ ಮನೆಯವರಿಗೆ ಹೇಳಿ ಜೊತೆಯಲ್ಲಿ ತನ್ನ ಹೆಣ್ಣು ಮಗು ಲಾವಣ್ಯಳನ್ನು ಕರೆದುಕೊಂಡು ಹೋದವಳು ಇದುವರೆಗೆ ಮನೆಗೆ ಬಂದಿರುವುದಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ:01-05-2013ರಂದು ಪಿರ್ಯಾದಿ ಮಹದೇವ ಬಿನ್. ದೇವೇಗೌಡ, ಮಂಚನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಅನಿತಾ ಕೋಂ. ಮಹದೇವ, 28ವರ್ಷ. ಒಕ್ಕಲಿಗರು,. 5.1/2 ಅಡಿ ಎತ್ತರ ಕೋಲುಮುಖ, ಸಾಮಾನ್ಯ ಶರೀರ, ಗೋಧಿ ಮೈಬಣ್ಣ ರವರು ಬಹಿರ್ದೆಸೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಅವಳನ್ನು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಕೇಸು ನೊಂದಾಯಿಸಿದೆ.
ಕಳವು ಪ್ರಕರಣಗಳು :
1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 171/13 ಕಲಂ. 379 ಐ.ಪಿ.ಸಿ.
ದಿನಾಂಕ:01-05-2013ರಂದು ಪಿರ್ಯಾದಿ ಚಂದ್ರ ಕುಮಾರ ಬಿನ್. ಜಗದೀಶ, ಈಶ್ವರ ಟೆಂಪಲ್ ರೋಡ್, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದಊರು ಏನೆಂದರೆ ಕೆರೆತೊಣ್ಣೂರು ವಿಹಾರಕ್ಕೆಂದು ಹೋಗಲು ನಾವು ಮೋಟಾರ್ ಬೈಕ್ನ್ನು ತೆಗೆದುಕೊಂಡು ಬಂದಿದ್ದು ನಾನು ಸ್ನೇಹಿತರ ಜೊತೆ ಕೆರೆತೊಣ್ಣೂರು ಕೆರೆಯ ವಿಹಾರಕ್ಕೆ ಬಂದು ಮೇಲ್ಕಂಡ ಬೈಕನ್ನು ಕೆರೆಯ ಸಮೀಪ ನಿಲ್ಲಿಸಿ ಮದ್ಯಾಹ್ನ ಸುಮಾರು 12-30 ಗಂಟೆಯಲ್ಲಿ ನಿಲ್ಲಿಸಿ ನಾವುಗಳು ಕೆರೆಯಲ್ಲಿ ಸ್ನಾನ ಮಾಡಿಕೊಂಡು ವಾಪಸ್ 01-30 ಗಂಟೆಗೆ ಬಂದು ನೊಡಲಾಗಿ ನನ್ನ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು ನಾವುಗಳು ಬೈಕನ್ನು ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಇದರ ಅಂದಾಜು ಬೆಲೆ 30000/- ರೂಪಾಯಿಗಳು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 97/13 ಕಲಂ. 379 ಐ.ಪಿ.ಸಿ.
ದಿನಾಂಕ:01-05-2013ರಂದು ಪಿರ್ಯಾದಿ ಮಹದೇವ ಬಿನ್. ಮೊಳ್ಳೇಗೌಡ, ಒಕ್ಕಲಿಗರು, ವ್ಯವಸಾಯ, ಗುಳಗಟ್ಟ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮನೆಯ ಮುಂದೆ ನಿಲ್ಲಿಸಿದ್ದ ಪಿರ್ಯಾದಿಯವರ ಬಾಬ್ತು ಟ್ರಾಕ್ಟರ್ 4800/- ರೂ ಬೆಲೆಬಾಳುವ ಸೆಲ್ಪ್ ಬ್ಯಾಟರಿಯನ್ನು ಆರೋಪಿ ವೀರಾಸ್ವಾಮಿ ಬಿನ್. ರಾಜಣ್ಣ, ಗುಳಗಟ್ಟ ಗ್ರಾಮ ರವರು ದಿನಾಂಕ: 29-04-2013 ರಂದು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿರುವುದಾಗಿ ಪಿರ್ಯಾದು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣಿ ಕಿರುಕುಳ ಪ್ರಕರಣ :
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 143/13 ಕಲಂ. 498(ಎ)-324 ಕೂಡ 34 ಐ.ಪಿ.ಸಿ.
ದಿನಾಂಕ:01-05-2013ರಂದು ಪಿರ್ಯಾದಿ ಪೂಣರ್ಿಮ ಕೋಂ. ಈರೇಗೌಡ, ಮುಟ್ಟನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಅವರ ಗಂಡ 1] ಈರೇಗೌಡ, ಹಾಗು 2] ದೊಳ್ಳೇಗೌಡ 3] ರತ್ನಮ್ಮ, 4] ದೇವಮ್ಮ ಎಲ್ಲರು ಮುಟ್ಟನಹಳ್ಳಿ ಗ್ರಾಮ, ಮದ್ದೂರು ತಾ. ರವರುಗಳು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು ದಿನಾಂಕ:29-04-2013ರಂದು ಸುಮಾರು ಮದ್ಯಾಹ್ನ 01-30 ಗಂಟೆ ಸಮಯದಲ್ಲಿ ಪಿರ್ಯಾದಿಯ ಗಂಡ ಕುಡಿದು ಬಂದು ತವರು ಮನೆಯಿಂದ ಹಣತರುವಂತೆ ಜಗಳ ತೆಗೆದು ಪಿರ್ಯಾದಿಯ ತಲೆಯ ಮೇಲೆ ದೊಣ್ಣೆಯಿಂದ ಬಲವಾಗಿ ಹೊಡೆದರು ಮೈದುನನಾದ ದೊಳ್ಳೇಗೌಡ ಮುಂದಲೆಯನ್ನು ಹಿಡಿದು ಎಳೆದಾಡಿದನು ನಾದಿನಿ ರತ್ನಮ್ಮ ಮತ್ತು ಅತ್ತೆ ದೇವಮ್ಮ ಎಲ್ಲರೂ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಮಳವಳ್ಳಿ ಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ:01-05-2013ರಂದು ಪಿರ್ಯಾದಿ ಕಮಲಮ್ಮ ಕೊಂ. ಲೇಟ್. ನಾಗಯ್ಯ, ಮಂಚನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಮಗ ಮಂಜು ಬಿನ್. ಲೇಟ್ ನಾಗಯ್ಯ, 25 ವರ್ಷ, ಮಂಚನಹಳ್ಳಿ ಗ್ರಾಮ ರವರಿಗೆ ಈ ಹಿಂದಿನಿಂದ ಬರುತ್ತಿದ್ದ ಹೊಟ್ಟೆ ನೋವುಬಾಧೆಯನ್ನು ತಾಳಲಾರದೆ ಯಾವುದೋ ಕ್ರಿಮಿನಾಷಕ ಔಷಧಿಯನ್ನು ಸೇವಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಈ ದಿವಸ ಸಂಜೆ 07-00 ಗಂಟೆಯಲ್ಲಿ ಮೃತಪಟ್ಟಿರುತ್ತಾನೆ ನನ್ನ ಮಗನ ಸಾವಿನ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಲಾಗಿದೆ.
ಕಳ್ಳತನ ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 210/13 ಕಲಂ. 457-380 ಐ.ಪಿ.ಸಿ.
ದಿನಾಂಕ:01-05-2013ರಂದು ಪಿರ್ಯಾದಿ ರಘು. ಬಿನ್. ಮಂಚಯ್ಯ. ನಂ.115. ಆನೆಕೆರೆ ಬೀದಿ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಬಿಸಿಲು ಮಾರಮ್ಮನ ಹಿಂಭಾಗದ ಗರ್ಭಗುಡಿಯೊಳಗಡೆಗೆ ರಾತ್ರಿ ಯಾರೋ ಕಳ್ಳರು ಇಳಿದು ಗರ್ಭ ಗುಡಿಯ ಹಿಂಭಾಗದ ಕಬ್ಬಿಣದ ಗೇಟನ್ನು ಯಾವುದೋ ಆಯುಧದಿಂದ ಮುರಿದು ಹಾಗೂ ಮತ್ತೊಂದು ಬೀಗವನ್ನು ಮುರಿದು ಹಾಕಿ ಒಳಗಡೆ ನುಗ್ಗಿ ದೇವಸ್ಥಾನದ ಒಳಭಾಗದಲ್ಲಿದ್ದ ಮೂರು ಹುಂಡಿಗಳ ಮುಚ್ಚಳವನ್ನು ಹೊಡೆದು ಅದರಲ್ಲಿದ್ದ ದೇವರ ಕಾಣಿಕೆ ಹಣ 3000/- ರೂ. ಹಾಗೂ ಚಿನ್ನದ ಕಾಸಿನ ಸರ ಹಾಗೂ ಸರದಲ್ಲಿದ್ದ ಮಾಂಗಲ್ಯ. ಇವುಗಳ ಬೆಲೆಯನ್ನು ತಿಳಿಯಬೇಕಾಗಿರುತ್ತೆ. ಹಾಗೂ ದೇವಸ್ಥಾನದ ಎರಡು ರೂಂನಲ್ಲಿದ್ದ ಬೀರುಗಳ ಬಾಗಿಲನ್ನು ಮುರಿದು ಜಖಂಗೊಳಿಸಿ ಕಳ್ಳತನ ಮಾಡಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment