ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-05-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು, 1 ಅಕ್ರಮ ನೀರಾವರಿ ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 21 ಇತರೆ ಚುನಾವಣಾ ಅಕ್ರಮ/ಮುನ್ನೆಚ್ಚರಿ ಪ್ರಕರಣಗಳು, ಅಬಕಾರಿ ಪ್ರಕರಣಗಳು ಮತ್ತು ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ರಸ್ತೆ ಅಪಘಾತ ಪ್ರಕರಣಗಳು :
1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 224/13 ಕಲಂ. 279-304(ಎ) ಐ.ಪಿ.ಸಿ.
ದಿನಾಂಕ: 02-05-2013 ರಂದು ಪಿರ್ಯಾದಿ ಸಂದೀಪ್, ಹಳೆಬೂದನೂರು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಜಗದೀಶಗೌಡ, ಶಂಕರೇಗೌಡ ಪಾಟೀಲ, ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ರವರು ಹಳೆಬೂದನೂರು, ಎಂ.ಸಿ. ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ತನ್ನ ತಾತ ಅಪ್ಪಾಜಿರವರಿಗೆ ಡಿಕ್ಕಿ ಮಾಡಿಸಿ ಬಸ್ಸಿನ ಚಕ್ರ ಮೈಮೇಲೆ ಹರಿದು ಅಪ್ಪಾಜಿರವರು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 160/13 ಕಲಂ. 279,337, 304(ಎ) ಐ.ಪಿ.ಸಿ.
ದಿನಾಂಕ: 02-05-2013 ರಂದು ಪಿರ್ಯಾದಿ ಹೆಚ್.ಪಿ ಸುರೇಂದ್ರಕೋಟೆ, ಹುಣಸಗಹಳ್ಳಿ, ಬನ್ನೂರು ಹೋಬಳಿ, ರವರು ನೀಡಿದ ದೂರು ಏನೆಂದರೆ ದಿನಾಂಕ: 01-05-2013 ರಂದು ರಾತ್ರಿ 08-15 ಗಂಟೆ ಸಮಯದಲ್ಲಿ ಅರಕೆರೆ- ಮಂಡ್ಯ ಮುಖ್ಯರಸ್ತೆಯಲ್ಲಿ ಮೋಹನ ಕುಮಾರ ಸೈಕಲ್ ಸವಾರ, ವಾಸಃ ಕೋಟೆ ಹುಣಸಗಹಳ್ಳಿ ಗ್ರಾಮ ರವರು ಅವರ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಆರೋಪಿ ತಮ್ಮ ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ತಡಗವಾಡಿ ಗ್ರಾಮದ ಬಳಿಯ ಚರಂಡಿಗೆ ಬೀಳಿಸಿದ ಪರಿಣಾಮ ಇಬ್ಬರಿಗೂ ಪೆಟ್ಟಾಗಿ ಆರೋಪಿಯಾದ ಮೋಹನ ಕುಮಾರನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಆರೋಪಿ ಮೋಟಾರ್ ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ನೀರಾವರಿ ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 430 ಐ.ಪಿ.ಸಿ.
ದಿನಾಂಕ: 02-05-2013 ರಂದು ಪಿರ್ಯಾದಿ ಮಂಜುನಾಥಸ್ವಾಮಿ ಹೆಚ್. ಎಂ. ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್, 23 ಹೇಮಾವತಿ ಎಡದಂಡೆನಾಲಾ ಉಪವಿಭಾಗ, ಬೂಕನಕೆರೆ ಗ್ರಾಮ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ನಂಜೇಗೌಡ ಬಿನ್. ಸಣ್ಣಮೊಗೇಗೌಡ, ಬ್ಯಾಲದಕೆರೆ ಗ್ರಾಮ, ಕೆ.ಆರ್.ಪೇಟೆ ತಾ|| ರವರು ಅವರ ಜಮೀನಿಗೆ ನೀರನ್ನು ಅಕ್ರಮವಾಗಿ ತೆಗೆದುಕೊಳ್ಳಲು ಕೆಎ-54-ಎಂ-0525 ರ ಜೆಸಿಬಿ ಯಂತ್ರವನ್ನು ಉಪಯೋಗಿಸಿ ಅಗೆದು ಹಾನಿ ಮಾಡಿರುತ್ತಾರೆ ಆದಕಾರಣ ಅನಧಿಕೃತವಾಗಿ ಕೆರೆಯ ಏರಿಯನ್ನು ಬಗೆದು ಸಾರ್ವಜನಿಕರಿಗೆ ತೊಂದರೆ ಮಾಡಿ ಸಕರ್ಾರಿ ಆಸ್ತಿಯನ್ನು ವಿರೂಪಗೊಳಿಸಿರುವ ಮೇಲ್ಕಂಡವರವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 02-05-2013 ರಂದು ಪಿರ್ಯಾದಿ ಕೆ.ಎನ್ ರಾಮೇಗೌಡ, ಕಿಕ್ಕೇರಿ ಟೌನ್, ಕೆ.ಆರ್.ಪೇಟೆ ತಾಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಒಬ್ಬ ಅಪರಿಚಿತ ಗಂಡಸು ಒಂದು ಪ್ಲಾಸ್ಟಿಕ್ ಹಗ್ಗವನ್ನು ಹೊಂಗೆ ಮರಕ್ಕೆ ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment