Moving text

Mandya District Police

DAILY CRIME REPORT DATED : 08-05-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-05-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ  2 ಯು.ಡಿ.ಆರ್. ಪ್ರಕರಣಗಳು,  1 ರಾಬರಿ ಪ್ರಕರಣ ಹಾಗು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 174 ಸಿ.ಆರ್.ಪಿ.ಸಿ.

      ದಿನಾಂಕ: 08-05-2013 ರಂದು ಪಿರ್ಯಾದಿ ಪ್ರಕಾಶ, ಟಿ,ಎಸ್.ಛತ್ರ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂದಕುಮಾರ, ಟಿ.ಎಸ್.ಛತ್ರ ಗ್ರಾಮ, ಪಾಂಡವಪುರ ತಾ. ರವರು ಯಾವುದೋ ಕ್ರಿಮಿನಾಶಕವನ್ನು ಕುಡಿದಿದ್ದು ಇದರಿಂದ ವಿಪರೀತ ಜ್ವರಬಂದು ಸತ್ತು ಹೋಗಿರುತ್ತಾನೆ ತಾವು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

  ದಿನಾಂಕ: 08-05-2013 ರಂದು ಪಿರ್ಯಾದಿ ಶ್ರೀ ಚಂದ್ರ, ಚುಂಚನಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಆದಿಚುಂಚನಗಿರಿ, ಗಾರೆನಿಂಗಣ್ಣನ ಕಟ್ಟೆ ಹತ್ತಿರದ ಅರಣ್ಯ ಪ್ರದೇಶದಲ್ಲಿ ದಿನಾಂಕ:08-05-2013  ರಂದು, 11-30  ಗಂಟೆಯಲ್ಲಿ ಗಂಡಸು ತನ್ನ ಪಂಚೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಈತನು ಯಾರು ಎಲ್ಲಿಯವನು ಎಂದು ತಿಳಿದುಬಂದಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 143-147-148-448-354-506-379 ಕೂಡ 149 ಐ.ಪಿ.ಸಿ.

      ದಿನಾಂಕ: 08-05-2013 ರಂದು ಪಿರ್ಯಾದಿ ಯಶೋದಮ್ಮ ಕೋಂ. ದೇವೇಗೌಡ @ ಕುಮಾರ, 40ವರ್ಷ, ಗೃಹಿಣಿ, ಕುರುಡುಮಾಯಣ್ಣನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 08-05-2013 ರಂದು ಫಿರ್ಯಾದಿಯವರ ಮನೆಯಲ್ಲಿ ಆರೋಪಿ ವರೇಶ ಮತ್ತು ಇತರೆ 17 ಜನರು ಅವಾಚ್ಯವಾಗಿ ಬೈದ್ದು ಕೊಲೆ ಬೆದರಿಕೆ ಹಾಕಿ ಫಿರ್ಯಾದಿಯವರ ಮುಂದಾಲೆ ಹಿಡಿದು ಎಳೆದಾಡಿ ಫಿರ್ಯಾದಿಯವರನ್ನು ಮಾನಭಂಗ ಮಾಡಲು ಪ್ರಯತ್ನಿಸಿದಾಗ ಜಗಳ ಬಿಡಿಸಲು ಅಲ್ಲಿಗೆ ಬಂದ ರೂಪರವರಿಗೂ ಕೂಡ ಅವಾಚ್ಯವಾಗಿ ಬೈದು ಮಾನಭಂಗ ಮಾಡಲು ಪ್ರಯತ್ನಿಸಿದಾಗ ಮೂರು ಜನರು ಕೂಗಿಕೊಂಡು ಹೊರಗಡೆ ಬಂದಾಗ ಫಿರ್ಯಾದಿಯವರ ಮನೆಯಲ್ಲಿದ್ದ ಚಿನ್ನಾಭರಣ ಮತ್ತು 25,000/- ರೂ ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment