ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-05-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ, 4 ಯು.ಡಿ.ಆರ್. ಪ್ರಕರಣಗಳು, 2 ವಾಹನ ಕಳವು ಪ್ರಕರಣಗಳು, 1 ಅಪಹರಣ ಪ್ರಕರಣ, 2 ಕಳ್ಳತನ ಪ್ರಕರಣಗಳು, 1 ವಂಚನೆ ಪ್ರಕರಣ ಹಾಗು ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ರಸ್ತೆ ಅಪಘಾತ ಪ್ರಕರಣ :
ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 94/13 ಕಲಂ. 324-504-498(ಎ) ಐ.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ಗೌರಮ್ಮ, 38 ವರ್ಷ, ಗೃಹಿಣಿ, ಹೊಸಕೆರೆ ಗ್ರಾಮ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅವರ ಗಂಡ ಶಿವಣ್ಣ, 47 ವರ್ಷ, ಹೊಸಕೆರೆ ಗ್ರಾಮ, ಕೊಪ್ಪ ಹೋಬಳಿ ರವರು 17 ವರ್ಷದ ಹಿಂದೆ ಮದುವೆ ಆಗಿದ್ದು ಆರೋಪಿ ಕುಡಿದು ಬಂದು ಮಾನಸಿಕ ಹಿಂಸೆ ನೀಡುತ್ತಿದ್ದು ಬೆಳಿಗ್ಗೆ ಕುಡಿದು ಬಂದು ಪಿರ್ಯಾದಿಗೆ ಕುಡುಗೋಲಿನಿಂದ ಹೊಡೆದು ಹಿಂಸೆ ನೀಡುತ್ತಿದ್ದಾನೆಂದು ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯುಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ಖಾದರ್, 30 ವರ್ಷ, ಹಾಲಹಳ್ಳಿ, ನ್ಯೂ ಮುಸ್ಲಿಂಬ್ಲಾಕ್, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅಯಿಬ್ಖಾನ್, 55 ವರ್ಷ, ಬೀಡಿಕಾಮರ್ಿಕರ ಕಾಲೋನಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಣ್ಣ ಅಯುಬ್ಖಾನ್ ಪಾತ್ರೆ ವ್ಯಾಪಾರ ಮಾಡುತ್ತಿದ್ದು, ಮದ್ಯಪಾನ ಮಾಡುವ ಚಟವುಳ್ಳವನಾಗಿರುತ್ತಾನೆ, ಮದ್ಯಪಾನ ಮಾಡಿರುವ ಅಮಲಿನಲ್ಲಿ ಜೀವನದಲ್ಲಿ ಜಿಗುಪ್ಸೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ನಾಸೀರ್, 32 ವರ್ಷ, ಮ್ಯಾನೇಜರ್, ಭೂಮಿಕಾ ಲಾಡ್ಜ್, ಹಳೇ ರೈಲ್ವೇ ನಿಲ್ದಾಣ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-05-2013 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಭೂಮಿಕಾ ಲಾಡ್ಜ್ ಹಳೇ ರೈಲ್ವೇ ಸ್ಟೇಷನ್ ರಸ್ತೆ ಹತ್ತಿರ ಅಪರಿಚಿತ ಗಂಡಸು ಸುಮಾರು ಮಹದೇವ, 50 ರಿಂದ 55 ವರ್ಷ, ಬೆಂಡರವಾಡಿ ಗ್ರಾಮ, ಮಳವಳ್ಳಿತಾಲ್ಲೋಕ್ ಇಂಬ ವ್ಯಕ್ತಿ ಮದ್ಯಪಾನ ಮಾಡಿಯೋ ಅಥವಾ ಯಾವುದೋ ಖಾಯಿಲೆಯಿಂದಲೋ ರಾತ್ರಿ ಯಾವುದೋ ವೇಳೆಯಲ್ಲಿ ಮಲಗಿದ್ದಲ್ಲಿ ಮಲಗಿದಂತೆಯೇ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿ.ಅರ್.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ಶ್ವೇತಾ ಕೊಂ. ರಾಜೇಶ್, ಹಾಡ್ಯ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಗಂಡ ರಾಜೇಶ್ ಬಿನ್. ಉಗ್ರಾಚಾರಿ, 36 ವರ್ಷ, ಹಾಡ್ಯ ಗ್ರಾಮ, ದುದ್ದ ಹೋಬಳಿ ರವರು ದಿನಾಂಕ: 28-04-2013 ರಂದು ಸಂಜೆ 07-30 ಗಂಟೆಯಲ್ಲಿ ಹಾಡ್ಯ ಗ್ರಾಮದಲ್ಲಿ ರಾಜೇಶನಿಗೆ ಭೀತಿ ತರಹ ಹಾಗೂ ಬುದ್ದಿ ಭ್ರಮಣೆಯಂತೆ ಆಡುತ್ತಿದ್ದು ವಿಚಿತ್ರವಾಗಿ ವರ್ತಿಸುತ್ತಿದ್ದನೆಂದು ಹಾಗೂ ತಾನು ಆಗಾಗ್ಗೆ ಸತ್ತು ಹೋಗುತ್ತೇನೆಂದು ಹೇಳುತ್ತಿದ್ದನು. ದಿನಾಂಕ: 28-04-2013 ರಂದು ಸಂಜೆ 07-30 ಗಂಟೆ ಸಮಯದಲ್ಲಿ ಮನೆಯಲ್ಲಿ ತಾನು ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮನೆಯ ಮುಂದೆ ಓಡಾಡುತ್ತಿದ್ದವನನ್ನು ಕಂಡು ಊರಿನವರು ಮತ್ತು ಪಿರ್ಯಾದಿಯವರು ಚಿಕಿತ್ಸೆಗಾಗಿ ಮೊದಲು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು ನಂತರ ಅದೇ ದಿನ ರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುತ್ತಾರೆ ಇವರ ಸಾವಿಗೆ ಬೇರೆ ಯಾರು ಕಾರಣರಾಗಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174(ಸಿ) ಸಿ.ಆರ್.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ವಿ.ರಾಮಲಿಂಗಂ, 72 ವರ್ಷ, ಮೊದಲಿಯಾರ್, ರಾಜಬೀದಿ, ಮೇಲುಕೋಟೆ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:06-05-2013 ರಂದು ಮದ್ಯಾಹ್ನ 03-00 ಗಂಟೆಯಲ್ಲಿ, ಮೇಲುಕೋಟೆಯ ವಿವೇಕೋಲ್ಲಾಸಿನೀ ಸಭಾ ಚೌಟರಿಯ, 1ನೇ ರೂಂ ನಲ್ಲಿ ಒಬ್ಬ ಗಂಡಸು, ಒಬ್ಬ ಹೆಂಗಸು ನಮ್ಮ ವಿವೇಕೋಲ್ಲಾಸಿನೀ ಸಭಾ ಚೌಟರಿಯಲ್ಲಿ ರೂಂ ಪಡೆದು ಇದ್ದುದ್ದಾಗಿ, ಅವರು ರೂಮಿನ ಬೀಗ ಹಾಕಿಕೊಂಡು ಹೋದವರು ದಿನಾಂಕ 09-05-2013 ರವರೆವಿಗೆ ಬರದಿದ್ದರಿಂದ ಈ ದಿನ ರೂಂ ನ ಬಾಗಿಲಿನ ಪಾಟ್ ಲಾಕ್ ಅನ್ನು ಕಿತ್ತು ಬಾಗಿಲು ತೆಗೆದು ನೋಡಲಾಗಿ ಪ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಹೆಂಗಸೊಬ್ಬಳು ಕಂಡುಬಂದಿದ್ದು ಆಕೆಯು, ಮೃತಪಟ್ಟಿದ್ದು ಕಂಡುಬಂದಿರುತ್ತೆ. ಈಕೆಯ ಸಾವಿನಲ್ಲಿ ಅನುಮಾನವಿರುತ್ತೆಂದು ಮುಂದಿನ ಕ್ರಮ ಜರುಗಿಸಿ ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 306/13 ಕಲಂ. 379 ಐ.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ಕೆ.ಎಸ್. ರಘು, 26ವರ್ಷ, ಸಂತೆಕಸಲಗೆರೆ ಬೀದಿ, ಕೊತ್ತತ್ತಿ ಗ್ರಾಮ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-05-2013 ರಂದು ರಂಗನತಿಟ್ಟಿನ ಪಾರ್ಕಿಂಗ್ ಆವರಣದಲ್ಲಿ ಯಾರೋ ಕಳ್ಳರು ಪಿರ್ಯಾದಿಯವರು ಅವರ ಮೋಟರ್ ಸೈಕಲ್ ನಂ. ಕೆ.ಎ-06-ವಿ-2098 ನ್ನು ಲಾಕ್ ಮಾಡಿ ನಿಲ್ಲಿಸಿದ್ದು ನಂತರ ಬಂದು ನೋಡಲಾಗಿ ನಿಲ್ಲಿಸಿದ್ದ ಜಾಗದಲ್ಲಿ ಮೋಟರ್ ಸೈಕಲ್ ಇರಲಿಲ್ಲ. ಇದರ ಬೆಲೆ ಸುಮಾರು 15000/- ಆಗಿರುತ್ತೆ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಹುಡುಕಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 104/13 ಕಲಂ. 379 ಐ.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ಕೆ.ಧನರಾಜ್, 23ವರ್ಷ, ಭೈರತಿ ನಾರಾಯಣಸ್ವಾಮಿ ಬಿಲ್ಡಿಂಗ್, 4ನೇ ಅಡ್ಡರಸ್ತೆ, ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 29-04-2013 ರಂದು ರಾತ್ರಿ 09-30 ಗಂಟೆಯಲ್ಲಿ ಯಾರೋ ಕಳ್ಳರು ಮೋಟಾರ್ ಬೈಕನ್ನು ಅಪಹರಿಸಿದ್ದು ಈ ಬಗ್ಗೆ ಎಲ್ಲಾ ಕಡೆ ಈ ದಿವಸದವರೆಗೂ ಹುಡುಕಾಡಿದರೂ ಸಹ ಯಾವುದೇ ಮಾಹಿತಿ ಸಿಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತ್ತಾರೆ, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 153/13 ಕಲಂ. 366[ಎ] ಐ.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ನಿಂಗೇಗೌಡ ಬಿನ್. ಬೋರೆಗೌಡ, ಸಿಂಗಾಪುರ ಗ್ರಾಮ, ಕೆ.ಆರ್.ಪೇಟೆ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಧನಜಂಯ ಬಿನ್. ಲೇಟ್. ಸುಬ್ಬಯ್ಯ, ರಾಯಸಮುದ್ರ ಗ್ರಾಮ, ಕೆ.ಅರ್. ಪೇಟೆ ತಾ|| ರವರು 06.05.2013 ರ ರಾತ್ರಿ 11.00 ಗಂಟೆಯಲ್ಲಿ ಸಿಂಗಾಪುರ ಗ್ರಾಮದಿಂದ ಪಿರ್ಯಾದಿಯವರ ಮಗಳು ಮನೆಯಿಂದ ಹೊರಕ್ಕೆ ಬರುವುದನ್ನೆ ಹೊಂಚು ಹಾಕಿಕೊಂಡು, ಧನಂಜಯ್ಯ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆಂದು ನಾವು ಎಲ್ಲ ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 457-380 ಐ.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ಎನ್.ಡಿ.ಪುಟ್ಟರಾಜು, 37 ವರ್ಷ, ಅರ್ಚಕರು, ನರಗನಹಳ್ಳಿ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-05-2013 ರಂದು ರಾತ್ರಿ ವೇಳೆ ಶ್ರೀ. ಆಧಿಶಕ್ತಿ ಹುಲಿಕೆರೆ ಅಮ್ಮನವರ ದೇವಸ್ಥಾನದಲ್ಲಿ ಯಾರೋ ಕಳ್ಳರು ದೇವಸ್ಥಾನದ ಮುಂದಿನ ಬಾಗಿಲ ಬೀಗವನ್ನು ಮುರಿದು ಒಳನುಗ್ಗಿ ಹುಂಡಿಯನ್ನು ಹೊಡೆದು ಹುಂಡಿಯಲ್ಲಿದ್ದ ಸುಮಾರು 20,000/- ರೂ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 112/13 ಕಲಂ. 457-380 ಐ.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ಮಹಾಲಿಂಗೇಗೌಡ, 34 ವರ್ಷ, ಅರೇಹಳ್ಳಿ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-05-2013 ರ ರಾತ್ರಿ ವೇಳೆ ಮಹಾಲಿಂಗೇಗೌಡ ಮತ್ತು ಆನಂದ, ಅರೆಹಳ್ಳಿ ಗ್ರಾಮ ರವರುಗಳ ಮನೆಗಳಿಗೆ ಯಾರೋ ಕಳ್ಳರು ಪಿರ್ಯಾದಿಯವರ ಮನೆ ಬಾಗಿಲ ಬೀಗವನ್ನು ಹೊಡೆದು ಒಳನುಗ್ಗಿ ಅಡಿಗೆ ಮನೆಯ ಪೆಟ್ಟಿಗೆಯಲ್ಲಿದ್ದ 20 ಗ್ರಾಂ. ಚಿನ್ನದ ನೆಕಲೆಸ್ ಹಾಗೂ ನಗದು ಹಣ 10,000/- ರೂ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಹಾಗೂ ಆನಂದ ಬಿನ್. ಕೃಷ್ಣಪ್ಪರವರ ಮನೆಗೆ ಬೀಗವನ್ನು ತೆಗೆದು ಒಳ ಪ್ರವೇಶ ಮಾಡಿ ಮಲಗಿದ್ದಾಗ ಮನೆಯ ಒಳಗಡೆ ಕಳ್ಳರು ನುಗ್ಗಿ ಮನೆಯಲ್ಲಿ ಇಟ್ಟಿದ್ದ ನಗದು ಹಣ ರೂ. 3000/- ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿಕೊಡಿ ಎಂದು ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 210/13 ಕಲಂ. 201-210-207-406-465-466-468-471-420 ಕೂಡ 34 ಐ.ಪಿ.ಸಿ.
ದಿನಾಂಕ: 09-05-2013 ರಂದು ಪಿರ್ಯಾದಿ ಶಂಕರೇಗೌಡ ಬಿನ್. ಲೇಟ್. ಕರೀಗೌಡ, ಹಲ್ಲೆಗೆರೆ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ 1] ಕೆಂಪಮ್ಮ 2] ಪುಟ್ಟಸ್ವಾಮಿ 3] ಜಯರಾಮು 4] ಶಿವಲಿಂಗಯ್ಯ ಹಾಗು 5]ಭದ್ರಛಲಮೂತರ್ಿ, ಮಾಜಿ ಅಧ್ಯಕ್ಷರು, ಮಂಡ್ಯ ತಾ. ಪಂ. ಗೌಡಗೆರೆ ಗ್ರಾಮ ರವರುಗಳು ಫಿರ್ಯಾದುದಾರರಿಗೆ ಖಾತೆ ಬದಲಾವಣೆ ಮಾಡಿರುವುದನ್ನು ಆದೇಶ ಹೊರಡಿಸಿ ಈ ಸಂಬಂಧವಾಗಿ ಸದರಿ ಆದೇಶಕ್ಕೂ ಮುಂಚೆ ಫಿರ್ಯಾದುದಾರರು ಯಾವುದಾದರು ನೋಟಿಸ್ ಹೊರಡಿಸಿದೆಯೇ ಎಂದು ದೃಢೀಕೃತ ದಾಖಲಾತಿಗಳನ್ನು ನೀಡುವಂತೆ ಮಂಡ್ಯ ತಾಲ್ಲೂಕು ಪಂಚಾಯಿತಿಯವರು ಕೇಳಲಾಗಿ ಸದರಿ ದಾಖಲಾತಿಗಳು ಲಭ್ಯವಿಲ್ಲವೆಂದು ತಿಳಿಸಿರುತ್ತಾರೆ. ಒಟ್ಟಾರೆ ಆರೋಪಿ-1 ರಿಂದ 4 ಮತ್ತು 5 ರವರು ಸೇರಿಕೊಂಡು ಅಕ್ರಮವಾಗಿ ವ್ಯತಿರಿಕ್ತ ಆದೇಶ ಮಾಡಿ ನಕಲಿ ದಾಖಲೆ ಸೃಷ್ಟಿಮಾಡಿ ಮೂಲ ದಾಖಲಾತಿಗಳನ್ನು ನಾಶಪಡಿಸಿ ಮೋಸ ಮಾಡಿರುತ್ತಾರೆಂದು ಇತ್ಯಾದಿಯಾಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment