Moving text

Mandya District Police

DAILY CRIME REPORT DATED : 10-05-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-05-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ಅಕ್ರಮ ಮರಳು ಕಳ್ಳ ಸಾಗಾಣಿಕೆ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  2 ಕಳ್ಳತನ ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ರಸ್ತೆ  ಅಪಘಾತ ಪ್ರಕರಣ ಹಾಗು ಇತರೆ ಐ.ಪಿ.ಸಿ./ಸಿ.ಆರ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.   


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:10-05-13 ರಂದು ಪಿರ್ಯಾದಿ ಡಾ|| ಪುಟ್ಟಲಿಂಗೇಗೌಡ, ವೈದ್ಯಾಧಿಕಾರಿಗಳು, ಮಿಮ್ಸ್ ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಮೋನಮ್ಮ ಕೋಂ. ಚೆನ್ನಪ್ಪ (ಆಸ್ಪತ್ರೆಯ ದಾಖಲಾತಿ ಪ್ರಕಾರ) 38 ವರ್ಷ, ಜಯಲಕ್ಷ್ಮಿಟಾಕೀಸ್ ಹಿಂಭಾಗ, ಪೂರ್ಣ ವಿಳಾಸ ತಿಳಿಯಬೇಕಾಗಿದೆ ರವರು ಮಂಡ್ಯ ಜಿಲ್ಲಾ ಆಸ್ಪತ್ರೆಯ ಬರ್ನ್ ವಾರ್ಡ್ ನಲ್ಲಿ  ಚಿಕಿತ್ಸೆಯ ಬಗ್ಗೆ  ದಾಖಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮೃತಳಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:10-05-2013 ರ ಬೆಳಗಿನ ಜಾವ ಬರ್ನ್ ವಾರ್ಡ್ ನಲ್ಲಿ ಮೃತಪಟ್ಟಿರುತ್ತಾಳೆಂದು ಶವವನ್ನು ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿರುತ್ತದೆ, ಎಂದು ಪಿರ್ಯಾದಿಯವರು ನೀಡಿದ ಡೆತ್  ಮೆಮೊ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 19/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-05-13 ರಂದು ಪಿರ್ಯಾದಿ ಗಜೇಂದ್ರ.ಪಿ.ಎನ್. ಪಟ್ಟಸೋಮನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಿಂಗಪ್ಪ, ಪಟ್ಟಸೋಮನ ಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ಮನೆಯ ಮುಂದೆ ಇರುವ ವಿದ್ಯುತ್ ಕಂಬದಲ್ಲಿನ ತಾಮ್ರದ ತಂತಿಯು ಕಡಿದುಕೊಂಡು ಬಿದ್ದಿರುವುದನ್ನು ಕಾಣದೆ ಅಕಸ್ಮಿಕವಾಗಿ ವಿದ್ಯುತ್ತಂತಿಯ ಮೇಲೆ ಕಾಲಿಟ್ಟು ,ವಿದ್ಯುತ್ ಸ್ಪರ್ಶದಿಂದ ಚೀರಾಟ ಹಾಗೂ ರೋದಿಸುತ್ತಿರುವುದನ್ನು ಕೇಳಿದ ತಕ್ಷಣ ನಾನು ಹಾಗೂ ತಿಮ್ಮೇಗೌಡ ಬಿನ್ ಸಿದ್ದೇಗೌಡ ಹಾಗೂ ನಮ್ಮ ಮನೆಯ ಸುತ್ತಲಿನ ಗ್ರಾಮಸ್ಥರು ಸೇರಿ ನಮ್ಮ ತಂದೆಯವರನ್ನು ರಕ್ಷಿಸಲು ಹೋದಾಗ ನಮಗೂ ಸಹಾ ವಿದ್ಯುತ್ಶಾಕ್ ತಗುಲಿದೆ. ಈ ಪ್ರಯತ್ನದಲ್ಲಿ ನಮ್ಮ ತಂದೆಯವರು ವಿದ್ಯುತ್ ಶಾಕ್ನಿಂದ ಸ್ಥéಳದಲ್ಲೆ ಮೃತಪಟ್ಟರುತ್ತಾರೆ. ವಿದ್ಯುತ್ ತಂತಿ ನೆಲದಮೇಲೆ ಬಿದ್ದು ನಮ್ಮ ತಂದೆ ಆಕಸ್ಮಿಕವಾಗಿ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಾಗ ವಿದ್ಯುತ್ ಸ್ಪರ್ಶವಾಗಿ ಅವರ ಕಾಲು ಹಾಗೂ ತೊಡೆಯ ಮೇಲೆ ಗಾಯವು ಸಹಾ ಆಗಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುತ್ತಾರ. ಅದುದ್ದರಿಂದ ತಾವುಗಳು ಮುಂದಿನ ಕ್ರಮ ಕ್ಯೆಗೊಳ್ಳಬೆಕೆಂದು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಕ್ರಮ ಮರಳು ಕಳ್ಳ ಸಾಗಾಣಿಕೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 218/13 ಕಲಂ. 188-379 ಐ.ಪಿ.ಸಿ.

ದಿನಾಂಕ: 10-05-13 ರಂದು ಪಿರ್ಯಾದಿ ಜೆ. ತಮ್ಮಯ್ಯ, ರಾಜಸ್ವ ನಿರೀಕ್ಷಕರು, ಕಸಬಾ ಹೋಬಳಿ, ಮದ್ದೂರು ತಾಃ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ-06/ಎ-5526 ರ ಲಾರಿ ಚಾಲಕ, ಹೆಸರು ವಿಳಾಸ ತಿಳಿಯಬೇಕಾಗಿದೆ ದಿನಾಂಕಃ-09-05-2013 ರಂದು ಸಂಜೆ ಗಸ್ತು ತಿರುಗುತ್ತಿದ್ದ ವೇಳೆ ಕೆ. ಹೊನ್ನಲಗೆರೆ ಗ್ರಾಮದಲ್ಲಿ ಮರಳು ತುಂಬಿದ ಲಾರಿ ನೊಂದಣಿ ಸಂಖ್ಯೆ ಕೆ.ಎ-06/ಎ-5526 ನ್ನು ಮದ್ಯರಾತ್ರಿ ಸುಮಾರು 12 ಗಂಟೆ ವೇಳೆಯಲ್ಲಿ ಅಡ್ಡಗಟ್ಟಿ ತಪಾಸಣೆ ಮಾಡಲಾಗಿ ಸದರಿ ಲಾರಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದು, ಅಡ್ಡಗಟ್ಟಿದ ವೇಳೆ ಚಾಲಕನು ಪರಾರಿಯಾಗಿರುತ್ತಾನೆ. ಮರಳು ಸಮೇತ ಬೇರೆ ಚಾಲಕರ ನೆರವಿನಿಂದ ಸದರಿ ಲಾರಿಯನ್ನು ಕಾನೂನು ಕ್ರಮ ಜರುಗಿಸಲು ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 498(ಎ)-506-324 ಕೂಡ 34 ಐ.ಪಿ.ಸಿ.

      ದಿನಾಂಕ: 10-05-13 ರಂದು ಪಿರ್ಯಾದಿ ಮೀನಾಕ್ಷಿ ಕೋಂ. ಶಿವಕುಮಾರ, ದೊಡ್ಡಯಾಚನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಆರೋಪಿತ ಶಿವಕುಮಾರ ಬಿನ್. ದೇವರಾಜಪ್ಪ, ಅತ್ತೆ ಸುಂದರಮ್ಮ ಕೊಂ. ದೇವರಾಜಪ್ಪ, ಮೈದುನ ಕಾಂತರಾಜು ಬಿನ್. ದೇವರಾಜಪ್ಪ ಎಲ್ಲರೂ ದೊಡ್ಡಯಾಚೇನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಗೆ ಮದುವೆಯಾದ 6 ತಿಂಗಳಿನಿಂದ ಆರೋಪಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ತೊಂದರೆ ಕೊಡುತ್ತಿದ್ದು ಪಿರ್ಯಾದಿಯ ಗಂಡ ಬೇಕರಿ ಆಂಗಡಿಯನ್ನು ಇಡಬೇಕೆಂದು ತವರ ಮನೆಯಿಂದ 1 ಲಕ್ಷ ರೂಪಾಯಿ ಹಣವನ್ನು ತರುವಂತೆ ಕಳೆದ 6 ತಿಂಗಳಿನಿಂದ ದೈಹಿಕವಾಗಿ ಹಲ್ಲೆ ಮಾಡುತ್ತ ಬಂದಿರುತ್ತಾರೆ, ದಿನಾಂಕ 05-05-2013 ರಂದು ಸಂಜೆ 03-30 ಗಂಟೆಯಲ್ಲಿ ಪಿರ್ಯಾದಿಯ ತಂದೆ ಪಿರ್ಯಾದಿಯನ್ನು ಪಿರ್ಯಾದಿಯವರ ಯಜಮಾನರ ಮನೆಗೆ ಬಿಡಲು ಬಂದಾಗ ಅತ್ತೆ ಸುಂದರಮ್ಮ ಪಿರ್ಯಾದಿಯ ತಲೆ ಜೂಟ್ಟು ಹಿಡಿದು ಎಳೆದಾಡಿ ,ಅವಾಚ್ಯವಾಗಿ ಬೈಯ್ದು, ಗಂಡ ಶಿವಕುಮಾರ ಪಿರ್ಯಾದಿಯ ಎಡಗೈ ಮದ್ಯದ ಬೆರಳಿಗೆ ಮತ್ತು ಪಿರ್ಯಾದಿಯ ತಂದೆಯ ಎಡಗೈ ಉಂಗುರ ಬೆರಳಿಗೆ ಕಬ್ಬಿಣದ ರಾಡಿನಿಂದ ಹೊಡೆದು ನೋವು ಮಾಡಿ, ಆರೋಪಿತರುಗಳು ಪ್ರಾಣಬೆದರಿಕೆ ಹಾಕಿರುತ್ತಾರೆ ಅವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 211/13 ಕಲಂ. 457-380 ಐ.ಪಿ.ಸಿ.

ದಿನಾಂಕ: 10-05-13 ರಂದು ಪಿರ್ಯಾದಿ ಎಂ.ಕೆ.ದಿಲೀಪ್ ಬಿನ್. ಲೇಟ್. ಕುಮಾರಸ್ವಾಮಿ, 28 ವರ್ಷ, ಒಕ್ಕಲಿಗರು, ಲಲಿತ ಮೆಡಿಕಲ್ ಸ್ಟೋರ್ ಮಾಲೀಕರು, ವಾಸ ಕೇರಾಫ್ ರಾಮಕೃಷ್ಣ ಬಿಲ್ಡಿಂಗ್, ನಂ. 950/1ಎ, ಹಳೆ ಎಂ.ಸಿ.ರಸ್ತೆ, ಶಂಕರಮಠ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ದಿನಾಂಕ: 09-05-2013 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿಯವರು ತಮ್ಮ ಬಾಬ್ತು ಲಲಿತ ಮೆಡಿಕಲ್ ಸ್ಟೊರ್, ಕೇರಾಪ್ ರಾಮಕೃಷ್ಣ ಬಿಲ್ಡಿಂಗ್, ಹಳೆ ಎಂ.ಸಿ.ರಸ್ತೆ, ಶಂಕರಮಠ, ಮಂಡ್ಯ ಸಿಟಿ ಡಿತಡಿ ಅಂಗಡಿಯ ಬಾಗಿಲು ತೆರೆದು ರಾತ್ರಿ 10-00 ಗಂಟೆಯವರೆಗೆ ವ್ಯಾಪಾರ ಮಾಡಿ ನಂತರ ಅಂಗಡಿಯ ರೋಲಿಂಗ್ ಸೆಲ್ಟರ್ ಬಾಗಿಲಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿ ಮಲಗಿಕೊಂಡಿದ್ದು ನಂತರ ದಿನಾಂಕ: 10-05-2013 ರಂದು ಬೆಳಿಗ್ಗೆ ಸುಮಾರು 5-00 ಗಂಟೆ ಸಮಯದಲ್ಲಿ ಶಂಕರಪುರದ ವಾಸಿ ರಿಯಾಜ್ ಎಂಬುವನು ಬಂದು ಫಿರ್ಯಾದಿಯವರನ್ನು ಎಬ್ಬಿಸಿ ನಿಮ್ಮ ಅಂಗಡಿಯ ರೋಲಿಂಗ್ ಸೆಲ್ಟರ್ ಬಾಗಿಲು ಸುಮಾರು 2 ಅಡಿಯಷ್ಟು ಓಪನ್ ಆಗಿರುತ್ತೆ ಎಂದು ತಿಳಿಸಿದ ಕೂಡಲೇ ಫಿರ್ಯಾದಿ ಮತ್ತು ತಮ್ಮ ಅಣ್ಣ ಇಬ್ಬರೂ ಹೋಗಿ ನೋಡಲಾಗಿ ಅಂಗಡಿಯ ಕ್ಯಾಷ್ ಡ್ರಾಯರ್ನಲ್ಲಿ ವ್ಯಾಪಾರ ಮಾಡಿ ಇಟ್ಟಿದ್ದ 2,00,000/- ರೂ.ಗಳ ಪೈಕಿ 11,000/- ರೂ.ಗಳು ಅಲ್ಲೆ ಇದ್ದು ಉಳಿಕೆ 1,89,000/- ರೂ.ಗಳು ಕಾಣುತ್ತಿರುವುದಿಲ್ಲ. ದಿನಾಂಕ: 09-05-2013 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ತಮ್ಮ ಲಲಿತ ಮೆಡಿಕಲ್ ಸ್ಟೋರ್ನ ಅಂಗಡಿಯ ರೋಲಿಂಗ್ ಸೆಲ್ಟರ್ ಬಾಗಿಲನ್ನು ಬಲವಾದ ಯಾವುದೋ ಆಯುಧದಿಂದ ಮೀಟಿ ಜಖಂಗೊಳಿಸಿ 2-3 ಅಡಿಗಳಷ್ಟು ಮೇಲಕ್ಕೆ ಎತ್ತಿ ಒಳಗಡೆ ಪ್ರವೇಶ ಮಾಡಿ ಕ್ಯಾಷ್ ಡ್ರಾಯರ್ನ್ನು ಜಖಂಗೊಳಿಸಿ 1,89,000/- ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ಹಣವನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 99/13 ಕಲಂ. 457-380 ಐ.ಪಿ.ಸಿ.

ದಿನಾಂಕ: 10-05-13 ರಂದು ಪಿರ್ಯಾದಿ ಅಶೋಕ ಬಿನ್. ಸಿದ್ದೇಗೌಡ, ಶಿವಳ್ಳಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 09-05-2013 ರಾತ್ರಿ ವೇಳೆ ಪಿರ್ಯಾದಿಯವರ ರಾಕೇಶ್ ಪ್ರಾವಿಶನ್ ಸ್ಟೋರ್ಸ್ ನ ರೋಲಿಂಗ್ ಶೆಟರ್ ಬೀಗ ಮುರಿದು ಸುಮಾರು 39000/- ನಗದು, 800 ರೂಗಳಷ್ಟು ಚಿಲ್ಲರೆ ಹಣ ಹಾಗೂ ಸುಮಾರು 3,575 ರೂಗಳಷ್ಟು ಬೆಲೆ ಬಾಳುವ ಸಿಗರೇಟುಗಳನ್ನು ಕಳವು ಮಾಡಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 212/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 10-05-13 ರಂದು ಪಿರ್ಯಾದಿ ಬಲಬೀರ್ಸಿಂಗ್, ಪ್ರಜಾಪತಿ, ತಹಸೀಲ್ದಾರ್ಸಿಂಗ್ ಪ್ರಜಾಪತಿ,  ಗ್ರಾನೈಟ್ ಕಲ್ಲು ಹಾಕುವ ಕೆಲಸ ವಾಸಃ-ಕೇರಾಫ್ ಎಸ್. ಚಂದ್ರಶೇಖರ್, ನಂ. 2892,  6ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ. ಸ್ವಂತ ಸ್ಥಳಃ- ಅಂಬಾ ಗ್ರಾಮ ಮತ್ತು ಅಂಚೆ, ಮೊರೇನಾ ಜಿಲ್ಲೆ, ಮಧ್ಯಪ್ರದೇಶ ರಾಜ್ಯ ರವರು ನೀಡಿದ ದೂರು ಏನೆಂದರೆ ಫಿರ್ಯಾದಿಯವರ ಜೊತೆಯಲ್ಲಿದ್ದ ರಾಜ್ಬೀರ್ಸಿಂಗ್ ಪ್ರಜಾಪತಿ ಬಿನ್. ರಾಮ್ಕಿಶೋರ್ಸಿಂಗ್, ಪ್ರಜಾಪತಿ, 28ವರ್ಷ, ವಾಸಃ-ಕೇರಾಫ್ ಎಸ್. ಚಂದ್ರಶೇಖರ್, ನಂ. 2892, 6ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ. ಸ್ವಂತ ಸ್ಥಳಃ-ಮಾಹುರಿ ಗ್ರಾಮ, ಅಂಬಾ ಅಂಚೆ, ಮೊರೇನಾ ಜಿಲ್ಲೆ, ಮಧ್ಯಪ್ರದೇಶ ರಾಜ್ಯ. ಎಂಬುವರು ದಿನಾಂಕ: 02-05-2013 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಹುಷಾರಿಲ್ಲದೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದು ಫಿರ್ಯಾದಿಯು ಅವರಿಗೆ ಮಾತ್ರೆ ಕೊಡಿಸಿ ಕೆಲಸಕ್ಕೆ ಹೋಗಿ ವಾಪಸ್ ಸಂಜೆ 07-00 ಗಂಟೆಗೆ ಬಂದು ನೋಡಲಾಗಿ ಆತನು ಮನೆಯಲ್ಲಿರಲಿಲ್ಲ. ಈತನ ಪತ್ತೆ ಬಗ್ಗೆ ಮಧ್ಯಪ್ರದೇಶ, ಬಿಹಾರಿ, ರಾಜಸ್ಥಾನ ಮೂಲದ ವ್ಯಕ್ತಿಗಳನ್ನು ಹಾಗೂ ಆತನ ತಂದೆ ಮತ್ತು ಸಂಬಂಧಕರಿಗೆ ಫೋನ್ ಮಾಡಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ರಾಜ್ಬೀರ್ಸಿಂಗ್ ಪ್ರಜಾಪತಿ ರವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 154/13 ಕಲಂ. ಗಂಡಸು ಕಾಣೆಯಾಗಿದ್ದಾನೆ.

ದಿನಾಂಕ: 10-05-13 ರಂದು ಪಿರ್ಯಾದಿ ಮಂಜು ಬಿನ್. ಪುಟ್ಟ ನಾಯಕ, ಸಾರಂಗಿ ಗ್ರಾಮ, ಕೆ.ಆರ್. ಪೇಟೆ ತಾ| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ತಾತ ದೊಡ್ಡನಂಜಪ್ಪ,, 87ವರ್ಷ ಸಾರಂಗಿ ಗ್ರಾಮ,  ಕೆಆರ್ ಪೇಟೆ ತಾ. ರವರು ದಿನಾಂಕ: ದಿನಾಂಕ 05-05-2013 ರಂದು ಬೆಳಿಗ್ಗೆ 09.00 ಗಂಟೆಯಲ್ಲಿ ಮನೆಯಿಂದ ಕೆ.ಆರ್.ಪೇಟೆಗೆ ಬಂದಿದ್ದು ವಾಪಸ್ ಮನೆಗೆ ಬಂದಿರುವುದಿಲ್ಲ. ನಾವು ನಮ್ಮ ಸಂಬಂಧಿಕರು ಹಾಗು ಸ್ನೇಹಿತರುಗಳ ಮನೆಗಳಲೆಲ್ಲಾ ಹುಡುಕಾಡಿದ್ದು ಎಲ್ಲೂ ಪತ್ತೆಯಾಗದ ಕಾರಣ ಈ ದಿವಸ ಬಂದು ದೂರು ನೀಡಿರುತ್ತೇವೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 186/13 ಕಲಂ. 279-337-304[ಎ] ಐಪಿಸಿ ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 10-05-13 ರಂದು ಪಿರ್ಯಾದಿ ಅನಿತಾ ಕೋಂ. ಮಂಜೇಶ, ಹುಲ್ಕೆರೆ ಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 10-05-2013 ರಂದು ಸಂಜೆ 16-30 ಗಂಟೆಯಲ್ಲಿ ಮೈಸೂರು-ಕೆ.ಆರ್.ಪೇಟೆ ರಸ್ತೆ, ಪಾಂಡವಪುರ ತಾಲ್ಲೋಕು, ಕಣಿವೆಕೊಪ್ಪಲು ಡೌನ್ ಬಳಿ ಪಿರ್ಯಾದಿಯವರ ಗಂಡನಾದ ಸುಮಾರು 32 ವರ್ಷ ವಯಸ್ಸಿನ ಮಂಜೇಶ ಹಾಗೂ ಅನಿಲ್ ಎಂಬುವವರು ದಿನಾಂಕ:10-05-2013 ರಂದು ಶುಕ್ರವಾರ ಸಾಯಂಕಾಲ 04-30 ರ ಸಮಯದಲ್ಲಿ ಹುಲ್ಕೆರೆಕೊಪ್ಪಲು ಗ್ರಾಮದಿಂದ ಚಿನಕುರುಳಿಗೆ ಹೋಗಲು ತಮ್ಮ ಬೈಕಿನಲ್ಲಿ ಕಣಿವೆಕೊಪ್ಪಲು ಡೌನಿನಲ್ಲಿ ಎಡಭಾಗದಲ್ಲಿ ನಿಧಾನವಾಗಿ ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ. ಈ ಸಂದರ್ಭದಲ್ಲಿ ನನ್ನ ಗಂಡನ ಬಲ ಎದೆಯ ಭಾಗಕ್ಕೆ ಹಾಗೂ ತಲೆಯ ಭಾಗಕ್ಕೆ ಹಾಗೂ ಇನ್ನಿತರ ಭಾಗಗಳಿಗೆ ಅತಿಯಾದ ಪೆಟ್ಟು ಬಿದ್ದು, ರಕ್ತಸ್ರಾವ ಹಾಗೂ ಇನ್ನಿತರ ಭಾಗಗಳಿಗೆ ಅತಿಯಾದ ಪೆಟ್ಟು ಬಿದ್ದು ನನ್ನ ಗಂಡನಾದ ಮಂಜೇಶ್ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಹಾಗೂ ಅವರ ಜೊತೆಯಲ್ಲಿದ್ದ ಅನಿಲ್ ಗಾಯಗೊಂಡಿರುತ್ತಾರೆ. ಇದನ್ನು ನೋಡಿದ ನಮ್ಮ ಗ್ರಾಮದವರೇ ಆದ ಹೆಚ್.ಎನ್.ಬೋರೇಗೌಡ ಮತ್ತು ಹೆಚ್.ಎಂ. ದಿನೇಶ್ ರವರು ಸ್ಥಳದಲ್ಲಿ ನೋಡಿ ನಮಗೆ ಪೋನ್ ಮಾಡಿ ವಿಚಾರ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಗಂಡ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದುದನ್ನು ನೋಡಿರುತ್ತೇನೆ. ಹಾಗೂ ಅನಿಲ್ ರವರಿಗೆ ಎದೆ ಮಂಡಿಗೆ ಹಾಗೂ ಇತರೆ ಕಡೆ ಗಾಯಗಳು ಆಗಿರುತ್ತವೆ. ಆದುದ್ದರಿಂದ ತಾವು ನನ್ನ ಗಂಡನ ಸಾವಿಗೆ ಕಾರಣನಾದ ಟ್ರಾಕ್ಟರ್ ನಂ ಕೆಎ-15-ಟಿ-7465 ರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

No comments:

Post a Comment