Moving text

Mandya District Police

DAILY CRIME REPORT DATED : 24-05-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-05-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  3 ಕಳ್ಳತನ/ಕಳವು ಪ್ರಕರಣಗಳು,   1 ಅಪಹರಣ ಪ್ರಕರಣ,  1 ಪ್ರಿವೆನ್ಸನ್ ಆಫ್ ಕೌ ಸ್ಲಾಟರ್ ಆಕ್ಟ್ & ಕ್ಯಾಟಲ್ ಪ್ರಿಸರ್ವೇಷನ್ ಆಕ್ಟ್ ಮತ್ತು ಕ್ರುಯಲ್ಟಿ ಟು  ಅನಿಮಲ್ಸ್ ಆಕ್ಟ್,  2 ರಸ್ತೆ ಅಪಘಾತ ಪ್ರಕರಣಗಳು,  1 ರಾಬರಿ ಪ್ರಕರಣ ಹಾಗು ಇತರೆ 12 ಐ.ಪಿ.ಸಿ./ಸಿ.ಆರ್.ಪಿ.ಸಿ ಪ್ರಕರಣಗಳು ವರದಿಯಾಗಿರುತ್ತವೆ.  
 

ಮನುಷ್ಯ ಕಾಣೆಯಾದ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 193/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 24-05-2013 ರಂದು ಪಿರ್ಯಾದಿ ದ್ಯಾಮಣ್ಣ ಬಿನ್. ದೇವಪ್ಪ, ಚಿನಕುರಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ ಹೆಂಡತಿ ರತ್ನಳು ಕೂಢ ಸತೀಶನ ಜೊತೆ ಹೋಗಿರಬಹುದೆಂದು ನಮಗೆ ಸಂಶಯ ಇರುತ್ತದೆ. ನನ್ನ ಹೆಂಡತಿ ಮನೆಯಿಂದ ಹೋಗುವಾಗ ತಾಳಿ ಕಾಲುಂಗುರ ಬಿಚ್ಚಿ ಮನೆಯಲ್ಲೇ ಇಟ್ಟು ಉಟ್ಟ ಬಟ್ಟೆಯಲ್ಲಿ ಏನು ತೆಗೆದುಕೊಂಡು ಹೋಗದೆ ಮನೆಯಿಂದ ಹೊರಟು ಹೋಗಿರುತ್ತಾಳೆ ಕಾಣೆಯಾಗಿರುವ ನನ್ನ ಹೆಂಡತಿ ರತ್ನಳನ್ನು ಹುಡುಕಿಸಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಸ್ವಾಮಿ, ಹೆಚ್ಸಿ-133, ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಕೆ.ಆರ್. ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಒಬ್ಬ ಅಪರಿಚಿತ ಬಿಕ್ಷುಕ ಈ ಕಾಲುವೆಯಲ್ಲಿ ಮೃತಪಟ್ಟಿದ್ದು ಈ ಬಿಕ್ಷುಕ ಸುಮಾರು ಒಂದು ವಾರದಿಂದ ದೇವಸ್ಥಾನದ ಹತ್ತಿರ ಬಿಕ್ಷೆ ಮಾಡಿಕೊಂಡು ಜೀವನ ಮಾಡುತಿದ್ದು ಈತನಿಗೆ ಸುಮಾರು 50 ವರ್ಷ ವಯಸ್ಸಾಗಿರುತ್ತೆ. ಸುಮಾರು 5.5 ಅಡಿ ಎತ್ತರ ಹೊಂದಿದ್ದು ಕಪ್ಪು ಬಿಳಿ ಕೂದಲು, ಕಪ್ಪು ನಿಕ್ಕರ್, ಹಸಿರು ಹಳದಿ ಗೆರೆಯುಳ್ಳ ಶರ್ಟ್ ನ್ನು,  ಧರಿಸಿರುತ್ತಾನೆ. ಸದರಿ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಮೃತಪಟ್ಟಿರುತ್ತಾರೆ. ಶವವು ಕೆ.ಆರ್. ಪೇಟೆ ಸರ್ಕಾರಿ  ಆಸ್ಪತ್ರೆಯ ಶವಗಾರದಲ್ಲಿರುತ್ತೆಂದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಶ್ರೀನಿವಾಸಮೂರ್ತಿ, ಡಿ.ಹಲಸಹಳ್ಳಿ, ಕಸಬಾ ಹೋಬಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗಳು ಚೈತ್ರ ರವರಿಗೆ ಕಳೆದ 10 ವರ್ಷಗಳಿಂದ ಎದೆನೋವು ಮತ್ತು ಹೊಟ್ಟೆ ನೋವು ಬರುತಿದ್ದು ಚಿಕಿತ್ಸೆ ಪಡೆಯುತಿದ್ದರೂ ವಾಸವಾಗಿದ್ದು, ದಿನಾಂಕಃ 22-5-2013 ರ ಸಂಜೆ 07-00 ಗಂಟೆಯ ಸಮಯದಲ್ಲಿ ಹೊಟ್ಟೆನೋವು ಬಂದು ತಾಳಲಾರದೆ ಮನೆಯಲ್ಲಿದ್ದ ಯೋವುದೋ ವಿಷವನ್ನು ಕುಡಿದಿದ್ದು, ಚೈತ್ರರವರನ್ನು ಮಳವಳ್ಳಿ ಆಸ್ಪತ್ರೆಗೆ ತೋರಿಸಿ, ನಂತರ ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಿದ್ದು ದಿನಾಂಕಃ24-05-2013 ರಂದು ಬೆಳಗಿನ ಜಾವ 03-00 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಶವದ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಶವವನ್ನು ಕೊಡಿಸಿಕೊಡಿ ಎಂದು ಕೊಟ್ಟ ಲಿಖಿತ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತೆ.


3. ಬೆಳ್ಳೂರು ಪೊಲೀಸ್ ಠಾಣೆ ಯುಡಿಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಆರ್.ಪ್ರಕಾಶ್, ಲಕ್ಷ್ಮಿಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ರಾಮಯ್ಯ ಲಕ್ಷ್ಮಿಪುರ ಗ್ರಾಮ, ಬಿಂಡಿಗನವಿಲೆ ಹೋಬಳಿ ರವರು ಮನೆಯ ಒಳಗಡೆಯಿಂದ ಹೊರಗಡೆಗೆ ಸಿಮೆಂಟ್ ಮೂಟೆಯನ್ನು ತೆಗೆದುಕೊಂಡು ಬರುವಾಗ ಆಕಸ್ಮಿಕವಾಗಿ ಕಾಲು ಎಡವಿ ನೆಲಕ್ಕೆ ಕುಸಿದು ಬಿದ್ದವರನ್ನು ಚಿಕಿತ್ಸೆಗಾಗಿ ಎ.ಸಿ.ಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 10-32 ಗಂಟೆ ಸಮಯದಲ್ಲಿ ಮೃತಪಟ್ಟಿತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 138/13 ಕಲಂ. 498(ಎ) ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಕುಮಾರಿ ಕೋಂ. ನಾಗೇಂದ್ರ, 26 ವರ್ಷ, ಮನೆಕೆಲಸ, ಬೆಳಗೊಳ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ 1]ನಾಗೇಂದ್ರ 2]ಸುರೇಶ, 3]ವೆಂಕಟೇಶ, ಬೆಳಗೊಳ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಯಾದ ನಾಗೇಂದ್ರ ನು ನನಗೆ ವರದಕ್ಷಿನೆ ಕಿರುಕುಳ ನೀಡುತಿದ್ದು, ಜೊತೆಗೆ ನಾನು ಬೇರೆ ಮದುವೆಯಾಗುವುದಾಗಿ ತಿಳಿಸಿ ಖಾಲಿ ಸ್ಟ್ಯಾಂಪ್ ಪೇಪರ್ ಗೆ ಸಹಿ ಹಾಕು ಇನ್ನು ಮುಂದೆ ನನಗೂ ನಿನಗೂ ಯಾವ ಸಂಬಂದವಿರುವುದಿಲ್ಲ ಎಂದು ಹೇಳಿ ಚಿತ್ರ ಹಿಂಸೆ ನೀಡಿರುತ್ತಾರೆ, ಹಾಗೂ ನಾಗೇಂದ್ರನ ಸ್ನೇಹಿತರಾದ ಸುರೇಶ್  ಹಾಗೂ ವೆಂಕಟೇಶ್ ರವರು ಕೂಡ ನನಗೆ ಹಿಂಸೆ ನೀಡುತ್ತಿದ್ದು ಅವರಿಂದ ನನಗೆ ರಕ್ಷಣೆ ನೀಡಿ ಈ ಮೇಲ್ಕಂಡ ರವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನನಗೆ ನ್ಯಾಯ ದೂರಕಿಸಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ/ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 243/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಎಂ. ಮಹೇಶ ಬಿನ್. ಮಾದಯ್ಯ, ಹೆಚ್.ಕೆ.ವಿ. ನಗರ, ಚನ್ನೇಗೌಡನ ದೊಡ್ಡಿ, ಮದ್ದೂರು ಟೌನ್ ರವರು ನೀಡಿದ ದೂರಿನವಿವರವೇನೆಂದರೆ ಪಿರ್ಯಾದಿಯವರು ಹೆಚ್ಕೆವಿ ನಗರ ಚನ್ನೆಗೌಡನ ದೊಡ್ಡಿದ ಅವರ ಮನೆಯಿಂದ ಹೊರಗೆ ಹೋಗಬೇಕಾದರೆ ಮನೆಗೆ ಬೀಗ ಹಾಕಿಕೊಂಡು ಬೀಗದ ಕೀಯನ್ನು ಮನೆಯ ಮುಂಭಾಗದ ಕಿಟಕಿಯ ಹಿಂದೆ ಇಟ್ಟು ಹೋಗುತ್ತಿದ್ದರು. ಇದನ್ನು ನೋಡಿಕೊಂಡವರು ಯಾರೋ ಮನೆಯ ಅಕ್ಕಪಕ್ಕದವರು ಕಳ್ಳತನ ಮಾಡಿರಬಹುದು ಅಥವಾ ಯಾರೋ ಕಳ್ಳರು ಇಲ್ಲದ ಸಮಯವನ್ನು ನೋಡಿ ಕಿಟಕಿಯಲ್ಲಿ ಇದ್ದ ಕೀಯನ್ನು ತೆಗೆದುಕೊಂಡು ಬೀಗ ತೆಗೆದು ಒಳಗೆ ಹೋಗಿ ಮೇಲ್ಕಂಡ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಮೇಲ್ಕಂಡ ಒಡವೆಗಳ ಬೆಲೆ ತಿಳಿಯಬೇಕಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 180/13 ಕಲಂ. 457-380-379 ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಎ.ಬಿ ನಾಗೇಶ್, 48 ವರ್ಷ, ಒಕ್ಕಲಿಗರು, ಅರಕೆರೆ ಟೌನ್. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಫಿಯರ್ಾದಿಯವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಮನೆಯ ಒಳಗೆ ಬಂದು ಫಿಯರ್ಾದಿಯವರ ಬಾಬ್ತು 18,200/- ರೂ. ನಗದು, ಒಂದು ಟೈಟಾನ್ ವಾಚ್ ಅನ್ನು ಮತ್ತು ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕೆ.ಎ-11-ವೈ-8223ರ ಮೋಟಾರ್ ಸೈಕಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಮೌಲ್ಯ 64,563/- ಆಗಿರುತ್ತದೆ. ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 229/13 ಕಲಂ. 379 ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಮಹಮ್ಮದ್ ತೌಸಿಫ್, 21ವರ್ಷ, ಕೇರಾಫ್ ಅಪ್ರೋಜ್, ನಂ. 1749, 5ನೇ ಕ್ರಾಸ್, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-05-13 ರಂದು 03-00 ಗಂಟೆಯಲ್ಲಿ ಪಿ.ಇ.ಎಸ್. ಮಂಡ್ಯ ನಗರಸಭೆ ಕಛೇರಿಯ ಹತ್ತಿರ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 20,000/- ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

 ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 87/13 ಕಲಂ. 363 ಕೂಡ 34 ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಹೆಚ್.ಸಿ.ಜಯರಾಮೇಗೌಡ, 45ವರ್ಷ, ಹಳೇಬೀಡು ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಆರೋಪಿಗಳಾದ ಹೆಚ್.ಎಂ.ಗಣೇಶ, ಹೆಚ್.ಟಿ.ಕುಮಾರಸ್ವಾಮಿ , ಪ್ರಸನ್ನ, ಬಸವರಾಜ ಹಳೇಬೀಡು ಗ್ರಾಮ, ಮೇಲುಕೋಟೆ ಹೋಬಳಿ ರವರುಗಳು ಪಿರ್ಯಾದಿಯ ಮಗಳನ್ನು ಆರೋಪಿ-1ರವರು ಆಕೆಯನ್ನು ಮನೆಯಿಂದ ಒತ್ತಾಯವಾಗಿ ಕರೆದುಕೊಂಡು ತನ್ನ ಮೋಟಾರ್ ಬೈಕ್ನಲ್ಲಿ ಅಪಹರಿಸಿಕೊಂಡು ಹೋದುದಾಗಿ ಆರೋಪಿ-2 ರಿಂದ 4ರವರು ಆರೋಪಿ-1 ಹೆಚ್.ಎಂ.ಗಣೇಶರವರಿಗೆ ಸಹಾಯಕರಾಗಿದ್ದುದಾಗಿ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 337/13 ಕಲಂ. 5, 8, 9 & 11 ಪ್ರಿವೆನ್ಸನ್ ಆಫ್ ಕೌ ಸ್ಲಾಟರ್ ಆಕ್ಟ್ & ಕ್ಯಾಟಲ್ ಪ್ರಿಸರ್ವೇಷನ್ ಆಕ್ಟ್ 1975 ಮತ್ತು ಕಲಂ. 11() & (ಜ) ಕ್ರುಯಲ್ಟಿ ಟು  ಅನಿಮಲ್ಸ್ ಆಕ್ಟ್.

ದಿನಾಂಕ: 24-05-2013 ರಂದು ಪಿರ್ಯಾದಿ ಬಿ.ಜೆ ಕುಮಾರ್ .ಪಿ,.ಎಸ್,ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಮಜ್ಜು, 24 ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ಮತ್ತು 2] ಬಾಬು, 28 ವರ್ಷ, ಮುಸ್ಲಿಂ, ಕೂಲಿಕೆಲಸ, ಮುರುಕನಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾಲ್ಲೂಕು ರವರು ಪಿರ್ಯಾದಿಯವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ  ದಾಳಿ  ಮಾಡಲಾಗಿ ಕೆ.ಆರ್.ಪೇಟೆ ಕಡೆಯಿಂದ ಬಂದ ಕೆಎ-11-6426 ರ ಗೂಡ್ಸ್ ಆಟೋವನ್ನು ತಡೆದು ನಿಲ್ಲಿಸಿ ಆಟೋದಲ್ಲಿದ್ದ ಆಸಾಮಿಗಳ ಹೆಸರು ವಿಚಾರ ಮಾಡಿ  ಆಟೋವನ್ನು ಪರಿಶೀಲಿಸಲಾಗಿ 2  ಇಲಾತಿ ಹಸು ಮತ್ತು 2 ನಾಟಿ ಹಸುವಿನ ಕರುಗಳು ಇದ್ದವು. ಸದರಿಯವರುಗಳನ್ನು ಇವುಗಳ ಬಗ್ಗೆ ವಿಚಾರ ಮಾಡಿದಾಗ ನಾವುಗಳು ನಮ್ಮ ಗ್ರಾಮದ ಅಕ್ಕ ಪಕ್ಕದ ಗ್ರಾಮಗಳಲ್ಲಿ ಮೇಲ್ಕಂಡ 2 ಇಲಾತಿ ಹಸು ಮತ್ತು 2 ನಾಟಿ ಹಸುವಿನ ಕರುಗಳನ್ನು ಖರೀದಿ ಮಾಡಿಕೊಂಡು ಅವುಗಳನ್ನು ಮೈಸೂರಿನ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದು ಇವುಗಳನ್ನು ಕಸಾಯಿಖಾನೆಗೆ ಸಾಗಿಸಲು ಯಾವುದೇ ಲೈಸೆನ್ಸ್ ಇಲ್ಲವೆಂದು ತಿಳಿಸಿದ ಮೇರೆಗೆ. ಸ್ವಯಂ ವರದಿ ತಯಾರುಮಾಡಿ ಪ್ರಕರಣ ದಾಖಲಿಸಿರುತ್ತೆ.


ರಸ್ತೆ ಅಪಘಾತ ಪ್ರಕರಣ : 

1. ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. 279-304(ಎ)ಐ.ಪಿ.ಸಿ. ಕೂಡ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 24-05-2013 ರಂದು ಪಿರ್ಯಾದಿ ಮಂಜ ಬಿನ್. ಲೇಟ್. ಕೃಷ್ಣ, ವಾಸ:- ಚಾಮನಹಳ್ಳಿ ಗ್ರಾಮ, ಕಸಬಾ ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಯಾವುದೋ ಒಂದು ಅಪರಿಚಿತ ಸ್ಕಾಪರ್ಿಯೋ ಕಾರಿನ ಚಾಲಕ ಕಾರಿನ ನಂಬರ್ ಚಾಲಕನ ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ದಿನಾಂಕ: 24-05-2013 ರಂದು ಸಂಜೆ 04-30 ಗಂಟೆಯಲ್ಲಿ ಮದ್ದ್ದೂರು ಟೌನಿನ, ಮದ್ದೂರಮ್ಮ ದೇವಸ್ತಾನದ ಮುಂದೆ ಮೈಸೂರು ಕಡೆಯಿಂದ ಬೆಂಗಳೂರು ಕಡೆಗಾದಂತೆ ಬಂದ ಒಂದು ಸ್ಕಾರ್ಪಿಯೋ ಕಾರಿನ ಚಾಲಕ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿರವರ ಅಜ್ಜಿಗೆ ಡಿಕ್ಕಿ ಹೊಡೆಸಿ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ ಅಪಘಾತಕ್ಕೀಡಾದ ಕರಿಯಮ್ಮ @ ಚುಂಚಮ್ಮ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರಗಿಸುವಂತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬಿಂಡಿಗನನವಿಲೆ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 279, 304 [ಎ] ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಎನ್.ಟಿ.ಬಾಲಮೂತರ್ಿ, ಎ.ನಾಗತಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಒಂದು ಕಾರು ಬರುತ್ತಿದ್ದು, ಅದರ ಚಾಲಕ ಕಾರನ್ನು ಅತಿವೇಗ ಹಾಗೂ ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು ವರಲಕ್ಷ್ಮಿ @ ನಾಗರತ್ನ ರವರಿಗೆ ಹಿಂಭಾಗದಿಂದ ಡಿಕ್ಕಿ ಹೊಡೆಯಿಸಿ ಸುಮಾರು 50 ಅಡಿ ದೂರ ರಸ್ತೆಯಲ್ಲಿ ವರಲಕ್ಷ್ಮಿ @ ನಾಗರತ್ನ ರವರ ದೇಹವನ್ನು ಎಳೆದುಕೊಂಡು ಹೋಗಿ ಕಾರನ್ನು ನಿಲ್ಲಿಸಿದ ತಕ್ಷಣ ನಾನು ಹೋಗಿ ನೋಡಲಾಗಿ ಕಾರಿನ ತಳಭಾಗ ದೇಹ ಸಿಕ್ಕಿಕೊಂಡಿದ್ದು, ಮೃತಪಟ್ಟಿದ್ದಳು. ಕೆಎ-05 ಎಂ.ಜಿ-1148 ರ (ಐಕಾನ್ ಕಾರ್ ಆಗಿರುತ್ತದೆ.) ಚಾಲಕನ ಹೆಸರು ತೇಜಸ್ವಿ ಎಂದು ತಿಳಿಯಿತು ಮುಂದಿನ ಕ್ರಮ ಜರಗಿಸುವಂತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಕೆ ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 392 ಐ.ಪಿ.ಸಿ.

ದಿನಾಂಕ:24-05-2013 ರಂದು ಪಿರ್ಯಾದಿ ಟಿ. ನಾರಾಯಣ್, ಪಾಲಹಳ್ಳಿ, ಹಾಲಿ ವಾಸ ಮೈಸೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಅವರ ಕಾರಿನಲ್ಲಿ ಹೋಗಿ ತಮ್ಮ ಜಮೀನಿನ ಬಳಿ ಸೈಟು                   ನೋ ಡುತ್ತಿದ್ದವರಿಗೆ 3 ಜನ ಬಂದು ಕೈ ಗಳಿಂದ ಹೊಡೆದು ಕತ್ತಿನಲ್ಲಿದ್ದ 52 ಗ್ರಾಂ. ಚಿನ್ನದ ಚೈನು, ಜೇಬಿನಲ್ಲಿದ್ದ 2000/-ರೂ ಹಣ, ಒಂದು ನೋಕಿಯಾ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment