ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-05-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ, 1 ಅಪಹರಣ ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಕೆ.ಪಿ. ಆಕ್ಟ್ ಪ್ರಕರಣಗಳು ವರದಿಯಾಗಿರುತ್ತವೆ.
ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :
1. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 114/13 ಕಲಂ. 307-498(ಎ) ಐಪಿಸಿ ರೆವಿ 3 & 4 ಡಿ.ಪಿ. ಕಾಯ್ದೆ..
ದಿನಾಂಕ: 25-05-2013 ರಂದು ರಾತ್ರಿ 09-00 ಗಂಟೆಯಲ್ಲಿ ಕೆಂಚೇಗೌಡ ಬಿನ್ ಲೇ. ಬೊಚ್ಚೇಗೌಡ, 65ವರ್ಷ, ವ್ಯವಸಾಯ, ಹುಲಿಕೆರೆ ಗ್ರಾಮ, ದುದ್ದ ಹೋ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1) ಪರಮೇಶ ಬಿನ್ ಚಿಕ್ಕಯ್ಯ, 2] ಚಿಕ್ಕಯ್ಯ, 3] ಹೊಂಬಾಳಮ್ಮ ಕೋಂ. ಚಿಕ್ಕಯ್ಯ - ಎಲ್ಲರೂ ಕೋಡಿದೊಡ್ಡಿ ಗ್ರಾಮ, . ಕೊಪ್ಪ ಹೋ. ಮದ್ದೂರು ತಾ. ರವರು ವರದಕ್ಷಿಣೆ ಹಣವನ್ನು ಕೊಟ್ಟಿಲ್ಲ ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ್ಲ ಫೋನ್ ಮಾಡಿ ನಿಮ್ಮ ರಶ್ಮಿಕಳು ವಿಷ ಕುಡಿದಿದ್ದು ಮಂಡ್ಯ ಜಿಲ್ಲಾ ಆಸ್ಪತ್ತೆಗೆ ತಂದು ಸೇರಿಸಿರುತ್ತೇವೆ ಎಂದು ಹುಡುಗನ ತಂದೆ ಚಿಕ್ಕಯ್ಯನವರು ನಮಗೆ ಫೋನ್ ಮಾಡಿ ತಿಳಿಸಿದರು. ನಂತರ ನಾವುಗಳು ಜಿಲ್ಲಾಸ್ಪತ್ರೆಗೆ ಬಂದು ರಶ್ಮಿಕ್ಳನ್ನು ನೋಡಿದೆವು. ಆಕೆಗೆ ಪ್ರಜ್ಞೆ ಇಲ್ಲದೇ ಮಾತನಾಡುತ್ತಿರಲಿಲ್ಲ. ರಾತ್ರಿ ವಿಷ ಕುಡಿದು ಒದ್ದಾಡುತ್ತಿದ್ದಳು. ಅವಳನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸುತ್ತಿದ್ದೇವೆ ಎಂದು ಹೇಳಿದರು. ಆದರೆ ರಶ್ಮಿಕ್ ಕತ್ತಿನಲ್ಲಿ ಮುಖದ ಮೇಲೆ ಗಾಯವಾಗಿರುವ ಗುರುತುಗಳು ಇದ್ದವು. ಯಾವುದೋ ಹಗ್ಗದಿಂದ ಬಿಗಿದು ಸಾಯಿಸಲು ಪ್ರಯತ್ನಿಸಿದ್ದು ನಮಗೆ ಅನುಮಾನವಿದ್ದು, ನನ್ನ ಮಗಳಾದ ರಶ್ಮಿಕ್ಗಳಿಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿ ವಿಷ ಕುಡಿಸಿಯೋ ಸಾಯಿಸಲು ಪ್ರಯತ್ನಿಸಿರುವ ರಶ್ಮಿಕಳ ಗಂಡ ಆಕೆಯ ಮಾವ ಹಾಗೂ ಅತ್ತೆಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 498(ಎ)-323-506 ಕೂಡ 34 ಐ.ಪಿ.ಸಿ.
ದಿನಾಂಕ: 25-05-2013 ರಂದು ಪಿರ್ಯಾದಿ ಪೂಣರ್ಿಮ, ಕೋಂ. ಶಿವಶಂಕರ್, ಹಾಗನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಈಗ್ಗೆ 13 ವರ್ಷದ ಹಿಂದೆ ಶಿವಶಂಕರ ಎಂಬುವವರ ಜೊತೆ ವಿವಾಹವಾಗಿದ್ದು, ನನಗೆ ಒಂದು ಗಂಡು ಮತ್ತು ಒಂದು ಗೆಣ್ಣು ಮಗು ಇರುತ್ತದೆ, ಮದುವೆ ಕಾಲದಲ್ಲಿ ವರೋಪಚಾರವಾಗಿ ನೀಡಿದಂತಹ ಚಿನ್ನವನ್ನೆಲ್ಲ ಮಾರಿಕೊಂಡು ದಿನವೆಲ್ಲಾ ಕುಡಿದು ಹೊಡೆಯುವುದು ಮಾನಸಿಕ ಹಿಂಸ ನೀಡುವುದು ಮಾಡಿರುತ್ತಾರೆ ಇದಕ್ಕೆ ನಮ್ಮ ಆರೋಪಿಗಳಾದ ಗಂಡ ಶಿವಶಂಕರ ಮಾವ ನಿಂಗಪ್ಪ, ಅತ್ತೆ ರತ್ನಮ್ಮ, ಮತ್ತು ನಾದಿನಿ ಮೀನಾ ಇಲ್ಲರೂ ಹಾಗನಹಳ್ಳಿ ಗ್ರಾಮರವರುಗಳು ಸಪೋ ಟರ್್ ಮಾಡಿರುತ್ತಾರೆ ಈ ದಿನ ಹಣದ ವಿಷಯಕ್ಕೆ ಜಗಳ ತೆಗೆದು ನನ್ನ ಗಂಡ ಮಾವ ಅತ್ತೆ ನಾದಿನಿ ಎಲ್ಲ ಸೇರಿಕೊಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 260/13 ಕಲಂ. 366(ಎ) ಐ.ಪಿ.ಸಿ.
ದಿನಾಂಕ: 25-05-2013 ರಂದು ರಾತ್ರಿ 09-00 ಗಂಟೆಯಲ್ಲಿ ಪಿರ್ಯಾದಿ ಮಂಜುಳ ಬಿನ್. ಸೋಮಣ್ಣ, ಸಾತನೂರು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಗುರು, 2] ಮಹದೇವ, ಇಬ್ಬರೂ ಮಂಡ್ಯ ಸಿಟಿ ರವರುಗಳು ಪಿರ್ಯಾದಿಯವರ 17 ವರ್ಷದ ಮಗಳನ್ನು ಬಲವಂತವಾಗಿ ಗುರು ಎಂಬುವವನು ಕೈ ಹಿಡಿದು ಸ್ಕೂಟರ್ ನ, ಮಧ್ಯದಲ್ಲಿ ಕೂರಿಸಿಕೊಂಡು ಅಪಹರಣ ಮಾಡಿಕೊಂಡು ಮಂಡ್ಯದ ಕಡೆಗೆ ಹೊರಟು ಹೋದರು. ಆಗ ನಾನು ನಮ್ಮ ಅಲ್ಲೇ ಇದ್ದ ನಮ್ಮ ಗ್ರಾಮದ ನಾಗಣ್ಣ, ಮತ್ತು ಅವರ ಮಗ ರಾಜು ಮೂವರೂ ಕೂಗಿಕೊಂಡು ಓಡಿ ಹಿಂಬಾಲಿಸಿಕೊಂಡು ಹೋದೆವು. ಆದರೂ ಸ್ಕೂಟರ್ನಲ್ಲಿ ಜೋರಾಗಿ ಹೊರಟು ಹೋದರು ನನ್ನ ಮಗಳನ್ನು ಬಲವಂತವಾಗಿ ಸ್ಕೂಟರ್ ಮೇಲೆ ಕೂರಿಸಿಕೊಂಡು ಅಪಹರಣ ಮಾಡಿಕೊಂಡು ಹೋದ ಗುರು ಮತ್ತು ಮಹದೇವ ಎಂಬುವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಪ್ರಾರ್ಥನೆ.
ಯು.ಡಿ.ಆರ್. ಪ್ರಕರಣ :
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.
ದಿನಾಂಕ: 25-05-2013 ರಂದು ಪಿರ್ಯಾದಿ ರತ್ನಮ್ಮ ಕೊಂ. ರಮೇಶ, ಹರಿಹರಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಅತ್ತೆ ಸರೋಜಮ್ಮ ಹರಿಹರಪುರಕ್ಕೆ ಬಂದಿದ್ದು ದಿನಾಂಕ:24-05-2013ರಂದು ಬೆಳಗ್ಗೆ 10-00 ಗಂಟೆಯಲ್ಲಿ ಸ್ನಾನಮಾಡಲೆಂದು ನೀರು ಒಲೆಗೆ ಬೆಂಕಿ ಹಾಕಲು ಸೀಮೆಎಣ್ಣೆಯನ್ನು ಹಾಕಿ ಬೆಂಕಿಹಾಕುವಾಗ ಸೀರೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಮುಖ, ಕೈ, ಬೆನ್ನಿಗೆ ಸುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment