ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-05-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 1 ವಾಹನ ಕಳವು ಪ್ರಕರಣ, 2 ರಸ್ತೆ ಅಪಘಾತ ಪ್ರಕರಣಗಳು ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣ :
ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. ಹುಡುಗಿ ಕಾಣೆಯಾದ ಪ್ರಕರಣ.
ದಿನಾಂಕ: 26-05-2013 ರಂದು ಪಿರ್ಯಾದಿ ಶಿವಲಿಂಗೇಗೌಡ, ಜವರೇಗೌಡ, ತಿಪ್ಪಾಪುರ ಗ್ರಾಮ, ದುದ್ದಾ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನನ್ನ ಮಗಳು ಕೆಲಸ ಮಾಡುವ ಚಾಕಿ ಕೇಂದ್ರದಲ್ಲಿ ವಿಚಾರ ಮಾಡಲಾಗಿ ಅಲ್ಲೆ ಕೆಲಸ ಮಾಡುತ್ತಿದ್ದ ಸುನಿಲ್ ಎಂಬುವನು ಸಹ ಕೆಲಸಕ್ಕೆ ಬರುತ್ತಿಲ್ಲ ಎಂದು ತಿಳಿದು ಬಂತು. ನನಗೆ ನನ್ನ ಮಗಳು ಕಾಣೆಯಾಗಿರುವ ಬಗ್ಗೆ ಬೆಸಗರಹಳ್ಳಿ ಸುನಿಲ್ ಎಂಬುವವನ ಮೇಲೆ ಅನುಮಾನ ಇರುತ್ತದೆ. ನನ್ನಮಗಳು ಇಲ್ಲಿಯವರೆಗೂ ಸಹ ಮನೆಗೆ ಬರದಿದ್ದ ಕಾರಣ ಹಾಗೂ ನಾವು ಹುಡುಕಿದರೂ ಸಿಗದಿದ್ದ ಕಾರಣ ಈ ದಿನ ತಡವಾಗಿ ತಮ್ಮ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ ಎಂದು ನೀಡಿದ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 136/13 ಕಲಂ. 379 ಐ.ಪಿ.ಸಿ.
ದಿನಾಂಕ:26-05-2013 ರಂದು ಪಿರ್ಯಾದಿ ಬಸವರಾಜು ಬಿನ್. ಲೇಟ್. ಬಸಪ್ಪ, ಗೌಡಗೆರೆ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 24-05-2013ರಂದು ಮದ್ಯಾಹ್ನ 02-00 ಗಂಟೆಯಲ್ಲಿ ಮಳವಳ್ಳಿ ಟೌನ್ ಆಸ್ಪತ್ರೆಯ ಆವರಣದಲ್ಲಿ ಪಿರ್ಯಾದಿಯವರ ಬಾಬ್ತು ಮೊಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಹುಡುಕಲಾಗಿ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 115/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಕಾಯ್ದೆ.
ದಿನಾಂಕ:26-05-2013 ರಂದು ಪಿರ್ಯಾದಿ ಕೆ.ಎಂ. ದಿನೇಶ ಬಿನ್. ಲೇಟ್. ಮರಿಯಪ್ಪ, 41ವರ್ಷ, ಪರಿಶಿಷ್ಠ ಜಾತಿ, ಅಂಬೇಡ್ಕರ್ ಬಡಾವಣೆ, ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ.-17-ಎ-1344 ಎಸ್ಎಲ್ಎನ್ ಬಸ್ ಚಾಲಕ.ಬಸ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸರ್ವೋದಯ ಕಾಲೇಜ್ ಕಡೆಯಿಂದ ರಸ್ತೆಗೆ ಬರುತ್ತಿದ್ದ ಹುಡುಗನಿಗೆ ಬಸ್ ಡಿಕ್ಕಿಪಡಿಸಿದ್ದು ಹುಡುಗ ಮತ್ತು ಆತನು ತಳ್ಳಿಕೊಂಡು ಬರುತ್ತಿದ್ದ ಟಿವಿಎಸ್. ಮೇಲೆ ಹರಿದ ಕಾರಣ ಟಿವಿಎಸ್ ಜಖಂಗೊಂಡು ಹುಡುಗನ ದೇಹದ ಮೇಲೆ ಬಸ್ ಹರಿದು ಹುಡುಗ ಸ್ಥಳದಲ್ಲಿಯೇ ಮೃತ ಹೊಂದಿರುತ್ತಾನೆಂದು ಸದರಿ ಬಸ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 166/13 ಕಲಂ. 279-304[ಎ] ಐಪಿಸಿ ಕೂಡ 187 ಐಎಂವಿ ಕಾಯ್ದೆ.
ದಿನಾಂಕ:26-05-2013 ರಂದು ಪಿರ್ಯಾದಿ ಸಂತೋಷ ಪಿ. ಬಿನ್. ಪಂಚಲಿಂಗಯ್ಯ, ಮಣಿಗೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 25-05-2013 ರಂದು 6-40 ರಸ್ತೆಯ ಹೆಬ್ಬಳದಿಂದ ಹಿಂದೆ , ಮದ್ದೂರು ಯಾವುದೋ ವಾಹನ ಅತೀವೇಗ ಅಜಾಗರೂಕತೆಯಿಂದ ಬಂದು ಮೃತ ಪಂಚಲಿಂಗಯ್ಯನ ಬೈಕ್ಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಾಗಿರುತ್ತೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
No comments:
Post a Comment