ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-05-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 4 ಮನುಷ್ಯ ಕಾಣೆಯಾದ ಪ್ರಕರಣಗಳು, 1 ವಾಹನ ಕಳವು ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ರಸ್ತೆ ಅಪಘಾತ ಪ್ರಕರಣ ಹಾಗು 15 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಇ. ಆಕ್ಟ್ ಪ್ರಕರಣಗಳು ವರದಿಯಾಗಿರುತ್ತವೆ.
ಕಳ್ಳತನ ಪ್ರಕರಣ :
ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 137/13 ಕಲಂ. 457-380 ಐ.ಪಿ.ಸಿ.
ದಿನಾಂಕ:27-05-2013 ರಂದು ಪಿರ್ಯಾದಿ ಪರಮೇಶ್ ಬಿನ್. ಶಿವರುದ್ರಪ್ಪ ಟಿ. ಕಾಗೇಪುರ ಗ್ರಾಮ, ಮಳವಳ್ಳಿ ತಾಲ್ಲೂಕುರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:25-05-2013 ರಂದು ರಾತ್ರಿ ವೇಳೆಯಲ್ಲಿ ಅವರ ಬಾಬ್ತು ಭುವನೇಶ್ವರಿ ಪೇಂಟ್ಸ್ ಮತ್ತು ಹಾರ್ಡ್ ವೇರ್ ಅಂಗಡಿಯಲ್ಲಿ ಯಾರೋ ಕಳ್ಳರು ಅಂಗಡಿಯ ಶೆಲ್ಟರನ್ನು ಹೊಡೆದು ಸುಮಾರು 38000/- ರೂ. ನಗದು ಹಣವನ್ನು ಕಳವು ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 138/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕಃ 27-05-2013 ರಂದು ಪಿರ್ಯಾದಿ ಎಂ ಕರಿಯಪ್ಪ ಬಿನ್. ಯಾಮಗಿರಿಗೌಡ, ಎಂ. ಬಸವಪುರ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 26-05-2013 ರಂದು ಮದ್ಯಾಹ್ನ 03-00 ಗಂಟೆ ಸಮಯದಲ್ಲಿ ಮಳವಳ್ಳಿ ಟೌನ್ ನ, ಕೆ. ಸರ್ಕಲ್ ಬಳಿ ಪಿರ್ಯಾದಿಯವರ ಮಗ ಕೆ. ಚಿಕ್ಕರಾಜು ಬಿನ್ ಕರಿಯಪ್ಪ, 15 ವರ್ಷ ಎಂಬುವವನು ಮಳವಳ್ಳಿಗೆ ಜೆರಾಕ್ಸ್ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 162/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕಃ 27-05-2013 ರಂದು ಪಿರ್ಯಾದಿ ಶಿವಣ್ಣ ಬಿನ್. ತಿರುಮಲಯ್ಯ, 48ವರ್ಷ, ಗೊಲ್ಲರು, ವ್ಯವಸಾಯ, ವಾಸ ಹೊಸಕ್ಕಿಪಾಳ್ಯಗ್ರಾಮ, ಬೆಳ್ಳೂರು ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 25-05-2013 ರಂದು ಸಂಜೆ 05-00 ಗಂಟೆಯಲ್ಲ್ಲಿ ಹೊಸಕ್ಕಿಪಾಳ್ಯದಿಂದ ಸುನೀತ. ಹೆಚ್.ಎಸ್. ಬಿನ್. ಲೇಟ್. ತಿರುಮಲಯ್ಯ, 20 ವರ್ಷ ರವರು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆವಿಗೂ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿದೆವು. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 231/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕಃ 27-05-2013 ರಂದು ಪಿರ್ಯಾದಿ ಕರೀಗೌಡ ಬಿನ್. ಲೇಟ್. ಜವರೇಗೌಡ, ತಂಗಳಗೆರೆ ಗ್ರಾಮ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 25-05-2013 ರಂದು 09-30 ಪಿ.ಎಂ. ನಲ್ಲಿ, ಆರ್.ಎ.ಪಿ.ಸಿ.ಎಂ.ಎಸ್. ಸೊಸೈಟಿಯ ಪೆಟ್ರೋಲ್ ಬಂಕ್ ಬಳಿಯಿಂದ ಟಿ.ಕೆ.ಗಿರೀಶ ಬಿನ್. ಕರೀಗೌಡ, 25 ವರ್ಷ, ಒಕ್ಕಲಿಗರು ರವರನ್ನು ಹುಲಿವಾನಕ್ಕೆ ಹೋಗು ಅಂತ ಹೇಳಿ ಲೊಕೇಶನನ್ನು ಕಳುಹಿಸಿದ್ದು ಇದುವರೆಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಆತನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಮದ್ದೂರು ಪೊಲೀಸ್ ಠಾಣೆ ಮೊ.ನಂ. 245/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕಃ 27-05-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ಸೋಮಶೇಖರ, ಬಿದರಕೋಟೆ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16-05-2013 ರಂದು ಸಂಜೆ 05-45 ಗಂಟೆಯಲ್ಲಿ, ಶಾಯಿ ಗಾಮರ್ೆಂಟ್ಸ್ ನಿಂದ ಸೌಜನ್ಯ ಬಿ.ಎಸ್ ಬಿನ್. ಸೋಮಶೇಖರ, 20 ವರ್ಷ ಎಂಬುವವರು ಕೆಲಸ ಮುಗಿದ ನಂತರ ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಇದುವರೆವಿಗೂ ನೆಂಟರ ಮತ್ತು ಆಕೆಯ ಸ್ನೇಹಿತೆಯರ ಊರು ಮತ್ತು ಮನೆಗಳಲ್ಲಿ ಹುಡುಕಿದರೂ ಸಹ ಸಿಕ್ಕಿರುವುದಿಲ್ಲ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 232/13 ಕಲಂ. 379 ಐ.ಪಿ.ಸಿ.
ದಿನಾಂಕಃ 27-05-2013 ರಂದು ಪಿರ್ಯಾದಿ ಎಸ್.ಸುರೇಶ ಬಿನ್. ಸಿದ್ದಶೆಟ್ಟಿ, 37 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16-02-2013 ರಂದು 02-30 ಗಂಟೆಯಿಂದ 03-00 ಪಿಎಂ ನಲ್ಲಿ, ಶ್ರೀಅನ್ನ ಪೂಣರ್ೇಶ್ವರಿ ದೇವಸ್ಥಾನದ ತಮ್ಮ ಬಾಬ್ತು ಕೆಎ-03-ಇಎಕ್ಸ್-8248 ನಂಬರಿನ ಟಿವಿಎಸ್ ಎಕ್ಸೆಲ್ ಹೆವಿ ಡ್ಯೂಟಿ ಮೊಪೆಡನ್ನು ಮಂಡ್ಯದ ವಿದ್ಯಾನಗರದಲ್ಲಿರುವ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ಮುಂಭಾಗ ಬೀಗ ಹಾಕಿ ನಿಲ್ಲಿಸಿ ದೇವಸ್ಥಾನದ ಒಳಗಡೆ ಹೋಗಿ ಪೂಜೆ ಮುಗಿಸಿಕೊಂಡು ನಂತರ ವಾಪಸ್ಸು ನೋಡಲಾಗಿ ಮೊಪೆಡ್ ಇರಲಿಲ್ಲ ಯಾರೋ ಕಳವು ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 246/13 ಕಲಂ. 498(ಎ)-323-324-504-506 ಕೂಡ 34 ಐ.ಪಿ.ಸಿ.
ದಿನಾಂಕಃ 27-05-2013 ರಂದು ಪಿರ್ಯಾದಿ ಮೀನಾ ಕೋಂ. ರಮೇಶ, ವಳಗೆರೆಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ರಮೇಶ ಹಾಗು ಇತರೆ 4 ಜನರು ಪಿರ್ಯಾದಿಯವರಿಗೆ ಕಾಲಿನಿಂದ ಹೊಟ್ಟೆಯ ಭಾಗಕ್ಕೆ ತುಳಿದು ಮನೆಯಿಂದ ಹೊರಗೆ ಎಳೆದು ಹಾಕಿ ಮತ್ತೆ ಮನೆಗೆ ಬರಬೇಡ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 279-304(ಎ) ಕೂಡ 187 ಐ.ಎಂ.ವಿ. ಆಕ್ಟ್.
ದಿನಾಂಕಃ 27-05-2013 ರಂದು ಪಿರ್ಯಾದಿ ಚಿಕ್ಕಣ, ಸಿಂಗ್ರಿಗೌಡನ ಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ಕಎ-11-ಎ-4997 ವಾಹನದ ಚಾಲಕ, ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ತಮ್ಮ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯ ಅಕ್ಕನ ಮಗನ ಪಲ್ಸರ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಜವರೇಗೌಡ ಎಂಬುವವರು ಮೃತಪಟ್ಟಿರುತಾನೆಂದು ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
No comments:
Post a Comment