Moving text

Mandya District Police

DAILY CRIME REPORT DATED : 04-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು,  1 ರಾಬರಿ ಪ್ರಕರಣ,  1 ವಂಚನೆ ಪ್ರಕರಣ,  1 ಅಕ್ರಮ ಬಡ್ಡಿ ವ್ಯವಹಾರ ಪ್ರಕರಣ ಹಾಗು 9 ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 04-06-2013 ರಂದು ಪಿರ್ಯಾದಿ ವೆಂಕಟೇಶ್ ಬಿನ್. ಅಣ್ಣಯ್ಯಶೆಟ್ಟಿ, 40 ವರ್ಷ, ಕುಂಬಾರ ಶೆಟ್ಟರು, ಕೂಲಿ ಕೆಲಸ, ಬೇವಿನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ತಂದೆ ಅಣ್ಣಯ್ಯಶೆಟ್ಟಿ ಬಿನ್, ಕುಂಬಾರಶೆಟ್ಟರು, ಕೂಲಿಕೆಲಸ, ಬೇವಿನಹಳ್ಳಿ ಗ್ರಾಮ ರವರು ದಿನಾಂಕ: 03-06-2013 ರಂದು ಜೀವನದಲ್ಲಿ ಜಿಗುಪ್ಸೆಗೊಂಡು ಸಂತೆಕಸಲಗೆರೆ ಸಿದ್ದೇಶ್ವರದೇವಸ್ಥಾನದ ಬಳಿ ಇರುವ ಆಲದ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರ. ನಮ್ಮ ತಂದೆಯವರ ಸಾವಿಗೆ ಯಾವುದೇ ಅನುಮಾನ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-06-2013 ರಂದು ಪಿರ್ಯಾದಿ ಮಲ್ಲೇಶ ಬಿನ್ ಕುಳ್ಳೇಗೌಡ, ನೆಲಮಾಕನಹಳ್ಳಿ ಗ್ರಾಮ, ಮಳವಳ್ಳಿ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಸಿದ್ದೇಗೌಡ @ ರಾಜು, ಒಕ್ಕಲಿಗರು, ಕಂಟ್ರಾಕ್ಟರ್ ಕೆಲಸ, ನೆಲಮಾಕನಹಳ್ಳಿ ಗ್ರಾಮ ರವರು ದಿನಾಂಕ: 02-06-2013 ರಂದು ಬೆಳಗಿನ ಜಾವ 05.00 ಗಂಟೆಯಲ್ಲಿ, ಕಾಗೇಪುರ ಗ್ರಾಮದಲ್ಲಿ ಕಾಲು ನೋವು ಮತ್ತು ಹೊಟ್ಟೆನೋವು ತಾಳಲಾರದೆ ದಿನಾಂಕ 02-06-2013 ರಂದು ರಾತ್ರಿ ಸಮಯದಲ್ಲಿ ತನ್ನ ಮನೆಯ ಹತ್ತಿರ  ಯಾವುದೋ ವಿಷ ಸೇವನೆ ಮಾಡಿ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 04-06-2013 ರಂದು ಬೆಳಗಿನ ಸಮಯದಲ್ಲಿ ಮೃತಪಟ್ಟಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


 3. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಯುಡಿಆರ್. ನಂ. 15/2013 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-06-2013 ರಂದು ಪಿರ್ಯಾದಿ ವೆಂಕಣರಮಣೇಗೌಡ, ಎ.ಎಸ್.ಐ. ಟೌನ್ ಠಾಣೆ ಕೆ.ಆರ್. ಪೇಟೆ ತಾ. ರವರು ನೀಡಿದ ದೂರು ಏನೆಂದರೆ ವಿನೋದ, 30 ವರ್ಷ, ವಿಳಾಸ ತಿಳಿದಿರುವುದಿಲ್ಲ ಇವರು ದಿನಾಂಕ: 30-05-2013 ರಂದು ಕೆ.ಆರ್. ಪೇಟೆ ಟೌನ್, ಬಾಳೆ ಮಂಡಿ ಮುಂಭಾಗ ಮದ್ಯವನ್ನು ಸೇವನೆ ಮಾಡಿ ಒದ್ದಾಡುತ್ತಿದ್ದು ಈತನನ್ನು ಕೆ.ಆರ್. ಪೇಟೆ  ಸಕರ್ಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ  108 ಅಂಬುಲೆನ್ಸ್ ನಲ್ಲಿ .ಆರ್. ಆಸ್ಪತ್ರೆ ಮೈಸೂರುರವರಲ್ಲಿಗೆ ದಾಖಲು ಮಾಡಿದ್ದು ಸದರಿ ವ್ಯಕ್ತಿ ಕೆ.ಆರ್. ಆಸ್ಪತ್ರೆ ಮೈಸೂರು ರವರಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 04-06-2013 ರಂದು ಬೆಳಿಗ್ಗೆ 08.30 ಗಂಟೆಯಲ್ಲಿ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾಬರಿ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 242/13 ಕಲಂ. 384 ಐ.ಪಿ.ಸಿ.

ದಿನಾಂಕ: 04-06-2013 ರಂದು ಪಿರ್ಯಾದಿ ಎಂ. ಕೆ. ರಾಮಕೃಷ್ಣ ಬಿನ್. ಕಾಳೇಗೌಡ, ಗರೀಬಿ ಸೈಟ್, ಜಿ.ದೇವಯ್ಯ ಬಡಾವಣೆ, ಮಾಯಣ್ಣನ ಕೊಪ್ಪಲು ಗ್ರಾಮ, ಕೊತ್ತತ್ತಿ ಹೋ|| ಮಂಡ್ಯ ತಾ| ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ನಾಲ್ಕು ಜನ ಅಪರಿಚಿತ ವ್ಯಕ್ತಿಗಳು ( ನಗದು 30000/- ರೂ ಹಾಗೂ ಒಂದು ಕಾರ್ಬನ್ ಸೆಟ್ ಮೊಬೈಲ್) ಬಂದು ಪಿರ್ಯಾದಿಯವರಿಗೆ ಕೈಯಿಂದ ಬಲ ಕಪಾಲಕ್ಕೆ ಒಬ್ಬ ಹೊಡೆದನ್ನು, ಮತ್ತೊಬ್ಬ ಚಾಕು ತೋರಿಸಿ ಎದುರಿಸಿದನು, ಉಳಿದವರು ಸಹ ನನಗೆ ಹೆದುರಿಸಿದರು ಹಣ ತೆಗೆದುಕೊಡು ಎಂದು ಕೇಳಿದರು  ಆಗ ನಾನು ಹೆದಿರಿಕೊಂಡು ನನ್ನ ಪ್ಯಾಂಟಿನ ಸೀಕ್ರೇಟ್ ಜೇಬಿನಲ್ಲಿದ್ದ 30000=00 ರೂಪಾಯಿ ನಗದು ಹಣ ಹಾಗೂ ನನ್ನ ಪ್ಯಾಂಟಿನ ಜೇಬಿನಲ್ಲಿದ್ದ ಒಂದು ಹಳೆಯ ಕಾರ್ಬನ್ ಸೆಟ್ ಮೊಬೈಲ್ನ್ನು ತೆಗೆದು ಕೊಟ್ಟೆನು. ಮೊಬೈಲ್ ನ ಬೆಲೆ 1000/- ರೂ.ಆಗುತ್ತೆ. ಮೊಬೈಲ್ ನಂ.8050553258 ಆಗಿರುತ್ತೆ. ಅಪರಿಚಿತ ವ್ಯಕ್ತಿಗಳು ಸುಮಾರು 23 ರಿಂದ 33 ವರ್ಷದವರಾಗಿದ್ದು ಪ್ಯಾಂಟು ಶರ್ಟ್ದ ಧರಿಸಿದ್ದು, ಕನ್ನಡವನ್ನು ಮಾತನಾಡುತ್ತಿದ್ದರು. ನನಗೆ ಎದುರಿಸಿ ಬೆದರಿಸಿ ಚಾಕು ತೋರಿಸಿ ಕೈಯಿಂದ ಕಪಾಲಕ್ಕೆ ಹೊಡೆದು ಹಣ ಮತ್ತು ಮೊಬೈಲ್  ಕಸಿದುಕೊಂಡು ಹೋದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 240/13 ಕಲಂ. 341-504-506-420 ಕೂಡ 34 ಐ.ಪಿ.ಸಿ.

ದಿನಾಂಕ: 04-06-2013 ರಂದು ಪಿರ್ಯಾದಿ ಚಿಕ್ಕಮಾದಯ್ಯ ಬಿನ್. ಮಾದಯ್ಯ. ಪೋಸ್ಟ್ ಆಫೀಸ್ ಬಳಿ, ಕಲ್ಲಹಳ್ಳಿ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ   1] ಚಂದ್ರು ಹಾಗು 2] ಭರತೇಶ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರುಗಳು ಫಿರ್ಯಾದಿಯ ನಾದಿನಿ ಅಲಮೇಲಮ್ಮ ಎಂಬುವರನ್ನು ಕರೆಯಿಸಿ ಇಬ್ಬರಿಗೂ ಬೆದರಿಸಿ ಅವಾಚ್ಯವಾಗಿ ಬಯ್ದು ಚಂದ್ರಶೇಖರ್ರವರು ಹಾಕಿರುವ ಚೆಕ್ ಬೌನ್ಸ್ ಕೇಸಿನ ಹಣವನ್ನು ಈ ಕೂಡಲೇ ನೀಡುವಂತೆಯೂ ತಪ್ಪಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಫಿರ್ಯಾದಿ ಮತ್ತು ಅಲಮೇಲಮ್ಮ ರವರಿಂದ ಎರಡು ಪ್ರೊನೋಟ್ ಗಳಿಗೆ ಬಲವಂತವಾಗಿ ಸಹಿ ಪಡೆದುಕೊಂಡು ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಅವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಬಡ್ಡಿ ವ್ಯವಹಾರ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. 306.ರೆ.ವಿ 149 ಐಪಿಸಿ ಜೊತೆಗೆ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ವಿಷಯದ ಅಧಿನಿಯಮ 2004 ಕಲಂ.4

ದಿನಾಂಕ: 04-06-2013 ರಂದು ಪಿರ್ಯಾದಿ ಸಿದ್ದೇಗೌಡ @ ರಾಜು ಬಿನ್. ಜವರಾಯಿಗೌಡ, 50 ವರ್ಷ, ಒಕ್ಕಲಿಗರು. ಕಂಟ್ರಾಕ್ಟರ್ ಕೆಲಸ, ನೆಲಮಾಕನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1]ಎಂ.ಸಿಮಾದಪ್ಪ, 2]ಚೀಟಿಉಮೇಶ 3] ಅವರ ಪತ್ನಿ 4]ಬಿಮಹಾದೇವು ಹಾಗು 5] ದಬ್ಬಳ್ಳಿ ಮಲ್ಲೇಗೌಡ ಗುತ್ತಿಗೆದಾರರು ಮತ್ತು ರಾಜಕಾರಣಿ ಇವರುಗಳು ಬಡ್ಡಿಗೆ ಸಾಲ ನೀಡಿ, ಚೆಕ್ಕುಗಳನ್ನು ಪಡೆದು ಸಾಲದ ಹಣಕ್ಕಿಂತ ಜಾಸ್ತಿ ಮೀರಿದ ಬಡ್ಡಿ ಪಡೆದು ಪಿರ್ಯಾದಿಯವರಿಗೆ ಹಿಂಸೆ ಕಿರುಕುಳ ನೀಡಿ ಅವರ ಸಾವಿಗೆ ಕಾರಣವಾಗಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment