ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-06-2013 ರಂದು ಒಟ್ಟು 26 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 5 ಮನುಷ್ಯ ಕಾಣೆಯಾದ ಪ್ರಕರಣಗಳು, 3 ಯು.ಡಿ.ಆರ್. ಪ್ರಕರಣಗಳು, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ಕಳವು ಪ್ರಕರಣ, 1 ರಸ್ತೆ ಅಪಘಾತ ಪ್ರಕರಣ, 1 ರಾಬರಿ ಪ್ರಕರಣ ಹಾಗು 13 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಮೋಟಾರ್ ವಾಹನ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 05-06-2013 ರಂದು ಪಿರ್ಯಾದಿ ಪ್ರಸನ್ನ, 21 ವರ್ಷ, ಅಮೃತಿ ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ರಶ್ಮಿ ಬಿ. 20 ವರ್ಷ, ಗೃಹಿಣಿ, ಅಮೃತಿ ಗ್ರಾಮ, ಮೇಲುಕೋಟೆ ಹೋಬಳಿ ರವರು ದಿನಾಂಕ: 31-05-13 ಬೆಳಿಗ್ಗೆ 11-00 ಗಂಟೆಯಲ್ಲಿ ಅಮೃತಿ ಗ್ರಾಮದ ಪಿರ್ಯಾದಿಯವರ ಮನೆಯಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 74/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 05-06-2013 ರಂದು ಪಿರ್ಯಾದಿ ಕೆ.ಸಿ.ಈರಯ್ಯ, ಎಂ. ಕಾಗೇಪುರ ಗ್ರಾಮ, ಕಿರುಗಾವಲು ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಇ.ದಿವ್ಯ ಶ್ರೀ, 17 ವರ್ಷ, ಪಿ.ಯು.ಸಿ ಓದಿರುತ್ತಾಳೆ. ಕನ್ನಡ ಮಾತನಾಡುತ್ತಾಳೆ ಇವಳು ದಿನಾಂಕ: 04-06-2013ರಂದು ಮಧ್ಯಾಹ್ನ 01-00 ಗಂಟೆಯಲ್ಲಿ ಕಾಣೆಯಾಗಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 82/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 05-06-2013 ರಂದು ಪಿರ್ಯಾದಿ ಸಿ.ವೇಲಂಣ್ಣಿ ನಂ: ಎಫ್: 45, 1ನೇ ಕ್ರಾಸ್, ಅಸಿಟೇಟ್ ಟೌನ್, ಮಂಡ್ಯ ತಾಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಮಗಳು ಫಿಲೋಮಿನ, 18.5 ವರ್ಷ, ಕನ್ನಡ ಹಾಗೂ ತಮಿಳು ಮಾತನಾಡುತ್ತಾಳೆ ಇವಳು ದಿನಾಂಕ: 04-06-2013 ರಿಂದ ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಹಲಗೂರು ಪೊಲೀಸ್ ಠಾಣೆ ಮೊ.ನಂ. 117/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 05-06-2013 ರಂದು ಪಿರ್ಯಾದಿ ವಸಂತ್ಕುಮಾರ್, ಹುಚ್ಚೇಗೌಡನದೊಡ್ಡಿ ಗ್ರಾಮ. ಮಳವಳ್ಳಿ ತಾ. ರವರು ನೀಡಿದ ದೂರು ಏನೆಂದರೆ ಗೌರಮ್ಮ, 40ವರ್ಷ, ಕೆ.ಶೆಟ್ಟಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ ರವರಿಗೆ ಬುದ್ದಿ ಭ್ರಮಣೆಯಾಗಿ ಊರೂರು ತಿರುಗುತ್ತಿದ್ದು ಕಂಡ ಕಂಡವರನ್ನು ಬೈಯುವುದು, ಹೊಡೆಯಲು ಹೋಗುವುದು ಮಾಡುತ್ತಿದ್ದಾರೆ ಅವರು ದಿನಾಂಕ: 17-4-2013 ರಂದು ಸಂಜೆ 4-30 ಗಂಟೆಗೆ ಹಲಗೂರು ಬಸ್ ನಿಲ್ದಾಣದಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಕೇಸು ದಾಖಲಿಸಲಾಗಿದೆ.
5. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 241/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ:05-06-2013ರಂದು ಪಿರ್ಯಾದಿ ರಶೀದಾ ಬೇಗಂ, ಅಧೀಕ್ಷಕರು, ಬಾಲಕಿಯರ ಬಾಲಮಂದಿರ ಕಛೇರಿ, 1ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 29-05-2013 ರಂದು 07-00 ಪಿಎಂ ನಲ್ಲಿ, ಬಾಲಕಿಯರ ಬಾಲಮಂದಿರ ಕಛೇರಿ, 1ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯ ಸಿಟಿಯಿಂದ ಮಂಜುಳ, 10ವರ್ಷ, ಬಾಲಕಿಯರ ಬಾಲಮಂದಿರ, ಸ್ವಂತ ಸ್ಥಳ ಹೊರದೊಡ್ಡಿ, ಬನ್ನಿಕುಪ್ಪೆ, ರಾಮನಗರ ಜಿಲ್ಲೆ ರವರು ಬಾಲಮಂದಿರದ ರಕ್ಷಕರ ಕಣ್ಣುತಪ್ಪಿಸಿ ಮುಖ್ಯದ್ವಾರದಿಂದ ಓಡಿಹೋಗಿರುತ್ತಾಳೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರೆ ಸ್ಥಳಗಳಲ್ಲಿ ಇದುವರೆಗೆ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಬಾಲಕಿ ಮಂಜುಳ ಈಕೆಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.
ದಿನಾಂಕ: 05-06-2013 ರಂದು ಪಿರ್ಯಾದಿ ರಮೇಶ, 32ವರ್ಷ, ಹೊನಗಹಳ್ಳಿ ಮಠ, ಮಂಡ್ಯ ತಾ: ರವರು ನೀಡಿದ ದೂರಿನ ವಿವರವೇನೆಂದರೆ ಕೆಂಪಮ್ಮ ಕೊಂ. ಚೌಡಯ್ಯ, 60ವರ್ಷ, ಹೊನಗಹಳ್ಳಿಮಠ ರವರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಪಕ್ಕ ಇರುವ ದನದ ಕೊಟ್ಟಿಗೆಗೆ ಹೋಗಿ ಕೊಟ್ಟಿಗೆಯ ತೀರಿಗೆ ಹಗ್ಗದಿಂದ ನೇಣುಹಾಕಿಕೊಂಡು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ ಚಿಕಿತ್ಸೆ ಫಲಕಾರಿಯಾಗದೆ ಮೈತಪಟ್ಟಿರುತ್ತಾಳೆ ಶವ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 05-06-2013 ರಂದು ಪಿರ್ಯಾದಿ ಚಂದ್ರಶೇಖರರೆಡ್ಡಿ ಬಿನ್. ಉಳ್ಳಗದ್ದೆ ಕ್ಯಾತಪ್ಪ ಎಂ. ಟಿ. ರಾವ್ ಸರ್ಕಲ್ ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ ರವರು ನೀಡಿದ ದೂರು ಏನೆಂದರೆ ದಿನಾಂಕ: 05-06-2013 ಮದ್ಯಾಹ್ನ 02-30 ಗಂಟೆಯಲ್ಲಿ ಶ್ರೀರಂಗಪಟ್ಟಣ ಟೌನ್ ನ, ಮುತ್ತುಮಾರಮ್ಮನ ದೇವಸ್ಥಾನದ ಹಿಂಭಾಗ ಒಬ್ಬ ಅಪರಿಚಿತ ಗಂಡಸು, ಸುಮಾರು 45-50 ವರ್ಷ ಇವನು ಕಾವೇರಿ ಹೊಳೆಯ ಸೇತುವೆಯ ಮೇಲೆ ಮದ್ಯ ಭಾಗದಲ್ಲಿ ಸೇತುವೆ ತುದಿಯಲ್ಲಿ ಕುಳಿತುಕೊಂಡು ಈ ರಸ್ತೆಯಲ್ಲಿ 4 ಚಕ್ರದ ಗಾಡಿ ಯಾರೂ ಬರಬೇಡಿ, ನನ್ನದು ರೋಡ್ ಅಂತ ಮಾತಾಡುತ್ತಿದ್ದ ಸೇತುವೆ ತುದಿಯಲ್ಲಿ ಕುಳಿತಿದ್ದವನು ಆಕಸ್ಮಿಕವಾಗಿ ಸೇತುವೆಯ ಮೇಲಿಂದ ಕೆಳಕ್ಕೆ ಬಿದ್ದು ಹೋಗಿ ನೀರನಲ್ಲಿ ಮುಳಗಿ ಮೃತಪಟ್ಟರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 05-06-2013 ರಂದು ಪಿರ್ಯಾದಿ ಮಹೇಶ ಬಿನ್. ಲೇಟ್. ಬಸವಯ್ಯ, ಅಣ್ಣೇಕೊಪ್ಪಲು ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಬಸವಯ್ಯ, ಅಣ್ಣೆಕೊಪ್ಪಲು ಗ್ರಾಮ ರವರಿಗೆ ದಿನಾಂಕ 01-06-2013 ರಂದು ಮದ್ಯಾಹ್ನ 3.00 ಗಂಟೆಯ ಸಮಯದಲ್ಲಿ ಪಿರ್ಯಾದಿಯವರ ಜಮೀನಿನ ಬಳಿ ಯಾವುದೋ ವಿಷ ಪೂರಿತ ಹಾವು ಕಡಿದು ಚಿಕಿತ್ಸೆ ಫಲಕಾರಿಯಾಗದೆ ಈದಿವಸ ಮದ್ಯಾಹ್ನ 01.30 ಗಂಟೆಯ ಸಮಯದಲ್ಲಿ ಮೃತಪಟ್ಟಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 504-506 ಕೂಡ 34 ಐಪಿಸಿ ಮತ್ತು 3ಕ್ಲಾಸ್ [1]-10 ಎಸ್.ಸಿ./ಎಸ್.ಟಿ ಆಕ್ಟ್ 1989.
ದಿನಾಂಕ: 05-06-2013 ರಂದು ಪಿರ್ಯಾದಿ ವೆಂಕಟೇಶ, 23ವರ್ಷ. ಪರಿಶಿಷ್ಟ ಜಾತಿ, ಗಾರೆಕೆಲಸ, ರಾಗಿಮುದ್ದನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಲೋಕೇಶ್, ಚಿಕ್ಕಬ್ಯಾಡರಹಳ್ಳಿ ಗ್ರಾಮ, ಪರಮೇಶ್ವರಯ್ಯ ರಾಗಿಮುದ್ದನಹಳ್ಳಿ ಗ್ರಾಮ ರವರು 15 ವರ್ಷಗಳಿಂದ ಕೇಬಲ್ ಹಾಕಿದ್ದು, ಪಿರ್ಯಾದಿಯವರು ತಿಂಬಳಿಗೆ 1000/- ಅಡ್ವನ್ಸ್ ಹಾಗು 100 ರೂಗಳನ್ನು ಮಾಸಿಕ ಚಾರ್ಜ್ ನ್ನು ಕೊಡುತ್ತಿರುತ್ತಾರೆ. ಆದರೆ ಸರಿಯಾಗಿ ಕೇಬಲ್ ಬಾರದ ಕಾರಣ ಲೋಕೇಶನಿಗೆ ತಿಳಿಸಲಾಗಿ ಆಂಪ್ಲಿಪ್ಲೇಯರ್ ಕೆಟ್ಟುಹೋಗಿರುತ್ತದೆಂದು ಹೇಳಿ ಸರಿಪಡಿಸುತ್ತೇನೆಂದು 2000/- ರೂ ಪಡೆದು, ಸರಿಮಾಡದ ಬಗ್ಗೆ ಕೇಳಲಾಗಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ನಿಷೇಧ ಪ್ರಕರಣ :
ಹಲಗೂರು ಪೊಲೀಸ್ ಠಾಣೆ ಮೊ.ನಂ. 116/13 ಕಲಂ. 504-506-498[ಎ] ಐ.ಪಿ.ಸಿ. ಮತ್ತು 3 & 4 ಡಿ.ಪಿ.ಕಾಯ್ದೆ.
ದಿನಾಂಕ: 05-06-2013 ರಂದು ಪಿರ್ಯಾದಿ ಪಾರ್ವತಮ್ಮ @ ಮೀನಾಕ್ಷಿ, 27ವರ್ಷ, ಅಕ್ಕಮ್ಮನಕೊಪ್ಪಲು, ಕಿರುಗಾವಲು ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅವರ ಗಂಡ 1]ನಂಜುಂಡಸ್ವಾಮಿ, ಹಾಗು 2]ನಾಗಮ್ಮ. 3.ಪರದಾಮಿಪುರ ಗ್ರಾಮದ ಮಹದೇವಪ್ಪ, 4] ಪದ್ಮ ರವರುಗಳು ಪಿರ್ಯಾದಿಯವರಿಗೆ ಮದುವೆಗೆ ಮುಂಚೆ ದುಡಿದಿರುವ ಹಣವನ್ನು ತರುವಂತೆ, ವರದಕ್ಷಿಣೆ ತರುವಂತೆ ಪಿರ್ಯಾದಿಯ ಗಂಡ ನಂಜುಂಡಸ್ವಾಮಿ, ಅತ್ತೆ ನಾಗಮ್ಮ ರವರು ಟಿ.ನರಸೀಪುರ ತಾಲ್ಲೂಕು ಪರದಾಮಿಪುರ ಗ್ರಾಮದ ಮಹದೇವಪ್ಪ ಮತ್ತು ಪದ್ಮ ಕೋಂ. ಮಹದೇವಪ್ಪರವರ ಕುಮ್ಮಕ್ಕಿನಿಂದ ಹೊಡೆಯುವುದು ಮತ್ತು ಸೀಮೆ ಎಣ್ಣೆಹಾಕಿ ಸುಡುತ್ತೇವೆಂದು ಬೆದರಿಕೆ ಹಾಕುವುದು ಮತ್ತು ಅವಾಚ್ಯಶಬ್ದಗಳಿಂದ ಬಾಯಿಗೆ ಬಂದಂತೆ ಬೈದು ಮನೆಯಲ್ಲಿ ಕೂಡಿ ಹಾಕಿ ಊಟ ಕೊಡದೆ ಚಿತ್ರಹಿಂಸೆ ಕಿರುಕುಳ ನೀಡುತಿದ್ದಾರೆಂದು ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 364/13 ಕಲಂ. 379 ಐ.ಪಿ.ಸಿ.
ದಿನಾಂಕ: 05-06-2013 ರಂದು ಪಿರ್ಯಾದಿ ಎಸ್ಎನ್ ಮುರುಗೇಶನ್, ಬ್ರಾಹ್ಮನರು, ಎಂಪೈರ್ ಅಚ್ಯುತ ಬಿಲ್ಡಿಂಗ್, ಕಾಮರಾಜರ್ ಸ್ಟ್ರೀಟ್, ಚೂಲಯಮೇಡು, ಚೆನೈ ಟೌನ್-94 ರವರು ದಿನಾಂಕ: 05-06-2013 ಸಂಜೆ 04-30 ಶ್ರೀರಂಗನಾಥ ಸ್ವಾಮಿ ದೇವಸ್ಥಾಸದ ಪಾರ್ಕಿಂಗ್ ಆವರಣದಲ್ಲಿ ಅವರ ಕಾರ್ ನ್ನು ನಿಲ್ಲಿಸಿದ್ದು ದೇವಸ್ಥಾನದ ಒಳಗಡೆ ಹೋಗಿ ವಾಪಸ್ಸು ಬರುವಷ್ಟರಲ್ಲೆ ಕಾರಿನ ಗ್ಲಾಸ್ ಹೊಡೆದು ಯಾರೋ ಕಳ್ಳರು ಒಂದು ಲ್ಯಾಪ್ ಟ್ಯಾಪ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ರೊ 25000/- ರೂ ಗಳಾಗಿರುತ್ತದೆ ಹುಡುಕಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 171/13 ಕಲಂ. 279-337-304 [ಎ] ಐ.ಪಿ.ಸಿ.
ದಿನಾಂಕ: 05-06-2013 ರಂದು ಪಿರ್ಯಾದಿ ಪ್ರವೀಣಕುಮಾರ, 26 ವರ್ಷ, ಕೆ.ಎ.-18-ಬಿ-1825 ಬೋಲೋರ್ ಜೀಪ್ ಚಾಲಕ, ಮರಬೈಲು ಗ್ರಾಮ, ಗೋಣಿಬೀಡು ಅಂಚೆ. ಮೂಡಗೆರೆ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-41-ಎ-1588 ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಚಾಲಕ, ಹೆಸರು ವಿಳಾಸ ಗೊತ್ತಿಲ್ಲ, ತಿಳಿಯಬೇಕಾಗಿದೆ ಇವನು ದಿನಾಂಕ: 05-06-2013 ರಂದು ರಾತ್ರಿ 06-15 ಗಂಟಯಲ್ಲಿ ಕಂಚಿನಕೊಟ್ಟೆ-ಬೈರಸಂದ್ರ ಮದ್ಯ ಎನ್ಹೆಚ್- 48 ರಸ್ತೆಯಲ್ಲಿ ಬೆಂಗಳೂರು-ಮಂಗಳೂರು ಕಡೆಗಾದಂತೆ ಹೋಗುತ್ತಿದ್ದ ಕಾರಿನ ಚಾಲಕ, ಕಾರನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಕಾರನ್ನು ಚಾಲನೆ ಮಾಡಿಕೊಂಡು ಕಾರು ಡಿವೈಡರ್ ಮೇಲೆ ಹತ್ತಿ ಬಂದು ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ನನ್ನ ಬೊಲೆರೋ ಜೀಪ್ ವಾಹನಕ್ಕೆ ಢಿಕ್ಕಿಪಡಿಸಿ ನನ್ನ ಬೊಲೆರೋ ವಾಹನ ಜಖಂಗೊಂಡು ಚಾಲನೆ ಮಾಡುತ್ತಿದ್ದ ನನಗೆ ಬಲಮೊಣ ಸಂದು, ಗದ್ದದ ಹತ್ತಿರ ಎಡಮಂಡಿಯ ಒಳಭಾಗ ಎಡ ಕಾಲಿನ ಮಂಡಿ ಕೆಳಭಾಗ ಪೆಟ್ಟಾಗಿ ಎದೆ ಮತ್ತು ಬಲ ಮಂಡಿ ನೋವಾಗಿರುತ್ತೆ. ಕಾರು ಪೂರ್ಣ ಮುಂಭಾಗ ಜಖಂಗೊಂಡು ಕಾರಿನಲ್ಲಿದ್ದ 4 ಜನರ ಪೈಕಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದು4 ಜನರ ಪೈಕಿ ಕಾರಿನ ಚಾಲಕ ಯಾರೆಂಬುದು ಗೊತ್ತಿರುವುದಿಲ್ಲ. ಮೃತರಾಗಿರುವ ಇಬ್ಬರ ಹೆಸರು ವಿಳಾಸ ಸಹ ಗೊತ್ತಿರುವುದಿಲ್ಲ. ನನ್ನ ಬೊಲೆರೋ ಜೀಪಿಗೆ ಢಿಕ್ಕಿ ಪಡಿಸಿರುವ ಕೆಎ-41-ಎ-1588 ರ ಕಾರು ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 202/13 ಕಲಂ. 392. ಐ.ಪಿ.ಸಿ.
ದಿನಾಂಕ: 05-06-2013 ರಂದು ಪಿರ್ಯಾದಿ ಅಶ್ವಿನಿ ಕೋಂ. ಸ್ವಾಮಿ, ನೋದೆಕೊಪ್ಪಲು ಗ್ರಾಮ, ಪಾಂಡವಪುರ ತಾ. ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 04-06-2013 18-00 ಗಂಟೆಯಲ್ಲಿ, ದೊಡ್ಡಬ್ಯಾಡರಹಳ್ಳಿ, ನೊದೆಕೊಪ್ಪಲು, ಪಾಂಡವಪುರ ಟೌನ್ ನ ಬಳಿ ನನ್ನ ಹಿಂದಿನಿಂದ ಒಬ್ಬ ಆಸಾಮಿ ಮೊಟಾರ್ ಬೈಕಿನಲ್ಲಿ ಬಂದು ನನ್ನ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯದ ಸರಕ್ಕೆ ಕೈ ಹಾಕಿ ಕಿತ್ತುಕೊಂಡನು, ಆಗ ನಾನು ಭಯದಿಂದ ಕೆಳಗೆ ಕುಳಿತುಕೊಂಡಾಗ ಆ ಆಸಾಮಿ ವಾಪಸ್ ತಿರುಗಿಸಿಕೊಂಡು ಬಂದು ನನ್ನ ಕೈಯಲ್ಲಿದ್ದ ಉಂಗುರವನ್ನು ಕಿತ್ತುಕೊಳ್ಳಲು ಬಂದಾಗ ನಾನು ಅದನ್ನು ಬಿಚ್ಚಿ ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದಂತೆ, ನಾನು ಬೈಕ್ ನಂಬರ್ ನೋಡಲಾಗಿ ನನಗೆ 952 ಎಂದು ಮಾತ್ರ ಕಂಡಿದ್ದು, ಉಳಿಕೆ ಸೀರಿಸ್ ಕಂಡು ಬಂದಿರುವುದಿಲ್ಲ, ಆಸಾಮಿಯು ಸುಮಾರು 26 ವರ್ಷದವನಂತೆ ಕಂಡು ಬರುತ್ತಿದ್ದುನನ್ನ ಕತ್ತಿನಲ್ಲಿದ್ದ ಮಾಂಗಲ್ಯದ ಸರದಲ್ಲಿ ಒಂದು ತಾಳಿ, ಎರಡು ಗುಂಡು ಎಲ್ಲಾ ಸೇರಿ ಒಟ್ಟು 37 ಗ್ರಾಂ. ನದಾಗಿದ್ದು ಒಟ್ಟು ಬೆಲೆ 90 ಸಾವಿರ ಬೆಲೆ ಬಾಳುವಂತದ್ದಾಗಿರುತ್ತೆ, ನನ್ನ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಹೋಗಿರುವ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment