ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು, 5 ವಾಹನ ಕಳವು ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ನಿಷೇಧ ಕಾಯ್ದೆ ಅಧಿನಿಯಮ ಕಾಯಿದೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ, 2 ಕಳ್ಳತನ ಪ್ರಕರಣಗಳು, 1 ರಸ್ತೆ ಪ್ರಕರಣ, 1 ವಂಚನೆ ಪ್ರಕರಣ ಹಾಗು 9 ಇತರೆ ಐ.ಪಿ.ಸಿ./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 97/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 06-06-2013 ರಂದು ಪಿರ್ಯಾದಿ ಸುಮಿತ್ರ ಕೋಂ ಪುಟ್ಟಮಾದೇಗೌಡ, 40 ವರ್ಷ, ನಲ್ಲಹಳ್ಳಿ ಗ್ರಾಮ, ಮೇಲುಕೋಟೆ ರವರು ನೀಡಿದ ದೂರು ಏನೆಂದರೆ ನನ್ನ ಗಂಡ ಪುಟ್ಟಮಾದೇಗೌಡ ಬಿನ್ ಮಾದೇಗೌಡ, 45 ವರ್ಷ, ನಲ್ಲಹಳ್ಳಿ ಗ್ರಾಮ, ಮೇಲುಕೋಟೆ ರವರು ದಿನಾಂಕ:04-06-2013 ರಂದು ಬೆಳಿಗ್ಗೆ 05-00 ಗಂಟೆಯಲ್ಲಿ ನಿತ್ಯಕರ್ಮ ಮುಗಿಸಲು ಮನೆಯಿಂದ ಹೊರಗಡೆ ಹೋದವರು ವಾಪಸ್ಸು ಮನೆಗೆ ಬರಲಿಲ್ಲ. ಊರಿನಲ್ಲಿ ಎಲ್ಲಾ ಕಡೆ ಹುಡುಕಿದರು ಸಿಗಲಿಲ್ಲ.. ಕಾಣೆಯಾಗಿರುವ ನನ್ನ ಗಂಡ ಪುಟ್ಟಮಾದೇಗೌಡನನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.
2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 06-06-2013 ರಂದು ಪಿರ್ಯಾದಿ ಮಹಾದೇವಪ್ಪ ಬಿನ್. ಲೇಟ್ ಮಹಾದೇವಪ್ಪ ಪುಟ್ಟನಪುರ ಗ್ರಾಮ, ಚನಕೋಡಿ ಹೋಬಳಿ ಚಾಮರಾಜ ನಗರ ಜಿಲ್ಲೆ ಮತ್ತು ತಾಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಏನೆಂದರೆ ಪಿರ್ಯಾದಿಯವರ ನನ್ನ ಮಗ ಪುಷ್ಪೇಂದ್ರ ಬಿನ್. ಮಹಾದೇವಪ್ಪ ವಾಸ ಪಂಪ್ ಹೌಸ್ಸರ್ಕಲ್ ರವರು ದಿನಾಂಕ 01-06-2013 ರಂದು ಪಂಪ್ ಹೌಸ್ ಸರ್ಕಲ್ ಬಳಿ ಇರುವ ಸಂಯುಕ್ತ ಹೋಟೆಲ್ನ ಪಕ್ಕದಲ್ಲಿರುವ ಬಸವೇಗೌಡರ ಮನೆಯಲ್ಲಿ ವಾಸವಿದ್ದನು ದಿನಾಂಕಃ- 01-06-2013 ರಂದು 11-00 ಯಲ್ಲಿ ನಾನು ಮೈಸೂರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುತ್ತಾನೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣಗಳು :
1. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 149/13 ಕಲಂ. 379 ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ಜೋಸೆಫ್ -ಕೀಲಾರ ಗ್ರಾಮ, ಮಂಡ್ಯ ಬೆಳಗೊಳ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಬೆಳಗೊಳ ಗ್ರಾಮದ ನಂದೀಶ್ ರವರ ಮನೆಯ ಕಾಂಪೌಂಡ್ ನಲ್ಲಿ ದಿನಾಂಕಃ- 06-06-13 ರಂದು ಪಿರ್ಯಾದಿ ರವರ ಬಾಬ್ತು ಬೈಕ್ ನಂಬರ್ ಕೆ,ಇ,-05-ಇ,ಎಕ್ಸ್ 6646 ರ ಬಜಾಜ್ ಸಿಟಿ-100 ಡಿ.ಎಲ್.ಎಕ್ಸ್. ಬೈಕ್ ಬೆಲೆ ಸುಮಾರು 25-000-/-ರೂ ನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಪತ್ತೆಮಾಡಿ ಕೊಡಿ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗ ಕೊಟ್ಟ ಪ್ರಕರಣ ದಾಖಲಿಸಲಾಗಿದೆ.
2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 173/13 ಕಲಂ. 379 ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ಎಂ.ನವೀನ್ಕುಮಾರ್, ರಾಮೇಗೌಡ, ಬೆೆಳ್ಳೂರು ಕ್ರಾಸ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 05-05-2013 ರಂದು ರಾತ್ರಿ ವೇಳೆಯಲ್ಲಿ.& ಫಿರ್ಯಾದಿ ವಾಸವಾಗಿರುವ ಬೆಳ್ಳೂರು ಕ್ರಾಸ್, ರಾಮೇಗೌಡರ ಬಿಲ್ಡಿಂಗ್ನ ಕೆಳಭಾಗದಲ್ಲಿರುವ ಮನೆಯಲ್ಲಿ ಬೆಳಿಗ್ಗೆ ಎದ್ದು ನೊಡಲಾಗಿ ನನ್ನ ಮೋಟಾರ್ ಸೈಕಲ್ ಕಾಣೆಯಾಗಿತ್ತು. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಈ ಬಗ್ಗೆ ಅಕ್ಕಪಕ್ಕದವರನ್ನು ಹಾಗು ಸ್ನೇಹಿತರನ್ನು ವಿಚಾರ ಮಾಡಿ, ನಂತರ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂಬ ಪಿರ್ಯಾದಿನ ಮೇರೆಗೆ ಕೇಸು ನೊಂದಾಯಿಸಲಾಗಿದೆ.
3. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 179/13 ಕಲಂ. 379 ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ಪುನಿತ್ ಕುಮಾರ್ ಬಿನ್ ಮಂಚಯ್ಯ, ಹೊಸಬೂದನೂರು ಗ್ರಾಮ, ಮಂಡ್ಯ ತಾ. ರವರು ಠಾಣೆಗೆ ನೀಡಿದ ದೂರಿನ ವಿವರವೇನೆಂದರೆ 26-05-13ರಂದು ಮದ್ಯಾಹ್ನ 12-00 ರಿಂದ 1-00 ಗಂಟೆ ನಡುವೆ ಸಿ.ಎ.ಕೆರೆ ಗ್ರಾಮದ ಶ್ರೀ. ಕಾಲ ಬೈರವೇಶ್ವರ ದೇವಸ್ಥಾನ ಹತ್ತಿರ ಪಿಯರ್ಾದಿ ತನ್ನ ಬಾಬ್ತು ಹಿರೋಹೊಂಡಾ ಸ್ಪೆಂಡರ್ ಪ್ಲಸ್. ಮೋಟಾರು ಬೈಕ್ ನಂಬರ್ ಕೆ.ಎ.09/ವಿ.3006ನ್ನು ನಿಲ್ಲಿಸಿ ಬೀಗ ಹಾಕಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ ವಾಪಸ್ ಬಂದು ನೋಡಲಾಗಿ ಯಾರೋ ಕಳ್ಳವು ಮೋಟಾರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಇತ್ಯಾದಿ ದೂರು.
4. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 180/13 ಕಲಂ. 379 ಐ.ಪಿ.ಸಿ.
ದಿನಾಂಕ: 06-06-2013 ರಂದು ಎಂ.ಡಿ.ಸತೀಶ್ ಬಿನ್ ಮರಿಸಿದ್ದೇಗೌಡ ದೇವರಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ. ಮದ್ದೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 31-05-13 ರಂದು ಮದ್ಯಾಹ್ನ 02-30 ಗಂಟೆಯಲ್ಲಿ ಕೆ.ಎಂ.ದೊಡ್ಡಿ ಟೌನ್ ಮಾರಿಗುಡಿ ಬೀದಿಯಲ್ಲಿ ಈ ಕೇಸಿನ ಪಿಯರ್ಾದಿ ತನ್ನ ಬಾಬ್ತು ಹಿರೊ ಹೊಂಡಾ ಸ್ಪಲೆಂಡರ್ ಪ್ಲಸ್. ಮೋಟಾರು ಬೈಕ್ ನಂಬರ್ ಕೆ.ಎ.11/ಯು.-4360 ನ್ನು ನಿಲ್ಲಿಸಿ ಬೀಗ ಹಾಕಿ ಅಂಗಡಿಗೆ ಸಾಮಾನು ತರಲು ಹೋಗಿ ವಾಪಸ್ ಬಂದು ನೋಡಲಾಗಿ ಯಾರೋ ಕಳ್ಳವು ಮೋಟಾರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಇತ್ಯಾದಿ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
5. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 171/13 ಕಲಂ. 41 ಕ್ಲಾಸ್. (ಡಿ) 102 ಸಿ.ಆರ್.ಪಿ.ಸಿ. ಕೂಡ 379 ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ರಂಗಸ್ವಾಮಿ, ಪಿಎಸ್ಐ ಟೌನ್ ಠಾಣೆ, ಕೆ.ಆರ್. ಪೇಟೆ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಜಬಿ ಬಿನ್. ಹನೀಫ್, ಮುಸ್ಲಿಂ ಬ್ಲಾಕ್, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06.06.2013 ರಂದು ಬೆಳಿಗ್ಗೆ 08.45 ಗಂಟೆಯಲ್ಲಿ, ಟಿ.ಬಿ. ಸರ್ಕಲ್ ಕೆ.ಆರ್. ಪೇಟೆ ತಾ. ಈ ಆಸಾಮಿಯು ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ನಂ ಕೆಎ-11-ಆರ್-7862 ನ್ನು ಅತಿ ವೇಗವಾಗಿ ಓಡಿಸಿಕೊಂಡು ಬರುತ್ತಿದ್ದು ಸದರಿಯವನನ್ನು ತಡೆದು ನಿಲ್ಲಿಸಿದಾಗ ಆತ ಮೋಟಾರ್ ಬೈಕ್ ಅನ್ನು ಬಿಟ್ಟು ಓಡಿ ಹೋಗುತ್ತಿದ್ದು ಸಿಬ್ಬಂದಿಗಳ ಸಹಾಯದಿಂದ ಆತನನ್ನು ಹಿಡಿದುಕೊಂಡು ವಿಚಾರ ಮಾಡಲಾಗಿ ಸದರಿ ಬೈಕ್ ಅನ್ನು ಕಳ್ಳತನ ಮಾಡಿದ್ದು ಅದರ ದಾಖಲಾತಿಗಳು ನನ್ನ ಬಳಿ ಇಲ್ಲವೆಂದು ತಿಳಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ನಿಷೇಧ ಕಾಯ್ದೆ ಅಧಿನಿಯಮ ಕಾಯಿದೆ ಪ್ರಕರಣ :
ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. 498(ಎ) 324-504 ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ಮಂಜುಳ ಕೋಂ ಮಹದೇವ, 35 ವರ್ಷ, ಉಪ್ಪಾರ ಜನಾಂಗ, ಚಾಪುರದೊಡ್ಡಿ ಗ್ರಾಮ, ಕಸಬಾ ಹೋಬಳಿ, ಮದ್ದೂರು ತಾ: ರವರು ನೀಡಿದ ದೂರು ಏನೆಂದರೆ ಆರೋಪಿ ಅವರ ಗಂಡ ಮಹದೇವ @ ಗುಂಡ ಬಿನ್ ಮಾದಯ್ಯ, ವಾಪುರದೊಡ್ಡಿ ಗ್ರಾಮ, ಕಸಬಾ ಹೋಬಳಿ, ಮದ್ದೂರು ತಾ: ರವರು 12 ವರ್ಷದ ಹಿಂದೆ ಪಿರ್ಯಾದಿಯವರನ್ನು ಮದುವೆ ಆಗಿದ್ದು ಈಗ್ಗೆ 1 ವರ್ಷದಿಂದ ಕುಡಿದು ಬಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು ದಿನಾಂಕ: 04-06-2013 ರಂದು 04-00 ಗಂಟೆ ಸಮಯದಲ್ಲಿ ಆರೋಪಿ ಗಲಾಟೆ ಮಾಡಿ ಬೈದು ಇಟ್ಟಿಗೆಯಿಂದ ಪಿರ್ಯಾದಿ ತಲೆಗೆ ಹೊಡೆದು ನೋವುಂಟು ಮಾಡಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 21/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ಎನ್. ಮೋಹನ್ ಬಿನ್ ಎಂ. ನಾರಾಯಣ, ಭೀಮನಕೆರೆ ಗ್ರಾಮ, ಮದ್ದೂರು ತಾಃ ರವರು ನೀಡಿದ ದೂರು ಏನೆಂದರೆ ಪಿಯರ್ಾದಿಯವರ ತಾಯಿ ಗಂಗಲಕ್ಷ್ಮಮ್ಮ ಕೋಂ ಎಂ. ನಾರಾಯಣ, 56 ವರ್ಷ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಭೀಮನಕೆರೆ, ರವರು ಹೊಟ್ಟೆ ನೋವು ಬರುತ್ತಿದ್ದು ದಿನಾಂಕ: 02-06-13 ರಿಂದ ದಿನಾಂಕ: 06-06-2013ರ ದಿನಗಳಲ್ಲಿ ಅಂಕೆಗೌಡನದೊಡ್ಡಿ ಗ್ರಾಮ ಮದ್ದೂರುನಿಂದ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದು, ಇವರು ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 181/13 ಕಲಂ. 457-380-511 ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ಹೆಚ್.ಎಸ್. ಪ್ರಸಾದ ಬಿನ್. ಶಿವರುದ್ರಸ್ವಾಮಿ, ಹಲಗೂರು ರಸ್ತೆ, ಕೆ.ಎಂ.ದೊಡ್ಡಿ, ಮದ್ದೂರು ತಾ.ರವರು ನೀಡಿದ ಪಿರ್ಯಾದಿನ ಸಾರಾಂಶವೇನಂದರೆ ದಿನಾಂಕ: 05-06-2013 ರ ರಾತ್ರಿವೇಳೆಯಲ್ಲಿ ಕೆ.ಎಂ.ದೊಡ್ಡಿ ಟೌನ್ ಹಲಗೂರು ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಪಿರ್ಯಾದಿಯವರ ಅಂಗಡಿಯ ಹಿಂಭಾಗ ಯಾರೋ ಕಳ್ಳರು ಗೋಡೆಯನ್ನು ಹೊಡೆದಿರುವುದು ಕಂಡು ಬಂದಿರುತ್ತೆ. ನಂತರ ಅಂಗಡಿಯ ಪಕ್ಕದ ಶ್ರೀ.ಚೌಡೇಶ್ವರಿ ಕಾಫಿ ವಕ್ರ್ಸ ಮತ್ತು ಸ್ಟೇಷನರಿಯ ಬಾಗಿಲ ಬೀಗವನ್ನು ಮುರಿದಿರುವುದು ಕಂಡು ಬಂದಿದೆ. ಆದರೆ ಎರಡು ಅಂಗಡಿಗಳಲ್ಲಿ ಯಾವುದೇ ಕಳ್ಳತನ ಆಗಿರುವುದಿಲ್ಲ, ಈ ಬಗ್ಗೆ ಕ್ರಮ ಜರುಗಿಸಿ ಎಂದು ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 172/13 ಕಲಂ. 454-457-380 ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ಹೆಚ್.ಆರ್ ರಾಜೇಶ್ ಬಿನ್. ರಾಮಚಂದ್ರ, ಬಸವೇಶ್ವರ ನಗರ, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ತಾಯಿ ರವರು ರಾಜಮ್ಮ, ಕೆ.ಆರ್.ಪೇಟೆ ಟೌನ್ ನ, ಬಸವೇಶ್ವರ ನಗರ, ರವರು ಅವರ ಸಂಬಂದಿಕರ ಮನೆ ಮೈಸೂರಿಗೆ ಒಂದು ವಾರದ ಹಿಂದೆ ಹೋಗಿರುತ್ತಾರೆ ದಿನಾಂಕ: 04-06-2013 ರ ಹಿಂದಿನ ದಿನಗಳಲ್ಲಿ ರಾತ್ರಿ ಯಾರೋ ವ್ಯಕ್ತಿಗಳು ಪಿರ್ಯಾದಿ ತಾಯಿ ವಾಸವಾಗಿದ್ದ ಮನೆಯ ಡೋರ್ಲಾಕ್ನ್ನು ಹೊಡೆದು ಮನೆಯಲ್ಲಿ ಇಟ್ಟಿದ್ದ 70 ಗ್ರಾಂ ಚಿನ್ನದ ನೆಕ್ಲೆಸ್ 16 ಗ್ರಾಂನ ಒಂದು ಜೊತೆ ಓಲೆ ಮತ್ತು 2 ಗ್ರಾಂ. ಉಂಗುರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಒಟ್ಟು ಮೌಲ್ಯ 2.20.000/- ರೂಗಳಾಗಿರುತ್ತೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 164/13 ಕಲಂ. 279-337-304(ಎ) ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ರತನ್ ಬಿನ್. ರಾಮಕೃಷ್ಣೇಗೌಡ, ಬಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 06-06-13 ರಂದು ಮದ್ಯಾಹ್ನ ಸುಮಾರು 01-50 ಗಂಟೆಯಲ್ಲಿ ಕೆ.ಆರ್.ಪೇಟೆ-ಬೂಕನಕೆರೆ ರಸ್ತೆಯ, ಮೋದೂರು ಅತ್ತಿಗುಪ್ಪೆ ರಾಮಪ್ಪನವರ ಕಬ್ಬಿನ ಗದ್ದೆಯ ಬಳಿ ಆರೋಪಿತ ಧನೇಂದ್ರ @ ಧನೇಂದ್ರ ಕುಮಾರ ಬಿನ್ ಮಂಜುನಾಥ ಎಂ.ಪಿ. 21 ವರ್ಷ, ಕೆಎ-54-3272 ಪ್ಯಾಸೆಂಜರ್ ಆಟೋ ಡ್ರೈವರ್ ಮಾಚಗೋನಹಳ್ಳಿ ಗ್ರಾಮ ರವರು ಅವರ ಪ್ಯಾಸೆಂಜರ್ ಆಟೋದಲ್ಲಿ ಕೆ.ಆರ್.ಪೇಟೆಯಿಂದ ಬೂಕನಕೆರೆಗೆ ಹೋಗುತ್ತಿದ್ದು ಮೋದೂರು ಬಿಟ್ಟು ಮುಂದೆ ಅತ್ತಿಗುಪ್ಪೆ ರಾಮಪ್ಪನವರ ಜಮೀನಿನ ಬಳಿ ಹೋಗುತ್ತಿದ್ದಾಗ ಒಂದು ಎಮ್ಮೆಯು ಬಂದ ತಕ್ಷಣ ಚಾಲಕ ಆಟೋ ರಿಕ್ಷಾವನ್ನು ಅಪಘಾತ- ವುಂಟಾಗುವುದನ್ನು ತಪ್ಪಿಸಲು ಎಡಕ್ಕೆ ತಿರುಗಿಸಿದಾಗ ಆಟೋ ಕಬ್ಬಿನ ಗದ್ದೆಗೆ ಬಿದ್ದು ಪಿರ್ಯಾದಿ ಮತ್ತು ಆರೋಪಿತ ಆಟೋ ಡ್ರೈವರ್ಗೆ ಪೆಟ್ಟಾಗಿದ್ದು ಡ್ರೈವರ್ನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮೃತಪಟ್ಟಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 243/13 ಕಲಂ. 420 ಐ.ಪಿ.ಸಿ.
ದಿನಾಂಕ: 06-06-2013 ರಂದು ಪಿರ್ಯಾದಿ ಪಿ.ಎ.ತಂಗಮ್ಮ ಬಿನ್. ಲೇಟ್. ಪಿ.ಸಿ.ಅಪ್ಪು, 62 ವರ್ಷ, ಕೆ.ಕಾರುಣ್ಯ ನಿಲಯ, 1ನೇ ಕ್ರಾಸ್, ನೆಹರು ನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 06-06-13 ರಂದು 12-30 ಪಿಎಂ. ನಲ್ಲಿ, ಮಂಡ್ಯ ಸಿಟಿ, ವಿ.ವಿ.ರಸ್ತೆಯಲ್ಲಿರುವ ಎಸ್.ಬಿ.ಎಂ. ಬ್ಯಾಂಕಿಗೆ ಹಣ ಜಮಾ ಮಾಡಿ ಚೆಕ್ ತೆಗೆದುಕೊಳ್ಳಲು ಹೋಗಿದ್ದು ಬ್ಯಾಂಕಿನಲ್ಲಿ ಚಲನ್ ಬರೆದು 47,000-00 ರೂ.ಗಳ ಸಮೇತ ಬ್ಯಾಂಕಿನ 2ನೇ ಕೌಂಟರ್ನಲ್ಲಿ ಕ್ಯೂನಲ್ಲಿ ಬಂದು ಕ್ಯಾಷಿಯರ್ಗೆ ಕೊಡುವ ಸಂದರ್ಭದಲ್ಲಿ ಫಿರ್ಯಾದಿಯವರು ಹಣವನ್ನು ಕೌಂಟರ್ ನಲ್ಲಿ, ಇಟ್ಟಿದ್ದು ಅದೇ ವೇಳೆಗೆ ಮುಂಭಾಗ ನಿಂತಿದ್ದ ಸುಮಾರು 25 ವರ್ಷದ ಅಪರಿಚಿತ ಹುಡುಗ ಸದರಿ ಹಣವನ್ನು ಕಟ್ಟುವುದಾಗಿ ಹೇಳಿ ತೆಗೆದುಕೊಂಡು ಹಣವನ್ನು ಕಟ್ಟಿದ್ದೇನೆ, ನೀವು ಚಲನ್ನ ಕೌಂಟರ್ ಫೈಲ್ ಅನ್ನು ಪಡೆದುಕೊಳ್ಳಿ ಎಂಬುದಾಗಿ ತಿಳಿಸಿ ಬ್ಯಾಂಕಿನಿಂದ ಹೊರಗೆ ಹೋದನು. ಆಗ ಫಿರ್ಯಾದಿಯು ಕೂಡಲೇ ಕ್ಯಾಷಿಯರ್ಗೆ 47,000/- ರೂ. ಹಣ ಜಮಾ ಮಾಡಿರುವ ಬಗ್ಗೆ ಚಲನ್ ಕೊಡುವಂತೆ ಕೇಳಲಾಗಿ ನಿಮ್ಮ ಹಣ ಬ್ಯಾಂಕಿಗೆ ಜಮಾ ಆಗಿರುವುದಿಲ್ಲ ಅಂತ ತಿಳಿಸಿರುತ್ತಾರೆ. ಸದರಿ ಅಪರಿಚಿತ ಹುಡುಗನು ಹಣವನ್ನು ಕಟ್ಟುವುದಾಗಿ ಹೇಳಿ ನಂಬಿಸಿ ಹಣ ಕಟ್ಟುವಂತೆ ನಟನೆ ಮಾಡಿ ಹಣವನ್ನು ಕಟ್ಟದೆ ಮೋಸ ಮಾಡಿ ಹಣವನ್ನು ತೆಗೆದುಕೊಂಡು ಹೋಗಿರುತ್ತಾನೆ ತನಗೆ ಮೋಸ ಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment