ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು, 3 ಯು.ಡಿ.ಆರ್. ಪ್ರಕರಣಗಳು, 1 ಕರ್ನಾಟಕ ಗೋವು ಸಂರಕ್ಷಣಾ ಅಧಿನಿಯಮ ಕಾಯ್ದೆ/ಪ್ರಾಣಿಹಿಂಸೆ ಸಂರಕ್ಷಣಾ ಕಾಯ್ಚೆ ಅಧಿನಿಯಮ 1960 ಪ್ರಕರಣ, 2 ವಾಹನ ಕಳವು ಪ್ರಕರಣಗಳು, 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ನಿಷೇಧ ಕಾಯ್ದೆ ಅಧಿನಿಯಮ ಕಾಯಿದೆ ಪ್ರಕರಣ, 2 ರಸ್ತೆ ಅಪಘಾತ ಪ್ರಕರಣಗಳು, 1 ಕೊಲೆ ಪ್ರಕರಣ ಹಾಗು 8 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್/ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 82/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 07-06-2013 ರಂದು ಪಿರ್ಯಾದಿ ಪುಟ್ಟಸ್ವಾಮಯ್ಯ ಬಿನ್. ನಂಜಯ್ಯ, ರಾಮಚಂದ್ರ ಅಗ್ರಹಾರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 03-06-2013 ರಂದು ಸಂಜೆ 04:45 ಗಂಟೆಯಲ್ಲಿ ಅವರ ಮಗಳು ಅನಿತ, 18 ವರ್ಷ ರವರು ಕೆರೆಯಲ್ಲಿ ಮೇಯುತ್ತಿದ್ದ ದನಗಳನ್ನು ಹಿಡಿದುಕೊಂಡು ಬರುತ್ತೇನೆಂದು ಹೇಳಿ ಹೋದವಳು ಮನೆಗೆ ವಾಪಸ್ ಬರದೆ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 151/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 07-06-2013 ರಂದು ಪಿರ್ಯಾದಿ ಸರಸ್ವತಿ ಕೋಂ. ಚಿನ್ನಸ್ವಾಮಿ, ಪೈಲ್, ಕೆ.ಆರ್.ಸಾಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ03-06-2013 ರಂದು ನೆಲ್ಲೂರ್ ಪೈಲ್, ಕೆ,ಆರ್,ಸಾಗರ ದಿಂದ ಸಂಗೀತಾ, ಎತ್ತರ 5 ಅಡಿ, ಎಣ್ಣೆಗೆಂಪು ಬಣ್ಣ ರವರು ಸರ್ಟಿಫಿಕೇಟ್ ತರುತ್ತೇನೆಂದು ಮೈಸೂರಿಗೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ ನಾವು ನೆಂಟರಿಷ್ಟರ ಹಾಗೂ ಸ್ನೇಹಿತರ ಮನೆಗಳಲ್ಲಿ ಇದುವರೆಗೂ ಹುಡುಕಾಡಿದೆವು ಪತ್ತೆಯಾಗಿರುವುದಿಲ್ಲ ಮಗಳನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿಆರ್.ಪಿ.ಸಿ.
ದಿನಾಂಕ: 07-06-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್ ರಾಮಯ್ಯ. ಬಿಂಡೇನಹಳ್ಳಿ ಗ್ರಾಮ, ದೇವಲಾಪುರ ಹೋ, ನಾಗಮಂಗಲ ತಾ. ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: ದಿಃ05-06-2013 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಕೌಡ್ಲೆ ಅಕ್ಷರ ಶಾಲೆ ಬಳಿ, ಶಿಂಷಾ ನದಿಯಲ್ಲಿ ನನ್ನ ಮಗಳು ರೂಪ @ ಸಾಕಮ್ಮ ಮತ್ತು ಮಗು ಪವನ್, ಜಿನ್ನಾಗರ ಗ್ರಾಮ, ಅಮೃತೂರು ಹೋ, ಕುಣಿಗಲ್ ತಾ. ರವರು ನೀರು ಕುಡಿಯಲು ಮಗುವನ್ನು ಎತ್ತಿಕೊಂಡು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುತ್ತಾರೆ. ಆದ್ದರಿಂದ ತಾವುಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ .ವರದಿ ದಾಖಲಿಸಲಾಗಿದೆ.
2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿಆರ್.ಪಿ.ಸಿ.
ದಿನಾಂಕ: 07-06-2013 ರಂದು ಪಿರ್ಯಾದಿ ಬೋರಯ್ಯ. ಎಸ್.ಕೆ. ಕೊನ್ನಾಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಕೊನ್ನಾಪುರ ಗ್ರಾಮದ ಕೆರೆಯಲ್ಲಿ ಈಜುಬಾರದೆ ಅಂದಾನಿಗೌಡ ನೀರಿನಲ್ಲಿ ಮುಳುಗುತ್ತಿದ್ದವನನ್ನು ನೋಡಿ ಶಿವಕುಮಾರ ಅವನನ್ನು ರಕ್ಷಿಸಲು ಹೋಗಿ .ಆಕಸ್ಮಿಕವಾಗಿ ನೀರಿನಲ್ಲಿ ಶಿವಕುಮಾರ ಎಂಬುವವನು ಸಹ ನೀರಿನಲ್ಲಿ ಮುಳುಗಿ ಇಬ್ಬರೂ ಮೃತಪಟ್ಟಿತ್ತಾರೆ, ಶವಗಳನ್ನು ಕೆರೆಯಿಂದ ಮೇಲೆತ್ತಿ ದಡದಲ್ಲಿ ಮಲಗಿಸಿರುತ್ತೆ ಆದ್ದರಿಂದ ಶವದ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 174 (1) (4) ಸಿಆರ್.ಪಿ.ಸಿ.
ದಿನಾಂಕ: 07-06-2013 ರಂದು ಪಿರ್ಯಾದಿ ಗುರುಮಲ್ಲಮ್ಮ, ಬಸವೇಶ್ವರ ನಗರ, ಮೈಸೂರು ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎಂ.ಮಲ್ಲಣ್ಣ, ಮೈಸೂರು, ನಂ..2324 ರವರನ್ನು ದಿನಾಂಕ: 20-05-2013 ರಂದು ಯಾರೋ ಕೊಲೆ ಮಾಡಿರಬಹುದೆಂದು ಶಂಕಿಸಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಗೋವುಸಂರಕ್ಷಣಾ ಅಧಿನಿಯಮ ಕಾಯ್ದೆ/ಪ್ರಾಣಿಹಿಂಸೆ ಸಂರಕ್ಷಣಾ ಕಾಯ್ಚೆ ಅಧಿನಿಯಮ 1960 ಪ್ರಕರಣ :
ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 99/13 ಕಲಂ. 8, 9, 11 ಕನರ್ಾಟಕ ಗೋವು ಸಂರಕ್ಷಣಾ ಅಧಿನಿಯಮ ಕಾಯ್ದೆ 1964 ಮತ್ತು ಕಲಂ. 11(1) ಪ್ರಾಣಿಹಿಂಸೆ ಸಂರಕ್ಷಣಾ ಕಾಯ್ಚೆ ಅಧಿನಿಯಮ 1960.
ದಿನಾಂಕ: 07-06-2013 ರಂದು ಪಿರ್ಯಾದಿ ವಿ.ಸಿ.ಅಶೋಕ, ಪಿ.ಎಸ್.ಐ, ಮೇಲುಕೋಟೆ ಪೊಲೀಸ್ ಠಾಣೆ, ಮೇಲುಕೋಟೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಮಧ್ಯಾಹ್ನ 03-00 ಗಂಟೆಯಲ್ಲಿ, ಪಾಂಡವಪುರ ತಾ. ಗೌರಿಕಟ್ಟೆ ಸರ್ಕಲ್ ಹತ್ತಿರ, ಕಣಿವೆಕ್ರಾಸ್ ಬಳಿ ಆರೋಪಿಗಳಾದ 1] ಮಂಜೇಗೌಡ ಕಳ್ಳಿಕೊಪ್ಪಲು 2] ಮಂಜು, ಗುಣಿಶಾತೇನಹಳ್ಳಿ ಹಾಗು 3] ಕುಮಾರ ಬಿನ್. ಚಿಕ್ಕೇಗೌಡ, ಮಾರಗೌಡನಹಳ್ಳಿ ಗ್ರಾಮ, ಕಿಕ್ಕೇರಿ ಹೋ. ರವರುಗಳು ಕೇರಳದ ಖಾಸಾಯಿಖಾನೆಗೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಹಸುಗಳು ಮತ್ತು ಹಸುವಿನ ಕರುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆಂದು ಕೆಎ-13, ಎ-1674 ವಾಹನ್ನು ತಡೆದು ಆರೋಪಿ ಮತ್ತು ಜಾನುವಾರು ಹಾಗೂ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು ಸ್ವಯಂ ವರದಿ ತಯಾರಿಸಿ ಕ್ರಮ ಕೈಗೊಂಡಿರುತ್ತದೆ.
ವಾಹನ ಕಳವು ಪ್ರಕರಣಗಳು :
1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 243/13 ಕಲಂ. 379 ಐ.ಪಿ.ಸಿ.
ದಿನಾಂಕ: 07-06-2013 ರಂದು ಪಿರ್ಯಾದಿ ಅಬ್ದುಲ್ ಹಮೀದ್ ಬಿನ್. ಲೇಟ್. ಅಬ್ದುಲ್ ಕರೀಮ್, 46 ವರ್ಷ, 2ನೇ ಕ್ರಾಸ್, ಅಜಾದ್ನಗರ ರವರು ನೀಡಿದ ದೂರು ಏನೆಂದರೆ 03-06-2013 ರಂದು ರಾತ್ರಿವೇಳೆ ಮನೆಯ ಕಾಂಪೌಂಡ್ ಅಜಾದ್ನಗರ, ದಲ್ಲಿ ಅವರ ಮೋಟಾರ್ ಸೈಕಲನ್ನು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 29,000-00 ರೂ.ಗಳಾಗಿರುತ್ತದೆ. ಅದನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 244/13 ಕಲಂ. 379 ಐ.ಪಿ.ಸಿ.
ದಿನಾಂಕ: 07-06-2013 ರಂದು ಪಿರ್ಯಾದಿ ಫಯಾಜ್ಖಾನ್ ಬಿನ್. ಅಕ್ಬರ್ಖಾನ್, ಅಜಾದ್ ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 02-06-2013 ರಂದು ರಾತ್ರಿವೇಳೆ, ಅಜಾದ್ ನಗರ, ಮಂಡ್ಯ ಸಿಟಿಯಲ್ಲಿ ಅವರ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 30,000/- ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ನಿಷೇಧ ಕಾಯ್ದೆ ಅಧಿನಿಯಮ ಕಾಯಿದೆ ಪ್ರಕರಣ :
1. ಹಲಗೂರು ಪೊಲೀಸ್ ಠಾಣೆ ಮೊ.ನಂ. 118/13 ಕಲಂ. 143-147-323-324-504-506-498 (ಎ) ಕೂಡ 149 ಐಪಿಸಿ ಮತ್ತು 3 & 4 ಡಿ.ಪಿ.ಕಾಯ್ದೆ.
ದಿನಾಂಕ: 07-06-2013 ರಂದು ಪಿರ್ಯಾದಿ ಕೆ.ಲಿಂಗಯ್ಯ. ಎಂ.ವಿಶ್ವೇಶ್ವರಯ್ಯ ಬಡಾವಣೆ, ಕೆಂಗೇರಿ ಉಪ ನಗರ, ಬೆಂಗಳೂರು-560060 ರವರು ನೀಡಿದ ದೂರು ಏನೆಂದರೆ ಆರೋಪಿ ಎಸ್.ಪುಟ್ಟಯ್ಯ ಬಿನ್. ಸಿದ್ದಬಸವಯ್ಯ, ಹಾಗು ಇತರೆ 7 ಜನರು ಎಲ್ಲರೂ ಡಿ.ಕೆ.ಹಳ್ಳಿ & ಬೆಂಗಳೂರು ವಾಸಿಗಳು ಪಿರ್ಯಾದಿಯವರ ಮಗಳಿಗೆ ಹತ್ತು ಲಕ್ಷ ರೂಪಾಯಿ ತೆಗೆದುಕೊಂಡ ಬಾ ಹೋಗು ನಿನ್ನನ್ನು ನಾವೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೇವೆ ಮತ್ತೆ ನೀನು ಬಾಲ ಬಿಚ್ಚಕ್ಕಿಲ್ಲಾ, ಪೊಲೀಸ್ ಕೇಸ್ ಅಂತಾ ಹೊದರೆ ಪ್ರಾಣ ಬೆದರಿಕೆ ಹಾಕಿ ಹಾಗೂ ಇತ್ಯಾದಿಯಾಗಿ ಪಿರ್ಯಾದಿ ಮಗಳಿಗೆ ತನ್ನ ಗಂಡ ಹಾಗೂ ಇತರರು ದೈಹಿಕವಾಗಿ ಹಾಗೂ ಮಾನಸಿಕವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ನೀಡಿದ ಪಿರ್ಯಾದಿನ ಮೇರೆಗೆ ಕೇಸು ದಾಖಲಿಸಲಾಗಿದೆ.
2. ಹಲಗೂರು ಪೊಲೀಸ್ ಠಾಣೆ ಮೊ.ನಂ. 504-506-498[ಎ] ಐ.ಪಿ.ಸಿ. ಮತ್ತು 3 & 4 ಡಿ.ಪಿ.ಕಾಯ್ದೆ.
ದಿನಾಂಕ: 07-06-2013 ರಂದು ಪಿರ್ಯಾದಿ ಹೆಚ್.ಎಸ್.ಲಕ್ಷ್ಮೀ, ಹುಸ್ಕೂರು, ಗಂಡನ ಮನೆ-ಹಾಡ್ಲಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1]ಸಿದ್ದರಾಜು, 2] ಶಿವಲಿಂಗ 3]ಜಯಮ್ಮ ಎಲ್ಲರೂ ಹಾಡ್ಲಿ ಗ್ರಾಮ ರವರುಗಳು ಪಿರ್ಯಾದಿಯವರಿಗೆ ವರದಕ್ಷಿಣೆ ತೆಗೆದು ಕೊಂಡು ಬಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ನನ್ನ ಮಾಂಗಲ್ಯ ಸರವನ್ನು ಕಿತ್ತುಕೊಂಡು ನಾನು ಮದುವೆಯಾಗಿ ಎರಡು ವರ್ಷ ಕಳೆದ ನಂತರ ನನಗೆ ನಿರಂತರವಾಗಿ ನನ್ನ ಗಂಡ ನನ್ನ ಮೈದ ಮತ್ತು ನಮ್ಮ ಅತ್ತೆ ಜಯಮ್ಮ ದೈಹಿಕವಾಗಿ ಹಾಗೂ ಮಾನಸಿಕವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ.
ದಿನಾಂಕ: 07-06-2013 ರಂದು ಪಿರ್ಯಾದಿ ಬಿ.ಎಸ್ ಮಹೇಂದ್ರ, 2ನೇ ಕ್ರಾಸ್, ಮದ್ದೂರು ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-11-ವೈ-0852 ಮೋಟಾರ್ ಸೈಕಲ್ ಸವಾರ ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ ಇವರು ದಿನಾಂಕ: 06-06-2013 ರಂದು ಕಿರಣ್ ಪ್ಯಾಲೇಸ್ -ಮೈಸೂರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ತಮ್ಮ ಬಾಬ್ತು ಮೋಟಾರ್ ಸೈಕಲ್ ಅನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಲಕ್ಷ್ಮಮ್ಮ ರವರಿಗೆ ಡಿಕ್ಕಿ ಹೊಡೆಸಿದರ ಪರಿಣಾಮ ಲಕ್ಷ್ಮಮ್ಮ ರವರಿಗೆ ತಲೆಯ ಹಿಂಬಾಗಕ್ಕೆ ಹಾಗೂ ಇತರೇ ಕಡೆ ಪೆಟ್ಟಾಗಿರುವ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.
ದಿನಾಂಕ: 07-06-2013 ರಂದು ಪಿರ್ಯಾದಿ ತಮ್ಮೇಗೌಡ ಬಿನ್. ಲೇಟ್. ಸಿಪ್ಪೇಗೌಡ, ಬೆಟ್ಟಹಳ್ಳಿ ಗ್ರಾಮ, ದುದ್ದ ಹೋಬಳಿ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ಕೆಎ-09 ಟಿ-2590 ರ ಟ್ರ್ಯಾಕ್ಟರ್ ಚಾಲಕ, ಹೆಸರು ವಿಳಾಸ ಗೊತ್ತಿಲ್ಲ ಇವರು ಕೆರಗೋಡು-ದ್ಯಾಪಸಂದ್ರ ರಸ್ತೆಯಲ್ಲಿ ಅವರ ಬಾಬ್ತು ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್ ಸೈಕಲ್ಗೆ ಡಿಕ್ಕಿ ಮಾಡಿದ್ದರಿಂದ ಈ ಸಾವು ಸಂಭವಿಸಿರುತ್ತದೆ. ಅಪಘಾತ ಉಂಟು ಮಾಡಿರುವ ಟ್ರ್ಯಾಕ್ಟರ್ ಚಾಲಕನನ್ನು ಪತ್ತೆ ಮಾಡಿ, ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 167/13 ಕಲಂ. 279-337-304(ಎ) ಐ.ಪಿ.ಸಿ.
ದಿನಾಂಕ: 07-06-2013 ರಂದು ಪಿರ್ಯಾದಿ ಸವಿತಾ ಬಿನ್. ಲೇಟ್. ಕಾಳಯ್ಯ ನಾಡಬೋಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-06-2013 ರಂದು ನಾಡಬೋಗನಹಳ್ಳಿ ಗ್ರಾಮದ ಮಂಜುನಾಥ ಬಿನ್ ಕರಿಯಪ್ಪ ರವರ ಮನೆಯ ಬಳಿ ಆರೋಪಿ ಏಂ-54-2212 ಗೂಡ್ಸ್ ಆಟೋ ಚಾಲಕ, ಹೆಸರು ವಿಳಾಸ ತಿಳಿಯಬೇಕು ಇವರು ಮನೆಯ ಬಳಿ ಇರುವಾಗ ಊರಿನವರು ಯಾರೋ ಓಡಿ ಬಂದು ಕರಿಯಪ್ಪನವರ ಮಗ ಮಂಜುನಾಥ ರವರ ಮನೆಯ ಬಳಿ ಗೂಡ್ಸ್ ಆಟೋ ಮಗುಚಿಕೊಂಡಿದೆ ಹೇಳಿದ್ದು ಹೋಗಿ ನೋಡಲಾಗಿ ರಸ್ತೆಯ ಬದಿಯಲ್ಲಿ ಪಿರ್ಯಾದಿ ತಾಯಿಗೆ ಎಡ ಕೆನ್ನೆಯ ಬಳಿ ಗಾಯವಾಗಿರುವುದು ಮೂಗಿನಲ್ಲಿ ರಕ್ತ ಬಂದು ಅವರು ಮೃತಪಟ್ಟಿರುತ್ತಾರೆ ಆಟೋ ಚಾಲಕ ಓಡಿಹೋಗಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 204/13 ಕಲಂ. 302 ಐಪಿಸಿ
ದಿನಾಂಕ: 07-06-2013 ರಂದು ಪಿರ್ಯಾದಿ ಕೆ. ದೇವರಾಜು ಬಿನ್ ಲೇಟ್. ಕರಿಯಾಚಾರಿ, ಮರಗೆಲಸ, ಕಟ್ಟೇರಿ ಹೊಸೂರು ಗ್ರಾಮ, ಚಿನಕುರಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06-06-2013 ರಂದು ರಾತ್ರಿ ವೇಳೆಯಲ್ಲಿ, ಸಿ.ಎನ್. ವೀರೇಂದ್ರ ರವರ ಜಮೀನಿನ ಬಳಿ ನನ್ನ ತಮ್ಮ ರಾಜುವನ್ನು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ಕೊಲೆ ಮಾಡಿರುವಂತೆ ಕಂಡುಬಂದಿರುತ್ತದೆ. ತಾವುಗಳು ನನ್ನ ತಮ್ಮನ ಶವದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.
No comments:
Post a Comment