Moving text
PRESS NOTE MADDUR PS DATED 28-11-2013
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 28-11-2013
ಪತ್ರಿಕಾ ಪ್ರಕಟಣೆ
ಸರಗಳ್ಳರ ಬಂಧನ
ಮದ್ದೂರು ಮಳವಳ್ಳಿ ಕಡೆಗಳಲ್ಲಿ ಬೈಕ್ಗಳಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳನ್ನು ಮದ್ದೂರು ಪೊಲೀಸರುದಸ್ತಗಿರಿ ಮಾಡಿರುತ್ತಾರೆ ಬಂಧಿತರಿಂದ ಸುಮಾರು 5 ಲಕ್ಷ ಬೆಲೆ ಬಾಳುವ ಚಿನ್ನದ ವಡಡೆಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ 4 ಬೈಕ್ಗಳನ್ನು ವಶಪಡಿಸಿ ಕೊಂಡಿರುತ್ತಾರೆ. ಬಂಧಿತರೆಲ್ಲರೂ ರಾಮನಗರ ತಾಲ್ಲೋಕು ಬಿಡದಿ ಹೋಬಳಿ ಭೈರಮಂಗಲ ಮತ್ತು ಸುತ್ತಮುತ್ತಲಿನ ಗ್ರಾಮದವಾಗಿರುತ್ತಾರೆ.
ಆರೋಪಿಗಳು ಬೈಕ್ಗಳಲ್ಲಿ ಬಂದು ಒಂಟಿ ಮಹಿಳೆಯರು ತಿರುಗಾಡುವ ಸ್ಥಳದಲ್ಲಿ ಹೂಂಚು ಹಾಕಿ ಹೊರಟು ಅವರಿಂದ ಚಿನ್ನದಸರಗಳನ್ನು ಕಳ್ಳತನ ಮಾಡುತ್ತಿದ್ದರು
ಬಂಧಿತರ ವಿವರ
1] ಭೈರ @ ಸೂರಿ ಬಿನ್ ಮುನಿಸಿದ್ದಯ್ಯ, 27 ವರ್ಷ, ಗಂಗಾಮತಸ್ಥರು, ಏಲೆಕ್ಟ್ರಿಕಲ್ ಕೆಲಸ, ವಾಸ ಸ್ವಂತ ಊರು ಬನ್ನಗಿರಿ ಗ್ರಾಮ, ಭೈರಮಂಗಲ ಪೋಸ್ಟ್, ಬಿಡದಿ ಹೋಬಳಿ ರಾಮನಗರ ತಾ ಮತ್ತು ಜಿಲ್ಲೆ.
2] ಶ್ರೀಧರ್ @ ಹಲ್ಲುಕರೆ ಬಿನ್ ನಾಗಣ್ಣ, 22 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ ಮೇರವೇಗೌಡನದೊಡ್ಡಿ ಭೈರಮಂಗಲ ಪೋಸ್ಟ್, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
3] ಶಿವಲಿಂಗಯ್ಯ @ ಅಯ್ಯಪ್ಪ ಬಿನ್ ಶಿವಣ್ಣ 2 ವರ್ಷ, ಒಕ್ಕಲಿಗರು, ವ್ಯವಸಾಯ, ಪೇಟಿಂಗ್ ಕೆಲಸ, ವಾಸ ಮೇರವೇಗೌಡನದೊಡ್ಡಿಭೈರಮಂಗಲ ಪೋಸ್ಟ್, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
4] ಮಂಜು ಬಿನ್ ವೆಂಕಟಗಿರಿಯಪ್ಪ, 24 ವರ್ಷ, ಗಂಗಮತಸ್ಥರು, ವ್ಯವಸಾಯ, ವಾಸ ಭೈರಮಂಗಲ ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
5] ಮಾದೇಶ ಬಿನ್ ನಂಜುಂಡಪ್ಪ 25 ವರ್ಷ, ಗಂಗಮತಸ್ಥರು, ವ್ಯವಸಾಯ, ವಾಸ ಭೈರಮಂಗಲ ಗ್ರಾಮ, ಬಿಡದಿ ಹೋಬಳಿ, ರಾಮನಗರತಾ ಮತ್ತು ಜಿಲ್ಲೆ.
6] ಶಿವು @ ಜೋಗುರು ಶಿವು ಬಿನ್ ಲೇಟ್ ಗಂಗಾಧರ್ 23 ವರ್ಷ, ಪ/ಜಾತಿ, ಕೂಲಿ ಕೆಲಸ, ವಾಸ ಭೈರಮಂಗಲ ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
7] ನವೀನ್ @ ಪಟಾಕಿ ಬಿನ್ ಲೇಟ್ ಕೃಷ್ಣಪ್ಪ, 21 ವರ್ಷ, ಬೋವಿ ಜನಾಂಗ, ವ್ಯವಸಾಯ, ವಾಸ ರಾಮನಹಳ್ಳಿ ಗ್ರಾಮ, ಉರುಗಪುರಪೋಸ್ಟ್, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
8] ಮಾಧವ ಬಿನ್ ಲೇಟ್ ವರದರಾಜು 23 ವರ್ಷ, ಒಕ್ಕಲಿಗರು, ಕ್ಯಾಡಿ ಬಾಯ್ ಕೆಲಸ, ವಾಸ # 35 ಮಾರುತಿ ನಗರ, ಮಂಚನಾಯ್ಕನಹಳ್ಳಿ ಪೋಸ್ಟ್, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿಲಾಗಿದೆ.
ಮದ್ದೂರು ಸಿಪಿಐ ಶ್ರೀ ಎಂ.ಎಂ. ಯೋಗೇಂದ್ರನಾಥ ಪಿಎಸ್ಐ ಕೆ.ಎನ್. ಚಂದ್ರಶೇಖರ್. ಪಿಎಸ್ಐ ಶ್ರೀ ಎನ್.ವಿ. ಮಹೇಶ್ , ಎಎಸ್ಐ ಶ್ರೀನಿವಾಸ ಸಿಬ್ಬಂದಿಯವರಾದ ವಿ. ನಟರಾಜು, ಪ್ರೇಮ್ಕುಮಾರ, ಜಗಲಿಸಿದ್ದಯ್ಯ, ಕುಮಾರಸ್ವಾಮಿ ಗೋಪಾಲ್,ಚಿಕ್ಕಮಲ್ಲು ದೇವರಾಜು ರವರುಗಳು ಆರೋಪಿಗಳನ್ನು ಬಂದಿಸಿ ಮಾಲು ಪತ್ತೆ ಮಾಡಲು ಯಶಸ್ವಿಯಾಗಿರುತ್ತಾರೆ. ಇವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
PRESS NOTE MANDYA EAST PS DATE 28-11-2013
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 28-11-2013
ಪತ್ರಿಕಾ ಪ್ರಕಟಣೆ
ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರಿಂದ ಒಬ್ಬ ದ್ವಿಚಕ್ರ ವಾಹನ ಕಳ್ಳನ ಬಂಧನ. ಮಂಡ್ಯ ನಗರ, ಬನ್ನೂರು ಟೌನ್. ಮಳವಳ್ಳಿ ಟೌನ್, ಕೆ.ಎಂ.ದೊಡ್ಡಿ ಮತ್ತಿತರೆ ಕಡೆಗಳಲ್ಲಿ ಕಳವು ಮಾಡಿದ್ದ ಸುಮಾರು 5,34,000-00 ರೂ. ಬೆಲೆಬಾಳುವ 25 ಟಿವಿಎಸ್ ಎಕ್ಸ್.ಎಲ್.ಸೂಪರ್ ಮೊಪೆಡ್ ದ್ವಿಚಕ್ರ ವಾಹನಗಳ ವಶ.
ಮಂಡ್ಯ ನಗರ ವೃತ್ತದ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದಿನಾಂಕ: 26-11-2013 ರಂದು ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿ ಪೊಲೀಸ್ ವಶಕ್ಕೆ ಪಡೆದು ಅವನನ್ನು ವಿಚಾರಣೆಗೊಳಪಡಿಸಿ ಅವನಿಂದ ಮಂಡ್ಯ ನಗರ, ಬನ್ನೂರು ಟೌನ್. ಮಳವಳ್ಳಿ ಟೌನ್, ಕೆ.ಎಂ.ದೊಡ್ಡಿ ಮತ್ತಿತರೆ ಕಡೆಗಳಲ್ಲಿ ಕಳವು ಮಾಡಿದ 25 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಯ ಹೆಸರು ಮತ್ತು ವಿಳಾಸ
1. ಮಹದೇವ @ ಮರಿ ಸ್ವಾಮಿ @ ಮರ್ಕಿ @ ಎಡಚ ಬಿನ್ ಲೇಟ್ ಸಿದ್ದಯ್ಯ, 47 ವರ್ಷ, ಸಿವಿಲ್ ಬಸ್ ಕ್ಲೀನರ್ ಕೆಲಸ, ಬಿ.ಜಿ. ಪುರ ಗ್ರಾಮ, ಮಳವಳ್ಳಿ ತಾಲ್ಲೂಕು, ಹಾಲಿವಾಸ ಕೇರಾಫ್ ಕೆಂಪಯ್ಯ, ಬೈರಾಪುರ ಗ್ರಾಮ, ತಿರುಮಕೂಡಲು ಅಂಚೆ, ಕಸಬಾ ಹೋ|| ಟಿ.ನರಸೀಪುರ ತಾ||
ಈ ಕೇಸಿನ ವಿಚಾರಣೆ ಕಾಲದಲ್ಲಿ ಮಂಡ್ಯ ನಗರ, ಮಳವಳ್ಳಿ ಟೌನ್, ಕೆ.ಎಂ.ದೊಡ್ಡಿ, ಹಾಗೂ ಬನ್ನೂರ್ ಟೌನ್ ಮತ್ತಿತರ ಕಡೆಗಳ ಬ್ಯಾಂಕುಗಳ ಹತ್ತಿರ, ತಾಲ್ಲೂಕು ಆಫೀಸ್, ದೇವಸ್ಥಾನಗಳ ಹತ್ತಿರ, ನರ್ಸಿಂಗ್ ಹೋಂ ಮುಂದೆ, ಹಾಗೂ ಮತ್ತಿತರೆ ಕಡೆಗಳಲ್ಲಿ ದ್ವಿಚಕ್ರ ವಾಹನಗಳಾದ ಟಿವಿಎಸ್ ಎಕ್ಸ್.ಎಲ್.ಸೂಪರ್ ಮೊಪೆಡ್ಗಳನ್ನು ಕಳವು ಮಾಡಿಕೊಂಡು ಬಂದು ಇವುಗಳನ್ನು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಕಿರುಗಾವಲು ಹೋಬಳಿ, ಅಣಸಾಲೆ, ಕುರುಬನಪುರ, ರಾಮನಾಥಮೋಳೆ ಈ ಕಡೆಗಳಿಗೆ ಅಲ್ಲಿಯ ಗ್ರಾಮಸ್ಥರಿಗೆ ಮಾರಾಟ ಮಾಡಿದ್ದ ಹಾಗೂ ಆರೋಪಿಯು ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದ 1 ಟಿ.ವಿ.ಎಸ್. ಎಕ್ಸ್.ಎಲ್. ಸೂಪರ್ ಮೊಪೆಡ್ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 25 ಟಿವಿಎಸ್ ಎಕ್ಸ್.ಎಲ್.ಸೂಪರ್ ಮೊಪೆಡ್ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಯು ನಕಲಿ ಕೀಗಳನ್ನು ಬಳಸಿ ಡೈರೆಕ್ಟ್ ಮಾಡಿಕೊಂಡು ಮೊಪೇಡ್ಗಳನ್ನು ಕಳವು ಮಾಡಿ ಮಾರಾಟ ಮಾಡಿರುವುದಾಗಿದೆ.
ಆರೋಪಿಯಿಂದ ವಶಪಡಿಸಿಕೊಂಡಿರುವ 25 ಟಿವಿಎಸ್ ಎಕ್ಸ್.ಎಲ್.ಸೂಪರ್ ಮೊಪೆಡ್ ದ್ವಿಚಕ್ರ ವಾಹನಗಳಪೈಕಿ 14 ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಿದ್ದು, ಉಳಿಕೆ 11 ಈ ಕೆಳಕಂಡ ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಬೇಕಿದ್ದು ವಾಹನಗಳ ವಿವರ ಈ ಕೆಳಕಂಡಂತಿರುತ್ತದೆ.
SL.
NO
|
VEHICLE NO.
|
ENGIN NO.
|
MAKES
|
COLOUR
|
RATE
|
|
1.
|
KA-11 J 3025
|
P1906F132852
|
P1906M132538
|
TVS XL POWER
|
GREEN
|
25,000
|
2. 2
|
KA-11 H 9968
|
P1807F037869
|
P1807M037816
|
TVS XL POWER
|
GREEN
|
15,000
|
3. 3
|
KA-09 U 4217
|
P19409120814
|
P1904M120243
|
TVS HEVY DUTY XL
SUPER
|
GREEN
|
23,000
|
4.
|
MD621AD162B07877
|
OD1B61617296
|
TVS XL SUPER MOPED
|
GREEN
|
20,000
|
|
5.
|
KA-11 7826
|
MD621BD1072H37665
|
OD1H71174251
|
TVS HEAVY DUTY
XL SUPER
|
GREEN
|
23,000
|
6.
|
KA-01 Q 3013
|
MD21AD177N52519
|
OD1N71250376
|
TVS XL SUPER MOPED
|
GREEN
|
22,000
|
7.
|
P1011fF367935
|
P1011M364082
|
TVS XL SUPER MOPED
|
GREEN
|
23,000
|
|
8.
|
MD621AD1341E76544
|
OD1E41143836
|
TVS XL SUPER MOPED
|
BLACK
|
18,000
|
|
9.
|
KA-11 J 8001
|
P1207F601860
|
P1207M616657
|
TVS XL SUPER MOPED
|
GREEN
|
15,000
|
10.
|
KA-09 ED 3544
|
MD621AD1341F971
|
OD1F41172288
|
TVS XL SUPER MOPED
|
BLACK
|
15,000
|
11.
|
KA-51 Q 7071
|
MD621BD1872F76031
|
OD1F71078980
|
TVS HEAVY DUTY
XL SUPER
|
GREEN
|
23,000
|
S R PATNA PRESS NOTE DTD : 26-11-2013
-: ಪತ್ರಿಕಾ ಪ್ರಕಟಣೆ :-
ದಿನಾಂಕ. 25/11/2013 ರಂದು ಶ್ರೀರಂಗಪಟ್ಟಣ ಉಪ-ವಿಭಾಗದ ಡಿ.ಎಸ್.ಪಿ. ರವರಿಗೆ ಶ್ರೀರಂಗಪಟ್ಟಣ ಟೌನ್ ಬಿ.ಎಂ ರಸ್ತೆಯಲ್ಲಿರುವ ಸಚಿನ್ ಹೋಟೆಲ್ನ ರೂಂ ಒಂದರಲ್ಲಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆಸಾಮಿಯಾದ ಶಿವರಾಮು ಎಂಬುವನು ಕೆಲವು ಆಸಾಮಿಗಳ ಜೊತೆ ಸೇರಿಕೊಂಡು ಅಪಾರ ಹಣವನ್ನು ಇಟ್ಟುಕೊಂಡು ಒಂದು ಲಕ್ಷಕ್ಕೆ ಎರಡು ಲಕ್ಷ ನಂತೆ ದ್ವಿಗುಣ ಗೊಳಿಸಿ, ಖೋಟಾನೋಟುಗಳನ್ನು ವಿಲೇವಾರಿ ಮಾಡಿ, ವಂಚನೆ ಮಾಡಲು ಸೇರಿದ್ದಾರೆಂದು ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ಪಂಚಾಯ್ತುದಾರರೊಂದಿಗೆ ದಾಳಿ ಮಾಡಿ ನೋಡಲಾಗಿ ಹೋಟೆಲ್ ರೂಮಿನಲ್ಲಿ ಐದು ಜನ ಆಸಾಮಿಗಳು ಇದ್ದು, 25 ಲಕ್ಷ ರೂ ನಗದು ಹಣ, ಹಣ ಎಣಿಸುವ ಯಂತ್ರ, ಖೋಟಾನೋಟನ್ನು ಪತ್ತೆ ಮಾಡುವ ಯಂತ್ರಗಳು ಕಂಡು ಬಂದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅಲ್ಲದೇ ಸದರಿ ಆಸಾಮಿಗಳು ಹೋಟೆಲ್ಗೆ ಬರಲು ಉಪಯೋಗಿಸಿದ ಒಂದು ಮಾರುತಿ ಎಸ್ಟೀಮ್ ಕಾರು ಮತ್ತು ಒಂದು ಸ್ಯಾಂಟ್ರೋ ಕಾರುಗಳನ್ನು ಮತ್ತು 7 ಮೊಬೈಲ್ ಪೋನ್ಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿರುತ್ತೆ.
ಆರೋಪಿಗಳ ಬಳಿ 25 ಲಕ್ಷ ರೂ ನಗದು ಹಣ, ಹಣ ಎಣಿಸುವ ಯಂತ್ರ, ಖೋಟಾನೋಟು ಪತ್ತೆ ಮಾಡುವ ಯಂತ್ರ ಮತ್ತು ಕಾರುಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲವೆಂದು ತನಿಖೆಯಿಂದ ಕಂಡುಬಂದಿದ್ದು, ಆರೋಪಿಗಳು ಯಾವುದೋ ಅಪರಾಧದಿಂದ ಪಡೆದ ಹಣವನ್ನು ತಂದು ಖೋಟಾನೋಟುಗಳೊಂದಿಗೆ ದ್ವಿಗುಣ ಪಡಿಸಿಕೊಳ್ಳುವ ವ್ಯವಹಾರದಲ್ಲಿ ಭಾಗಿಯಾಗಲು ಬಂದಿದ್ದ ಬಗ್ಗೆ ತಿಳಿದು ಬಂದಿದ್ದರಿಂದ ಆರೋಪಿಗಳನ್ನು ಹಾಗೂ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಮೊ.ನಂ. 651/13 ಕಲಂ. 41 ಕ್ಲಾಸ್ [ಡಿ] ರೆ:ವಿ 102 ಸಿಆರ್ಪಿಸಿ ಕಲಂ. 379-489[ಎ]-420 ಜೊತೆಗೆ 511 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಆರೋಪಿಗಳ ಪೈಕಿ ಎಂ.ಬಿ.ಅರುಣ್ ಕುಮಾರ್ ಎಂಬುವವನ ಬಳಿ ಒಂದು ಗುಂಡು ತುಂಬಿದ್ದ ರಿವಾಲ್ವರ್ ಸಹ ಪತ್ತೆಯಾಗಿದ್ದು, ಇದರ ಬಗ್ಗೆಯೂ ಸಹ ತನಿಖೆ ನಡೆಸಲಾಗುತ್ತಿದೆ.
ದಸ್ತಗಿರಿ ಮಾಡಿರುವ ಆರೋಪಿಗಳ ವಿವರ ಈ ಕೆಳಕಂಡಂತೆ ಇರುತ್ತದೆ.
1] ಶಿವರಾಮು ಉ: ಶಿವರಾಮೇಗೌಡ ಬಿನ್ ಲೇಟ್.ಮಂಚೇಗೌಡ, 39 ವರ್ಷ, ವ್ಯವಸಾಯ, ಅಂಕೇಗೌಡನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೂಕು.
2] ಎಸ್. ಮಂಜುನಾಥ ಬಿನ್ ಎಸ್. ಶಿವಣ್ಣ. 40 ವರ್ಷ, ವ್ಯವಸಾಯ, ಮಾರಿಗುಡಿ ಬೀದಿ, ಗಂಜಾಂ, ಶ್ರೀರಂಗಪಟ್ಟಣ ಟೌನ್
3] ಆರ್.ರಮೇಶ ಬಿನ್ ರಾಜಗೋಪಾಲ, 42 ವರ್ಷ, ಅನ್ನಪೂರ್ಣೇಶ್ವರಿ ವಾಟರ್ ಸರ್ವಿಸ್ ನಲ್ಲಿ ವಾಟರ್ ಸರ್ವಿಸ್ ಕೆಲಸ, ಹಳೆ ವೆಲ್ಲೆಸ್ಲಿ ಬ್ರಿಡ್ಜ್, ಶ್ರೀರಂಗಪಟ್ಟಣ ಟೌನ್
4] ಆರ್.ಚೇತನ್ಕುಮಾರ್ ಬಿನ್ ಆರ್. ರಾಜು. 27 ವರ್ಷ, 2 ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ
5] ಎಂ.ಬಿ. ಅರುಣ್ಕುಮಾರ್ ಬಿನ್ ಲೇಟ್.ಪುಟ್ಟಸ್ವಾಮಿ, 35 ವರ್ಷ, 1 ನೇ ಕ್ರಾಸ್, ವಿದ್ಯಾನಗರ, ಮಂಡ್ಯ ಸಿಟಿ.
ಈ ಮೇಲ್ಕಂಡ ಆರೋಪಿಗಳಲ್ಲದೇ ಇನ್ನೊಬ್ಬ ಆರೋಪಿ ಮೈಸೂರಿನ ಇಮ್ತಿಯಾಜ್ ಎಂಬುವನು ತಪ್ಪಿಸಿಕೊಂಡು ಓಡಿ ಹೋಗಿದ್ದು, ಆತನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿರುತ್ತದೆ.
ಈ ದಾಳಿಯನ್ನು ಶ್ರೀರಂಗಪಟ್ಟಣ ಉಪ-ವಿಭಾಗದ ಡಿ.ಎಸ್.ಪಿ. ರವರಾದ ಶ್ರೀಮತಿ. ಗೀತಾಪ್ರಸನ್ನ, ಪಾಂಡವಪುರ ಪಿಎಸ್ಐ ಶ್ರೀ. ಅಜರುದ್ದೀನ್ ಮತ್ತು ಇತರೆ ಸಿಬ್ಬಂದಿಗಳು ಕೈಗೊಂಡಿರುತ್ತಾರೆ. ಈ ಪ್ರಕರಣದ ಮುಂದಿನ ತನಿಖೆ ಜಾರಿಯಲ್ಲಿರುತ್ತದೆ.
K R PET TOWN PS MURDER CASE PRESS NOTE 19-11-2013
ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 19-11-2013.
ಪತ್ರಿಕಾ ಪ್ರಕಟಣೆ
ಕೆ.ಆರ್.ಪೇಟೆ ಪೊಲೀಸ್ ಠಾಣೆ ಮೊ.ಸಂ. ಮೊಃ ಸಂಃ 136/12 ಕಲಂಃ 302, 201 ಐಪಿಸಿ
ಕೇಸಿನ ಒಂದೂವರೆ ವರ್ಷದ ಹಿಂದೆ ನಡೆದಿದ್ದ ಸುಪಾರಿ ಕೊಲೆ ಪ್ರಕರಣ ಪತ್ತೆ ಬಗ್ಗೆ.
ದಿನಾಂಕಃ 20.07.12. ರಂದು ಕೆ.ಅರ್.ಪೇಟೆ ತಾಲ್ಲೋಕು, ಸಂತೇಬಾಚಹಳ್ಳಿ ಹೋಬಳಿ, ಕೊಟಗಹಳ್ಳಿ ಜಿಟಿಅರ್ ಅರಣ್ಯ ಪ್ರದೇಶದಲ್ಲಿ ಯಾರೋ ದುಷ್ಕಮರ್ಿಗಳು ಒಬ್ಬ ಅಪರಿಚಿತ ಹೆಂಗಸನ್ನು ಕೊಲೆ ಮಾಡಿ ಗುಂಡಿಯಲ್ಲಿ ಹಾಕಿದ್ದು, ಈ ಬಗ್ಗೆ ಕೆ.ಅರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೊಃ ಸಂಃ 136/12 ಕಲಂಃ 302, 201 ಐಪಿಸಿ ರೀತ್ಯ ಪ್ರಕರಣ ದಾಖಲಾಗಿ ಕೊಲೆಯಾದ ಹೆಂಗಸಿನ ವಾರಸುದಾರರು ಮತ್ತು ಅರೋಪಿಗಳ ಪತ್ತೆ ಬಗ್ಗೆ ಎಲ್ಲಾ ರೀತಿಯ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಸದರಿ ಪ್ರಕರಣದ ಪತ್ತೆ ಕೈಗೊಂಡ ಶ್ರೀ ಕೆ.ರಾಜೇಂದ್ರ, ಸಿ.ಪಿ.ಐ. ಕೆ.ಆರ್.ಪೇಟೆ, ಕೆ.ಆರ್.ಪೇಟೆ ಸರ್ಕಲ್ ಠಾಣೆಗಳಾದ ಕೆ.ಆರ್.ಪೇಟೆ ಗ್ರಾಮಾಂತರ ಹಾಗೂ ಟೌನ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ರಚನೆಮಾಡಿಕೊಟ್ಟು, ಈ ಪ್ರಕರಣದ ಪತ್ತೆ ಬಗ್ಗೆ ಶ್ರೀರಂಗಪಟ್ಟಣ ಉಪವಿಭಾಗದ ಡಿ.ಎಸ್.ಪಿ. ಶ್ರೀಮತಿ. ಗೀತಾ.ಎಂ.ಎಸ್. ರವರ ನಿರ್ದೆಶನದಂತೆ ಮೇಲ್ಕಂಡ ತಂಡದ ಅದಿಕಾರಿ ಮತ್ತು ಸಿಬ್ಬಂದಿಗಳು ಈ ಪ್ರಕರಣದಲ್ಲಿ ಕೊಲೆಯಾಗಿರುವ ಹೆಂಗಸು ಶ್ರೀಮತಿ ಲಕ್ಷ್ಮಿ ಹನುಮಾನ್ ಜೂಲು ಬೆನೂರ್ ಇವರು ಕಾಣೆಯಾಗಿರುವ ಬಗ್ಗೆ ಮಹಾರಾಷ್ಟ್ರ ರಾಜ್ಯದ ವಿರಾರ್ ಪೊಲೀಸ್ ಠಾಣೆಯಲ್ಲಿ ಮೊಃಸಂಃ 157/12 ರಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿಯನ್ನು ಸಂಗ್ರಹಿಸಿ, ಮಹಾರಾಷ್ಟ್ರ ರಾಜ್ಯದ ವಿರಾರ್ ಪೊಲೀಸ್ ಠಾಣೆಗೆ ಬೇಟಿ ನೀಡಿ ಮಾಹಿತಿ ಪಡೆದು ದೂರುದಾರರನ್ನು ಸಂಪರ್ಕಿಸಿ ವಿಚಾರ ಮಾಡಿ, ಮೃತೆ ಶ್ರೀಮತಿ ಲಕ್ಷ್ಮಿ ಹನುಮಾನ್ ಜೂಲು ಬೆನೂರ್ ಇವರ ಮಕ್ಕಳಾದ ಪ್ರವೀಣ, ಗಣೇಶ ಮತ್ತು ಮಗಳು ರೂಪಾಲಿ ಇವರುಗಳಿಗೆ ಪ್ರಕಟಣೆಗಳನ್ನು ತೋರಿಸಿ ಗುರುತು ಹಚ್ಚಿದ ನಂತರ ಅವರನ್ನು ಕೆ.ಅರ್.ಪೇಟೆ ಟೌನ್ ಪೊಲೀಸ್ ಠಾಣೆಗೆ ಕರೆತಂದು ಮೃತೆಯ ಶವದ ಪೋಟೋ ಹಾಗೂ ಬಟ್ಟೆಗಳನ್ನು ತೋರಿಸಿದಲ್ಲಿ ಸದರಿಯವರು ತಮ್ಮ ತಾಯಿ ಶ್ರೀಮತಿ ಲಕ್ಷ್ಮಿ ಹನುಮಾನ್ ಜೂಲು ಬೆನೂರ್ ರವರ ಪೋಟೋ ಮತ್ತು ಬಟ್ಟೆಗಳನ್ನು ಗುರುತಿಸಿದ್ದು ಈ ಪ್ರಕರಣದಲ್ಲಿ ತಮ್ಮ ಮನೆಯ ಬಳಿ ಇದ್ದ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೋಕು ನುಗ್ಗೆಹಳ್ಳಿ ಹೋಬಳಿ, ಅತ್ತಿಹಳ್ಳಿ ಗ್ರಾಮದ ಸುರೇಶ @ ಸುರೇಶಗೌಡ ಬಿನ್ ತಿಮ್ಮೇಗೌಡ ಹಾಗೂ ಇದೇ ಚನ್ನರಾಯಪಟ್ಟಣ ತಾಲ್ಲೋಕು, ದಂಡಿಗನಹಳ್ಳಿ ಹೋಬಳಿ, ದೊಡ್ಡಮತ್ತಿಘಟ್ಟ ಗ್ರಾಮದ ಶ್ರೀಮತಿ ಲೀಲಾಶ್ರೀದರರಾವ್ ಇವರ ಮೇಲೆ ಅನುಮಾನ ವ್ಯಕ್ತಪಡಿಸಿ ಇದಕ್ಕೆ ಕಾರಣ ತಮ್ಮ ತಾಯಿಯವರು ತಮ್ಮ ಅಂಗಡಿ ಮಳಿಗೆಯನ್ನು ವಿರಾರ್ ವೆಸ್ಟ್ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಒತ್ತೆ ಇಟ್ಟು 11 ಲಕ್ಷ ರೂ.ಗಳನ್ನು ಕಷ್ಟಕ್ಕೆ ಬೇಕೆಂದು ಕೇಳಿದ್ದ ಶ್ರೀಮತಿ ಲೀಲಾಶ್ರೀದರರಾವ್ ಇವರಿಗೆ ಕೊಟ್ಟಿದ್ದು ಈ ಹಣವನ್ನು ಕೇಳಿದಕ್ಕೆ ಬೆಂಗಳೂರಿನಲ್ಲಿ ನಮ್ಮ ಅಸ್ತಿ ಇದೆ ಮಾರಾಟ ಮಾಡಿ ಕೊಡುವುದಾಗಿ ಹೇಳಿ ದಿನಾಂಕಃ 13.07.12. ರಂದು ಬೆಂಗಳೂರಿಗೆ ರೈಲ್ವೆ ಟಿಕೆಟ್ ಬುಕ್ ಮಾಡಿಸಿ ಲೀಲಾರಾವ್ ರವರು ತಮ್ಮ ಪರಿಚಯದವರಾದ ಸುರೇಶ್ಗೌಡ ರವರ ಜೊತೆ ಕಳುಹಿಸಿದ್ದು ತಮ್ಮ ತಾಯಿ ನಿರಂತರವಾಗಿ ದೊರವಾಣಿ ಸಂಪರ್ಕದಲ್ಲಿದ್ದು, ನಂತರ ದಿನಾಂಕಃ 15.07.12. ರಂದು ತಮ್ಮ ತಾಯಿಯವರಿಗೆ ಪೋನ್ ಮಾಡಿದಾಗ ಸ್ವೀಚ್ ಅಪ್ ಬಂದಿದ್ದು ಇದರಿಂದ ಅನುಮಾನಗೊಂಡು ದಿನಾಂಕಃ 23.07.13. ರಂದು ವೀರಾರ್ ಪೊಲೀಸ್ ಸ್ಟೇಷನ್ಗೆ ತಮ್ಮ ತಾಯಿ ಕಾಣೆಯಾಗಿರುವ ಬಗ್ಗೆ ದೂರು ನೀಡಿ ಕೇಸು ದಾಖಲು ಮಾಡಿಸಿರುವುದಾಗಿ ಹೇಳಿರುತ್ತಾರೆ.
ಈ ಆದಾರದ ಮೇರೆಗೆ ಶ್ರೀಮತಿ ಲೀಲಾಶ್ರೀದರರಾವ್ ಮತ್ತು ಸುರೇಶ್ @ ಸುರೇಶ್ಗೌಡ ಇವರನ್ನು ಪತ್ತೆ ಮಾಡಿ ಕರೆತಂದು ಅದುನಿಕ ತಂತ್ರಜ್ಞಾನ ಮೂಲಕ ವಿಚಾರಣೆ ಕೈಗೊಂಡು ಕೊಲೆ ಮಾಡಿರುವ ಸತ್ಯಾಂಶ ಹೊರ ಬಿದ್ದು, ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾದ ಚಂದ್ರ ಬಿನ್ ತಿಮ್ಮೇಗೌಡ ಈತನನ್ನು ಸಹ ದಸ್ತಗಿರಿ ಮಾಡಿದ್ದು ಮತ್ತೊಬ್ಬ ಆರೋಪಿಯಾದ ಶೇಖರ ಈತನು ಪತ್ತೆಯಾಗಬೇಕಾಗಿರುತ್ತೆ. ಪತ್ತೆ ಕಾರ್ಯ ಮುಂದುವರೆದಿರುತ್ತೆ.
ಮೇಲ್ಕಂಡ ಕೊಲೆ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮ ವಹಿಸಿದ ಶ್ರೀ ಕೆ.ರಾಜೇಂದ್ರ, ಸಿ.ಪಿ.ಐ. ಕೆ.ಆರ್.ಪೇಟೆ, ಹಾಗೂ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಶ್ರೀ ಡಿ.ಪಿ. ಧನ್ರಾಜ್ ಮತ್ತು ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಎಂ.ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ಕೃಷ್ಣೇಗೌಡ, ನಂದೀಶ್, ಕಿರಣ್ಕುಮಾರ್, ಶತೃಜ್ಞ, ಪುನೀತ್, ಶಿವಣ್ಣ, ಜಯರಾಮೇಗೌಡ.ಕೆ. ಕುಮಾರ.ಕೆ.ಕ. ಮಹಿಳಾ ಸಿಬ್ಬಂದಿಗಳಾದ ರೇಖಾ, ಜ್ಯೋತಿ, ಪೂಣರ್ಿಮ ಹಾಗೂ ಜೀಪ್ ಚಾಲಕ ಲೋಕೇಶ್ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
ಮೃತೆ ಶ್ರೀಮತಿ ಲಕ್ಷ್ಮಿ ಹನುಮಾನ್ ಜೂಲು ಬೆನೂರ್
ಆರೋಪಿ ಲೀಲಾರಾವ್
ಆರೋಪಿಗಳಾದ ಸುರೇಶ @ ಸುರೇಶಗೌಡ ಹಾಗೂ ಚಂದ್ರ ಬಿನ್ ತಿಮ್ಮೇಗೌಡ
ಪತ್ರಿಕಾ ಪ್ರಕಟಣೆ
ದಿಃ 30-10-2013 ರಂದು ನಾಗಮಂಗಲ ತಾಃ ಬೆಳ್ಳೂರು ಠಾಣಾ ವ್ಯಾಪ್ತಿಯ ಗೊಂದಿಹಳ್ಳಿ ಗ್ರಾಮದ ಫಿರ್ಯಾಧುದಾರರಾದ ಲಕ್ಷ್ಮಮ್ಮ ರವರ ಮನೆಯಲ್ಲಿ ವಾಸ ಇದ್ದ ನಾಗೇಂದ್ರ ರವರು ಚಿನ್ನದ ಆಭರಣ ಮತ್ತು ಬೆಳ್ಳಿಯ ಪಧಾರ್ಥಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ವಿಚಾರದಲ್ಲಿ ಬೆಳ್ಳೂರು ಪೊಲೀಸ್ ಠಾಣಾ ಮೊ.ನಂ 296/13 ಕಲಂ 380 ಐ.ಪಿ.ಸಿ ಪ್ರಕರಣ ದಾಖಲಾಗಿದ್ದು ಸಿ.ಪಿ.ಐ ನಾಗಮಂಗಲ ಹಾಗೂ ಪಿ.ಎಸ್.ಐ ಬೆಳ್ಳೂರು ಮತ್ತು ಸಿಬ್ಬಂಧಿಗಳು ಈ ಪ್ರಕರಣದ ಪತ್ತೆ ಬಗ್ಗೆ ಕ್ರಮವಹಿಸುತ್ತಿರುವಾಗ ದಿನಾಂಕ 01-11-2013 ರಂದು ಹಾಸನ ಜಿಲ್ಲೆ. ಚನ್ನರಾಯಪಟ್ಟಣ ತಾಲ್ಲೋಕು, ಕಾರೇಹಳ್ಳಿ ಬಳಿಯಿರುವ, ರೇಚಿಹಳ್ಳಿ ಗ್ರಾಮದ, ನಾಗೇಂದ್ರ, ಎಂಬುವವನ್ನು ತಲಾಸು ಮಾಡಿ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದು ಆತನು ಮೇಲ್ಕಂಡ ಪ್ರಕರಣದ ಮಾಲುಗಳನ್ನು ತಾನು ಕಳುವು ಮಾಡಿರುದಾಗಿ ತಿಳಿಸಿದ್ದು ಈತನಿಂದ ಕಳುವಾಗಿದ್ದ 22 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಒಂದು ಜೊತೆ 13 ಗ್ರಾಂ ತೂಕದ ಮುತ್ತಿನ ಚಿನ್ನದ ಓಲೆ ಹಾಗೂ ಜುಮುಕಿ, 10 ಗ್ರಾಂ ತೂಕದ ಕತ್ತಿನ ಚಿನ್ನದ ಚೈನ್, ಒಂದು 12 ಗ್ರಾಂ ತೂಕದ ಚಿನ್ನದ ಬಿಳಿಕಲ್ಲು ಓಲೆ ಮತ್ತು ಹ್ಯಾಂಗಿಂಗ್ಸ್, 7 ಗ್ರಾಂ ತೂಕದ ಚಿನ್ನದ ಸಾದ ಓಲೆ ಮತ್ತು ಹ್ಯಾಂಗಿಂಗ್ಸ್, 7 ಗ್ರಾಂ ತೂಕದ ಚಿನ್ನದ ಲಕ್ಷ್ಮಿ ಓಲೆ, 7 ಗ್ರಾಂ ತೂಕದ ಚಿನ್ನದ ಒಂದು ಸಾದ ಉಂಗುರ, 10 ಗ್ರಾಂ ತೂಕದ ಚಿನ್ನದ ಬ್ರಾಶ್ಲೇಟ್, 6 ಗ್ರಾಂ ತೂಕದ ಗೆಜ್ಜೆ ಮಾಟಿ, 6 ಗ್ರಾಂ ತೂಕದ ಚಿನ್ನದ ಕೆನ್ನೆ ಚೈನ್, 5 ಗ್ರಾಂ ತೂಕದ ಚಿನ್ನದ ಒಂದು ಜೊತೆ ಫ್ಯಾನ್ಸಿ ಓಲೆ, 8 ಗ್ರಾಂ ತೂಕದ ಚಿನ್ನದ ಕತ್ತಿನ ಚೈನ್, 3 ಗ್ರಾಂ ತೂಕದ ಚಿನ್ನದ ಸಾದ ಉಂಗುರ, 2 ಗ್ರಾಂ ತೂಕದ ಚಿನ್ನದ ಉಂಗುರ, ಒಂದು ಬೆಳ್ಳಿ ಸೊಂಟದ ಉಡುದಾರ, 10 ಗ್ರಾಂ ತೂಕದ ಚಿನ್ನದ ಕತ್ತಿನ ಚೈನ್, ಒಂದು 9 ಗ್ರಾಂ ತೂಕದ ಹಸಿರು ಹರಳಿನ ದಪ್ಪಕಲ್ಲಿನ ಚಿನ್ನದ ಉಂಗುರ, 7 ಗ್ರಾಂ ತೂಕದ ಸಾದ ಚಿನ್ನದ ಉಂಗುರ, 30 ಗ್ರಾ ತೂಕದ ಚಿನ್ನದ ಮಾಂಗಲ್ಯದ ಚೈನ್, 6 ಗ್ರಾಂ ತೂಕದ ಒಂದು ಚಿನ್ನದ ಉಂಗುರ, 7 ಗ್ರಾಂ ತೂಕದ ಒಂದು ಜೊತೆ ಮುತ್ತಿನ ಓಲೆ, 7 ಗ್ರಾಂ ತೂಕದ ಒಂದು ಜೊತೆ ಕೆಂಪುಕಲ್ಲಿನ ಚಿನ್ನದ ಓಲೆ, 7 ಗ್ರಾಂ ತೂಕದ ಒಂದು ಜೊತೆ ಚಿನ್ನದ ಹ್ಯಾಂಗಿಂಗ್ಸ್, ಒಂದು ಜೊತೆ ಬೆಳ್ಳಿ ಕಾಲು ಚೈನ್ ಗಳು ಒಟ್ಟು 201 ಗ್ರಾಂ ಚಿನ್ನ ಮತ್ತು 100 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಸದರಿ ಆಭರಣದ ಅಂದಾಜು ಮೌಲ್ಯ 6,10,000/-ರೂ ಗಳಾಗಿರುತ್ತೆ.
ಈ ಪತ್ತೆ ಕಾರ್ಯದಲ್ಲಿ ಕ್ರಮಕೈಗೊಂಡ ಮಂಡ್ಯ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಡಾಃ ಶೋಭಾರಾಣಿ, ವಿ.ಜೆ. ನಾಗಮಂಗಲ ವೃತ್ತದ ಸಿಪಿಐರವರಾದ ಶ್ರೀ ವಸಂತ ಹೆಚ್.ಎಸ್, ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕೆ.ಎಸ್. ನಿರಂಜನ್ ಮತ್ತು ಎ.ಎಸ್.ಐ ಪುಟ್ಟಸ್ವಾಮಿ ಹೆಚ್.ಟಿ ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ.298 ಹಿರಿಯಣ್ಣ, ಸಿ.ಹೆಚ್.ಸಿ 165 ಚನ್ನಪ್ಪ, ಸಿಪಿಸಿ 509 ಎನ್.ಎಸ್.ಸೋಮಶೇಖರ್, ಸಿಪಿಸಿ 605 ಪುರುಷೋತ್ತಮ್, ಸಿಪಿಸಿ18 ಅರುಣ, ಸಿಪಿಸಿ223 ಉಮೇಶ್, ಸಿಪಿಸಿ 432 ನಟರಾಜ ಕೆ.ಎಸ್ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
Subscribe to:
Posts (Atom)