Moving text

Mandya District Police
DAILY CRIME REPORT OF MANDYA DISTRICT DTD : 31-03-2014
DAILY CRIME REPORT OF MANDYA DISTRICT DTD : 30-03-2014
MANDYA DISTRICT DAILY CRIME REPORT DATE 29-03-2014
DAILY CRIME REPORT OF MANDYA DISTRICT DTD : 28-03-2014
DAILY CRIME REPORT OF MANDYA DISTRICT DTD : 27-03-2014
DAILY CRIME REPOT OF MANDYA DISTRICT DTD : 26-03-2014
DAILY CRIME REPORT OF MANDYA DISTRICT DTD : 25-03-2014
DAILY CRIME REPORT OF MANDYA DISTRICT DTD : 24-03-2014
DAILY CRIME REPORT OF MANDYA DISTRICT DTD : 23-03-2014
DAILY CRIME REPORT OF MANDYA DISTRICT DTD : 22-03-2014
DAILY CRIME REPORT OF MANDYA DISTRICT DTD : 21-03-2014
DAILY CRIME REPORT OF MANDYA DISTRICT DTD : 20-03-2014
MANDYA DISTRICT DAILY CRIME REPORT 19-03-2014
MANDYA DISTRICT DAILY CRIME REPORT 18-03-2014

PRESS NOTE DATED : 18-03-2014

PRESS NOTE 18-03-2014
DAILY CRIME REPORT OF MANDYA DISTRICT DTD : 17-03-2014
DAILY CRIME REPORT OF MANDYA DISTRICT DTD : 16-03-2014
DAILY CRIME REPORT OF MANDYA DISTRICT DTD : 15-03-2014
DAILY CRIME REPORT OF MANDYA DISTRICT DTD : 13-03-2014
DAILY CRIME REPORT OF MANDYA DISTRICT DTD : 12-03-2014
DAILY CRIME REPORT OF MANDYA DISTRICT DTD : 11-03-2014
DAILY CRIME REPORT OF MANDYA DISTRICT DTD : 10-03-2014
MANDYA DISTRICT DAILY CRIME REPORT DATE:09-03-2014
MANDYA DISTRICT DAILY CRIME REPORT DATE 08-03-214
DAILY CRIME REPORT OF MANDYA DISTRICT DTD : 07-03-2014
DAILY CRIME REPORT OF MANDYA DISTRICT DTD : 06-03-2014

PRESS NOTE DATED : 06-03-2014

ತೂಬಿನಕೆರೆ ಕೈಗಾರಿಕಾ ಪ್ರದೇಶದ ಸಂಪತ್ ರೀಫೈನ್ಡ್ ಪ್ರೈ.ಲಿ ನಲ್ಲಿ
 5 ಕಾರ್ಮಿಕರ ದುರ್ಮರಣ 

       ಮಂಡ್ಯ ತಾಲ್ಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಂಪತ್ ರೀಫೈನ್ಡ್ ಪ್ರೈ.ಲಿ, ನಲ್ಲಿ ಸುಮಾರು 10 ಜನ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಉಪಯೋಗಿಸಲ್ಪಟ್ಟ ಗೇರ್ ಆಯಿಲ್ಅನ್ನು ಸಂಸ್ಕರಿಸಿ ಇದೇ ಕಾರ್ಖಾನೆಯ ಬೆಂಗಳೂರು ಶಾಖೆಗೆ ಕಳುಹಿಸುವ ಕೆಲಸ ಮಾಡುತ್ತಿದ್ದು, ಕಾರ್ಖಾನೆಯ ಮಾಲಿಕರಾದ ಅರುಣ್, ಕುಮಾರ್ ಅಥವಾ ರೈಟರ್ ಅಮೃತ್ ರಾಜ್ ರವರ ಸೂಚನೆಯ ಮೇರೆಗೆ ಲೋಡಿಂಗ್, ಅನ್ಲೋಡಿಂಗ್, ಮತ್ತಿತರೆ ಕೆಲಸ ಮಾಡಿಕೊಂಡಿದ್ದರು.  ಕಳೆದ 10 ದಿನಗಳಿಂದ ಕಾರ್ಖಾನೆಯ ರಿಯಾಕ್ಟರ್ನಲ್ಲಿ ಬೋಲ್ಡ್ ಸಡಿಲಗೊಂಡು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದ ಕಾರಣ ಈ ದಿನ ದಿನಾಂಕ;6-3-14 ರಂದು ಬೆಳಿಗ್ಗೆ ಬೆಂಗಳೂರಿನಲ್ಲಿರುವ ಕಾರ್ಖಾನೆಯ ಮಾಲಿಕರಾದ ಅರುಣ್ ರವರು ರೈಟರ್ ಅಮೃತ್ ರಾಜ್ ಮಾಡಿ ರಿಯಾಕ್ಟರ್ ಒಳಗೆ ಇಳಿದು ಬೋಲ್ಡ್ ಸರಿಪಡಿಸುವಂತೆ ತಿಳಿಸಿದ್ದರು. ಅದರಂತೆ ಈ ದಿನ ಬೆಳಿಗ್ಗೆ 11-00 ಗಂಟೆಯಲ್ಲಿ ಅಮೃತ್ರಾಜ್ ಕಾರ್ಖಾನೆಯ ಕಾರ್ಮಿಕರಾದ ಶ್ರೀರಾಮ್ಗೆ ರಿಯಾಕ್ಟರ್ನ ಒಳಗೆ ಇಳಿದು ಬೋಲ್ಟ್ ಸರಿಪಡಿಸಿ ಕ್ಲೀನ್ ಮಾಡುವಂತೆ ತಿಳಿಸಿದರು. ಆಗ ಶ್ರೀರಾಮ ಒಳಗೆ ಇಳಿದು, ಚೇತು ಮೇಲೆ ನೋಡುತ್ತಿದ್ದಾಗ, ಶ್ರೀರಾಮ ಪ್ರಜ್ಞೆತಪ್ಪಿ ಒಳಗೆ ಬಿದ್ದಿದ್ದಾನೆಂದು ಹೇಳಿ ಮೇಲಕ್ಕೆ ಎತ್ತಿತರುತ್ತೇನೆಂದು ಹೇಳಿ ಇಳಿದವನು ಹೊರಗೆ ಬಾರದಿದ್ದಾಗ ಒಬ್ಬರ ನಂತರ ಒಬ್ಬೊಬ್ಬರಾಗಿ ರಾಜು, ಗಾಮ, ಮತ್ತು ಬಬ್ಲು ರವರುಗಳು ರಿಯಾಕ್ಟರ್ ಒಳಗೆ ಇಳಿದಿದ್ದು, ಇವರುಗಳು ಯಾರೂ ಅರ್ಧಗಂಟೆಯಾದರೂ ಹೊರಗೆ ಬಾರದಿದ್ದಾಗ, ಪಿರ್ಯಾದಿ ಮತ್ತು ರೈಟರ್ ಅಮೃತ್ರಾಜ್ ರವರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಪೋನ್ ಮಾಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸುಮಾರು 2 ಗಂಟೆ ಕಾರ್ಯಾಚರಣೆ ನಡೆಸಿ ರಿಯಾಕ್ಟರ್ ನ ತಳಬಾಗವನ್ನು ಕಟ್ ಮಾಡಿ ನೋಡಲಾಗಿ ಕೆಳಬಾಗದಲ್ಲಿ ಸಿಕ್ಕಿಕೊಂಡಿದ್ದ ಮೇಲ್ಕಂಡ ಐದು ಮಂದಿ ಉಸಿರುಕಟ್ಟಿ ಮೃತಪಟ್ಟಿದ್ದರು. ಕಾರ್ಖಾನೆಯ ಮಾಲಿಕರಾದ ಅರುಣ್ ಮತ್ತು ಕುಮಾರ ಹಾಗೂ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರೈಟರ್ ಅಮೃತ್ ರಾಜ್ ರವರುಗಳು ಕಾರ್ಮಿಕರ ಸುರಕ್ಷತೆಯ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೇ ಉಸಿರಾಡಲು ಕಷ್ಟಕರವಾಗಿರುವ ರಿಯಾಕ್ಟರ್ ನ ಒಳಗೆ ಇಳಿಸಿ ನಿರ್ಲಕ್ಷತೆ ವಹಿಸಿರುವುದರಿಂದ ಮೇಲ್ಕಂಡವರು ಮೃತಪಟ್ಟಿರುತ್ತಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ ನಂ 140/2014,  ಕಲಂ 304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತದೆ. 

ಮೃತರು, 
1] ಗಾಮ ಬಿನ್ ಸಿಂಘಾಸನ್, 25 ವರ್ಷ, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ:, ಬಿಹಾರ,
2] ಬಬ್ಲು ಬಿನ್ ಸಿಂಘಾಸನ್, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
3] ಶ್ರೀರಾಮ ಬಿನ್ ಬೋಚ್, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
4] ಚೇತುಬಿನ್ ಮುನಾರ್ ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
5] ರಾಜು ಬಿನ್ ಮಿಠಾಯ್ಲಾಲ್, ಮುಲ್ಲಾ ಜನಾಂಗ, ಲೋಗ್ರೋರಾ ಗ್ರಾಮ, ಉಚೆಹರ ತಾ: ಮಧ್ಯಪ್ರದೇಶ
DAILY CRIME REPORT OF MANDYA DISTRICT DTD : 05-03-2014
DAILY CRIME REPORT OF MANDYA DISTRICT DTD : 04-03-2014
DAILY CRIME REPORT OF MANDYA DISTRICT DTD : 03-03-2014

Press Note : Date 03-03-2014

ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆದಳದ ಅಧಿಕಾರಿ ಮತ್ತು ಸಿಬ್ಬಂದಿಯವರು, ಮಂಡ್ಯ ನಗರ ಮತ್ತು ಮಂಡ್ಯ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಂಟಿ ಹೆಂಗಸರನ್ನು ಮೋಸ ಮಾಡುತ್ತಿದ್ದ ಆರೋಪಿಗಳಾದ ಜ್ಯೋತಿ, ಗೌರಮ್ಮ @ ಜಯಮ್ಮ, ರತ್ನಮ್ಮ, ನಾಗಮ್ಮ  ಇವರುಗಳ ಬಂಧನ. ಇವರುಗಳಿಂದ ಸುಮಾರು 13,00,000-00 ರೂ ಬೆಲೆಬಾಳುವ ಸುಮಾರು ಒಟ್ಟು 440. ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳು ಮತ್ತು ಚಿನ್ನದ ಚೈನುಗಳ  ವಶ.



For more details click on : PRESS NOTE DATE : 03-03-2014


DAILY CRIME REPORT OF MANDYA DISTRICT DTD : 02-03-2014
DAILY CRIME REPORT OF MANDYA DISTRICT DTD : 01-03-2014
DAILY CRIME REPORT OF MANDYA DISTRICT DTD : 28-02-2014
DAILY CRIME REPORT OF MANDYA DISTRICT DT D : 27-02-2014
MANDYA DISTRICT DAILY CRIME REPORT DATE 26-02-2014

PRESS NOTE DATE : 26-02-2014


 ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
                                                 ಮಂಡ್ಯ ಜಿಲ್ಲೆ, ದಿನಾಂಕಃ 26-02-2014

     ಪತ್ರಿಕಾ ಪ್ರಕಟಣೆ


ದಿನಾಂಕಃ 24-02-2014 ರಂದು ಪಿಎಸ್ಐ ಶ್ರೀ. ಧನರಾಜ್, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ಸಿಬ್ಬಂದಿಗಳ ಸಮೇತ  ರಾತ್ರಿ ಗಸ್ತಿನಲ್ಲಿದ್ದಾಗ ರಾತ್ರಿ 1215 ಗಂಟೆಯಲ್ಲಿ ಬೂಕನಕೆರೆ ಗ್ರಾಮದಿಂದ ಬಲ್ಲೇನಹಳ್ಳಿ ಕಡೆಗೆ ಹೋಗುವ ರಸ್ತೆಯ ಪೆಟ್ರೋಲ್ ಬಂಕ್ ಬಳಿ 1) ನಟ @ ನಟರಾಜು ಬಿನ್ ಲಕ್ಷ್ಮಯ್ಯ, 35 ವರ್ಷ, ಚಾಲಕ ವೃತ್ತಿ, ಐಚನಹಳ್ಳಿ ಗ್ರಾಮ, ಬೂಕನಕೆರೆ ಹೊಬಳಿ ಕೆ.ಆರ್.ಪೇಟೆ ತಾ 2) ಚಲುವರಾಜು ಬಿನ್ ನಾಗಯ್ಯ, 22 ವರ್ಷ, ವ್ಯವಸಾಯ, ಹೆರಗನಹಳ್ಳಿ ಗ್ರಾಮ ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು ರವರುಗಳು ಒಂದು ಗೂಡ್ಸ್ ಆಟೋವನ್ನು ತೆಗೆದುಕೊಂಡು ಹೋಗಲು ಪ್ರಯತ್ನಮಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಅವರುಗಳನ್ನು  ಹಿಡಿದು ಆಟೋ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಲಾಗಿ ಸದರಿ ಆಟೋ ಬಗ್ಗೆ ದಾಖಲಾತಿ ಇಲ್ಲದೇ ಇದ್ದು ನಕಲೀ ಕೀ ಬಳಸಿ ಮೈಸೂರು ಹತ್ತಿರ ಕಳ್ಳತನ ಮಾಡಿರುತ್ತೇವೆಂದು ತಿಳಿಸಿರುತ್ತಾರೆ. ನಂತರ ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಅವರ ವಿರುದ್ದ ಪ್ರಕರಣ ದಾಖಲುಮಾಡಿ  ಆರೋಪಿತರನ್ನು ವಿಚಾರಣೆಗೊಳಪಡಿದಾಗ ಆರೋಪಿತರು ಈಗ್ಗೆ ಮೂರು ದಿವಸಗಳ ಹಿಂದೆ ಮೈಸೂರು ಹತ್ತಿರ ರಾತ್ರಿ ವೇಳೆಯಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂದು 407 ಗೂಡ್ಸ್ ಟೆಂಪೋ ಮತ್ತು ನಂತರ ಕೆ.ಆರ್.ಎಸ್. ಬಳಿ ಒಂದು ಪಲ್ಸರ್ ಮೋಟಾರ್ ಸೈಕಲ್ ನ  ಕೀ ಬಳಸಿ ಕಳ್ಳತನಮಾಡಿ ಆರೋಪಿತನಾದ ಚೆಲುವರಾಜು ರವರ ಹೆರಗನಹಳ್ಳಿ ಗ್ರಾಮದ ಮನೆಯಲ್ಲಿ ಮಾರಾಟಮಾಡಲು ನಿಲ್ಲಿಸಿರುತ್ತೇವೆಂದು ತಿಳಿಸಿರುತ್ತಾರೆ.

ಆರೋಪಿತರಿಂದ ಸುಮಾರು 7 ಲಕ್ಷ ರೂಪಾಯಿ ಬೆಲೆ ಬಾಳುವ 1) ನಂಬರ್ ಪ್ಲೇಟ್ ಇಲ್ಲದ ಗೂಡ್ಸ್ ಆಟೋ 2) ಕೆಎ-21-ಕೆ-72 ಪಲ್ಸರ್ ಮೋಟಾರ್ ಸೈಕಲ್ 3) ಕೆಎ-30-260 ನಂಬರಿನ 407 ಗೂಡ್ಸ್ ಟೆಂಪೋವನ್ನು ವಶಪಡಿಸಿಕೊಂಡಿರುತ್ತಾರೆ. ನಂತರ ಮೇಲ್ಕಂಡ ಆರೋಪಿಗಳನ್ನು ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.

       ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.


DAILY CRIME REPORT OF MANDYA DISRICT DTD : 25-02-2014
DAILY CRIME REPORT OF MANDYA DISTRICT DTD : 24-02-2014
DAILY CRIME REPORT OF MANDYA DISTRICT DTD : 23-02-2014
MANDYA DISTRICT DAILY CRIME REPORT DATE:22-02-2014
DAILY CRIME REPORT OF MANDYA DISTRICT DTD : 21-02-2014
DAILY CRIME REPORT OF MANDYA DISTRICT DATE:20-02-2014
DAILY CRIME REPORT OF MANDYA DISRITCT DTD : 19-02-2014
DAILY CRIME REPORT OF MANDYA DISTRICT DTD : 18-02-2014
DAILY CRIME REPORT OF MANDYA DISRICT DTD : 17-02-2014
DAILY CRIME REPORT OF MANDYA DISTRICT DTD : 16-02-2014
DAILY CRIME REPORT OF MANDYA DISTRICT DTD : 15-02-2014
DAILY CRIME REPORT OF MANDYA DISTRICT DTD : 14-02-2014

PRESS NOTE





      ಮಳವಳ್ಳಿ ಉಪವಿಭಾಗದ ಡಿ.ವೈ.ಎಸ್.ಪಿ ರವರಾದ ಹೆಚ್.ಆರ್. ಧರಣೇಂದ್ರರವರ ಮಾರ್ಗದರ್ಶನದಲ್ಲಿ, ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ.ಶಿವಸ್ವಾಮಿ ರವರ ನೇತೃತ್ವದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಅಪರಾದ ಪತ್ತೆ ದಳ ರಚಿಸಿ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ದಿನಾಂಕಃ13-02-2014 ರಂದು ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ.ಶಿವಸ್ವಾಮಿ ರವರು ಮಳವಳ್ಳಿ ಪುರ ಠಾಣೆ ಪಿಎಸ್ಐ ಎಸ್.ಸಂತೋಷ, ಮಳವಳ್ಳಿ ಗ್ರಾಮಾಂತರ ಠಾಣೆ ಪಿ.ಎಸ್.ಐ ಸುಬ್ಬಯ್ಯ ಹಾಗೂ ಸಿಬ್ಬಂದಿಯವರಾದ ಸಿಹೆಚ್ಸಿ-145 ಕೆ.ಕಷ್ಣಶೆಟ್ಟಿ, ಸಿ.ಪಿ.ಸಿ 697 ವಿ.ಎಸ್. ಪ್ರಕಾಶ್, ಸಿಪಿಸಿ-441 ಆರ್.ಪ್ರಭುಸ್ವಾಮಿ, ಸಿ.ಪಿ.ಸಿ.465 ಎಂ.ವೆಂಕಟೇಶ್, ಸಿಪಿಸಿ 158 ಎಸ್ಡಿ ಪ್ರದೀಪ್ಕುಮಾರ್, ಸಿ.ಪಿ.ಸಿ.735 ಎಸ್.ಲೋಕೇಶ್, ಸಿ.ಪಿ.ಸಿ 15 ಎಸ್.ರಾಘವೇಂದ್ರ ಹಾಗೂ ಜೀಪ್ ಚಾಲಕ ಸಿದ್ದರಾಜು ರವರ ಜೊತೆಯಲ್ಲಿ ಕಾಯರ್ಾಚರಣೆ ಮಾಡಿ ಬನ್ನೂರಿನಿಂದ ಮುಂದೆ ಮೈಸೂರು ಮುಖ್ಯ ರಸ್ತೆಯಲ್ಲಿರುವ ಕಾವೇರಿ ನದಿ ಸೇತುವೆ ಹತ್ತಿರ ಆರೋಪಿ ಮನು @ ಮನುಕುಮಾರ ಬಿನ್ ಲೇ:ವೆಂಕಟೇಶ್ @ ಹುಚ್ಚಯ್ಯ, ಗಣಂಗೂರು ಗ್ರಾಮ ಈತನನ್ನು ಹಾಗೂ ಈತನ ವಶದಲ್ಲಿದ್ದ ಬಜಾಜ್ ಪಲ್ಸರ್ ಮೋಟಾರ್ ಬೈಕ್ ನಂ ಕೆ.ಎ.11-ವೈ-8503 ಅನ್ನು ವಶಕ್ಕೆ ತೆಗೆದುಕೊಂಡು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ವಿಚಾರಣಾ ವೇಳೆಯಲ್ಲಿ ಈತ ಬಾಗಿಯಾಗಿದ್ದ ಮಳವಳ್ಳಿ ಗ್ರಾಮಾಂತರ ವೃತ್ತ ವ್ಯಾಪ್ತಿಯ 3 ಘೋರ ಹಾಗೂ 5 ಅಘೋರ ಪ್ರಕರಣಗಳನ್ನು ಪತ್ತೆ ಹಚ್ಚಿ ಈತನಿಂದ ಸುಮಾರು 300 ಗ್ರಾಂ ತೂಕದ 8 ಚಿನ್ನದ ಸರಗಳನ್ನು ಹಾಗೂ ಒಂದು ಬಜಾಜ್ ಪಲ್ಸರ್ ಮೋಟಾರ್ ಬೈಕ್ನ್ನು ಅಮಾನತ್ತು ಪಡಿಸಿಕೊಂಡಿರುತ್ತದ.ೆ ಒಟ್ಟು ಅಂದಾಜು ಮೌಲ್ಯ ಸುಮಾರು 10 ಲಕ್ಷರೂಗಳಾಗಿರುತ್ತದೆ

   ಈ ಮೇಲ್ಕಂಡ ಪ್ರಕರಣದ ಆರೋಫಿಗಳನ್ನು ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ .
DAILY CRIME REPORT OF MANDYA DISTRICT DTD : 13-02-2014
DAILY CRIME REPORT OF MANDYA DISTRICT DTD : 12-02-2014
DAILY CRIME REPORT OF MANDYA DISTRICT DTD : 11-02-2014
DAILY CRIME REPORT OF MANDYA DISTRICT DTD : 10-02-2014
DAILY CRIME REPORT OF MANDYA DISTRICT DTD : 09-02-2014
DAILY CRIME REPORT OF MANDYA DISTRICT DTD : 08-02-2014
DAILY CRIME REPORT OF MANDYA DISTRICT DTD : 07-02-2014

PRESS NOTE OF K R PETE CIRCLE DTD : 06-02-2014

         ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
    ಮಂಡ್ಯ ಜಿಲ್ಲೆ, ಮಂಡ್ಯ 
      ದಿನಾಂಕಃ 06-02-2014

ಪತ್ರಿಕಾ ಪ್ರಕಟಣೆ 


     
ಕೆ.ಆರ್.ಪೇಟೆ ತಾಲ್ಲೂಕಿನ ಕೊಟಗಹಳ್ಳಿ ಗ್ರಾಮದ ಬಳಿ ದುಗ್ಗನಹಳ್ಳಿ ಕಡೆ ಹೋಗುವ ರಸ್ತೆಯಲ್ಲಿ ಈಗ್ಗೆ ಏಳು ತಿಂಗಳ ಹಿಂದೆ ಸರಗಳ್ಳತನವಾಗಿದ್ದು ಹಾಗೂ ಈಗ್ಗೆ 4 ತಿಂಗಳ ಹಿಂದೆ ಕೆ.ಅರ್.ಪೇಟೆ ಟೌನ್ನ ಜಯನಗರ ಬಡಾವಣೆಯಲ್ಲಿ ಸರಗಳ್ಳತನವಾಗಿದ್ದು ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ದಿನಾಂಕ: 05-04-2014 ರಂದು ಕೆ.ಆರ್.ಪೇಟೆ ಸಿ.ಪಿ.ಐರವರಾದ ಶ್ರೀ.ಕೆ.ರಾಜೇಂದ್ರರವರು ಗಸ್ತಿನಲ್ಲಿದ್ದಾಗ ಮೈಸೂರು ಕಡೆಯಿಂದ ಒಂದು ಮೋಟಾರ್ ಸೈಕಲನಲ್ಲಿ ಬರುತ್ತಿದ್ದ ಮೋಟಾರ್ ಸವಾರರನ್ನು ತಡೆದು ಪರಿಶೀಲಿಸಲಾಗಿ, ಸದರಿ ಆಸಾಮಿಗಳು ಸಮರ್ಪಕವಾದ ಉತ್ತರವನ್ನು ಮತ್ತು ವಾಹನದ ದಾಖಲಾತಿಗಳನ್ನು ಹಾಜರ್ಪಡಿಸದೆ ಅನುಮಾನಸ್ಪದವಾಗಿ ಕಂಡು ಬಂದಿದ್ದರಿಂದ, ಸದರಿಯವರುಗಳನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಲಾಗಿ ಮೇಲ್ಕಂಡ ಪ್ರಕರಣಗಳನ್ನು ಎಸಗಿರುವ ಸ್ವ-ಇಚ್ಚಾ ಹೇಳಿಕೆಯಲ್ಲಿ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿಗಳಿಂದ ಒಟ್ಟು 56 ಗ್ರಾಂನ ಎರಡು ಚಿನ್ನದ ಚೈನುಗಳನ್ನು ಅಮಾನತ್ಪಡಿಸಿರುತ್ತೆ. ಇವುಗಳ ಬೆಲೆ 1,57,000/- ರೂ ಆಗಿರುತ್ತೆ.

        ಈ ಪ್ರಕರಣವನ್ನು ಮಾನ್ಯ ಶ್ರೀರಂಗಪಟ್ಟಣ ಅರಕ್ಷಕ ಉಪ ಪೊಲೀಸ್ ಅದಿಕ್ಷಕರಾದ ಶ್ರೀಮತಿ ಎಂ.ಎಸ್. ಗೀತಾ ರವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ    ಶ್ರೀ ಕೆ. ರಾಜೇಂದ್ರ ರವರು ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಎಂ.ಶಿವಕುಮಾರ್ ಮತ್ತು ಡಿ.ಪಿ. ದನರಾಜ್ ಮತ್ತು ಮುಖ್ಯ ಪೇದೆಗಳಾದ ಮಹದೇವಯ್ಯ, ಶಿವಣ್ಣ, ಸಿಬ್ಬಂದಿಗಳಾದ ಕೃಷ್ಣೇಗೌಡ, ಪ್ರಶಾಂತ್ ಕುಮಾರ್, ಶತ್ರುಜ್ಞಾ, ರವಿ, ಚಾಲಕ ಕೆ.ಜೆ. ಲೋಕೇಶ್ ಇವರುಗಳ ಕಾರ್ಯವನ್ನು ಅವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.

PRESS NOTE DTD : 06-02-2014

ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
 ಮಂಡ್ಯ ಜಿಲ್ಲೆ, ಮಂಡ್ಯ 
  ದಿನಾಂಕಃ 06-02-2014

ಪತ್ರಿಕಾ ಪ್ರಕಟಣೆ




ಮಂಡ್ಯ ಗ್ರಾಮಾಂತರ ಮತ್ತು  ಮಂಡ್ಯ ನಗರ ಪೊಲೀಸರ ಕಾರ್ಯಚರಣೆ, ದೇವಸ್ಥಾನ ಕಳವು ಹಾಗೂ ಸರಕಳ್ಳತನ ಸೇರಿದಂತೆ 52 ಪ್ರಕರಣಗಳ ಪತ್ತೆ. 

ಮಂಡ್ಯ ಜಿಲ್ಲೆಯ ಹೊಳಲು, ಮಂಡ್ಯ ಕೊಪ್ಪಲು ಹಾಗೂ ಮಂಡ್ಯ ನಗರ, ಅರಕೆರೆ, ಬೆಸಗರಹಳ್ಳಿ, ಮೇಲುಕೋಟೆ ವಿವಿದೆಡೆಗಳಲ್ಲಿ ವರದಿಯಾಗಿದ್ದ ಹಲವು ದೇವಸ್ಥಾನ ಹಾಗೂ ಸರಕಳ್ಳತನ ಪ್ರಕರಣಗಳ ಪತ್ತೆ ಬಗ್ಗೆ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಲೋಕೇಶ್ ಮತ್ತು ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ. ಹರೀಶ್ಬಾಬು ರವರನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ಡಿಎಸ್ಪಿ, ಮಂಡ್ಯ ಉಪವಿಬಾಗ ರವರ ನೇತೃತ್ವದಲ್ಲಿ ನೇಮಿಸಲಾಗಿತ್ತು. ಸದರಿ ತಂಡಗಳ 2-3 ದಿನಗಳ ಸತತ ಪ್ರಯತ್ನದಿಂದ ಒಟ್ಟು 14 ಜನ ಆರೋಪಿಗಳನ್ನು ಬಂದಿಸಿದ್ದು, ಒಟ್ಟು 52 ಪ್ರಕರಣಗಳ ಪತ್ತೆಯಾಗಿರುತ್ತವೆ. ಸದರಿ ಆರೋಪಿಗಳಿಂದ ಈ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

1] 422.5 ಗ್ರಾಂ ಚಿನ್ನಾಬರಣಗಳು. 330 ಗ್ರಾಂ ಬೆಳ್ಳಿ. ಒಟ್ಟು ಮೌಲ್ಯ ಸುಮಾರು 13 ಲಕ್ಷ ರೂಗಳು.
3] ಎರಡು ನೋಕಿಯಾ ಕಂಪನಿಯ ಮೊಬೈಲ್ಗಳು
4] ದೇವಸ್ಥಾನ ಹುಂಡಿಯ ಸುಮಾರು 10, 000 ರೂ ಹಣ.
5] ಕೃತ್ಯಕ್ಕೆ ಬಳಸಿದ ನಾಲ್ಕು ದ್ವಿಚಕ್ರ ವಾಹನಗಳು

ಮೇಲ್ಕಂಡ 52 ಪ್ರಕರಣಗಳಲ್ಲಿ ಒಟ್ಟು ಹತ್ತು ಸರಗಳ್ಳತನ ಪ್ರಕರಣಗಳು, ಅರಕರೆ ಮತ್ತು ಹೊಳಲುವಿನಲ್ಲಿ ನಡೆದ 02 ಡಕಾಯಿತಿ ಪ್ರಕರಣಗಳು ಸಹ ಪತ್ತೆಯಾಗಿರುತ್ತವೆ.

       ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅದಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.
DAILY CRIME REPORT OF MANDYA DISTRICT DTD : 06-02-2014
DAILY CRIME REPORT OF MANDYA DISTRICT DTD : 05-02-2014
DAILY CRIME REPORT OF MANDYA DISTRICT DTD : 04-02-2014
DAILY CRIME REPORT OF MANDYA DISTRICT DTD : 03-02-2014
DAILY CRIME REPORT OF MANDYA DISTRICT DTD : 02-02-2014
DAILY CRIME REPORT OF MANDYA DISTRICT DTD : 01-02-2014
DAILY CRIME REPORT OF MANDYA DISTRICT DTD : 31-01-2014
DAILY CRIME REPORT OF MANDYA DISTRICT DTD : 30-01-2014
DAILY CRIME REPORT OF MANDYA DISTRICT DTD :29-01-2014
DAILY CRIME REPORT OF MANDYA DISTRICT DTD : 28-01-2014
MANDYA DISTRICT POLICE TRAFFIC SAFETY WEEK -2014 DETAILS DTD : 27-01-2014
DAILY CRIME REPORT OF MANDYA DISTRICT DTD : 27-01-2014
DAILY CRIME REPORT OF MANDYA DISTRICT DTD : 26-01-2014
DAILY CRIME REPORT OF MANDYA DISTRICT DTD : 25-01-2014

TRAFFIC SAFETY WEEK 2014 EVENTS 25-01-2014

ROAD SAFETY WEEK - ROAD MARATHON ON 25-01-2014




DAILY CRIME REPORT OF MANDYA DISTRICT DTD : 24-01-2014

TRAFFIC SAFETY WEEK - DAILY EVENTS


MANDYA DISTRICT POLICE
TRAFFIC SAFETY WEEK -2014

ದಿನಾಂಕ:21-01-2014 ರಂದು ಉದ್ಗಾಟನೆ ಕಾರ್ಯಕ್ರಮ ಮತ್ತು ಕೆ.ಎಸ್.ಆರ್.ಟಿ.ಸಿ ಚಾಲಕ ಮತ್ತು ನಿರ್ವಾಹಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ




ದಿನಾಂಕ: 22-01-2014 ರಂದು ಮಂಡ್ಯ ನಗರದ ವಿವಿಧ ಶಾಲೆಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳೊಡನೆ ಸಂವಾದ







ದಿನಾಂಕ: 23-01-2014 ರಂದು ಮಂಡ್ಯ ನಗರದಲ್ಲಿ ಸಂಚರಿಸುವ ಎತ್ತಿನಗಾಡಿ ಹಾಗೂ ಟ್ರಾಕ್ಟರ್ ಗಳಿಗೆ ರಿಪ್ಲೆಕ್ಟರ್ ಅಳವಡಿಸುವ ಕಾರ್ಯಕ್ರಮ






ದಿನಾಂಕ: 24-01-2014 ರಂದು ಮಂಡ್ಯ ನಗರದಲ್ಲಿ ವಿದ್ಯಾರ್ಥಿಗಳಿಂದ ರಸ್ತೆಯ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ






MANDYA DISTRICT POLICE DAILY CRIME REPORT DATE:23-01-2014
DAILY CRIME REPORT OF MANDYA DISTRICT DTD : 21-01-2014

MANDYA RURAL CIRCLE PRESS NOTE DTD : 21-01-2014


                      ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
                          ಮಂಡ್ಯ ಜಿಲ್ಲೆ, ಮಂಡ್ಯ 

                          ದಿನಾಂಕಃ 21-01-2014




ಪತ್ರಿಕಾ ಪ್ರಕಟಣೆ
ಮಂಡ್ಯ ಗ್ರಾಮಾಂತರ ಪೊಲೀಸರ ಕಾರ್ಯಚರಣೆಯಲ್ಲಿ, ಕುಖ್ಯಾತ ದ್ವಿಚಕ್ರ ವಾಹನ ಕಳ್ಳನ ಬಂಧನ

ಬೆಂಗಳೂರು ನಗರದ ಕೆಂಗೇರಿ, ವಿಜಯನಗರ, ಗಿರಿನಗರ, ಹನುಮಂತನಗರ, ಬ್ಯಾಟರಾಯನಪುರ ಈ ಕಡೆಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿ ಟಿ.ವೆಂಕಟೇಶ ಬಿನ್ ತಿಮ್ಮಯ್ಯ ಈತನನ್ನು ದಸ್ತಗಿರಿ ಮಾಡಿ ಈತನಿಂದ ಒಟ್ಟು ಸುಮಾರು 4.50 ಲಕ್ಷ ರೂ ಬೆಲೆ ಬಾಳುವ 13 ವಿವಿದ ಮೋಟಾರ್ ಬೈಕ್ಗಳ ವಶ.
ಆರೋಪಿ ಹೆಸರು ವಿಳಾಸ 
1] ಟಿ. ವೆಂಕಟೇಶ್ ಬಿನ್ ತಿಮ್ಮಯ್ಯ, 38 ವರ್ಷ, ಗಂಗಾಮತ ಜನಾಂಗ, ಗಾರೆ ಕೆಲಸ, ಮತ್ತು ವ್ಯವಸಾಯ, ವಾಸ ದುದ್ದಾ ಗ್ರಾಮ, ದುದ್ದಾ ಹೋಃ ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ.
ಈ ಕೇಸಿನ ವಿಚಾರಣೆ ಕಾಲದಲ್ಲಿ ಸದರಿ ಆರೋಪಿಯು ನಕಲಿ ಕೀಗಳನ್ನು ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ತನ್ನ ಸ್ವಂತ ಬೈಕ್ ಎಂದು ತನಗೆ ತೊಂದರೆಯಿರುವ ಪ್ರಯುಕ್ತ ಬೈಕನ್ನು ಅಡಮಾನ ಇಟ್ಟುಕೊಳ್ಳಿ ನಂತರ ಬಿಡಿಸಿಕೊಳ್ಳುವುದಾಗಿ ಹೇಳಿ ಸುಲಭವಾಗಿ ಮಾರಾಟ ಮಾಡುತ್ತಿದುದ್ದಾಗಿ ತಿಳಿದು ಬಂದಿರುತ್ತೆ. 
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಗ್ರಾಮಾಂತರ ವೃತ್ತನಿರೀಕ್ಷಕರಾದ ಶ್ರೀ ಲೋಕೇಶ್ರವರ ನೇತೃತ್ವದಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಶ್ರೀ ಆನಂದೇಗೌಡ, ಮತ್ತು ಅಪರಾಧ ಪತ್ತೇದಳ ಸಿಬ್ಬಂದಿಗಳಾದ ಶ್ರೀ ಬಿ.ಚಿಕ್ಕಯ್ಯ, ಶ್ರೀ ಮಹೇಶಕುಮಾರ್, ಶ್ರೀ ಆಂತೋನಿರಾಜ್, ಶ್ರೀ ಮಹೇಶ್, ಶ್ರೀ ರಘುಪ್ರಕಾಶ್, ಶ್ರೀರಾಮ, ಕರಿಗಿರಿಗೌಡ ಹಾಗೂ ಚಾಲಕರಾದ ಶ್ರೀ ಪುಟ್ಟರಾಜುರವರುಗಳು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದು ಸದರಿ ಪೊಲೀಸ್ ಅದಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ. 
DAILY CRIME REPORT OF MANDYA DISTRICT DTD : 20-01-2014
DAILY CRIME REPORT OF MANDYA DISTRICT DTD : 19-01-2014
DAILY CRIME REPORT OF MANDYA DISTRICT DTD : 18-01-2014
DAILY CRIME REPORT OF MANDYA DISTRICT DTD : 17-01-2014
DAILY CRIME REPORT OF MANDYA DISTRICT DTD : 16-01-2014
DAILY CRIME REPORT OF MANDYA DISTRICT DTD : 15-01-2014
DAILY CRIME REPORT OF MANDYA DISTRICT DTD : 14-01-2014
DAILY CRIME REPORT OF MANDYA DISTRICT DTD : 13-01-2014
DAILY CRIME REPORT OF MANDYA DISTRICT DTD : 12-01-2014
DAILY CRIME REPORT OF MANDYA DISTRITC DTD : 11-01-2014
DAILY CRIME REPOT OF MANDYA DISTRICT DTD : 10-01-2014
DAILY CRIME REPORT OF MANDYA DISTRICT : 09-01-2013

PRESS NOTE DTD : 09-01-2014


                            ಪೊಲೀಸ್ ಸೂಪರಿಂಟೆಡೆಂಟ್ ರವರ ಕಛೇರಿ
                            ಮಂಡ್ಯ ಜಿಲ್ಲೆ, ಮಂಡ್ಯ.
                                ದಿನಾಂಕಃ09-01-2014.

ಪ ತ್ರಿ ಕಾ ಪ್ರ ಕ ಟ ಣೆ

       ಮಂಡ್ಯ ಉಪವಿಭಾಗದ ಅಪರಾಧ ಪತ್ತೆ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಂದ ಮಂಡ್ಯದ ಗಾಂಧಿನಗರ 10ನೇ ಕ್ರಾಸ್ನಲ್ಲಿ ದಿನಾಂಕಃ01-01-2014ರಂದು ವೆಂಕಟೇಶನ ಕೊಲೆ ಪ್ರಕರಣದಲ್ಲಿನ 15 ಜನ ಆರೋಪಿಗಳ ಬಂಧನ.

         ದಿನಾಂಕಃ01-01-2014ರಂದು ಬೆಳಗಿನ ಜಾವ 00-15 ಗಂಟೆ ಸಮಯದಲ್ಲಿ ಮಂಡ್ಯದ ಗಾಂಧಿನಗರದ 10ನೇ ಕ್ರಾಸ್ನಲ್ಲಿ ಹೊಸವರ್ಷ ಆಚರಣೆ ಮಾಡುತ್ತಿದ್ದ ಸಂಧರ್ಭದಲ್ಲಿ ಅಲ್ಲಿನ ವಾಸಿ ವೆಂಕಟೇಶ ಈತನ ತಮ್ಮ ಶ್ರೀನಿವಾಸ ಇವರುಗಳಿಗೆ ಹಳೇ ದ್ವೇಷದಿಂದ ಮಂಡ್ಯದ ಹೊಸಹಳ್ಳಿ ವಾಸಿಗಳಾದ ನಾಗೇಶ @ ನಾಗ ಹಾಗೂ ಇತನ ಸಹಚರಾದ ಸುಮಾರು 20-25 ಜನರು ಸೇರಿ ಗಾಂಧಿನಗರದ 10ನೇ ಕ್ರಾಸಿಗೆ ದೊಣ್ಣೆ ಮತ್ತು ರೀಪರ್ ಪಟ್ಟಿಗಳಿಂದ ವೆಂಕಟೇಶ ಮತ್ತು ಆತನ ತಮ್ಮ ಶ್ರೀನಿವಾಸ ಹಾಗೂ ಜಗಳ ಬಿಡಿಸಲು ಹೋದ ಅದೇ ಬೀದಿಯ ವಾಸಿ ಶಿವಲಿಂಗಯ್ಯ ರವರಿಗೆ ತಲೆ ಮೇಲೆ ಮತ್ತು ಮೈ ಮೇಲೆ ಹೊಡೆದು ಪರಾರಿಯಾಗಿದ್ದು ಇದರ ಪರಿಣಾಮವಾಗಿ ವೆಂಕಟೇಶ ಮೃತಪಟ್ಟಿದ್ದು ಶ್ರೀನಿವಾಸನಿಗೆ ಮಾರಣಾಂತಿಕವಾಗಿ ಗಾಯಗೊಳಿಸಿದ್ದು ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಆರೋಪಿಗಳ ಪತ್ತೆ ಬಗ್ಗೆ ಮೇಲಾಧಿಕಾರಿಗಳು ನೀಡಿದ ಸಲಹೆ ಮತ್ತು ಸೂಚನೆಗಳ ಮೇರೆಗೆ ಮಂಡ್ಯ ಉಪವಿಬಾಗದ ಅಪರಾಧ ಪತ್ತೆ ದಳದ ಅಧಿಕಾರಿರವರು ಆರೋಪಿಗಳ ಪತ್ತೆ ಬಗ್ಗೆ 3 ತಂಡ ರಚನೆ ಮಾಡಿದ್ದು ಕಾಯಾನ್ಮುಖವಾದ ತಂಡವು ದಿನಾಂಕಃ05-01-14, 06-01-14 ಮತ್ತು 07-01-14ರಂದು ಈ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿ ಕೇಸಿನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳು ಹಾಲಿ ಮಂಡ್ಯ ಉಪಕಾರಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.

ಆರೋಪಿಗಳ ಹೆಸರು ಮತ್ತು ವಿಳಾಸ

1. ಜಯರಾಮು @ ನಲ್ಲಿಜಯರಾಮ ಬಿನ್ ನಿಂಗೇಗೌಡ, 30ವರ್ಷ, ಪ್ಲಂಬರ್ ಕೆಲಸ, ವಾಸಃ ಸಕರ್ಾರಿ ಶಾಲೆ ಎಡಭಾಗ, ಹೊಸಹಳ್ಳಿ ಮಂಡ್ಯ
2. ಸಂತೋಷ್ಕುಮಾರ @ ಸಂತೋಷ @ ಪಾನಿಪೂರಿ ಕೆಂಚ @ ಕಿರಣ ಬಿನ್ ಲೇ|| ರಘು, 24ವರ್ಷ, ಮಜಾಕ್ ಹಾಕುವ ಕೂಲಿ ಕೆಲಸ, ವಾಸಃಬೆಟ್ಟೇಗೌಡರ ವಠಾರ, ಬೇವಿನಕಟ್ಟೆ, ಹೊಸಹಳ್ಳಿ ಮಂಡ್ಯ ಸಿಟಿ.
3. ನಾಗೇಶ @ ನಾಗ @ ಗ್ಯಾಸ್ ನಾಗ ಬಿನ್ ನಾಗರಾಜು, 29ವರ್ಷ, ವ್ಯವಸಾಯ, ವಾಸಃ4ನೇ ಕ್ರಾಸ್, ಹೊಸಹಳ್ಳಿ, ಮಂಡ್ಯ ಸಿಟಿ
4. ಡಿ ರಾಘವೇಂದ್ರ @ ರಾಘು ಬಿನ್ ಪಟೇಲ್ ದೇವೇಗೌಡ, 28ವರ್ಷ, ಮರಳು ಜಲ್ಲಿ ಕಂಟ್ರಾಕ್ಟರ್ ಕೆಲಸ, ವಾಸಃ ಹನಿಯಂಬಾಡಿ ರಸ್ತೆ, ಹೂವಿನ ಮಾಲೆ, ಮುತ್ತಿನ ಮಾಲೆ ದೇವಸ್ಥಾನದ ಪಕ್ಕ ಹೊಸಹಳ್ಳಿ, ಮಂಡ್ಯ ಸಿಟಿ.
5. ವಿಜೇಂದ್ರ @ ವಿಜಿ ಬಿನ್ ಶಂಕರೇಗೌಡ, 25ವರ್ಷ, ವ್ಯವಸಾಯ, ಸ್ವಂತ ಸ್ಥಳಃರಾಮಮಂದಿರ ಎದರುಗಡೆ, ಹೊಸಹಳ್ಳಿ, ವಾಸಃ2ನೇ ಕ್ರಾಸ್, ಹರಿಶ್ಚಂದ್ರ ಸರ್ಕಲ್, ಮಂಡ್ಯ ಸಿಟಿ.
6. ಬೋರೇಗೌಡ @ ಬೋರ ಬಿನ್ ರೇವಣ್ಣ, 24ವರ್ಷ, ಕೂಲಿ ಕೆಲಸ, ವಾಸಃ3ನೇ ಕ್ರಾಸ್ ಹೊಸಹಳ್ಳಿ  ಮಂಡ್ಯ
7. ಚಲುವರಾಜ್ @ ಚಲುವ @ ಎಗ್ಚಲುವ ಬಿನ್ ಪದ್ಮನರಸಿಂಹಸ್ವಾಮಿ, 24ವರ್ಷ, ವಾಸಃ4ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
8. ಕಿರಣ್ @ ಗುಮ್ಮ ಬಿನ್ ಲೇ||ಸ್ವಾಮಿ, 22ವರ್ಷ, ಟ್ರಾಕ್ಟರ್ ಚಾಲಕ, ವಾಸಃ3ನೇ ಕ್ರಾಸ್, ರಾಮನಹಳ್ಳಿ, ಹನಿಯಂಬಾಡಿ ರಸ್ತೆ, ಹೊಸಹಳ್ಳಿ ಮಂಡ್ಯ ಸಿಟಿ.
9. ಸತೀಶ್ಗೌಡ @ ಚೇತನ @ ಬಂಕ್ ಬಿನ್ ಕೃಷ್ಣ, 23 ವರ್ಷ, ಅಕ್ಕಿ ಅಂಗಡಿಯಲ್ಲಿ ಕೆಲಸ, ವಾಸ ಬಿಸಿಲು ಮಾರಮ್ಮನ ದೇವಸ್ಥಾನದ ಎದುರುಗಡೆ, ಹೊಸಹಳ್ಳಿ, ಮಂಡ್ಯ ಸಿಟಿ.
10. ಮನು @ ಕಪ್ಪೆ ಬಿನ್ ಶಿವರಾಜು, 22ವರ್ಷ ಪೇಂಟ್ ಕೆಲಸ, ವಾಸಃಹನಿಯಂಬಾಡಿ ರಸ್ತೆ, 4ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
11. ಹೇಮಂತ @ ಕಳ್ಳ ಹೇಮಂತ ಬಿನ್ ಲೇ|| ಪ್ರಕಾಸ್, 23ವರ್ಷ, ಪೇಂಟ್ ಕೆಲಸ, ವಾಸಃ ರಾಮಮಂದಿರದ ವಿರುದ್ದ, 2ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.  ಸ್ವಂತ ಸ್ಥಳಃ 2ನೇ ಕ್ರಾಸ್, ಬಸ್ ಸ್ಯಾಂಡ್ ಹತ್ತಿರ ಕಿರುಗಾವಲ, ಮಳವಳ್ಳಿ ತಾಲ್ಲೂಕು.
12. ಹೇಮಂತ್ಕುಮಾರ್ ಆರ್ @ ಹೇಮಂತ @ ಆಟೋ ಹೇಮಂತ ಬಿನ್ ರಾಮಕೃಷ್ಣ, 21ವರ್ಷ, ಬಿಸ್ಲರಿ ಕ್ಯಾನ್ ಸಪ್ಲಯರ್ ಕೆಲಸ, ವಾಸಃಕಾರಸವಾಡಿ ರಸ್ತೆ, 1ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
13. ಶಿವಕುಮಾರ @ ಕಯ್ಯ ಬಿನ್ ದಳ್ಳಾಳ್ಳಿ ಮಂಚೇಗೌಡ, 20ವರ್ಷ, ಮಾಕರ್ೇಟ್ನಲ್ಲಿ ತರಕಾರಿ ಮೂಟೆ ಹೊರುವ ಕೆಲಸ, ವಾಸಃ ಹನಿಯಂಬಾಡಿ ರಸ್ತೆ, 1ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
14. ಜಗದೀಶ @ ಜಗ್ಗ ಬಿನ್ ಲೇ|| ಶ್ರೀನಿವಾಸ, 23ವರ್ಷ, ಸೀಮೆಂಟ್ ಮೂಟೆ ಹೊರುವ ಕೆಲಸ, ವಾಸಃ ರಾಮಮಂದಿರದ 1ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
15. ಮನು ಹೆಚ್. ಬಿ @ ಕೆಂಚ ಬಿನ್ ಲೇ|| ಬಸವೇಗೌಡ, 21ವರ್ಷ, ಪ್ಲಂಬರ್ ಕೆಲಸ, ವಾಸಃಹನಿಯಂಬಾಡಿ ರಸ್ತೆ, 1ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.

       ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುತ್ತಾರೆ. ಇವರುಗಳ ಪತ್ತೆ ಬಗ್ಗೆ ಪೊಲೀಸ್ನವರು ಬಲೆಬೀಸಿರುತ್ತಾರೆ.

     ಈ ಪತ್ತೆ ಕಾರ್ಯದಲ್ಲಿ ಮಂಡ್ಯ ಉಪವಿಭಾಗದ ಆರಕ್ಷಕ ಉಪ ಅಧೀಕ್ಷಕರಾದ ಡಾ|| ಶೋಭಾ ರಾಣಿ ವಿ.ಜೆ., ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ ಕೆ.ಎಂ.ಹರೀಶ್ಬಾಬು, ಸಿಬ್ಬಂದಿಗಳಾದ ಎಎಸ್ಐ ಸಿ.ಕೆ.ಪುಟ್ಟಸ್ವಾಮಿ, ಹೆಡ್ಕಾನ್ಸ್ಟೇಬಲ್ ಗಳಾದ ನಾರಾಯಣ, ಲಿಂಗರಾಜು, ನಟರಾಜು, ನಿಂಗಣ್ಣ, ರಾಮಚಂದ್ರ, ಅರಕೇಶ್ವರಚಾರಿ, ಅಣ್ಣೇಗೌಡ, ಕಾನ್ಸ್ಟೇಬಲ್ಗಳಾದ ಇಪರ್ಾನ್ಪಾಷ, ಪುಟ್ಟಸ್ವಾಮಿ, ಉಮೇಶ, ಮ.ಪಿ.ಸಿ.ಆರ್ಯಾಂಬಿಕಾಗಿರಿ ಹಾಗೂ ಜೀಪ್ ಚಾಲಕರಾದ ಬಲರಾಮೇಗೌಡ, ಶ್ರೀನಿವಾಸ, ಯೋಗೇಶ ಮತ್ತೀತರರು ಪಾಲ್ಗೊಂಡಿದ್ದು ಅವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
DAILY CRIME REPORT OF MANDYA DISTRICT DTD : 08-01-2013
DAILY CRIME REPORT OF MANDYA DISTRICT DTD : 07-01-2014
DAILY CRIME REPORT OF MANDYA DISTRICT DTD : 06-01-2014
DAILY CRIME REPORT OF MANDYA DISTRICT DATED : 05-01-2013
DAILY CRIME REPORT OF MANDYA DISTRICT DTD : 04-01-2013
DAILY CRIME REPORT OF MANDYA DISTRICT DTD : 02-01-2013
DAILY CRIME REPORT OF MANDYA DISTRICT DTD : 01-01-2014