Moving text

Mandya District Police

TRAFFIC SAFETY WEEK 2013- CLOSING CEREMONY

TRAFFIC SAFETY WEEK 2013- CLOSING CEREMONY 
ON 07-01-2013











DAILY CRIME REPORT DATED : 06-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-01-2013 ರಂದು ಒಟ್ಟು 10 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಅಪಹರಣ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 06-01-2013 ರಂದು ಪಿರ್ಯಾದಿ ಎಸ್ಎಲ್ ರವಿಕುಮಾರ ಬಿನ್. ಲೇ|| ಲಿಂಗೇಗೌಡ, ಸಿಂಧಘಟ್ಟ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಎಸ್.ಎಲ್. ರವಿಕುಮಾರ್ ರವರ ಹೆಂಡತಿ ಎಸ್.ಆರ್. ಭಾಗ್ಯ ಅವರಿಗೆ ಈಗ್ಗೆ 8 ತಿಂಗಳಿನಿಂದ ಹೊಟ್ಟೆಯಲ್ಲಿ ಹುಣ್ಣಾಗಿದ್ದು ಹುಣ್ಣಿನಿಂದ ಹೊಟ್ಟೆನೋವು ಜಾಸ್ತಿಯಾಗಿ ಹೊಟ್ಟೆನೋವಿನ ಔಷಧಿಯೆಂದು ಯಾವುದೋ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಚಿಕತ್ಸೆ ಫಲಕಾರಿಯಾಗದೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರಗೆ ಸೇರಿಸಿದ್ದು ದಿನಾಂಕ: 05-01-2013 ರಂದು ಸಂಜೆ 07-20 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ  :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 363 ಐ.ಪಿ.ಸಿ.

        ದಿನಾಂಕ: 06-01-2013 ರಂದು ಪಿರ್ಯಾದಿ ಜಯರಾಮು ಬಿನ್. ದೊಡ್ಡಕರಿಯಯ್ಯ, ದೇವೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಾಡೆ ಗ್ರಾಮ ಪಂಚಾಯ್ತಿಯಲ್ಲಿ ಅದ್ಯಕ್ಷರು ಹಾಗು ಉಪಾದ್ಯಕ್ಷರ ಚುನಾವಣೆ ನಡೆಯುವ ಸಂದರ್ಭದಲ್ಲಿ ನನ್ನ ಹೆಂಡತಿ ಜಯಮ್ಮಳನ್ನು ಆರೋಪಿಗಳು ಕರೆದುಕೊಂಡು ಬಂದಿದ್ದರು, ಆ ಸಮಯದಲ್ಲಿ ನನ್ನ ಮಕ್ಕಳಾದ ರಾಜೇಶ್. ಯೋಗಿಶ್. ಗಿರೀಶ್ ರವರು ನಮ್ಮ ತಾಯಿಯನ್ನು ಏಕೆ ಕರೆದುಕೊಂಡು ಹೋಗಿದ್ದೀರಾ? ನಮ್ಮ ತಾಯಿಯ ಹತ್ತಿರ ಮಾತನಾಡಲು ಬಿಡಿ ಎಂದು ಕೇಳಿದಾಗ ಅಲ್ಲೆ ಇದ್ದ ಆರೋಪಿಗಳಾದ 1] ಡಿ.ಕೆ.ದೇವೇಗೌಡ, 2]ಡಿ.ಎಲ್.ಶ್ರೀದರ ಬಿನ್ ಲಕ್ಷ್ಮೇಗೌಡ, 3] ಡಿ.ಎನ್.ರಮೇಶ್ ನಂಜೇಗೌಡ, ದೇವೇಗೌಡನಕೊಪ್ಪಲು,  4] ಯಜಮಾನ್ ಪ್ರಕಾಶ್ 5] ಡಿ.ರಾಜಪ್ಪ, 6] ಹೆಚ್.ಮೋಹನ್ ಕುಮಾರ್,  7] ಎನ್.ವಿಜೇಂದ್ರ, ಎಲ್ಲರೂ ಚಿಕ್ಕಾಡೆ ಗ್ರಾಮ, ನನ್ನ ಮಕ್ಕಳಿಗೆ ಹೀನಾಮಾನವಾಗಿ ಬೈಯ್ದು ಜಾತಿ ನಿಂದನೆ ಮಾಡಿದ್ದು ಈ ಹಿನ್ನಲೆಯಲ್ಲಿ ಚುನಾವಣೆ ರದ್ದಾಗಿರುತ್ತೆ. ಆದರೂ ಸಹ ನನ್ನ ಹೆಂಡತಿಯನ್ನು ನಮ್ಮ ಮನೆಗೆ ಕಳುಹಿಸಿಕೊಡದೆ ಮೇಲ್ಕಂಡವರು ಮತ್ತೆ ಅವರ ಜೊತೆ ಕರೆದುಕೊಂಡು ಹೋಗಿರುತ್ತಾರೆ, ಆದುದ್ದರಿಂದ ಅಪಹರಿಸಿರುವ ನನ್ನ ಹೆಂಡತಿಯನ್ನು ಪತ್ತೆ ಮಾಡಿ ನಮ್ಮ ಸ್ವಾದೀನಕ್ಕೆ ಕೊಡಿಸಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

Daily Crime Report of 05-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-01-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 5 ಸಾಮಾನ್ಯ/ವಾಹನ/ಮರಳು ಕಳವು ಪ್ರಕರಣಗಳು, 2 ಯು.ಡಿ.ಆರ್. ಪ್ರಕರಣಗಳು,   1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ವಂಚನೆ ಪ್ರಕರಣ ಹಾಗು 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.        


ಸಾಮಾನ್ಯ/ವಾಹನ/ಮರಳು ಕಳವು ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 379 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಪುಟ್ಟಮ್ಮ ಕೋಂ. ಲೇಟ್. ಸಿದ್ದಯ್ಯ, ಪಿ.. ಗಾಣದಾಳು ಗ್ರಾಮ, ಮಂಡ್ಯ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಪಾಂಡವಪುರ ತಾಲ್ಲೋಕು ವದೇಸಮುದ್ರ ಗ್ರಾಮದ ಸವರ್ೆ ನಂ 207/1ಬಿ ನಲ್ಲಿ 11 ಗುಂಟೆ ಜಮೀನು ಹೊಂದಿದ್ದು, ಸದರಿ ಜಮೀನಿನಲ್ಲಿ ಭತ್ತವನ್ನು ಬೆಳೆದಿದ್ದು, ದಿನಾಂಕ: 04-01-2013 ರಂದು ಭತ್ತದ ಬೆಳೆ ಕುಯಿದಿದ್ದು, ದಿನಾಂಕ 04-01-2013 ರಂದು ಸಾಯಂಕಾಲ 07-0 ಗಂಟೆಯಲ್ಲಿ ಆರೋಪಿಗಳಾದ ಪ್ರಭಾವತಿ ಮತ್ತು ಇತರೆ ಮೂರು ಜನರು, ಎಲ್ಲರೂ ಗಾಣದಾಳು ಗ್ರಾಮ, ಮಂಡ್ಯ ತಾಲ್ಲೋಕು ರವರುಗಳು ಭತ್ತದ ಬೆಳೆಯನ್ನು ಕದ್ದು ಸಾಗಿಸಿರುತ್ತಾರೆ, ತಾವು ಬೆಳೆದಿದ್ದ ಭತ್ತದ ಬೆಳೆಯನ್ನು ಕೊಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 379 ಐ.ಪಿ.ಸಿ. 

ದಿನಾಂಕ: 04-01-2013 ರಂದು ಪಿರ್ಯಾದಿ ಜ್ಞಾನ ಪ್ರಕಾಶ ಬಿನ್ ಎಂ. ಜೀವಿಯರ್, ಕ್ಯಾತುಂಗೆರೆ, ಮಂಡ್ಯ  ತಾ. ರವರುಗಳು ನೀಡಿದ ದೂರಿನ ವಿವರವೇನೆಂದರೆ ಕೆಎ-11-ಜೆ-8173 ರ ಸುಜುಕಿ ಸಮುರಾಯ್ ಮೋ/ಸೈನ್ನು  ತಮ್ಮ ಮನೆ ಮುಂದೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿರುವುದಾಗಿ ಇದರ ಅಂದಾಜು ಬೆಲೆ 13000-00 ರೂಗಳಾಗುತ್ತೆ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 5/13 ಕಲಂ. 379 ಐ.ಪಿ.ಸಿ.


ದಿನಾಂಕ: 04-01-2013 ರಂದು ಪಿರ್ಯಾದಿ ಬಿ.ಎಂ.ಸ್ವಾಮಿ ಬಿನ್. ಮಹದೇವಯ್ಯ, ಕ್ಯಾತನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದರಿಯಾ ದೌಲತ್ ಪಾಕರ್ಿಂಗ್ ಸ್ಥಳದಲ್ಲಿ ಕೆಎ-11-ಎಲ್-5019 ಟಿ.ವಿ.ಎಸ್. ಮೆಪೈಡ್ ನ್ನು ನಿಲ್ಲಿಸಿದ್ದು ದರಿಯಾದೌಲತ್ ಒಳಗೆ ಹೋಗಿ ವಾಪಸ್ಸು ಬಂದು ನೋಡಲಾಗಿ ಅಲ್ಲಿ ಇರುವುದಿಲ್ಲ ಯಾರೂ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 379 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಅಜರ್ುನ್ ಬಿನ್. ಹುಚ್ಚೇಗೌಡ, ವಾಸ ನಂ. 334, 2ನೇ ಕ್ರಾಸ್, ಕುವೆಂಪುನಗರ ರವರು ನೀಡಿದ ದೂರಿನ ವಿವರವೇನೆಂದರೆ ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 20,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

 5. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 379-188-353-506 ರೆ.ವಿ. 34 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ತಿಮ್ಮಯ್ಯ, ರೆವಿನ್ಯೂ ಇನ್ಸ್ಪೆಕ್ಟರ್, ಆತಗೂರು ಹೋ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎಂ.ಹೆಚ್.-09-ಎಎಲ್-880ರ ಚಾಲಕ ಮತ್ತು ಮಾಲೀಕ, ಅಲ್ಲಿಗೆ ಬಂದು ನಮ್ಮ ಜೊತೆ ಸುಮಾರು ಐದು ಗಂಟೆವರೆಗೆ ಸತಾಯಿಸಿ ಜೆಸಿಬಿ ತೆಗೆದುಕೊಂಡು ಹೋಗದಂತೆ ಬೆದರಿಕೆ ಹಾಕಿ, ಸಕರ್ಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾನೆ. ನಂತರ ಅದೇ ಜೆಸಿಬಿಯನ್ನು ಅದರ ಚಾಲಕನ ಸಹಾಯದಿಂದ ಕೊಪ್ಪ ಪೊಲೀಸ್ ಠಾಣೆ ಬಳಿ ತಂದು ಠಾಣಾಧಿಕಾರಿಯವರಿಗೆ ಈ ಜೆಸಿಬಿಯನ್ನು ಮಾಲೀಕನಿಗೆ ದಂಡ ವಿಧಿಸುವವರೆಗೆ ತಮ್ಮ ವಶದಲ್ಲಿ ಇಟ್ಟುಕೊಳ್ಳಲು ಕೋರಿ ಪತ್ರ ನಿಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 2/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಮಹಾದೇವಿ ಕೋಂ. ಕೃಷ್ಣೇಗೌಡ, ಕರೋಟಿ ಗ್ರಾಮ, ಕಸಬಾ ಹೋ|| ಕೆ.ಆರ್.ಪೇಟೆ ತಾ|| ರವರು ನೀಡಿದ ದೂರು ಏನೆಂದರೆ ನೇತ್ರಾವತಿ ಬಂಡಿಹೊಳೆ ಗ್ರಾಮ || ರವರು ಹೊಟ್ಟೆನೋವು ಬಾಧೆಯನ್ನು ತಾಳಲಾರದೆ ಸಂಜೆ 04-00 ಗಂಟೆ ಸಮಯದಲ್ಲಿ ನೇಣು ಹಾಕಿಕೊಂಡಿದ್ದು ನಂತರ ಆಕೆಯನ್ನು ಪ್ರೀತಿ ಮತ್ತು ಯತೀಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ನನ್ನ ಮಗಳು ಮೃತಪಟ್ಟಿರುತ್ತಾಳೆ. ಆಕೆಯ ಸಾವಿನಲ್ಲಿ ಯಾವುದೇ ರೀತಿಯ ಅನುಮಾನವಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ವೆಂಕಟರಮಣ ಬಿನ್. ವೆಂಕಟಯ್ಯ, ಧನಗೂರು ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಮದರೆ ವೆಂಕಟೇಶ ಕೂಲಿಕೆಲಸ, ಧನಗೂರು ಗ್ರಾಮ, ಮಳವಳ್ಳಿ ತಾ. ರವರು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಕ್ರಿಮಿನಾಶಕ ಔಷಧಿ ಕುಡಿದು ಒದ್ದಾಡುತ್ತಿದ್ದವನನ್ನು 108 ಅಂಬ್ಯೂಲೆನ್ಸ್ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 420 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಬಿ.ಶಿವಕುಮಾರ್ ಬಿನ್. ಲೇಟ್. ಸಿ.ಬೋರೇಗೌಡ, ಅಧ್ಯಕ್ಷರು, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಕೆನೆರಾ ಬ್ಯಾಂಕ್ ಶಾಖೆಯ ಕರೆಂಟ್ ಅಕೌಂಟ್ ನಂ. 0527201371 ರ ಶ್ರೀ ಅಂಬೇಡ್ಕರ್ ಎಸ್ಸಿ/ಎಸ್ಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ,  ಕುಣಿಗಲ್ ರವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ನೀವು ಕೊಟ್ಟಿದ್ದ ಚೆಕ್ ಕಳೆದು ಹೋಗಿದೆ, ಮತ್ತೊಂದು ಚೆಕ್ ಕೊಡಿ ಎಂದು ಕೇಳಿದಾಗ ಕಳೆದುಹೋಗಿರುವ ಚೆಕ್ನ ಬಗ್ಗೆ ಪರಿಶೀಲಿಸಲಾಗಿ ದಿನಾಂಕ: 31-10-2012 ರಂದು ಸದರಿ ಚೆಕ್ನಿಂದ ಕುಣಿಗಲ್ನ ಕೆನರಾ ಬ್ಯಾಂಕ್ ಶಾಖೆಯ ಕರೆಂಟ್ ಅಕೌಂಟ್ ನಂ 0527201371 ರಲ್ಲಿ ಶ್ರೀಅಂಬೇಡ್ಕರ್ ಎಸ್ಸಿ/ಎಸ್ಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುಣಿಗಲ್ ಇವರ ಖಾತೆಗೆ 10,000-00 ರೂ ಹಣ ಜಮಾ ಆಗಿರುವುದಾಗಿ ತಿಳಿದುಬಂದಿದ್ದು ಸದರಿಯವರು ಹಣ ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾರೆಂದು ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

Daily Crime Report of 04-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-04-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಕ್ರಮ ಮರಳು ಕಳವು ಪ್ರಕರಣ,  1 ಕನರ್ಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ ಪ್ರಕರಣ ಹಾಗು 18 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ಯು.ಡಿ.ಆರ್. ಪ್ರಕರಣ :

ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. .ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ರಾಘವೇಂದ್ರ ಬಿನ್. ಕೆಂಪೇಗೌಡ, ಕೋಮನಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ    ಜಮೀನಿನ ಬಳಿ ಇರುವ ಕೆಂಪೇಗೌಡರ ಕಟ್ಟೆಯಲ್ಲಿ ಒಂದು ಶವವು ತೇಲುತ್ತಿದ್ದು, ಹತ್ತಿರ ಹೋಗಿ ನೋಡಲಾಗಿ ಗಂಡಸಿನ ಶವವಾಗಿದ್ದು ವಯಸ್ಸು ಸುಮಾರು 30-35 ಆಗಿದ್ದು, ಕೋಲುಮುಖ, ಕುರುಚಲುಗಡ್ಡ, ತುಂಬುತೋಳಿನ ಶಟರ್್, ಬಿಳಿಪ್ಯಾಂಟು ಧರಿಸಿರುತ್ತಾನೆ. ಈತನು ಕೆರೆಯಲ್ಲಿ ನೀರು ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆ. ಆದ ಕಾರಣ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 6/13 ಕಲಂ. 143-341-323-504-506 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. (1) ಮತ್ತು (10) ಎಸ್.ಸಿ./ಎಸ್.ಟಿ. ಆಕ್ಟ್.

ದಿನಾಂಕ: 04-01-2013 ರಂದು ಪಿರ್ಯಾದಿ ಜಯರಾಮಯ್ಯ ಬಿನ್. ಲೇಟ್.ದೊಡ್ಡಕರಿಯಯ್ಯ, 55 ವರ್ಷ, ಪರಿಶಿಷ್ಟ ಜಾತಿ, ದೇವೇಗೌಡನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಹೆಂಡತಿ ಜಯಮ್ಮಳು ಚಿಕ್ಕಾಡೆ ಗ್ರಾಮ ಪಂಚಾಯ್ತಿಯ ಸದಸ್ಯರಾಗಿದ್ದು ಚಿಕ್ಕಾಡೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಹಾಗೂ ಉಪಧ್ಯಕ್ಷರ ಚುನಾವಣೆಗೆ ಭಾಗವಾಹಿಸಲು ಮದ್ಯಾಹ್ನ 12-00 ಗಂಟೆಯಲ್ಲಿ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಚಿಕ್ಕಾಡೆ. ಗ್ರಾಮದ ವಿಜೇಯೇಂದ್ರ  ಬಿನ್ ನಂಜೇಗೌಡ @ ಶಿವಣ್ಣ, ನಾಗೇಂದ್ರ, ಸಿ.ಹೆಚ್.ಗಿರೀಶ್, ಸಿ.ಎಂ.ಕಿರಣ್, ಬಾಲಕೃಷ್ಣ, ಚೇತನ್ ಹಾಗೂ ದೇವೇಗೌಡನಕೊಪ್ಪಲು ಗ್ರಾಮದ ರಾಘವೇಂದ್ರ.ಅವಿನಾಶ್.ಇವರುಗಳು ನನ್ನ ಹೆಂಡತಿ ಓಟು ಮಾಡಲು ಒಳಗೆ ಹೊಗಲು ಬಿಡದೆ ಎಳೆದಾಡಿ ಹೊರಗೆ ತಳ್ಳಿ ನನ್ನನ್ನು ನೋಡಿ ಹೊಲೆಯ ನನ್ನ ಮಗನೆ, ಬೋಳಿ ಮಗನೆ ಸೂಳೆಮಗನೆ ನೀನು ಇದ್ದರೆ ತಾನೇ ನಿನ್ನ ಹೆಂಡತಿ ಓಟು ಮಾಡುವುದು ನಿಮ್ಮನ್ನೆ ಮುಗಿಸುತ್ತೇನೆ ಎಂದು ಬೈದು ಜಾತಿ ನಿಂದನೆ ಮಾಡಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಮರಳು ಕಳವು ಪ್ರಕರಣ :


ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 188-379 ಐ.ಪಿ.ಸಿ.

ದಿನಾಂಕ: 04-01-2013 ರಂದು ಪಿರ್ಯಾದಿ ಎಂ.ಹೆಚ್. ಸಿದ್ದೇಗೌಡ ಬಿನ್ ಕೆಂಪೇಗೌಡ, ಗ್ರಾಮ ಲೆಕ್ಕಾಧೀಕಾರಿ, ಎಸ್.ಐ ಹಾಗಲಹಳ್ಳಿ ವೃತ್ತ, ಮದ್ದೂರು ತಾ: ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ.ಎ 05 ಸಿ 3804 ರ ಲಾರಿ ಮಾಲಿಕ 2] ಲಾರಿ ಚಾಲಕ ಹೆಸರು ಮತ್ತು ವಿಳಾಸ ತಿಳಿಯ ಬೇಕಾಗಿರುತ್ತೆ, ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂ ್ಲಘನೆ ಮಾಡಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣೆ ಮಾಡುತ್ತಿದ್ದು  ಇಬ್ಬರು ಪರಾರಿಯಾಗಿರುತ್ತಾರೆ ಸದರಿಯವರ ಮೇಲೆ ಕೇಸು ದಾಖಲು ಮಾಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕರ್ನಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ ಪ್ರಕರಣ : 


ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 4, 5, 8, 9 ಮತ್ತು 11 [ಡಿ] ಕನರ್ಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964.

       ದಿನಾಂಕ: 04-01-2013 ರಂದು ಪಿರ್ಯಾದಿ ಎಂ. ಮಂಜುನಾಥ್, ಆರಕ್ಷಕ ಉಪ ನಿರೀಕ್ಷಕರು, ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಮಂಡ್ಯ ಸಿಟಿ ಹೊಳಲು ಸರ್ಕಲ್ ಕಡೆಯಿಂದ ವೀರಾಂಜನೇಯ ಎಂಬ ಹೆಸರಿನ ಕೆಎ-11-9770 ರ 407 ಗೂಡ್ಸ್ ಟೆಂಪೋದಲ್ಲಿ ಎಮ್ಮೆಗಳನ್ನು ತುಂಬಿಕೊಂಡು ಬರುತ್ತಿದ್ದಾನೆ ಅವುಗಳನ್ನು ರಕ್ಷಿಸಿ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳ ಜೊತೆ ಮತ್ತು ಪಂಚರುಗಳೊಂದಿಗೆ ಠಾಣೆಯ ಮುಂದಿನ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಸಂಜೆ 06-15 ಗಂಟೆಯ ಸಮಯದಲ್ಲಿ ನಿಂತಿದ್ದಾಗ ನಂದಾ ಸರ್ಕಲ್ ಕಡೆಯಿಂದ ಕೆಎ-11-9770 ರ 407 ಗೂಡ್ಸ್ ಟೆಂಪೋ ಸುತ್ತಲೂ ಟಾರ್ಪಲ್ ಕಟ್ಟಿಕೊಂಡು ಬಂದದ್ದನ್ನು ನಾವುಗಳೆಲ್ಲರೂ ಒಟ್ಠಾಗಿ ಸೇರಿ ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಲಾಗಿ ಒಂಬತ್ತು ಎಮ್ಮೆಗಳನ್ನು ತುಂಬಿಕೊಂಡು ಸಾಗಣೆ ಮಾಡುತ್ತಿದುದ್ದು ಕಂಡು ಬಂತು ಆರೋಪಿಗಳಾದ 1 ಜಗದೀಶ ಬಿನ್ ಮಲ್ಲಯ್ಯ ಶೆಟ್ಟಿ, 29 ವರ್ಷ, ಬಣಜಿಗ ಶೆಟ್ಟಿ, ಜನಾಂಗ, ಟೆಂಪೋ ಚಾಲಕ  ವಾಸ ಕೆ. ಗೌಡಗೆರೆ, ಕೆರಗೋಡು  ಹೋಬಳಿ ಮಂಡ್ಯ ತಾಲ್ಲೋಕ್ 2] ಸಜ್ಜು  ಗುತ್ತಲು  ಮಂಡ್ಯ ಸಿಟಿ  ಪೂರ್ಣ ವಿಳಾಸ ತಿಳಿಯಬೇಕಾಗಿದೆ ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿರುತ್ತೆ.

Daily Crime Report of 03-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-01-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ಹುಡುಗಿ ಕಾಣೆಯಾದ ಪ್ರಕರಣ,  1 ಕಳ್ಳತನ ಪ್ರಕರಣ,    1 ವಂಚನೆ ಪ್ರಕರಣ ಹಾಗು 17 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿಆರ್. ನಂ. 01/13 ಕಲಂ. ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ನಿಂಗಶೆಟ್ಟಿ ಬಿನ್. ದೊಡ್ಡಣ್ಣಶೆಟ್ಟಿ, ಅಣ್ಣಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ದೊಡ್ಡಣ್ಣಶೆಟ್ಟಿ, ಅಣ್ಣಹಳ್ಳಿ ಗ್ರಾಮ ರವರು ಯಾವುದೋ ಪ್ಲಾಸ್ಟಿಕ್ ಹಗ್ಗದಿಂದ ತನಗೆ ತಾನೇ ನೇಣು ಹಾಕಿಕೊಂಡು ಒದ್ದಾಡುತ್ತಿದ್ದಾಗ ನನ್ನ ಅಣ್ಣ ಮರಿನಾಗಶೆಟ್ಟಿ ಹಾಗೂ ನನ್ನ ಅತ್ತಿಗೆ ಯಶೋಧಮ್ಮ ಇಬ್ಬರೂ ಸೇರಿ ಹಗ್ಗದಿಂದ ಬಿಡಿಸಿ ನೀರು ಬಿಟ್ಟಿರುತ್ತಾರೆ. ಅಷ್ಟರಲ್ಲಿ ನಾನು ಕೂಡ ಮನೆಯಿಂದ ಎದ್ದು ಬಂದು ನೋಡಲಾಗಿ ನಮ್ಮ ತಂದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 4/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ಎಸ್.ಆರ್. ಅರವಿಂದಬಾಬು, ಕಾರ್ಯನಿವರ್ಾಹಕ ಅಧಿಕಾರಿ, ಶ್ರೀ ಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಕೆಎ-01 ಬಿ. 2657 ರ ಗೂಡ್ಸ್ ಆಟೋ ಚಾಲಕ ಮತ್ತು ಇತರೆ ಇಬ್ಬರು ಅಂಗಡಿ ಮೇಲ್ಭಾಗದಲ್ಲಿರುವ ಹೆಂಚನ್ನು ತೆಗೆದು ಒಳಗೆ ಹೋಗಿ ಇಲ್ಲಿದ್ದ ಮರದ ತುಂಡುಗಳನ್ನು ಕಳವು ಮಾಡಿ ಕೆಎ-01 ಬಿ. 2657 ರ ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದಾರೆಂದು ಮತ್ತು ತಮ್ಮನ್ನು ನೋಡಿ ಆಟೋದ ಡ್ರೈವರ್ ಮತ್ತು ಇತರೆ ಇಬ್ಬರು ಓಡಿ ಹೋದರೆಂದು ದೇವಾಲಯದ ಅಟೆಂಡರ್ ವೀರೇಗೌಡ ರವರು ಪಿರ್ಯಾದಿಯವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ ಮೇರೆಗೆ ಪಿರ್ಯಾದಿಯವರು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ಗೂಡ್ಸ್ ಆಟೋದಲ್ಲಿ ಮರದ ತುಂಡುಗಳನ್ನು ತುಂಬಿಸಿ ನಿಲ್ಲಿಸಿದ್ದು ಕಂಡು ಬಂದಿರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಂಚನೆ ಪ್ರಕರಣ :

ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 413-420-114-506 ಐ.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ಪುಟ್ಟಲಕ್ಷ್ಮಮ್ಮ ಕೊಂ. ಕೃಷ್ಣೇಗೌಡ, ಕತ್ತರಘಟ್ಟ ಗ್ರಾಮ, ಕೆ.ಅರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ವೆಂಕಟೇಗೌಡ @ ಗಿರೀಗೌಡ ಇತರೆ 4 ಜನರು ನನ್ನ ತಂದೆಯ ಮನೆಯ ಮೇಲೆ ಇರುವ ಆಸ್ತಿಯ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶದಿಂದ ಹಕ್ಕು ನಿವೃತ್ತಿ ಪತ್ರವನ್ನು ಸೃಷ್ಟಿಸಿಕೊಂಡು ಸದರಿ ಪತ್ರದಲ್ಲಿ ನನಗೆ 50 ಸಾವಿರ ಸಂದಾಯವಾಗಿರುತ್ತದೆ ಎಂದು ಸುಳ್ಳು ಬರೆಸಿರುತ್ತಾರೆ. ಸದರಿ ಪತ್ರ ಬರೆಯಲು ಸಾಕಮ್ಮನ ಗಂಡ ಬೋರೆಗೌಡ ಕುಮ್ಮಕ್ಕು ನೀಡಿದ್ದು ಮತ್ತು ನಮ್ಮ ಸಹೋದರಿಯರಾದ ತಿಮ್ಮಮ,್ಮ ಸರೋಜಮ್ಮ ಮತ್ತು ಜಾನಕಮ್ಮರವರಿಗೆ ವೈದ್ಪಾಪ್ಯ ವೇತನ ಕೊಡಿಸುತ್ತೇನೆಂದು ಮೋಸ ಮಾಡಿ ನಿವೃತ್ತಿ ನೊಂದಣಿ ಪತ್ರಕ್ಕೆ ಸಹಿ ಮಾಡಿಸಿರುತ್ತಾರೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

Daily Crime Report of 02-01-2013




ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕನರ್ಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ ಅಧಿನಿಯಮ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  1 ಮನೆ ಕಳ್ಳತನ ಪ್ರಕರಣ,  1 ಅಪಹರಣ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 



ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ ಅಧಿನಿಯಮ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 447 ಐಪಿಸಿ & 192(ಎ) ಕನರ್ಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್-1964.

ದಿನಾಂಕ: 02-01-2013 ರಂದು ಪಿರ್ಯಾದಿ ಸಿ ಪ್ರಸನ್ನ ಕುಮಾರ್, ಬಿನ್. ಎಸ್.ಚಲುವಯ್ಯ, 46 ವರ್ಷ, ವಕ್ಕಲಿಗರು, ರಾಜಸ್ವ ನಿರೀಕ್ಷಕರು, ಬೆಳಗೊಳ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಎನ್ ಸ್ವಾಮೀಗೌಡ ಬಿನ್ ನಂಜೇಗೌಡ, ಕೆ.ಆರ್.ಸಾಗರ ರವರು ಹೊಂಗಹಳ್ಳಿ ಸವರ್ೆ ನಂಬರ್297 ರ ಸಕರ್ಾರಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಕಟ್ಟಡ ನಿಮರ್ಿಸುತ್ತಿದ್ದು ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ


ಯು.ಡಿ.ಆರ್. ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

  ದಿನಾಂಕ: 02-01-2013 ರಂದು ಪಿರ್ಯಾದಿ ಬೆಟ್ಟಸ್ವಾಮಿ ಬಿನ್ ಲೇ ತಿಮ್ಮಯ್ಯ, 40ವರ್ಷ,ಹಂಚಿಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗಳು ಅಂಬಿಕಾ ಬಿನ್. ಬೆಟ್ಟಸ್ವಾಮಿ, 14ವರ್ಷ, ಹಂಚಿಪುರ ಗ್ರಾಮರವರು ಹೊಟ್ಟೆನೋವು ತಾಳಲಾರದೆ ಕ್ರಿಮಿನಾಶಕವನ್ನು ಕುಡಿದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ನಾಗರಾಜ ಮೂತರ್ಿ ಬಿನ್. ವೆಂಕಟಯ್ಯ, ರಾಮಕೃಷ್ಣ ನಗರ, ಮೈಸೂರು ರವರು ನೀಡಿದ ದೂರು ಏನೆಂದರೆ ಅವರ ತಾಯಿ ಮಂಚಮ್ಮ ಕೋಂ.  ಲೇ|ವೆಂಕಟಯ್ಯ, 70 ವರ್ಷ, ಗೋಪಾಲಪುರ ಗ್ರಾಮರವರು ವಾಯು ವಿಹಾರಕ್ಕೆಂದು ಬಂದವರು ವಾಪಸ್ ಮನೆಗೆ  ಬಾರದೆ ಇದ್ದು ಎಲ್ಲಾ ಕಡೆ  ಹುಡುಕಾಡಲಾಗಿ ಈ ದಿನ ಶ್ರೀರಂಗಪಟ್ಟಣದ ಉತ್ತರ  ಕಾವೇರಿ ನದಿಯಲ್ಲಿ ಶವವು ತೇಲುತ್ತಿದ್ದು, ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ಮಂಜುನಾಥ್ ಬಿನ್. ಲೇಟ್. ಶಿವಣ್ಣ, ಮಹದೇಶ್ವರಪುರ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಒಬ್ಬ ಅಪರಿಚಿತ ಹೆಂಗಸಿನ ಶವ, ಸುಮಾರು 25 ರಿಂದ 30 ವರ್ಷ, ಗುರುತು ಪತ್ತೆಯಾಗಿರುವುದಿಲ್ಲ, ವಿ.ಸಿ ನಾಲೆಯಲ್ಲಿ ಸ್ನಾನ ಮಾಡುವಾಗ ಅಥವಾ ಕಾಲುವೆಯಲ್ಲಿ ನೀರು ತೆಗೆದುಕೊಳ್ಳುವ ಸಮಯದಲ್ಲೋ ಕಾಲು ಜಾರಿ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತದೆ.



ಮನೆ ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 454-380 ಐ.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ಡಿ.ಆರ್.ಲೋಕೇಶ್ಕುಮಾರ್,  ಗ್ರಾಮ ಪಂಚಾಯಿತಿ ಸದಸ್ಯರು, ದೊಡ್ಡಮುಲಗೂಡು ಗ್ರಾಮ, ಟಿ.ನರಸೀಪುರ ತಾಲ್ಲೋಕು, ಹಾಲಿ ವಾಸ ನಂ.2888, 6ನೇ ಕ್ರಾಸ್, ಗಾಂಧಿನಗರ, ಮಂಡ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-01-13 ರಂದು 3-30 ರಿಂದ 6-00 ಪಿಎಂ/ ನಂ. 2888, 6ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯವರ ಅಜ್ಜಿ ಚನ್ನಮ್ಮಳು ಬಾಗಿಲು ಹಾಕಿಕೊಂಡು ಮಲಗಿದ್ದ ಮನೆಯ ಹಿಂಬಾಗಿಲನ್ನು ತಳ್ಳಿ ಒಳಗಡೆ ಬಂದು ತಮ್ಮ ಅಜ್ಜಿ ಮಲಗಿದ್ದಾಗ ಅವಳಿಗೆ ಗೊತ್ತಿಲ್ಲದಂತೆ ಎರಡು ಕೈಗಳಲ್ಲಿದ್ದ ಚಿನ್ನದ ಬಳೆಗಳನ್ನು ಮತ್ತು ಕುತ್ತಿಗೆಯಲ್ಲಿದ್ದ ಎರಡೆಳೆ ಮಾಂಗಲ್ಯ ಸರವನ್ನು ಬಿಚ್ಚಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಎರಡು ಬಳೆಗಳ ಒಟ್ಟು ತೂಕ 30 ಗ್ರಾಂ ಇರುತ್ತದೆ. ಎರಡೆಳೆ ಚಿನ್ನದ ಮಾಂಗಲ್ಯ ಸರವು ಹಗ್ಗದ ಮಾದರಿಯಿಂದ ಕೂಡಿದ್ದು ಇದರಲ್ಲಿ ಒಂದು ಚಿನ್ನದ ತಾಳಿ, ಕರಿಮಣಿ ಮತ್ತು ಹವಳಗಳು ಇರುತ್ತವೆ. ಇದರ ತೂಕ 60 ಗ್ರಾಂ ಆಗಿರುತ್ತದೆ. ಮೇಲ್ಕಂಡ ಚಿನ್ನದ ಆಭರಣಗಳ ಒಟ್ಟು ಬೆಲೆ ಸುಮಾರು 2,50,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 




Daily Crime Report of 01-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-01-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳವು ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಕೊಲೆ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   

ಕಳವು ಪ್ರಕರಣ :

ನಾಗಮಂಗಲ ಪುರ ಪೊಲೀಸ್ ಠಾಣೆ ಮೊ.ನಂ. 1/12 ಕಲಂ. 41 ಕ್ಲಾಸ್ (ಡಿ), 102 ಸಿ.ಆರ್.ಪಿ.ಸಿ ರೆ/ವಿ 379 ಐ.ಪಿ.ಸಿ.

ದಿನಾಂಕ: 01-01-2013 ರಂದು ಪಿರ್ಯಾದಿ ಟಿ.ಲಿಂಗರಾಜು, ಸಿ.ಹೆಚ್.ಸಿ 297, ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಮತ್ತು ಸಿಪಿಸಿ-311 ರವರು ಗಸ್ತಿನಲ್ಲಿದ್ದಾಗ ನಾಗಮಂಗಲ ಟೌನ್ನ ಮೈಸೂರು ರಸ್ತೆಯ ಬಳಿಯ ಜ್ಯುವೆಲರಿ ಶಾಪ್ ಹತ್ತಿರ ಒಬ್ಬ ಆಸಾಮಿ ಅನುಮಾನಾಸ್ಪದವಾಗಿ ವತರ್ಿಸುತ್ತಿದ್ದರಿಂದ ವಿಚಾರಿಸಲಾಗಿ ಅನುಮಾನ ಬಂದು ಅಂಗ ಶೋಧನೆ ಮಾಡಿದಾಗ, ಆತನ ಪ್ಯಾಂಟ್ ಜೇಬಿನಲ್ಲಿ ತುಂಡಾದ ಎರಡು ಎಳೆಯ ಚಿನ್ನದ ಚೈನು ಸಿಕ್ಕಿರುತ್ತೆ, ನಂತರ ಸದರಿ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ನಿವೇದಿಸಿಕೊಂಡಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  



ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 2/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 01-01-2013 ರಂದು ಪಿರ್ಯಾದಿ ಕೆಂಪಮ್ಮ ಕೋಂ. ಪುಟ್ಟಮಾದಪ್ಪ, ಮೆಳ್ಳಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಗಂಡ ಮನೆಯಿಂದ ಹೊರಗೆ ಹೋದವರು    ಮನೆಗೆ ವಾಪಸ್ಸು ಬಂದಿರುವುದಿಲ್ಲ ಈವರಗೆ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕೊಲೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 302-201 ಐ.ಪಿ.ಸಿ.

ದಿನಾಂಕ: 01-01-2013 ರಂದು ಪಿರ್ಯಾದಿ ನಿಂಗೇಗೌಡ.ಡಿ.ಎಂ. ಬಿನ್. ಲೇಟ್. ಮರೀಗೌಡ, ದೊಡ್ಡಬ್ಯಾಡರಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಯಾವುದೋ ಹುಡುಗಿಯ ಶವ ಕಳ್ಳಿ ಬೇಲಿಯ ಮರೆಯಲ್ಲಿ ಅಂಗಾತವಾಗಿ ಬಿದ್ದಿದ್ದು ಮೈ ಮೇಲೆ ಕಪ್ಪು ಟೀ ಶಟರ್್, ಕಪ್ಪು ಪ್ಯಾಂಟ್ ತೊಟ್ಟಿದ್ದು ಕೇಸರಿ ಕಲ್ಲರ್ ದವಣಿ. [ವೇಲ್] ಬಿದ್ದಿದ್ದು ಕತ್ತಿನಲ್ಲಿ ಕಪ್ಪು ಮಣಿ, ಕಿವಿಯಲ್ಲಿ ರಿಂಗು, ಕಾಲಿನಲ್ಲಿ ನೀಲಿಗೆರೆಯ ಸಾಕ್ಸ್, ತೊಟ್ಟಿದ್ದು ಬಾಯಿಯಲ್ಲಿ ಹಾಗೂ ಮೂಗಿನಲ್ಲಿ ನೊರೆ ಬರುತಿತ್ತು.ಈ ಹುಡುಗಿ ಸುಮಾರು 18 ರಿಂದ 20 ವರ್ಷದಂತಿದೆ. ಈ ಶವವನ್ನು ನೋಡಿದರೆ ಯಾರೋ ದುಷ್ಕಮರ್ಿಗಳು, ಯಾವುದೋ ಉದ್ದೇಶದಿಂದ ಎಲ್ಲೋ ಕೊಲೆ ಮಾಡಿ ದೇವಸ್ಥಾನದ ಬಳಿಯ ವಿ.ಸಿ.ಲಿಂಕ್ ಚಾನಲ್ ಬಳಿಯ ಕಳ್ಳಿ ಬೇಲಿಯ ಒಳಗಡೆ ತಂದು ಬಿಸಾಕಿರುವಂತೆ ಕಂಡು ಬಂದಿರುತ್ತೆ. ಈ ಶವವನ್ನು ಒಂದು, ಎರಡು ದಿನಗಳ ಹಿಂದೆ ಹಾಕಿರುವಂತೆ ಕಂಡು ಬಂದಿರುತ್ತೆ. ಈ ಶವ ಅಪರಿಚಿತ ಹುಡುಗಿಯಾಗಿದ್ದು, ಯಾರು ಏನು ಅಂತ ಗೊತ್ತಿಲ್ಲ. ಎಂದು  ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣಗಳು  :

1. ಮದ್ದೂರು ಪೊಲೀಸ್ ಠಾಣೆ ಯುಡಿಆರ್..ನಂ. 01/13 ಕಲಂ. 174 ಸಿಆರ್.ಪಿ.ಸಿ.    

ದಿನಾಂಕ: 01-01-2013 ರಂದು ಪಿರ್ಯಾದಿ ರಾಜು ಬಿನ್. ಜಾಣೇಗೌಡ, ಬೋರಾಪುರ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಕವಿತಾಳು ದಿನಾಂಕ.20-12-12ರಂದು ಸಂಜೆ4-30ರಲ್ಲಿ ತನ್ನ ಹೆಂಡತಿ ತವರು ಮನೆಯಲ್ಲಿ ಚಕ್ಕುಲಿಯನ್ನು ಸುಡುತ್ತಿದ್ದಾಗ ಮನೆಯಲ್ಲೇ ಆಟ ವಾಡುತ್ತಿದ್ದ ನನ್ನ ಮಗು ಪೂವರ್ಿಕ, 7 ತಿಂಗಳು ಪಾಪು ಒಲೆಯ ಹತ್ತಿರ ಬಂದು ಬಾಣಲಿಯನ್ನು ಆಕಸ್ಮಿಕವಾಗಿ ಕೈಯಿಂದ ಹಿಡಿದಾಗ ಆ ಬಾಣಲಿಯಲ್ಲಿ ಕಾದಿದ್ದ ಎಣ್ಣೆ ಮಗುವಿನ ಮೈ ಮೇಲೆ ಬಿದ್ದು ಗಾಯವಾಗಿದ್ದ ಪೂವರ್ಿಕಳನ್ನು ಚಿಕಿತ್ಸೆಗಾಗಿ ಮದ್ದೂರು & ಮಂಡ್ಯ ಜಿಲ್ಲಾಸ್ಪತ್ರೆಗಳಲ್ಲಿ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿ ಯಾಗದೇ ದಿನಾಂಕ.1-1-2013ರಂದು ಬೆಳಿಗ್ಗೆ 10-45 ಗಂಟೆಯಲ್ಲಿ ಮೃತಪಟ್ಟಿರುತ್ತಾಳೆ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/12 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 01-01-2013 ರಂದು ನಟೇಶ ಬಿನ್. ಲೇಟ್. ಲಕ್ಕೇಗೌಡ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಅಂಗಡಿ ತೆಗೆಯಲು ಬಂದಾಗ ಯಾರೋ ಒಬ್ಬ ಅಪರಿಚಿತ ಗಂಡಸು ಮೃತಪಟ್ಟಿದ್ದು ಸುಮಾರು 40-45 ವರ್ಷ ವಯಸ್ಸಾಗಿದ್ದು ಸುಮಾರು ಒಂದು ವರ್ಷದಿಂದ ದೇವಸ್ಥಾನ ಹೇಮಗಿರಿ ಇತ್ಯಾದಿ ಕಡೆಗಳಲ್ಲಿ ಬಿಕ್ಷೆ ಮಾಡಿಕೊಂಡು ಇದ್ದು     ದಿನಾಂಕ: 31-12-2012 ರಂದು ರಾತ್ರಿ ವೇಳೆಯಲ್ಲಿ ಮಲಗಿದ್ದಲ್ಲೇ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 13-12-2012



ROAD SAFETY WEEK - MARATHON



ROAD SAFETY WEEK MARATHON ON 04-01-2013 










MANDYA DISTRICT POLICE RTI 20124(1) A AND 4(1) B

IMPORTANT DETECTION OF MANDYA RURAL CIRCLE POLICE STAFF

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ ದಿಃ 01.09.2012

ಮಂಡ್ಯ ಗ್ರಾಮಾಂತರ ವೃತ್ತದ ಅಪರಾದ ಪತ್ತೆ ದಳದಿಂದ ಕೊಲೆ ಮಾಡಿದ ಆರೋಪಿಗಳನ್ನು ಮತ್ತು ಮಂಡ್ಯ ನಗರದಲ್ಲಿ ಕನ್ನ ಕಳುವು ಮಾಡಿದ್ದ ಆರೋಪಿಗಳ ಬಂಧನ ಮತ್ತು ರೂ 1,50,000/- ಬೆಲೆಬಾಳುವ ವಸ್ತುಗಳ ವಶ ಮತ್ತು 2 ಘೋರ ಕೇಸುಗಳ ಪತ್ತೆ.


ದಿನಾಂಕಃ02-8-2012 ರ ಬೆಳಿಗ್ಗೆ 6-30 ಗಂಟೆಯಲ್ಲಿ ಹುಲಿವಾನ ಗ್ರಾಮದ ಉಮೇಶ ರವರ ಕಬ್ಬಿನ ಗದ್ದೆಯ ಪಕ್ಕ ಬಾಳಾದಿಟ್ಟು ಕಾಲುವೆಯಲ್ಲಿ ಅಪರಿಚಿತ ಗಂಡಸಿನ ಶವ ಬೆಂಕಿಯಿಂದ ಉರಿಯುತ್ತಿದ್ದು ಹೋಗಿ ನೋಡಲಾಗಿ ಸುಮಾರು 25 ರಿಂದ 28 ರ ವಯಸ್ಸಿನ ಗಂಡಸಿನ ಶವವಾಗಿರುತ್ತೆದೆ. ಯಾರೋ ದುಷ್ಕರ್ಮಿಗಳು ಸದರಿ ಗಂಡಸನ್ನು ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟಿದ್ದು ಶವ ಹೊಗೆಯಿಂದ ಕೊಡಿರುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಚಂದ್ರು ಎಂಬುವರು ನೀಡಿದ ದೂರಿನ ಮೇರೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಮೃತ ವ್ಯಕ್ತಿಯು ಅರಕೆರೆ ಹೋಬಳಿ, ದೇವರಗುಡ್ಡನಕೊಪ್ಪಲು ಗ್ರಾಮದ ಚಿಕ್ಕಸಿದ್ದಯ್ಯನ ಮಗ ನಂಜುಂಡ ಎಂದು ತನಿಖೆಯಿಂದ ತಿಳಿದು ಬಂದಿರುತ್ತದೆ.

ಈ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ. ಜಿ.ಕೃಷ್ಣಮೂರ್ತಿ, ಎ.ಎಸ್.ಐ, ಜಾರ್ಜ್ ವಿಲ್ಸನ್ ಹಾಗೂ ಇತರೆ ಸಿಬ್ಬಂದಿಗಳು ದಿನಾಂಕ: 30-08-2012 ರಂದು ಈ ಕೇಸಿನ ಆರೋಪಿಗಳಾದ 1. ಜಯಶಂಕರ 2. ಸೋಮ @ ಸೋಮಶೇಖರ ರವರುಗಳನ್ನು ಬಂಧಿಸಿ ಈ ಕೇಸಿಗೆ ಸಂಬಂಧಪಟ್ಟಂತೆ ಮೃತನಿಂದ ತೆಗೆದುಕೊಂಡು ಹೋಗಿದ್ದ ರೂ, 20,000 ಗಳನ್ನು 2 ನೇ ಆರೋಪಿ ಸೋಮ @ ಸೋಮಶೇಖರ ತನ್ನ ಇಂಡಿಯನ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾಗಿ ತಿಳಿದು ಬಂದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.

ಈ ಮೆಲ್ಕಂಡ ಕೊಲೆ ಪ್ರಕರಣವಲ್ಲದೆ ಮೇಲ್ಕಂಡ 2 ಜನ ಆರೋಪಿಗಳು ಮತ್ತೊಬ್ಬ ಆರೋಪಿ 3 ಶಿವು @ ಶಿವ ಶಂಕರ ಎಂಬುವನೊಡನೆ ಸೇರಿ ಜೂನ್ 2012 ರಲ್ಲಿ ಮಂಡ್ಯ ನಗರದ ಗಾಂದಿನಗರ, 6ನೇ ಕ್ರಾಸ್ನಲ್ಲಿ ಶ್ರೀ. ಚಂದ್ರಶೇಖರ್ ಎಂಬುವರ ಮನೆಯ ಬೀಗದ ಕೀಯನ್ನು ಡ್ಯೂಪ್ಲಿಕೇಟ್ ಕೀ ನಿಂದ ತೆಗೆದು, ಸದರಿ ಮನೆಯಿಂದ ಲ್ಯಾಪ್ಟ್ಯಾಪ್, ಕ್ಯಾಮೆರಾ, ಚಿನ್ನದ ಮೂರು ಉಂಗುರಗಳು, ಚಿನ್ನದ ಸ್ಟಡ್ ಮತ್ತು ಡ್ರಾಪ್ಸ್, ಬೆಳ್ಳಿಯ ಕುಂಕುಮದ ಬಟ್ಟಲುಗಳು, ಬೆಳ್ಳಿಯ ಚಿಕ್ಕ ದೀಪಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸುಮಾರು 1,50,000 ರೂ. ಬೆಲೆ ಬಾಳುವ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಆರೋಪಿಗಳ ಹೆಸರು ಮತ್ತು ವಿಳಾಸ :

1. ಜಯಶಂಕರ ಕೆ.ಸಿ. ಬಿನ್ ಚನ್ನಬಸವೇಗೌಡ, 23 ವರ್ಷ, ಮಂಡ್ಯ ನಗರದ ಕೆ.ಹೆಚ್.ಬಿ. ಕಾಲೋನಿಯ, ಶೃತಿ ರೇಷ್ಮೆ ಮೊಟ್ಟೆ ಉತ್ಪಾದನ ಕೇಂದ್ರದಲ್ಲಿ ಕೆಲಸ, ಹಾಲಿ ವಾಸ ಕೆ.ಹೆಚ್.ಬಿ. ಕಾಲೋನಿ, ಚಿಕ್ಕ ಮಂಡ್ಯ ಕೆರೆ, ಮಂಡ್ಯ ಸಿ.ಟಿ. ಸ್ವಂತ ಊರು ಕರಿಹುರಳಿಕೊಪ್ಪಲು ಗ್ರಾಮ, ಬನ್ನೂರು ಹೋಬಳಿ, ಟಿ.ಎನ್. ಪುರ ತಾಲ್ಲೋಕು, ಮೈಸೂರು ಜಿಲ್ಲೆ.

2. ಆರ್.ಎನ್. ಸೋಮಶೇಖರ @ ಸೋಮ ಬಿನ್ ನಂಜುಂಡಯ್ಯ, 27 ವರ್ಷ, ಮಂಡ್ಯದ ಬಿ.ಎಸ್.ಎನ್.ಎಲ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರಿನ ಚಾಲಕ, ಹಾಲಿ ವಾಸ ಪಿ. ನಾಗೇಂದ್ರರವರ ಬಾಡಿಗೆ ಮನೆ ಯಲ್ಲಿ ವಾಸ, 11 ನೆ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ನಗರ, ಸ್ವಂತ ಊರು ರಾಮಂದೂರು, ಕಿರುಗಾವಲು ಹೋಬಳಿ, ಮಳವಳ್ಳಿ ತಾಲ್ಲೂಕು.

3. ಡಿ.ಸಿ. ಶಿವಕುಮಾರ @ ಶಿವು ಬಿನ್ ಚಿಕ್ಕಜ್ಞಾನಾಚಾರ್,24 ವರ್ಷ, ಕಾರ್ಪೆ ಂಟರ್ ಕೆಲಸ, ಹಾಲಿ ವಾಸ ಅಂಸಿಯಮ್ಮನ ಮನೆಯಲ್ಲಿ ಬಾಡಿಗೆ ಮನೆ, 1 ನೇ ಕ್ರಾಸ್, ಚಂಪಕದಮ್ಮ ದೇವಸ್ಥಾನದ ಬೀದಿ, ಬನ್ನೇರಗಟ್ಟೆ ಗ್ರಾಮ, ಆನೆಕಲ್ ತಾಲ್ಲೋಕು, ಬೆಂಗಳೂರು, ಸ್ವಂತ ಊರು ದೊಡ್ಡಅರಳಿಗೆರೆ ಗ್ರಾಮ, ಸೂಲಿಬೇಲಿ ಹೋಬಳಿ, ಹೊಸಕೊಟೆ ತಾಲ್ಲೋಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂಧಿಯವರ ಪತ್ತೆ ಕಾರ್ಯದ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.

Detection of Stolen Property from Mandya Sub Division Police Staff

                                   ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ                                                         
                                    ಮಂಡ್ಯ ಜಿಲ್ಲೆ. ಮಂಡ್ಯ ದಿಃ 09.08.2012                                                                 
                                                
                                                     ಪತ್ರಿಕಾ ಪ್ರಕಟಣೆ

     ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ ವಿವಿಧ ಕಳವು ಪ್ರಕರಣದಲ್ಲಿ 4 ಜನ ಆರೋಪಿಗಳ ಬಂಧನ. ಇವರುಗಳಿಂದ ಒಟ್ಟು ಸುಮಾರು 9,00,000/-  ರೂ ಮೌಲ್ಯದ ಬೆಲೆಬಾಳುವ 185 ಗ್ರಾಂ ತೂಕದ ಚಿನ್ನಾಭರಣಗಳು 600 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು ನಗದುಹಣ 52,000-00 ರೂ  ಮತ್ತು 5 ಮೋಟಾರ್ ಸೈಕಲ್ ಗಳ  ವಶ. 


   ಮಂಡ್ಯ ನಗರದ ವಿವಿಧ ಕಡೆಗಳಲ್ಲಿ ಹಗಲು ಮತ್ತು ರಾತ್ರಿವೇಳೆಯಲ್ಲಿ ಮನೆಕಳ್ಳತನ ಹಾಗೂ ಮೋಟಾರ್ ಸೈಕಲ್ಗಳ ಕಳ್ಳತನ ಆಗುತ್ತಿದ್ದು ಆ ಪ್ರಕರಣಗಳ ಪತ್ತೆ ಬಗ್ಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ  ಕಾರ್ಯೊನ್ಮುಖರಾದ ತಂಡವು  ದಿನಾಂಕ.26.07.2012 ರಂದು  ಮಧ್ಯಾಹ್ನ 12-00 ಗಂಟೆಯಲ್ಲಿ ಮಂಡ್ಯದ ವಿ.ವಿ ರಸ್ತೆಯಲ್ಲಿರುವ ರೇಖಾ ಜ್ಯೂಯಲರ್ಸ್ ಅಂಗಡಿಯ ಬಳಿ ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಆರೋಪಿ ಮಹೇಶ @ ಆಕಾಶ್ ಎಂಬುವನನ್ನು ಹಿಡಿದು ವಿಚಾರಣೆಗೆ ಒಳಪಡಿಸಲಾಗಿ ಸದರಿ ಆರೋಪಿಯು  ತನ್ನ ಅತ್ತಿಗೆಯಾದ ಬೆಂಗಳೂರಿನ ಜರಗನಹಳ್ಳಿಯ ವಾಸಿ ಸುಶೀಲಮ್ಮ ಕೋಂ ಲೇಟ್ ನಾಗರಾಜು ಎಂಬುವರ ಮನೆಯಲ್ಲಿ ನಕಲಿ ಕೀಯಿಂದ ಮನೆ ಡೋರ್ಲಾಕ್ ಬೀಗವನ್ನು ತೆಗೆದು ಆ ಮನೆಯಲ್ಲಿ ಕಳವುಮಾಡಿಕೊಂಡು ಬಂದು ಮಾರಾಟ ಮಾಡಿದ 130 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು ಮಾರಲು ಪ್ರಯತ್ನಪಡುತ್ತಿದ್ದ 600 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು  ವಶಪಡಿಸಿಕೊಂಡಿರುತ್ತದೆ. 

ಆರೋಪಿತನ ಹೆಸರು ಮತ್ತು ವಿಳಾಸ :

  ಎ.ಪಿ.ಮಹೇಶ @ ಆಕಾಶ ಬಿನ್ ಪುಟ್ಟಸ್ವಾಮಿ, 26 ವರ್ಷ, ಕಾರ್ ಚಾಲಕ, ಮತ್ತು ವ್ಯವಸಾಯ ಕೆಲಸ, ವಾಸ ಆನೆದೊಡ್ಡಿ ಗ್ರಾಮ, ಕೊಪ್ಪ ಹೋಬಳಿ,ಮದ್ದೂರುತಾಲ್ಲೋಕ್.ಕೇರಾಫ್ ಗೌರಮ್ಮ, 5 ನೇ ಕ್ರಾಸ್, ಬಸವನಗುಡಿ, ಗುತ್ತಲು ರಸ್ತೆ, ಮಂಡ್ಯ ಸಿಟಿ. ಆರೋಪಿಯು  ದಿನಾಂಕ: 31-07-2012 ರಿಂದ   ನ್ಯಾಯಂಗ ಬಂಧನದಲ್ಲಿರುತ್ತಾನೆ.

   2] ದಿಃ 28-03-2012 ರಂದು ಮಂಡ್ಯ ನಗರದ ಪೇಟೆ ಬೀದಿಯಲ್ಲಿರುವ ಶುಭ್ಗೋಲ್ಡ್ ಚಿನ್ನದ ಅಂಗಡಿಯಲ್ಲಿ ಚಿನ್ನದ ಆಭರಣಗಳನ್ನು ಖರೀದಿಸುವ ನೆಪದಲ್ಲಿ ಕಳವು ಮಾಡಿಕೊಂಡು ಹೋಗಿದ್ದ ಚಿನ್ನದ ಸರ ಮತ್ತು ಆರೋಪಿತಳನ್ನು ದಿನಾಂಕ 28-07-2012 ರಂದು ಮಂಡ್ಯದ ಪೇಟೆ ಬೀದಿಯಲ್ಲಿ ಆರೋಪಿತಳಾದ ಸಾವಿತ್ರಮ್ಮಳನ್ನು ಪತ್ತೆ ಮಾಡಿ ಹಿಡಿದು ಅವಳು ನೀಡಿದ ಸುಳಿವಿನ ಮೇರೆಗೆ ಶುಭ್ ಗೋಲ್ಟ್ ಚಿನ್ನದ ಅಂಗಡಿಯಲ್ಲಿ  ಕಳವು ಮಾಡಿಕೊಂಡು ಹೋಗಿ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದ ಚೈನ್  ಮತ್ತು  ಮಂಡ್ಯದ ಕೆ.ಎಸ್.ಅರ್.ಟಿ,ಸಿ ಬಸ್ ನಿಲ್ದಾಣದಲ್ಲಿ ಬಸ್ಗೆ ಹತ್ತುವ ಮಹಿಳೆಯರ ವ್ಯಾನಿಟಿ ಬ್ಯಾಗಿನ ಜೀಪ್ ಎಳೆದು ಕಳವು ಮಾಡಿ ಬಚ್ಚಿಟ್ಟಿದ್ದ ನಗದು ಹಣ 52,000/- ರೂಪಾಯಿ ಮತ್ತು 19 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿರುತ್ತದೆ. 

ಆರೋಪಿ ಹೆಸರು ಮತ್ತು ವಿಳಾಸ :

ಸಾವಿತ್ರಮ್ಮ ಕೋಂ ಸ್ವಾಮಿಗೌಡ @ ಸ್ವಾಮಿ, 45 ವರ್ಷ, ಮನೆಕೆಲಸ, ವಾಸ: ಮಂಡ್ಯ ಕೊಪ್ಪಲು ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ  ಜಿಲ್ಲೆ. ಆರೋಪಿತಳನ್ನು ದಿನಾಂಕ 28-07-2012 ರಂದು ನ್ಯಾಯಾಲಯಕ್ಕೆ ಹಾಜರ್ ಪಡಿಸಿರುತ್ತದೆ.

   3] ದಿಃ 21-07-12 ರಂದು ಮಂಡ್ಯದ ಸುರಭಿ ಕಲ್ಯಾಣ ಮಂಟಪದ ಬಳಿ ಮೋಟಾರ್ ಸೈಕಲ್ನ್ನು ಕಳವು ಮಾಡಿಕೊಂಡು ಹೋಗಿದ್ದ ಗೋವಿಂದರಾಜು ಈತನನ್ನು ದಿನಾಂಕ. 01.08.2012 ರಂದು ಬೆಳಗಿನ ಜಾವ 2.30 ಗಂಟೆಯಲ್ಲಿ ಮಂಡ್ಯದ ಕೆ.ಆರ್. ರಸ್ತೆಯಲ್ಲಿ ಹಿಡಿದು ವಿಚಾರಣೆಗೆ ಒಳಪಡಿಸಲಾಗಿ ಸದರಿ ಆರೋಪಿಯು ಮಂಡ್ಯದ ವಿವಿದ ಕಡೆಗಳಲ್ಲಿ ಕಳವು ಮಾಡಿ ಮಾರಾಟ ಮಾಡಿದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತದೆ. 

                                                         ಆರೋಪಿಯ ಹೆಸರು ಮತ್ತು ವಿಳಾಸ :

ಗೋವಿಂದರಾಜು @ ಗೊವಿಂದ @ ಗುಂಡ ಬಿನ್ ತಮ್ಮೇಗೌಡ, 21 ವರ್ಷ, ವ್ಯವಸಾಯ ವಾಸ ಕೆಂಪೇಗೌಡನಕೊಪ್ಪಲು ಗ್ರಾಮ, ಬನ್ನೂರು ಹೋಬಳಿ, ಟಿ.ನರಸೀಪುರ ತಾಲ್ಲೋಕ್, ಮೈಸೂರು ಜಿಲ್ಲೆ.   ಆರೋಪಿಯು ದಿನಾಂಕ 01-08-2012 ರಿಂದ  ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.

   4] ದಿನಾಂಕ 23-06-2012 ರಂದು ಮಂಡ್ಯದ ನೂರಡಿ ರಸ್ತೆಯ ಸೇವಂತಿ ನೋಕಿಯ ಸೆಲ್ ಕೇರ್ ಅಂಗಡಿಯಲ್ಲಿಗೆ  ಆರೋಪಿ ಬಾಲಗಂಗಾಧರ ಎಂಬುವನು ರಿಪೇರಿಗಾಗಿ ಮೊಬೈಲ್  ಹ್ಯಾಂಡ್ಸೆಟ್ ಕೊಟ್ಟಿದ್ದು ಸಂಜೆ ಸುಮಾರು 05-45 ಗಂಟೆಯಲ್ಲಿ ಅದನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ  ಅಲ್ಲಿ ಕೆಲಸ ಮಾಡುವ ದಿವ್ಯಶ್ರೀ ಎಂಬುವರ ಬಾಬ್ತು 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟನ್ನು ಕಳವು ಮಾಡಿಕೊಂಡು ಹೋಗಿದ್ದವನನ್ನು ದಿನಾಂಕ 03-08-2012 ರಂದು ಚನ್ನಪಟ್ಟಣದ ಮುದಗೆರೆ ಬಳಿ ಪತ್ತೆ ಮಾಡಿ ಹಿಡಿದು ವಶಕ್ಕೆ ತೆಗದುಕೊಂಡುಆತನು ಕಳವು ಮಾಡಿದ  ದಿವ್ಯಶ್ರೀಯವರ ಬಾಬ್ತು ಚಿನ್ನದ ಬ್ರಾಸ್ ಲೈಟ್ ಮತ್ತು ಆತನ ಮೊಬೈಲ್ ಹ್ಯಾಂಡ್ ಸೆಟ್ ಅನ್ನು ವಶಪಡಿಸಿಕೊಂಡಿರುತ್ತೆ. 

ರೋಪಿ ಹೆಸರು ಮತ್ತು ವಿಳಾಸ :

ಬಾಲಗಂಗಾಧರ @ ಬಾಲು ಬಿನ್ ಶಿವಲಿಂಗಯ್ಯ, 23 ವರ್ಷ, ವ್ಯವಸಾಯ, ವಾಸ: ದೊಡ್ಡಮಳೂರು ಗ್ರಾಮ. ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ.

    ಮೇಲ್ಕಂಡ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಮಾನ್ಯ ಮಂಡ್ಯ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕರಾಧ ಶ್ರೀ, ಚನ್ನಬಸವಣ್ಣ, ಎಸ್,ಎಲ್, ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ, ಕೆ.ಆರ್, ಕಾಂತರಾಜ್, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಪಿ.ಎಸ್,ಐ ಶ್ರೀ, ಕೆ, ಪ್ರಭಾಕರ್, ಮಹಿಳಾ ಪಿ,ಎಸ್,ಐ ಶ್ರೀಮತಿ, ವಿ.ಡಿ. ಮಮತ, ಪ್ರೋಬೆಷರಿ ಪಿ.ಎಸ್.ಐ, ಶ್ರೀ, ಲೋಕೇಶ್, ಶ್ರೀ, ನಾಯಕ್, ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಎ.ಎಸ್.ಐ ಸಿ,ಕೆ. ಪುಟ್ಟಸ್ವಾಮಿ, ಮುಖ್ಯಪೇದೆ, ನಾರಾಯಣ, ನಿಂಗರಾಜು, ಪಿ,ಅಕರ್ೇಶ, ಪರಶುರಾಮ, ಪೇದೆಗಳಾದ ಕೆ.ಸಿ. ನಟರಾಜು, ಮಂಜುನಾಥ, ಬಿ.ಎನ್. ತಿಲಕ್ ಕುಮಾರ್, ಪುಟ್ಟಸ್ವಾಮಿ, ಜೀಪ್ ಚಾಲಕರುಗಳಾದ ರವಿ, ಶ್ರೀನಿವಾಸ, ಯೋಗೇಶ, ಬಲರಾಮ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ. 

press Note 09-07-2012

ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ. ದಿಃ09-07-2012 
ಪತ್ರಿಕಾ ಪ್ರಕಟಣೆ

ಇಂಡಿಕಾ ಕಾರಿನಲ್ಲಿ ಬಂದು ಖಾರದಪುಡಿ ಹಾಕಿ ಸರಗಳ್ಳತನ ಮಾಡುತ್ತಿದ್ದ ದರೋಡೆ ಕೋರರ ಬಂಧನ. 
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಮೊ. ನಂ 120/2012 ಕಲಂ: 399-402 ಐಪಿಸಿ.

ಹಳ್ಳಿಯಿಂದ ಬೆಂಗಳೂರಿಗೆ ವಲಸೆ ಹೋಗಿ ಆಟೋರಿಕ್ಷಾ ಹಾಗೂ ಕಾರು ಚಾಲನೆ ಮಾಡಿಕೊಂಡಿದ್ದ ಐವರು ವ್ಯಕ್ತಿಗಳು ಸುಲಭವಾಗಿ ಹಣ ಸಂಪಾದನೆ ಮಾಡಲು ತಾವು ಚಾಲನೆ ಮಾಡುತ್ತಿದ್ದ ಕಾರನ್ನೆ ಬಳಸಿ ಒಂಟಿಯಾಗಿ ಹೋಗುವ ಮಹಿಳೆಯರಿಗೆ ಮಚ್ಚು ತೋರಿಸಿ ಹೆದರಿಸಿ ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಸರಗಳ್ಳತನ ಮಾಡುತ್ತಿದ್ದ ದರೋಡೆ ಕೋರರ ತಂಡವನ್ನು ನಾಗಮಂಗಲ ಪೊಲೀಸರು ಪತ್ತೆಮಾಡಿದ್ದಾರೆ. 

ನಾಗಮಂಗಲ ತಾಲ್ಲೂಕು, ಹೊಣಕೆರೆ ಹೋಬಳಿ, ಮಾರನಾಯಕನಹಳ್ಳಿ ಗ್ರಾಮದ ಮಂಜುನಾಥ, ಕೆ.ಆರ್.ಪೇಟೆ ನಾರಾಯಣಪುರ ವಾಸಿ ಲೋಕೇಶ, ಮಾಯಸಂದ್ರ ಹೋಬಳಿ ಹೊನಕೆರೆ ಗ್ರಾಮದ ವಾಸಿ ನವೀನ ಇವರುಗಳು ಬೆಂಗಳೂರಿನಲ್ಲಿ ಆಟೋರಿಕ್ಷಾ ಮತ್ತು ಬಾಡಿಗೆ ಕಾರು ಚಾಲನೆಮಾಡಿಕೊಂಡಿದ್ದು ನವೀನ ಮಾಚರ್್ ತಿಂಗಳಲ್ಲಿ ಆಡಂಬರದ ಜೀವನ ಶೈಲಿಯಿಂದ ಸಾಲ ಮಾಡಿಕೊಂಡಿದ್ದು ಇವರುಗಳು ಬೆಂಗಳೂರಿನಲ್ಲಿ ನವೀನನು ಓಡಿಸುತ್ತಿದ್ದ ಇಂಡಿಕಾ ಕಾರಿನಲ್ಲಿ ತನ್ನ ಸ್ನೇಹಿತರುಗಳಾದ ಕೆ.ರ್.ಎಸ್.ನ ವಾಸಿ ರಾಜು ಮತ್ತು ಬೆಂಗಳೂರು ವಾಸಿ ಜಾಯ್ ಇವರೊಂದಿಗೆ ದರೋಡೆಮಾಡಿ ಹಣ ಮಾಡುವ ಉದ್ದೇಶದಿಂದ ಕಾರಿನಲ್ಲಿ ಲಾಂಗ್ ಮತ್ತು ಖಾರದ ಪುಡಿಯನ್ನು ಇಟ್ಟುಕೊಂಡು ದಿನಾಂಕಃ30-05-2012 ರಂದು ರಾತ್ರಿ ನಾಗಮಂಗಲ ತಾಲ್ಲೂಕು ಬ್ರಹ್ಮದೇವರಹಳ್ಳಿಯ ಬಳಿ ಮೊಟಾರ್ ಬೈಕ್ನಲ್ಲಿ ಹೋಗುತ್ತಿದ್ದ ದಂಪತಿಗಳನ್ನು ವಿಳಾಸ ಕೇಳುವ ನೆಪದಲ್ಲಿ ಅಡ್ಡಹಾಕಿ ಮಚ್ಚು ತೋರಿಸಿ ಹೆದರಿಸಿ ಅವರಿಂದ ಒಂದು ಜೊತೆ ಓಲೆ, ಒಂದು ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ನಂತರ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ದಿನಾಂಕಃ02-06-2012 ರಂದು ಕೆ.ಆರ್.ಪೇಟೆ ತಾಲ್ಲೂಕು, ಬೂಕನಕೆರೆಯ ಬಳಿ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಒಂಟಿ ಹೆಂಗಸಿಗೆ ವಿಳಾಸ ಕೇಳುವ ನೆಪದಲ್ಲಿ ಅಡ್ಡಹಾಕಿ ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಒಂದು ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿದ್ದು, ಇದಾದ ನಂತರ ಸುಲಭವಾಗಿ ಕುರಿಗಳನ್ನು ಕಳವುಮಾಡಬಹುದೆಂದು ಇಂಡಿಕಾ ಕಾರು ರಿಪೇರಿಗೆ ಬಂದಿದ್ದ ಕಾರಣ ಬೇರೊಂದು ಮಾರುತಿ ವ್ಯಾನ್ ಬಳಸಿ ಪುನಃ ದಿನಾಂಕ ಃ27/28-06-2012 ರಂದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾಗ ನಾಗಮಂಗಲ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ ಬಂಧಿತರಿಂದ ಒಂದು ಇಂಡಿಕಾ ಕಾರು, ಒಂದು ಮಾರುತಿ ವ್ಯಾನ್, ಓಲೆ, ಮೊಬೈಲ್ ಹಾಗೂ ಒಂದು ಮಾಂಗಲ್ಯಸರವನ್ನು ವಶಪಡಿಸಿಕೊಂಡಿರುತ್ತೆ. ಇವುಗಳ ಅಂದಾಜು ಮೌಲ್ಯ ಸುಮಾರು 1.22.800 ರೂ ಆಗಿರುತ್ತೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. 

ಮೇಲ್ಕಂಡ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮವಹಿಸಿದ ನಾಗಮಂಗಲದ ವೃತ್ತನಿರೀಕ್ಷಕರಾದ ಶ್ರೀ ಟಿ.ಡಿ.ರಾಜು, ನಾಗಮಂಗಲ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಹೆಚ್.ಎನ್.ವಿನಯ್ ಹಾಗೂ ಪ್ರೋ ಪಿ.ಎಸ್.ಐ ನಾರಾಯಣ ಹಾಗೂ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಆಧೀಕ್ಷಕರು ಪತ್ತೆ ತಂಡವನ್ನು ಪ್ರಶಂಸಿದ್ದಾರೆ. 

Press Note 26-05-2012

ಪೊಲೀಸ್ ಸೂಪರಿಂಟೆಂಡ್ರವರ ಕಛೇರಿ 
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕಃ 26-05-2012 

ಪತ್ರಿಕಾ ಪ್ರಕಟಣೆ. 

ದಿನಾಂಕ 25.05.2012 ರಂದು ರಾತ್ರಿ 08.30 ಗಂಟೆ ಸಮಯದಲ್ಲಿ ಕೆ.ಆರ್.ಪೇಟೆ ಟೌನ್ನ ಚಕ್ರಪಾಣಿ ಎಂಬುವರ ಬಾಬ್ತು ಜೀವಿತ ಪೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ ಅಂಗಡಿ ಮಳಿಗೆಯಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಹಣವನ್ನು ಮತ್ತು ಮೊಬೈಲ್ಗಳನ್ನು ಪಣವಾಗಿಟ್ಟುಕೊಂಡು ಕ್ರಿಕೆಟ್ ಸ್ಪಾಟ್ ಬೆಟ್ಟಿಂಗ್ ಎಂಬ ಜೂಜಾಟವನ್ನು ಆಡುತ್ತಿದ್ದ ವೇಳೆ ಕೆ.ಆರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಎಸ್.ಎನ್.ಸಂದೇಶಕುಮಾರ ಮತ್ತು ಕೆ.ಆರ್. ಪೇಟೆ ಟೌನಿನ ಪಿಎಸ್ಐ ಶ್ರೀ. ರೇಣುಕಾ ಪ್ರಸಾದ್ ಹಾಗೂ ಇತರೆ ಸಿಬ್ಬಂದಿಗಳು ದಾಳಿ ಮಾಡಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಇಟ್ಟಿದ್ದ 50.023 ರೂ ನಗದು ಹಣ ಮತ್ತು 15 ವಿವಿಧ ಕಂಪನಿಯ ಮೊಬೈಲ್ಗಳು ಹಾಗು ಶಾಪರ್್ಲೈನ್ ಟಿವಿಯನ್ನು ತನಿಖೆ ಸಂಬಂದ ಅಮಾನತ್ತುಪಡಿಸಿಕೊಂಡು ಜೂಜಾಟ ಆಡುತ್ತಿದ್ದ 1] ಬಾಬು @ ರವೀಂದ್ರಬಾಬು ಬಿನ್ ರಾಮಲಿಂಗೇಗೌಡ 33 ವರ್ಷ, ಅಗ್ರಹಾರ ಕೆ. ಆರ್ ಪೇಟೆ ಟೌನ್ 2] ರವಿ ಬಿನ್ ಲೇ|ಪುಟ್ಟಚಾರಿ 33 ವರ್ಷ, ಗುತ್ತಿಗೆದಾರರು, ಹೊಸಹೊಳಲು ಗ್ರಾಮ, ಕೆ. ಆರ್. ಪೇಟೆ ತಾ|| 3] ಕೆ.ಟಿ ವಿಶ್ವನಾಥ ಬಿನ್ ತಮ್ಮಣ್ಣಗೌಡ, 34 ವರ್ಷ, ವ್ಯವಸಾಯ, ಸುಬಾಷ್ ನಗರ, ಕೆ.ಆರ್ ಪೇಟೆ ಟೌನ್ 4] ದೇವರಾಜು ಬಿನ್ ಕುಳ್ಳೇಗೌಡ, 40 ವರ್ಷ, ವಿಠಲಾಪುರ, ಬೂಕನಕೆರೆ ಹೋಬಳಿ, ಕೆಆರ್ ಪೇಟೆ ತಾ|| 5] ರವಿ ಬಿನ್ ಚನ್ನೇಗೌಡ 31 ವರ್ಷ, ಕೆ. ಆರ್. ಪೇಟೆ ಟೌನ್ 6] ದಿನೇಶ ಬಿನ್ ಮರಿಯಪ್ಪ, 30 ವರ್ಷ, ಬಟ್ಟೆ ವ್ಯಾಪಾರ, ಕೆ. ಆರ್. ಪೇಟೆ ಟೌನ್ 7] ರಾಮು ಬಿನ್ ಬೋರಯ್ಯ, 25 ವರ್ಷ, ಕತ್ತರಘಟ್ಟ ಗ್ರಾಮ, ಕಸಬಾ ಹೋಬಳಿ, ಕೆ.ಆರ್. ಪೇಟೆ ತಾ|| 8] ಅರುಣ್ ಬಿನ್ ಕೃಷ್ಣಪ್ಪ, 40 ವರ್ಷ, ಕೆ.ಆರ್. ಪೇಟೆ ಟೌನ್ 9] ಮಣಿಕಂಠ ಬಿನ್ ನಾಗರಾಜು, 26 ವರ್ಷ, ಅಗ್ರಹಾರ, ಕೆ.ಆರ್. ಪೇಟೆ ಟೌನ್ 10] ತಂಜಾಮ್ ಪಾಷಾ ಬಿನ್ ಗೌಸ್ ಪಾಷ, 20 ವರ್ಷ,ಮೊಬೈಲ್ ಅಂಗಡಿಯಲ್ಲಿ ಕೆಲಸ, ಕೆಆರ್ ಪೇಟೆ ಟೌನ್ 11] ಅವಿನಾಶ್ ಬಿನ್ ರಂಗೇಗೌಡ, 23 ವರ್ಷ, ವ್ಯವಸಾಯ, ಕಟ್ಟೆಕ್ಯಾತನಹಳ್ಳಿ ಗ್ರಾಮ ಅಕ್ಕಿಹೆಬ್ಬಾಳ್ಹೋಬಳಿ ಕೆಆರ್ ಪೇಟೆ ತಾ|| 12] ಕ.ೆಎಸ್ ಮಂಜುನಾಥ್ ಬಿನ್ ಸಣ್ಣೇಗೌಡ, 30 ವರ್ಷ, ಕೆ.ಆರ್. ಪೇಟೆ ಟೌನ್ 13] ಬಸವೇಗೌಡ ಬಿನ್ ಜವರೇಗೌಡ, 32 ವರ್ಷ, ಬೇಸಾಯ ಬಸವನಗುಡಿ, ಕೆ.ಆರ್ ಪೇಟೆ ಟೌನ್ 14] ಚಕ್ರಪಾಣಿ ಬಿನ್ ಟಿ. ತಿಮ್ಮೇಗೌಡ, 38 ವರ್ಷ, ವ್ಯಾಪಾರ, ಕೆ. ಆರ್ ಪೇಟೆ ಟೌನ್ ರವರನ್ನು ದಸ್ತಗಿರಿ ಮಾಡಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿರುತ್ತಾರೆ. 
ಸದರಿ ಆರೋಪಿಗಳನ್ನು ಬಂಧಿಸುವಲ್ಲಿ ಬಾಗವಹಿಸಿದ್ದ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳನ್ನು ಪ್ರಶಂಸಿರುತ್ತಾರೆ. 

Photo of Missing person Michael David John Easton, British National and further details.


         Office of the 
         Superintendent of Police, 
         Mandya Distirct, Dated: 23-05-2012. 

                       :Press Note:

     In continuation of this office Press Note dated: 22-05-2012 regarding Missing of Two United Kingdom Foreign Nationals by Name Mr: Turton  Ian Richard and Mr: Michael David John Easton from  Muthathi forest area in the limits of Halagur Police  Station,  Malavalli Taluk, Mandya District,  Karnataka on 21-05-2012. 

The details of Sl. No. 2 missing National Mr. Michael David John Easton, British National is as follows.  

II]    Mr: Michael David John Easton
British National  
Passport No. 706824834, Dated 04-06-2008 Valid Up to 04-06-2018.
Employment  Visa No. VI.0280216 dated: 02-02-2011 valid upto 01-12-2012 [Multiple] Registered at FRRO, Bangalore vide RC No. RCF /2281/UK/Bangalore/2011, R.P. valid upto 01-02-2013. 

PERMANENT ADDRESS IN U.K.

MICHAEL DAVID JOHN EASTON s/o DAVID ALBERT EASTON, 57 Years
No. 159 HOLLAND PARK AVENUE LONDON W114 UX, United Kingdom.
PRESENT WORKING ADDRESS IN INDIA.
SENIOR WELL ENGINEER,  SHELL INDIA MARKETS PRIVATE LIMITED
3RD FLOOR, RMZ, CENTENNIL CAMPUS, BB KUNDANAHALL, BANGALORE.

PRESENT RESIDENTIAL ADDRESS IN INDIA.

ROOM NO.334, TAJ VIVANTA ITBB WHITE FIELD, BANGALORE


PHYSICAL APPEARANCE: 

HEIGHT :    5.6 FT, WEIGHT:   60KGS
COLOUR: WHITE, BODY COMPLEXION:LEAN BODY COMPLEXION
HAIR: GREY COLOUR HAIR
DRESS:T-SHIRT & SHORTS 
 
       A sharp look out may please be maintained and if traced may please be informed to Superintendent of Police and FRO, Mandya District, Karnataka State through E-Mail: spmdy@ksp.gov.in and PH. No. 08232- 224500, Control Room No. 08232 – 224888, E-Mail: dcmdy@ksp.gov.in and Halgur Police Station PH. No. 08231 – 295322 [.] 

Press Note 22-05-2012


:Press Note: 

Subject: Missing of two Foreign Nationals by Name Mr: Turton   Ian Richard and Mr:                    Michael David John Easton from  Muthathi forest area in the limits of Halagur                  Police   Station,  Malavalli Taluk, Mandya District,  Karnataka.

-:-

 

That on 21-05-2012 at 9.30 P.M. Mr: S. Jayaprabhu S/o Subbaraj, Manager HR, Tenneco  Automotive India Pvt. Ltd., No. 122,  SIPCOT INDUSTRIAL COMPLEX,  HOSUR,  TAMIL NADU lodged a complaint at Halagur Police Station in Mandya District stating that the following two Foreign Nationals by Name Mr: Ian Turton  Richard and Mr: Michael David John Easton  are missing from Muthathi  forest area in the limits of Halagur Police Station, Malavalli Taluk, Mandya District,  Karnataka state on  19-05-2012 at 12 noon onwards. The details of the facts of the complaint are as follows.

“ Mr: Ian Turton Richard, Project Manager an expert from our Tenneco Automotive India Pvt. Ltd.,  is being deputed to lead a project under progress at our Hosur plant. On Friday 18th May 2012, when he was back from office he informed the car driver Mr: Saravanan to pick his friend Mr: Michael David John Easton an another expert at Indiranagar, Bangalore at 6 am. They left  the hotel Lord’s Plaza, Bangalore towards Muthathi. 

After boarding into the car they were giving  directions to the car driver using their hand map and GPS system. Finally they took the drop at Muthathy forest area in Mandya district, Karnataka state. Mr: Ian Turton Richard directed the driver to go back and report to the hotel on Monday, 21st May 2012 at 7am as regular. 

From there on Mr: Ian Turton Richard and his friend entered into the Muthathy forest area. We have been informed by the driver that they were carrying a big travel bag in which he has also seen a air boat and few life jackets. 

When the driver reported to the hotel on Monday, 21st May 2012 he was informed by the hotel authorities that Mr: Ian Turton Richard is not in hotel i.e he has not returned back since Saturday, 19th May 2012. Immediately the driver informed the travel agency owner Mr Murthy and also informed the HR department of Tenneco Pvt. Ltd., Mr: Ravi Kumar Hosur, Tamilnadu. 

Immediately after receiving the message the HR of Tenneco Pvt. Ltd. contacted and confirmed again with the hotel authorities about the presence of Mr: Ian Turton Richard that he has not reached the hotel after his Saturday check out. Then we called up the driver and we started our “Own Search” with our department colleagues since 10 a.m Monday 21st May 2012. 

We have approached the Forest Ranger Mr Sukumar at Denkanikottai, Tamilnadu  and informed about the above scenario and sought their support in finding the where about’s of Mr: Ian Turton Richard and Mr: Michael David John Easton. They have contacted the nearby forest range authorities and conveyed the message to inform them,   if any such traces. 

Then we travelled the same route which Mr: Ian Turton Richard has taken on Saturday to reach the Muthathy forest area. We walked few k.m.s inside the forest and we could not locate him, hence we returned back and approached the Forest range authorities at Sathanur in Ramanagar district. 

As per the directions of above and the advice of the Police officials of Sathanur, since the Muthathy forest area is under the jurisdiction of Halgur Police Station in Mandya district, now we approached the Halagur Police to help us in this regards” 

Mr: Ian Turton Richard being a foreign national he used to travel / outing during weekends. While we were talking to Mr. Mohan the driver of Mr: Michael David John Easton, he informed us that he was asked to pickup Mr: Ian Turton Richard and Mr: Michael David John Easton on Sunday 20th May 2012 evening at Anchetti forest area, near Denkanikottai, Tamilnadu. When he reached the said location and waited for a long but unable to locate them and also tried to reach them over phone but heard switched off message from the mobile service.

 In this connection the complainant requested the police for tracing of the above two foreigners who are missing since Saturday, 19th May 2012 at  12 noon onwards. 

In this connection a case in Halagur Police Station Cr. No. 108/ 2012 u/s Man Missing has been registered and being investigated. The details of the  missing foreign nationals are as fallows.

 Foreign Person Missing Details 

1.      Mr: Ian Turton Richard


 


PERMANENT ADDRESS

Mr: Ian Turton Richard, 45 years S/o SAMUEL BERNARD

Passport No: 706666831, dated: 08-08-2008 valid upto 15-10-2018.

British citizen, Date of Birth: 03-12-1969. [Previously registered  and obtained RP at DCP [HQ] and FRO, Gurgaon, Hariyana. Vide RC. No. 2011/101/F-II, dated: 24-05-2010 and issued RP upto 05-06-2011. Further extension will be ascertained]

1] N/o No. 81, Broome, Close, Huntington, Yeork, U.K.,

Ph. No. +44 [D] 1904 765591.

2] LIL-MAGNO, LL-11/30, GLIWICE-44

POLAND, EUROPE

WORKING ADDRESS

PROJECT MANAGER,

TENNECO AUTOMOTIVE INDIA PRIVATE LIMITED

NO.122, SIPCOT INDUSTRIAL COMPLEX,

HOSUR-635126, KRISHNAGIRI DISTRICT

TAMIL NADU State.

PRESENT ADDRESS

ROOM NO.308,, HOTEL LORDS PLAZA

ELECTRONICS CITY,  BANGALORE.

 

 PHYSICAL APPEARANCE:

 HEIGHT :    6 FT, WEIGHT:    65 KGS

COLOUR: WHITE, BODY COMPLEXION: NORMAL BODY COMPLEXION

HAIR: HALF BALD GREY COLOUR HAIR

DRESS:BLUE COLOUR T-SHIRT & KHAKI COLOUR SHORTS

II] Mr:   Mr: Michael David John Easton

British National 

Passport No. 706824834, Dated 04-06-2008 Valid Up to 04-06-2018.

Employment  Visa No. VI.0280216 dated: 02-02-2011 valid upto 01-12-2012 [Multiple] Registered at FRRO, Bangalore vide RC No. RCF /2281/UK/Bangalore/2011, R.P. valid upto 01-02-2013.

 

WORKING ADDRESS

SHELL COMPANY, BANGALORE

 

PRESENT ADDRESS

100 feet road,  INDIRANAGAR,  Bangalore. 

PHYSICAL APPEARANCE:

HEIGHT :    5.6 FT, WEIGHT:   60KGS

COLOUR: WHITE, BODY COMPLEXION:LEAN BODY COMPLEXION

HAIR: GREY COLOUR HAIR

DRESS:T-SHIRT & SHORTS 

          The Superintendent of Police, Mandya visited the above said Muthathi Forest Area along with the subordinates police officers of Halagur and Malavalli sub division and issued suitable instructions to trace the above two  missing foreign nationals [.] A team has been constituted headed by Shri. A.N. Rajanna, Addl. S.P. Mandya for searching of the said missing Foreign Nationals with the co-ordination of Ramanagaram [K.S] & Dharmapuri District [Tamilnadu State] Police,   Jungle Resort Fishing Camp and Forest Officials. The last call as   per CDR of the said missing foreigner shows near Heggalur Village in Kanakapur Taluk of Ramnagaram district on 19-05-2012 at 1630 hrs.  All the efforts are being made to trace the  missing persons. 

 A sharp look out may please be maintained and if traced may please be informed to Superintendent of Police and FRO, Mandya District, Karnataka State through E-Mail: spmdy@ksp.gov.in and PH. No. 08232- 224500, Control Room No. 08232 – 224888, E-Mail: dcmdy@ksp.gov.in and Halgur Police Station PH. No. 08231 – 295322 [.]

 

Press Note 19-05-2012

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಚೇರಿ,
ಮಂಡ್ಯ ಜಿಲ್ಲೆ, ದಿನಾಂಕ 19-05-2012
-ಃ ಪತ್ರಿಕಾ ಪ್ರಕಟಣೆ ಃ-

ಮಂಡ್ಯ ಜಿಲ್ಲೆಯ ನಾಗರೀಕರಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ದಿನಾಂಕ 27-05-2012 ರಿಂದ 05-06-2012ರವರೆಗೆ 10 ದಿವಸಗಳಕಾಲ ಬಂದೂಕು ತರಬೇತಿಯನ್ನು ನಡೆಸಲಾಗುತ್ತಿದ್ದು ಬಂದೂಕು ತರಬೇತಿಯನ್ನು ಅಪೇಕ್ಷಿಸುವವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಯುದಗಾರದಲ್ಲಿ ದಿನಾಂಕ 20-05-2012ರಿಂದ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಪಡೆಯುವುದು ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 26-05-2012ರ ಸಂಜೆ 5-00ಗಂಟೆಯೊಳಗೆ ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಜಿಲ್ಲಾ ಆಯುಧಗಾರದಲ್ಲಿ ಪಾವತಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್ ಪೆಕ್ಟರ್ ರವರನ್ನು ಸಂಪರ್ಕಿಸುವುದು.