ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-01-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಂಚನೆ ಹಾಗು ಸರ ಕಳವು ಪ್ರಕರಣ, 1 ಅಪಹರಣ ಹಾಗು ರಾಬರಿ ಪ್ರಕರಣ, 1 ಕೊಲೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ, 4 ಸಾಮಾನ್ಯ ಹಾಗು ವಾಹನ ಕಳವು ಪ್ರಕರಣಗಳು, 1 ರಸ್ತೆ ಅಪಘಾತ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ವಂಚನೆ ಹಾಗು ಸರ ಕಳವು ಪ್ರಕರಣ :
ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 420, 379 ಕೂಡ 34 ಐ.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಸಣ್ಣತಾಯಮ್ಮ ಕೋಂ. ಮರೀಗೌಡ, ಶಂಭೂನಹಳ್ಳಿ ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರು ಜಕ್ಕನಹಳ್ಳಿ ಸಂತೆಯಲ್ಲಿ ಮನೆ ಸಾಮಾನು ತೆಗೆದುಕೊಂಡು ದೇವರಹಳ್ಳಿಗೆ ಹೋಗುವ ರಸ್ತೆಯ ಕಟ್ಟೆಯ ಹತ್ತಿರ ಹೋಗುತ್ತಿದ್ದಾಗ ಅಪರಿಚಿತ ಇಬ್ಬರು ಹೆಂಗಸರು ಮತ್ತು ಒಬ್ಬ ಗಂಡಸು ಹೆಸರು ವಿಳಾಸ ಗೊತ್ತಿಲ್ಲ. ರವರಿಗ:ಇ ಕಚರ್ಿಪನ್ನು ಫಿರ್ಯಾದಿಯವರಿಗೆ ತೋರಿಸಿ ನಿನ್ನದೇನಮ್ಮ ಎಂದು ಹತ್ತಿರಕ್ಕೆ ತಂದು ತೋರಿಸಿ ತಲೆ ಮತ್ತು ಮೈಯನ್ನು ಸವರಿ ಜ್ಞಾನ ತಪ್ಪಿಸಿ, ಫಿರ್ಯಾದಿಯವರಿಗೆ ಜ್ಞಾನ ಬಂದಾಗ ತಮ್ಮ ಮೈಯನ್ನು ನೋಡಿಕೊಂಡಾಗ ಕತ್ತಿನಲ್ಲಿದ್ದ ತಾಳಿ 2 ಗುಂಡು ಸಹಿತ ಚಿನ್ನದ ಮಾಂಗಲ್ಯ ಚೈನು ಇರಲಿಲ್ಲ ಮತ್ತು ಆರೋಪಿತರು ಸಹ ಇರಲಿಲ್ಲ ಅವರು ಹೋರಟು ಹೋಗಿರುವುದನ್ನ ನೋಡಿದರೆ ಅವರೆ ನನಗೆ ಕಚರ್ಿಫನ್ನು ತೋರಿಸಿ, ನಂಬಿಸಿ, ಮೋಸ ಮಾಡಿ ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಚೈನನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳುವಾಗಿರುವ ಚಿನ್ನದ ಮಾಂಗಲ್ಯ ಚೈನಿನ ತೂಕ ಸುಮಾರು 28 ಗ್ರಾಂ ಆಗಿದ್ದು ಬೆಲೆ ಸುಮಾರು 48,000/- ರೂ ಬೆಲೆ ಬಾಳುವುದಾಗಿರುತ್ತದೆ ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಹಾಗು ರಾಬರಿ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 341-364[ಎ]-384-307 ಕೂಡ 149 ಐ.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಗೋವಿಂದೇಗೌಡ ಬಿನ್. ಲೇಟ್. ಚಿಕ್ಕತಿಮ್ಮೇಗೌಡ, ಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಕಿರಣ, ಹೊಸಕೋಟೆ ಗ್ರಾಮ, 2]ನವೀನ, ಕ್ಯಾತನಹಳ್ಳಿ ಗ್ರಾಮ, 3]ರವಿ, ಕ್ಯಾತನಹಳ್ಳಿ ಗ್ರಾಮ ಮತ್ತು ಇತರೆ 6 ಜನರು. ಹೆಸರು ವಿಳಾಸ ತಿಳಿದಿಲ್ಲ ಇವರುಗಳು 5 ಲಕ್ಷಕ್ಕೆ ಡೀಲ್ ಕೊಟ್ಟಿದ್ದು 50 ಸಾವಿರ ಅಡ್ವಾನ್ಸ್ ಕೊಟ್ಟಿದ್ದಾರೆ ಎಂದು ಹೇಳಿದಾಗ ಗಾಯಾಳು ತಾನೆ 10 ಲಕ್ಷ ರೂ ಕೊಡುತ್ತೇನೆ ಎಂದು ಹೇಳಿ ಸ್ನೇಹಿತ ಸ್ವಾಮಿಗೌಡನಿಗೆ 10:30 ಗಂಟೆಯಲ್ಲಿ ಪೋನ್ ಮಾಡಿ ಹಣ ರೆಡಿ ಮಾಡುವಂತೆ ತಿಳಿಸಿದ ನಂತರ ಪುನಃ ಸಿ.ಪಿ.ಎಡ್ ಕಾಲೇಜು ಬಳಿಗೆ ಕರೆದುಕೊಂಡು ಬಂದಿದ್ದು ಅಲ್ಲಿ ಇಬ್ಬರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದವರ ಜೊತೆ ಮಾತನಾಡಿ ಅವರು ಕಾರಿನಲ್ಲಿ ಬಂದು ಎಲೆಕರೆ ಹ್ಯಾಂಡ್ ಪೋಸ್ಟ್ ಬಳಿ ಒಬ್ಬರು ಕೆ.ಬೆಟ್ಟಹಳ್ಳಿ ಬಳಿ ಒಬ್ಬರು ಇಳಿದುಕೊಂಡಿದ್ದು ನಂತರ ಹುಲ್ಕೆರೆ ಪಾರೆಸ್ಟ್ ಬಳಿ ಹೋಗುವಾಗ ಪೋನ್ನಲ್ಲಿ ಜನರುಗಳು ಬರುತ್ತಿರುವ ಮಾಹಿತಿ ಬಂದ ಮೇರೆಗೆ ತನ್ನ ಬಳಿ ಇದ್ದ 40 ಸಾವಿರ ನಗದು, ಎರಡು ಎ.ಟಿ.ಎಂ ಕಾರ್ಡ್ ಗಳು, ಒಂದು ಮೊಬೈಲ್ನ್ನು ಜೇಬಿನಿಂದ ತೆಗೆದುಕೊಂಡು ತನ್ನನ್ನು ಬಿಸಾಡಿ ಹೋಗಿದ್ದು, ತಾನು ಹುಲ್ಕೆರೆ ಗ್ರಾಮಕ್ಕೆ ಬಂದು ಯಾವುದೋ ಒಂದು ಮನೆಯವರನ್ನು ಎಚ್ಚರ ಮಾಡಿ ಮೊಬೈಲ್ ಪಡೆದುಕೊಂಡು ಸತ್ಯಪ್ಪ ರವರಿಗೆ ಪೋನ್ ಮಾಡಿ ಜನರನ್ನು ಕರೆಸಿಕೊಂಡು ಪಾಂಡವುಪರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಆರೋಪಿಗಳು 30 ವರ್ಷದ ಒಳಗಿನವರಾಗಿದ್ದು, ಪ್ಯಾಂಟ್, ಶರ್ಟ್ ಧರಿಸಿದ್ದರು ಎಂದು ಇತ್ಯಾದಿಯಾಗಿ ನೀಡಿದ ದೂರಾಗಿರುತ್ತೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ :
ಅರಕೆರೆ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 302 ಐ.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಸಾಕಮ್ಮ ಕೋಂ. ಬೋರೇಗೌಡ, 50 ವರ್ಷ, ಒಕ್ಕಲಿಗರು, ಗೃಹಿಣಿ, ಚನ್ನಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 22-01-2012 ರಂದು ಫಿರ್ಯಾದಿಯ ಮಗನಾದ ಜಗದೀಶ @ ಜಗ್ಗಿ ಎಂಬುವನು ರಾತ್ರಿ 09-00 ಗಂಟೆಯಲ್ಲಿ ತನ್ನ ಗ್ರಾಮದ ಸರ್ಕಲ್ ಬಳಿ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ 05-30 ಗಂಟೆಯ ಸಮಯದಲ್ಲಿ ಫಿರ್ಯಾದಿಯವರ ಮೈದನ ಮಗ ಬೋರೇಗೌಡ ಎಂಬುವರು ಫಿರ್ಯಾದಿಯ ಮಗನಾದ ಜಗದೀಶ @ ಜಗ್ಗಿಯನ್ನು ಯಾರೋ ಕೊಲೆ ಮಾಡಿರುತ್ತಾರೆಂದು ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಯಾರೋ ದುರಾತ್ಮರು ಜಗದೀಶ @ ಜಗ್ಗಿಯ ತಲೆಯ ಮೂರು ಕಡೆ ಬಲವಾಗಿ ಹೊಡೆದು, ಮಿದುಳು ಹೊರಬಂದು ಜಗದೀಶ @ ಜಗ್ಗಿ ಸತ್ತು ಹೋಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿಆರ್.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಎಸ್.ಕೆ.ರಮೇಶ್ ಬಿನ್. ಎಸ್.ಸಣ್ಣಯ್ಯ,, 60 ವರ್ಷ, ವಕ್ಕಲಿಗರು, ಹಾಲಿನ ಡೈರಿ ಅದ್ಯಕ್ಷರು, ವಾಸ ಕಾರ್ಕಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಅನಾಥ ಗಂಡಸು, ಸುಮಾರು 68-70 ವರ್ಷ ಹೆಸರು ವಿಳಾಸ ಗೊತ್ತಿರುವುದಿಲ್ಲ, ಅನಾರೋಗ್ಯದಿಂದಲೋ ಏನೋ ಹಾಲಿನ ಡೈರಿನ ಜಗುಲಿಯ ಮೇಲೆ ಮಲಗಿದ್ದ ಸಮಯದಲ್ಲಿ ಮೇಲ್ಕಂಡ ಬಿಕ್ಷುಕ ಮೃತ ಪಟ್ಟಿರುತ್ತಾರೆ ಆತ ಎಲ್ಲಿಯವನು ಏನು ಎಂದು ಗೊತ್ತಿರುವುದಿಲ್ಲ. ತಾವುಗಳು ಸ್ಥಳಕ್ಕೆ ಬಂದು ಕಾನೂನು ಕ್ರಮ ಜರುಗಿಸಲು ಮನವಿ ಎಂದು ನಿಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಲಾಗಿದೆ.
ಸಾಮಾನ್ಯ ಹಾಗು ವಾಹನ ಕಳವು ಪ್ರಕರಣಗಳು :
1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 379 ಐ.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಸಿ.ಪುಟ್ಟೇಗೌಡ ಬಿನ್ ಲೇ|| ಚಿಕ್ಕಸ್ವಾಮಿ, ನಿಖರ ಭಾರತ್ ಕನ್ಸ್ಟ್ರಕ್ಸನ್, ಕಂಪನಿಯ ಮ್ಯಾನೇಜರ್, ಸಂಕಲೆಗೆರೆ ಗ್ರಾಮ, ಮಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅನುಮಾನಿತ ಆರೋಪಿಗಳಾದ ವೆಂಕಟೇಶ, ಮಂಜುನಾಥ, ವೆಂಕಟೇಶ, ಬಿ., ಹಗಳು ಕರ್ತವ್ಯದಲ್ಲಿದ್ದ ದೇವಪ್ಪ ಮತ್ತು ಮಹದೇವಪ್ಪ, ಸೆಕ್ಯೂರಿಟಿ ರವರುಗಳು ಕಳ್ಳತನವಾಗಿರುವ ವಸ್ತುಗಳು ನಮ್ಮ ಸೆಕ್ಯೂರಿಟಿಗಳ ಜವಾಬ್ದಾರಿಯಲ್ಲಿದುದ್ದರಿಂದ ಯಾರು ಕಳ್ಳತನ ಮಾಡಿರುತ್ತಾರೆ ಎಂಬ ಬಗ್ಗೆ ಪರಿಶೀಲಿಸಿ ನಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ. ಕಳವು ಆಗಿರುವ ವಸ್ತುಗಳ ಬೆಲೆ 21.500/- ರೂ ಆಗಿರುತ್ತದೆ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಎಂ.ಜಿ ನಂಜುಂಡಸ್ವಾಮಿ ಬಿನ್. ಲೇಟ್. ಗುರುವಯ್ಯ, ಕೀರ್ತಿ ನಗರ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ತಮ್ಮ ಬಾಬ್ತು ಕೆ,ಎ-11-ಕ್ಯೂ-1280 ಮೋಟಾರ್ ಸೈಕಲನ್ನು ಮಳವಳ್ಳಿ ಆಸ್ಪತ್ರೆಯ ಆವರಣದ ಬಳಿ ನಿಲ್ಲಿಸಿ ಆಸ್ಪತ್ರೆಯ ಒಳಗಡೆ ಹೋಗಿದ್ದು, ವಾಪಸ್ಸು ಬಂದು ನೋಡಲಾಗಿ ನನ್ನ ಬಾಬ್ತು ಮೇಲ್ಕಂಡ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 379 ಐ.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಕೆ.ಹೆಚ್.ರವೀಂದ್ರನಾಥ್ ಬಿನ್. ಕೆ.ಹರಿಆಚಾರ್, ಹೋಟೆಲ್ ವಿಶ್ರಾಂತ್, ವಿ.ವಿ.ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ಮೋಟಾರ್ ಸೈಕಲನ್ನು ಮಂಡ್ಯದ ವಿ.ವಿ.ರಸ್ತೆಯಲ್ಲಿರುವ ವಿಶ್ರಾಂತ್ ಹೋಟೆಲ್ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದು ನಂತರ ವಾಪಸ್ ರಾತ್ರಿ 09-30 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 25,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಪಿ,ಎಂ,ಷರೀಫ್ ಬಿನ್. ಲೇಟ್ ಪಿ,ಮೋದು, ಮನೆ. ನಂ. 79/ಎ, 4ನೇ ಕ್ರಾಸ್, ಉದಯಗಿರಿ, ಮಂಡ್ಯಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಮೋಟಾರ್ಸೈಕಲ್ ಬೈಕ್ ನಲ್ಲಿ ಬಂದು ಇಂಡಿಯನ್ ಬ್ಯಾಂಕ್ ಮುಂದಿನ ಕಾಂಪೌಂಡ್ ಬಳಿ ನಿಲ್ಲಿಸಿದ್ದು ಮದ್ಯಾಹ್ನ ಬಂದು ನೋಡಲಾಗಿ ಬೈಕ್ ಇರುವುದಿಲ್ಲಾ ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಬೆಲೆ 12000/- ರೂ ಆಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇಲೆ ಕೇಸು ದಾಖಲಾಗಿರುತ್ತೆ.
ರಸ್ತೆ ಅಪಘಾತ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 279-304(ಎ) ಐ.ಪಿ.ಸಿ.
ದಿನಾಂಕ: 23-01-2013 ರಂದು ಪಿರ್ಯಾದಿ ಬಿ.ಜೆ.ಮಹೇಶ ಬಿನ್. ಸಿ.ಜಯರಾಮು, 31ವರ್ಷ, ವ್ಯವಸಾಯ, ಒಕ್ಕಲಿಗರು, ಬಿ.ಗೌಡಗೆರೆ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸಂತೋಷ್ ಬಿನ್. ಬಿ.ಸಿ.ಸುರೇಶ, ಟ್ರಾಕ್ಟರ್ ನಂ.ಕೆ.ಎ-11 ಟಿ/3278 ಹಾಗೂ ಟ್ರಾಲಿ ನಂ.ಕೆಎ-11/ಟಿ-817 ರ ಚಾಲಕ, ಹಳೇಬೂದನೂರು ರವರು ಟ್ರಾಕ್ಟರ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದು ರಾಜ್ಯ ಹೆದ್ದಾರಿಯಲ್ಲಿ ನಮ್ಮ ಮುಂದೆ ಹೋಗುತ್ತಿದ್ದ ಶಂಕರನ ವಿಕ್ಟರ್ ಗಾಡಿಗೆ ಸಂಜೆ 07-00ಗಂಟೆಯ ಸಮಯದಲ್ಲಿ ಅಪಘಾತ ಪಡಿಸಿದ್ದರಿಂದ ಶಂಕರನ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಟ್ರಾಕ್ಟರ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು ಮೇಲ್ಕಂಡ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ .ವರದಿ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 23-01-2013 ರಂದು ಪಿರ್ಯಾದಿ ಚಿಕ್ಕಣ್ಣ ಬಿನ್. ಲೇಟ್. ಮಹದೇವಯ್ಯ, 50 ವರ್ಷ, ಹಾಲುಮತ ಜನಾಂಗ, ವ್ಯವಸಾಯ ಮತ್ತು ಕೂಲಿಕೆಲಸ, ಚಂದಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸಿದ್ದೇಗೌಡ, ಚಂದಹಳ್ಳಿ ಗ್ರಾಮ ಎಂಬುವವರು ಸಂಸಾರದ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು, ದಿನಾಂಕ : 12-12-2012 ರಂದು ಮನೆಯಿಂದ ಹೋದವನು ಇರುವರೆವಿಗೂ ಬಂದಿರುವುದಿಲ್ಲ. ನಾವುಗಳು ನಮ್ಮ ಸಂಬಂಧಿಕರ ಹಾಗೂ ನೆಂಟರಿಷ್ಟರ ಮನೆಗಳ ಕಡೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 23-01-2013 ರಂದು ಪಿರ್ಯಾದಿ ಸಣ್ಣು ಬಿನ್. ಮರಿಮಾದಯ್ಯ, ಚಿಕ್ಕೇಗೌಡನದೊಡ್ಡಿ ಗ್ರಾಮ, ಕಿರುಗಾವಲು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗ ಸಣ್ಣು ಬಿನ್. ಮರಿಮಾದಯ್ಯ, ಚಿಕ್ಕೇಗೌಡನದೊಡ್ಡಿ ಗ್ರಾಮ, ಕಿರುಗಾವಲು ರವರು ದಿನಾಂಕ: 21-01-2013 ರಂದು ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋದವರು ಬೆಂಗಳೂರಿಗೆ ಹೋಗದೆ ಎಲೋ ಕಾಣೆಯಾಗಿರುತ್ತಾನೆ ನಾವು ಎಲ್ಲಾ ಕಡೆ ಹುಡುಕಾಡಿದರೂ ಆತ ಪತ್ತೆಯಾಗಿರುವುದಿಲ್ಲ, ಅದ್ದರಿಂದ ಈದಿನ ತಡವಾಗಿ ಬಂದು ಈ ದೂರನ್ನು ನೀಡಿರುತ್ತೇನೆ. ಕಾಣಿಯಾದ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.