Moving text

Mandya District Police

DAILY CRIME REPORT DATED : 21-02-2013



ದಿನಾಂಕ: 21-02-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ರಾಬರಿ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 379 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ಯೋಗೇಶ ವಿ ಕೆ ಬಿನ್ ಕೃಷ್ಣೇಗೌಡ 36-ವರ್ಷ, ವಕ್ಕಲಿಗರು, ರೈತ, ವಳಗೆರೆಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮದ್ದೂರಿನ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣದ ಹೊರಾವರಣದಲ್ಲಿ ಕೆಎ-11-ಎಸ್-4084 ಹಿರೊಹೋಂಡಾ ಮೋಟಾರ್ ಸೈಕಲ್ ನಿಲ್ಲಿಸಿ ಮೈಸೂರಿಗೆ ಹೋಗಿದ್ದು ವಾಪಸ್ ಬಂದು ನೋಡಿದಾಗ ಯಾರೋ ಕಳ್ಳರು ಬೈಕ್ ಅನ್ನು ಕಳುವು ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 379 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ಎಂ.ಕೆ. ಕುಮಾರ್ ಬಿನ್. ಲೇ: ಹೆಚ್.ಕೆ.ಕೃಷ್ಣೇಗೌಡ, ಭದ್ರತಾ ರಕ್ಷಕ, ಮಂಡ್ಯ ವಿಭಾಗೀಯ ಕಾರ್ಯಗಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ 20-21 -02-2013 ರಾತ್ರಿ 5-00 ಎಎಂ ಗಂಟೆಗೆ  ಮಂಡ್ಯ ಸಿಟಿ ಕೆ.ಎಸ್. ಆರ್. ಟಿ. ಸಿ ವಿಭಾಗೀಯ ಕಾರ್ಯಗಾರದ ಪೂರ್ವದ ಕಾಂಪೌಂಡ್ ಹತ್ತಿರ ಸ್ಕ್ರಾಪ್ ಯಾರ್ಡ್ ನಿಂದ ಆರೋಪಿ ಮಹಮ್ಮದ್ ಹುಸೇನ್ ಖಾನ್, ಆಲಿಯಾಸ್ ಹುಸೇನ್ ಬಿನ್. ಅಮಿದ್ ಖಾನ್, 25 ವರ್ಷ ಕೂಲಿ,  ಹಾಲಹಳ್ಳಿ ಸ್ಲಂ, ಮಂಡ್ಯ ಸಿಟಿ ರವರು ಅಂದಾಜು  900/-ರೂ. ಬೆಲೆ ಬಾಳುವ ಪ್ಲೇಟ್ ಗಳನ್ನ ಕಳುವು ಮಾಡಿದ್ದು ಮಾಲು ಸಮೇತ ಆಸಾಮಿಯನ್ನು ಕರೆ ತಂದು ಹಾಜರ್ ಪಡಿಸಿ  ಮುಂದಿನ ಕ್ರಮದ ಬಗ್ಗೆ ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 21-02-2013 ರಂದು ಚನ್ನಯ್ಯ ಬಿನ್. ಬೊಮ್ಮಯ್ಯ, ಹರಳಹಳ್ಳಿ ಗ್ರಾಮ, ಪಾಂಡವಪುರ ತಾ. ಮಂಡ್ಯ ಜಿಲ್ಲೆರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು, 21 ವರ್ಷ, ಹರಳಹಳ್ಳಿ ಗ್ರಾಮ, ಪಾ ಪುರ ತಾ. ರವರು ದಿನಾಂಕ: 19-02-2013 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ತಮ್ಮ ಮನೆಯಿಂದ ಪಾಂಡವಪುರ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಹುಡುಗಿ ಕಾಣೆಯಾಗಿದ್ದಾಳೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 21-02-2013 ರಂದು ಪಿರ್ಯಾದಿ ನರಸಿಂಹಯ್ಯ ಬಿನ್ ಗಾಳಪ್ಪ, ಬೈರೋಹಳ್ಳಿ, ಸೂಲಿಕೆರೆ ಪೋಸ್ಟ್, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ತಮ್ಮ ರಾಮಯ್ಯ ಬಿನ್ ಗಾಳಪ್ಪ, 41ಷರ್ವ, ಕೂಲಿಕೆಲಸ, ಬೈರೋಹಳ್ಳಿ, ಸೂಲಿಕೆರೆ ಪೋಸ್ಟ್, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೊಕು ರವರು ಬೆಂಗಳೂರಿನ ಕೆಂಗೇರಿಯಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಲು ಪಾದಯಾತ್ರೆಯಲ್ಲಿ ಚನ್ನಪಟ್ಟಣ ಮಾರ್ಗವಾಗಿ ಹಲಗೂರು, ಬೀಮೇಶ್ವರಿಗೆ ದಿನಾಂಕಃ 19-2-13 ರಂದು ಸಂಜೆ ಬಂದು ಅಲ್ಲಿ ಊಟ ಮಾಡಿ ತಂಗಿದ್ದು ರಾತ್ರಿ 10-30 ಗಂಟೆಯಿಂದ 11 ಗಂಟೆಯ ಸಮಯದಲ್ಲಿ ಮೂತ್ರ ವಿಸರ್ಜನೆಗೆಂದು ಹೋದವರು ವಾಪಸ್ಸು ಬಂದಿರುವುದಿಲ್ಲ ಎಲ್ಲಾ ಕಡೆ ಹುಡಕಲಾಗಿ ಸಿಕ್ಕಿರುವುದಿಲ್ಲ ನಾವು ನಮ್ಮ ಸಂಬಂಧಿಕರ ಮನೆ ಹಾಗೂ ಇತೆ ಕಡೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುವ ನನ್ನ ತಮ್ಮನನ್ನು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

     ದಿನಾಂಕ: 21-02-2013 ರಂದು ಪಿರ್ಯಾದಿ ಹೆಚ್.ಮೆಹಬೂಬ್ ಬಾಷ ಬಿನ್. ಲೇಟ್. ಮಹಮದ್ ಹಾಯಸಾಬ್, ಯಹಲ್ಲಾ ಮಸೀದಿ ಪಕ್ಕ, ಸೋಂಕಳ್ಳಿ ಮೊಹಲ್ಲಾ, ಮೈಸೂರು ರಸ್ತೆ, ನಾಗಮಂಗಲ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯವರ ಸೊಸೆ,  21 ವರ್ಷ, ಮುಸ್ಲೀಂ, ವಾಸ ಯಹಲ್ಲಾ ಮಸೀದಿ ಪಕ್ಕ, ಸೋಂಕಳ್ಳಿ ಮೊಹಲ್ಲಾ, ಮೈಸೂರು ರಸ್ತೆ, ನಾಗಮಂಗಲ ಟೌನ್ ಮತ್ತು ಫಿರ್ಯಾದಿಯ ಮಗಳು, ಮೊಮ್ಮಗಳು ರವರುಗಳು ನಾಗಮಂಗಲದಿಂದ ಮಂಡ್ಯಕ್ಕೆ ಬಂದಿದ್ದು ಮಂಡ್ಯದ ಪಿಡಬ್ಲ್ಯುಡಿಯ ಕಛೇರಿಯ ಮುಂಭಾಗದ ಫುಟ್ಪಾತ್ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ ತಮ್ಮ ಸೊಸೆ ಕಾಣೆಯಾಗಿರುತ್ತಾಳೆ. ಇದುವರೆಗೆ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ತಮ್ಮ ಸೊಸೆರವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 393 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ನಂಜುಂಡಪ್ಪ ಬಿನ್ ಶಿವಪ್ಪ, ಸಾಸಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಆರೋಪಿ ಕೇಶವ ಬಿನ್ ಶಿವಯ್ಯ, ಸುಮಾರು 25 ವರ್ಷ, ಸಾಸಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ಪಿಯರ್ಾದಿಯವರ ಹೆಂಡತಿಯ ಕೊರಳ ಪಟ್ಟಿಗೆ ಕೈ ಹಾಕಿ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿರುತ್ತಾರೆ ತಕ್ಷಣ ಕಿರುಚಿಗೊಂಡಾಗ ಸಾಸಲು ಗ್ರಾಮದವರು ಬಂದು ಆರೋಪಿತನನ್ನು  ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಬಂದು ಹಾಜರ್ ಪಡಿಸಿರುತ್ತಾರೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 35/2013 ಕಲಂ. 279-337-338-304 (ಎ)  ಐಪಿಸಿ ಕೂಡ 184-187 ಐಎಂವಿ ಕಾಯ್ದೆ.

ದಿನಾಂಕ 21-02-2013 ರಂದು ಪಿರ್ಯಾದಿ ಕೆ.ಎಂ ಮಲ್ಲಯ್ಯ ಬಿನ್ ಲೇ|| ಮಹಾಲಿಂಗಯ್ಯ, ನಿವೃತ್ತ ಸರ್ಕಾರಿ  ನೌಕರರು, ವಿಹೆಚ್ ರಸ್ತೆ ಕೆ.ಆರ್ ಪೇಟೆ ಟೌನ್, 571426 ರವರು ನೀಡಿದ ದೂರಿನ ವಿವರವೇನೆಂದರೆ ಕೋಡಿಮಾರನಹಳ್ಳಿ ಗ್ರಾಮದ ಹತ್ತಿರದ ತಿರುವು ರಸ್ತೆಯಲ್ಲಿ, ಕೆ.ಆರ್ ಪೇಟೆ-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ಕೆಎ-02-ಎಂಬಿ-5827 ರ ಟಾಟಾ ಸುಮಾ ಕಾರಿನ ಚಾಲಕ ಹೆಸರು ವಿಳಾಸ ಗೊತ್ತಿಲ್ಲ. ಇವರು ತನ್ನ ಬಾಬ್ತು ಟಾಟಾ ಸುಮೋ ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಅಡ್ಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಮೃತ ಒಡಿಸುತ್ತಿದ್ದ ಮೊಟಾರ್ ಬೈಕ್ ಗೆ  ಡಿಕ್ಕಿ ಮಾಡಿದ ಪರಿಣಾಮ ಮೃತನ ಕಾಲಿಗೆ, ಮರ್ಮಾಂಗಕ್ಕೆ  ಇನ್ನಿತರ ಕಡೆ ಪೆಟ್ಟು ಬಿದ್ದು ಮೃತಪಟ್ಟಿರುತ್ತಾನೆಂದು ಮತ್ತು ಹಿಂದೆ ಕುಳಿತ್ತಿದ್ದ ಅವನ ಸ್ನೇಹಿತ ಅಭಿಷೇಕನಿಗೆ ಕಾಲು ಮುರಿದು ಹೋಗಿದ್ದು ತೀವ್ರತರವಾದ ಪೆಟ್ಟಾಗಿರುತ್ತೆ ಎಂದು ಕೆ.ಆರ್ ಪೇಟೆ ಆಸ್ಪತ್ರೆಯಲ್ಲಿ ಜನರು ತಿಳಿಸಿದರು ಆದ ಕಾರಣ ಮೇಲ್ಕಂಡ ಟಾಟಾ ಸುಮೋ ಕಾರಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಇತ್ಯಾದಿಯಾಗಿ ಕೆ.ಆರ್ ಪೇಟೆ ಸಾರ್ವಜನಿಕ ಆಸ್ಪತ್ರೆಯ ಬಳಿ ದೂರನ್ನು ಸಲ್ಲಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 20-02-2013



ಮಂಡ್ಯ. ಜಿಲ್ಲೆಯಲ್ಲಿ ದಿನಾಂಕ: 20-02-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 4 ಕಳವು ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 1 ಭಾರತೀಯ ಶಸ್ತಾಸ್ತ್ರಗಳ ಕಾಯಿದೆ ಅಧಿನಿಯಮ ಪ್ರಕರಣ, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ, 2 ಯು.ಡಿ.ಆರ್. ಪ್ರಕರಣಗಳು ಹಾಗು 13 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಕಳ್ಳತನ ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 454-457-511 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಎಸ್ ನಾಗರಾಜು, ವ್ಯವಸ್ಥಾಪಕರು, ವಿಜಯ ಬ್ಯಾಂಕ್, ಎಂ.ಸಿ ರೋಡ್, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಕಟ್ಟಡದ ಪೂರ್ವ ಗೋಡೆಯಲ್ಲಿ ಹಾಕಿರುವ ಕಬ್ಬಿಣದ ಸರಳಿನ ಗ್ರೀಲ್ನ್ನು ಯಾರೋ ದುಷ್ಕರ್ಮಿಗಳು ಮುರಿದು ಶಾಖೆಯ ಒಳಗಡೆ ನುಗ್ಗಿ ಕಳವು ಮಾಡುವ ಪ್ರಯತ್ನ ಮಾಡಿರುವುದು ಕಂಡುಬಂದಿರುತ್ತದೆ. ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣಗಳು :

1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 51/13 ಕಲಂಃ 379 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಎಂ.ಆರ್ ಪದ್ಮನಾಭ ಬಿನ್. ರತ್ನರಾಜಯ್ಯ, 3ನೇ ಕ್ರಾಸ್, ಅಶೋಕನಗರ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಕೆಎ-11-ಎಲ್-4154 ಟಿವಿಎಸ್ ಎಕ್ಸ್.ಎಲ್.ಸೂಪರ್ ಮೊಪೆಡ್ ನ್ನು, ಮಂಡ್ಯ ಜನರಲ್ ಆಸ್ಪತ್ರೆಯ ರಕ್ತ ನಿಧಿ ಮುಂಭಾಗ ನಿಲ್ಲಿಸಿ ಪುನಃ ಮಧ್ಯಾಹ್ನ 03-00 ಗಂಟೆಗೆ ಮೊಪೆಡ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೊಡಲು ನನ್ನ ಮೊಪೆಡ್ ಇರಲಿಲ್ಲ ಸಿಗಬಹುದೆಂದು ಇಲ್ಲಿಯವರೆಗೆ ಎಲ್ಲಾಕಡೆ ಹುಡುಕಾಡಿದೆನು ಮೊಪೆಡ್ ನ್ನು, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 379 ಐ.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಬಾಲಕೃಷ್ಣ, 35 ವರ್ಷ, ಒಕ್ಕಲಿಗರು, ವ್ಯವಸಾಯ, ವಡ್ಡರಹಳ್ಳಿಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಬಿಳಿಗುಲಿ ಗ್ರಾಮದ ಸರ್ವೆ.  ನಂಬರ್ ನಲ್ಲಿ  ಒಂದು ಪಂಪ್ಸೆಟ್ ಇರುತ್ತದೆ. 100 ಅಡಿ ಉದ್ದ 3 ಇಂಚು ಅಗಲದ ಒಂದು ಕಪ್ಪು ಬಣ್ಣದ ಮಡ್ಡಿ ಪೈಪನ್ನು ನನ್ನ ಬಾವಿಯ ಏರಿಯ ಮೇಲೆ ಇಟ್ಟಿದ್ದೆ. ಪೈಪನ್ನು ಯಾರೋ ಕಳ್ಳರು ಕಳವು ಮಾಡಿಕೊಂಡರು. ಈ ಪೈಪನ್ನು ನಮ್ಮ ಗ್ರಾಮದ ಆನಂದ ಬಿನ್. ಲೇಟ್. ಮರೀಗೌಡ, ವಡ್ಡರಹಳ್ಳಿಕೊಪ್ಪಲು ಗ್ರಾಮ, ದುದ್ದ ಹೋಬಳಿ ರವರ ಮೇಲೆ ಅನುಮಾನ ಇರುತ್ತದೆ. ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 379 ಐ.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಶ್ರೀನಿವಾಸೇಗೌಡ.ಸಿ.ಎನ್. ಚಿನಕುರಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಚಿಕ್ಕಭೋಗನಹಳ್ಳಿ ಗ್ರಾಮದ ಎಲ್ಲೆಯ ಸರ್ವೆ. ನಂ 83/2 ರಲ್ಲಿ ಜಮೀನು ಹೊಂದಿದ್ದು, ಸದರಿ ಜಮೀನಿನಲ್ಲಿ ಮೋಟಾರ್ ಪಂಪ್ ಸೆಟ್ ಅಳವಡಿಸಿದ್ದು, ಮೋಟಾರ್ ಪಂಪ್ ನ್ನು,  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದ್ದು, ಕಳವು ಮಾಡಿಕೊಂಡು ಹೋಗಿರುವ ಪಂಪ್ ಸೆಟ್ ನ ಅಂದಾಜು ಬೆಲೆ ಸುಮಾರು 8000/- ಸಾವಿರ ರೂಗಳಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ. 


4. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಹೆಚ್.ಎಸ್. ಬಸವಣ್ಣ ಬಿನ್. ಶಿವನಂಜಪ್ಪ, ಹಾಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಜೀವನಕ್ಕಾಗಿ ಒಂದು ಕೆಎ-11 ಎ-1270  ಟಾಟಾ ಏಸ್ ಗೂಡ್ಸ್ ಆಟೋವನ್ನು ಇಟ್ಟುಕೊಂಡಿದ್ದು ಮನೆಮುಂದೆ ನಿಲ್ಲಿಸಿದ್ದ ಟಾಟಾ ಏಸ್ ಗೂಡ್ಸ್ ವಾಹನದ ಹಿಂಭಾಗದ ಎರಡು ಚಕ್ರಗಳು ಮತ್ತು ಬ್ಯಾಟರಿಯನ್ನು ನೆನ್ನೆ ರಾತ್ರಿ  ವೇಳೆಯಲ್ಲಿ ಯಾರೋ ಕಳ್ಳರು ಬಿಚ್ಚಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಈ ಬಗ್ಗೆ ನನ್ನ ಅಣ್ಣನಾದ ನಂಜಪ್ಪನ ಮೇಲೆ ಅನುಮಾನವಿರುತ್ತೆ. ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 40/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 20-02-2013 ರಂದು ಪಿರ್ಯಾದಿ ಡೈಸಿ ಕೋಂ. ಜೆ.ಅಂಟೋನಿ, 46ವರ್ಷ, ಮನೆ.ನಂ. ಕೆಎಲ್ 933, 9ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯವರ ಗಂಡ ಜೆ.ಅಂತೋಣಿ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಇವರು ಈ ಹಿಂದೆ ಆಗಾಗ್ಗೆ ಮನೆಬಿಟ್ಟು ಹೋಗಿ ತಿಂಗಳುಗಟ್ಟಲೆ ಹೊರಗಡೆ ಇದ್ದು ವಾಪಸ್ ಬರುವ ವಾಡಿಕೆಯಿದ್ದು ಅದರಂತೆ ಈಗಲೂ ವಾಪಸ್ ಬರುತ್ತಾರೆಂದು ತಿಳಿದು ಸುಮ್ಮನಿದ್ದೆವು. ಇದುವರೆವಿಗೂ ತಮ್ಮ ಪತಿ ವಾಪಸ್ ಮನೆಗೆ ಬಾರದ ಕಾರಣ ಸಂಬಂಧಿಕರ ಮತ್ತು ಸ್ನೇಹಿತರುಗಳ ಮನೆಗಳಲ್ಲಿ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಜೆ.ಅಂಟೋನಿ ರವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಭಾರತೀಯ ಶಸ್ತಾಸ್ತ್ರಗಳ ಕಾಯಿದೆ ಅಧಿನಿಯಮ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 143-307-429 ಕೂಡ 149-149 ಐ.ಪಿ.ಸಿ. 25 & 30 ಇಂಡಿಯನ್ ಆಮ್ಸ್ ಆಕ್ಟ್.

ದಿನಾಂಕ: 20-02-2013 ರಂದು ಪಿರ್ಯಾದಿ ದಿ:-19-02-2013 ರಂದು ರಾತ್ರಿ 9 ಗಂಟೆಯಲ್ಲಿ ನಾನು ಮತ್ತು ನನ್ನ ಅಕ್ಕನ  ಮಗನಾದ ಬಿ.ಕೆ ಶಿವಕುಮಾರ್ ಇಬ್ಬರೂ ಹೋಗಿ ಪಂಪ್ಸೆಟ್ ಮನೆಯ ಮೇಲೆ ಮಲಗಿದ್ದೆವು. ನಮ್ಮ ಜೊತೆಯಲ್ಲಿ ಸಾಕಿದ ನಾಯಿಯನ್ನು ಸಹ ಕರೆದುಕೊಂಡು ಹೋಗಿ ಚೈನು ಹಾಕಿ ಕಟ್ಟಿ ಹಾಕಿ ಮಲಗಿದ್ದೆವು ಬೆಳಗಿನ ಜಾವ ಸುಮಾರು 03.15  ಗಂಟೆ ಸಮಯಕ್ಕೆ ನಾವು ಕಟ್ಟಿ ಹಾಕಿದ್ದ ನಮ್ಮ ನಾಯಿ ಇದ್ದಕ್ಕಿದಂತೆ ಜೋರಾಗಿ ಬೋಗಳುತ್ತಾ ಇತ್ತು ಆವಾಗ ದೂರದಲ್ಲಿ ಯಾರೋ 4-5 ಜನರು ನಿಂತಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಹಣೆ ಮೇಲೆ ಬ್ಯಾಟರಿ ಲೈಟನ್ನು ಹಾಕಿಕೊಂಡಿದ್ದ ನಾಯಿ ಬೊಗಳುತ್ತಲೆ ಇತ್ತು ಆವಾಗ ನಾನು  ಅವರಿಗೆ ಯಾರು ಅಲ್ಲಿ ನಿಂತಿಕೊಂಡಿರುವುದು ಅಂತ ಕೂಗುತ್ತಾ ನಾಯಿಯನ್ನು ಕಟ್ಟಿದ್ದ ಚೈನನ್ನು ಬಿಚ್ಚಬೇಕು ಅನ್ನುವಷ್ಟರಲ್ಲಿ ಅಲ್ಲೆ  ನಿಂತಿದ್ದ 4  ಜನರಲ್ಲಿ ಯಾರೊ ಒಬ್ಬ ಬಂದೂಕಿನಿಂದ  ಕೊಲೆ ಮಾಡುವ ಉದ್ಧೇಶದಿಂದ ಗುಂಡು ಹಾರಿಸಿದನು. ನಾನು ಹಿಂದಕ್ಕೆ ಸರಿದಾಗ ಆ ಗುಂಡು ನನ್ನ ಸಾಕಿದ ನಾಯಿಗೆ ಬಿದ್ದು ನನ್ನ ಎರಡು ಕಾಲುಗಳ ಪಾದಕ್ಕೂ ಏಟು ಬಿದ್ದು ನಾಯಿಗೆ ಗುಂಡು ತಗುಲಿ ಮಿಲಮಿಲನೆ ಒದ್ದಾಡಿ ಸತ್ತು ಹೋಯಿತು, ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 143-355 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. (XI) ಎಸ್.ಸಿ./ಎಸ್.ಟಿ. ಕಾಯಿದೆ 1989.

ದಿನಾಂಕ: 20-02-2013 ರಂದು ಪಿರ್ಯಾದಿ ಪದ್ಮ ಕೊಂ. ಲೇ: ಶಂಕರ, ಮಣಿಪುರ, ಮೊಡಚಾಕನಹಳ್ಳಿಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಎಸ್.ಸಿ [ ಆದಿ ಕರ್ನಾಟಕ ] ಜಾತಿಗೆ ಸೇರಿದ್ದು ಅವರು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ [ ಹೆಚ್,ಐ.ವಿ. ] ಪಿಯರ್ ಆಗಿ ಕೆಲಸ  ನಿರ್ವಹಿಸುತ್ತಿದ್ದು  ಸರ್ಕಾರದಿಂದ ಗರೀಬಿ ಸೈಟ್ ನಲ್ಲಿ  ವಾಸವಾಗಿರುತ್ತೇನೆ. ನನಗೆ ನಮ್ಮ  ಗ್ರಾಮದ ನಿವಾಸಿಗಳಾದ ವಕ್ಕಲಿಗ ಜಾತಿಗೆ ಸೇರಿದ, ಶಿವಲಿಂಗಯ್ಯ, ಚಿಕ್ಕತಾಯಮ್ಮ, ಲಕ್ಷ್ಮಿ ಮತ್ತು ಗಂಗಾಮತಕ್ಕೆ ಸೇರಿದ ಪ್ರೇಮಮ್ಮ, ಬೋರಮ್ಮ ಎಂಬುವವರು ನನ್ನನ್ನು ಜಾತಿಯ ಬಗ್ಗೆ ತುಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳವನ್ನು ನೀಡಿರುತ್ತಾರೆ ಮತ್ತು ನನ್ನನ್ನು ವಿನಾಕಾರಣ ಜಗಳಕ್ಕೆ ಎಳೆದು ನನ್ನನ್ನು ಚಪ್ಪಲಿಯಿಂದ ಹೊಡೆದಿರುತ್ತಾರೆ. ಈ  ರೀತಿ ದಿನ ನನಗೆ ಕಿರುಕುಳ ನೀಡಿರುತ್ತಾರೆ. ನಾನು ನೀರು ಹಿಡಿಯಲು ಹೋದರೆ ನನ್ನನ್ನು ಮುಟ್ಟಿಸಕೊಳ್ಳಬೇಕೆಂದು ಸುಮ್ಮ ಸುಮ್ಮನೆ ಜಗಳ ತೆಗೆಯುತ್ತಾರೆ. ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತೇನೆ. ಡಾಕ್ಟರ್ ನನಗೆ ತಲೆಯನ್ನು ಸ್ಕ್ಯಾನ್ ಮಾಡಲು ಬರೆದುಕೊಟ್ಟಿರುತ್ತಾರೆ. ನನಗೆ ಯಾರ ಬೆಂಬಲವೂ ಇಲ್ಲ. ತಂದೆ, ತಾಯಿ, ಗಂಡ ತೀರಿಕೊಂಡಿರುತ್ತಾರೆ. 8 ವರ್ಷದ ಮಗನ ಜೊತೆ ಗರೀಬಿ ಸೈಟಿನಲ್ಲಿ ವಾಸವಾಗಿರುತ್ತೇನೆ. ಬೇರೆ ಕಡೆ ವಾಸ ಮಾಡಲು ಸಾಧ್ಯವಿಲ್ಲ. ನನಗೆ ಇದೇ ಗ್ರಾಮದಲ್ಲಿ ವಾಸಮಾಡಿಕೊಂಡು ನೆಮ್ಮದಿಯಿಂದ ಜೀವನ ನಡೆಸಲು ಖಾವಂದರಾದ ತಾವು ಇವರೆಲ್ಲರ ಕಿರುಕುಳದಿಂದ ನನನ್ನು ತಪ್ಪಿಸಿ ನನಗೆ ಮತ್ತು ನನ್ನ ಮಗನಿಗೆ ಪ್ರಾಣ ರಕ್ಷಣೆ ಕೋರಿ ತಮ್ಮಲ್ಲಿ ಮನವಿ ಮಾಡಿಕೊಂಡಿರುತ್ತೇನೆ. ಎಂದು ಇತ್ಯಾದಿ  ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಹೆಚ್ಬಿ ಮಂಜುನಾಥ ಬಿನ್. ಹೆಚ್. ಬೀರಯ್ಯ, ಹೇಮಾವತಿ ಬಡಾವಣೆ ಕೆ.ಆರ್.ಪೇಟೆ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೆ.ಆರ್.ಪೇಟೆ ಬಸ್ ನಿಲ್ದಾಣದ ಪಕ್ಕದಲ್ಲಿ ಅಂದರೆ ಟಿ.ಬಿ. ವೃತ್ತದಿಂದ ದುರ್ಗಾ ಭವನ್ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿ ಒಬ್ಬ ಅನಾಥ ಭಿಕ್ಷುಕ ಮೃತಪಟ್ಟಿರುತ್ತಾನೆ. ಈತನು ಕೆ.ಆರ್.ಪೇಟೆಯಲ್ಲಿ ಭಿಕ್ಷೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ಈತನು ಹೊಟ್ಟೆಗೆ ಸರಿಯಾದ ಆಹಾರ ಇಲ್ಲದೆಯೋ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ. ಮೃತನ ಹೆಸರು ವಿಳಾಸ ತಿಳಿದಿರುವುದಿಲ್ಲ ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬಹುದೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಕುಮಾರ.ಎಂ.ಇ. ರಾಗಿಮುದ್ದನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ತಂದೆಯವರ ತಮ್ಮನ ಮಗನಾದ ಬಸವೇಗೌಡ, 30 ವರ್ಷ, ಎಂಬುವರಿಗೆ ಈಗ್ಗೆ ಸುಮಾರು ಒಂದು ವರ್ಷದಿಂದ ಹೊಟ್ಟೆ ನೋವು ಬರುತ್ತಿದ್ದು ಚಿಕಿತ್ಸೆ ಕೊಡಿಸಿದ್ದರೂ ಗುಣವಾಗದೆ ಇದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹೊಟ್ಟೆ  ನೋವಿನ ಬಾಧೆಯನ್ನು ತಾಳಲಾರದೆ ತಮ್ಮ ವಾಸದ ಮನೆಯಲ್ಲಿ ಯಾವುದೋ ವಿಷಸೇವನೆ ಮಾಡಿ ಒದ್ದಾಡುತ್ತಿದ್ದು ಚಿಕಿತ್ಸೆಗಾಗಿ ಪಾಂಡವಪುರ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 19-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ವನ್ಯಪ್ರಾಣಿಗಳ ಸಂರಕ್ಷಣಾ ಕಾಯಿದೆ ಆಧಿನಿಯಮ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಕಳವು ಪ್ರಕರಣ,  1 ಕೊಲೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 143-355 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. ಎಸ್.ಸಿ./ಎಸ್.ಟಿ. ಕಾಯಿದೆ 1989

ದಿನಾಂಕ: 19-02-2013 ರಂದು ಪಿರ್ಯಾದಿ ಪದ್ಮ ಕೊಂ. ಲೇ. ಶಂಕರ, ಮಣಿಪುರ, ಮೊಡಚಾಕನಹಳ್ಳಿಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಶಿವಲಿಂಗಯ್ಯ, ವಕ್ಕಲಿಗರು, 2]ಚಿಕ್ಕತಾಯಮ್ಮ 3] ಲಕ್ಷ್ಮಿ. 4] ಪ್ರೇಮಮ್ಮ. 5]  ಬೋರಮ್ಮ ಇಲ್ಲರೂ ಮೊಡಚಾಕನಹಳ್ಳಿ ಗ್ರಾಮಸ್ಥರು ನನ್ನನ್ನು ಜಾತಿಯ ಬಗ್ಗೆ ತುಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳವನ್ನು ನೀಡಿರುತ್ತಾರೆ ಮತ್ತು ನನ್ನನ್ನು ವಿನಾಕಾರಣ ಜಗಳಕ್ಕೆ ಎಳೆದು ನನ್ನನ್ನು ಚಪ್ಪಲಿಯಿಂದ ಹೊಡೆದಿರುತ್ತಾರೆ. ಈ ರೀತಿ ದಿನ ನನಗೆ ಕಿರುಕುಳ ನೀಡಿರುತ್ತಾರೆ. ನಾನು ನೀರು ಹಿಡಿಯಲು ಹೋದರೆ ನನ್ನನ್ನು ಮುಟ್ಟಿಸಿಕೊಳ್ಳಬೇಕೆಂದು ಸುಮ್ಮ ಸುಮ್ಮನೆ ಜಗಳ ತೆಗೆಯುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-02-2013 ರಂದು ಪಿರ್ಯಾದಿ ಸೋಮಶೇಖರ ಬಿನ್. ಶಿವಯ್ಯ, ಕಾಗೇಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗ ಕೆ.ಎಸ್.ಕಿರಣ್ಕುಮಾರ್ ಬಿನ್. ಸೋಮಶೇಖರ್ ಕೆ.ಎಸ್. 14 ವರ್ಷ ಕಾಗೇಪುರ ಶವ ಸಿಕ್ಕಿರುತ್ತೆ. ಈತನ ಮೇಲೆ ಯಾವುದೇ ಬಟ್ಟೆಯಾಗಲಿ ಇತರೆ ವಸ್ತುಗಳು ಸಿಕ್ಕಿರುವುದಿಲ್ಲ ಮೃತ ಕಿರಣ್ಕುಮಾರ್ನ ಜೊತೆ ಇತರೆ 5 ಹುಡುಗರು ಹೋಗಿದ್ದು ಪಿಯರ್ಾದಿ ನನ್ನ ಮಗನಿಗೆ ಈಜು ಬರುತ್ತಿದ್ದು ಸಾವನ್ನಪ್ಪಿರುವುದು ಅನುಮಾನಸ್ಪದವಾಗಿ ಕಂಡುಬಂದಿರುತ್ತೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವನ್ಯಪ್ರಾಣಿಗಳ ಸಂರಕ್ಷಣಾ ಕಾಯಿದೆ ಆಧಿನಿಯಮ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 379 ಐಪಿಸಿ ರೆ/ವಿ ಕಲಂ 51 (1) ಅಫ್ ವೈಲ್ಡ್ ಲೈಪ್ ಪ್ರೋಟೆಕ್ಷನ್ ಆಕ್ಟ್.

ದಿನಾಂಕ: 19-02-2013 ರಂದು ಪಿರ್ಯಾದಿ ಹೆಚ್.ಎನ್.ವಿನಯ್, ಪಿ.ಎಸ್.ಐ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಅವರಿಗೆ ಬಂದ ಮಾಹಿತಿಯ ಮೇರೆಗೆ, ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಚೀಣ್ಯಾ-ಗಂಗವಾಡಿ ರಸ್ತೆಯ, ಶನಿದೇವರ ದೇವಸ್ಥಾನದ ಬಳಿ ಆರೋಪಿ ರಾಮಲಿಂಗ ಬಿನ್ ನಾಗೇಗೌಡ, 34ವರ್ಷ, ವಕ್ಕಲಿಗರು, ವ್ಯವಸಾಯ, ಹುಳ್ಳೇನಹಳ್ಳಿ ಗ್ರಾಮ ರವರು ಒಂದು ಕಾಡುಪ್ರಾಣಿಯ ಚರ್ಮ ಮತ್ತು ಕೊಂಬುಗಳನ್ನು ಮಾರಾಟ ಮಾಡಿ ಹಣ ಪಡೆಯುವ ಸಲುವಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೋಗಿತ್ತಿದ್ದವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 19-02-2013 ರಂದು ನಾಗರತ್ನಮ್ಮ ಕೋಂ. ಲೇಟ್. ಮಹೇಂದ್ರ, ಬಾಬುರಾಯನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು  ದಿನಾಂಕ: 29-01-2013 ರಂದು ಮದ್ಯಾಹ್ನ 02-00 ಗಂಟೆಯಲ್ಲಿ ಸುಷ್ಮಾರವರು ಶ್ರೀರಂಗಪಟ್ಟಣಕ್ಕೆ ಹೋಗಿ ಬಟ್ಟೆ ತರುತ್ತೇನೆಂದು ಶ್ರೀರಂಗಪಟ್ಟಣಕ್ಕೆ ಹೋದವಳು ಸಂಜೆಯಾದರೂ ಸಹ ವಾಪಸ್ಸು ಮನೆಗೆ ಬಂದಿರುವುದಿಲ್ಲಾ. ನಾವು ನೆಂಟರಿಷ್ಟಟರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಲಾಗಿ ಇದುವರೆವಿಗೂ ನನ್ನ ಮಗಳು ಪತ್ತೆಯಾಗಿರುವುದಿಲ್ಲಾ  ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 379 ಐ.ಪಿ.ಸಿ.

ದಿನಾಂಕ: 19-02-2013 ರಂದು ಪಿರ್ಯಾದಿ ಪದ್ಮಮ್ಮ ಕೋಂ. ಚೆಲುವೇಗೌಡ, ವಡಿಯಾಂಡಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ದಿನಾಂಕ: 10-02-2013  ರಂದು ಆರತಿ ಉಕ್ಕಡ ಗ್ರಾಮಕ್ಕೆ ಹೋಗಿದ್ದು ಜನ ಸಂದಣಿ ಇದ್ದು ಪೂಜೆ ಮುಗಿಸಿಕೊಂಡು ಮದ್ಯಾಹ್ನ  01-15  ಗಂಟೆ ಸಮಯದಲ್ಲಿ ತನ್ನ  ಕತ್ತಿನಲ್ಲಿದ್ದ  ಮಾಂಗಲ್ಯ ಸರವನ್ನು ನೋಡಿಕೊಳ್ಳಲಾಗಿ   ಸರ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿದ್ದು ಅದು 25 ಗ್ರಾಂ. ತೂಕ ಇದ್ದು ಬೆಲೆ ಸು, 48.000/- ಆಗಿರುತ್ತೆ  ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 27/13 ಕಲಂ.392 ಐ.ಪಿ.ಸಿ.

   ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಭಾಗ್ಯಮ್ಮ,  ಜೀವಶಾಸ್ರ್ತ ವಿಭಾಗದಲ್ಲಿ ಸಹಾಯಕ ಕೆಲಸ, ಶಾಂತಿಕಾಲೇಜು, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಶಾಂತಿಕಾಲೇಜಿಗೆ ಕೆಲಸಕ್ಕೆ ಹೋಗುತ್ತಿರುವಾಗ ನೀರಿನ ಟ್ಯಾಂಕ್ ಹತ್ತಿರ ರಸ್ತೆಯಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದನು ಆಗ ನಾನು ಕಳ್ಳನು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದಾನೆ ಎಂದು ಕೂಗಿಕೊಂಡೆ ಮತ್ತು ಆತನ ಹಿಂದೆಯೇ ಓಡಿ ಹೋದೆ, ಆತನು ಮುಂದೆ ಸ್ವಲ್ಪ ದೂರದಲ್ಲಿ ನಿಂತಿದ್ದ ಸ್ಕೂಟರ್ ನಲ್ಲಿ ಹತ್ತಿಕೊಂಡು ಹೋಗಿರುತ್ತಾರೆ ನನ್ನ ಕತ್ತಿನಲ್ಲಿ ತರಚಿತ ಗಾಯವಾಗಿರುತ್ತದೆ, ಮಾಂಗಲ್ಯ ಮತ್ತು ಸರ ಒಟ್ಟು 35 ಗ್ರಾಂ. ಇದರ ಬೆಲೆ 90000/- ರೂ.ಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

PRESS NOTE ON MANDYA RURAL PS Cr.No.256/12 DATED : 19-02-2013


                                                                                            ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
                                                                                                  ಮಂಡ್ಯ ಜಿಲ್ಲೆ, ದಿನಾಂಕಃ 19-02-2013.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ 256/2012 
ಕಲಂ. 302,201 ಐಪಿಸಿ ಕೊಲೆ ಪ್ರಕರಣದ ಪತ್ತೆ ಬಗ್ಗೆ.

     ದಿನಾಂಕಃ 15-06-2012 ರಂದು ಶ್ರೀ. ಸುಲೇಮಾನ್, ಮಂಡ್ಯ ಸಿಟಿ ರವರು ಮಂಡ್ಯ ಗ್ರಾಮಾಂತರ ಠಾಣೆಗೆ ಹಾಜರಾಗಿ ಒಂದು ಪಿರ್ಯಾದನ್ನು ನೀಡಿದ್ದು, ಮೃತ ರಾಮಮೂರ್ತಿಯು ತನ್ನ ಬಳಿ 10 ವರ್ಷಗಳಿಂದ ಸುಲ್ತಾನ್ ಬೀಡಿ ಬಂಡಲ್ ಗಳನ್ನು  ತನ್ನ ಆಟೋರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಮಂಡ್ಯ ಸುತ್ತಮುತ್ತಲ ಅಂಗಡಿಗಳಿಗೆ ವಿತರಣೆ ಮಾಡಿ, ನಂತರ ಮಂಡ್ಯ ನಗರದ ಪ್ಯಾಕ್ಟರಿ ಸರ್ಕಲ್ ನಲ್ಲಿ ಬಾಡಿಗೆ ಹೊಡೆಯುತ್ತಿದ್ದು, ದಿನಾಂಕ: 13-06-2012 ರಂದು ರಾಮಮೂರ್ತಿ ಬೀಡಿ ಬಂಡಲ್ ಗಳನ್ನು  ತೆಗೆದುಕೊಂಡು ಹೋಗಲು ಬಂದಿಲ್ಲವಾದ್ದರಿಂದ ಬೆಂಗಳೂರಿನಲ್ಲಿರುವ ರಾಮಮೂರ್ತಿರವರ ಹೆಂಡತಿ ಮತ್ತು ಮಗನಿಗೆ ಪೋನ್ ಮಾಡಿ ವಿಚಾರ ತಿಳಿಸಿದೆನು, ನಂತರ ತಾನು ಮಂಡ್ಯ ಸಿಟಿಯಲ್ಲಿರುವಾಗ ದೂರವಾಣಿ ಮೂಲಕ ಸಂತೆಕಸಲಗೆರೆ ಬಳಿ ಭೂಮಿಸಿದ್ದೇಶ್ವರ ದೇವಸ್ಥಾನಕ್ಕೆ ಸೇರಿದ ನೀಲಗಿರಿ ತೋಪಿನ ಬಳಿ ಒಂದು ಗಂಡಸಿನ ಶವ ಇರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಶವವು ರಾಮಮೂರ್ತಿಯವರದ್ದಾಗಿರುತ್ತದೆ. ಇವರನ್ನು ದಿನಾಂಕ: 12-06-2012 ರ ನಂತರ ಯಾರೋ ದುಷ್ಕರ್ಮಿಗಳು ರಾಮಮೂರ್ತಿಯ ಕತ್ತಿಗೆ ಪ್ಲಾಸ್ಟಿಕ್ ದಾರದಿಂದ ಬಿಗಿದು ಕೊಲೆ ಮಾಡಿ, ಕೊಲೆಯನ್ನು ಮರೆ ಮಾಚಲು ಹಾಕಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಅದಿಕಾರಿಗಳು ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. 

     ನಂತರ ಮಂಡ್ಯ ಗ್ರಾಮಾಂತರ ವೃತ್ತದ ಪ್ರಬಾರ ಪೊಲೀಸ್ ಇನ್ಸ ಪೆಕ್ಟರ್ ಶ್ರೀ. ಎನ್.ಸಿ.ನಾಗೇಗೌಡರವರು ಪ್ರಕರಣದ ತನಿಖೆಯನ್ನು ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಎ.ಎನ್. ರಾಜಣ್ಣ ರವರ ಮಾರ್ಗದರ್ಶನದಲ್ಲಿ ಮತ್ತು ಮಂಡ್ಯ ಉಪ ವಿಭಾಗದ ಡಿವೈ.ಎಸ್.ಪಿ. ರವರಾದ ಶ್ರೀಮತಿ ಡಾ.ಶೋಭಾರಾಣಿರವರ ಸಲಹೆಯಂತೆ ತನಿಖೆ ಮುಂದುವರೆಸಿ, ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸದರಿ ಪ್ರಕರಣದಲ್ಲಿ ಮೃತ ರಾಮಮೂರ್ತಿ ರವರನ್ನು ಸಂತೆ ಕಸಲಗೆರೆ ಬಳಿ ಭೂಮಿ ಸಿದ್ದೇಶ್ವರ ದೇವಸ್ಥಾನಕ್ಕೆ ಸೇರಿದ ನೀಲಗಿರಿ ತೋಪಿನ ಬಳಿ ಕೊಲೆ ಮಾಡಿ ಬಿಸಾಡಿ ಹೋಗಿದ್ದ ಆರೋಪಿಗಳಾದ 1) ಸರವಣ ಬಿನ್ ಲೇ| ಸ್ವಾಮಿ ನಾಥನ್, 27 ವರ್ಷ, ಆಟೋ ಡ್ರೈವರ್ ಕೆಲಸ, ಮನೆ ನಂ-36/1 ಸಾಯಿ ಬಾಬಾ ನಗರ, 2 ನೇ ಕ್ರಾಸ್, ಶ್ರೀರಾಂಪುರ, ಬೆಂಗಳೂರು-21, ಸ್ವಂತ ಊರು 2 ನೇ ಕ್ರಾಸ್, ಹರಿಶ್ಚಂದ್ರ ಸರ್ಕಲ್ ಹತ್ತಿರ, ಮಂಡ್ಯ ನಗರ. 2) ಜಿ. ರಾಜನ್ @ ರಾಜ ಬಿನ್ ಗಂಗಾಧರ, 29 ವರ್ಷ,  ಶ್ರೀ ಬ್ಯಾಟರಿ ವರ್ಕ್ ಶಾಪ್ ನಲ್ಲಿ ಕೆಲಸ, ವಾಸ 6 ನೇ ಕ್ರಾಸ್, ಗಾಂದಿನಗರ, ಗುತ್ತಲು ರಸ್ತೆ, ಮಂಡ್ಯ ನಗರರವರುಗಳನ್ನು ದಿನಾಂಕಃ 18-02-2013 ರಂದು ಪತ್ತೆ ಮಾಡಿದ್ದು, ಆರೋಪಿಗಳು ಸದರಿ ಮೃತ ರಾಮಮೂರ್ತಿಯ ಜೊತೆಯಲ್ಲಿ ಹಳೇ ವೈಷಮ್ಯದಿಂದ ಹಾಗೂ ರಾಮಮೂರ್ತಿಯು  ಆರೋಪಿಯಾದ ಜಿ. ರಾಜನ್ ರವರ ಚಿಕ್ಕಮ್ಮಳ ಮೇಲೆ ಕಣ್ಣಾಕಿರುವುದಾಗಿ ತಿಳಿದು ಬಂದ ಹಿನ್ನಲೆಯಲ್ಲಿ ಆತನನ್ನು ಕೊಲೆ ಮಾಡಲು ನಿರ್ದರಿಸಿ, ಅವನದೇ ಆಟೋ ರಿಕ್ಷಾ ನಂ. ಕೆಎ-06-ಎ-2376 ಆಟೋದಲ್ಲಿ ಸಂತಕಸಲಗೆರೆ ಬಳಿ ಇರುವ ಭೂಮಿಸಿದ್ದೇಶ್ವರ ದೇವಸ್ಥಾನಕ್ಕೆ ಬಾಡಿಗೆಗೆ ಹೋಗಿಬರೋಣ ಎಂದು ಕರೆದುಕೊಂಡು ಬಂದು, ಕಾರಸವಾಡಿ, ಕೊತ್ತತ್ತಿ, ಕಡೆಗಳಲ್ಲಿ ಸುತ್ತಾಡಿ ದಿನಾಂಕ:12-06-2012 ರಂದು ಸಂಜೆ, ಪ್ಲಾಸ್ಟಿಕ್ ವೈರ್ ನಿಂದ ಕತ್ತಿಗೆ ಬಿಗಿದು, ಕತ್ತನ್ನು ಚಾಕುವಿನಿಂದ ಕುಯ್ದು ಕೊಲೆ ಮಾಡಿ ಕೊಲೆಯನ್ನು ಮರೆಮಾಚಲು ಶವವನ್ನು ಮೇಲ್ಕಂಡ ಸ್ಥಳದಲ್ಲಿ ಬಿಸಾಡಿ, ನಂತರ ಆರೋಪಿಗಳು ಮೃತ ರಾಮಮೂರ್ತಿಯ ಆಟೋವನ್ನು ಕೆ.ಎಂ.ದೊಡ್ಡಿ ರಸ್ತೆಯ ಮೆಲ್ಲಹಳ್ಳಿ ಬಳಿ ಇರುವ ಹೆಬ್ಬಾಳದ ಬದಿಯಲ್ಲಿ ಬಿಟ್ಟು, ಹೊರಟು ಹೋಗಿದ್ದು, ಸದರಿ ಆಟೋವನ್ನು ಪತ್ತೆ ಮಾಡಿದ್ದು, ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷರಾದ ಶ್ರೀ. ಎನ್.ಸಿ.ನಾಗೇಗೌಡ, ಪ್ರೊಬೇಷನರಿ ಪಿ.ಎಸ್.ಐ. ಬ್ಯಾಟರಾಯಗೌಡ, ಸಿಬ್ಬಂದಿಯವರಾದ ರಘುಪ್ರಕಾಶ್, ಮಹೇಶ, ರಾಮಣ್ಣ, ಬೊಮ್ಮೇಗೌಡ ಜೀಪ್ ಚಾಲಕ ಡ್ರೈವರ್ ಲೋಕೇಶ್ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಶಿಸಿರುತ್ತಾರೆ. 

DAILY CRIME REPORT DATED : 18-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-02-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು,  1 ಕೊಲೆ ಪ್ರಕರಣ,  1 ಕಳವು ಪ್ರಕರಣ, 3 ಮನುಷ್ಯ ಕಾಣೆಯಾದ ಪ್ರಕರಣಗಳು,  4 ಯು.ಡಿ.ಆರ್. ಪ್ರಕರಣಗಳು,  1 ರಾಬರಿ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.      


ಕಳ್ಳತನ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 454-457-380 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಬಸವಲಿಂಗಶೆಟ್ಟಿ, 59ವರ್ಷ, ಮುಖ್ಯೋ ಪಾಧ್ಯಾಯ ರು, ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ, ತಡಗವಾಡಿ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ರೂಮಿನ ಒಳಗೆ ಪ್ರವೇಶ ಮಾಡಿ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್, ಒಂದು ಮಿಕ್ಸಿ ಹಾಗೂ ಸಾಂಬಾರಿಗೆ ತಂದು ಇಟ್ಟಿದ್ದ 10 ಪ್ಯಾಕ್ ಎಣ್ಣೆಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಬೆಲೆ 5650/- ರೂ.ಆಗುತ್ತದೆ ಪತ್ತೆ ಮಾಡಿಕೊಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 454-457-380 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಪಿ.ಇಂದಿರಾ, 39 ವರ್ಷ, ಅಂಗನವಾಡಿ ಕಾರ್ಯಕರ್ತೆ,  ತಡಗವಾಡಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಂಗನವಾಡಿ ಕೇಂದ್ರದ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು, ಒಳಗಿನ ಅಡುಗೆ ಮನೆಯ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು  ಮೀಟಿ ಮುರಿದು, ಒಂದು ಇಂಡೇನ್ ಗ್ಯಾಸ್ ಸಿಲಿಂಡರ್ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಗ್ಯಾಸ್ ಸಿಲಿಂಡರ್ನ ಬೆಲೆ ಸುಮಾರು 3000/- ರೂ. ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 302-392-ಕೂಡ ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಎಸ್. ಮಣಿ ಬಿನ್. ಸಗಾದೇವನ್, 39 ವರ್ಷ, ವಾಸ ನಂ 400, 3 ನೇ ಕ್ರಾಸ್, ಹಾಲಹಳ್ಳಿ,  ಮಂಡ್ಯ ರವರು ನೀಡಿದ ದೂರು ಏನೆಂದರೆ ಈಗ್ಗೆ ಸುಮಾರು 3-4 ವರ್ಷಗಳ ಹಿಂದೆ ನನ್ನ ತಮ್ಮ ರವಿಗೆ ಹೊಡೆದಿದ್ದು, ಆಗ ಆರೋಪಿ-4, ಮರೇಣುಕಾ ಹಾಲಹಳ್ಳಿ ವಾಸಿ ಮಂಡ್ಯರವರು ನನ್ನ ತಮ್ಮನ ಹತ್ತಿರ ಎಷ್ಟೇ ಖರ್ಚಾದರೂ  ಕೊಲೆ ಮಾಡುತ್ತೇನೆಂದು ಹೇಳಿದ್ದ ವಿಚಾರವನ್ನು  ನನ್ನ ತಮ್ಮ ನನಗೆ ತಿಳಿಸಿದ್ದು, ಈತನ ಮೇಲೂ ಮತ್ತು ಉಳಿದ ಆರೋಪಿಗಳ ಮೇಲು ಸಹ ನನ್ನ ತಮ್ಮನ ಕೊಲೆಯ ಸಾವಿನ ಬಗ್ಗೆ ಅನುಮಾನವಿರುತ್ತದೆ. ಆರೋಪಿಗಳು  ದಿನಾಂಕ: 17-02-2013 ರಂದು ರಾತ್ರಿ 11-30 ಗಂಟೆಗೆ ಫೋನ್ ಮಾಡಿ ನನ್ನ ತಮ್ಮನನ್ನು ಕರೆಯಿಸಿಕೊಂಡು ಈ ದಿನ ದಿನಾಂಕ: 18-02-2013 ರ ಬೆಳಗಿನ ಜಾವ 05-30 ಗಂಟೆ ನಡುವೆಯಲ್ಲಿ ಹಳೆಯ ದ್ವೇಷ ಇಟ್ಟುಕೊಂಡು ಕುತ್ತಿಗೆಗೆ ಯವುದೋ ಪ್ಲಾಸ್ಟಿಕ್ ವೈರ್ನ್ನು ಬಿಗಿದು ಕೊಲೆ ಮಾಡಿ ಮೇಲ್ಕಂಡ ಉಂಗುರಗಳು, ಚೈನ್, ವಾಚ್ ಮತ್ತು ಮೊಬೈಲ್ ಹ್ಯಾಂಡ್ ಸೆಟ್ ಇವುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ 80,000-00 ರೂಗಳೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಕಲಂ.  41 ಕ್ಲಾಸ್.(ಡಿ) ಕೂಡ 102 ಸಿ.ಆರ್.ಪಿ.ಸಿ. ಹಾಗೂ 379 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಬಿ.ಸಿ.ಕುಮಾರ್, ಸಿ.ಪಿ.ಸಿ.-305, ಹಲಗೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ನಾಗರಾಜು ಬಿನ್. ಲೇಟ್. ಕಾಳನಿಂಗೇಗೌಡ, ವಯಸ್ಸು 61 ವರ್ಷ, ಒಕ್ಕಲಿಗರು, ಕೂಲಿಕೆಲಸ ವಾಸ-ಹಾಡ್ಲಿ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ಆರತಿ ಉಕ್ಕಡದ ಮಾರಮ್ಮ ದೇವಸ್ಥಾನದ ಬಳಿ ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯ ಬಳಿ ಅವರಿಗೆ ಅರಿವಿಲ್ಲದಂತೆ ಕತ್ತಿನದಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಬಂದು ಅದನ್ನು ಮಾರಾಟ ಮಾಡಲು ಹಲಗೂರಿನ ಗಣೇಶ್ ಭವನ್ ಮುಂಭಾಗದಲ್ಲಿ ನಿಂತಿದ್ದಾಗ ಆರೋಪಿಯು ಪಿರ್ಯಾದಿಯವರನ್ನು ಕಂಡು ಅನುಮಾಸ್ಪದವಾಗಿ ಓಡಲು ಪ್ರಯತ್ನಸಿದಾಗ ಪಿರ್ಯಾದಿಯವರು ಆತನನ್ನು ಹಿಡಿದು ವಿಚಾರ ಮಾಡಿದಾಗ ಆತನ ಬಳಿ ಒಂದು ಚಿನ್ನದ ಮಾಂಗಲ್ಯ ಸರ ಇದ್ದು ಇದರ ಬಗ್ಗೆ ಹೇಳಿದಾಗ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡ ಮೇರೆಗೆ ಆರೋಪಿ ಮತ್ತು ಮಾಲನ್ನು ತಂದು ಹಾಜರುಪಡಿಸಿ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ.46/13 ಕಲಂ. ಹುಡುಗ ಕಾಣೆಯಾಗಿದ್ದಾನೆ.  

     ದಿನಾಂಕ: 18-02-2013 ರಂದು ಪಿರ್ಯಾದಿ ಸುಶೀಲಮ್ಮ ಕೊಂ. ರಾಮಚಂದ್ರ, ಕೆ.ಜಿ ಕೋಡಿಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗ ಲೊಕೇಶ್ ಬಿನ್ ರಾಮಚಂದ್ರ, 12 ವರ್ಷ, 7ನೇ ತರಗತಿ ವಿದ್ಯಾಥರ್ಿ, ಮುರಾಜರ್ಿ ಸ್ಕೂಲ್, ಕೋಟೆಬೆಟ್ಟ ನಾಗಮಂಗಲ ತಾಲ್ಲೋಕು, ಸ್ವಂತ ಊರು ಕೆ.ಜಿ.ಕೊಡಹಳ್ಳಿ ಗ್ರಾಮ, ಶೀಳನೆರೆ ಹೋಬಳಿ ಕೆ.ಆರ್.ಪೇಟೆ ತಾಲ್ಲೋಕು ರವರು ದಿನಾಂಕ: 04-02-2013 ರ ಹಿಂದಿನ ದಿನಗಳಲ್ಲಿ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 18-02-2013 ರಂದು ಪಿರ್ಯಾದಿ ನಾಗರಾಜು ಬಿನ್. ತಿಮ್ಮೇಗೌಡ, ಎಸ್.ಬಿ. ಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ತಿಮ್ಮೇಗೌಡ @ ಪುಟ್ಟೇಗೌಡ ಬಿನ್. ಚನ್ನಪಿಳ್ಳೇಗೌಡ, 65 ವರ್ಷ, ವಕ್ಕಲಿಗರು, ವ್ಯವಸಾಯ, ಸಂತೆಬಾಚಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರು ದಿನಾಂಕ: 12-02-2013 ರ ಹಿಂದಿನ ದಿನಗಳಲ್ಲಿ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. ಹೆಂಗಸು  ಕಾಣೆಯಾಗಿದ್ದಾಳೆ.

ದಿನಾಂಕ: 18-02-2013 ರಂದು ಪಿರ್ಯಾದಿ ಸಿದ್ದೇಗೌಡ ಬಿನ್. ಚನ್ನೇಗೌಡ, ಕ್ಯಾತನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಜಯಮ್ಮ, 45 ವರ್ಷ, ಒಕ್ಕಲಿಗರು, ಎಣ್ಣೆಗೆಂಪು ಬಣ್ಣ, ದುಂಡುಮುಖ, 5.5 ಅಡಿ ಎತ್ತರ ಇವರು ದಿನಾಂಕ: 09-02-2013 ರಂದು ಬೆಳಿಗ್ಗೆ 09-30 ಗಂಟೆಯಲ್ಲ್ಲ್ಲಿಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕಿನಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

      ದಿನಾಂಕ: 18-02-2013 ರಂದು ಪಿರ್ಯಾದಿ ಬಲರಾಮ.ಬಿ.ಎಸ್ ಬಿನ್. ಸಣ್ಣಶೆಟ್ಟಿ, ಭೈರಾಪುರ ಗ್ರಾಮ, ಶೀಳನೆರೆ ಹೋಬಳಿ, ಕೆ.ಆರ್.ಪೇಟೆ ತಾಲೋಕು ರವರು ನೀಡಿದ ದೂರು ಏನೆಂದರೆ ನನ್ನ ಮಗ ಬಿ.ಕೃಷ್ಣ, 14 ವರ್ಷ, 9ನೇ ತರಗತಿ, ಭೈರಾಪುರ ಗ್ರಾಮ, ಶೀಳನೆರೆ ಹೋ|| ಕೆ.ಆರ್.ಪೇಟೆ ತಾ. ರವರು ಹಾಗು ಸೋಮಶೇಖರರವರ ಮಗ ಕೆ.ಎಸ್ ಕಿರಣ್ ಕುಮಾರ್ ರವರು ಶೀಳನೆರೆ ಪ್ರೌಢಶಾಲೆಗೆ ವ್ಯಾಸಂಗಕ್ಕೆ ಹೋದವರು ಮನೆಗೆ ವಾಪಸ್ ಬಾರದ ಕಾರಣ ಇವರಿಬ್ಬರು ಕಾಣೆಯಾಗಿರುತ್ತಾರೆಂದು ಸೋಮಶೇಖರ್ ರವರು ಠಾಣೆಗೆ ದೂರು ನೀಡಿರುತ್ತಾರೆ. ನಾವು ನನ್ನ ಮಗನನ್ನು ಹುಡುಕುತ್ತಿದ್ದು ಈ ದಿವಸ ಅಂದರೆ  ದಿನಾಂಕಃ 18-02-2013 ರಂದು ಚೌಡಘಟ್ಟ ಗ್ರಾಮದ ಬಳಿ ಇರುವ ಕಾಳಮ್ಮನ ಕಟ್ಟೆಯಲ್ಲಿ ಹುಡುಗನ ಶವ ನೀರಿನಲ್ಲಿ ತೇಲುತ್ತಿರುತ್ತೆ ಎಂಬ ವಿಚಾರವನ್ನು ತಿಳಿದು ನಾವುಗಳು ಹೋಗಿ ನೋಡಲಾಗಿ ಕಟ್ಟೆಯಲ್ಲಿರುವ ಶವವು ನನ್ನ ಮಗ ಕೃಷ್ಣನಾಗಿರುತ್ತಾನೆ. ನನ್ನ ಮಗ ಕೃಷ್ಣನು ಕಟ್ಟೆಯಲ್ಲಿ ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾನೆ ವಿನಃ ಬೇರೆ ಯಾವುದೇ ಕಾರಣವಿರುವುದಿಲ್ಲ. ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬಹುದೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ರಫಿಕ ಅಹಮದ್ ಬಿನ್. ಅಮೀರ್ ಪಾಷಾ, ಮೈಸೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಕುಟುಂಬ ದೊಡನೆ  ಶ್ರಿರಂಗಪಟ್ಟಣಕ್ಕೆ ಪ್ರವಾಸಕ್ಕೆ ಬಂದಿದ್ದು ಎಲ್ಲರೊಡನೆ ನೀರಿನಲ್ಲಿ ಆಟಾಡುತ್ತಿದ್ದಾಗ ಪರ್ವಿನ್  ತಾಜ್.  ಕೋಂ. ಜುಬೇರ್ ಅಹಮದ್. 23 ವರ್ಷ ರವರು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾರೆ  ದಿನಾಂಕ: 18-02-2013  ರಂದು ಬೆಳಿಗ್ಗೆ ಶವ ಸಿಕ್ಕಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 174 ಸಿ.ಆರ್. ಪಿ.ಸಿ.

ದಿನಾಂಕ: 18-02-2013 ರಂದು ಪಿರ್ಯಾದಿ ಶಶಿಕುಮಾರ್ ಬಿನ್. ಲೇಟ್. ನಾರಾಯಣ, 34 ವರ್ಷ, ಒಕ್ಕಲಿಗರು, ಹೊಟೇಲ್ ವ್ಯಾಪಾರ, ಗೋಸೇಗೌಡರ ಬೀದಿ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು ಸುಮಾರು 65-70 ವರ್ಷ ವಯಸ್ಸು, ದಿನಾಂಕ: 18-02-2013 ರಂದು ಮದ್ಯಾಹ್ನ 03-00 ಗಂಟೆಯ ಹಿಂದಿನ ಸಮಯದಲ್ಲ್ಲಿ, ಸ್ನಾನಘಟ್ಟಕ್ಕೆ ಹೋಗುವ ಸೇತುವೆಯ ಗೋಡೆಯ ಬಳಿ, ಶ್ರೀರಂಗಪಟ್ಟಣ ಟೌನ್. ಇಲ್ಲಿ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ.ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕಾಗಿ ಕೋರಿಕೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್..ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಸಿದ್ದರಾಜು ಬಿನ್. ಲೇಟ್. ಸಿದ್ದಯ್ಯ, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರ ತಂದೆ ಸಿದ್ದಯ್ಯ, 75 ವರ್ಷ, ಗಾಂಧಿನಗರ, ಮಂಡ್ಯ ಸಿಟಿರವರಿಗೆ 75 ವರ್ಷ ವಯಸ್ಸಾಗಿ ಅವರ ತುಂಬಾ ಕೃಷರಾಗಿದ್ದು ಬೆಳಿಗ್ಗೆ 11-00 ಗಂಟೆ ನಂತರ ಕಾರಸವಾಡಿ ರಸ್ತೆಯಲ್ಲಿರುವ ತಮ್ಮ ಜಮೀನನ್ನು ನೋಡಿಕೊಂಡು ಬರಲು ಕಾರಸವಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 27/13 ಕಲಂ. 392 ಐ.ಪಿ.ಸಿ.

ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಭಾಗ್ಯಮ್ಮ ಕೋಂ.ಲೇಟ್ ಕೆ.ಶಿವಲಿಂಗಯ್ಯ, 32 ವರ್ಷ, ವಕ್ಕಲಿಗರು , ಜೀವಶಾಸ್ರ್ತ ವಿಭಾಗದಲ್ಲಿ ಸಹಾಯಕ ಕೆಲಸ, ಶಾಂತಿಕಾಲೇಜು, ವಾಸ: ಎನ್.ಇ.ಎಸ್.ಬಡಾವಣೆ, ಮಳವಳ್ಳಿ ಔನ್. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದನು ಆಗ ನಾನು ಕಳ್ಳನು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದಾನೆ ಎಂದು ಕೂಗಿಕೊಂಡೆ ಮತ್ತು ಆತನ ಹಿಂದೆಯೇ ಓಡಿಹೋದೆ, ಆತನು ಮುಂದೆ ಸ್ವಲ್ಪ ದೂರದಲ್ಲಿ ನಿಂತಿದ್ದ ಸ್ಕೂಟರ್ ನಲ್ಲಿ ಹತ್ತಿಕೊಂಡು ಹೋಗಿರುತ್ತಾರೆ. ನನ್ನ ಕತ್ತಿನಲ್ಲಿ ತರಚಿತ ಗಾಯವಾಗಿರುತ್ತದೆ. ಮಾಂಗಲ್ಯ ಮತ್ತು ಸರ ಒಟ್ಟು 35 ಗ್ರಾಂ,. ಇದರ ಬೆಲೆ 90,000/- ರೂ.ಗಳಾಗುತ್ತದೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 76/13 ಕಲಂ. 498(ಎ)-506 ಕೂಡ 34 ಐ.ಪಿ.ಸಿ ಮತ್ತು 3-4 ಡಿ.ಪಿ. ಕಾಯ್ದೆ.

ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಎನ್. ಪಲ್ಲವಿ ಕೋಂ. ಎಂ.ಜೆ.ಮಂಜು, 20 ವರ್ಷ, ಪರಿಶಿಷ್ಠಜಾತಿ, ಎಂ.ಬೆಟ್ಟಹಳ್ಳಿ ಗ್ರಾಮ, ಪಾಂಡವಪುರ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕಾದರೆ ಚಿನ್ನ, 2 ಲಕ್ಷ ಹಣವನ್ನು ಹಾಗೂ ಮೈಸೂರಿನಲ್ಲಿ ಒಂದು ಸೈಟನ್ನು ನನ್ನ ಹೆಸರಿಗೆ ತೆಗೆದುಕೊಡ ಬೇಕು ಎಂದು ಅವರ ಗಂಡ 1) ಎಂ.ಜೆ. ಮಂಜು ಬಿನ್ ಜವರಯ್ಯ, ಹಾಗು 2) ಸಾಕಮ್ಮ ಕೋಂ. ಜವರಯ್ಯ       3) ಜವರಯ್ಯ(ಗಂಟೆ)  4) ಲಾವಣ್ಯ ಬಿನ್. ಜವರಯ್ಯ, ಎಲ್ಲರೂ ಎಂ.ಬೆಟ್ಟಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು. ರವರುಗಳು ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ ಎಂದು ಹಾಗೂ ಪಿರ್ಯಾಧಿಯ ಅತ್ತೆ ಸಾಕಮ್ಮ ಹಾಗೂ ಮಾವ ಜವರಯ್ಯ(ಗಂಟೆ) ಹಾಗೂ ಅವರ ನಾದಿನಿ ಲಾವಣ್ಯ ಸಹ ಇವರೊಂದಿಗೆ ಸೇರಿ ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಆರೋಪಿ-1 ರವರನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 17-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-02-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅತ್ಯಾಚಾರ ಪ್ರಕರಣ,  5 ಸಾಮಾನ್ಯ / ವಾಹನ ಕಳವು ಪ್ರಕರಣಗಳು ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಅತ್ಯಾಚಾರ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. 341-506-376 ಕೂಡ 34 ಐ.ಪಿ.ಸಿ.

ದಿನಾಂಕ: 17-02-2013 ರಂದು ತಮ್ಮಯ್ಯ, ಲಿಂಗಾಪುರ ಗ್ರಾಮ, ಕಿಕ್ಕೇರಿ ಹೋಬಳಿ ರವರ ಮಗಳು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿರವರುಗಳಾದ 1)ಅರುಣ, 2)ನಾಗರಾಜು ಇಬ್ಬರೂ ಲಿಂಗಾಪುರ ಗ್ರಾಮರವರು  ಬಂದು ನನ್ನನ್ನು ಹಿಡಿದುಕೊಂಡು ಶಿವರುದ್ರನ ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ಕೈ ಕಾಲುಗಳನ್ನು ಹಿಡಿದು ಕೆಳಕ್ಕೆ ಕೆಡವಿಕೊಂಡು ಬಾಯಿಗೆ ಬಟ್ಟೆಯನ್ನು ಹಾಕಿ ಅಮುಕಿ ಹಿಡಿದುಕೊಂಡು ಅರುಣ ಎಂಬುವನು ತನ್ನ ಬಟ್ಟೆಯನ್ನು ಬಿಚ್ಚಿ ಬಲಾತ್ಕಾರವಾಗಿ ಅತ್ಯಚಾರ ಮಾಡಿರುತ್ತಾನೆಂದು, ನಾಗರಾಜುರವರು ಪಕ್ಕದಲ್ಲಿ ನಿಂತಕೊಂಡು ಯಾರಾದರೂ ಬರುತ್ತಾರೆಯೇ ಎಂದು ನೊಡಿಕೊಳ್ಳುತ್ತಿದ್ದನೆಂದು ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ತನಗೆ ಚಾಕು ಹಾಕುತ್ತೆನೆ, ಆಸಿಡ್ ಹಾಕುತ್ತೆನೆ ಎಂದು ಹೆದರಿಸಿದ್ದರಿಂದ ಬಂದು ದೂರು ಕೊಡುತ್ತಿದ್ದೆನೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಸಾಮಾನ್ಯ / ವಾಹನ ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 379 ಐ.ಪಿ.ಸಿ.

     ದಿನಾಂಕ: 17-02-2013 ರಂದು ಪಿರ್ಯಾದಿ ಸುಬ್ಬಲಕ್ಷ್ಮೀ ಕೋಂ. ಲೇಟ್. ನಾರಾಯಣ, ವಾಸ- 2 ನೇ ಕ್ರಾಸ್, ರಂಗನಾಥ ನಗರ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ದೇವಸ್ಥಾನಕ್ಕೆ ಸರದಿಯಲ್ಲಿ ಹೋಗುವಾಗ ಯಾರೋ ಕಳ್ಳರು ನನಗೆ ಅರಿವಿಲ್ಲದಂತೆ ನನ್ನ ಕತ್ತಿನಲ್ಲಿದ್ದ ಲಕ್ಷ್ಮೀಡಾಲರ್ ಸಹಿತವಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ. ಚಿನ್ನದ ಸರ ಸುಮಾರು 45 ಗ್ರಾಂ ತೂಕವಿರುತ್ತದೆ.  ಈ ಚಿನ್ನದ ಸರದ ಬೆಲೆ ಸುಮಾರು 1 ಲಕ್ಷ 20 ಸಾವಿರ ರೂಪಾಯಿಗಳಾಗಿರಬಹುದು. ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 379 ಐ.ಪಿ.ಸಿ.

      ದಿನಾಂಕ: 17-02-2013 ರಂದು ಪಿರ್ಯಾದಿ ನಂಜಮ್ಮ, ವಾಸ- # 46, ವಿಜಯತೇ ನಿಲಯ, ವಿ.ವಿ ಲೇ. ಔಟ್, 3 ನೇ ಅಡ್ಡ ರಸ್ತೆ, ಗುತ್ತಲು ಪೋಸ್ಟ್, ಮಂಡ್ಯ ಸಿಟಿ ರವರು ನೀಡಿದ ದೂರಿನ  ವಿವರವೇನೆಂದರೆ ಪಿರ್ಯಾಧಿಯವರು ತನ್ನ ಕುಟುಂಬದೊಡನೆ ರಥಸಪ್ತಮಿಯ ಪ್ರಯುಕ್ತ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗದಲ್ಲಿದ್ದಾಗ ಜನಜಂಗುಳಿಯಲ್ಲಿ ತನ್ನ ಕತ್ತಿನಲ್ಲಿದ್ದ ಸುಮಾರು 26 ಗ್ರಾಂ ತೂಕದ ಚಿನ್ನದ ಸರವನ್ನು (ಅವಲಕ್ಕಿ ಸರ) ಕಳ್ಳರು ಪಿರ್ಯಾದಿಯರಿಗೆ ಅರಿವಿಲ್ಲದಂತೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಮೌಲ್ಯ ಸುಮಾರು 48 ಸಾವಿರ ರೂ. ಆಗಿರಬಹುದು ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 379 ಐ.ಪಿ.ಸಿ.

ದಿನಾಂಕ: 17-02-2013 ರಂದು ಪಿರ್ಯಾದಿ ಹೆಚ್.ಸಿ.ನಿಶ್ಚಿತ ಕೋಂ. ಚಂದ್ರಶೇಖರ್, 24 ವರ್ಷ, ಒಕ್ಕಲಿಗರು, ಗೃಹಿಣಿ, ವಾಸ 1781/ಬಿ, ಪಾಪೇಗೌಡರ ಬೀದಿ, 14ನೇ ಕ್ರಾಸ್, ಮಂಗಳವಾರಪೇಟೆ, ಚನ್ನಪಟ್ಟಣ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ತಮ್ಮ ಗಂಡನ ಊರಿಗೆ ಹೋಗಲು ಚನ್ನಪಟ್ಟಣ ಕಡೆಗೆ ಹೋಗುವ ಉದಯರಂಗ ಖಾಸಗಿ ಬಸ್ಸನ್ನು ಹತ್ತಿ ಕುಳಿತುಕೊಂಡು ತನ್ನ ವ್ಯಾನಿಟಿ ಬ್ಯಾಗನ್ನು ನೋಡಿಕೊಂಡಾಗ ಜಿಪ್ ಓಪನ್ ಆಗಿದ್ದು ಒಳಗಡೆ ಇಟ್ಟಿದ್ದ ವಡವೆ ಬಾಕ್ಸ್ ಇರಲಿಲ್ಲ. ಸದರಿ ವಡವೆ ಬಾಕ್ಸ್ನಲ್ಲಿದ್ದ 25 ಗ್ರಾಂ ತೂಕದ ನೆಕ್ಲೆಸ್ ಇದರಲ್ಲಿ ಹಸಿರು ಬಣ್ಣದ ಹರಳುಗಳು ಮತ್ತು ಡಾಲರ್ ಇರುತ್ತೆ, 7 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ ಮತ್ತು ಹ್ಯಾಂಗಿಂಗ್ಸ್ ಇವು ಹಸಿರು ಹರಳಿನಿಂದ ಕೂಡಿರುತ್ತೆ, ಇವುಗಳನ್ನು ವಡವೆ ಬಾಕ್ಸ್ ಸಮೇತ ಯಾರೋ ಕಳ್ಳರು ಮೇಲ್ಕಂಡ ವಡವೆಗಳನ್ನು ಕಳವು ಮಾಡಿರುತ್ತಾರೆ. ಇವುಗಳ ಒಟ್ಟು ಬೆಲೆ 85,000-00 ರೂ.ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 379 ಐ.ಪಿ.ಸಿ.

  ದಿನಾಂಕ: 17-02-2013 ರಂದು ಪಿರ್ಯಾದಿ ಎಂ ಮಹದೇವಪ್ಪ ಬಿನ್. ಲೇಟ್. ಮಲ್ಲಣ್ಣ, ಮನೆ ನಂ. ಕೆಟಿ 681, ಚಾಮುಂಡೇಶ್ವರಿನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಹುಷಾರಿಲ್ಲದರಿಂದ ಡಾ.ಕ್ಟರ್ ಬಳಿ ತೋರಿಸಲು ವಿಕ್ರಮ್ ಆಸ್ಪತ್ರೆ ಮುಂಭಾಗ ರಸ್ತೆಯಲ್ಲಿ ಕೆಎ 11-ಕೆ-1076 ಟಿವಿಎಸ್ ಎಕ್ಸ್.ಎಲ್.ಸೂಪರ್ ಸುಜುಕಿ ಮೊಪೆಡ್ ಬೀಗ ಹಾಕಿ ನಿಲ್ಲಿಸಿ ಮೊಪೆಡ್ನ ಕವರ್ ನಲ್ಲಿ ಮಂಡ್ಯ ವಿವಿದ ಬ್ಯಾಂಕಗ್ಗಳ ಪಾಸ್ ಪುಸ್ತಕಗಳಿದ್ದು ಎ.ಪಿ.ಎಲ್. ರೇಷನ್ ಕಾಡರ್್ನ್ನು ಇಟ್ಟು ಚಿಕಿತ್ಸೆಗೆ ಚಿಕಿತ್ಸೆ ಪಡೆದು ಅಲ್ಲಿಂದ   ವಾಪಸ್ಸು ಬಂದು ನೋಡಲಾಗಿ ನನ್ನ ಮೊಪೆಡ್ ಇರಲಿಲ್ಲ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿ ಕೊಡಬೇಕೆಂದು ನಿಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


5. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 41 ಕ್ಲಾಸ್[ಡಿ.]  ಕೂಡ 102 ಸಿ,ಆರ್.ಪಿ.ಸಿ. ಹಾಗು 379 ಐ.ಪಿ.ಸಿ.

ದಿನಾಂಕ: 17-02-2013 ರಂದು ಪಿರ್ಯಾದಿ ಬಿ.ಎಂ ಸತ್ಯನಾರಾಯಣ, ಎ.ಎಸ್.ಐ. ಶಿವಳ್ಳಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಸಿಬ್ಬಂದಿಯವರಾದ   ಸಿ.ಪಿ.ಸಿ-128 ಜಿ.ಆರ್ ಆನಂದರವರನ್ನು ಆರೋಪಿ ಮತ್ತು ಕಳುವು ಮಾಲಿನ ಬಗ್ಗೆ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಒಂದು ಹುಡುಗನು ನಮ್ಮನ್ನು ನೋಡಿ ಮೊಪೆಡ್ ನ್ನು  ಬೀಳಿಸಿ ಓಡಿ ಹೋಗಲು ಯತ್ನಿಸಿದ್ದು ತಕ್ಷಣ ಹಿಡಿದುಕೊಂಡು ಆತನು ತಂದಿದ್ದ ಟಿ,ವಿ.ಎಸ್. ನ್ನು  ಪರಿಶೀಲಿಸಲಾಗಿ ಹಿಂದೆ ಮುಂದೆ ನಂಬರ್ ಪ್ಲೇಟ್ ಇಲ್ಲದ ಕಾರಣ ಈ ಬಗ್ಗೆ ವಿಚಾರ ಮಾಡಲಾಗಿ ಹುಡುಗನು ನಾನು ಈ ಟಿ.ವಿ.ಎಸ್ ನ್ನು ಮಂಡ್ಯದ ಸರ್ಕಾರಿ ಅಸ್ಪತ್ರೆಯ ಮುಂಭಾಗ ಕಳುವು ಮಾಡಿದ್ದೆಂದು ನುಡಿದ ಮೇರೆಗೆ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 16-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-02-2013 ರಂದು ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳ್ಳತನ ಪ್ರಕರಣ ಹಾಗು 6 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 16-02-2013 ರಂದು ಪಿರ್ಯಾದಿ ಮಾಸ್ತಯ್ಯ ಬಿನ್. ಹುಚ್ಚಯ್ಯ, 38 ವರ್ಷ, ಗಂಗಾಮತಸ್ಥ ಜನಾಂಗ, ಅರಕೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಫಿಯರ್ಾದಿಯ ಬಾಮೈದ ಮಹದೇವ ಬಿನ್. ರುದ್ರ, 25 ವರ್ಷ, ಗಂಗಾಮತಸ್ಥ ಜನಾಂಗ ರವರು ದಿನಾಂಕ: 02-01-2013 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ತನ್ನ ಹೆಂಡತಿಯ ಊರು ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಬೆಂಗಳೂರಿಗೂ ಹೋಗದೆ ಪಿರ್ಯಾದಿಯವರ ಮನೆಗೂ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ನೆಂಟರಿಷ್ಟರ ಮನೆಗಳಲ್ಲಿ ಹುಡುಕಾಡಿದರೂ ಸಿಗದಿದ್ದ ಕಾರಣ, ಈ ದಿನ ತಡವಾಗಿ ಬಂದು ಹುಡುಕಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. ಮಕ್ಕಳು ಕಾಣೆಯಾಗಿದ್ದಾರೆ.

    ದಿನಾಂಕ: 16-02-2013 ರಂದು ಪಿರ್ಯಾದಿ ಸೋಮಶೇಖರ ಬಿನ್. ಶಿವಯ್ಯ, ಶೀಳನೆರೆ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ 1] ಕೆ.ಎಸ್.ಕಿರಣ್ಕುಮಾರ್. 14 ವರ್ಷ ಹಾಗು 2] ಬಿ. ಕೃಷ್ಣ, 14 ವರ್ಷ. ಭೈರಾಪುರ ಗ್ರಾಮ ರವರುಗಳು ಶಾಲೆಗೆಂದು ಹೋದವರು, ಶಾಲೆಗೆ ಹೋಗಿರುವುದಿಲ್ಲ. ಬ್ಯಾಗುಗಳನ್ನು ಶಾಲೆಯ ಬಳಿ ಇಟ್ಟು ಎಲ್ಲಿಯೋ ಹೊರಟು ಹೋಗಿರುತ್ತಾರೆ ನಾವು ನಮ್ಮ ಸಂಬಂದಿಕರು, ಸ್ನೇಹಿತರನ್ನು ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 16-02-2013 ರಂದು ಪಿರ್ಯಾದಿ ತಿಮ್ಮೇಗೌಡ, (ಕಾಳಮ್ಮನ-ಗುಡ್ಡಪ್ಪ) ಕಡಿಲುವಾಗಿಲು, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ: 09/10-01-2013 ರಂದು 1] ಜೋಗಿಶೆಟ್ಟಿ ಬಿನ್. ಟೈಲರ್ ಚಲುವಶೆಟ್ಟಿ, ಕಡಿಲುವಾಗಿಲು ಗ್ರಾಮ ಮತ್ತು 2]  ತಿಮ್ಮ,  ಬನ್ನಹಳ್ಳಿ ಗ್ರಾಮರವರುಗಳು ವೀರಭದ್ರೇಶ್ವರ ಸ್ವಾಮಿ ದೇವಾಲಯ, ಕಾಳಮ್ಮ ಮತ್ತು ಮದ್ದನಹಟ್ಟಿ ಅಮ್ಮನ ದೇವಾಲಯಗಳ ಬಾಗಿಲುಗಳ ಬೀಗ ಮುರಿದು ಹುಂಡಿಯಲ್ಲಿ ಇದ್ದ ಹಣ ಹಾಗೂ ದೇವರುಗಳ ವಿಗ್ರಹಗಳಲ್ಲಿ ಇದ್ದ ಬೆಳ್ಳಿ ಛತ್ರಿ ಹಾಗೂ ಇತರೆ ಬೆಲೆ ಬಾಳುವ ಪದಾರ್ಥಗಳನ್ನು ಆರೋಪಿಗಳು ಕಳ್ಳತನ ಮಾಡಿರುವುದು ಅನುಮಾನವಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 15-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-02-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿರುತ್ತವೆ ಅವುಗಳಲ್ಲಿ 5 ಯು.ಡಿ.ಆರ್. ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964 ಅಧಿನಿಯಮ ಪ್ರಕರಣ,  1 ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ದೇವರಾಜು ಬಿನ್. ಲೇ. ಚಲುವಯ್ಯ, ಮರಳಗಾಲ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ವೈಕುಂಟಯ್ಯ    ಬಿನ್ ಲೇ| ಚಲುವಯ್ಯ ರವರಿಗೆ ನೋವು ಜಾಸ್ತಿಯಾಗಿ ಹೊಟ್ಟೆ ನೋವಿನ ಔಷಧ ಕುಡಿಯುವ ಬದಲು ಯಾವುದೋ ಕ್ರಿಮಿನಾಷಕ ಔಷಧಿ ಕುಡಿದು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

       ದಿನಾಂಕ: 15-02-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇ. ಕುಮಾರ, 32 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕುಮಾರ ಬಿನ್. ಲೇ. ಪಳಿನಿ, 60 ವರ್ಷ, ರವರು ಡ್ರೈನೇಜ್ನ್ನು ಸ್ವಚ್ಚಗೊಳಿಸುತ್ತಿದ್ದಾಗ, ಆಕಸ್ಮಿಕವಾಗಿ ಚರಂಡಿಗೆ ಬಿದ್ದಿದ್ದು, ಪೆಟ್ಟಾಗಿದ್ದ ಕುಮಾರರವರನ್ನು ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಮಂಡ್ಯ ಜಿಲ್ಲಾ ಆಸ್ಪತ್ರೆಯ ಬಳಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

3. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

      ದಿನಾಂಕ: 15-02-2013 ರಂದು ಪಿರ್ಯಾದಿ ನರೇಶ್, ಸಹಾಯಕ ಇಂಜಿನಿಯರ್, ಬಿ.ಡಬ್ಯೂ.ಎಸ್.ಎಸ್.ಬಿ.  ಟಿ.ಕೆ.ಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನೆಟ್ಕಲ್ ಎನ್ಬಿಆರ್ ಕೆರೆಯಲ್ಲಿ ಒಂದು ಅಪರಿಚಿತ ಗಂಡಸು, ಸುಮಾರು 45 ರಿಂದ 50 ವರ್ಷ, ಶವ ತೇಲುತ್ತಿರುತ್ತದೆ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

4. ಶಿವಳ್ಳಿ  ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಅರ್.ಪಿ.ಸಿ.

     ದಿನಾಂಕ: 15-02-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ಲೆಃ ಕರೀಗೌಡ, ಪುರದಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಅಪರಿಚಿತ ಗಂಡಸು, ಸುಮಾರು 50-55 ವರ್ಷ ರವರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವನೆ ಮಾಡಿಯೋ ಆಥವಾ ಹೃದಯಾಘಾತದಿಂದಲೋ ಅಥವಾ ಯಾವುದೋ ಖಾಯಿಲೆಯಿಂದ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸತ್ತಿರುತ್ತಾನೆ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

5.ಪಾಂಡವಪುರ ಪೊಲೀಸ್ ಠಾಣೆ ಯುಡಿಆರ್ ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ಈರೇಗೌಡ ಬಿನ್. ಲೇಟ್. ಹೊನ್ನೇಗೌಡ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಜ್ಯೋತಿ ಕೋಂ. ಸೋಮೇಗೌಡ @ ತಮ್ಮೇಗೌಡ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :


ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 279, 304[ಎ] ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 15-02-2013 ರಂದು ಪಿರ್ಯಾದಿ ಡಿ.ಎನ್ ನಟರಾಜು, ಸಿಪಿಸಿ-701, ಮಂಡ್ಯ ಗ್ರಾಮಾಂತರ ಠಾಣೆ ರವರು ನೀಡಿದ ದೂರು ಏನೆಂದರೆ ಒಬ್ಬ ಗಂಡಸು ರಸ್ತೆಯಲ್ಲಿ ಬಿದ್ದಿದ್ದು ಹತ್ತಿರ ಹೋಗಿ ನೋಡಲಾಗಿ ಗಂಡಸಿನ  ತಲೆಯ ಮೇಲೆ ಯಾವುದೋ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಸದರಿ ವಾಹನ, ಚಾಲಕನ ಹೆಸರು ಮತ್ತು ವಿಳಾಸ ಪತ್ತೆ ಮಾಡಬೇಕಾಗಿದೆ.  ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.  


ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964 ಅಧಿನಿಯಮ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 4, 5, 8, 9 ಮತ್ತು 11 [ಡಿ] ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964.

ದಿನಾಂಕ: 15-02-2013 ರಂದು ಪಿರ್ಯಾದಿ ಬಾಲು ಹೆಚ್.ಎನ್. ಆರಕ್ಷಕ ಉಪ ನಿರೀಕ್ಷಕರು, ಮಂಡ್ಯ ಪೂರ್ವ ಪೊಲೀಸ್ ಠಾಣೆ,  ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ. ಬಿ. ಮಂಜು11ಎ 4305 ರ ಚಾಲಕ ಮತ್ತು ಮಾಲೀಕ, 2] ಕೆ, ಎ, 11 ಎ 3960ರ ಚಾಲಕ.  3] ಕೆ, ಎ, 11 ಎ 4640 ರ ಚಾಲಕ
4] ಕೆ,ಎ, 11ಎ 2476ರ ಚಾಲಕ ಮತ್ತು 5] ಸಾಧಿಕ್ ರವರುಗಳು ಗೂಡ್ಸ್ ಟೆಂಪೋದಲ್ಲಿ ಎಮ್ಮೆಗಳನ್ನು ಮತ್ತು ಹಸುಗಳನ್ನು ತುಂಬಿಕೊಂಡು ಬರುತ್ತಿದ್ದಾರೆೆ. ಅವುಗಳನ್ನು ರಕ್ಷಿಸಿ ಎಂದು ಬಂದಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳ ಜೊತೆ ಮತ್ತು ಪಂಚಾಯ್ತುದಾರರ ಸಮಕ್ಷಮ ಮಧ್ಯಾಹ್ನ 12-30 ಗಂಟೆಯಿಂದ 13-30 ಗಂಟೆಯವರೆಗೆ ಕ್ರಮ ಕೈಗೊಂಡು ವಿವರವಾದ ಮಹಜರ್ ಕ್ರಮವನ್ನು ಜರುಗಿಸಿ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 379 ಐ.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ವಿಠಲಾಪುರ ರಸ್ತೆಯಲ್ಲಿರುವ ಕುಂದನಕುಪ್ಪೆ, ಎಲ್ಲೆಯ ಸವರ್ೆ ನಂಬರ್ 401 & 407 ರ ಜಮೀನಿನಲ್ಲಿ ಪಂಪ್ಸೆಟ್ಗೆ ಅಳವಡಿಸಿದ್ದ ಸುಮಾರು 100 ಮೀಟರ್ ಉದ್ದದ್ದ ಕೇಬಲ್ ವೈರನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 324, 323, 498(ಎ) ಐ.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ಗೋವಿಂದರಾಜು @ ಗೋಪಿ ಬಿನ್. ನಂಜಯ್ಯ, ಯರಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಯು ಬಂದು ಸಂಸಾರದ ವಿಚಾರದಲ್ಲಿ ಜಗಳ ತೆಗೆದು ಇಟ್ಟಿನ ದೊಣ್ಣೆಯಿಂದ ಕಾಯಿ ತುರಿಯುವ ಮಣೆಯಿಂದ, ಮತ್ತು ಚೂರಿಯಿಂದ, ಕೈಯಿಂದ ಹೊಡೆದು ಪಿಯರ್ಾದಿಯವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 14-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-02-2013 ರಂದು ಒಟ್ಟು 8 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅಪಹರಣ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   

ಮನುಷ್ಯ ಕಾಣೆಯಾದ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 14-02-2013 ರಂದು ಪಿರ್ಯಾದಿ ಎನ್.ಡಿ.ಪುಟ್ಟರಾಜು ಬಿನ್. ಲೇ. ದೇವೇಗೌಡ, 36ವರ್ಷ, ವಕ್ಕಲಿಗರು, ವ್ಯವಸಾಯ, ನರಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಅಣ್ಣನ ಮಗಳು, 21 ವರ್ಷರವರು  ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಬಿಟ್ಟು ಹೋಗಿದ್ದು ವಾಪಸ್ ಮನೆಗೆ ಬಂದಿರುವುದಿಲ್ಲ, ಪಿರ್ಯಾದಿಯವರು ಎಲ್ಲಾ ಕಡೆ ಹುಡುಕಾಡಿ ಪತ್ತಯಾಗದ ಕಾರಣ, ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 55/13 ಮನುಷ್ಯ ಕಾಣೆಯಾಗಿದ್ದಾನೆ.

       ದಿನಾಂಕ: 14-02-2013 ರಂದು ಪಿರ್ಯಾದಿ ಮಾದಯ್ಯ ಬಿನ್. ಬುಯ್ಯೇಗೌಡ, 65 ವರ್ಷ, ಹಳೆಬೂದನೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರು ಠಾಣೆಗೆ ಹಾಜರಾಗಿ ತನ್ನ ಗಂಡು ಮಗ ಕುಂದೂರಯ್ಯ @  ಪುಟ್ಟಸ್ವಾಮಿ, 36 ವರ್ಷ ಒಕ್ಕಲಿಗರು, ಹಳೆಬೂದನೂರು ಗ್ರಾಮ, ಮಂಡ್ಯ ತಾರವರು ದಿನಾಂಕಃ-12-01-2013ರಂದು ಮದ್ಯಾಹ್ನ 01-00 ಗಂಟೆ ಸಮಯದಲ್ಲಿ ಮನೆಯಿಂದ ಹೋದವನು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 31/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

      ದಿನಾಂಕ: 14-02-2013 ರಂದು ಪಿರ್ಯಾದಿ ಮೋಹನ್ಕುಮಾರ್, ಚೋಳನಹಳ್ಳಿ ಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರೂಪ ಎಂಬುವವರು ನಾಗಮಂಗಲ ಕಾಲೇಜಿಗೆ ಹೋದವಳು ವಾಪಸ್ಸು ಬಂದಿರುವುದಿಲ್ಲ. ಎಲ್ಲಾ ಸಂಬಂದಿಕರ ಮನೆಯಲ್ಲಿ ಹುಡುಕಿ ಈ ದಿನ ದೂರು ನೀಡಿರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 366(ಎ) ಕೂಡ 34 ಐ.ಪಿ.ಸಿ.

        ದಿನಾಂಕ: 14-02-2013 ರಂದು ಪಿರ್ಯಾದಿ ವೆಂಕಟಸ್ವಾಮಿ ಬಿನ್ ಲೇ. ತವಕುಂಡಯ್ಯ, ಹನುಮಂತನಗರ, ಸಿ.ಎ.ಕೆರೆ ಹೋಬಳಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ಹೆಚ್.ವಿ. ಕಾಲೇಜಿಗೆ ಹೋಗುತ್ತೇನೆಂದು ಮನೆಯಿಂದ ಹೋಗಿದ್ದು ವಾಪಸ್ಸು ಮನೆಗೆ ಬಂದಿರುವುದಿಲ್ಲ ಆರೋಪಿ-1 1] ಶರ್ಮ @ ಮಲ್ಕಜ ಹಾಗು ಇತರೆ 3 ಜನರು ಎಲ್ಲರೂ ತಿಪ್ಪೂರು ಗ್ರಾಮ, ಕನಕಪುರ ತಾ..ರವರು ಪಿರ್ಯಾದಿಯವರ ಮಗಳನ್ನು ಪ್ರೀತಿಸುತ್ತಿದ್ದು ಆರೋಪಿಗಳು ಒಟ್ಟಾಗಿ ಪಿರ್ಯಾದಿಯವರ ಮಗಳನ್ನು ಅಪಹರಣ ಮಾಡಿರುವ ಗುಮಾನಿ ಇರುತ್ತೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ರಸ್ತೆ ಅಪಘಾತ ಪ್ರಕರಣ : 

ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 279, 304 (ಎ) ಐಪಿಸಿ ರೆಃವಿ 187 ಐಎಂವಿ ಕಾಯ್ದೆ.

ದಿನಾಂಕ: 14-02-2013 ರಂದು ಪಿರ್ಯಾದಿ ಎ.ಸಿ. ಜವರಾಯಿಗೌಡ ಬಿನ್ ಚಿಕ್ಕತಿಮ್ಮಯ್ಯ, ಅಜ್ಜಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ, ಮದ್ದೂರು ತಾಲ್ಲೋಕು ರವರು ನೀಡಿದ ದೂರಿನ  ವಿವರವೇನೆಂದರೆ  ಪಿರ್ಯಾದಿ    ದೊಡ್ಡಮ್ಮನ ಮಗ ಅಪರಿಚಿತ ಲಾರಿಯ ಚಾಲಕ,  ಹೆಸರು  ವಿಳಾಸ  ತಿಳಿಯಬೇಕಾಗಿದೆ  ನಡೆದುಕೊಂಡು  ರಸ್ತೆ  ದಾಟುತ್ತಿದ್ದಾಗ  ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗಲು ಯಾವುದೋ ಒಂದು ಲಾರಿಯ ಚಾಲಕ ಲಾರಿಯನ್ನು ಬಹಳ ವೇಗವಾಗಿ ಅಜಾಗರೂಕತೆಯಿಂದ  ಓಡಿಸಿಕೊಂಡು  ಬಂದು  ರಸ್ತೆ  ದಾಟುತ್ತಿದ್ದ ಎನ್.ಹೆಚ್. ವೆಂಕಟೇಶನಿಗೆ  ರಭಸವಾಗಿ  ಡಿಕ್ಕಿ  ಹೊಡೆಸಿ  ಲಾರಿಯನ್ನು  ನಿಲ್ಲಿಸದೆ ಹೊರಟುಹೋದ  ಚಿಕಿತ್ಸೆಗಾಗಿ  ಮದ್ದೊರು  ಸರ್ಕಾರಿ  ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ  ನಂತರ ವೈದ್ಯರ  ಸಲಹೆ  ಮೇರೆಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ  ಮಧ್ಯೆ  ಮೃತಪಟ್ಟಿರುತ್ತಾನೆಂದು  ಕೊಟ್ಟ  ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 13-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಾಬರಿ ಪ್ರಕರಣಗಳು,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ, 1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  1 ಕೊಲೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ರಾಬರಿ ಪ್ರಕರಣಗಳು :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 392 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಚೈತ್ರ ಬಿನ್. ಶಿವನಂಜು, 18 ವರ್ಷ, ಬಿಎಸ್ಸಿ ವಿಧ್ಯಾರ್ಥಿನಿ , ಬೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಪೀಹಳ್ಳಿ ಕೆರೆ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜೆ 05-15 ಗಂಟೆಯಲ್ಲಿ ಒಂದು ಬೈಕ್ ಮೇಲೆ ಒಬ್ಬ ಅಸಾಮಿ ಕುಳಿತಿದ್ದು, ಮತ್ತೊಬ್ಬ ಕೆಳಗೆ ನಿಂತಿದ್ದು, ನಿಂತಿದ್ದ ಅಸಾಮಿ ನಮ್ಮ ಬಳಿಗೆ ಬಂದು ರೇಜರ್ ತೋರಿಸಿ, ನನ್ನ ಕತ್ತಿನಲ್ಲಿ ಹಾಕಿದ್ದ ಚಿನ್ನದ ಚೈನನ್ನು ಬಲವಂತವಾಗಿ ಕಿತ್ತುಕೊಂಡು ಓಡಿ ಹೋಗಿರುತ್ತಾನೆ, ಚಿನ್ನದ ಸರವು 15 ಗ್ರಾಂ. ತೂಕವಿದ್ದು, ಇದರ ಮೌಲ್ಯ 30 ಸಾವಿರ ರೂ ಆಗುತ್ತದೆ. ಆರೋಪಿಯನ್ನು ಪತ್ತೆ ಮಾಡಿ ಚಿನ್ನದ ಸರವನ್ನು ಕೊಡಿಸಿ ಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 384 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ಸಿದ್ದಯ್ಯ. ಬೆಸಗರಹಳ್ಳಿ ಅಡ್ಡರಸ್ತೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ರವಿ ಬಿನ್. ಸೋಮಯ್ಯ, ಇಗ್ಗಲೂರು ಗ್ರಾಮ, ಚನ್ನಪಟ್ಟಣ ತಾ. ರವರು ಕೋಳಿ ಫಾರಂನಲ್ಲಿ ಮಲಗಿದ್ದಾಗ ಆರೋಪಿ ಬಂದು ಚಾಕು ತೋರಿಸಿ ಅವರ ಬಳಿ ಇದ್ದ 12000=00 ರೂ ಗಳನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 498(ಎ)-504 ಕೂಡ34 ಐ.ಪಿ.ಸಿ.ಮತ್ತು ಕಲಂ4 ಡಿ.ಪಿ.ಕಾಯಿದೆ.

     ದಿನಾಂಕ: 13-02-2013 ರಂದು ಪಿರ್ಯಾದಿ ಅಂಜಲಿ ಕೋಂ. ಚಂದ್ರೇಗೌಡ, 20 ವರ್ಷ, ಒಕ್ಕಲಿಗರು, ಗೃಹಿಣಿ, ಹೊಸಕೋಟೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಚಂದ್ರೇಗೌಡ ಬಿನ್ ಲೇಟ್. ಅಂಕೇಗೌಡ ಹಾಗು ಅತ್ತೆ ಲಕ್ಷ್ಮಮ್ಮ ಕೋಂ. ಲೇಟ್ ಅಂಕೇಗೌಡ, ಇಬ್ಬರೂ ಹೊಸಕೋಟೆ ಗ್ರಾಮ ರವರುಗಳು ಪಿರ್ಯಾದಿಯವರನ್ನು ವರದಕ್ಷಿಣೆಯಾಗಿ ಎರಡು ಲಕ್ಷ ರೂ.ಗಳನ್ನು ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ಕೊಟ್ಟಿದ್ದು, ದಿಃ-12-02-2013 ರಂದು ಬೆಳಿಗ್ಗೆ 6 ಗಂಟೆಯಲ್ಲಿ ಪಿರ್ಯಾಧಿಯ ಗಂಡ ಮತ್ತು ಅತ್ತೆ ಇಬ್ಬರು ಪಿರ್ಯಾದಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಬೈದು ಮನೆಯಿಂದ ಹೊರಗೆ ನೂಕಿರುತ್ತಾರೆ ಕ್ರಮ ಕೈಗೊಳ್ಳಿ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 36/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

     ದಿನಾಂಕ: 13-02-2013 ರಂದು ಪಿರ್ಯಾದಿ ಶೀನೆಗೌಡ ಬಿನ್. ಲೇಟ್. ಯಾಲಕ್ಕಿಗೌಡ, ಕಬ್ಬಲಗೆರೆ ಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ದಿನಾಂಕ: 07-02-2013 ರಂದು ಸಂಜೆ 05-00 ಗಂಟೆಯಲ್ಲಿ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೋದವಳು ಮತ್ತೆ ವಾಪಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಪತ್ತೆಮಾಡಿಕೊಡಿ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 379 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಎಂ.ಎಸ್.ಇಂದ್ರ ವಾಸ ನಂ. 4/10, 1ನೇ ಕ್ರಾಸ್, 1ನೇ ಮುಖ್ಯರಸ್ತೆ, ಆಜಾದ್ನಗರ, ಬೆಂಗಳೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಪರ್ಸ್ ನ್ನು,  ನೋಡಲು ವ್ಯಾನಿಟಿ ಬ್ಯಾಗ್ನ ಜಿಪ್ ತೆಗೆದಾಗ ಅದರಲ್ಲಿ ಪಸರ್್ ಇರಲಿಲ್ಲ. ಸದರಿ ಪಸರ್್ನಲ್ಲಿಟ್ಟಿದ್ದ 12 ಗ್ರಾಂ ತೂಕದ ಲಕ್ಷ್ಮಿ ಡಾಲರ್ ಇರುವ ಹಗ್ಗದ ಮಾದರಿಯ ಚಿನ್ನದ ಚೈನ್, 5 ಗ್ರಾಂ ತೂಕದ ಹಸಿರು ಹರಳಿರುವ ಚಿನ್ನದ ಉಂಗುರ ಮತ್ತು 700-00 ರೂ. ನಗದು ಹಣವನ್ನು ಯಾರೋ ಕಳ್ಳರು ಬಸ್ಸನ್ನು ಹತ್ತುವಾಗ ಪರ್ಸ್ ಸಮೇತ ಕಳವು ಮಾಡಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 48,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :


ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

  ದಿನಾಂಕ: 13-02-2013 ರಂದು ಪಿರ್ಯಾದಿ ಮಂಜುಳ ಬೊಪ್ಪಸಮುದ್ರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-02-2013 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಯೋಗೇಶ ಬಿನ್ ದೊಡ್ಡೈದೇಗೌಡ ಬೊಪ್ಪಸಮುದ್ರ ರವರು ಗದ್ದೆಗೆ ಹೊಡೆಯುವ ಔಷದಿಯನ್ನು ಕುಡಿದು ಒದ್ದಾಡುತ್ತಿದ್ದಾಗ ಚಿಕಿತ್ಸೆಗೆ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಬಗ್ಗೆ ಮಂಡ್ಯ ಜಿಲ್ಲಾ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13-02-2013 ರಂದು ಸುಮಾರು ಸಂಜೆ 06-00 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :


ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 353-504-506 ಕೂಡ 34 ಐಪಿಸಿ ಹಾಗೂ ಕಲಂ-3 ಕ್ಲಾಸ್() ಸಬ್ ಕ್ಲಾಸ್ (ಘಿ) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ.  

     ದಿನಾಂಕ: 13-02-2013 ರಂದು ಪಿರ್ಯಾದಿ ಎಸ್.ಜಿ ವಸಂತಕುಮಾರ್, ಸಹ ಶಿಕ್ಷಕರು, ಶ್ರೀ ಯದುಶೈಲ ಪ್ರೌಢಶಾಲೆ, ಮೇಲುಕೋಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ.ಬಿ ನರಸಿಂಹೇಗೌಡ, 2] ಜವರೇಗೌಡ, ಕಾಡೇನಹಳ್ಳಿ, 3] ವಿ. ಮಚಂದ್ರ, ಕೊಡಗಹಳ್ಳಿ, 4] ಅನಂತರಾಮಶೆಟ್ಟ, ಮೇಲುಕೋಟೆ ರವರುಗಳು,  ಮುಖ್ಯ ಶಿಕ್ಷಕರನ್ನು ಬೈಯುತ್ತಿದ್ದರು. ಆಗ ಪಿರ್ಯಾಧಿಯನ್ನು ಆರೋಪಿ ಕೆ.ಬಿ ನರಸಿಂಹೇಗೌಡರು ಬಾರೋ ಲೋ ಬಡ್ಡಿ ಮಗನೇ ದನ ತಿನ್ನೋ ಹೊಲೆಯ ನನ್ನ ಮಕ್ಕಳಿಗೆ ಕೆಲಸ ಕೊಟ್ಟಿದ್ದೇ ತಪ್ಪಾಯ್ತು. ಕಾಲಿನ ಚಪ್ಪಲಿ  ಎಲ್ಲಿರ್ಸಬೇಕು ಅಲ್ಲೆ ಇರ್ಸಬೇಕು ಎಂದು ಕೆಂಡಾ ಮಂಡಲವಾಗಿ ಪಿರ್ಯಾದಿಯನ್ನು ಹೊಡೆಯಲು ಮುಂದಾಗಿದ್ದು, ಇದರಿಂದ ಪ್ರಾಣಭಯ ಉಂಟಾಗಿದ್ದು, ಶಾಲೆಯಲ್ಲಿ ಕಾರ್ಯನಿರ್ವಹಿಸಲು ತೊಂದರೆ ಉಂಟಾಗಿದೆ. ಆದ್ದರಿಂದ ದಯಮಾಡಿ ಆರೋಪಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 302-201 ಐ.ಪಿ.ಸಿ.

ದಿನಾಂಕ: 13-02-2013 ರಂದು ಪಿರ್ಯಾದಿ ಆನಂದೇಗೌಡ, ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದಿನಾಂಕ:13-02-2013ರಂದು ಮೃತನ ಶವ ಪರೀಕ್ಷಾ ವರದಿಯನ್ನು ನೀಡಿದ್ದು ಮೃತನ ಸಾವಿನ ಕಾರಣದ ಬಗ್ಗೆ  All the above injuries are antemortum in nature. And death is due to ligature strangulation '' ಎಂದು ಅಭಿಪ್ರಾಯ ಪಟ್ಟಿದ್ದು ಮೃತನನ್ನು ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಯಾವುದೋ ಸಾದನದಿಂದ ಮೃತನ ಕುತ್ತಿಗೆಗೆ ಬಿಗಿದು ಉಸಿರು ಕಟ್ಟಿಸಿ ಸಾಯಿಸಿರುವುದು ವೈಧ್ಯಾಧಿಕಾರಿಗಳ ಅಭಿಪ್ರಾಯದಿಂದ ಕಂಡು ಬಂದಿರುವುದರಿಂದ ಈ ಯುಡಿಅರ್ ಪ್ರಕರಣದಲ್ಲಿ ದಿನಾಂಕ:13-02-2013 ರಂದು ಬೆಳಿಗ್ಗೆ 11-00ಗಂಟೆಯ ಸಮಯದಲ್ಲಿ ಕನರ್ಾಟಕ ಸರ್ಕಾರದ  ಪರವಾಗಿ ನಾನು ಸ್ವಯಂ ವರದಿಯನ್ನು ತಯಾರಿಸಿ ಠಾಣಾ ಮೊ.ಸಂ.  53/2013 ಕಲಂ 302-201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

DAILY CRIME REPORT DATED : 12-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಅರ್. ಪ್ರಕರಣ,  2 ಕೊಲೆ ಪ್ರಕರಣಗಳು ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 12-02-2013 ರಂದು ಪಿರ್ಯಾದಿ ಚೆಲುವರಾಜು ಬಿನ್ ಮಲ್ಲೇಸಿಂಗ್ರಯ್ಯ, ಬಿಲ್ಲೇನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ,  ಮೂತರ್ಿ ರವರ ಹೆಂಡತಿ, 20 ವರ್ಷ ಕಾಗೇರೆ ಗ್ರಾಮ ರವರು ದಿನಾಂಕ: 02-02-2013 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಬಿಲ್ಲೇನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 12-02-2013 ರಂದು ಪಿರ್ಯಾದಿ ಶಿವಲಿಂಗಯ್ಯ ಬಿನ್. ಜವರಯ್ಯ, ಬಳ್ಳೇಕರೆ ಗ್ರಾಮ, ಸಂತೇಬಾಚಹಳ್ಳಿ ರವರು ನೀಡಿದ ದೂರು ಏನೆಂದರೆ ಅವರ ತಂದೆ ಜವರಯ್ಯ, 70 ವರ್ಷ ರವರು ಈಗ್ಗೆ 8-9 ವರ್ಷಗಳ ಹಿಂದೆ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಅರ್. ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 12-02-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇಟ್. ಸಿದ್ದೇಗೌಡ, 40 ವರ್ಷ, ಒಕ್ಕಲಿಗರು, ತಗ್ಗಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು, ಸುಮಾರು 80 ವರ್ಷ ರವರು ತಗ್ಗಹಳ್ಳಿ ಗ್ರಾಮದ ಬಸ್ ನಿಲ್ದಾಣದ ಶೆಲ್ಟರ್ನಲ್ಲಿ  ಬಂದು ಮಲಗಿದ್ದು ಗ್ರಾಮದ ಜನರು ಊಟ ಕೊಟ್ಟರೂ ಸಹ  ಆಹಾರವನ್ನು ಸೇವಿಸುತ್ತಿರಲಿಲ್ಲ,  ಮಲಗಿದಾಗ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಕೊಲೆ ಪ್ರಕರಣಗಳು  :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 65/13 ಕಲಂ. 302 ಕೂಡ 34 ಐ.ಪಿ.ಸಿ.

   ದಿನಾಂಕ: 12-02-2013 ರಂದು ಪಿರ್ಯಾದಿ ಶಿವಲಿಂಗ ಬಿನ್. ಲೇಟ್. ಲಾರಿನಿಂಗಪ್ಪ, ಅಣ್ಣಳ್ಳಿದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಸೋದರ ಮಾವ ಬಿ, ಕೃಷ್ಣನ ಶವವನ್ನು ಹೊರಗಡೆ ಎತ್ತುಕೊಂಡು ಬಂದು ನೋಡಲಾಗಿ ಆತನ ಮೂಗು ಮುಖ ಗಡ್ಡದ ಹತ್ತಿರ ತರಚಿದಂತಹ ಸಣ್ಣ ಸಣ್ಣ ಗಾಯಗಳು ಆಗಿರುವುದು ಕಂಡು ಬಂತು ಅದನ್ನು ನೋಡಿದರೆ ಮೇಲ್ಕಂಡ ನನ್ನ ಸೋದರ ಮಾವನ ಸಾವಿನ ಬಗ್ಗೆ ಸಂಶಯವಿರುತ್ತದೆ ಆರೋಪಿತರಾದ 1) ವರಲಕ್ಷಿ ಕೋಂ. ಲೇಟ್ ಬಿ.ಕೃಷ್ಣ ಹಾಗು  2] ಶಿವರಾಜು ಬಿನ್ ಬೊಳ್ಳಗೌಡ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2.  ಅರಕೆರೆ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 302 ಐ.ಪಿ.ಸಿ.

     ದಿನಾಂಕ: 12-02-2013 ರಂದು ಪಿರ್ಯಾದಿ ಎನ್.ಎಸ್. ನವೀನ್. ಬಿನ್. ಶಿವಶಂಕರ್, 27 ವರ್ಷ, ನೇರಲೇಕೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ದುರಾತ್ಮರು ಆಯುದದಿಂದಲೇ ಅಥವಾ ಕತ್ತು ಹಿಸುಕಿ ಸಾಯಿಸಿಯೋ ಅಥವಾ ಮತ್ತಾವುದೋ ರೀತಿಯಲ್ಲಿ ಸಾಯಿಸಿದ್ದು ಕಂಡುಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 11-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-02-2013 ರಂದು ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ವಂಚನೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ  ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 379 ಐ.ಪಿ.ಸಿ.

     ದಿನಾಂಕ: 11-02-2013 ರಂದು ಪಿರ್ಯಾದಿ ಶಿವಶಂಕರ. ಬಿ. ಬಿನ್. ಲೇ ಬೋರಯ್ಯ, 50 ವರ್ಷ, ಚಿಕ್ಕಮಂಡ್ಯ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಫಿರ್ಯಾದಿಯವರ ಬಾಬ್ತು ಕೆ.ಎ-11-ಆರ್-3034ರ ಮೋಟಾರ್ ಸೈಕಲ್ ನ್ನು, ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 25,500/- ರೂ. ಆಗುತ್ತದೆ. ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 379 ಐ.ಪಿ.ಸಿ.

    ದಿನಾಂಕ: 11-02-2013 ರಂದು ಯದುರಾಜೇಗೌಡ, ಆಡಳಿತಾಧಿಕಾರಿ, ಎಸ್.ಪಿ.ಸಿ.ಎಲ್ ಲಿಮಿಟೆಡ್, ಟಿ.ಕೆ.ಹಳ್ಳಿ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಟಿ.ಕೆ.ಹಳ್ಳಿ ಗ್ರಾಮದ ಬಿಡಬ್ಯ್ಲೂಎಸ್ಎಸ್ಬಿ ಕಾವೇರಿ ಕುಡಿಯುವ ನೀರಿನ ಸರಬರಾಜಿಗೆ ಉಪಯೋಗಿಸುತ್ತಿದ್ದ ನೀರೆತ್ತುವ 1] 8 ಹೆಚ್.ಪಿ. ನೀರೆತ್ತುವ ಮೋಟಾರ್, 2] 2 ಹೆಚ್.ಪಿ.ನೀರೆತ್ತುವ ಮೋಟಾರ್, 3] 500 ಮೀಟರ್ ಕೇಬಲ್ ವೈರ್ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ



ವಂಚನೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 468-420 ಐ.ಪಿ.ಸಿ.

     ದಿನಾಂಕ: 11-02-2013 ರಂದು ಪಿರ್ಯಾದಿ ರಘು ಎಂ.ಪಿ. ವಿಭಾಗೀಯ ಭದ್ರತಾ ನಿರೀಕ್ಷಕ, ಕ.ರಾ.ರ.ಸಾ.ಸಂಸ್ಥೆ. ಮಂಡ್ಯ ವಿಭಾಗ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಕಾಶ್ ಎಸ್.ಎನ್ ಬಿನ್ ನರೆಸೇಗೌಡ, ಬೆಳ್ಳಾಳೆ ಗ್ರಾಮ, ಪಾಂಡವಪುರ ತಾಲ್ಲೂಕು. ರವರು ಕ.ರಾ.ರ.ಸಾ. ಸಂಸ್ಥೆಯ ಪಾಸ್ ಹೋಲುವ ರೀತಿಯಲ್ಲಿ ಒಂದು ನಕಲಿ ಪಾಸನ್ನು ಸೃಷ್ಠಿಸಿಕೊಂಡು ಸದರಿ ಪಾಸ್ನಲ್ಲಿ ವಿಭಾಗೀಯ ನಿಯಂತ್ರಾಣಧಿಕಾರಿಗಳು ಕ.ರಾ.ರ.ಸಾಂ.ಸಂಸ್ಥೆಯ ಮಂಡ್ಯ ವಿಭಾಗ ಮಂಡ್ಯ ರವರ ಮೊಹರಿನ ರೀತಿಯಲ್ಲಿ ನಕಲಿ ಮೊಹರನ್ನು ಉಯೋಗಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸದರಿ ಪಾಸನ್ನು ಬಳಸಿ ಕ.ರಾ.ರ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಿ ಸಂಸ್ಥೆಗೆ ವಂಚನೆ ಎಸಗಿ ಉಚಿತವಾಗಿ ಪ್ರಯಾಣಿಸಿರುತ್ತಾರೆ. ಸದರಿಯವರು ಈ ರೀತಿ ಮೂರು ತಿಂಗಳಿನಿಂದ ಆರ್ಥಿಕ  ನಷ್ಠ ಉಂಟು ಮಾಡಿರುತ್ತಾರೆ ಹಾಗೂ ಈ ದಿನದ ಸದರಿ ವಾಹನದ ಮಾರ್ಗ ಕಾರ್ಯಚರಣೆಗೆ  ಅಡಚಣೆ ಉಂಟಾಗಿ ಸಂಸ್ಥೆಗೆ ಸುಮಾರು 10,000/- ನಷ್ಟ ಮಾಡಿರುತ್ತಾರೆ ಆದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 11-02-2013 ರಂದು ಪಿರ್ಯಾದಿ ಗೌರಮ್ಮ ಕೋಂ ಶಾಂತಪ್ಪ, ಆಲಂಬಾಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಶಾಂತಪ್ಪ ಬಿನ್. ಬಸಪ್ಪ, 58 ವರ್ಷ, ಆಲಂಬಾಡಿ ಗ್ರಾಮರವರು  ನಂಜನಗೂಡು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲ, ನಾವು ಸಂಬಂಧಿಕರ, ಸ್ನೇಹಿತರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲ  ಪತ್ತೆಮಾಡಿಕೊಡಿ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 10-02-2013



 ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 4 ಯು.ಡಿ.ಆರ್. ಪ್ರಕರಣಗಳು, 3 ಮನುಷ್ಯ ಕಾಣೆಯಾದ ಪ್ರಕರಣಗಳು, 1 ರಸ್ತೆ ಅಪಘಾತ ಪ್ರಕರಣ,  1 ಕಳವು ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ವೆಂಕಟೇಶ್, ಬಸ್ತೀಪುರ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಲಕ್ಷ್ಮಮ್ಮ ರವರ ಗಂಡ ವೆಂಕಟೇಶ್ ಬಿನ್ ದಾಸಯ್ಯ, 40 ವರ್ಷ, ಬಿಇಎಂಎಲ್ ನೌಕರ, ಗಂಗಾಮತ, ವಾಸಃ ಬಸ್ತೀಪುರ ಗ್ರಾಮ, ರವರಿಗೆ ಕಳೆದ 5 ವರ್ಷದಿಂದ ಹೊಟ್ಟೆನೋವು ಬರುತ್ತಿದ್ದು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದು,  ಯಾವುದೋ ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದವರನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆ ಮೈಸೂರಿನ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿರುತ್ತೆ. ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಕಾರಣವಿರುವುದಿಲ್ಲ. ಶವದ ಬಗ್ಗೆ  ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 (|||) ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಮಧು, 32ವರ್ಷ, ವಕ್ಕಲಿಗ, ವ್ಯವಸಾಯ, ಹೆಬ್ಬಕವಾಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಶಂಕರ ಬಿನ್ ಮುದ್ದೇಗೌಡ, ವಕ್ಕಲಿಗರು, ವ್ಯವಸಾಯ, ಹೆಬಕವಾಡಿ ಗ್ರಾಮ ಎಂಬುವವರು ಮರ ಒಂದಕ್ಕೆ ಲುಂಗಿ ಮತ್ತು ಟವಲ್ನಿಂದ ಕತ್ತಿಗೆ ಮತ್ತು ಮರಕ್ಕೆ ಕಟ್ಟಿಕೊಂಡು ಮರಣ ಹೊಂದಿರುತ್ತಾನೆ, ಸದರಿಯವರ ಸಾವಿನ ಬಗ್ಗೆ ಅನುಮಾನವಿರುತ್ತೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಯೋಗನರಸಿಂಹ ಬಿನ್. ರಾಜಣ್ಣ, ರಂಗನಾಥಸ್ವಾಮಿ ದೇವಸ್ಥಾನದ ಪಾರುಪತ್ತೆದಾರರು,  ಕೊಳದ ಗರಡಿ ಬೀದಿ ರವರು ನೀಡಿದ ದೂರಿನ ವಿವರವೇನೆಂದರೆ ಸುಮಾರು 40-45 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡಸು  ದೇವಸ್ಥಾನದ  ಹಿಂಬಾಗದ  ಹಕರ್ಿಲೆಸ್ ಮರಕ್ಕೆ  ನೇಣುಹಾಕಿಕೊಂಡು ಮೃತಪಟ್ಟಿದ್ದು,  ಬಿಳಿಯ ಶರ್ಟ, ಕಪ್ಪು ಕಲರ್ ಪ್ಯಾಂಟ್ ಧರಿಸಿರುತ್ತಾರೆ.   ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  .


4. ಕೆರೆಗೋಡು ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಡಿ.ವೈ.ಪ್ರಸನ್ನ ಬಿನ್. ಡಿ.ಎಸ್.ಯೋಗನಂದೇಗೌಡ, ಡಿ.ಎನ್.ಪುರ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಸಹೋದರ ಡಿ.ವೈ. ಸತೀಶ ಬಿನ್ ಡಿ.ಎಸ್. ಯೋಗಾನಂದೇಗೌಡರವರಿಗೆ ಈಗ್ಗೆ 02 ವರ್ಷಗಳಿಂದ ವಾಸಿಯಾಗದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದರಿಂದ ಮನನೊಂದು ತನ್ನ ಜಮೀನಿನ ಬಳಿ ಯಾವುದೋ ಕ್ರಿಮಿನಾಶಕ ವಿಷ ಔಷಧಿಯನ್ನು ಸೇವನೆ ಮಾಡಿ, ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ 08-30 ಗಂಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

 1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 14/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 10-02-2013 ರಂದು ಪಿರ್ಯಾದಿ ಜವರಯ್ಯ ಬಿನ್. ಗೆಂಡಯ್ಯ, ಕನ್ನಲಿ ಗ್ರಾಮ, ಮಂಡ್ಯ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಹೆಂಡತಿ ಅರಸಮ್ಮ ಕೋಂ. ಜವರಯ್ಯ 70 ವರ್ಷ, ಗಂಗಾಮತ ಜನಾಂಗ, ಕನ್ನಲಿ ಗ್ರಾಮ. ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದ ಸರಳ ಸಮೂಹಿಕ ಮದುವೆಗೆ ಗ್ರಾಮದವರ ಜೊತೆಯಲ್ಲಿ ಲಾರಿಯಲ್ಲಿ  ಮದುವೆ ಬಂದಿದ್ದು ವಾಪಸ್ಸ್  ಕನ್ನಲಿ ಗ್ರಾಮಕ್ಕೆ ಬರಲಿಲ್ಲ ಪಿರ್ಯಾದಿಯವರು ಜೊತೆಯಲ್ಲಿ ಬಂದಿದ್ದರವರನ್ನು ವಿಚಾರ ಮಾಡಲಾಗಿ ಸದರಿಯವರುಗಳು ಅರಸಮ್ಮಳು ನಾವು ಬರುವಾಗ ನಮ್ಮಗಳ ಜೊತೆಯಲ್ಲಿ ಬರಲಿಲ್ಲವೆಂದು ತಿಳಿಸಿರುತ್ತಾರೆ ನಾವು ಇದುವರೆಗೂ ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 10-02-2013 ರಂದು ಪಿರ್ಯಾದಿ ಹೊನ್ನೇಗೌಡ ಬಿನ್ ರಾಜಪ್ಪ, 40ವರ್ಷ, ವಕ್ಕಲಿಗರು, ಮೊಬೈಲ್ಅಂಗಡಿಯಲ್ಲಿ ವ್ಯಾಪಾರ, ಕೆಂಪೇಗೌಡ ವೃತ್ತ, ಬೆಳ್ಳೂರು ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕಃ 01-02-2013ನೇ ತಾರೀಖಿನಂದು ಡಿ.ಕೋಡಿಹಳ್ಳಿಯಿಂದ ಕಿರಣ್ ಬಿನ್ ತಮ್ಮಣ್ಣ, 14ವರ್ಷ, ವಕ್ಕಲಿಗರು, 8ನೇ ತರಗತಿಯ ವಿದ್ಯಾಥರ್ಿ, ವಾಸ ಡಿ. ಕೋಡಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋಬಳಿ ಎಂಬ ಹುಡುಗ ಬೆಳ್ಳೂರಿನಲ್ಲಿರುವ ನಮ್ಮ ಮನೆಗೆ ಬಂದಿದ್ದು, ಎರಡು ಮೂರು ದಿನಗಳು ಇಲ್ಲಿಯೇ ಇದ್ದು, ದಿನಾಂಕಃ 04-02-2013 ನೇ ತಾರೀಖಿನಂದು ಸೋಮವಾರ ಬೆಳಿಗ್ಗೆ ಮನೆಯಿಂದ ಡಿ.ಕೋಡಿಹಳ್ಳಿಯಲ್ಲಿರುವ ಅವರ ತಾಯಿಯ ಮನೆಗೆ ಹೋಗುತ್ತೇನೆಂದು ತಿಳಿಸಿ ಹೋದವನು ಅಲ್ಲಿಗೂ ಹೋಗದೆ ಶಾಲೆಗೂ ಸಹ ಹೋಗದೆ ಇರುವುದು. ನಮಗೆ ತಿಳಿದು ಬಂದಿರುತ್ತದೆ. ಸದರಿ ಕಾಣೆಯಾದ ಬಾಲಕನನ್ನು [ಕಿರಣ] ಪತ್ತೆಮಾಡಿ ಕೊಡಬೇಕೆಂದು ದೂರು ನೀಡಿರುತ್ತಾರೆ.  ನಮ್ಮ ಸಂಬಂದಿಕರ ಎಲ್ಲಾ ಊರುಗಳಲ್ಲಿ ಹುಡುಕಿ ಈ ದಿನ ತಡವಾಗಿ ದೂರು ನೀಡಿರು- ತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. ಹೆಂಗಸು  ಕಾಣೆಯಾಗಿದ್ದಾಳೆ.

ದಿನಾಂಕ: 10-02-2013 ರಂದು ಪಿರ್ಯಾದಿ ಕೃಷ್ಣಾಚಾರಿ ಬಿನ್. ಲೇ|| ಸಿದ್ದಪ್ಪಾಜಿ, 39 ವರ್ಷ, ವಿಶ್ವಕರ್ಮ ಜನಾಂಗ,  ವಾಸ ಕಬ್ಬನಹಳ್ಳಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೋಕ್ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಹೆಂಡತಿ ಸುಶೀಲ ಕೋಂ. ಕೃಷ್ಣಚಾರಿ, ಮಂಡ್ಯ ಸುರಭಿ ನರ್ಸಿಂಗ್  ಹೋಂ. ಮಂಡ್ಯ, ಕಬ್ಬನಹಳ್ಳಿ ಗ್ರಾಮ ರವರು ದಿನಾಂಕ:  07-02-2013 ರಂದು ಸಂಜೆ 07-30 ಗಂಟೆಯಲ್ಲಿ, ಅಶೋಕ ನಗರದ ಸುರಭಿ ನರ್ಸಿಂಗ್ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ವೈದ್ಯರಿಗೆ ಹೇಳಿ ಮನೆಗೆ ಹೋಗುತ್ತೇನೆ ಎಂದು ಹೇಳಿ  ಹೋದವಳು ಮನೆಗೆ ಬಂದಿರುವುದಿಲ್ಲಾ ಪಿರ್ಯಾದಿಯವರು ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


ರಸ್ತೆ ಅಪಘಾತ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 62/13 279-337-304(ಎ) ಐ.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ವೀರಣ್ಣ ಕೆ.ಎ-42-ಎಫ್-205, ಕೆ.ಎಸ್.ಆರ್.ಟಿ.ಸಿ. ಚಾಲಕ, ಬಿಲ್ಲೆ. ಸಂಖ್ಯೆ 583, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-28-ಎಂ.ಬಿ-8888 ಟಾಟಾ ಸುಮೊ ಚಾಲಕ , ಮಹೆೇಶ, ಬೆಂಗಳೂರು ರವರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಸ್ತೆಯಲ್ಲಿ ಕೆಎ-28-ಎಂ.ಬಿ.-8888 ರ ಚಾಲಕನು ಟಾಟಾ ಸುಮೋದಲ್ಲಿ ಮೈಸೂರು ಕಡೆಗೆ ಹೋಗುತ್ತಿದ್ದು, ಟಿ.ಎಂ.ಹೊಸೂರು ಗೇಟ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿವ್ಶೆಡರ್ ಗೆ,   ಡಿಕ್ಕಿ ಮಾಡಿಸಿದ ಪರಿಣಾಮ ಟಾಟಾ ಸುಮೋವು ಪಲ್ಟಿ ಹೊಡೆದು ಮೈಸೂರು - ಬೆಂಗಳೂರು ರಸ್ತೆಯಲ್ಲಿ ಸ್ವಲ್ಪ ದೂರು ಉಜ್ಜಿಕೊಂಡು ಹೋಗಿ ಮಂಡ್ಯದ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನ ಬಲಬದಿಯ    ಹಿಂಭಾಗಕ್ಕೆ ಡಿಕ್ಕಿ ಹೊಡೆದು  ಟಾಟಾ ಸುಮೋದಲ್ಲಿದ್ದ 3 ಜನ ಪುರಷರು ಸ್ಥಳದಲ್ಲಿಯೇ ಮೃತಪಟ್ಟಿದ್ದು  ಹಾಗೂ ಟಾಟಾ ಸುಮೋದಲ್ಲಿದ್ದ 06 ಜನರಿಗೆ ಪೆಟ್ಟಾಗಿರುತ್ತದೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 379 ಐ.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಡಾ. ಪ್ರವೀಣ್ ಕುಮಾರ್ ಬಿನ್. ಲೇಟ್. ಕೆ.ಬೋರೇಗೌಡ, 40 ವರ್ಷ, ಗೋಪಾಲಪುರ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ದಿನಾಂಕ-09-02-13ರಂದು ರಾತ್ರಿ ಯಾರೋ ಕಳ್ಳರು ಗೋಪಾಲಪುರ ಗ್ರಾಮದ ಸರ್ವೆ. ನಂ. 36/7 ರಲ್ಲಿ ಬೆಳೆದಿದ್ದ ಸುಮಾರು 30 ತೇಗದ ಮರಗಳ ಪೈಕಿ 5 ತೇಗದ ಮರಗಳನ್ನು ಕಡಿದುಕೊಂಡು ಹೋಗಿರುತ್ತಾರೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 09-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಹುಡುಗಿ ಕಾಣೆಯಾದ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಕೊಲೆ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಹುಡುಗಿ ಕಾಣೆಯಾದ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 41/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 09-02-2013 ರಂದು ಪಿರ್ಯಾದಿ ಕುಮಾರ್. ಬಿನ್. ಲೇ|| ರಾಮಸ್ವಾಮಿ, ಗುತ್ತಲುರಸ್ತೆ, ಮಂಡ್ಯ ನಗರ ರವರು ನೀಡಿದ ದೂರಿನ ವಿವರವೇನೆಂದರೆ ನೇತ್ರಾವತಿ ಕಾಲೇಜಿಗೆಂದು ಹೋದವಳು ವಾಪಸ್ಸು ಇಲ್ಲಿಯವರೆವಿಗೂ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 498[ಎ]-323-504-506. ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಕವಿತ ಎಂ,ಎಸ್, ಕೋಂ. ಸತೀಶ, 25ವರ್ಷ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಗಂಡ ಸತೀಶ.ಎಸ್ ಬಿನ್. ಶಿವ  ಲಿಂಗಯ್ಯ, ಮಂಡ್ಯ ಸಿಟಿ ರವರು ಪಿರ್ಯಾದಿಯವರ ಮನೆಯ ಹತ್ತಿರ ಬಂದು ಹಣ ತೆಗೆದುಕೊಂಡು ಬಂದರೆ ನನ್ನ ಜೊತೆ ಬಾ ಎಂದು ಗಲಾಟೆ ಮಾಡಿ ಪಿರ್ಯಾದಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು ನೋವುಂಟು ಮಾಡಿ ಬಾಯಿಗೆ ಬಂದಂತೆ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 302 ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ರಂಗಸ್ವಾಮಿ ಪಿ.ಎಸ್.ಐ. ಟೌನ್ ಠಾಣೆ, ಕೆ.ಆರ್. ಪೇಟೆ ರವರು ನೀಡಿದ ದೂರಿನ ವಿವರವೇನೆಂದರೆ ನಂಜುಂಡೇಗೌಡನನ್ನು ಯಾರೋ ದುಷ್ಕಮರ್ಿಗಳು ಉಸಿರುಗಟ್ಟಿಸಿ ನೇಣು ಹಾಕಿರುವುದ್ದರಿಂದ ಇದು ಕೊಲೆ ಎಂದು ನ್ಯಾಯಾಲಯವು ಪರಿಗಣಿಸಬೇಕೆಂದು ಸ್ವತಃ ವರದಿ ತಯಾರು ಮಾಡಿ ನಿವೇದಿಸಿಕೊಂಡಿರುತ್ತೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

 ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 (ಸಿ) ಸಿ.ಆರ್.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಶಾಂತಮ್ಮ ಕೋಂ. ಲೇ|| ಸುಬ್ಬಯ್ಯ, ಚಿಕ್ಕೋನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಸುಬ್ಬಯ್ಯ ಬಿನ್ ಚನ್ನಯ್ಯ 45 ವರ್ಷ ಪರಿಶಿಷ್ಟಜಾತಿ ರವರು ಮೂತ್ರಪಿಂಡ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷವನ್ನು ಸೇವನೆ ಮಾಡಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 64/13 ಕಲಂ. 458-457-380-511 ಐ.ಪಿ.ಸಿ.

ದಿನಾಂಕ: 09-02-2013 ರಂದು ಪಿರ್ಯಾದಿ ಮಹಾಲಿಂಗೇ ಗೌಡ ಬಿನ್ ಲೇಟ್. ಕುಳ್ಳೀರೇಗೌಡ, ಬನಘಟ್ಟ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ನಮ್ಮ ಮನೆ ಅಲ್ಲದೆ ಲೇಟ್. ಲಿಂಗರಾಜು ಮತ್ತು ಚಿಕ್ಕೀರೇಗೌಡರವರ ಮನೆಯ ಚಿಲಕವನ್ನು ಮೀಟಿ ಕಳ್ಳತನಕ್ಕೆ ಪ್ರಯತ್ನಿಸಿದ್ದು, ನನ್ನ ಮೇಲೆ ಹಲ್ಲೆ ಮಾಡಿ ನನ್ನ ಮಗನ ಜೇಬಿನಲ್ಲಿ ಕಳ್ಳತನ ಮಾಡಿ, ಪಕ್ಕದ ಮನೆಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 08-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಮಹಿಳಾ ದೌರ್ಜನ್ಯ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   

ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 08-02-2013 ರಂದು ಪಿರ್ಯಾದಿ ಕುಮಾರ ಬಿನ್. ಲೇಟ್. ಬುಂಡಯ್ಯ, ಬಸ್ತಿಹೊಸಕೋಟೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮಗನಾದ ಬಿ.ಕೆ. ಕಿರಣಕುಮಾರ ಕೆ.ಆರ್.ಪೇಟೆ ಟೌನಿನ ಪ್ರಗತಿ ಕಾನ್ವೆಂಟ್ನಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ:04-02-2013 ರಂದು ಬಸ್ತಿಹೊಸ ಕೋಟೆಯಿಂದ ಬೆಳಿಗ್ಗೆ 08-30 ಗಂಟೆಗೆ ಕೆ.ಆರ್.ಪೇಟೆ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಇಲ್ಲಿಯವರೆಗೆ ಶಾಲೆಗಾಗಲಿ, ಹಾಸ್ಟೆಲ್ ಗಾಗಲಿ, ಮನೆಗಾಗಲಿ, ಸಂಬಂಧಿಕರ ಮನೆಗಾಗಲಿ ಹಾಗೂ ಸ್ನೇಹಿತರ ಮನೆಗಾಗಲಿ ಹೋಗಿರುವುದಿಲ್ಲ. ನಾವು ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 01/13 ಕಲಂ. 174(ಸಿ) ಸಿ.ಆರ್.ಪಿ.ಸಿ.

ದಿನಾಂಕ: 08-02-2013 ರಂದು ಪಿರ್ಯಾದಿ ಶಿವಸ್ವಾಮಿ, ಕಿಕ್ಕೇರಿ ಗ್ರಾಮ ಮತ್ತು ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಕಿಕ್ಕೇರಿ ಗ್ರಾಮದ ಅಘಲಯದ ಕೃಷ್ಣ ಪೋನ್ ಮಾಡಿ ನಿಮ್ಮ ಅಣ್ಣನ ಹಿರಿಯ ಮಗ ಸತೀಶ.ಕೆ.ವಿ ಬಿನ್. 22 ವರ್ಷ, ವಕ್ಕಲಿಗರು, ಕೋಳಿ ಅಂಗಡಿಯಲ್ಲಿ ಕೆಲಸ ಕಿಕ್ಕೇರಿ ಮಟನ್ ಮಾರಾಟ ಮಾಡುವ ಅಂಗಡಿಯ ಹಿಂಭಾಗದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಸತ್ತಿ ಹೋಗಿರುತ್ತಾನೆಂದು ಹೇಳಿದಾಗ ತಕ್ಷಣ ಹೋಗಿ ನೋಡಲಾಗಿ ಸತೀಶನು ಅನುಮಾನಾಸ್ಪದವಾಗಿ ಸತ್ತಿರುವುದು ಕಂಡುಬಂದಿದೆ. ಮುಂದಿನ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದೆ.


ಮಹಿಳಾ ದೌರ್ಜನ್ಯ ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 143,147,148,323,324,504,506,307,498(ಎ) ಕೂಡ 149 ಐ.ಪಿ.ಸಿ.

      ದಿನಾಂಕ: 08-02-2013 ರಂದು ಪಿರ್ಯಾದಿ ಹಚ್.ಎಸ್.ಸಾಕಮ್ಮ ತಂದೆ ಸಿದ್ದೇಗೌಡ, ಹಲ್ಲಗೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಸಿದ್ದೇಗೌಡ, ಮತ್ತು ಇತರ 5 ಮಂದಿ, ಎಲ್ಲರೂ ಹಲ್ಲಗೆರೆ ಗ್ರಾಮ ರವರುಗಳು ಪಿರ್ಯಾದಿಗೆ ಮತ್ತು ಅವರ ತಾಯಿಗೆ ಆರೋಪಿತರು ಮನೆಯ ವಿಚಾರವಾಗಿ ಗುಂಪು ಕಟ್ಟಿಕೊಂಡು ಬೈದು ಕೈಗಳಿಂದ ಹೊಡೆದು ಪಿರ್ಯಾದಿಗೆ ದೊಣ್ಣೆಯಿಂದ ಹೊಡೆದು ಗಲಾಟೆ ಮಾಡಿ ಮಚ್ಚಿನಿಂದ  ಕತ್ತರಿಸಲು ಬೀಸಿದಾಗ ಪಿರ್ಯಾದಿಯು ತಪ್ಪಿಸಿಕೊಂಡಿದ್ದು ಆರೋಪಿ-1 ರವರು ಕೆಳಕ್ಕೆ ಕೆಡವಿಕೊಂಡು ಕತ್ತಿನ ಮೇಲೆ ಕಾಲು ಇಟ್ಟು ಸಾಯಿಸಲು ಪ್ರಯತ್ನಿಸಿರುತ್ತಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 07-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-02-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  1 ವಂಚನೆ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಅತ್ಯಾಚಾರ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣಗಳು : 

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 07-02-2013 ರಂದು ಪಿರ್ಯಾದಿ ಗುರುಸ್ವಾಮಿ. ಟಿ.ಎಸ್. ಬಿನ್ ಲೇಟ್. ಶಿವಣ್ಣ, ತಾಳಶಾಸನ ಗ್ರಾಮ, ಪಾ ಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪ್ರದೀಪ. ಟಿ.ಜಿ. ಬಿನ್ ಗುರುಸ್ವಾಮಿ. ಟಿ.ಎಸ್., 19 ವರ್ಷ,  ತಾಳಶಾಸನ ಗ್ರಾಮ ರವರು ದಿನಾಂಕಃ21-01-2013 ರಂದು ಬೆಳಿಗ್ಗೆ 09-00 ಗಂಟೆಯಲ್ಲಿ ಪ್ರದೀಪ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 30/13 ಹುಡುಗಿ ಕಾಣೆಯಾಗಿದ್ದಾಳೆ. 

ದಿನಾಂಕ: 07-02-2013 ರಂದು ಪಿರ್ಯಾದಿ ಗೋವಿಂದೇಗೌಡ ಬಿನ್. ಸಣ್ಣೇಗೌಡ, ಜೈನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಸ್ಮಿತ ದಿನಾಂಕ:   4-02-13 ರಂದು 09-00 ಗಂಟೆಗೆ ಕಾಲೇಜಿಗೆ ಹೋಗುತ್ತನೆಂದು ಹೇಳಿ ಹೋದವಳು ಕಾಲೇಜಿಗು ಹೋಗಿಲ್ಲ ,ಮನೆಗು ಬಂದಿಲ್ಲ. ಕಾಲೇಜು ಮತ್ತು ನಮ್ಮ ಸಂಬಂದಿಕರ ಮನೆ ಮತ್ತು ಇತರೆ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲಾ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿಆರ್.ಪಿ.ಸಿ.

     ದಿನಾಂಕ: 07-02-2013 ರಂದು ಪಿರ್ಯಾದಿ ಗೌರಮ್ಮ ಕೋಂ ಲೇ|| ಬಸವರಾಜು, ಹಾಲಹಳ್ಳಿ ಸ್ಲಂ, ಮಂಡ್ಯ ರವರು ನೀಡಿದ ದೂರು ಏನೆಂದರೆ ಬಸವರಾಜ ಬಿನ್. ಲೇ|| ಮಹದೇವ, 33 ವರ್ಷ, ಒಕ್ಕಲಿಗರು, ಕೂಲಿ ಕೆಲಸ,  ಹಾಲಹಳ್ಳಿ ಸ್ಲಂ. ರವರಿಗೆ ಹೊಟ್ಟೆನೋವು ಜಾಸ್ತಿಯಾಗಿ ತಾಳಲಾರದೆ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಕುಡಿದು ಮನೆಯಲ್ಲಿ ಇದ್ದಾಗ ವಿಚಾರ ಗೊತ್ತಾಗಿ ನಾನು ಮತ್ತು ನನ್ನ ಮೈದ ತಕ್ಷಣ ಆಸ್ಪತ್ರೆಗೆ ತಂದು ದಾಖಲಿಸಿ ಈವರೆವಿಗೂ ಚಿಕಿತ್ಸೆ ಕೊಡಿಸಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ: 07-02-2013 ರಂದು ಬೆಳಿಗ್ಗೆ 07-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174(3) ಮತ್ತು (4) ಸಿ.ಆರ್.ಪಿ.ಸಿ.

ದಿನಾಂಕ: 07-02-2013 ರಂದು ಪಿರ್ಯಾದಿ  ನಿಂಗಮ್ಮ, ಹಾಲಹಳ್ಳಿ ಗ್ರಾಮ, ಮಹದೇಶ್ವರ ದೇವಸ್ಥಾನದ ಹತ್ತಿರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೀಲಾರದಿಂದ   ಮನೆಗೆ ಬಂದಾಗ ಮನೆಯ ಬಾಗಿಲು ತೆಗೆದು ಒಳಗೆ ನೋಡಲಾಗಿ ನಾಗಲಿಂಗು ಬಿನ್. ಲೇಟ್. ಸಿದ್ದೇಗೌಡ 35 ವರ್ಷ, ಹಾಲಹಳ್ಳಿ ಮಂಡ್ಯ ಸಿಟಿ ರವರು ಸ್ನಾನದ ಮನೆಯ ಬಾಗಿಲಲ್ಲಿ ಮಕ್ಕಾಡೆಯಾಗಿ ಬಿದ್ದು ಸತ್ತು ಹೋಗಿದ್ದು ಮೃತನ ಹಣೆ ಮತ್ತು ಮೂಗಿನ ಮೇಲೆ ಊದಿಕೊಂಡು ಗಾಯವಾಗಿರುತ್ತದೆ. ಪಿಯರ್ಾದಿಯವರು ನಾಗಲಿಂಗನ ಸಾವಿನ ಬಗ್ಗೆ ಅನುಮಾನವಿರುತ್ತದೆ ಸೂಕ್ತ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 408, 420 ಐ.ಪಿ.ಸಿ.

ದಿನಾಂಕ: 07-02-2013 ರಂದು ಪಿರ್ಯಾದಿ ಎಂ.ಕೆ.ತ್ಯಾಗರಾಜ ಪ್ರಸಾದ್, ದ್ವಿತೀಯ ದಜರ್ೆ ಸಹಾಯಕರು, ಸಹಕಾರಿ ಅಭಿವೃದ್ದಿ ಅಧಿಕಾರಿಗಳ ಕಛೇರಿ, ಮಳವಳ್ಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆ.ಚೌಡಯ್ಯ ಬಿನ್ ಕೊತ್ತನಹಳ್ಳಿ ಚೌಡೇಗೌಡ, ದೇವಿಪುರ ಗ್ರಾಮ, ಮಳವಳ್ಳಿ ತಾಲ್ಲೊಕು ರವರು ದೇವಿಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಮಾಜಿ ಕಾರ್ಯದಶರ್ಿಯಾಗಿದ್ದು, ದಿನಾಂಕ : 01-04-05 ರಿಂದ 22-06-2007 ರವರಗೆ ದೇವಿಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿ, ದಲ್ಲಿ 2005-06 ರಿಂದ 2010-11 ನೇ ಸಾಲಿನ ಅಡಿಟ್ ವರಧಿ ರೀತ್ಯಾ ಸಂಘದ ಹಣ 4,12,158-00 ರೂ.ಗಳನ್ನು  ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾಗಿರುತ್ತದೆ. ಈತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 279-337-304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 07-02-2013 ರಂದು ಪಿರ್ಯಾದಿ ಮಂಜುಳ ಕೊಂ. ಸ್ವಾಮಿಗೌಡ, 28ವರ್ಷ, ಒಕ್ಕಲಿಗರು, ಗೃಹಿಣಿ, ಕನಗನಮರಡಿ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಲಗೇಜ್ ಆಟೋ ಚಾಲಕ ಆಟೋವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಆಟೋಗೆ ತಾಗಿಸಿ ನಿಲ್ಲಿಸದೆ ಹೊರಟುಹೋದ ಇದರಿಂದ ಆಟೋ ರಸ್ತೆಯಲ್ಲಿ ಎಡಮೊಗ್ಗುಲಾಗಿ ಮಗುಚಿಕೊಂಡು ಮುಂದೆ ಕುಳಿತಿದ್ದ ಪಿರ್ಯಾದಿಯವರ ಮಾವ ರಾಮೇಗೌಡ ಆಟೋದಿಂದ ರಸ್ತೆಗೆ ಬಿದ್ದುಹೋಗಿ ತಲೆಗೆ ತೀವ್ರವಾಗಿ ಏಟಾಗಿ ನಮ್ಮಗಳಿಗೂ ಸಣ್ಣಪುಟ್ಟ ಏಟಾಗಿರುತ್ತದೆ ಆರೋಪಿ ಆಟೋ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅತ್ಯಾಚಾರ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 376 ಐ.ಪಿ.ಸಿ.

ದಿನಾಂಕ: 07-02-2013 ರಂದು ಪಿರ್ಯಾದಿ  ಹೆಮ್ಮಿಗೆ ಗ್ರಾಮ, ಹಾಲಿ ವಾಸ, ವೈದ್ಯನಾಥಪುರ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-02-2013 ರಂದು ಬ್ಲಫ್ ಕ್ರಾಸ್ನ ಹತ್ತಿರ ಮುಸ್ಲಿಂ ಬಾವುಟ ಕಟ್ಟಿರುವ ಮುಂದೆ ನಿರ್ಜನ ಪ್ರದೇಶದಲ್ಲಿ ಆರೋಪಿಗಳಾದ ಪುನೀತ್ ಹೆಚ್.ಪಿ. ಸ್ಥಳ ಹುಲ್ಲಹಳ್ಳಿ ಗ್ರಾಮ, ಹಲಗೂರು ಹೋಬಳಿ, ಮಳವಳ್ಳಿ ತಾಲ್ಲೂಕು, ಹಾಲಿ ವಾಸ ಓಂ ಶಾಂತಿ ಮಾರ್ಗ, ಕೆ.ಎಂ.ದೊಡ್ಡಿ ಟೌನ್, ಸಿ.ಎ. ಕೆರೆ ಹೋಬಳಿ, ಮದ್ದೂರು ತಾಲ್ಲೂಕು ರವರು ಹಾಗು ಡ್ರೈವರ್ ಶಿವು ರವರುಗಳು ಟಾಟಾ ಮ್ಯಾಜಿಕ್ ವಾಹನದಲ್ಲಿ ಮದ್ದೂರಿನಿಂದ ಕೊಳ್ಳೇಗಾಲಕ್ಕೆ ಹೋಗಿ ವಾಪಸ್ ಬರುತ್ತಿರುವಾಗ ಬ್ಲಫ್ನ ಹತ್ತಿರ ದೀಪು ಹಾಗೂ ಶಿವು ರವರು ವಾಹನದಿಂದ ಇಳಿದು ಸ್ವಲ್ಪ ದೂರ ಹೋದಾಗ ಆರೋಪಿಯು ಅಶ್ಲೀಲವಾಗಿ ಮಾತನಾಡುತ್ತ ಪಿರ್ಯಾದಿಯವರ ತುಟಿಯನ್ನು ಕಚ್ಚಿ, ಸ್ತನಗಳನ್ನು ಹಿಡಿದು ಹಿಸುಕಿ ಅತ್ಯಾಚಾರ ಮಾಡಿರುತ್ತಾನೆ ಆತನ ವಿರುದ್ದ ಕ್ರಮ ಜರುಗಿಸಿ ಎಂದು ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 06-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ:06-02-2013ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು, 2 ವಂಚನೆ ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ಮನೆ ಕಳ್ಳತನ ಪ್ರಕರಣಗಳು,  1 ಅಪಹರಣ ಪ್ರಕರಣ,  1 ರಾಬರಿ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣಗಳು :

1. ಮೇಲುಕೋಟೆ ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.

ದಿನಾಂಕ: 06-02-2013 ರಂದು ಪಿರ್ಯಾದಿ ಕೆ.ಅಶೋಕ ಬಿನ್. ಕೃಷ್ಣಪ್ಪಗೌಡ, 55 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾಜೇಶ್ @ ರಾಜು ಬಿನ್. ಹನುಮಂತೇಗೌಡ, 24 ವರ್ಷ ಎಂಬುವವರಿಗೆ ಸುಮಾರು ದಿನಗಳಿಂದ ಹೊಟ್ಟೆನೋವು ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಮಾತ್ರೆಯನ್ನು ನುಂಗಿದ್ದು, ಬಿದ್ದು ಒದ್ದಾಡುತ್ತಿದ್ದನ್ನು ಕಂಡು ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೊಪ್ಪ. ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.

ದಿನಾಂಕ: 06-02-2013 ರಂದು ಪಿರ್ಯಾದಿ ಪುಟ್ಟೇಗೌಡ. ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕೊಪ್ಪ.ಟೌನ್ ರವರು ನೀಡಿದ ದೂರು ಏನೆಂದರೆ ಅಪರಿಚಿತ ಗಂಡಸು. ಸುಮಾರು 50ವರ್ಷ, ಹೆಸರು, ವಿಳಾಸ ಗೊತ್ತಿಲ್ಲ ಇವರು ಮಲಗಿದ್ದು, ಹತ್ತಿರ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಬಿಂಡಿಗನವಿಲೆ ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.

ದಿನಾಂಕ:06-02-2013 ರಂದು ಪಿರ್ಯಾದಿ ಕೃಷ್ಣೇಗೌಡ ಬಿನ್. ತಿರುಮಲೇಗೌಡರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಎ.ಜೆ.ತಮ್ಮಣ್ಣಗೌಡ ಬಿನ್. ಲೇ.ಎನ್ .ಜಗತೀಗೌಡ ರವರು ಸಂಜೆ 5 ಗಂಟೆಯಲ್ಲಿ ಮನೆಯಲ್ಲೇ ಮೃತಪಟ್ಟಿರುತ್ತಾರೆ ಇವರು ಅಪಘಾತದಿಂದ ಮೃತಪಟ್ಟಿರುತ್ತಾರೆಯೇ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುತ್ತಾರೆಯೇ ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ದೂರಿನ ಮೇರೆಗೆ  ಯು.ಡಿ,.ಆರ್ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಕಲಂ.420 ಕೂಡ 34 ಐ.ಪಿ.ಸಿ.

ದಿನಾಂಕ:06-02-2013 ರಂದು ಪಿರ್ಯಾದಿ ಜಯಮ್ಮ ಕೋಂ ಸೋಮಣ್ಣ 28ವರ್ಷ. ಒಕ್ಕಲಿಗರು ಮನೆಕೆಲಸ, ವಾಸ ತಳಗವಾದಿ ಗ್ರಾಮ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಮಾರು 20 ರಿಂದ 25ವರ್ಷ ವಯಸ್ಸಿನವರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಚೈನು ಒಂದು ತಾಳಿ ಎರಡು ಗುಂಡು ಎರಡು ಕಾಸು ಒಟ್ಟು 40 ಗ್ರಾಂ ತೂಕದ 1.20.000 ರೂ ಬೆಲೆ ಬಾಳುವ ಒಡವೆಗಳನ್ನು ಪಾಲಿಸ್ ಮಾಡಿ ಕೊಡುವುದಾಗಿ ನಂಬಿಸಿ ಪಿರ್ಯಾದಿಯಿಂದ  ಪಡೆದುಕೊಂಡು ಮೋಸ ಮಾಡಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಠಾಣೆ ಮೊ.ನಂ. 395/13 ಕಲಂ. 406-420 ಐ.ಪಿ.ಸಿ.

     ದಿನಾಂಕ: 06-02-2013 ರಂದು ಪಿರ್ಯಾದಿ ವೈಕೆ ಜಯರಾಮು ಬಿನ್. ಕಾಳೇಗೌಡ ರವರು ನೀಡಿದ ದೂರಿನ ಸಾರಾಂಶವೇನೆಂದರೆ ವೆಂಕಟರಾಮರೆಡ್ಡಿ ರವರ ಗಮನವನ್ನು ಬೇರೆಡೆ ಸೆಳೆದು ನನ್ನ ಮೊಟಾರ್ ಸೈಕಲ್ ಮತ್ತು 35 ಗ್ರಾಂ ಚಿನ್ನವನ್ನು ತೆಗೆದುಕೊಂಡು ಹೋಗಿರುವ ವೆಂಕಟರಾಮರೆಡ್ಡಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 498[ಎ], 506 ಕೂಡ 34 ಐಪಿಸಿ ಮತ್ತು 3 & 4 ಡಿ.ಪಿ. ಆಕ್ಟ್.

     ದಿನಾಂಕ: 06-02-2013 ರಂದು ಪಿರ್ಯಾದಿ ಉಮ್ಮೆ ತನ್ಜೀಮ್ ಕೋಂ. ಸಾಧಿಕ್ ಪಾಷ, 18 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಸಾಧಿಕ್ಪಾಷ ಹಾಗು ಜರೀನ್ತಾಜ್, ರಫತುನ್ನಿಸಾ, ಸುಮಯ ಸುಲ್ತಾನ ರವರುಗಳು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿ ಪ್ರತಿ ದಿವಸ ವಿನಾಕಾರಣ ಹೊಡೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು ಎಲ್ಲರೂ ಗಂಡನನ್ನು ಬಿಟ್ಟುಬಿಡು ನೀನಗೇನು ಬೇಕು ಕೊಡುತ್ತೇವೆ, ಇಲ್ಲದಿದ್ದರೆ ನಿನ್ನನ್ನು ಸಾಯಿಸಿಬಿಡುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮನೆ ಕಳ್ಳತನ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 454-457-380 ಐ.ಪಿ.ಸಿ.

     ದಿನಾಂಕ: 06-02-2013 ರಂದು ಪಿರ್ಯಾದಿ ಸುಜಾತ ಕೋಂ. ತಾಂಡವಮೂರ್ತಿ, 37ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು, ಮನೆಯ ಬಾಗಿಲು ತೆಗೆದು ಒಳಗೆ ಪ್ರವೇಶಿಸಿ, ಅಡಿಗೆ ಮನೆಯಲ್ಲಿದ್ದ ಬೀರುವಿನ ಕೀಯಿಂದ ತೆರೆದು, ಒಂದು ಜೊತೆ ಚಿನ್ನದ ಹ್ಯಾಂಗಿಂಗ್ಸ್, ಮಾಟಿ, ತಾಳಿ ಹಾಗೂ ಬೆಳ್ಳಿಯ ಪೂಜೆ ಸಾಮಾನುಗಳು, ಒಟ್ಟು 08 ಗ್ರಾಂ. ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ,  ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 457-380 ಐ.ಪಿ.ಸಿ.

      ದಿನಾಂಕ: 06-02-2013 ರಂದು ಪಿರ್ಯಾದಿ ಮಹದೇವಮ್ಮ ಕೋಂ. ರಾಜು, ಶಾಂತಿಕೊಪ್ಪಲು ಗ್ರಾಮ, ಅರಕೆರೆ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬೀಗ ಮುರಿದು, ಮನೆಯಲ್ಲಿ ಮರದ ಪೆಟ್ಟಿಗೆಯಲ್ಲಿದ್ದ 3000/- ರೂ. ಮತ್ತು ಒಂದು ತಾಮ್ರದ ಹಂಡೆಯನ್ನು ಕಳವು ಮಾಡಿಕೊಂಡು ಹೋಗಿದ್ದು ಇವುಗಳ ಬೆಲೆ 5000/- ರೂ. ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಅಪಹರಣ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 363 ಐ.ಪಿ.ಸಿ.

     ದಿನಾಂಕ: 06-02-2013 ರಂದು ಪಿರ್ಯಾದಿ ಶ್ರೀಮತಿ ಸುಶೀಲಮ್ಮ ಕೋಂ. ರಾಮಣ್ಣ, 42ವರ್ಷ, ಲಿಂಗಾಯಿತರು ಇವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ರೂಪ.ಆರ್. ಬಿನ್. ರಾಮಣ್ಣ, 18ವರ್ಷ ರವರು ದಿಃ 20-01-2013 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಬೊಮ್ಮನಹಳ್ಳಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ಹೋದವಳು ಮತ್ತೆ ವಾಪಸ್ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. 394 ಐ.ಪಿ.ಸಿ.

     ದಿನಾಂಕ: 06-02-2013 ರಂದು ಪಿರ್ಯಾದಿ ಆನಂದ ಬಿನ್. ನಾಗಣ್ಣ, 28 ವರ್ಷ, ಶಾಂತಿಕೊಪ್ಪಲು ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ರಾತ್ರಿ 02-30 ರಿಂದ 03-00 ಗಂಟೆಯಲ್ಲಿ ಯಾರೋ ಕಳ್ಳರು ಡೋರ್ ಲಾಕ್ ನ್ನು ಮೀಟಿ ಒಳಗೆ ಬಂದು ಫಿರ್ಯಾದಿಯವರಿಗೆ ದೊಣ್ಣೆಯಿಂದ ಹೊಡೆದು, ಫಿರ್ಯಾದಿಯ  ಹೆಂಡತಿಯ ಕತ್ತಿನಲ್ಲಿದ್ದ 25 ಗ್ರಾಂ. ತೂಕದ ಮಾಂಗಲ್ಯ, 5 ಗ್ರಾಂ ತಾಳಿ, ತಲಾ 1 ಗ್ರಾಮ್, 2 ಚಿನ್ನದ ಗುಂಡುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ. 

DAILY CRIME REPORT DATED : 05-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-02-2013 ರಂದು ಒಟ್ಟು 10 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  2 ವಾಹನ ಕಳವು ಪ್ರಕರಣಗಳು,  1 ವಂಚನೆ ಪ್ರಕರಣ ಹಾಗು 6 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 05-02-2013 ರಂದು ಪಿರ್ಯಾದಿ ತಿಮ್ಮರಾಜು ಬಿನ್. ಗೋವಿಂದಪ್ಪ, 22 ವರ್ಷ, ಮಾದವರು ಕುರಿಗಳನ್ನು ಮೆಯಿಸುವ ಕೆಲಸ, ವಾಜರಹಳ್ಳಿ ಗ್ರಾಮ,  ಶಿರಾ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಣ್ಣ ಕೃಷ್ಣಮೂರ್ತಿ ಬಿನ್. ಗೋವಿಂದಪ್ಪ, 26 ವರ್ಷ, ಗೊಲ್ಲರ ಜನಾಂಗ, ಕುರಿಮೇಯಿಸುವ ಕೆಲಸ, ವಾಜರಹಳ್ಳಿ, ಇರುತ್ತದೆ. ಮಾತನಾಡಲು ಬರುವುದಿಲ್ಲ(ಮೂಗ), ಕಿವಿ ಕೇಳಿಸುವುದಿಲ್ಲ ಕೃಷ್ಣಮೂರ್ತಿ  ಹಾಗೂ ಮತ್ತೊಬ್ಬರು ಕುರಿಗಳನ್ನು ಮೇಯಿಸಲು ಈಗ್ಗೆ 3 ವರ್ಷದ ಹಿಂದೆ ಬಂದಿದ್ದು ಪ್ರತಿ ದಿನ ಒಂದೊಂದು ಕಡೆ ಕುರಿಗಳನ್ನು ಮೇಯಿಸಿಕೊಂಡು ಅಲ್ಲೆ ತಂಗುತ್ತಿದ್ದು ಕಾರೇಕುರ ಗ್ರಾಮದ ರಾಜು ರವರ ಜಮೀನಿನ ಬಳಿ ತಂಗಿದ್ದು ಬೆಳಗಿನ ಜಾವ ಪಿರ್ಯಾಧಿಯವರ ಅಣ್ಣ ಕೃಷ್ಣಮೂರ್ತಿ ರವರು ಇರುವುದಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಆತನು ಮೂಗ ಮತ್ತು ಕಿವುಡನಾಗಿರುತ್ತಾನೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 379 ಐ.ಪಿ.ಸಿ.

ದಿನಾಂಕ:05-02-2013ರಂದು ಪಿರ್ಯಾದಿ ಕೆ.ಎಂ. ವೀರೇಗೌಡ ಬಿನ್. ಮರಿಮಾದೇಗೌಡ, ಕೋರೆಗಾಲ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕ: 04-02-2013 ರಂದು ಸಂಜೆ 04 ಗಂಟೆಯಿಂದ 05-00 ಗಂಟೆಯವರೆಗೆ ಮಳವಳ್ಳಿ ಟೌನ್, ತಾಲ್ಲೂಕು ಕಚೇರಿಯ ಮುಂಬಾಗದಲ್ಲಿ ಅವರ ಬಾಬ್ತು ಮೋಟಾರ್ ಸೈಕಲ್ ನ್ನು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಸದರಿ ಮೋಟಾರ್ ಸೈಕಲನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 379, ಐ.ಪಿ.ಸಿ

      ದಿನಾಂಕ: 05-02-2013 ರಂದು ಪಿರ್ಯಾದಿ ಬಿ.ವಿ ರಾಜು ಬಿನ್ ಲೇ:ವೆಂಕಟೇಗೌಡ, ನಂ.3957, 1ನೇತಿರುವು ಶಂಕರನಗರ ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಪಿರ್ಯಾದಿಯವರ ಬಾಬ್ತು ಬೈಕ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ನನ್ನ ಬೈಕ್ನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 406, 379, 420, 212, 411, 109 ರೆ/ವಿ 34 ಐ.ಪಿ.ಸಿ.

ದಿನಾಂಕ:05-02-2013ರಂದು ಪಿರ್ಯಾದಿ ಶಾಂತಿಲಾಲ್ ಆಚಾಬಿನ್ ಮಾಣಿಕ್ಯಲಾಲ್ಚಂದ್ ಜೈನ್, ವಾಸ ಭಾಗ್ಯಶಾಂತಿ ನಿಲಯ, ನಂ. 1866, 6ನೇ ಕ್ರಾಸ್, ಕೆ.ಆರ್.ರಸ್ತೆ, ಸುಭಾಷ್ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರ ಮಗ ವಿಕಾಸ್ ಎಸ್. ಜೈನ್ ಎಂಬುವನಿಗೆ 1ನೇ ಆರೋಪಿ ನಿಶಾ ಆರ್ ಜೈನ್ ಬಿನ್ ರಜನೀಶ್ ಜೈನ್  ಎಂಬುವಳನ್ನು ತಂದು ಮದುವೆ ಮಾಡಿಕೊಂಡಿದ್ದು ಮದುವೆ ಕಾಲದಲ್ಲಿ ಫಿರ್ಯಾದಿಯವರು ಸುಮಾರು 3.5 ಲಕ್ಷ ರೂ. ಖರ್ಚು  ಮಾಡಿದ್ದು ಮದುವೆ ಮಾಡಿಕೊಂಡಂದಿನಿಂದ ದಿನಾಂಕ: 08-10-2012 ರ ಅವಧಿಯಲ್ಲಿ ಆರೋಪಿ-2 ಅಶೋಕ್ ಮೆಹ್ತ ಬಿನ್ಲೇಟ್ ಗೇವರ್ಚಂದ್ ರವರ ಒಳಸಂಚಿನಿಂದ ಮದುವೆಯ ಕಾಲದಲ್ಲಿ ನಾವು ಆರೋಪಿ-1 ರವರಿಗೆ ನೀಡಿದ್ದಂತಹ 250 ರಿಂದ 260 ಗ್ರಾಂ ವಜ್ರ, ಚಿನ್ನ ಹಾಗೂ 275 ಗ್ರಾಂ ಬೆಳ್ಳಿಯ ವಡವೆಗಳನ್ನು ನಂಬಿಕೆ ದ್ರೋಹ ಮಾಡಿ ಮೋಸದಿಂದ ಕಳ್ಳತನದಿಂದ ಎಲ್ಲಾ ವಡವೆಗಳನ್ನು ತೆಗೆದುಕೊಂಡು ಹೊರಟು ಹೋಗಿರುತ್ತಾಳೆ. ಆರೋಪಿ-2 ರವರಿಗೆ ವ್ಯಾಪಾರ ವಹಿವಾಟು ನಡೆಸಲು ನೀಡಿದ್ದ 740 ಗ್ರಾಂ ವಜ್ರ ಮತ್ತು ಚಿನ್ನದ ವಡವೆಗಳನ್ನು ವಾಪಸ್ ಕೊಡದೆ ಮೋಸ ಮಾಡಿ ಹೊರಟು ಹೋಗಿರುತ್ತಾರೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರು  ಆರೋಪಿಗಳಾದ 1] ನಿಶಾ ಆರ್ ಜೈನ್ ಬಿನ್ ರಜನೀಶ್ ಜೈನ್ 2] ಅಶೋಕ್ ಮೆಹ್ತ ಬಿನ್ಲೇಟ್ ಗೇವರ್ಚಂದ್ ಜಿ. ಮೆಹ್ತ ಎಲ್ಲರೂ ವಾಸ ನಂ. 101, ಹನುಮಂತಪ್ಪ ಲೇಔಟ್, ಸುಲ್ತಾನ್ ಪಾಳ್ಯ, ಆರ್.ಟಿ.ನಗರ್, ಬೆಂಗಳೂರು ಸಿಟಿ ರವರುಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.