Moving text

Mandya District Police

DAILY CRIME REPORT DATED : 17-04-2013


ದಿನಾಂಕ : 17-04-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳವು ಪ್ರಕರಣ,  1 ವಂಚನೆ ಪ್ರಕರಣ,  4 ಮನುಷ್ಯ ಕಾಣೆಯಾದ ಪ್ರಕರಣಗಳು,    2 ರಸ್ತೆ ಅಪಘಾತ ಪ್ರಕರಣಗಳು ಹಾಗು 19 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 189/13 ಕಲಂ. 461, 380 ಐ.ಪಿ.ಸಿ.

ದಿನಾಂಕ: 17-04-2013 ರಂದು ಪಿರ್ಯಾದಿ ಎಂ.ಶಾಂತ, ಹಾಪ್ಕಾಮ್ಸ್ ಸಹಾಯಕ, ಕುವೆಂಪುನಗರ, ಮೈಸೂರು ಹಾಪ್ಕಾಮ್ಸ್ ಸಂಸ್ಥೆಯ ಕಛೇರಿಯಲ್ಲಿ, ಎಂ.ಸಿ ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ        1] ಎಸ್.ನಾಗೇಂದ್ರ ಗುತ್ತಲು, ಹಾಗು 2] ವಿ.ನಾಗರಾಜು ಕಾಮರ್ಿಕರ ಕಾಲೋನಿ, ಚಿಕ್ಕಮಂಡ್ಯ ರವರುಗಳು 09-04-13 ರಂದು ಎಂ.ಸಿ ರಸ್ತೆ, ಮಂಡ್ಯ ಸಿಟಿ ಯಲ್ಲಿರುವ ಹಾಪ್ಕಾಮ್ಸ್ ಸಂಸ್ಥೆಯ ಕಛೇರಿಯ ಬೀರುವನ್ನು ದಿನಾಂಕ: 09-04-2013 ರಂದು ಆರೋಪಿತರು ಹೊಡೆದು ಹಾಕಿ ದಾಖಲಾತಿಗಳನ್ನು ಹೊರಗಡೆ ತೆಗೆದು ಕಳವು ಮಾಡಿರುತ್ತಾರೆಂದು ಹಾಗೂ ಹೊಡೆದಿರುವ ಬೀರುವಿನ ನಕಲಿ ಕೀಲಿ ಕೈ ಮಾಡಿಸಿ ಬಳಕೆ ಮಾಡುತ್ತಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 190/13 ಕಲಂ. 420 ಐ.ಪಿ.ಸಿ.

ದಿನಾಂಕ: 17-04-2013 ರಂದು ಪಿರ್ಯಾದಿ ಮಾಯಣ್ಣ ಬಿನ್ ಲೇಟ್. ನೀಲಿ ಕೆಂಪಯ್ಯ, 53 ವರ್ಷ, ಬೇವಿನಹಳ್ಳಿ ಗ್ರಾಮ ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಇಬ್ಬರು 20-25 ವರ್ಷ ವಯಸ್ಸಿನ ಅಪರಿಚಿತ ಹುಡುಗರು ಬೆಳ್ಳಿ ಕಾಲುಮುರಿ ಹಾಗೂ ಕುಕ್ಕರನ್ನು ಪಾಲಿಶ್ ಮಾಡಿ ನಂತರ ತಮ್ಮ ಪತ್ನಿಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಪಾಲಿಶ್ ಮಾಡಲು ತೆಗೆದುಕೊಂಡಿದ್ದು ನಮ್ಮ ಗಮನವನ್ನು ಬೇರೆಡೆಗೆ ಸೆಳೆದು ನಂಬಿಸಿ ಮಾಂಗಲ್ಯ ಸರವನ್ನು ಮೋಸದಿಂದ ತೆಗೆದುಕೊಂಡು ಹೊರಟುಹೋಗಿರುತ್ತಾರೆಂದು ಇದರ ಅಂದಾಜು ಬೆಲೆ ಸುಮಾರು 85,000 ರೂಗಳಾಗಿರುತ್ತೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರನ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 191/13 ಕಲಂ. ಹುಡುಗಿ ಕಾಣೆಯಾಗಿರುತ್ತಾಳೆ. 

ದಿನಾಂಕ: 17-04-2013 ರಂದು ಪಿರ್ಯಾದಿ ಕೆ.ಎಂ.ಮಂಚೇಗೌಡ ಬಿನ್. ಲೇಟ್. ಮೂಗಿ, ಮಾದೇಗೌಡ, 48 ವರ್ಷ, ಕಾರಸವಾಡಿ ರಸ್ತೆ ರವರು ನೀಡಿದ ದೂರು ಏನೆಂದರೆ ಅವರ ಮಗಳು ಕೆ.ಎಂ.ಸುಹಾಸಿನಿ ಬಿನ್ ಮಂಚೇಗೌಡ, 18 ವರ್ಷ,ಒಕ್ಕಲಿಗರು, ಕಾರಸವಾಡಿ ಗ್ರಾಮ, ಮಂಡ್ಯ ತಾ. ರವರು ಮನೆಯಿಂದ ಎದ್ದು ಬಾಗಿಲಿಗೆ ನೀರು ಹಾಕಲು ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ನಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಸೇಹಿತರ ಮನೆಗಳಲ್ಲಿ ಹುಡುಕಿದರೂ ಸಹ ಪತ್ತೆಯಾಗಿರುವುದಿಲ್ಲವೆಂದು ಪತ್ತೆ ಕ್ರಮ ಕೋರಿ ನೀಡಿದ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 126/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 17-04-2013 ರಂದು ಪಿರ್ಯಾದಿ ರಮೇಶ ಬಿನ್. ನಂಜೇಗೌಡ, ಸಾರಂಗಿ ಗ್ರಾಮ, ಕೆ.ಆರ್. ಪೇಟೆ ತಾ|| ಮಂಡ್ಯ ಜಿಲ್ಲೆರವರು ನೀಡಿದ ದೂರು ಏನೆಂದರೆ ಅವರ ಮಗಳು ಎಸ್.ಆರ್ ದೇವಕಿ ಬಿನ್. ರಮೇಶ್, 18 ವರ್ಷ, ವಕ್ಕಲಿಗರು, ಸಾರಂಗಿ ಗ್ರಾಮ ರವರು ದಿನಾಂಕ: 15.04.2013 ರಂದು ಬೆಳಿಗ್ಗೆ 08.30 ಗಂಟೆಯಲ್ಲಿ ಸಾರಂಗಿ ಗ್ರಾಮದಿಂದ ಕಾಲೇಜಿಗೆ ಹೋಗಿ ಬರುತ್ತೇನೆಂದು ಕೆ.ಆರ್.ಪೇಟೆ ಟೌನ್ಗೆ ಹೋದವಳು ಸಂಜೆ ಆದರು ಕೂಡ ಮನೆಗೆ ಬಂದಿರುವುದಿಲ್ಲ, ಎಲ್ಲಾ ಕಡೆ ಹುಡುಕಿದರು ಪತ್ತೆಯಾಗದ ಕಾರಣ ಸಿಕ್ಕಿರುವುದಿಲ್ಲ ಪತ್ತೆಮಾಡಿ ಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 155/2013 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 17-04-2013 ರಂದು ಪಿರ್ಯಾದಿ ಪಳಿನಿ ಬಿನ್. ಲೇಟ್ ಕೆ. ಚಂದ್ರ, ಪೆನ್ಶನ್ ಕಾಲೋನಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ತಾಯಿ ಧನಲಕ್ಷ್ಮಿ, ಪೆನ್ಶನ್ ಕಾಲೋನಿ ರವರು ದಿನಾಂಕ: 16-04-2013 ರಂದು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 187/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 17-04-2013 ರಂದು ಪಿರ್ಯಾದಿ ಹೆಚ್.ಎಲ್ ಶಿವರಾಮು ಬಿನ್. ಲಿಂಗಯ್ಯ, ಮಂಡ್ಯ ಸಿಟಿ, ಹೊಸಹಳ್ಳಿ, 6ನೇ ಕ್ರಾಸ್ (ಬಸವನಗುಡಿ ಮುಂದೆ) ವಾಸವಾಗಿರುವ ಆರ್, ಪವಿತ್ರ ಬಿನ್ ರಾಮಚಂದ್ರ, 19 ವರ್ಷ, ಮೊದಲನೇ ವರ್ಷದ ಬಿ.ಕಾಂ.ವಿದ್ಯಾರ್ಥಿನಿ, ವಾಸ ಕಾವೇರಿ ಚಂದ್ರ ದರ್ಶನ ಕಲ್ಯಾಣಮಂಟಪದ ಹತ್ತಿರ, ಕಾವೇರಿ ನಗರ, ಮಂಡ್ಯ ಸಿಟಿ ರವರು ದಿನಾಂಕ: 17-04-2013 ರಂದು ಬೆಳಿಗ್ಗೆ ಹೊಸಹಳ್ಳಿ 6 ನೇಕ್ರಾಸ್ ಬಸವನಗೂಡು ಮುಂಭಾಗದಲ್ಲಿರುವ ಪಿರ್ಯಾದಿ ಹೆಚ್.ಎಲ್ ಶಿವರಾಮು ರವರ ಮನೆಯಿಂದ ಕಾವೇರಿನಗರದ ತಂದೆ ಮನೆಗೆ ಹೋಗುತ್ತೇನೆಂದು ಹೇಳಿ ಹೋದವಳು ಮನೆಗೆ ಸಂಜೆಯಾದರು ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲಾ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣಗಳು :

1. ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 279,304 (ಎ) ಐಪಿಸಿ ಕೂಡ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 17-04-2013 ರಂದು ಪಿರ್ಯಾದಿ ಹೆಚ್.ಎಸ್.ಕೆಂಪಯ್ಯ ಬಿ.ಹೊಸೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 17-04-2013 ರಂದು ಪಂಚಲಿಂಗೇಶ್ವರ ಪೆಟ್ರೋಲ್ ಬಂಕ್ ಮುಂಭಾಗ ನಂ. ಕೆಎ-11/ಎ-5639ರ ಟಾಟಾ ಮ್ಯಾಜಿಕ್ ವಾಹನದ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಜೊತೆ ನನ್ನ ಬಲಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಜವರೇಗೌಡರ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಜವರೇಗೌಡರವರು ಕೆಳಗೆ ಬಿದ್ದಾಗ ಅಲ್ಲೇ ಜೊತೆಯಲ್ಲಿ ನಾನು ಹಾಗೂ ರಸ್ತೆಯಲ್ಲಿ ಬರುತ್ತಿದ್ದವರು ಜವರೇಗೌಡರನ್ನು ಎತ್ತಿ ಉಪಚರಿಸಿ ನೋಡಲಾಗಿ ಅವರಿಗೆ ತಲೆಗೆ, ಬಲಗೈಗೆ ಮತ್ತು ಇತರೆ ಕಡೆಗಳಿಗೆ ಪೆಟ್ಟಾಗಿದ್ದು ನಂತರ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. 279-337-304[ಎ] ಐಪಿಸಿ ಕೂಡ 187 ಐಎಂವಿ ಕಾಯ್ದೆ.

ದಿನಾಂಕ: 17-04-2013 ರಂದು ಪಿರ್ಯಾದಿ ನಾಗೇಗೌಡ ಬಿನ್. ಸಿದ್ದೇಗೌಡ, 48 ವರ್ಷ, ರಾಯಸಮುದ್ರ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 14.04.2013 ರಂದು ರಾತ್ರಿ 08.00 ಗಂಟೆಯಲ್ಲಿ, ಉಯ್ಗೋನಹಳ್ಳಿ ಹಳ್ಳದ ಹತ್ತಿರ ನಂ. ಕೆಎ-16-ಟಿ-7640 ರ ಟ್ರಾಕ್ಟರ್ ಚಾಲಕ ಟ್ರಾಕ್ಟರ್ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತಿದ್ದ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ಆಟೋದಲ್ಲಿ ಕುಳಿತಿದ್ದ ನನಗೆ ಬಲಮೊಣಕೈಗೆ ಪೆಟ್ಟಾಯಿತು. ಕಾಂತರಾಜುಗೆ ತಲೆಗೆ ಮೈಕೈಗೆ ಪೆಟ್ಟಾಗಿ ತಲೆಯಲ್ಲಿ ರಕ್ತ ಬರುತಿತ್ತು ಕೆಆರ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಬರುತ್ತಿರುವಾಗ ಕಾಂತರಾಜು ಮೃತಪಟ್ಟಿರುತ್ತಾನೆ ಆದ್ದರಂದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 16-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-04-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ ಹಾಗು ಇತರೆ 18 ಇತರೆ ಪ್ರಕರಣಗಳಾದ, ಚುನಾವಣಾ ಮುಂಜಾಗ್ರತಾ ಪ್ರಕರಣಗಳು/ಅಬಕಾರಿ ಕಾಯಿದೆ ಪ್ರಕರಣಗಳು/ಸಿಆರ್.ಪಿ.ಸಿ. ಪ್ರಕರಣಗಳು/ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ರಾಬರಿ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. 392  ಐ.ಪಿ.ಸಿ.

ದಿನಾಂಕ: 16-04-13 ರಂದು ಸಂಜೆ 05-30 ಗಂಟೆಯಲ್ಲಿ ಪಿರ್ಯಾದಿ ವಿಜಯಲಕ್ಷ್ಮಿ ಕೋಂ. ಬಾಬುರಾವ್, ಹೊಸ ಗುಡ್ಡದಹಳ್ಳಿ, ಬೆಂಗಳೂರು ರವರು ನೀಡಿದ ದೂರು ಏನೆಂದರೆ ಅವರು ದಿನಾಂಕ: 14-03-2013 ರಂದು ಸುಮಾರು ಸಂಜೆ 07-30 ಗಂಟೆಯಲ್ಲಿ ಬೃಂದಾವನ ಗಾರ್ಡನಲ್ಲಿ ಮ್ಯೂಸಿಕಲ್ ಪೌಂಟೆನ್  ಹತ್ತಿರ ವೀಕ್ಷಣೆ ಮಾಡುತ್ತಿದ್ದಾಗ ಸುಮಾರು 25 ವರ್ಷ ವಯಸ್ಸಿನ ಯಾರೋ ಒಬ್ಬ ಅಪರಿಚಿತ ಹುಡುಗನು ಪಿರ್ಯಾದಿಯವರ ಕತ್ತಿನಲ್ಲಿದ್ದ 52 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಜನಗಳ ಮಧ್ಯೆ ಓಡಿ ಹೋಗಿರುತ್ತಾನೆ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಯು.ಡಿ.ಆರ್. ಪ್ರಕರಣ :

ಕೆ.ಆರ್. ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಆರ್ ಶ್ರೀನಿವಾಸ ಬಿನ್. ರಂಗನಾಯ್ಕ್, ಮೈಸೂರು ರವರು ನೀಡಿದ ದೂರು ಏನೆಂದರೆ ದಿನಾಂಕ: 15-04-13 ರಂದು ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಪಿರ್ಯಾದಿಯವರ ಮಗ ಶ್ರೀಹರ್ಷ ಬಿನ್. ಆರ್. ಶ್ರೀನಿವಾಸ, 20 ವರ್ಷ, ವಿದ್ಯಾರ್ಥಿ, ಮೈಸೂರು ರವರು ನೀರಿನಲ್ಲಿ ಈಜಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಕಳ್ಳತನ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.72/13 ಕಲಂ. 457-380 ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಜಯಶಂಕರ ಹೆಚ್.ಎನ್, ಮುಖ್ಯ ಶಿಕ್ಷಕರು ಕರಡಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-04-2013 ರಂದು ಯಾರೋ ಕಳ್ಳರು ಹೆಸರು ವಿಳಾಸ ತಿಳಿಯಬೇಕಾಗಿದೆ ಕರಡಹಳ್ಳಿ ಗ್ರಾಮದ ಪ್ರೌಡಶಾಲೆಯಲ್ಲಿ ಕಂಪ್ಯೂಟರ್ ಗೆ, ಅಳವಡಿಸಿದ್ದ 14 ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಇವುಗಳ ಅಂದಾಜು ಬೆಲೆ 84.000/-ರೂ ಅಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ನಾಗಮಂಗಲ ಗ್ರಾಮಾಂತರ ಠಾಣೆ ಮೊ.ನಂ. 73/13 ಕಲಂ. 304 (ಎ) ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಈರಣ್ಣ ಬಿನ್. ಲೇಟ್. ರುದ್ರಪ್ಪ, 50ವರ್ಷ ರವರು ನೀಡಿದ ದೂರು ಏನೆಂದರೆ .ಶಿವಕುಮಾರ್, ಚೆಸ್ಕಾಂನಲ್ಲಿ ಜೆ.ಇ ಕೆಲಸ, ಚೀಣ್ಯಾ ಸೆಕ್ಷನ್, ನಾಗಮಂಗಲ ಉಪವಿಭಾಗ ಹಾಗು ಇತರರು ಇಜ್ಜಲಘಟ್ಟ ಗ್ರಾಮದಲ್ಲಿ ವಿದ್ಯುತ್ ತಗುಲಿ ಪಿರ್ಯಾದಿಯವರ ತಮ್ಮ ಶಂಕರರವರು ಮೃತಪಟ್ಟಿರುತ್ತಾರೆ, ಈ ಕೃತ್ಯವು ಚೀಣ್ಯಾ ಸೆಕ್ಷನ್ನ ಜೆ.ಇ. ಶಿವಕುಮಾರ್ರವರ ಹಾಗು ಲೈನ್ ಮ್ಯಾನ್ ಗಳ ನಿರ್ಲಕ್ಷತೆಯಿಂದ ಉಂಟಾಗಿರುತ್ತದೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 172/13 ಕಲಂ. 379-188 ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಪುಟ್ಟಮಾದಯ್ಯ ಸಿ.ಕೆ. ಗ್ರಾಮ, ಲೆಕ್ಕಿಗರು, ಮಾಲಗಾರನಹಳ್ಳಿ ವೃತ್ತ ರವರು ನೀಡಿದ ದೂರು ಏನೆಂದರೆ ದಿನಾಂಕ:15-04-2013 ರಂದು ರಾತ್ರಿ 12 ಗಂಟೆ ವೇಳೆಯಲ್ಲಿ ಮಾಲಗಾರನಹಳ್ಳಿ ಶಿಂಷಾ ನದಿ ಪಾತ್ರದಲ್ಲಿ 1) ಲಾರಿ ನಂ ಕೆ.ಎ.-01-ಬಿ-4371 ರ ಚಾಲಕ 2) ಲಾರಿ ನಂ ಕೆ.ಎ.-01-ಬಿ-4371 ರ ಮಾಲೀಕ ಇಬ್ಬರು ಲಾರಿಗೆ ಮರಳನ್ನು ಶಿಂಷಾನದಿಯಿಂದ ಅಕ್ರಮವಾಗಿ ತುಂಬುತ್ತಿರುವಾಗ ಪಿರ್ಯಾದಿರವರ ಜೀಪು ಹತ್ತಿರ ಹೋಗುತ್ತಿರುವುದನ್ನು ಕಂಡು ಅವರು ಲಾರಿಯನ್ನು ಚಾಲನೆ ಮಾಡಿಕೊಂಡು ಕತ್ತಲೆಯಲ್ಲಿ ಕಾಣದೆ ಪರಾರಿಯಾಗಿರುತ್ತಾರೆ ಸದರಿ ಲಾರಿ ಚಾಲಕ ಹಾಗು ಮಾಲೀಕನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 15-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-04-2013 ರಂದು ಒಟ್ಟು 39 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ಹೆಂಗಸು ಕಾಣೆಯಾದ ಪ್ರಕರಣ ಹಾಗು 34 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-04-2013 ರಂದು ಪಿರ್ಯಾದಿ ಮಮತ, 30ವರ್ಷ ಕೆ.ಮಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಎಂ.ಎನ್. ರಾಜು 40 ವರ್ಷ ಕೆ.ಮಲ್ಲೇನಹಳ್ಳಿ ಗ್ರಾಮ  ರವರಿಗೆ ಪಿರ್ಯಾದಿಯವರ ಗಂಡನಿಗೆ ಕುಡಿಯುವ ಚಟವಿದ್ದು ಕುಡಿದು ಮನೆಯಲ್ಲಿ ಮಲಗಿದ್ದವರು ಊಟಕ್ಕೆ ಏದ್ದೇಳದ ಕಾರಣ ಹೋಗಿ ನೋಡಲಾಗಿ ಸುಸ್ತಾಗಿದ್ದವರನ್ನು ಚಿಕಿತ್ಸೆಗೆ ಎಂದು ನಾಗಮಂಗಲ ಸರ್ಕಾರಿ  ಅಸ್ಪತ್ರೆಗೆ ಕರೆ ತಂದು ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್.ನಂ. 22/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-04-2013 ರಂದು ಪಿರ್ಯಾದಿ ಚಂದುಲಾಲ್, 42 ವರ್ಷ, ದರಸಗುಪ್ಪೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಲಕ್ಷೀ, 75 ವರ್ಷ, ದರಸಗುಪ್ಪೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಲಕ್ಷ್ಮಮ್ಮರವರ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬೆಂಕಿ ಹತ್ತಿಕೊಂಡು ಮೈ ಕೈ ದೇಹವೆಲ್ಲ ಸುಟ್ಟ ಗಾಯಾಗಳಗಿದ್ದು ಚಿಕಿತ್ಸೆ ನೀಡಿದರು ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 174 ಸಿ.ಅರ್.ಪಿ.ಸಿ.

 ದಿನಾಂಕ: 15-04-2013 ರಂದು ಪಿರ್ಯಾದಿ ಮಾಯಮ್ಮ, 50ವರ್ಷ, ಮೊಳೆಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-04-213 ರಂದು ಮದ್ಯಾಹ್ನ 12 ಗಂಟೆಯಲ್ಲಿ ಸುಧಾ, 30 ವರ್ಷ, ಮರಡಿಪುರ ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದೀಪವು ಆಕಸ್ಮಿಕವಾಗಿ ಬಿದ್ದ ಕಾರಣ ಸೀರೆ ಬೆಂಕಿ ಹೊತ್ತಿಕೊಂಡು ಮೈಯೆಲ್ಲಾ ಸುಟ್ಟಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್ .ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 279, 304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 15-04-2013 ರಂದು ಪಿರ್ಯಾದಿ ಎಂ.ಎಸ್.ನಾಗರಾಜು, ಸಿದ್ದಾರ್ಥನಗರ, ಮಳವಳ್ಳಿಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-01. ಸಿ-981 ಟಾಟಾ ಇಂಡಿಕಾ ಕಾರಿನ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ಕಾರನ್ನು ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾಗಿದ್ದಾನೆ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 15-04-2013 ರಂದು ಪಿರ್ಯಾದಿ ನಿಂಗರಾಜು ಬಿ.ಎನ್. 36ವರ್ಷ, ಬೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸಾವಿತ್ರಿ. 26 ವರ್ಷ, ಬೆಟ್ಟಹಳ್ಳಿ ಗ್ರಾಮ ರವರು ದಿನಾಂಕ: 10-04-2013 ರಂದು ಬೆಂಗಳೂರಿಗೆ ಹೋಗುತ್ತೇನೆಂದು ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿದರು ಸಿಗದ ಕಾರಣ ಪತ್ತೆ ಮಾಡಿಕೊಡಿ ಎಂದು ದೂರು ನೀಡಿರುತ್ತಾರೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 14-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-04-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು ಹಾಗು 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಅಪಹರಣ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 177/13 ಕಲಂ. 343, 366(ಎ) ಐ.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಬಿ. ಕುಮಾರ್ ಬಿನ್. ಲೇಟ್. ಬೋರೇಗೌಡ, ನಂ. 1498 5 ನೇ ಕ್ರಾಸ್, ಅಶೋಕ ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ದೇವರಾಜು ಬಿನ್. ದೇವೇಗೌಡ, ವಾಸ ಬೂತನಹೊಸೂರು ಗ್ರಾಮರವರು ಅವರ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಬಲವಂತವಾಗಿ ಇರಿಸಿಕೊಂಡು ಮದುವೆ ಮಾಡಿಕೊಂಡಿರು-ತ್ತಾನೆ.  ಆದ್ದರಿಂದ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಮದುವೆ ಮಾಡಿಕೊಂಡಿರುವ ದೇವರಾಜನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಎಂದು ನೀಡಿದ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತದೆ, 


ಕಳವು ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 152/13 ಕಲಂ. 379 ಐ.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಕುಮಾರ್.ಎಸ್.ಡಿ. ಬಿನ್. ದೇವೇಗೌಡ, ಕೃಷ್ಣ ನಗರ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಮನೆಯ ಬೀಗ ಹೊಡೆದು ಬೀರುವಿನಲ್ಲಿದ್ದ ಬೆಳ್ಳಿ ಪದಾರ್ಥಗಳು ಒಟ್ಟು 300 ಗ್ರಾಂ ಬೆಳ್ಳಿ ಹಾಗೂ 21.500 ರೂ ಹಣ ಕಳ್ಳತನ ಮಾಡಲಾಗಿದೆ. ಕಳುವಾಗಿರುವ ವಸ್ತುಗಳ ಒಟ್ಟು ಮೌಲ್ಯ 36.000/- ರೂಗಳು. ಆದ್ದರಿಂದ ಸದರಿ ವಸ್ತುಗಳನ್ನು ಪತ್ತೆಮಾಡಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಕೃಷ್ಣ ಬಿನ್. ಕರಿಯಪ್ಪ, ಕೆ.ಕೋಡಿಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಶಂಕರ ಬಿನ್ ಕರಿಯಪ್ಪ ಕೆ.ಕೋಡಿಹಳ್ಳಿ ಗ್ರಾಮ, ಮದ್ದೂರು ರವರು ಕ್ರಿಮಿನಾಶಕವನ್ನು ಔಷದಿ ಎಂದು ಸೇವಿಸಿದ್ದು ಚಿಕಿತ್ಸೆಗಾಗಿ ಮದ್ದೂರು ಆಸ್ಪತ್ರೆಗೆ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13-4-2013 ರಂದು ಸಂಜೆ 06-40ಗಂಟೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 244/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 14-04-2013  ರಂದು ಪಿರ್ಯಾದಿ ಪುಷ್ವಲತಾ ಕೊಂ. ಮಹೇಶ, ಮೇಳಪುರ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹೇಶ ಬಿನ್. ಲೇಟ್. ರಾಮೇಗೌಡ 52 ವರ್ಷ, ವಕ್ಕಲಿಗರು, ಮೇಳಾಪುರ ಗ್ರಾಮ ರವರು ದಿನಾಂಕ: 17-03-2013 ಬೆಳಿಗ್ಗೆ 11-30 ಗಂಟೆ ಮೇಳಪುರ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 184/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 14-04-2013  ರಂದು ಪಿರ್ಯಾದಿ ರತ್ನಮ್ಮ ಕೋಂ. ಸಿ.ಬಿ. ಮಾಧು, 48 ವರ್ಷ, ಚಿಕ್ಕಮಂಡ್ಯ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ನಿರಂಜನ್ ಬಿನ್ ಸಿ.ಬಿ. ಮಾಧು, 22 ವರ್ಷ,  ಚಿಕ್ಕಮಂಡ್ಯ ಗ್ರಾಮ, ಮಂಡ್ಯ ತಾ. ರವರು ದಿನಾಂಕ: 14-04-2013 ರಂದು ಕೆಲಸಕ್ಕೆ  ಹೊಗುತ್ತೇನೆಂದು ಹೇಳಿ  ಹೋದವನು ಇಲ್ಲಿಯವರೆಗೂ ಮನೆಗೆ ಬರಲಿಲ್ಲ ನಂತರ ನಮ್ಮ ಸಂಬಂಧಿಕರ ಮನೆ, ಅವನ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 118/13 ಕಲಂ. 498(ಎ)-324 ಐ.ಪಿ.ಸಿ.

ದಿನಾಂಕ: 14-04-2013  ರಂದು ಪಿರ್ಯಾದಿ ಪುಟ್ಟಮ್ಮ, ಮಾದರಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿತ ಅವರ ಗಂಡ ತಮ್ಮಯ್ಯ @ ಶಿವರಾಜು ಬಿನ್.  ಮಾಳಗಯ್ಯ,, 38 ವರ್ಷ, ಪರಿಶಿಷ್ಟಜಾತಿ, ಮಾದರಹಳ್ಳಿ ಗ್ರಾಮ, ಮದ್ದೂರು ತಾ. ರವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು ದಿನಾಂಕ: 14-04-2013 ರಂದು ಬೆಳಿಗ್ಗೆ 08-00  ಗಂಟೆ ಸಮಯದಲ್ಲಿ ಗಲಾಟೆ ತೆಗೆದು ಬಿಡಲು ಬಂದ ದೇವಿರಮ್ಮನವರಿಗೆ ದೊಣ್ಣೆಯಿಂದ ಹೊಡೆದು ಗಲಾಟೆಮಾಡಿರುತ್ತಾರೆಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 69/13 ಕಲಂ. 143-323-324-504-506-498(ಎ) ಕೂಡ 149 ಐ.ಪಿ.ಸಿ. 3 ಮತ್ತು 4 ಡಿ.ಪಿ. ಕಾಯಿದೆ. 

 ದಿನಾಂಕ: 14-04-2013  ರಂದು ಪಿರ್ಯಾದಿ ಎಂ.ವಿ. ವಿಧ್ಯಾ, ಅಗಸನಪುರ ಗ್ರಾಮ ರವರು ನೀಡಿದ ದೂರು ಏನೆಂದರೆ ಎ.ಬಿ.ವಿಜಯ್ ಇತರೆ 13 ಜನರು ಎಲ್ಲರೂ ಅಗಸನಪುರ ಗ್ರಾಮ ಹಾಗು ಬೆಂಗಳೂರು ವಾಸಿಗಳು ಪಿರ್ಯಾದಿಯವರಿಗೆ ಹೆಚ್ಚಿನ ವರದಕ್ಷಿಣೆ ಹಣವನ್ನು ತಂದು ಕೊಡುವಂತೆ ಮನೆಯಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಗಲಾಟೆ ಮಾಡುತ್ತಿದ್ದಾಗ ಪಂಚಾಯ್ತಿಗೆ ಬಂದಿದ್ದ ಅವರ ಮನೆಯವರಿಗೆ ಕಲ್ಲು. ದೊಣ್ಣೆ. ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿ ಹೆಚ್ಚಿನ ವರದಕ್ಷಿಣೆಯನ್ನು ತರದೆ ಹೋದರೆ ನಿನ್ನನ್ನು ಕೊಲೆ ಮಾಡುತ್ತೆವೆ ಎಂದು ಪ್ರಾಣಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 13-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-04-2013 ರಂದು ಒಟ್ಟು 47 ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 4 ಯು.ಡಿ.ಆರ್. ಪ್ರಕರಣಗಳು,  1 ಕಳವು ಪ್ರಕರಣ,  1 ಆತ್ಮಹತ್ಯೆ ಪ್ರಚೋದನಾ ಪ್ರಕರಣ ಹಾಗು ಚುನಾವಣಾ ಅಕ್ರಮ/ಮುಂಜಾಗ್ರತಾ ಪ್ರಕರಣಗಳು ಮತ್ತು 41 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 21/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 13-04-13 ರಂದು ಪಿರ್ಯಾದಿ ನಾಗರಾಜು ಬಿನ್. ರಾಜಪ್ಪ, 70 ವರ್ಷ, ನಯನ ಕ್ಷತ್ರಿಯ, ಚಿಕ್ಕಜೋನಿಗರ ಬೀದಿ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರು ಏನೆಂದರೆ ಪಿರ್ಯಾದಿ ಸುಮಾರು 80 ವರ್ಷ ಒಬ್ಬ ಅಪರಿಚಿತ ಗಂಡಸು ಸತ್ತು ಮಲಗಿರುತ್ತಾನೆ ಮೃತ ಅಪರಿಚಿತನಾಗಿದ್ದು ಯಾರೂ ಯಾವ ಊರು ಗೊತ್ತಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 13-04-13 ರಂದು ಪಿರ್ಯಾದಿ ಸಯ್ಯದ್ ಸಾಜಿದ್ ಬಿನ್ ಸಯ್ಯದ್ ಶಪಿವುಲ್ಲಾ, ಕ್ಯಾತನಹಳ್ಳಿ ರವರು ನೀಡಿದ ದೂರು ಏನೆಂದರೆ ದಿನಾಂಕ: 13-04-2013 ರಂದು ಬೆಳಿಗ್ಗೆ 09-30 ಗಂಟೆಯಲ್ಲಿ, ಕೆರೆಕೋಡಿ ಹತ್ತಿರ ಸಯ್ಯದ್ ಅಮಿದ್ ಬಿನ್., ಸಯ್ಯದ್ ಶಫಿವುಲ್ಲಾ 38 ವರ್ಷ, ಕ್ಯಾತನಹಳ್ಳಿ ಗ್ರಾಮ ರವರು ಮದ್ಯಪಾನ ಮಾಡಿ ಕೆರೆಕೋಡಿ ಹತ್ತಿರ ಮೃತ ಪಟ್ಟಿದ್ದಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 13-04-13 ರಂದು ಪಿರ್ಯಾದಿ ಚರಿತ್ ಎಂ.1301, 10ನೇ ಕ್ರಾಸ್, 4ನೇಮೈನ್, ಎಚ್.ಎಸ್,ಆರ್ ಲೇ. ಔಟ್ ಬೆಂಗಳೂರು ರವರು ನೀಡಿದ ದೂರು ಏನೆಂದರೆ ಜಯಂತ್ ಲೇಟ್. ಈಶ್ವರಪ್ಪ 23 ವರ್ಷ, ಕೆ.ನಾರಾಯಣಪುರ ಕ್ರಾಸ್, ಕೊತ್ತನೂರು, ಬೆಂಗಳೂರು ರವರು ಅವರ ಸ್ನೇಹಿತರ ಜೊತೆ ಕೆರೆತಣ್ಣೂರು ಕೆರೆಯಲ್ಲಿ ಸ್ನಾನಮಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸತ್ತು ಹೋಗಿರುತ್ತಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4.ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ: 13-04-13 ರಂದು ಪಿರ್ಯಾದಿ ಲಿಂಗೇಗೌಡ, ದೊಡ್ಡಗರುಡ ಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸ್ವಾಮಿ, ದೊಡ್ಡಗರುಡ ಹಳ್ಳಿ ಗ್ರಾಮರವರು ದಿನಾಂಕ: 12-04-2013 ರಂದು ಮರ ಕಡಿಯುವಾಗ ಅಕಸ್ಮಿಕವಾಗಿ ಬಿದ್ದು ಮ್ವತ ಪಟ್ಟಿರುತ್ತಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 179/13 ಕಲಂ. 379 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ವನವಂಗ್ಲೈನಾ ಬಿನ್. ಲಾಲ್ನಾನ್ಫೆಲಾ ರಾಲ್ಟೆ, ವಾಸ ಕೇರಾಫ್ ಸಿದ್ದಪ್ಪ, ರಾಘವೇಂದ್ರ ವೈನ್ಸ್ ಸ್ಟೋರ್ ಹಿಂಭಾಗ ರವರು ನೀಡಿದ ದೂರು ಏನೆಂದರೆ ದಿನಾಂಕ: 12-04-2013 ರಂದು ರಾಘವೇಂದ್ರ ವೈನ್ಸ್ ಸ್ಟೋರ್ ಹಿಂಭಾಗ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರ ರೂಮಿನಲ್ಲಿ ಗ್ಯಾಸ್ ಲೀಕೇಜ್ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಕೂಡಲೇ ಫಿರ್ಯಾದಿಯವರು ರೂಮಿನಲ್ಲಿದ್ದ ಡೆಲ್ ಕಂಪನಿಯ ಲ್ಯಾಪ್ಟಾಪ್ ಅನ್ನು ರೂಮಿನ ಹೊರಗಡೆಗೆ ತಂದಿಟ್ಟು ಪುನಃ ಬೆಂಕಿಯನ್ನು ಆರಿಸಲು ಒಳಗಡೆ ಹೋಗಿ ತಕ್ಷಣ ವಾಪಸ್ ಹೊರಗಡೆ ಬಂದು ನೋಡಲಾಗಿ ತಾನು ಇಟ್ಟಿದ್ದ ಲ್ಯಾಪ್ಟಾಪ್ ಅನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಆತ್ಮಹತ್ಯೆ ಪ್ರಚೋದನಾ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 183/13 ಕಲಂ. 306 ಕೂಡ 34 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಬಿ.ಕೆ.ದೀಪಿಕ ಕೋಂ. ನರಸೇಗೌಡ, 26 ವರ್ಷ, ವಾಸ 2ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಲಿಂಗರಾಜು, 2] ಪುಟ್ಟಸ್ವಾಮಿ,. 3] ಮಿಲಿಟರಿ ಶ್ರೀನಿವಾಸ ಹಾಗು 4] ಮಮತ ರವರುಗಳು ವಡವೆಗಳನ್ನು ಬಿಡಿಸಿಕೊಡುವಂತೆ ಕೇಳಿದ್ದು ಇನ್ನು ಬಿಡಿಸಿಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ಆರೋಪಿತರು ಈ ದಿವಸ ಒಟ್ಟಾಗಿ ಬಂದು ಫಿರ್ಯಾದಿಯವರ ತಂದೆ ತಾಯಿಗಳಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದು ಆಗ ಅಕ್ಕಪಕ್ಕದ ಮನೆಯವರು ಗಲಾಟೆಯನ್ನು ನೋಡುತ್ತಿದ್ದು ಇದರಿಂದ ತಮ್ಮ ತಂದೆ ತಾಯಿಗಳು ಮಾನಸಿಕವಾಗಿ ನೊಂದು ಅಳುತ್ತಿದ್ದು ಈ ಅವಮಾನವನ್ನು ಸಹಿಸಲಾರದೆ ಬೆಳಿಗ್ಗೆ 11-00 ಗಂಟೆಯಲ್ಲಿ ಫಿರ್ಯಾದಿಯವರ ತಾಯಿ ಸುಜಾತ ರವರು ಸೀರೆಯಿಂದ ಕತ್ತಿಗೆ ನೇಣು ಹಾಕಿಕೊಂಡಿದ್ದು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿದ್ದು ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಆದ್ದರಿಂದ ಆರೋಪಿಗಳ ವಿರುದ್ದ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 12-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ : 12-04-2013 ರಂದು ಒಟ್ಟು 42 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ, 3 ರಸ್ತೆ ಅಪಘಾತ ಪ್ರಕರಣಗಳು,  1 ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಪ್ರಕರಣ,  1 ಯು.ಡಿ.ಅರ್. ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.     


ವಾಹನ ಕಳವು ಪ್ರಕರಣ :

ಕೆ.ಆರ್. ಪೇಟೆ ಟೌನ್ ಠಾಣೆ ಪೊಲೀಸ್ ಠಾಣೆ ಮೊ.ನಂ. 379 ಐ.ಪಿ.ಸಿ.

ದಿನಾಂಕ: 12-04-2013 ರಂದು ಪಿರ್ಯಾದಿ ರಾಮಕೃಷ್ಣೇಗೌಡ ಕಾಳೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 04.04.13 ರಾತ್ರಿ 09-00 ಗಂಟೆಯಲ್ಲಿ ಬ್ಯಾಟೇಗೌಡ ಕಾಂಪ್ಲೆಕ್ಸ್ ಹೊಸಹೊಳಲು ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ರಾಮಕೃಷ್ಣೇಗೌಡ, ಕಾಳೇಗೌಡನಕೊಪ್ಪಲು ಗ್ರಾಮ ರವರು ಅವರ ಬಾಬ್ತು ಮೋಟಾರ್ ಸೈಕಲ್ ಕಳ್ಳತನವಾಗಿದ್ದು ಅದನ್ನು ಹುಡುಕಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 279-304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 12-04-2013 ರಂದು ಪಿರ್ಯಾದಿ ಅಭಿಷೇಕ್ ಹೆಚ್.ಜಿ. ಹೊಸಹೊಳಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶಿವರಾಜು, ಸಿಂಗನಹಳ್ಳಿ ಗ್ರಾಮ ರವರು ಅವರ ಮೋಟಾರ್ ಸೈಕಲ್ ನಲ್ಲಿ ಬಂದು ನಂಜಮ್ಮರವರಿಗೆ ಡಿಕ್ಕಿ ಮಾಡಿಸಿದ ಪರಿಣಾಮ ಅವರಿಗೆ ಪೆಟ್ಟಾಗಿರುತ್ತೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಆರೋಪಿ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2.ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 12-04-2013 ರಂದು ಪಿರ್ಯಾದಿ ದೊಡ್ಡಹೊನ್ನಯ್ಯ ಎಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-04-2013 ರಂದು ಬಿ.ಜಿ.ನಗರದ ಪಕ್ಕ ಎನ್ಹೆಚ್-48 ರಸ್ತೆಯಲ್ಲಿ ಯಾವುದೊ ಅಪರಿಚಿತ ವಾಹನ ಅಪಘಾತ ಮಾಡಿ ಹೊರಟು ಹೋಗಿದ್ದು, ಪಿರ್ಯಾಧಿಯವರು ಗಾಯಾಳುವನ್ನು ಬೆಳ್ಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ಸದರಿ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತನಾದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 12-04-2013 ರಂದು ಪಿರ್ಯಾದಿ ಎ.ಬಿ.ಮಂಜೇಗೌಡ, 28ವರ್ಷ, ಅಳೀಸಂದ್ರ ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಆರೋಪಿ ಕೆಎಲ್-60-ಸಿ-5241ರ ಕಾರಿನ ಚಾಲಕ, ಹೆಸರು ವಿಳಾಸ ತಿಳಿದಿಲ್ಲ ರವರು ಕಾರನ್ನು ಅತಿವೇಗವಾಗಿ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯು ಟನರ್್  ತೆಗೆದುಕೊಳ್ಳುತ್ತಿದ್ದ ಬೈಕಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟಿ.ರಾಮೇಗೌಡ ಸ್ಥಳದಲ್ಲೇ ಸತ್ತು ಹೊಗಿದ್ದು ಕಾರ್ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 9,39,40,4, 49, ಬಿ& ಸಿ 51, ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಕೂಡ 379 ಐ.ಪಿ.ಸಿ. 

ದಿನಾಂಕ: 12-04-2013 ರಂದು ಪಿರ್ಯಾದಿ ನರೇಂದ್ರಕುಮಾರ್.ಕೆ. ಪಿ.ಎಸ್.ಐ. ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ರವಿ, ಮನೋಜ್ ಇಬ್ಬರೂ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ ರವರುಗಳು ಹುಲಿ ಚರ್ಮವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದರಿಂದ ವನ್ಯಜೀವಿ ಸಂರಕ್ಷಣಾ ಕಾಯಿದೆ ರೀತ್ಯ ಆರೋಪಿತರ ವಿರುದ್ದ ಸ್ವಯಂ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಯು.ಡಿ.ಆರ್. ಪ್ರಕರಣ :


ಬೆಸಗರಹಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.

ದಿನಾಂಕ: 12-04-2013 ರಂದು ಪಿರ್ಯಾದಿ ಪ್ರಮೀಳಾ 35 ವರ್ಷ, ಎನ್ ಕೋಡಿಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 09-04-2013 ರಂದು ಎನ್, ಕೋಡಿಹಳ್ಳಿ ಗ್ರಾಮದಲ್ಲಿ ಶಿವಕುಮಾರ @ ರಾಜು 44 ವರ್ಷ ರವರು ಯಾವುದೋ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷ ಸೇವನೆ ಮಾಡಿ ಚಿಕಿತ್ಸೆ ಸಂಬಂಧ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮನುಷ್ಯ ಕಾಣೆಯಾದ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 12-04-2013 ರಂದು ಪಿರ್ಯಾದಿ ಶಿವಣ್ಣಗೌಡ,  40 ವರ್ಷ, ಚಿಕ್ಕವೀರನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಸಣ್ಣಪ್ಪ, 70 ವರ್ಷ, ಚಿಕ್ಕವೀರನಕೊಪ್ಪಲು ಗ್ರಾಮ ರವರು ಕಾಣೆಯಾಗಿರುವ ನಮ್ನ ತಂದೆಯವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DETECTION OF TIGER SKIN - PANDAVAPURA PS Cr.No.150/13


 ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
      ಮಂಡ್ಯ ಜಿಲ್ಲೆ, ದಿನಾಂಕಃ  12-04-2013.

            -ಃ ಪತ್ರಿಕಾ ಪ್ರಕಟಣೆ ಃ-



      ದಿನಾಂಕ:11-04-2013 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಾಂಡವಪುರ ತಾಲ್ಲೋಕು, ಶಿಕಾರಿಪುರದ ಕೆಲವು ವ್ಯಕ್ತಿಗಳು ಪಾಂಡವಪುರದ ಬೇವಿನಕುಪ್ಪೆ ಸಮೀಪ ಅಕ್ರಮವಾಗಿ ಹುಲಿ ಚರ್ಮವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಬಾತ್ಮಿದಾರರಿಂದ ಖಚಿತ ಮಾಹಿತಿ ದೊರೆತ್ತಿದ್ದು, ಕಲಾಕೃಷ್ಣಸ್ವಾಮಿ, ಡಿ.ಎಸ್.ಪಿ, ಶ್ರೀರಂಗಪಟ್ಟಣರವರ ಮಾರ್ಗದರ್ಶನದಲ್ಲಿ ಪಾಂಡವಪುರ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ರವರು ದಿನಾಂಕ:11-04-2013 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಬೇವಿನಕುಪ್ಪೆ ಸಮೀಪ ಹೋಗಿ ನೋಡಲಾಗಿ ಅವರಲ್ಲಿನ ಒಬ್ಬರ ಕೈಯಲ್ಲಿ ಒಂದು ಪ್ಲಾಸ್ಟಿಕ್ಟ್ ಚೀಲ ಇದ್ದು, ಮತ್ತೊಬ್ಬ ನಮ್ಮ ಸಿಬ್ಬಂದಿಯೊಂದಿಗೆ ವ್ಯಾಪಾರ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಸದರಿ ಪಿ.ಎಸ್.ಐರವರು ಸುತ್ತುವರಿದು ಅವರುಗಳನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ತಿಳಿಯಲಾಗಿ ಪ್ಲಾಸ್ಟಿಕ್ ಚೀಲದಲ್ಲಿ  ಹುಲಿ ಚರ್ಮವನ್ನು ಮತ್ತು ಹುಲಿಯ ಉಗುರುಗಳನ್ನು ಹಾಕಿ ಹಿಡಿದುಕೊಂಡಿದ್ದವನ ಹೆಸರು ಮನೋಜ್ ಕುಮಾರ್ ಬಿನ್ ಕಣ್ಣಮಣಿ, 38 ವರ್ಷ, ಹಕ್ಕಿ-ಪಿಕ್ಕಿ ಜನಾಂಗ, ವ್ಯಾಪಾರ, ವಾಸ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ, ಪಾಂಡವಪುರ ತಾಲ್ಲೋಕು, ಎಂದು ಹಾಗೂ ಹುಲಿ ಚರ್ಮದ ಬಗ್ಗೆ ವ್ಯಾಪಾರ ಮಾಡುತ್ತಿದ್ದವರು ರವಿ ಬಿನ್ ರಿಪೀಟ್, 51 ವರ್ಷ, ಹಕ್ಕಿ-ಪಿಕ್ಕಿ ಜನಾಂಗ, ವ್ಯಾಪಾರ, ವಾಸ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ, ಪಾಂಡವಪುರ ತಾಲ್ಲೋಕು, ಎಂದು ತಿಳಿಸಿದ್ದು, ಅವರ ವಶದಲ್ಲಿದ್ದ ಹುಲಿ ಚರ್ಮದ ಬಗ್ಗೆ ವಿಚಾರ ಮಾಡಿ ವಿವರವಾದ ಮಹಜರ್ ಕ್ರಮ ಜರುಗಿಸಿ, ವಶಕ್ಕೆ ತೆಗದುಕೊಂಡಿರುತ್ತೆ. ಸದರಿ ಆಸಾಮಿಗಳು ಹುಲಿ ಚರ್ಮವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದರಿಂದ ವನ್ಯಜೀವಿ ಸಂರಕ್ಷಣಾ ಕಾಯಿದೆ ರೀತ್ಯ ಆರೋಪಿತರ ವಿರುದ್ದ ಸ್ವಯಂ ವರದಿಯನ್ನು ತಯಾರಿಸಿ ಪಾಂಡವಪುರ ಠಾಣಾ ಮೊ. ನಂ. 150/2013. ಕಲಂ: 9, 39, 40, 44, 49, ಬಿ & ಸಿ 51, ವನ್ಯ ಪ್ರಾಣೆಗಳ ಸಂರಕ್ಷಣಾ ಕಾಯಿದೆ ಕೂಡ 379 ಐ.ಪಿ.ಸಿ. ರೀತ್ಯ ಕೇಸು ನೊಂದಾಯಿಸಿಕೊಂಡು ತನಿಖೆ ಕೈಗೊಂಡು ಸದರಿ ಆಸಾಮಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.   

       ಸದರಿ ಪ್ರಕರಣವನ್ನು ಪತ್ತೆ ಮಾಡಿದ ಪಾಂಡವಪುರ ಪೊಲೀಸ್ ಠಾಣೆಯ ಪಿಎಸ್ಐ  ಶ್ರೀ.ಕೆ.ನರೇಂದ್ರಕುಮಾರ್ ಮತ್ತು ಸಿಬ್ಬಂದಿಯವರುಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶ್ರೀ.ಭೂಷಣ್ ಜಿ. ಬೊರಸೆ, ಐ.ಪಿ.ಎಸ್. ರವರು ಪ್ರಶಂಸಿರುತ್ತಾರೆ.

DAILY CRIME REPORT DATED : 11-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-04-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಸಂಶಯಾಸ್ಪದ ಯು.ಡಿ.ಆರ್. ಪ್ರಕರಣ,  1 ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 28 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304 [ಎ] ಐಪಿಸಿ ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 11-04-2013 ರಂದು ಬೆಳಗಿನ ಜಾವ 04-15 ಗಂಟೆಯಲ್ಲಿ ಬಿ.ಜಿ.ನಗರದ ಮಾನಸ ಹೋಟೆಲ್ ನ, ಪಕ್ಕ ಎನ್ಹೆಚ್-48 ರಸ್ತೆಯಲ್ಲಿ ಯಾವುದೊ ಅಪರಿಚಿತ ವಾಹನ ಒಬ್ಬ ಅಪರಿಚಿತ ಗಂಡಸಿಗೆ ಅಪಘಾತ ಮಾಡಿ ಹೊರಟು ಹೋಗಿದ್ದು, ಅಪರಿಚಿತ ವ್ಯಕ್ತಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವುದಾಗಿ ಮಾಹಿತಿ ಪಡೆದ 108 ವಾಹನದವರು, ಸದರಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಕೋರಿಕೊಂಡ ಮೇರೆಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪಿರ್ಯಾಧಿಯವರು ಗಾಯಾಳುವನ್ನು ಬೆಳ್ಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ಸದರಿ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಇದೇ ದಿನ ಅಂದರೆ ದಿನಾಂಕಃ 11-04-2013 ರಂದು ಬೆಳಿಗ್ಗೆ 11-00ಗಂಟೆಯಲ್ಲಿ ಮೃತನಾದ ಮೇರೆಗೆ, ಮೃತನ ಹೆಸರು ವಿಳಾಸ ಹಾಗೂ  ವಾರಸುದಾರರ ಪತ್ತೆಮಾಡುವ ಸಲುವಾಗಿ ಸದರಿ ಶವವನ್ನು ಆಸ್ಪತ್ರೆಯಲ್ಲಿ ಇಟ್ಟಿದ್ದು ನಂತರ ಪಿರ್ಯಾದಿ ದೊಡ್ಡಹೊನ್ನಯ್ಯ ಎಎಸ್ಐ, ಬೆಳ್ಳೂರು ಪೊಲೀಸ್ ಠಾಣೆರವರು ವಾಪಾಸ್ ಪೊಲೀಸ್ ಠಾಣೆಗೆ ಬಂದು ಮಧ್ಯಾಹ್ನ 12-00 ಗಂಟೆಯಲ್ಲಿ ಸ್ವಯಂ ಪ್ರಕರಣ ದಾಖಲು ಮಾಡಿರುತ್ತಾರೆ.


ಸಂಶಯಾಸ್ಪದ ಯು.ಡಿ.ಆರ್. ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 169/13 ಕಲಂ. 143, 176, 201  ಐಪಿಸಿ & 174[ಸಿ] ಸಿಆರ್ಪಿಸಿ ಕೂಡ 149 ಐ.ಪಿ.ಸಿ.

ದಿನಾಂಕ: 11-04-2013 ರಂದು ಪಿರ್ಯಾದಿ ಎಂ.ಸಿ.ಮಂಜುನಾಥ, ಸಿಪಿಸಿ 573, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ದಿನಾಂಕ:11-04-2013 ಸುಂದರೇಶ್ ಮನೆಯಲ್ಲಿ 1ನೇ ಕ್ರಾಸ್, ಹೊಸಹಳ್ಳಿ, ಆರೋಪಿಗಳಾದ ಸುಂದರೇಶ, ವಸಂತ, ತಿಬ್ಬಣ್ಣ, ರೇವಣ್ಣ, ಮೂಗೂರ, ಪುಟ್ಟತಾಯಮ್ಮ ಹಾಗು ಬೋರೆಗೌಡ, ಹೊಸಹಳ್ಳಿ ಇತರರುಗಳು ಉದ್ದೇಶಪೂರ್ವಕವಾಗಿ ಎಲ್ಲರು ಸೇರಿಕೊಂಡು ಸತ್ತದೇಹವನ್ನು ಮನೆಯಿಂದ ತೆಗೆದುಕೊಂಡು ಹೋಗಿ ಗುಪ್ತ ರೀತಿಯಿಂದ ಬೆಂಕಿಯಿಂದ ಶವವನ್ನು ಸುಟ್ಟುಹಾಕಿರುತ್ತಾರೆ. ಆದ್ದರಿಂದ ಆರೋಪಿತರುಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಇತ್ಯಾದಿಯಾಗಿ ನೀಡಿದ ದೂರು.


ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 504,323, 324, 279, 427, ಕೂಡ 34, ಐ.ಪಿ.ಸಿ. ಹಾಗೂ ಕಲಂ, 3 ಕ್ಲಾಸ್ (1) & (10) ಎಸ್.ಸಿ/ಎಸ್.ಟಿ ಕಾಯಿದೆ. 1989.

      ದಿನಾಂಕ: 11-04-2013 ರಂದು ಪಿರ್ಯಾದಿ ಜಿ.ಜಿ.ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಲೋಕೇಶ. ಪುಟ್ಟಸ್ವಾಮಿ ದಿನೇಶ ಹಾಗು ಲಿಂಗರಾಜು ಹೂತಗೆರೆ ಗ್ರಾಮ ರವರುಗಳು ನಮ್ಮ ಕಾರಿಗೆ ಡಿಕ್ಕಿ ಮಾಡಿದ್ದು, ಸದರಿ ಕಾರನ್ನು ನಿಲ್ಲಿಸಿ ಕೇಳಲು ಓದಾಗ ಅವಾಚ್ಯ ಶಬ್ದದಿಂದ ಬೈಯುತ್ತಿದ್ದು, ನಾನು ಏಕೆ ಈ ರೀತಿ ಬೈಯುತ್ತಿದ್ದೀಯ ಎಂದು ಕೇಳಿದ್ದಕ್ಕೆ ಏನೋ ಬೋಳಿ ಮಗನೆ ನಾನು ಅದೇ ರೀತಿ ಬೈಯುವುದು ಅಂತ ಹೇಳಿ ಪುಟ್ಟಸ್ವಾಮಿ ನನ್ನ ಕತ್ತಿನ ಪಟ್ಟಿಯನ್ನು ಹಿಡಿದು. ಕೆಡವಿಕೊಂಡು ಕೈಯಿಂದ ಕಾಲಿನಿಂದ ಒದ್ದನು ಈತನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ : 

ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 11-04-2013 ರಂದು ಪಿರ್ಯಾದಿ ಚೇತನಾ ಕೋಂ ಸುಬ್ರಮಣ್ಯ ಭಟ್, 35 ವರ್ಷ, ರಾಮಕೃಷ್ಣನಗರ, ಮೈಸೂರು ಸಿಟಿ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ:11-04-2013 ರಂದು ಮಹದೇವಪುರ ಗ್ರಾಮದ ಬಳಿಯ ಕಾವೇರಿ ನದಿಯಲ್ಲಿ ಭಾಗ್ಯರವರು ಕಾವೇರಿ ನದಿಯ ಬಳಿ ಫೋಟೋ ತೆಗೆಸುತ್ತಿದ್ದಾಗ ಆಕಸ್ಮಿಕವಾಗಿ ಭಾಗ್ಯರವರು ಕಾವೇರಿ ನದಿಗೆ ಬಿದ್ದುಹೋದಾಗ ರವಿ ರಕ್ಷಿಸಲು ಹೋಗಿ ಕಾವೇರಿ ನದಿಗೆ ಬಿದ್ದು ಹೋಗಿದ್ದು, ಭಾಗ್ಯ ಮತ್ತು ರವಿ ಈಜು ಬಾರದೇ ನೀರಿನಲ್ಲಿ ಮುಳುಗಿ ಸತ್ತು ಹೋಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 10-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-04-2013 ರಂದು ಒಟ್ಟು 60 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  3 ಕಳವು ಪ್ರಕರಣಗಳು ಹಾಗು 54 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 94/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 10-04-2013 ರಂದು ಪಿರ್ಯಾದಿ ವೆಂಕಟೇಶ್ ಬಿನ್ ವೆಂಕಟಶೆಟ್ಟಿ, ಬೀಚನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ತಾಯಿ ಚೆಲುವಮ್ಮ ಕೋಂ. ಲೇಟ್. ವೆಂಕಟಶೆಟ್ಟಿ, 80ವರ್ಷ, 5 ಅಡಿ 2 ಇಂಚು ಇತ್ತರ, ರವರು 07-04-2013 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಅಂಚೆಭೂವನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 158/13 ಕಲಂ. ಹುಡುಗಿಯರು ಕಾಣೆಯಾಗಿದ್ದಾರೆ.

ದಿನಾಂಕ:10-04-2013ರಂದು ಪಿರ್ಯಾದಿ ಪುಟ್ಟೇಗೌಡ ಬಿನ್. ಲೇಟ್. ಬೆಟ್ಟೇಗೌಡ, ಹಾಲಹಳ್ಳಿ, 3ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಅವರ ಮಗಳಾದ 1]ಶ್ವೇತಾ ಬಿನ್. ಬೆಟ್ಟೇಗೌಡ, 18 ವರ್ಷ, ಹಾಲಹಳ್ಳಿ , 3 ನೇ ಕ್ರಾಸ್, ಹಾಗು ಆಕೆಯ ಚಿಕ್ಕಮ್ಮಳ ಮಗಳಾದ 2] ಸುಷ್ಮಾ ಬಿನ್. ಲೇಟ್. ವೆಂಕಟೇಶ್, 18 ವರ್ಷ, ಕಾರಸವಾಡಿ  ಗ್ರಾಮ, ಮಂಡ್ಯ ತಾ. ಇವರಿಬ್ಬರು  ದಿನಾಂಕಃ-06-04-2013 ರಂದು ತನ್ನ ಚಿಕ್ಕಮ್ಮನ ಮನೆಯಾದ ಕಾರವಾಡಿ ಗ್ರಾಮಕ್ಕೆ  ಹೋಗಿದ್ದು,  ನನ್ನ ಮಗಳು ಮತ್ತು ಆಕೆಯ ಚಿಕ್ಕಮ್ಮಳ ಮಗಳಾದ ಸುಷ್ಮಾ ಇಬ್ಬರು ಎಲ್ಲಿಗೂ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿಲ್ಲವೆಂದು ಪೋನ್ ಮೂಲಕ  ತಿಳಿಸಿದ ಮೇರೆಗೆ ನಾನು ಕಾರಸವಾಡಿ ಗ್ರಾಮಕ್ಕೆ  ಹೋಗಿ  ಈ ಬಗ್ಗೆ  ವಿಚಾರಿಸಿ ನನ್ನ ಮಗಳು ಮತ್ತು ಆಕೆಯ ಚಿಕ್ಕಮ್ಮನ ಮಗಳಾದ ಸುಷ್ಮಾ ಇಬ್ಬರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಅವಳ ಸ್ನೇಹಿತೆಯರ ಮನೆಯಲೆಲ್ಲಾ  ಮತ್ತು ನಮ್ಮ ನೆಂಟರ ಮನೆಗಳ ಕಡೆ ವಿಚಾರಿಸಲಾಗಿ ಗೊತ್ತಿಲ್ಲವೆಂದು ತಿಳಿಸಿದ್ದು ಕಾಣೆಯಾಗಿರುವ ನಮ್ಮ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 162/13 ಕಲಂ. 504-506-498(ಎ)-323 ಐ.ಪಿ.ಸಿ.

ದಿನಾಂಕ: 10-04-2013 ರಂದು ಪಿರ್ಯಾದಿ ಸರೋಜ ಕೋಂ. ಶಿವಣ್ಣ, ಕುದುರಗುಂಡಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಶಿವಣ್ಣ ಮನೆಗೆ ಬಂದು ವಿನಾಕಾರಣ ಜಗಳತೆಗೆದು ಪಿರ್ಯಾದಿಯವರ ತಲೆಯ ಜುಟ್ಟು ಹಿಡಿದು ಎಳೆದಾಡಿ ಕೆಳಕ್ಕೆ ಕೆಡವಿಕೊಂಡು ಕೈಯಿಂದ ಹೊಡೆದು ಗಲಾಟೆ ಮಾಡಿದ್ದಾರೆ, ಪಿರ್ಯಾದಿಯ ಗಂಡ ಈಗ್ಗೆ 4-5 ವರ್ಷಗಳಿಂದಲೂ ಹೀಗೆ ಪ್ರತಿ ದಿನ ಕುಡಿದು ಬಂದು ಜಗಳ ತೆಗೆದು ಹೊಡೆದು-ಬಡಿಯುವುದು ಮಾಡುತ್ತಾರೆ ಹಾಗು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮಾನಸಿಕವಾಗಿ ಹಾಗು ದೈಹಿಕವಾಗಿ ಹಿಂಸೆ ಕೊಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 163/13 ಕಲಂ. 379 ಐ.ಪಿ.ಸಿ.

ದಿನಾಂಕ: 10-04-2013 ರಂದು ಪಿರ್ಯಾದಿ ನಿಂಗಮ್ಮ ಕೋಂ. ಮಾಯಿಗಯ್ಯ, ನಗರಕೆರೆ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಮದ್ದೂರು  ಐ.ಬಿ. ವೃತ್ತದಲ್ಲಿ ಬಸ್ ನ್ನು ಇಳಿಯುವಾಗ ಪಿರ್ಯಾದಿಯವರ ಕತ್ತಿನಲ್ಲಿದ್ದ ಸುಮಾರು 36 ಗ್ರಾಂನ ಚಿನ್ನದ ಮಾಂಗಲ್ಯ ಸರವನ್ನು ಪಿರ್ಯಾದಿಯವರಿಗೆ ತಿಳಿಯದಂತೆ ಕಳ್ಳತನ ಮಾಡಿಕೊಂಡು  ಹೋಗಿರುವುದಾಗಿ ದೂರು ಇದರ ಅಂದಾಜು ಬೆಲೆ 1,00,000/-ರೂಗಳಾಗಬಹುದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 166/13 ಕಲಂ. 379 ಐ.ಪಿ.ಸಿ.

ದಿನಾಂಕ: 10-04-2013 ರಂದು ಪಿರ್ಯಾದಿ ಮಾಯಮ್ಮ ಕೋಂ. ಮುಳಕಟ್ಟೆ ಸಿದ್ದಯ್ಯ, 55 ವರ್ಷ, ಯತ್ತಗದಹಳ್ಳಿ ರಸ್ತೆ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 10-04-2013 ರಂದು ಪಿರ್ಯಾದಿಯವರು ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಜನರ ನೂಕು ನುಗ್ಗಲಿನಲ್ಲಿ ಬಸ್ಸನ್ನು ಹತ್ತಿ ಒಳಗಡೆ ಹೋಗಿ ಸೀಟಿನಲ್ಲಿ ಕುಳಿತುಕೊಂಡು ತನ್ನ ಕತ್ತನ್ನು ನೋಡಿಕೊಂಡಾಗ ತನ್ನ ಕತ್ತಿನಲ್ಲಿದ್ದ 27 ಗ್ರಾಂ ತೂಕದ ಒಂದು ಚಿನ್ನದ ತಾಳಿ ಮತ್ತು 4 ಚಿನ್ನದ ಗುಂಡುಗಳಿರುವ ಒಂದು ಚಿನ್ನದ ಮಾಂಗಲ್ಯ ಸರ ಇರಲಿಲ್ಲ. ಕೂಡಲೇ ಬಸ್ಸಿನಿಂದ ಕೆಳಗಡೆ ಇಳಿದು ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಸದರಿ ಚಿನ್ನದ ಮಾಂಗಲ್ಯ ಸರವನ್ನು ಯಾರೋ ಕಳ್ಳರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜನ ಸಂದಣಿಯಲ್ಲಿ ಬಸ್ಸನ್ನು ಹತ್ತುವಾಗ ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಚಿನ್ನದ ಮಾಂಗಲ್ಯ ಸರವು ಹಗ್ಗದ ಮಾದರಿಯ ಸರವಾಗಿದ್ದು ಇದರ ಬೆಲೆ 78,300-00 ರೂಪಾಯಿಗಳಾಗುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 88/13 ಕಲಂ. 379 ಐ.ಪಿ.ಸಿ.

ದಿನಾಂಕ: 10-04-2013 ರಂದು ಪಿರ್ಯಾದಿ ಎಂ, ಮಾದಯ್ಯ, ಕಿರಿಯ ಇಂಜಿನಿಯರ್, ಕೆ.ಆರ್. ಪೇಟೆ ಓ&ಎಂ 3 ಘಟಕ, ಕೆ.ಆರ್ ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ : 08-04-2013 ರ ರಾತ್ರಿ ವೇಳೆಯಲ್ಲಿ ಹಿರಿಕಳಲೆ ಗ್ರಾಮದ ಹತ್ತಿರ, ಕಸಬಾ ಹೋಬಳಿ,  ಕೆ.ಆರ್.ಪೇಟೆ ತಾಲ್ಲೋಕು ನಲ್ಲಿ ನೀರಾವರಿ ಪಂಪ್ಸೆಟ್ನ ಆರ್ಆರ್ ಸಂಖ್ಯೆ: K2MRGIP-568 ರ ಲೈನನ್ನು ಸುಮಾರು 3 ಕಂಬಗಳ ದೂರ, ಮೂರು ತಂತಿ ಅಂದರೆ ಅಂದಾಜು 400 ಮೀಟರ್ ನಷ್ಟು ವೈರನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡುಬಂದಿದೆ. ಇದರ ಬೆಲೆ ಸುಮಾರು 9200-00 ರೂ. ಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 09-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-04-2013 ರಂದು ಒಟ್ಟು 65 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 61 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 65/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 09-04-2013 ರಂದು ಪಿರ್ಯಾದಿ ರಂಗಯ್ಯ, 70ವರ್ಷ, ಕೆಂಪಯ್ಯನದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕು.ಪುಷ್ಪ, 21ವರ್ಷ, ಕೆಂಪಯ್ಯನದೊಡ್ಡಿ ಗ್ರಾಮರವರು ದಿನಾಂಕ: 08-04-2013 ರಂದು ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 93/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 09-04-2013 ರಂದು ಪಿರ್ಯಾದಿ ನಾಗರಾಜು, ದೊಡ್ಡೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಅಣ್ಣನ ಮಗನಾದ ಕುಮಾರ, 13 ವರ್ಷ, 8ನೇ ತರಗತಿ ವಿದ್ಯಾಥರ್ಿಯು ದಿನಾಂಕ: 08-04-2013 ಸಂಜೆ 6-00ಗಂಟೆಯಲ್ಲಿ, ಬೆಳ್ಳೂರು ಟೌನ್ನಿಂದ ಕಾಣೆಯಾಗಿರುತ್ತಾನೆ ಅವನನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 222/13 ಕಲಂ. 41 ಕ್ಲಾಸ್ (ಡಿ) 102 ಸಿ.ಆರ್.ಪಿ.ಸಿ ಮತ್ತು 379 ಐ.ಪಿ.ಸಿ.

ದಿನಾಂಕ: 09-04-2013 ರಂದು ಪಿರ್ಯಾದಿ ಸಿದ್ದರಾಜು, ಸಿ.ಪಿ.ಸಿ-01,  ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸಂಶಯಾಸ್ಪದ ವ್ಯಕ್ತಿಗಳಾದ  1]ಸಂತೋಷ. ಮತ್ತು 2]ಚನ್ನಪ್ಪ ಕಲ್ಲುಕುಣಿಕೆ ಗ್ರಾಮ ರವರುಗಳು ಆಸಾಮಿಗಳು ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಮೋಟಾರ್ ಸೈಕಲ್ ನಂಬರ್ ಇರುವುದಿಲ್ಲ. ಅಸಾಮಿಗಳ ಬಳಿ ಇರುವ ಮೋಟರ್ ಸೈಕಲನ್ನು  ಎಲ್ಲಿಯೋ ಕಳವು ಮಾಡಿಕೊಂಡು ಬಂದಿರುವ ಮೋಟರ್ ಸೈಕಲ್ ಆಗಿರುವ ಅನುಮಾನವಿರುವುದರಿಂದ ಪ್ರಕರಣ ದಾಖಲಿಸಿರುತ್ತೆ.


ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 09-04-2013 ರಂದು ಪಿರ್ಯಾದಿ ಮಂಜುನಾಥ. ಎಸ್, ಬೇಬಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ಕೆಂಚಪ್ಪ, ಬೇಬಿ ಗ್ರಾಮ, ಪಾಂಡವಪುರ ತಾ. ರವರು ಮೃತಪಟ್ಟಿರುತ್ತಾರೆ ಇದು ನೈಜ ಸಾವಲ್ಲ, ಕೊಲೆಯಾಗಿರಬಹುದೆಂದು ಶಂಕಿಸಿ ತಮಗೆ ಈ ಕಂಪ್ಲೇಟ್ ನೀಡುತ್ತಿದ್ದೇನೆ. ಮುಂದಿನ ತನಿಖೆಯನ್ನು ನಡೆಸಿ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 08-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-04-2013 ರಂದು ಒಟ್ಟು 45 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  2 ರಾಬರಿ ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ ವರದಕ್ಷಿಣೆ ಕಿರುಕುಳ ಪ್ರಕರಣ,  3 ಹಗಲು/ರಾತ್ರಿ ಕಳ್ಳತನ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    

ಯು.ಡಿ.ಆರ್. ಪ್ರಕರಣಗಳು :

1. ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಸಿದ್ದಮ್ಮ ಕೋಂ. ನಿಂಗಯ್ಯ, ದೊಡ್ಡಕೊತ್ತಗೆರೆ ಗ್ರಾಮ, ಬಸರಾಳು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಸೊಸೆ ಲಕ್ಷ್ಮಿ ಕೋಂ .ಲೇ|| ರಮೇಶ, 26ವರ್ಷ, ದೊಡ್ಡಕೊತ್ತಗೆರೆ ಗ್ರಾಮ, ಬಸರಾಳು ಹೋಬಳಿ ರವರು ಯಾವುದೋ ವಿಷ ಹಾಗೂ ಟ್ಯಾಬ್ಲೇಟ್ಸ್ ಸೇವಿಸಿದ್ದು ಲಕ್ಷ್ಮಿಗೆ ಚಿಕಿತ್ಸೆ ಕೊಡಿಸಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗಿರದೇ ಈ ದಿನ ಬೆಳಿಗ್ಗೆ 10:20 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ಲಕ್ಷ್ಮಿಯು ವಿಷ ಸೇವನೆ ಅಥವಾ ವಿಷ ಮಾತ್ರೆ ಸೇವನೆಯಿಂದ ಸಾವನ್ನಪ್ಪಿರುತ್ತಾರೆ ವಿನಹ ಬೇರೇನು ಇರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್.ನಂ. 10/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಸಣ್ಣಯ್ಯ ಬಿನ್. ಲೇ|| ತಾಣಯ್ಯ, ಶಿರಮಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-04-2013 ರಂದು ಶಿವಣ್ಣ, ಶಿರಮಹಳ್ಳಿ ಗ್ರಾಮರವರು ಹೊಟ್ಟೆನೋವು ಜಾಸ್ತಿಯಾದಾಗ ಕ್ರಿಮಿನಾಶಕ ಔಷದಿಯನ್ನು ತೆಗೆದುಕೊಂಡು ಹೊಟ್ಟೆಉರಿ ಎಂದು ಒದ್ದಾಡುತ್ತಿದ್ದಾಗ ಪಿರ್ಯಾದಿಯವರು ಇದನ್ನು ನೋಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ನಿನ್ನೆ ದಿನಾಂಕ: 07-04-2013 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 394 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಧನಂಜಯ, ಕೋಣಹಳ್ಳಿ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ದಿನಾಂಕ: 07-04-2013 ರಂದು ಕಲ್ಲಹಳ್ಳಿಯಿಂದ ಕೋಣನಹಳ್ಳಿ  ಗ್ರಾಮಕ್ಕೆ ಹೋಗುವ ಕೆರೆ ಏರಿ ರಸ್ತೆಯಲ್ಲಿ ರಾತ್ರಿ  10 ರಿಂದ 11  ಗಂಟೆ ಸಮಯದಲ್ಲಿ ಊರಿಗೆ ಬರುವಾಗ ಯಾರೋ ದುಷ್ಕರ್ಮಿಗಳು  ನಮ್ಮಣ್ಣನ ಬೈಕ್ ಅನ್ನು  ಅಡ್ಡಗಟ್ಟಿ ಅವನ ತಲೆಗೆ ದೊಣ್ಣೆಯಿಂದ ಹೊಡೆದು ರಕ್ತಗಾಯ ಮಾಡಿ ಮೋಟಾರ್ ಸೈಕಲ್ ಅನ್ನು  ಬೇಲಿಗೆ ತಳ್ಳಿ, ಕೋಳಿಯ ವ್ಯಾಪಾರದಿಂದ ಬಂದಿದ್ದ ನಗದು ಹಣ, ಆತನ ಬಳಿ ಇದ್ದ ಚಿನ್ನದ ಚೈನು ಒಂದು ಉಂಗುರವನ್ನು ದೋಚಿಕೊಂಡು ಹೋಗಿರುತ್ತಾರೆ ಇವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 154/13 ಕಲಂ. 384 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಕೆಂಪಮ್ಮ ಬಿನ್ ಬೊಮ್ಮಯ್ಯ, ಕಾಗೇಹಳ್ಳದದೊಡ್ಡಿ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-04-13 ರ ಮದ್ಯರಾತ್ರಿ 02-30 ಗಂಟೆ ಸಮಯದಲ್ಲಿ ಕಾಗೇಹಳ್ಳದದೊಡ್ಡಿ ಗ್ರಾಮದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಂದು ತನ್ನನ್ನು ಅಡ್ಡಗಟ್ಟಿ ಚಿನ್ನದ ಚೈನನ್ನು ಕೊಡು ಇಲ್ಲದಿದ್ದರೆ ಸಾಯಿಸಿಬಿಡುವುದಾಗಿ ಹೆದರಿಸಿದಾಗ ಪಿರ್ಯಾದಿರವರು ಹೆದರಿ ತಮ್ಮ ಕತ್ತಿನಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಚೈನನ್ನು ಬಿಚ್ಚಿಕೊಟ್ಟಿರುವುದಾಗಿ ಇದರ ಅಂದಾಜು ಬೆಲೆ 65000-00 ರುಗಳಾಗುತ್ತದೆ ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 152/13 ಕಲಂ. 498(ಎ), 323-506  ಐಪಿಸಿ 3 & 4 ಡಿ.ಪಿ. ಆಕ್ಟ್ ಕೂಡ 34 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಕವಿತಾ ಕೋಂ. ಶಿವಲಿಂಗ, 23 ವರ್ಷ, ಹಳೆಬೂದನೂರು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ   ಅವರ ಗಂಡ 1] ಶಿವಲಿಂಗ ಬಿನ್ ಮಂಚಯ್ಯ, ಇತರೆ 2] ಮಂಚಯ್ಯ, 3] ಶಾರದಮ್ಮ ಹಳೆಬೂದನೂರು ಗ್ರಾಮ, ಮಂಡ್ಯ ತಾ. ರವರುಗಳು ಪಿರ್ಯಾದಿಯವರಿಗೆ 200000/- ರೂ. ವರದಕ್ಷಿಣೆ ಹಣವನ್ನು ತಂದರೆ ಮನೆಗೆ ಬಾ ತರದೆ ಹೋದರೆ ಮನೆಗೆ ಬರಲೇ ಬೇಡವೆಂದು ನಿನ್ನನ್ನು ಈ ದಿನ ಸಾಯಿಸದೆ ಬಿಡುವುದಿಲ್ಲವೆಂದು ಕಿರುಚಾಡಿದರು, ಆರೋಪಿತರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


ಹಗಲು/ರಾತ್ರಿ ಕಳ್ಳತನ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 153/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 08-04-2013 ರಂದು ಪಿರ್ಯಾದಿ ಬಿ. ಮಹದೇವಯ್ಯ,  ಮುಖ್ಯ  ಶಿಕ್ಷಕರು, ಇಂಡುವಾಳು ಸರ್ಕಾರಿ  ಫ್ರೌಡಶಾಲೆ ರವರುಗಳು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-04-2013 ರಾತ್ರಿ ವೇಳೆಯಲ್ಲಿ ಇಂಡುವಾಳು ಗ್ರಾಮದ ಸಕರ್ಾರಿ ಫ್ರೌಡಶಾಲೆಯ ಬಾಗಿಲನ್ನು ಯಾರೋ ಕಳ್ಳರು, ಯಾವುದೋ ಆಯುಧದಿಂದ ಮೀಟಿ ಕಂಪ್ಯೂಟರ್ ಕೊಠಡಿಯಲ್ಲಿಟ್ಟಿದ್ದ 4 ಭಾರತ್ ಕಂಪನಿಯ ಸಿಲಿಂಡರ್ಗಳು ಮತ್ತು ಯುಪಿಎಸ್.ಗೆ ಆಳವಡಿಸಿದ್ದ 3 ಹಳೆಯ ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 115/13 ಕಲಂ. 454,457,380 ಐ.ಪಿ.ಸಿ.

       ದಿನಾಂಕ: 08-04-2013 ರಂದು ಪಿರ್ಯಾದಿ ಲಕ್ಷ್ಮಿ, ಮುಖ್ಯೊಪಾದ್ಯಾಯರು, ಸರ್ಕಾರಿ  ಪ್ರೌಢಶಾಲೆ, ದೊಡ್ಡಪಾಳ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06-04-2013    08-04-2013 ರಂದು ದೊಡ್ಡಪಾಳ್ಯ ಸರ್ಕಾರಿ  ಪ್ರೌಡಶಾಲೆಯ ಕಂಪ್ಯೂಟರ್ ಕೊಠಡಿಯ ಬೀಗವನ್ನು ಯಾರೋ ಕಳ್ಳರು ಯಾವುದೊ ಆಯುಧದಿಂದ ಮೀಟಿ ಒಳಗೆ ಪ್ರವೇಶಮಾಡಿ ಈ ಹದಿನಾರು ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಬೆಲೆ 24.300/ -ರೂ ಬಾಳುತ್ತೆ ಇವುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 457-380 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಎಂ.ಎನ್. .ಗಿರಿಜ, ಅಂಗನವಾಡಿ ಕಾರ್ಯಕರ್ತೆ, ಸಿ.ಬಂಗ್ಲೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 06-04-2013  ರಿಂದ ದಿನಾಂಕ: 07-04-2013 ರಲ್ಲಿ,  ರಾತ್ರಿ ಸಮಯದಲ್ಲಿ ಅಂಗನವಾಡಿ ಕೇಂದ್ರ,  ಸಿ.ಬಂಗ್ಲೆ ಯ ಬಾಗಿಲ ಬೀಗವನ್ನು ಯಾರೋ ಕಳ್ಳರು ಯಾವುದೊ ಆಯುಧದಿಂದ ಚಚ್ಚಿ, ಒಳಪ್ರವೇಶಿಸಿ ಅಂಗನವಾಡಿ ಕೇಂದ್ರದಲ್ಲಿದ್ದ ಸುಮಾರು 2,580/- ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹ ಕಳವು ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 52/13 ಕಲಂ. 379 ಐ.ಪಿ.ಸಿ.

ದಿನಾಂಕ: 08-04-2013 ರಂದು ಪಿರ್ಯಾದಿ ಚಂದ್ರಶೇಖರ್ ಎಸ್.ಡಿ ಬಿನ್. ಶಂಭೂನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 07-04-2013 ರ ರಾತ್ರಿ 9-00 ಹಾಗು ದಿನಾಂಕ ಃ 08-04-2013 ರ ಬೆಳಿಗ್ಗೆ 6-00 ಗಂಟೆಯ ನಡುವೆ, ಶಂಭೂನಹಳ್ಳಿ ಗ್ರಾಮದ ಪಿರ್ಯಾದಿಯ ಮನೆ ಮುಂದೆ ಮೋಟಾರ್ ಸೈಕಲ್ನ್ನು ನಿಲ್ಲಿಸಿ ದಿನಾಂಕ: 08-04-2013 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಲಾಗಿ ನನ್ನ ಮೋಟಾರ್ ಸೈಕಲ್ ಅನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಇದರ ಮೌಲ್ಯ 58.000/- ರೂ.ಗಳಾಗಿರುತ್ತದೆ ಇವುಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ : 

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 90/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 08-04-2013 ರಂದು ಪಿರ್ಯಾದಿ ತೀರ್ಥ ಬಿನ್. ಮಂಜೇಗೌಡ, 21ವರ್ಷ, ಮಂಚೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಜೇಗೌಡ, 30ವರ್ಷ ರವರು ದಿನಾಂಕಃ 06-04-2013 ಬೆಳಿಗ್ಗೆ 06-00 ಗಂಟೆಯಲ್ಲಿ ಮಂಚೆನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಇವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 07-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-04-2013 ರಂದು ಒಟ್ಟು 41 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ರಾಬರಿ ಪ್ರಕರಣಗಳು,  1 ರಾತ್ರಿ ಕಳ್ಳತನ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು, 4 ಯು.ಡಿ.ಆರ್. ಪ್ರಕರಣಗಳು,  1 ವರದಕ್ಷಿಣೆ ಸಾವಿನ ಪ್ರಕರಣ, 1 ಚುನಾವಣಾ ಅಕ್ರಮ ಪ್ರಕರಣ,  2 ವಂಚನೆ ಪ್ರಕರಣಗಳು ಹಾಗು 27 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   

ರಾಬರಿ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 126/13 ಕಲಂ. 392 ಐ.ಪಿ.ಸಿ.

ದಿನಾಂಕ: 07-04-20213 ರಂದು ಪಿರ್ಯಾದಿ ಮಹದೇವಮ್ಮ ಕೋಂ ಲಿಂಗಯ್ಯ, 60 ವರ್ಷ, ವಕ್ಕಲಿಗರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-04-2013 ರಂದು ಎಸ್ಬಿಎಂ ಬ್ಯಾಂಕ್ ರಸ್ತೆ ಪಕ್ಕದಲ್ಲಿ, ಬಂದೀಗೌಡ ಬಡಾವಣೆ ಬಳಿ ಪಿರ್ಯಾದಿಯವರು ನಿಂತಿದ್ದು, ಇದಕ್ಕಿದಂತೆ ಒಬ್ಬ 20-22 ರ ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಏಕಾಏಕಿ ತನ್ನ ಬಳಿಗೆ ಬಂದು ಕಣ್ಣಿಗೆ ಮತ್ತು ಮುಖಕ್ಕೆ ಕಾರದಪುಡಿ ಎರಚಿ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳುವ ಉದ್ದೇಶದಿಂದ ಕೈ ಹಾಕಿದಾಗ ತಾನು ತನ್ನ ಎರಡು ಕೈಗಳಿಂದ ಬಲವಾಗಿ ಮಾಂಗಲ್ಯ ಸರವನ್ನು ಹಿಡಿದುಕೊಂಡಾಗ ಆತ ನನ್ನನ್ನು ರಸ್ತೆಯಲ್ಲಿ ಕೆಳಕ್ಕೆ ಕೆಡವಿ ಬಿಟ್ಟವನೆ ಮುಂದೆ ಎರಡು ಮೂರು ಹೆಜ್ಜೆ ಮುಂದೆ ಹೋಗಿ ವಾಪಸ್ ಬಂದವನೆ ಮತ್ತೆ ಕುತ್ತಿಗೆಗೆ ಕೈ ಹಾಕಿ ಬಲವಂತವಾಗಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ರೈಲ್ವೆ ಹಳಿ ಕಡೆಗಾದಂತೆ ಹೊರಟು ಹೋಗಿದ್ದು ಸದರಿ ಮಾಂಗಲ್ಯ ಸರವು 50 ಗ್ರಾಂ ತೂಕವಿದ್ದು ಸುಮಾರು 1,50,000/-ರೂಪಾಯಿ ಬೆಲೆ ಬಾಳುತ್ತದೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 143-147-504-323-324-354-307-392 ಕೂಡ 149 ಐ.ಪಿ.ಸಿ.

ದಿನಾಂಕ: 07-04-2013 ರಂದು ಪಿರ್ಯಾದಿ ಇಂದ್ರಮ್ಮ ಕೋಂ. ರಾಜೇಗೌಡ, 3ನೇ ಕ್ರಾಸ್, ಹಲಸೂರು, ಬೆಂಗಳೂರು ರವರು ನೀಡಿದ ದೂರು ಏನೆಂದರೆ ಆರೋಪಿ ದೇವರಾಜು ಬಿನ್. ಶಿವೇಗೌಡ ಮತ್ತು ಇತರೆ 10 ಜನ ಎಲ್ಲರೂ ಚಿಕ್ಕಹೊಸಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರುಗಳು ಈ ಜಮೀನು ನಮ್ಮದು ಎಂದು ಗಲಾಟೆ ತಗೆದು ಏಕೆ ಉಳುಮೆ ಮಾಡಲು ಬಂದಿದ್ದೀರಿ ಎಂದು ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾದಿ ಮತ್ತು ಪಿರ್ಯಾದಿ ಮಗಳು ಮಂಜುಳ ಪಿರ್ಯಾದಿ ಗಂಡ ರಾಜೇಗೌಡ ರವರುಗಳಿಗೆ ಕೈಯಿಂದ ಮತ್ತು ದೊಣ್ಣೆಯಿಂದ ಮಾರಾಣಾಂತಿಕ ಹೆಲ್ಲೆ ಮಾಡಿ ಪಿಯರ್ಾದಿಯನ್ನು ಎಳೆದಾಡಿ ಪಿರ್ಯಾದಿ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡಿರುತ್ತಾರೆ ನಮಗೆ ಮಾರಣಾಂತಿಕ ಹಲ್ಲೆ ಮಾಡಿರುವವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 104/13 ಕಲಂ. 143-147-504-323-324-354-307-392 ಕೂಡ 149 ಐ.ಪಿ.ಸಿ.

ದಿನಾಂಕ: 07-04-2013 ರಂದು ಪಿರ್ಯಾದಿ ದೇವೇಗೌಡ ಬಿನ್. ಕೆಂಪೇಗೌಡ, ಚಿಕ್ಕಹೊಸಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ ರಾಜೇಗೌಡ   ಬಿನ್. ದಾಸೇಗೌಡ, ಚಂದ್ರೇಗೌಡ ಮತ್ತು ಇತರೆ 10 ಜನ, ಚಿಕ್ಕಹೊಸಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರುಗಳು ಪಿರ್ಯಾದಿಯವರ ಅಕ್ಕ ಅಕ್ಕ ಶಾಂತಮ್ಮಳ ಸೀರೆಯನ್ನು ಹಿಡಿದುಕೊಂಡು ಎಳೆದಾಡಿ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಕಾಲಿನಿಂದ, ಕೈಯಿಂದ ಶಾಂತಮ್ಮಳಿಗೆ ಒದ್ದು ಮರಾಣಾಂತಿಕ ನೋವುಂಟು ಮಾಡಿದ್ದಾರೆ. ನಾಗೇಗೌಡ, ಶಶಿಕುಮಾರ್ ರತ್ನಮ್ಮನನ್ನು ಕೆಳಗೆ ಕೆಡವಿಕೊಂಡು ಕಾಲಿನಿಂದ ನಾಗೇಗೌಡ ಮರ್ಮಾಂಗಕ್ಕೆ ಒದ್ದು ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಿರುತ್ತಾರೆ. ದೇವರಾಜು, ಪುನೀತ ಕೈಯಲ್ಲಿ ತಂದಿದ್ದ ಕಬ್ಬಿಣದ ರಾಡಿನಿಂದ ಯೋಗೇಶ, ದೇವರಾಜು, ಪ್ರಸನ್ನ ಹಾಗೂ ಸತೀಶನಿಗೆ ಓಡಾಡಿಸಿಕೊಂಡು ಕಬ್ಬಿಣದ ರಾಡಿನಿಂದ ಸಾಯಿಸಲು ಪ್ರಯತ್ನಿಸಿದರು ಗಲಾಟೆ ಬಿಡಿಸಲು ಹೋದ ನನಗೂ ಹಲ್ಲೆ ಮಾಡಿರುತ್ತಾರೆ ನಂತರ ಇವತ್ತಲ್ಲ ನಾಳೆ ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹೆದರಿಸಿರುತ್ತಾರೆ ಸದರಿ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾತ್ರಿ ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 07-04-20213 ರಂದು ಪಿರ್ಯಾದಿ ಬಿ.ಟಿ.ಪ್ರಸನ್ನ ಬಿನ್. ಬಿ.ಎನ್.ತಿಮ್ಮೇಗೌಡ, 41 ವರ್ಷ, ವಕ್ಕಲಿಗರು, ಕಂಟ್ರಾಕ್ಟರ್ ಕೆಲಸ, ವಾಸ ಮನೆ ನಂ. ಕೆಟಿ 212, 1ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 06-04-2013 ರ ರಾತ್ರಿವೇಳೆಯಲ್ಲಿ ಅವರ ಮನೆ ನಂ. ಕೆಟಿ 212, 1ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯದಲ್ಲಿ ಅವರ  ಮನೆಯ ಬೀರುವಿನ ಬಾಗಿಲನ್ನು ಜಖಂಗೊಳಿಸಿ ತೆಗೆದು ಅದರಲ್ಲಿ ತನ್ನ ಪತ್ನಿ ಇಟ್ಟಿದ್ದ ಸುಮಾರು 60 ಗ್ರಾಂ ಚಿನ್ನದ ಆಭರಣಗಳನ್ನು ಮತ್ತು ನಗದು ಹಣ 4,000-00 ರೂ.ಗಳನ್ನು ಕಳವು ಮಾಡಿಕೊಂಡು ಷೋಕೇಸ್ ನಲ್ಲಿಟ್ಟಿದ್ದ ಮೇಲ್ಕಂಡ ತಮ್ಮ ಷಡಕನ ಕಾರಿನ ಕೀಯನ್ನು ತೆಗೆದುಕೊಂಡು ಸದರಿ ಕಾರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 4,71,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 50/13 ಕಲಂ. ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 07-04-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ಮಜ್ಜಯ್ಯ, ಉಪ್ಪರಕನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕಃ 06-04-2013 ರಂದು ಮಧ್ಯಾಹ್ನ 02-00 ಗಂಟೆ ವೇಳೆಯಲ್ಲಿ ಪಿರ್ಯಾದಿಯವ ಮಗಳು ಯು.ಪಿ. ಸುನಿತಾರವರ ಮನೆಯಿಂದ ಮೊಬೈಲ್ ಪೋನ್ನಲ್ಲಿ ಮಾತನಾಡಿಕೊಂಡು ಹೊರಕ್ಕೆ ಹೋದವರು ವಾಪಸ್ಸು ಮನೆಗೆ ಬಾರದೆ ಎಲ್ಲಿಯೋ ಕಾಣೆಯಾಗಿರುತ್ತಾಳೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 147/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ. 

ದಿನಾಂಕ: 07-04-2013 ರಂದು ಪಿರ್ಯಾದಿ ಕುಮಾರ್ ದಾಸ ಬಿನ್. ಲೇಟ್. ತಾತಾಚಾರ್, ಇಂಡುವಾಳು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗಳು ಕೆ. ಶಾರದ ಕೋಂ. ಲಕ್ಷ್ಮಣಚಾರ್, 23 ವರ್ಷ ರವರು ದಿಃ-07-04-2013 ರಂದು ಬೆಳಿಗ್ಗೆ 05-30 ಗಂಟೆ ಸಮಯದಲ್ಲಿ ಮನೆಯಿಂದ ಎದ್ದು ಹೂರಟು ಹೋಗಿದ್ದು ನಾವು ನಮ್ಮ ಮಗಳನ್ನು ಅಕ್ಕಪಕ್ಕದ ಗ್ರಾಮಗಳಲ್ಲಿ ಆಕೆಯ ಗಂಡನ ಮನೆಯ ಕಡೆ ಹುಡುಕಿ ಪತ್ತೆಯಾಗದ ಕಾರಣ  ನಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ಕೊಟ್ಟ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣಗಳು :

1. ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 07-04-2013 ರಂದು ಪಿರ್ಯಾದಿ ಶಂಕರೇಗೌಡ ಬಿನ್. ಸೂಗೇಗೌಡ, 51ವರ್ಷ, ಒಕ್ಕಲಿಗರು, ವ್ಯವಸಾಯ, ಮುತ್ತೇಗೆರೆ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಮಾಲಿಂಗೇಗೌಡ ಬಿನ್. ರಾಮೇಗೌಡ, 42 ವರ್ಷ ರವರಿಗೆ ಹೊಟ್ಟೆ ನೋವು ತಾಳಲಾರದೇ ವಿಷ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮಂಡ್ಯ ಜಿಲ್ಲಾ ಆಸ್ವತ್ರೆಯಲ್ಲಿ ದಿನಾಂಕಃ- 07-04-2013 ರಂದು ಬೆಳಿಗ್ಗೆ 04:00  ಗಂಟೆಯಲ್ಲಿ  ಮೃತಪಟ್ಟಿರುತ್ತಾರೆ. ಶವವು ಮಂಡ್ಯ ಜಿಲ್ಲಾ ಆಸ್ವತ್ರೆಯ ಶವಗಾರದಲ್ಲಿ ಇರುತ್ತೆ. ಸಾವಿನ ಬಗ್ಗೆ ಬೇರೆ ಯಾವುದೇ ಅನುಮಾನ ಇರುವುದಿಲ್ಲ. ಆದರು ಸಾವಿನ ನಿಜವಾದ ಕಾರಣ ತಿಳಿಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 07-04-2013 ರಂದು ಪಿರ್ಯಾದಿ ಕೆ.ಎಂ.ರಾಜಣ್ಣ ಬಿನ್. ಮರಿಯಪ್ಪ, 45ವರ್ಷ, ಕುರುಬ ಜನಾಂಗ, ವ್ಯವಸಾಯ, ಕೊಡಗಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಚಿಕ್ಕತಾಯಮ್ಮ ಕೋಂ ಲೇಟ್ ಮರಿಯಪ್ಪ, 58ವರ್ಷ ಎಂಬುವವರಿಗೆ ಯಾವುದೋ ವಿಷಕಾರಿ ಹಾವುಕಚ್ಚಿ ಮೃತಪಟ್ಟಿರುತ್ತಾರೆ. ಆವರ ಸಾವಿನ ನಿಜವಾದ ಕಾರಣ ತಿಳಿಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಾನೂನು ರೀತ್ಯಾ ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ಲಿಖಿತ ದೂರಾಗಿರುತ್ತೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.  


3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 07-04-2013 ರಂದು ಪಿರ್ಯಾದಿ ಅತೀಕ್ ಬಿನ್. ಅಲೀಂ ಪಿರಾನ್ , 25 ವರ್ಷ, ಮುಸ್ಲಿಂ ಜನಾಂಗ, ಟಿ,ವಿ. ಮೆಕಾನಿಕ್ ವಾಸ: ನಂ, 476, 11 ನೇ ಕ್ರಾಸ್ ಸ್ವರ್ಣ ಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-04-2013 ರಂದು ಬೆಳಿಗ್ಗೆ ಸುಮಾರು 11 ಗಂಟೆಯ ಹಿಂದಿನ ಸಮಯದಲ್ಲಿ  ನಂ. 31 ನಗರಸಭೆ ಮಳಿಗೆಯ ಬಳಿ ಒಬ್ಬ ಅಪರಿಚಿತ ಗಂಡು ಶವ ಸುಮಾರು 50 ವರ್ಷ, ಹೆಸರು ವಿಳಾಸ ತಿಳಿಯಬೇಕಾಗಿದೆ ಬಿದಿದ್ದು ಈತನು ಯಾವುದೋ ಸ್ವಾಭಾವಿಕ ಖಾಯಿಲೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಮೃತ ಪಟ್ಟಂತೆ ಕಂಡು ಬಂದಿದ್ದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


4. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 07-04-20213 ರಂದು ಪಿರ್ಯಾದಿ ಬಸವರಾಜ್ ಎಂ. ಬಿನ್. ಲೇಟ್. ಹುಚ್ಚಪ್ಪ, 40ವರ್ಷ, ಬಸವನಕುಂಟೆ ವಠಾರ, ಸಿರುಗುಪ್ಪೆ ರಸ್ತೆ, ಬಳ್ಳಾರಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 06-04-2013 ರಾತ್ರಿ 10-20ಗಂಟೆಯಲ್ಲಿ ಆದಿಚುಂಚನಗಿರಿ ವಿದ್ಯಾರ್ಥಿ ನಿಲಯದ ಎ.ಸಿ. ಗಿರಿ ಬೆಳ್ಳೂರುನಲ್ಲಿ ಗಿರಿಧರ್, ಆದಿಚುಂಚನಗಿರಿಯ 10ನೇ ತರಗತಿ ವಿದ್ಯಾರ್ಥಿಗೆ ಎದೆನೋವು ಕಾಣಿಸಿಕೊಂಡಿದ್ದು ಚಿಕಿತ್ಸೆ ಕೊಡಿಸಲೆಂದು ಶಾಲೆಯ ವಾರ್ಡನ್ ರವಿ ರವರು ತುರ್ತು ವಾಹನದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತರುವಾಗ ಮಾರ್ಗಮದ್ಯೆ ಹೃದಯಾಘಾತದಿಂದ ಮೃತಪಟ್ಟಿರುತ್ತಾನೆ. ಸದರಿ ವಿದ್ಯಾರ್ಥಿಯ   ಸಾವಿನ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವರದಕ್ಷಿಣೆ ಸಾವಿನ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 215/13 ಕಲಂ. 498(ಎ)-306 ಐ.ಪಿ.ಸಿ.

ದಿನಾಂಕ: 07-04-2013 ರಂದು ಪಿರ್ಯಾದಿ ಗೌರಮ್ಮ ಕೋಂ. ಲೇಟ್. ನಿಂಗೇಗೌಡ, ವಡ್ಡರಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಅವರ ಅಳಿಯ ಮಧು ಬಿನ್ ವೆಂಕಟೇಶ, ವಡ್ಡರಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ಪಿರ್ಯಾದಿಯವರ ಮಗಳು ಭಾಗ್ಯಳಿಗೆ ಸಾಲ ತೀರಿಸಲು ಹಣವನ್ನು ಕೊಡು ಎಂದು ಹಿಂಸೆ ಕೊಡುತ್ತಿದ್ದು, ಹಿಂಸೆಯನ್ನು ತಾಳಲಾರದೆ ಪಿರ್ಯಾದಿ, ಪಿರ್ಯಾದಿಯವರ ಮಗಳು ಭಾಗ್ಯ ಮತ್ತು ಮಗ ಸುರೇಶ್  ಈ ಮೂರು ಜನರು ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದು ಕಾವೇರಿ ಹೊಳಗೆ ಬಿದ್ದಿದ್ದು ಪಿರ್ಯಾದಿಯವರನ್ನು ಯಾರೋ ನೀರಿನಿಂದ       ಕಾಪಾಡಿದ್ದು ಮಗಳು ಮತ್ತು ಮಗನ ಶವವು ಕಾವೇರಿ ನೀರಿನಲ್ಲಿ ಇರುತ್ತದೆ ಪತ್ತೆ ಮಾಡಿಕೊಡಿ ಇವರ ಸಾವಿಗೆ ನನ್ನ ಅಳಿಯನೆ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಚುನಾವಣಾ ಅಕ್ರಮ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 171(ಬಿ) ಐ.ಪಿ.ಸಿ. ಕೂಡ 123 ಆರ್.ಪಿ. ಕಾಯ್ದೆ 1951.

ದಿನಾಂಕ: 07-04-2013 ರಂದು ಪಿರ್ಯಾದಿ ಬಿ.ಎಸ್.ಶಶಿಧರ್, ಡಿ.ಟಿ.ವೆಂಕಟಶೆಟ್ಟಿ. ಸಂಚಾರಿ ತನಿಖಾದಳ, ನಾಗಮಂಗಲ ವಿಧಾನಸಭಾ ಕ್ಷೇತ್ರ-191, ಮಂಡ್ಯ ಜಿಲ್ಲೆ ರವರು ನೀಡಿದ ದೂರು ಏನೆಂದರೆ ಆರೋಪಿ ಕಾಂತರಾಜು, ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರು, ಕೊಪ್ಪ ಗ್ರಾಮ, ಮದ್ದೂರು ತಾ. ರವರು ವಿದಾನಸಭಾ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವ  ಸಮಯದಲ್ಲಿ ನಮ್ಮ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮತದಾರರಿಗೆ ಆಮಿಷ ಒಡ್ಡುವ ರೀತಿಯಲ್ಲಿ ನಡೆದುಕೊಂಡಿದ್ದು  ಗೋಡೆ ಗಡಿಯಾರಗಳನ್ನು ಹಂಚಿರುವ ಶ್ರೀ ಕಾಂತರಾಜು ಗ್ರಾಮಪಂಚಾಯ್ತಿ ಸದಸ್ಯ ಕೊಪ್ಪ ಇವರ ಮೇಲೆ ಸೆಕ್ಷನ್ 171 ಬಿ,  ಅಡಿಯಲ್ಲಿ ಹಾಗೂ ಜನತಾ ಪ್ರಾತಿನಿದ್ಯಾ ಕಾಯ್ದೆ ಸೆಕ್ಷನ್ 123 ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ವಂಚನೆ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 420 ಐ.ಪಿ.ಸಿ.

       ದಿನಾಂಕ: 07-04-2013 ರಂದು ಪಿರ್ಯಾದಿ ತಾಯಮ್ಮ ಕೊಂ ರಾಮಣ್ಣ , ಅಶೋಕನಗರ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ಬಂದು ಪಿರ್ಯಾದಿಯವರು ವಿಧ್ಯಾನಗರದಲ್ಲಿರುವ ಗಣೇಶನ ದೇವಸ್ಥಾನಕ್ಕೆ ಪೂಜೆಗೆಂದು ಹೊಗುತ್ತಿದ್ದಾಗ ಯಾರೊ ಅಪರಿಚಿತ ವ್ಯಕ್ತಿಗಳು ಬಂದು ನಾವು ಪೊಲೀಸಿನವರು ವಡವೆಗಳನ್ನು ಹಾಕಿಕೊಂಡು ಹೋಗಬೇಡಿ ಕಳ್ಳರಿದ್ದಾರೆಂದು ಹೇಳಿ ಅವುಗಳನ್ನು ಪೇಪರ್ ನಲ್ಲಿ ಹಾಕಿ ಕೊಡುತ್ತೇವೆಂದು ಹೇಳಿದ್ದನ್ನು ನಂಬಿ ನನ್ನ ಕತ್ತಿನಲ್ಲಿದ್ದ 25 ಗ್ರಾಂ ಸರವನ್ನು ಬಿಚ್ಚಿಕೊಟ್ಟೆ ಅವುಗಳನ್ನು ಪೇಪರ್ ನಲ್ಲಿ  ಸುತ್ತಿ ಸೀರೆಯ ಸೆರಗಿಗೆ ಗಂಟುಕಟ್ಟಿ ಕೊಟ್ಟರು ನಂತರ ಮುಂದೆ ನಾನು ಹೋಗುತ್ತಿರುವಾಗ ಅನುಮಾನಬಂದು ಗಂಟನ್ನು ಬಿಚ್ಚಿ ನೋಡಿದೆ ಅದರಲ್ಲಿ ಸಣ್ಣ ಸಣ್ಣ ಕಲ್ಲುಗಳಿದ್ದವು ನನ್ನ ನಂಬಿಸಿ ಮೋಸ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೋಳ್ಳಿ ಎಂದು ಇತ್ಯಾದಿಯಾಗಿ ನೀಡಿದ ಪಿರ್ಯಾದಿನ ಮೇರೆಗೆ ಕೇಸು ದಾಖಲಿಸಲಾಗಿದೆ.  


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 140/13 ಕಲಂ. 420 ಐ.ಪಿ.ಸಿ.

ದಿನಾಂಕ: 07-04-2013 ರಂದು ಪಿರ್ಯಾದಿ ರಜನಿ ಕೋಂ. ಹರ್ಷ, ಇಕ್ಕಲಕ್ಕಿ ರಾಮಲಿಂಗಯ್ಯರವರ ಮನೆ, 3 ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮನೆಯಲ್ಲಿದ್ದಾಗ ಮೊಬೈಲ್ ಗೆ  ಪೋನ್ ಮಾಡಿ ನನ್ನ ಪೋನ್ ನಂ 9591574080 ಕ್ಕೆ  ಮೋಬೈಲ್ ನಂ 95911416962 ರಿಂದ  ಕಾಲ್ ಮಾಡಿ ನೀನು ನಮ್ಮ ಜೊತೆ  ಬರುತ್ತಿಯಾ  ಅಂತ ಕೇಳಿದ್ದು ಮೊಬೈಲ್ ಪೋನ್ನಲ್ಲಿ ಅಶ್ಲೀಲವಾಗಿ ಮಾತನಾಡಿ ನನ್ನನ್ನು ನಿಂದಿಸಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.   

DAILY CRIME REPORT DATED : 06-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-04-2013 ರಂದು ಒಟ್ಟು 58 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು,  2 ರಸ್ತೆ ಅಪಘಾತ ಪ್ರಕರಣಗಳು,  3 ಕಳವು ಪ್ರಕರಣಗಳು,   1 ಮನುಷ್ಯ ಕಾಣೆಯಾದ ಪ್ರಕರಣ,  1 ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 48 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.         

ಕಳ್ಳತನ ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 457-380 ಐ.ಪಿ.ಸಿ.

ದಿನಾಂಕ: 06-04-2013 ರಂದು ಪಿರ್ಯಾದಿ ಬಿ.ಶ್ರೀಕಂಠಮೂರ್ತಿ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಮಾದೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಗೊತ್ತಿಲ್ಲಾ ಅಕ್ಷರ ದಾಸೋಹಕ್ಕೆ ಇಟ್ಟಿದ್ದ 03 ಭಾರತ್ ಗ್ಯಾಸ್ ಸಿಲಿಂಡರ್ ಗಳು  ಹಾಗೂ ಒಂದು ದೊಡ್ಡ ಸ್ಟೌವ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇವುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. 457-380 ಐ.ಪಿ.ಸಿ.

ದಿನಾಂಕ: 06-04-2013 ರಂದು ಪಿರ್ಯಾದಿ ವೈ.ಎನ್ ಕಮಲಮ್ಮ, ಅಂಗನವಾಡಿ ಕಾರ್ಯಕರ್ತೆ,  ಮಾದೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಎರಡು ಬಾರತ್ಗ್ಯಾಸ್ ಸಿಲಿಂಡರ್ ಮತ್ತು ಒಂದು ಸ್ಟೌವ್, ಒಂದು ಅಲ್ಯೋಮಿನಿಯಂನ ದೊಡ್ಡ ದಬರಿ, ಮತ್ತು ಮುಚ್ಚಳ,  ಒಂದು ಮೂಟೆ 50  ಕೆ.ಜಿ ಅಕ್ಕಿ,  25 ಕೆ.ಜಿ ಗೋದಿ, ಮತ್ತು 05   ಲೀಟರ್ ಎಣ್ಣೆ, 2 ಕೆಜಿ ಬೇಳೆ, ಸಾಂಬಾರ್ ಪೌಡರ್ 02  ಕೆ.ಜಿ, 22 ಕೆ.ಜಿ. ತೂಕದ ಬೆಲ್ಲದ ಬಾಕ್ಸ್ ಕಳುವು ಮಾಡಿಕೊಂಡು ಹೋಗಿರುತ್ತಾರೆ ಇವುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 279, 304(ಎ) ಐ.ಪಿ.ಸಿ.

ದಿನಾಂಕ: 06-04-2013 ರಂದು ಪಿರ್ಯಾದಿ ನಂಜಯ್ಯ, ಚನ್ನಪಿಳ್ಳೆಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಟ್ರಾಕ್ಟರ್ ನಂ ಕೆ.ಎ.11-ಟಿ-3219, ಟ್ರೇಲರ್ ಕೆ.ಎ.11-ಟಿ-3220ರ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿರುತ್ತದೆ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ಮೃತನ ಕುಟುಂಬಕ್ಕೆ ನ್ಯಾಯಕೊಡಿಸಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 65/13 ಕಲಂ. 279-337-304(ಎ) ಐ.ಪಿ.ಸಿ.

ದಿನಾಂಕ: 06-04-2013 ರಂದು ಪಿರ್ಯಾದಿ ರಮೇಶ್ ಗೌಡ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 6-4-2013 ರಂದು ಕೋಟೆಬೆಟ್ಟ ಗ್ರಾಮದ ಕಂಬದ ನರಸಿಂಹಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಆರೋಪಿ ಶಿವಣ್ಣ, ಕಎ.-54 -2747 ಆಟೋಚಾಲಕ ರವರು ತನ್ನ ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರ ಪರಿಣಾಮ ಆಟೋ ಉರುಳಿಬಿದ್ದು ಪ್ರಯಾಣಿಸುತ್ತಿದ್ದ ಪಾಪಣ್ಣ ಎಂಬುವರು ಮೃತಪಟ್ಟಿರುವುದಾಗಿ ದೂರು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 214/13 ಕಲಂ. 379 ಐ.ಪಿ.ಸಿ.

ದಿನಾಂಕ: 06-04-2013 ರಂದು ಪಿರ್ಯಾದಿ ಎಚ್.ಶಶಿಕಲಾ, 30 ವರ್ಷ, ಎಂ.ಶೆಟ್ಟಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಬಸ್ಸಿಗೆ ಹತ್ತುವಾಗ ಯಾರೋ ಕಳ್ಳರು ನನ್ನ ಬ್ಯಾಗ್ನ ಜಿಪ್ ತೆರೆದು 71 ಸಾವಿರ ರೂಗಳನ್ನು ಕಳ್ಳತನ ಮಾಡಿರುತ್ತಾರೆ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 379 ಐ.ಪಿ.ಸಿ.

ದಿನಾಂಕ: 06-04-2013ರಂದು ಪಿರ್ಯಾದಿ ಎಂ ಮಹದೇವಯ್ಯ, ಎ.ಎಸ್.ಐ. ಪುರ ಠಾಣೆರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಹಿರೋಹೊಂಡ ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿರುತ್ತಾರೆ ಅದನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 101/13 ಕಲಂ. 379-323-341-324-506 ಕೂಡ 34 ಐ.ಪಿ.ಸಿ.

ದಿನಾಂಕ: 06-04-2013ರಂದು ಪಿರ್ಯಾದಿ ರಾಮಕೃಷ್ಣ, ಚಟ್ಟಂಗೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಲೋಕೇಶ, 2] ನಾರಾಯಣ 3]ಮಂಜುಳಮ್ಮ ಮತ್ತು 4] ಆಶಾ ಎಲ್ಲರು ಚಟ್ಟಂಗೆರೆ ಗ್ರಾಮ ರವರುಗಳು ಸೇರಿಕೊಂಡು ಕೆಳಕ್ಕೆ ಕೆಡವಿ ಕಾಲಿನಿಂದ ಒದ್ದು, ಈ ಬೋಳಿಮಗನನ್ನು ಇಲ್ಲೆ ಸಾಯಿಸಿ ಬಿಡಿ ಎಂದು ಹೊಡೆದರು.  ನೀನು ಮನೆ ಹತ್ತಿರ ಬಾ ನಿನ್ನನ್ನು ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 115/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 06-04-2013ರಂದು ಪಿರ್ಯಾದಿ ಮಹದೇವು, 40 ವರ್ಷ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಅವರ 16 ವರ್ಷದ ಮಗಳು, ಎಸ್ಎಸ್ಎಲ್ಸಿ ವಿದ್ಯಾರ್ಥಿನಿ, ದಿನಾಂಕ: 03-04-2013 ರಿಂದ ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 87/13 ಕಲಂ.ಕೆ.ಎಂ.ಎಂ.ಸಿ.ಆರ್. 1994, ನಿಯಮ 3, 42 ಮತ್ತು 44 ಹಾಗು ಎಂ.ಎಂ.ಆರ್.ಡಿ4.(1ಎ) ಮತ್ತು 21(1-5) ಕಾಯ್ದೆ 1957ಕೂಡ 379 ಐ.ಪಿ.ಸಿ.

ದಿನಾಂಕ: 06-04-2013ರಂದು ಪಿರ್ಯಾದಿ ಪಿ.ಎಸ್. ನವೀನ್, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ಟ್ರಾಕ್ಟರ್ ಚಾಲಕ (ಮಾಲಿಕರು ಹೆಸರು, ಟ್ರಾಕ್ಟರ್ ನಂಬರ್ ತಿಳಿಯ ಬೇಕು. ಇಂಜೆನ್ ನಂಬರ್ ಟಿ-77010020) ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಲ್ಲಿ ತೊಡಗಿದ್ದ ಟ್ರಾಕ್ಟರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ಹಾಜರ್ಪಡಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 09/13 ಕಲಂ. 174(ಸಿ) ಸಿ.ಆರ್.ಪಿ.ಸಿ.

ದಿನಾಂಕ: 06-04-2013ರಂದು ಪಿರ್ಯಾದಿ ವಿನೋದ್ 23 ವರ್ಷ, ವಿದ್ಯಾರ್ಥಿನಿ , ಕೀರ್ತಿ ನಗರ ಬಡಾವಣೆ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ:02-04-2013 ರಂದು ಬೆಳಿಗ್ಗೆ 06-30 ಗಂಟೆ ಸಮಯದಲ್ಲಿ, ಕೀತರ್ಿನಗರ ಬಡಾವಣೆ, ಮಳವಳ್ಳಿ ಟೌನ್ ನಲ್ಲಿ ಪಿರ್ಯಾದಿಯವರ ತಂದೆ ಮೃತರಾಗಿದ್ದು ಅವರ ಸಾವಿನ ಬಗ್ಗೆ ಸಂಶಯವಿರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 05-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-04-2013 ರಂದು ಒಟ್ಟು 38 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ವಾಹನ ಕಳವು ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ ಹಾಗು 33 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ವಾಹನ ಕಳವು ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 379 ಐ.ಪಿ.ಸಿ.

ದಿನಾಂಕ: 05-04-2013 ರಂದು ಪಿರ್ಯಾದಿ ಪ್ರಸನ್ನ ಕೆ.ಬಿನ್. ತಾವರೆಗೆರೆ. ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ದಿನಾಂಕ: 04-04-2013 ರಂದು ಬೆಳಿಗ್ಗೆ 11-30 12-00 ಕಾಳಿಕಾಂಭ ದೇವಸ್ಥಾನದ ಆವರಣದಲ್ಲಿ ಅವರ ಬಾಬ್ತು ಮೋಟಾರ್ ಸೈಕಲ್ ನ್ನು ನಿಲ್ಲಿಸಿದ್ದು ಪೂಜೆ ಮುಗಿಸಿ ವಾಪಸ್ ಬಂದು ನೊಡಲಾಗಿ ತಮ್ಮ ಬೈಕ್ ಇರಲಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಘಿರುವುದಿಲ್ಲ ಕಳವಾಗಿರುವ ಬೈಕನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 379 ಐ.ಪಿ.ಸಿ.

ದಿನಾಂಕ: 05-04-2013 ರಂದು ಪಿರ್ಯಾದಿ ಸಿ.ಎನ್. ಉಮೇಶ ಬಿನ್. ಎನ್. ನಾಗರಾಜಪ್ಪ, ಚಿಕ್ಕಮಲಗೂಡು ಗ್ರಾಮ ರವರು ದಿನಾಂಕ: 01-04-2013 ರಂದು ಅವರ ಬಾಬ್ತು ಮೊಟಾರ್ ಸೈಕಲ್ ನ್ನು ದೇವಸ್ಥಾನದ ಬಳಿ ನಿಲ್ಲಿಸಿ ಊಟ ಮಾಡಿಕೊಂಡು ಬಂದು ನೋಡಿದಾಗ ಮೋಟಾರ್ ಸೈಕಲ್ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ ಅಕ್ಕಪಕ್ಕ ನೋಡಲಾಗಿ ಪತ್ತೆಯಾಗಿರುವುದಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು  ಹೋಗಿದ್ದು ಪತ್ತೆ ಮಾಡಿಕೊಡುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 05-04-2013 ರಂದು ಪಿರ್ಯಾದಿ ಬಿ.ಜೆ ಜವರಯ್ಯ ಬಿನ್. ಲೇಟ್. ಜವನದಾಸಯ್ಯ, 47 ವರ್ಷ, ಬೊಂತಗಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 04-04-2013  ರಂದು ಫಿರ್ಯಾದಿಯವರ ಗಾಮ ಬೊಂತಗಹಳ್ಳಿಯಿಂದ ಫಿರ್ಯಾದಿಯವರ 1ನೇ ಮಗಳಾದ ಜೆ. ಅನುಷಾ, 2ನೇ ಮಗಳಾದ ಜೆ. ನಮಿತಾ, ಮಗ ಪ್ರಸಾದ್ ಇದ್ದು, ಮಧ್ಯಾಹ್ನ 12-30 ಗಂಟೆಗೆ ಮಿಲ್ನಿಂದ ವಾಪಸ್ಸು ಬಂದು ನೋಡಿದಾಗ 1ನೇ ಮಗಳಾದ ಜೆ. ಅನುಷಾ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 143/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 05-04-2013 ರಂದು ಪಿರ್ಯಾದಿ ಗೀತಾ ಕೊಂ. ರಾಯ್ಡು.ಬಿ.ಎಸ್. ಬನಘಟ್ಟ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 01-04-2013 ರಂದು ಅವರ ಗಂಡ ರಾಯ್ಡು.ಬಿ.ಎಸ್. ಬನಘಟ್ಟ ಗ್ರಾಮರವರು ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 05-04-2013 ರಂದು ಪಿರ್ಯಾದಿ ಶಿವಕುಮಾರ, ಹೀರೇಮರಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಶ್ವೇತಾ ರಾಣಿ, ಪಾಂಡವಪುರ ಟೌನ್ ರವರಿಗೆ ದಿನಾಂಕ: 05-04-2013 ರಂದು ಮನೆಯಲ್ಲಿ ಆಕಸ್ಮಿಕವಾಗಿ ಸೀಮೆಎಣ್ಣೆ ಸುರಿದು ಬೆಂಕಿಹೊತ್ತಿಕೊಂಡು ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 04-04-2013



ದಿನಾಂಕ: 04-04-2013 ರಂದು ಒಟ್ಟು 42 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  3 ಕಳ್ಳತನ ಪ್ರಕರಣಗಳು,  1 ರಾಬರಿ ಪ್ರಕರಣ ಹಾಗು 36 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಮನುಷ್ಯ ಕಾಣೆಯಾದ ಪ್ರಕರಣಗಳು :

1. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 65/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 04-04-2013 ರಂದು ಪಿರ್ಯಾದಿ ನವಾಜ್ ಖಾನ್ ಬಿನ್. ಹೈದರಾಲಿಖಾನ್, 24 ವರ್ಷ, ರಹಮತ್ ನಗರ, ನಾಗಮಂಗಲ ರವರು ನೀಡಿದ ದೂರು ಏನೆಂದರೆ ಫಿರ್ಯಾದಿಯವರ 2 ನೇ ಅಣ್ಣ ಶಾಭಾಸ್ ಖಾನ್ 26 ವರ್ಷ, ಬುದ್ದಿಮಾಂದ್ಯನಾಗಿದ್ದು ದಿನಾಂಕ: 01-04-2013 ರಂದು ಫಿರ್ಯಾದಿಯವರ ಮನೆಯಲ್ಲಿದ್ದಾಗ ಹೇಳದೇ ಕೇಳದೆ ಮನೆಯಿಂದ ಹೊರಟು ಹೋಗಿರುತ್ತಾನೆ,   ವಾಪಾಸ್ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 208/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 04-04-2013 ರಂದು ಪಿರ್ಯಾದಿ ನಿಂಗಮ್ಮ ಕೋಂ. ತಿಮ್ಮಪ್ಪ, ರಂಗನಾಥ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 28-02-13 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ರಂಗನಾಥ ನಗರದಿಂದ ತಿಮ್ಮಪ್ಪ ಬಿನ್. ಸಣ್ಣಯ್ಯ ರವರು ಮನೆಯಿಂದ 6000/- ರೂ. ಹಣ ಮತ್ತು ಡಿ.ಎಲ್. ತೆಗೆದುಕೊಂಡು ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲಾ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣಗಳು :

1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 457-380 ಐ.ಪಿ.ಸಿ.

ದಿನಾಂಕ: 04-04-2013 ರಂದು ಪಿರ್ಯಾದಿ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕರು, ಸರ್ಕಾರಿ  ಹಿರಿಯ ಪ್ರಾಥಮಿಕ ಪಾಠಶಾಲೆ, ಗುಡಿಗೇನಹಳ್ಳಿ ರವರು ನೀಡಿದ ದೂರು ಏನೆಂದರೆ ದಿನಾಂಕ: 03-04-2013 ರ ರಾತ್ರಿ ಯಾರೋ ಕಳ್ಳರು ಪಾಠಶಾಲೆಯ ಮುಖ್ಯ ಕಛೇರಿಯ ಬಾಗಿಲ ಬೀಗ ಹೊಡೆದು ಒಳಗೆ ಹೋಗಿ ಕೊಠಡಿಯಲ್ಲಿದ್ದ ಶಾಲೆಯ ಬಿಸಿಯೂಟದ 02 ಭಾರತ್ ಗ್ಯಾಸ್ ಸಿಲಿಂಡರ್ ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2. ಬಸರಾಳು ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 04-04-2013 ರಂದು ಪಿರ್ಯಾದಿ ಎಂ.ಜಿ.ಮಂಜುಳ, ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪಾಠಶಾಲೆ, ಉತ್ತರವಲಯ, ದೊಡ್ಡಗರುಡನಹಳ್ಳಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 03-04-2013 ರಂದು ರಾತ್ರಿ ವೇಳೆಯಲ್ಲಿ ಶಾಲೆಯ ಅಡಿಗೆ ಮನೆಯಲ್ಲಿ ಇಟ್ಟಿದ್ದ ಒಂದು ಭಾರತ್ ಗ್ಯಾಸ್ ಸಿಲೆಂಡರ್ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 97/13 ಕಲಂ. 457-380 ಐ.ಪಿ.ಸಿ.

ದಿನಾಂಕ: 04-04-2013 ರಂದು ಪಿರ್ಯಾದಿ ಟಿ. ವೆಂಕಟ ರಾಮು, ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ, ಎಸ್.ಐ. ಹೊನ್ನಲಗೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಶಾಲೆಯ ಬೀಗ ಹೊಡೆದು ಎರಡು ಸಿಲಿಂಡರ್ ಮತ್ತು ಒಂದು ಮಿಕ್ಸಿ ಕಳ್ಳತನ ಮಾಡಿರುತ್ತಾರೆ ಅವುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ರಾಬರಿ ಪ್ರಕರಣಗಳು :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 392 ಐ.ಪಿ.ಸಿ.

ದಿನಾಂಕ: 04-04-2013 ರಂದು ಪಿರ್ಯಾದಿ ರೇಖಾ ಕೋಂ ಪುಟ್ಟಬುದ್ದಿ, 28ವರ್ಷ, ಲಿಂಗಾಯ್ತರು, ಮನೆಕೆಲಸ, ರಾಗಿಬೊಮ್ಮನಹಳ್ಳಿ, ಕಸಬಾ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ದಿನಾಂಕ: 04-04-2013 ರಂದು ಪಿರ್ಯಾದಿಯವರು ತನ್ನ ಗಂಡನಿಗೆ ಪ್ಲಾಸ್ಕ್ನಲ್ಲಿ ಟೀ ತೆಗೆದುಕೊಂಡು ಜಮೀನಿಗೆ ಹೋಗುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ಆಸಾಮಿಗಳು  ಪಿರ್ಯಾದಿಯವರ ಕತ್ತಿನಲ್ಲಿದ್ದ ಮಾಂಗಲ್ಯದ ಸಮೇತ ಇದ್ದ 50 ಗ್ರಾಂ ತೂಕದ ಚಿನ್ನದ ಎರಡು ಎಳೆ ಚೈನು, ಎರಡು ಲಕ್ಮಿಕಾಸು, ಎರಡು ಗುಂಡು ಒಟ್ಟು 60 ಗ್ರಾಂ ತೂಕದ ಚೈನನ್ನು ಕಿತ್ತುಕೊಂಡು ಹೊರಟು ಹೋಗಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED: 03-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-04-2013 ರಂದು ಒಟ್ಟು 57 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ,  1 ವಾಹನ ಕಳವು ಪ್ರಕರಣ,   3 ಯು.ಡಿ.ಆರ್. ಪ್ರಕರಣಗಳು, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ಅಬಕಾರಿ ನಿಷೇಧ ಕಾಯಿದೆ ಪ್ರಕರಣ ಹಾಗು 47 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    


ಅಪಹರಣ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 366 (ಎ)-506 ರೆ/ವಿ 149 ಐ.ಪಿ.ಸಿ.

      ದಿನಾಂಕ: 03-04-2013 ರಂದು ಪಿರ್ಯಾದಿ ಲಕ್ಷ್ಮಮ್ಮ, ದಡಮುಡಿಕೆ ಗ್ರಾಮ, ದೇವಲಾಪುರ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ದೇವರಾಜ್ ಇತರೆ 7 ಜನರು, ತೊಳಸಿಕೊಂಬರಿ ಕಾಲೋನಿ, ಬಡಬಾರೆ ಗ್ರಾಮ ರವರುಗಳು ದಿನಾಂಕ: 31/03/2013ರ ಸಂಜೆ 05-30 ಗಂಟೆಯಲ್ಲಿ ಪಿರ್ಯಾದಿಯವರ ಮಗಳನ್ನು  ಆರೋಪಿತರುಗಳು ಅಪಹರಣ ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 117/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

      ದಿನಾಂಕ: 03-04-2013 ರಂದು ಪಿರ್ಯಾದಿ ಕುಮಾರ್, ಡೋರ್ ನಂ, 1498,  ವಿವೇಕಾನಂದ ರಸ್ತೆ, ಅಶೋಕನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ 17 ವರ್ಷದ,  2 ನೇ ಪಿ.ಯು.ಸಿ. ವಿದ್ಯಾರ್ಥಿನಿಯು ದಿನಾಂಕ: 02-04-13 ರಂದು 06-30ಗಂಟೆಯಲ್ಲಿ ಮಂಡ್ಯ ಸಿಟಿ. ಅಶೋಕನಗರ, 7 ನೇ ಕ್ರಾಸ್, ನಂ.-1498  ಪಿರ್ಯಾದಿರವರ ಮನೆಯಿಂದ ಯಾರಿಗೂ  ಹೇಳದೆ ಕೇಳದೆ ಹೋಗಿರುತ್ತಾಳೆ ಅವಳನ್ನು ಹುಡುಕಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಾಹನ ಕಳವು ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. 379 ಐ.ಪಿ.ಸಿ.

ದಿನಾಂಕ: 03-04-2013 ರಂದು ಪಿರ್ಯಾದಿ ಜಯರಾಮೇಗೌಡ, 55ವರ್ಷ, ವಕ್ಕಲಿಗರು, ಮಲ್ಲೇಗೌಡನಹಳ್ಳಿ ಗ್ರಾಮ ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 25-03-2013 ರಂದು ಯಾರೋ ಕಳ್ಳರು ಪಿರ್ಯಾದಿಯವರ ಬಾಬ್ತು ಕೆ.ಎ.-54/1153ರ ಗೂಡ್ಸ್ ಆಪೇ ಆಟೋವನ್ನು ಕಳವು ಮಾಡಿರುತ್ತಾರೆ ಪತ್ತೆಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ: 03-04-2013 ರಂದು ಪಿರ್ಯಾದಿ ಶಿವಣ್ಣ, ಬೇವುಕಲ್ಲು ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಹೆಂಡತಿ ಕನ್ಯಾಕುಮಾರಿ ಕೋಂ ಶಿವಣ್ಣ, 45 ವರ್ಷ, ಬೇವುಕಲ್ಲು ಗ್ರಾಮ ರವರು ಪಟಾಕಿಯ ಶಬ್ದಕ್ಕೆ ಆಕಸ್ಮಿಕವಾಗಿ ಕುಸಿದುಬಿದ್ದು ಹೆಬ್ಬಾಗಿಲ ಚಪ್ಪಡಿ ಕಲ್ಲು ತಲೆಗೆ ಬಡಿದು ರಕ್ತಸ್ರಾವವಾಗಿ ಸತ್ತು ಹೋಗಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-04-2013 ರಂದು ಪಿರ್ಯಾದಿ ರಾಜು, 35ವರ್ಷ, ವ್ಯವಸಾಯ, ಚಾಕನಹಳ್ಳಿ ಗ್ರಾಮರವರು ನೀಡಿದ ದೂರು ಅವರ ತಾಯಿ ಹಾಗು ತಂಗಿ ಭಾಗ್ಯಮ್ಮ ರವರುಗಳು ಮೃತ ಪಟ್ಟಿರುವುದರಿಂದ ಮನನೊಂದು ಹಾಗೂ ಕೆಲವು ಕೈ ಸಾಲಗಳನ್ನು ಮಾಡಿದ್ದು ಅದನ್ನು ತೀರಿಸಲಾಗದೇ ಜಯಮ್ಮ65ವರ್ಷ, ಗೊಲ್ಲ ಜನಾಂಗ, ಚಾಕನಹಳ್ಳಿ ಗ್ರಾಮರವರು ದಿನಾಂಕ: 02-04-2013 ರಂದು ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:03-04-2013 ರಂದು ಪಿರ್ಯಾದಿ ಕೆ.ಎನ್.ಬಾಲು, 31 ವರ್ಷ, ಒಕ್ಕಲಿಗರು, ಆಟೋಚಾಲಕ, ಕೊಡಗಹಳ್ಳಿ ಗ್ರಾಮ, ಬನ್ನೂರು ತಾ. ರವರು ನೀಡಿದ ದೂರು ಏನೆಂದರೆ ಶಿವಣ್ಣ ಬಿನ್ ನಾಗಣ್ಣ, 34 ವರ್ಷ, ಒಕ್ಕಲಿಗರು, ಹುಲ್ಲು ವ್ಯಾಪಾರ, ವಾಸ ಕೊಡಗಹಳ್ಳಿಗ್ರಾಮ ರವರಿಗೆ ಬಹುಶಃ ಎದೆ ನೋವು ಕಾಣಿಸಿಕೊಂಡು ಅಥವಾ ಬೇರೆನೊ ತೊಂದರೆಯಿಂದಾಗಿ ವಾಹನವನ್ನು ರಸ್ತೆಯ ಬಲಭಾಗದ ಕಡೆಗೆ ಓಡಿಸಿಕೊಂಡು ಬಂದು ನಿಲ್ಲಿಸಿದ ಬಳಿಕ ಸತ್ತಿರುವಂತೆ ಕಂಡುಬರುತ್ತದೆ. ಈ ಬಗ್ಗೆ ತಾವು ಸ್ಥಳಕ್ಕೆ ಬಂದು ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 143, 341, 354, 323, 149 ಐಪಿಸಿ ಕೂಡ 3 ಕ್ಲಾಸ್. (1) (10) (11) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ 1989.   

ದಿನಾಂಕ: 03-04-2013 ರಂದು ಪಿರ್ಯಾದಿ ಕೆಂಪರಾಜು, ಹುಸ್ಕೂರು ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ನಿಂಗರಾಜು ಇತರೆ 6  ಜನ, ಎಲ್ಲರೂ ಹುಸ್ಕೂರು ಗ್ರಾಮ ರವರುಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಪಿರ್ಯಾದಿರವರನ್ನು ಅಡ್ಡಗಟ್ಟಿ ನೀನು ಜಾತ್ರೆಗೆ ಹೋಗಲು ವಕ್ಕಲಿಗ ಜನಾಂಗದವರ ಜೊತೆ ಹೋಗಬೇಕ ಎಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಪಿರ್ಯಾದಿಗೆ ಹಲ್ಲೆ ಮಾಡುತ್ತಿದ್ದಾಗ ಅವರ ತಾಯಿ ಕೇಳಲು ಬಂದರೆ ಅವರನ್ನು ಬೈದು ರವಿಕೆ ಹರಿದು ಅವಮಾನಗೊಳಿಸಿ ಜಾತಿ ನಿಂದನೆ ಮಾಡಿರುತ್ತಾರೆ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು : 

1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 498(ಎ)-506 ಐ.ಪಿ.ಸಿ.

ದಿನಾಂಕ: 03-04-2013 ರಂದು ಪಿರ್ಯಾದಿ ಭಾಗ್ಯಮ್ಮ 41 ವರ್ಷ, ಆದಿ ಕರ್ನಾಟಕ, ಗೃಹಿಣಿ, ಕೋಣಸಾಲೆ ಗ್ರಾಮ, ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅವರ ಗಂಡ ಉಮೇಶ, ಶಿವಪುರ ಕಾಲೋನಿ, ಬಸರಾಳು ಗ್ರಾಮ ರವರು ಪಿರ್ಯಾದಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾನೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


2. ಬಸರಾಳು ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 498(ಎ), 324 ಐಪಿಸಿ ಮತ್ತು 3 & 4 ಡಿ.ಪಿ. ಆಕ್ಟ್. 

ದಿನಾಂಕ: 03-04-2013 ರಂದು ಪಿರ್ಯಾದಿ ಗೀತಾ 21 ವರ್ಷ, ಪರಿಶಿಷ್ಟ ಜನಾಂಗ, ಮನೆಕೆಲಸ, ದೊಡ್ಡಗರುಡನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಅವರ ಗಂಡ ವಿಶ್ವ ಹಾಗು 2]ಜೋಗಯ್ಯ, 3] ಸಿದ್ದಮ್ಮ, 3] ಮೋಹನ, 4] ರೇಣುಕಾ, 4]ಶಿವಣ್ಣ ಹಾಗು 5] ಶಿಲ್ಪಾ ಪರಿಶಿಷ್ಟ ಜನಾಂಗ, ದೊಡ್ಡಗರುಡನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಊಟ, ಬಟ್ಟೆ ನೀಡದೆ ಬೈಯ್ಯುವುದು ಮಾಡುತ್ತಿದ್ದ. ಕೈಯಿಂದ ಮೈಮೇಲೆ ಹೊಡೆದು ನೋವುಂಟು ಮಾಡಿ ನಿನ್ನ ತಂದೆಯ ಮನೆಯಿಂದ ನೀನು 50,000/- ರೂ ವರದಕ್ಷಿಣೆ ತರುವವರೆಗೂ ಮನೆಗೆ ಬರಬೇಡ ಎಂದು ಹೊರಗೆ ನೂಕಿದ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಬಕಾರಿ ನಿಷೇಧ ಕಾಯಿದೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 32, 34 ಕೆ.ಇ. ಆಕ್ಟ್, 29[1], 29[2], 31, 35 ಕೆ.ಎಂ. ಆಕ್ಟ್-1964, 168, 171[ಸಿ], 511 ಐ.ಪಿ.ಸಿ.

ದಿನಾಂಕ: 03-04-2013 ರಂದು ಪಿರ್ಯಾದಿ ವಿಶ್ವರೂಪ, ಅಬಕಾರಿ ಜಂಟಿ ಆಯುಕ್ತರು, [ಜಾರಿ ಮತ್ತು ತನಿಖೆ] ಮೈಸೂರು ವಿಭಾಗ, ಮೈಸೂರು ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ಆರೋಪಿ ಜೆ.ಎನ್.ಸೋಮೇಶ್ವರ್ ಹಿಂದಿನ ಅಬಕಾರಿ ಉಪ ಆಯುಕ್ತರು, ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಛೇರಿ, ಮಂಡ್ಯ ರವರು  ಮಂಡ್ಯ ಜಿಲ್ಲೆಯಲ್ಲಿ ಅಬಕಾರಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ದಿನಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಮದ್ಯವನ್ನು ವಿತರಿಸುವ ದುರುದ್ದೇಶದಿಂದ ಪ್ರತಿ ಮದ್ಯ ಮಾರಾಟಗಾರರಿಂದ 2-3 ಪೆಟ್ಟಿಗೆಗಳಷ್ಟು ಮದ್ಯವನ್ನು ಸಂಗ್ರಹಿಸಿರುತ್ತಾರೆಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ ಆರೋಪಿಯ ವಿರುದ್ಧ ದೂರು ನೀಡಿದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 02-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-04-2013 ರಂದು ಒಟ್ಟು 38 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ವಾಹನ ಕಳವು ಪ್ರಕರಣ,  1 ವಂಚನೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 34 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 11/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 02-04-2013 ರಂದು ಪಿರ್ಯಾದಿ ಸುರೇಶ ಬಿನ್. ಬಸವೇಗೌಡ, ಚಿನಕುರುಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚಿನಕುರುಳಿಯಲ್ಲಿ ಹಾಸನದ ನಾರಾಯಣರವರಿಗೆ ಸೇರಿದ ಚಂದನ್ ವೈನ್ಸ ಸ್ಟೋರ್ ಹತ್ತಿರ ಅಪರಿಚಿತ ವ್ಯಕ್ತಿ ಸುಸ್ತಾಗಿ ಮಲಗಿದ್ದು ಆತನನ್ನು 108 ಅಂಬುಲೇನ್ಸ್ ನಲ್ಲಿ ಚಿನಕುರಳಿ ಆಸ್ಪತ್ರೆಗೆ ಕರೆದೋಯುವಾಗ ಮೃತನಾಗಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :
.
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 140/13 ಕಲಂ. 379 ಐ.ಪಿ.ಸಿ.

ದಿನಾಂಕ: 02-04-2013 ರಂದು ಪಿರ್ಯಾದಿ ಶಿವಕುಮಾರ ಆರ್. ಬಿನ್. ಎನ್,ಎಸ್,ರಾಜು, ಶಾಂತಿನಗರ, ಪಾಂಡವಪುರ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 01-04-2013 ರಂದು ರಾತ್ರಿ ಸಮಯದಲ್ಲಿ ಶಾಂತಿನಗರ ಪಾಂಡವಪುರ ಟೌನ್ನಲ್ಲಿ ಯಾರೋ ಕಳ್ಳರು ಅವರ ಬಾಬ್ತು ಮೋಟಾರ್ ಸೈಕಲ್ ನಂ. ಕೆ.ಎ.-45-ಇ-3144, ಮಾಡಲ್ ನಂ. 2004 ರ ಹೀರೋಹೊಂಡ ಸ್ಪ್ಲೆಂಡರ್ ವಾಹನವನ್ನು ಮನೆಯಲ್ಲಿ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿದ್ದಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 468-420 ಐ.ಪಿ.ಸಿ.

ದಿನಾಂಕ:02-04-2013ರಂದು ಪಿರ್ಯಾದಿ ಶಿವಕುಮಾರ್, ಸಿ.ಎಂ.ಓ. ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ಕೋಟರ್್. ಕೆ.ಆರ್.ಪೇಟೆ ರವರಿಗೆ ಕೆ.ಆರ್.ಪೇಟೆ ಸಿ.ಜೆ. ಮತ್ತು ಜೆ.ಎಂ.ಎಪ್.ಸಿ. ನ್ಯಾಯಾಲಯದಿಂದ ಟಪಾಲ್ ಮುಖಾಂತರ ಬಂದ ದೂರಿನ ಸಾರಂಶವೆನೆಂದರೆ ಆರೋಪಿ 1] ರೇಣುಕ. 2] ಕೃಷ್ಣಮ್ಮ. ಮಲ್ಲಪಟ್ಟಣ, ಅರಕಲಗೂಡು ತಾ|| ರವರು ನೀಢಿದ ದೂರಿನ ಸಾರಾಂಶವೇನೆಂದರೆ ಮೇಲ್ಕಂಡ ಆರೋಪಿತರು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ಸಂ 219/12 ಕಲಂ 392 ಐಪಿಸಿ ಕೇಸಿನಲ್ಲಿ ಆರೋಪಿತರಾಗಿದ್ದು ಸದರಿ ಆರೋಪಿಗಳು ಕೇಸಿನ ತನಿಖಾಧಿಕಾರಿಗಳ ಮುಂದೆ ನೀಡಿರುವ ವಿಳಾಸ ಹಾಗು ಕೆ.ಆರ್. ಪೇಟೆ ಸಿ.ಜೆ. ಮತ್ತು ಜೆಎಂಎಪ್ಸಿ ನ್ಯಾಯಾಲಯಕ್ಕೆ ಜಾಮೀನು ಪಡೆಯಲು ಸಲ್ಲಿಸಿರುವ ಚುನಾವಣಾ ಗುರುತಿನ ಚೀಟಿ ವಿಳಾಸ ವ್ಯತ್ಯಾಸ ಕಂಡು ಬಂದಿದ್ದು ನ್ಯಾಯಾಲಯ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು ತನಿಖೆಯಿಂದ ವಿಳಾಸ ಸುಳ್ಳಾಗಿದ್ದು ಮತ್ತು ಎ-2 ಕೃಷ್ಣಮ್ಮ ತನ್ನ ಪತಿ ಬದುಕಿದ್ದರು ಸಹ ಮೃತಪಟ್ಟಿರುವುದಾಗಿ ಸುಳ್ಳು ಹೆಸರು ವಿಳಾಸ ನೀಡಿರುವುದು ತನಿಖೆಯಿಂದ ದೃಢಪಟ್ಟಿತ್ತೆಂದು ನ್ಯಾಯಾಲಯಕ್ಕೆ ವರದಿ ನೀಡಿದ್ದು ಸದರಿ ನ್ಯಾಯಾಲಯವು ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಬಂದ ದೂರಿನ ಅನ್ವಯ ಕೇಸು ದಾಖಲಿಸಿರುತ್ತೆ.


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 94/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ:02-04-2013ರಂದು ಪಿರ್ಯಾದಿ ದೇವೇಗೌಡ ಬಿನ್. ದಾಸೇಗೌಡ, ಸಂತೆಬಾಚಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 31-03-2013 ರಂದು ಸಂಜೆ 0530 ಗಂಟೆಯಲ್ಲಿ ಸಂತೆಬಾಚಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ| ನಿಂದ ಅವರ ಹೆಂಡತಿ ರತ್ನಮ್ಮ ಕೊಂ. ದೇವೇಗೌಡ, ಸಂತೆಬಾಚಹಳ್ಳಿ ಗ್ರಾಮ ರವರು ರಾತ್ರಿ ಗ್ರಾಮದಲ್ಲಿ ಆಕರ್ೆಸ್ಟ್ರಾ ಕಾರ್ಯಕ್ರಮವಿದ್ದು ವಾಪಸ್ ಮದ್ಯರಾತ್ರಿ ಮನೆಗೆ ಬಂದು ಎಲ್ಲರೂ ಮಲಗಿದ್ದು ಬೆಳಗಿನ ಜಾವ 05.30 ಗಂಟೆಗೆ ಎದ್ದಾಗ ಪಿರ್ಯಾದಿ ಹೆಂಡತಿ ರತ್ನಮ್ಮ ಪಿರ್ಯಾದಿ ಜೊತೆಯಲ್ಲಿಯೇ ಇದ್ದು ಬೆಳಿಗ್ಗೆ 07.00 ಗಂಟೆ ವೇಳೆಗೆ ನೋಡಲಾಗಿ ಪಿರ್ಯಾದಿ ಹೆಂಡತಿ ರೂಮಿನಲ್ಲಿ ಇರಲಿಲ್ಲ. ನಂತರ ಸಮಯ 07.30 ಆದರೂ ಸಹ ತನ್ನ ಹೆಂಡತಿ ಕಾಣದ ಕಾರಣ ಮನೆಯಲ್ಲೆಲ್ಲಾ ಹುಡುಕಾಡಿ ವಿಚಾರ ಮಾಡಲಾಗಿ ಎಲ್ಲೂ ಸಿಗಲಿಲ್ಲ. ನಂತರ 08.00 ಗಂಟೆಯಾದರೂ ಎಲ್ಲೂ ಕಾಣದ ಕಾರಣ ಬಂಧುಗಳ ಮನೆಯಲ್ಲಿ, ಸ್ನೇಹಿತರ ಕಡೆಗಳಲ್ಲಿ ಎಲ್ಲಾ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲವೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 01-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-04-2013 ರಂದು ಒಟ್ಟು 50 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ರಸ್ತೆ ಅಪಘಾತ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  1 ವಾಹನ ಕಳವು ಪ್ರಕರಣ,  1 ಆಕಸ್ಮಿಕ ಅಪಘಾತ ಪ್ರಕರಣ,  1 ವಂಚನೆ ಪ್ರಕರಣ,  1 ಅಪಹರಣ ಪ್ರಕರಣ ಹಾಗು 42 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.       


ರಸ್ತೆ ಅಪಘಾತ ಪ್ರಕರಣಗಳು :

1. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 279,304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 01-04-2013 ರಂದು ಪಿರ್ಯಾದಿ ಮಹದೇವಪ್ಪ ಬಿನ್. ಲೇ|| ಮರಿಮಾದಪ್ಪ, 55 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ 02 ಸಿ 8243 ರ ಲಾರಿ ಚಾಲಕ ಹೆಸರು ವಿಳಾಸ ತಿಳಿಯಬೇಕಾಗಿದೆ ಲಾರಿಯನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಹೀರೋಹೊಂಡಾ ಮೋಟಾರ್ ಸೈಕಲ್ ಗೆ,  ಡಿಕ್ಕಿ ಹೊಡೆದು ಸುಮಾರು 15 ಅಡಿ ದೂರು ಎಳೆದುಕೊಂಡು ಹೋಗಿರುತ್ತೆ. ನಂತರ ಪಿರ್ಯಾದಿಯವರು ಹಾಗೂ ಇತರ ಜನರು 108 ಅಂಬ್ಯುಲೆನ್ಸ್ ಗೆ, ಪೋನ್ ಮಾಡಿ ಕರೆಸಿ ತಲಕಾಡು ಆಸ್ಪತ್ರೆಗೆ ದಾಖಲಿಸಿದ್ದು, ಮೋಟಾರ್ ಸೈಕಲ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 279,304(?) ಐ.ಪಿ.ಸಿ ಕೂಡ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 01-04-2013 ರಂದು ಪಿರ್ಯಾದಿ ಮಹದೇವು ಬಿನ್. ಭದ್ರಯ್ಯ, 52 ವರ್ಷ, ಒಕ್ಕಲಿಗರು, ಹೊಟೇಲ್ನಲ್ಲಿ ಕೆಲಸ, ವಾಸ ಚನ್ನೇಗೌಡ ಬಡಾವಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 31-03-2013 ರಂದು ರಾತ್ರಿ 09-30 ಗಂಟೆಯಲ್ಲಿ ಮದ್ದೂರು ಟೌನಿನ ಚನ್ನೆಗೌಡ ಬಡಾವಣೆಯ 1ನೇ ಕ್ರಾಸ್ ನೇರದ ರಸ್ತೆಯಲ್ಲಿ ಯಾವುದೋ ಒಂದು 407 ಗೂಡ್ಸ್ ಟೆಂಪೋ ವಾಹನ ಪಿರ್ಯಾದಿಯ ಹೆಂಡತಿಗೆ ಅಪಘಾತ ಮಾಡಿ ಹೊರಟು ಹೋಗಿರುತ್ತದೆ, ತಕ್ಷಣ ಆಟೋ ಮೂಲಕ ಅವರನ್ನು ಮದ್ದೂರಿನ ಸಕರ್ಾರಿ ಆಸ್ಪತ್ರೆಗೆ ತರಲಾಗಿ ಅಲ್ಲಿನ ವೈದ್ಯರು ಪಿರ್ಯಾದಿಯವರ ಹೆಂಡತಿಯನ್ನು ಪರೀಕ್ಷಿಸಿ ಅವರು ಮೃತಪಟ್ಟಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐಎಂವಿ ಆಕ್ಟ್.

ದಿನಾಂಕ: 01-04-2013 ರಂದು ಪಿರ್ಯಾದಿ ಡಾ.ಕೆ.ಎನ್. ಉಮೇಶ ಬಿನ್. ಕೆ.ಆರ್. ನಾಗರಾಜ್ ರಾವ್, 57 ವರ್ಷ, ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-04-13 ರಂದು ಬೆಳಿಗ್ಗೆ 09-50 ಗಂಟೆಯಲ್ಲಿ ರಾಗಿಮುದ್ದನಹಳ್ಳಿ -ಕೋಡಿಶೆಟ್ಟಿಪುರ ಗ್ರಾಮದ ಮದ್ಯೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಆರೋಪಿ ಚಂದ್ರಶೇಖರ್ ರಾವ್ ನಂ. ಕೆಎ-04-ಹೆಚ್.ಎನ್-5938  ಪಲ್ಸರ್  ಮೋಟಾರ್ ಸೈಕಲ್ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ  ಒಡಿಸಿಕೊಂಡು ಬಂದು ರಸ್ತೆಯ ಬಲಬದಿಗೆ ಅಂದರೆ ಕಾರಿನ ಎಡಭಾಗಕ್ಕೆ  ನುಗ್ಗಿ ಡಿಕ್ಕಿ ಹೊಡಿಸಿದ  ಡಿಕ್ಕಿ ಹೊಡೆಸಿದ ರಭಸಕ್ಕೆ ಮೋಟಾರ್ ಸೈಕಲ್ ಹಿಂಭಾಗ ಕುಳಿತ್ತಿದ್ದವನು ಗಾಡಿಯಿಂದ ಹಾರಿ ಡಿವೈಡರ್ ಮೇಲೆ ಬಿದ್ದನು ಡಿಕ್ಕಿ ಮಾಡಿಸಿದ ಆರೋಪಿ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 11/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 01-04-2013 ರಂದು ಪಿರ್ಯಾದಿ ಬೈರೇಗೌಡ ಬಿನ್. ಲೇ| ಬೋರೇಗೌಡ, ದೊಡ್ಡಸೋಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 31-03-2013 ರಂದು ಜವರೇಗೌಡ ಬಿನ್. ಲೇಟ್. ಬೋರೇಗೌಡ, ದೊಡ್ಡಸೋಮನಹಳ್ಳಿ, 42 ವರ್ಷ ರವರು ಹೊಟ್ಟೆನೋವಿನ ಔಷಧಿ ಎಂದು ಯಾವುದೋ ಕ್ರಿಮಿನಾಶಕ ಔಷದಿಯನ್ನು ಆಕಸ್ಮಿಕವಾಗಿ ಸೇವಿಸಿದ್ದು ಚಿಕಿತ್ಸೆಗೆ ಕೆಆರ್ಪೇಟೆ ಆಸ್ಪತ್ರೆಗೆ ಸೇರಿಸಿದ್ದು ನಂತರ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 137/13 ಕಲಂ. 379 ಐ.ಪಿ.ಸಿ.

ದಿನಾಂಕ: 01-04-2013 ರಂದು ಪಿರ್ಯಾದಿ ಗಂಗಾಧರ ಬಿನ್. ಬೋರೇಗೌಡ, ಹನುಮಂತನನಗರ, ಪಾಂಡವಪುರ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:31-03-2013 ರಂದು ಹನುಮಂತನಗರ, ಪಾಂಡವಪುರ ಟೌನ್ನಲ್ಲಿ ಪಿರ್ಯಾದಿಯವರ ಬಾಬ್ತು ನಂ. ಕೆಎ-11-ಡಬ್ಲೂ-6264 ಹೀರೋಹೋಂಡಾ ಪ್ಯಾಷನ್ ಪ್ರೋ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಆಕಸ್ಮಿಕ ಅಪಘಾತ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 108/13 ಕಲಂ. ಕಲಂ. 304(ಎ) ಕೂಡ 34 ಐ.ಪಿ.ಸಿ.

       ದಿನಾಂಕ: 01-04-2013 ರಂದು ಪಿರ್ಯಾದಿ ಲಕ್ಷ್ಮೀ ಕೋಂ. ರಂಗಸ್ವಾಮಿ @ ರಂಗ, ಗಿರಿಜಾ ಸ್ಲಂ, ಪೌರಕಾಮರ್ಿಕರ, ಕಾಲೋನಿ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-04-13 ರಂದು ಬೆಳಿಗ್ಗೆ 07-00 ಗಂಟೆ, ಮಂಡ್ಯ ಸಿಟಿ. ಗಿರಿಜಾ ಸ್ಲಂ, ಪೌರಕಾಮರ್ಿಕರ ಕಾಲೋನಿ, ವರಲಕ್ಷ್ಮೀ ಮಿಲಿಟರಿ ಹೋಟೆಲ್ ಪಕ್ಕದಲ್ಲಿ ಪಿರ್ಯಾದಿಯವರ ಗಂಡ ಕಕ್ಕಸ್ಸು ಗುಂಡಿಯನ್ನು  ಸ್ವಚ್ಚಗೊಳಿಸಲು  ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಈ ತೆರೆದ ಗುಂಡಿಯ ಒಳಗೆ ಬಿದ್ದಾಗ ಕೂಗಿಕೊಂಡಿದ್ದು ತಕ್ಷಣ ಪಕ್ಕದಲ್ಲಿದ್ದ ಸರೋಜ ಎಂಬುವವರು ಒಂದು ಉದ್ದನೆಯ ಕೋಲನ್ನು ನೀಡಿದರೂ ಸಹ  ಮೇಲೆ ಬರಲಾಗದೇ ಸಾವನ್ನಪ್ಪಿರುತ್ತಾರೆ ಆದ್ದರಿಂದ ಆರೋಪಿಗಳಾದ 1.] ಸಂದೀಪ ವರಲಕ್ಷ್ಮೀ 2] ಆಯುಕ್ತರು, ನಗರ ಸಬೆ ಮಂಡ್ಯಸಿಟಿ 3] ಆರೋಗ್ಯ ನಿರೀಕ್ಷಕರು ನಗರ ಸಬೆ ಮಂಡ್ಯ ಸಿಟಿ ರವರುಗಳು ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 417, 420 ಐಪಿಸಿ.

ದಿನಾಂಕ: 01-04-2013 ರಂದು ಪಿರ್ಯಾದಿ ವರಲಕ್ಷ್ಮೀ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಿವಕುಮಾರ್ ರವರು ಪಿರ್ಯಾದಿರವರನ್ನು ಮದುವೆಯಾಗುತ್ತೇನೆಂದು ಹೇಳಿ ನಂಬಿಸಿ ಪ್ರೀತಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ನೀನು ಪೋನು ಮಾಡಬೇಡ, ಮಾಡಿದರೆ ಕೇಸು ಹಾಕಿಸುತ್ತೇನೆ ನಿನ್ನ ಮನೆ ಹತ್ತಿರ ಜನರನ್ನು ಕಳುಹಿಸಿ ಮರ್ಯಾದೆ ತೆಗಿತೀನಿ, ನಿನ್ನನ್ನು ಯಾರು ಮದುವೆಯಾಗದ ಹಾಗೆ ಮಾಡುತ್ತೇನೆ ಎಂದು ಬೈದು ಗಲಾಟೆ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ನಾಗಮಂಗಲ ಟೌನ್ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 366(ಆ) 343-506 ಕೂಡ 149 ಐ.ಪಿ.ಸಿ.

ದಿನಾಂಕ: 01-04-2013 ರಂದು ಪಿರ್ಯಾದಿ ವೆಂಕಟೇಗೌಡರ ಮಗಳು,  17 ವರ್ಷ. ಪ್ರಥಮ ಪಿಯು,ಸಿ,  ವಕ್ಕಲಿಗರು. ತೊರೆಮಲ್ಲನಾಯಕನಹಳ್ಳಿ ಗ್ರಾಮ, ಯವರು ನಾಗಮಂಗಲ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಆರೋಪಿ ಲೋಕೇಶನು, ಆಟೋ ನಿಮ್ಮ ಊರಿಗೆ ಹೋಗುತ್ತಿದೆ ಎಂಧು ಹೇಳುತ್ತಿದ್ದಾಗ ನಾನು ಆಟೋದಲ್ಲಿ ಕುಳಿತುಕೊಂಡೆ ನಂತರ ಆಟೋದಲ್ಲಿ ಅನಿತಾ ಎಂಬುವವಳು ಕುಳಿತ್ತಿದ್ದು ನನ್ನ ತಲೆಯನ್ನು ಸವರಿದಾಗ ಪಿರ್ಯಾದಿಗೆ ಪ್ರಜ್ಞೆ ತಪ್ಪಿ ಲೋಕೇಶನು ಆಟೋವನ್ನು  ತೋಟದ ಮನೆಯ ಕಡೆಗೆ  ಓಡಿಸಿಕೊಂಡು ಹೋಗಿ ನನ್ನನ್ನು  ಒಂದು ತೋಟದ ಮನೆಯಲ್ಲಿ  ಇರಿಸಿರುತ್ತಾರೆ ಹಾಗು ನನಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ ಅವರುಗಳು ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 31-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 31-03-2013 ರಂದು ಒಟ್ಟು 45 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  4 ಮನುಷ್ಯ ಕಾಣೆಯಾದ ಪ್ರಕರಣಗಳು, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ ಹಾಗು 37 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.      

ಕಳ್ಳತನ ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 457-380 ಐ.ಪಿ.ಸಿ.

ದಿನಾಂಕ: 31-03-2013 ರಂದು ಪಿರ್ಯಾದಿ ಡಿ.ಕೆ. ಬೋರಯ್ಯ ಬಿನ್. ಲೇಟ್. ಕುಳ್ಳಯ್ಯ, ಮುಖ್ಯ ಶಿಕ್ಷಕರು, ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಚ್. ಮಲ್ಲಿಗೆರೆ ಫಾರಂ, ಮಂಡ್ಯ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಹೆಚ್. ಮಲ್ಲಿಗೆರೆ ಫಾರಂನ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲ ಬೀಗ ಹೊಡೆದು ಒಳಗೆ ಹೋಗಿ ಒಳಗಡೆ ಇಟ್ಟಿದ್ದ, ಬಿಸಿಯೂಟದ 02 ಗ್ಯಾಸ್ ಸಿಲಿಂಡರ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಒಂದು ಭರ್ತಿ  ಹಾಗೂ ಮತ್ತು ಒಂದು ಅರ್ಧ ಗ್ಯಾಸ್ ಇದ್ದ ಸಿಲಿಂಡರ್ ಆಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 379 ಐ.ಪಿ.ಸಿ.

ದಿನಾಂಕ: 31-03-2013 ರಂದು ಪಿರ್ಯಾದಿ ಕೆ.ಸಿ.ಮಂಜುನಾಥ, ವ್ಯವಸಾಯಗಾರರು, ಬಿದರಹಳ್ಳಿ, ಹಾಲಿ ವಾಸ ಹೊಸ ಬೀದಿ, ಕಿಕ್ಕೇರಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಜಮೀನಿ -ನಲ್ಲಿ ಸುಮಾರು 10000/- ರೂ ಬೆಲೆವುಳ್ಳ 1] 35 ಮೀ ಉದ್ದದ, ಹೆಚ್.ಡಿ.ಪಿ.ಇ. 3 ಇಂಚು ದಪ್ಪದ ಪೈಪು, 2] ಕಿಲರ್ೋಸ್ಕರ್ ಕಂಪನಿಯ ಪುಟ್ವಾಲ್ಟ್ ಅಳವಡಿಸಿದ್ದು  ದಿನಾಂಕ: 27-03-2013 ರಂದು ಯಾರೋ ಕಳ್ಳರು ಮೇಲ್ಕಂಡ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 31-03-2013 ರಂದು ಪಿರ್ಯಾದಿ ಮಂಜಮ್ಮ ಕೋಂ. ಕಾಳಪ್ಪ, ಕೃಷ್ಣಾಪುರ ಗ್ರಾಮ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ವನಜ ಬಿನ್. ಕಾಳಪ್ಪ, 17 ವರ್ಷ, ವಿದ್ಯಾಥರ್ಿನಿ, ಅಲೆಮಾರಿ ಜನಾಂಗ, ಕೃಷ್ಣಾಪುರ ಗ್ರಾಮ, ಕಿಕ್ಕೇರಿ ರವರು ಪಿಯುಸಿಯಲ್ಲಿ ಫೇಲ್ ಆಗಿದ್ದು, ಫೇಲ್ ಆಗಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅವರ ಮನೆಯಲ್ಲಿ ಸೀಮೆಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 100/13 ಕಲಂ. ಹುಡುಗರು ಕಾಣೆಯಾಗಿದ್ದಾರೆ

       ದಿನಾಂಕ: 31-03-2013 ರಂದು ಪಿರ್ಯಾದಿ ಮಹೇಶ ಹೆಚ್,ಸಿ ಬಿನ್. ಲೇಟ್. ಚಿಕ್ಕಪುಟ್ಟಯ್ಯ, ಮಾರುತಿನಗರ, 7ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ  ಅವರ ಮಗ ಕೇಶವ, 12 ವರ್ಷ, 6ನೇ ತರಗತಿ, ರವರು ಹಾಗು ವಿಶ್ವನಾಥ ಬಿನ್. ರಾಜು, 11 ವರ್ಷ ರವರುಗಳು ದಿನಾಂಕ:29-03-2013 04-30 ಗಂಟೆ 7ನೇ ಕ್ರಾಸ್, ಮಾರುತಿನಗರಮಂಡ್ಯ ಸಿಟಿ ಪಿರ್ಯಾದಿಯವರ ಮನೆಯ ಮುಂದೆ ಆಟವಾಡುತ್ತಿದ್ದಾಗ ಆಟವಾಡಿಕೊಂಡಿದ್ದವರು ರಾತ್ರಿಯಾದರೂ ವಾಪಸ್ ಮನೆಗೆ ಬಂದಿರುವುದಿಲ್ಲ. ರಾಜುರವರ ಮಗ ವಿಶ್ವಾಥನು ಜೊತೆಯಲ್ಲಿ ಸೈಕಲ್ ತೆಗೆದುಕೊಂಡು ಹೋಗಿರುತ್ತಾನೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 31-03-2013 ರಂದು ಪಿರ್ಯಾದಿ ವೈ.ಎಂ.ಯೋಗಾನಂದ ಬಿನ್. ಲೇಟ್. ವೈ.ಕೆ.ಮರಿಸಿದ್ದೇಗೌಡ, ವಾಸ ನಂ. 1550, 7ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ವೈ.ಎಂ.ಚೇತನಾನಂದ, 40 ವರ್ಷ, ಒಕ್ಕಲಿಗರು, ಮಾನಸಿಕ ಅಸ್ವಸ್ಥ, ವಾಸ ನಂ. 1550, 7ನೇ ಕ್ರಾಸ್, ಚಾಮುಂಡೇಶ್ವರಿ-ನಗರ, ಮಂಡ್ಯ ಸಿಟಿ ರವರು ದಿನಾಂಕ: 01-03-13  ರಂದು 03-00 ಗಂಟೆಯಲ್ಲಿ ಫಿರ್ಯಾದಿಯವರ ಮನೆ, 7ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿಯಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. ಹುಡುಗಿ ಕಾಣಿಯಾಗಿದ್ದಾಳೆ.

ದಿನಾಂಕ: 31-03-2013 ರಂದು ಪಿರ್ಯಾದಿ ಜಯಕುಮಾರ್ ಬಿನ್. ಕಾಡೇಗೌಡ, ಮಾದರಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ 20 ವರ್ಷದ ಮಗಳು ದಿನಾಂಕ: 28-03-2013 ರಂದು ಮದ್ಯಾಹ್ನ 02-30 ಗಂಟೆಯಲ್ಲಿ, ಕೆ.ಶೆಟ್ಟಹಳ್ಳಿ ಗೇಟ್ (ವೇಬ್ರಿಡ್ಜ್ ) ನಿಂದ ತನ್ನ ಅಜ್ಜಿ ಮನೆಗೆ ಹೋಗುತ್ತೇನೆಂದು ಹೋದವಳು ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. ಹುಡುಗಿ ಕಾಣಿಯಾಗಿದ್ದಾಳೆ.

ದಿನಾಂಕ: 31-03-2013 ರಂದು ಪಿರ್ಯಾದಿ ಮಾಸ್ತಯ್ಯ ಬಿನ್. ಚಿಕ್ಕೋನು, ಬೆಸಗರಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ 20 ವರ್ಷದ ಮಗಳು ದಿನಾಂಕ: 28-03-2013 ರಂದು ಬೆಸಗರಹಳ್ಳಿ ಗ್ರಾಮ, ಮದ್ದೂರು ತಾ. ನಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :  

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 3 ಕ್ಸಾಸ್. (V) (X) (XI) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ ಹಾಗು 324 ಕೂಡ 34 ಐ.ಪಿ.ಸಿ.

ದಿನಾಂಕ: 31-03-2013 ರಂದು ಪಿರ್ಯಾದಿ ಕೆ ನಾಗಮ್ಮ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಶಿವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿವಳ್ಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿರವರು ಪ್ರಾಥಮಿಕ ಆರೋಗ್ಯ ಕೇಂದ್ರ ಶಿವಳ್ಳಿಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ತಮ್ಮ ಮಗಳಾದ ಹೆಚ್,ಆರ್ ಶ್ವೇತಾರಾಣಿರವರೊಂದಿಗೆ ವಾಸವಾಗಿರುತ್ತಾರೆ. ದಿನಾಂಕ: 31-03-13 ರಂದು ಬೆಳಿಗ್ಗೆ 9-00 ಗಂಟೆಗೆ ನಲ್ಲಿಯಲ್ಲಿ ನೀರು ಹಿಡಿಯಲು ಪಿರ್ಯಾದಿಯವರ ಮಗಳು ಹೋಗಿದ್ದು, ಅದೇ ವಸತಿ ಗೃಹದಲ್ಲಿ ವಾಸವಾಗಿರುವ ಲಲಿತಮ್ಮರವರ ಸಂಬಂದಿ ಶರತ್, ತಾಯಿ ಹಾಗೂ ಲ್ಯಾಬ್ ಟೆಕ್ನೀಷಿಯನ್ ಸವಿತಾರವರು ನಲ್ಲಿಯಲ್ಲಿ ನೀರು ಹಿಡಿಯಬೇಡ ಎಂದು ಹೇಳುತ್ತಿರುವಾಗ ಪಿರ್ಯಾದುದಾರರು ಪ್ರಶ್ನಿಸಿದರು. ಆಗ ಆರೋಪಿಗಳಾದ 1]ಡಿ.ಲಲಿತಮ್ಮ, 2]ಶರತ್. 3]ಲಲಿತಮ್ಮರ ತಾಯಿ ಹಾಗೂ 4]ಸವಿತಾ ರವರು ಪಿರ್ಯಾದಿ ಹಾಗೂ ಆವರ ಮಗಳನ್ನು ಏನೆ ಹೊಲೆಯ ಬಡ್ಡೀರಾ ಎಂದು ಜಾತಿ ನಿಂದನೆ ಮಾಡಿ ತಡೆದು ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಒಂದು ಕಲ್ಲಿನಿಂದ ಹಾಗೂ ಕೈಯಿಂದ ಹೊಡೆದು ಹಲ್ಲೆ ಮಾಡಿ ನೊವುಂಟುಮಾಡಿದರು ಆಗ ಅಲ್ಲೇ ಇದ್ದ ಸುಗುಣ ಬೋರೇಗೌಡ ಎಸ್.ಕೆ.ಪ್ರಕಾಶ್ ಜಗಳ ಬಿಡಿಸಿ ಸಮಾಧಾನಪಡಿಸಿದರು ಅದಾಗ್ಯೂ ಲಲಿತಮ್ಮ ಃಎ ಹೊಲೆಯ ಬಡ್ಡಿ ನಿನಗೆ ಇಷ್ಟಕ್ಕೇ ಮುಗಿಯಲಿಲ್ಲ ಜೈಲಿಗೆ ಹೋದರೂ ಸರಿಯೇ ನಿನ್ನನ್ನು ಕೊಲೆ ಮಾಡುತ್ತೇನೆಂದು ಕೊಲೆ ಬೆದರಿಕೆ ಹಾಕಿರುತ್ತಾಳೆ ಎಂದು ಇತ್ಯಾದಿಯಾಗಿ ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.