Saturday, February 25, 2012

DCR Of Mandya Dist As on 2502-2012

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳು ವರದಿಯಾಗಿ ಅದರಲ್ಲಿ 5 ರಸ್ತೆ ಅಪಘಾತ ಪ್ರಕರಣ. 3 ಕಳ್ಳತನ ಪ್ರಕರಣ. 2 ಮನುಷ್ಯ ಕಾಣೆಯಾದ ಪ್ರಕರಣ. 1 ಅತ್ಮಹತ್ಯೆಗೆ ಪ್ರಚೋಧನೆ ಪ್ರಕರಣ. 2 ಪಾಂಡವಪುರ ಪೊಲೀಸ್ ಠಾಣೆ. 1 ಕೊಲೆ ಪ್ರಕರಣ ಮತ್ತು 13 ಇತರೆ ಪ್ರಕರಣಗಳು ವರದಿಯಾಗಿರುತ್ತೆ

ಕಳ್ಳತನ ಪ್ರಕರಣ

ಕಿರುಗಾವಲು ಪೊಲೀಸ್ ಠಾಣೆ

1] ಮೊ.ಸಂ 31/12 ಕಲಂ 457-380 ಐಪಿಸಿ ದಿನಾಂಕ 25-02-12 ರಂದು ಪಿರ್ಯಾಧಿ ಬಿ ನಾಗರಾಜು ಮತ್ತು ನನ್ನ ಹೆಂಡತಿ ರುಕ್ಮಿಣಿ ಊಟ ಮುಗಿಸಿ ಮಲಗಿದ್ದಾಗ ಯಾರೋ ಕಳ್ಳರು ಪಿರ್ಯಧಿಯವರ ಹೆಂಡತಿ ಕತ್ತಿನಲ್ಲಿದ್ದ ಮಾಂಗಲ್ಯದ ಸರ ಮತ್ತು ರೂಮಿನ ಬೀರುವಿನಲ್ಲಿಟ್ಟಿದ್ದ 1) ನೆಕ್ಲೆಸ್-20 ಗ್ರಾಂ, 2) ನೆಕ್ಲೆಸ್-17-00 ಗ್ರಾಂ, 3) ಪ್ಯಾನ್ಸಿ ಓಲೆ-4 ಗ್ರಾಂ, 4) ಸಾದ ಓಲೆ ಜುಮುಕಿ-10 ಗ್ರಾಂ ಮತ್ತು 82000 ರೂ ಹಣವನ್ನು ಯಾರೋ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಹಾಗೂ ಹೆಂಡತಿಯ ಕತ್ತಿನಸರ ಮತ್ತು ಅದರಲ್ಲಿದ್ದ ತಾಳಿ, ಗುಂಡು, ಕಾಸು ಎಲ್ಲಾ ಸೇರಿ 40 ಗ್ರಾಂ. ತೂಕವಿರುತ್ತದೆ. ಒಟ್ಟು ಅಂದಾಜು ಮೌಲ್ಯ 2,64,000/-ರೂ

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ

2] ಮೊ.ಸಂ 43/12 ಕಲಂ 380 ಐಪಿಸಿ ಪಿರ್ಯಾದಿ ಚಿಕ್ಕಣ್ಣ ರವರ ಮಗ ಚೇತನ್ನನ್ನು ಪಶ್ಚಿಮ ಠಾಣೆಯ ಪೊಲೀಸರು ಮೊ.ಸಂ.236/11 ಕಲಂ-379 ಐಪಿಸಿ ಕೇಸಿನಲ್ಲಿ ದಸ್ತಗಿರಿ ಮಾಡಿ ಆತನಿಂದ ತಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದ ಚಿನ್ನದ ನಾಗರವನ್ನು ವಶಪಡಿಸಿಕೊಂಡಿರುವುದಾಗಿ ವಿಚಾರ ತಿಳಿದು ಮಂಡ್ಯ ಪಶ್ಚಿಮ ಠಾಣೆಗೆ ಬಂದು ವಿಚಾರ ಮಾಡಲಾಗಿ ಚಿನ್ನದ ನಾಗರವನ್ನು ತೋರಿಸಿದ್ದು ಇದು ಈಗ್ಗೆ ಸುಮಾರು 10 ತಿಂಗಳ ಹಿಂದೆ ಪಿರ್ಯಾದಿಯವರ ಮನೆಯಲ್ಲಿ ಕಳವು ಆಗಿರುವುದಾಗಿ ಗುರುತಿಸಿದ್ದು ಇದರ ಬೆಲೆ ಸುಮಾರು 20,000-00 ರೂ.ಗಳಾಗಿರುತ್ತೆ

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ

3] ಮೊ.ಸಂ 44/12 ಕಲಂ 379 ಐಪಿಸಿ ದಿನಾಂಕ 25-02-12 ರಂದು ಯಾರೋ ಕಳ್ಳರು ಪಿರ್ಯಧಿ ನಾಗಣ್ಣ ರವರು ಅವರ ಆಟೋ ಡೋರ್ನ ಬೀಗವನ್ನು ಯಾವುದೋ ಕೀಯಿಂದ ತೆಗೆದು ಸಿಲಿಂಡರನ್ನು ಕಳವು ಮಾಡಿರುತ್ತಾರೆ. ಸಿಲಿಂಡರ್ನಲ್ಲಿ 4 ಕೆಜಿ ಗ್ಯಾಸ್ ಇದ್ದು ಒಟ್ಟು 12 ಕೆಜಿ ತೂಕವಿರುತ್ತೆ.

ಮನುಷ್ಯ ಕಾಣೆಯಾದ ಪ್ರಕರಣ

ಕೆರಗೋಡು ಪೊಲೀಸ್ ಠಾಣೆ

1] ಮೊ.ಸಂ 32/12 ಕಲಂ ಹೆಂಗಸು ಕಾಣೆಯಾಗಿದ್ದಾಳೆ ದಿನಾಂಕ 25-02-12 ರಂದು ಪಿರ್ಯಾದಿ ಬಿ,ಸಿ, ಸಿದ್ದೇಗೌಡ ರವರ ತಮ್ಮನಾದ ಕಾಣೆಯಾದ ಬಿ.ಸಿ.ಸ್ವಾಮಿ ಎಂಬುವರು ದೊಡ್ಡಬಾಣಸವಾಡಿ ಗ್ರಾಮದ ಅವರ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ದಿಃ 08-02-12 ರಂದು ಮಧ್ಯಾಹ್ನ 2-00 ಗಂಟೆಯಲ್ಲಿ ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿರುತ್ತಾರೆ

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ

2] ಮೊ.ಸಂ 27/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 25-02-12 ರಂದು ಕಾಣೆಯಧ ಮನುಷ್ಯ ಎಂ.ನಂಜೇಗೌಡ ಬಿನ್ ನಂಜೇಗೌಡ, 55 ವರ್ಷ ದಿನಾಂಕ:24-12-2011 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಿ ಬರುವುದಾಗಿ ಹೇಳಿ ನಮ್ಮ ಮನೆಯಿಂದ ಹೋದವರು, ಮತ್ತೆ ವಾಪಸ್ಸು ಮನೆಗೆ ಬಂದಿರುವುದಿಲ್ಲ,

ಅತ್ಮಹತ್ಯೆಗೆ ಪ್ರಚೋಧನೆ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 74/12 ಕಲಂ 306 ಐಪಿಸಿ ಆರೋಪಿಗಳಾದ ಸುಧಾ, ಪುಟ್ಟೇಗೌಡ ಮತ್ತು ನಿಂಗೇಗೌಡ ರವರುಗಳು ಮೃತ ಕಾರ್ತಿಕನಿಗೆ ನೀಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆ ಕಿರುಕುಳವನ್ನು ತಾಳಲಾರದೆ ಕಾರ್ತಿಕನು ನೇಣು ಹಾಕಿಕೊಂಡು ಆತ್ಮ ಹತ್ಯ ಮಾಡಿಕೊಂಡಿರುವುದಾಗಿ ಇತ್ಯಾದಿ ದೂರು

ಪಾಂಡವಪುರ ಪೊಲೀಸ್ ಠಾಣೆ

ಯು.ಡಿ.ಆರ್ ಪ್ರಕರಣ

1] ಯು.ಡಿ.ಆರ್ ನಂ 10/12 ಕಲಂ 174 ಸಿ.ಆರ್.ಪಿ.ಸಿ ದಿನಾಂಕ 25-02-12 ರಂದು ಮೃತ ಕಾರ್ತಿಕ್ ನಿಗೂ ಮತ್ತು ಅವರ ಅತ್ತಿಗೆ ಸುಧಾಳಗೆ ಮೃತನ ಅಣ್ಣ ಎಂ ಪಾಪೇಗೌಡ ರವರ ಉಧ್ಯೋಗವನ್ನು ಅನುಕಂಪದ ಮೇಲೆ ಪಡೆಯುವ ವಿಚಾರದಲ್ಲಿ ಜಗಳವಾಗಿದ್ದು,. ಹಾಗೂ ಮೃತ ಅತ್ತಿಗೆ ಸುಧಾಳು ಮೃತ ಸರಿಯಾಗಿ ಊಟ ಕೊಡದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಿದ್ದು ಇದರಿಂದ ಮನನೊಂದು ನೇಣು ಹಾಕಿಕೊಂಡಿ ಅತ್ಮಹತ್ಯೆ ಮಾಡಿಕೊಂಡಿರುತ್ತಾನೆ ಮತ್ತು ಮೃತ ಸಾವಿನ ಬಗ್ಗೆ ಸಂಶಯವಿರುತ್ತದೆ

ಬೆಳ್ಳೂರು ಪೊಲೀಸ್ ಠಾಣೆ

2] ಯು.ಡಿ.ಆರ್ ನಂ 03/12 ಕಲಂ 174 ಸಿ.ಆರ್.ಪಿ.ಸಿ ಪಿರ್ಯಾಧಿ ಹೆಚ್.ಎನ್. ಲೀಲಾವತಿ ರವರ ಗಂಡ ಚಿಕ್ಕೇಗೌಡ @ ರಾಜೇಶರವರು ತರಕಾರಿ ವ್ಯಾಪಾರದಲ್ಲಿ ಲಾಸ್ ಆದ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷವನ್ನು ಸೇವಿಸಿದ್ದವನ್ನು ಚಿಕಿತ್ಸೆಗಾಗಿ ನಾಗಮಂಗಲ ಸಕರ್ಾರಿ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾದೆ ಮಧ್ಯಾಹ್ನ 12-00 ಗಂಟೆಯಲ್ಲಿ ಮೃತಪಟ್ಟಿರುತ್ತಾನೆ

ಕೊಲೆ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 78/12 ಕಲಂ 302 ಐಪಿಸಿ ಮೃತ ಶಶಿಕುಮಾರ ನು ದಿನಾಂಕ 09-10-11 ರಂದು ಪಾನಮತ್ತನಾಗಿ ಕಲ್ಯಾಣ ಮಂಟಪದ ಹತ್ತಿರೆ ಆಯತಪ್ಪಿ ಬಿದ್ದ ಪರಿಣಾಮ ಆತನ ತಲೆಗೆ ತೀವ್ರವಾಗಿ ಪೆಟ್ಟಾಗಿ ಮೃತ ಪಟ್ಟಿದ್ದು. ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯ ಯು.ಡಿ.ಆರ್ ನಂ 36/2011 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿದ್ದು. ಸದರಿ ಶವ ಪರೀಕ್ಷೆ ನಡೆಸಿದ ವೈಧ್ಯರು ಖಿಜ .ಔ. ಚಿಜತಜಜ ಣಠ ಟಿತಜಣರಚಿಣಜ ಠಟಿ ಣಜ ಟಟಿಜ ಠಜಿ ಊಠಟಛಿಜಜ ಎಂದು ವರದಿ ನೀಡಿದ ಮೇರೆಗೆ ಮೊ.ಸಂ 78/12 ಕಲಂ 302 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿ ತನಿಖಾ ಕ್ರಮ ಕೈಗೊಂಡಿರುತ್ತೆ

DCR Of Mandya Dist As on 24-02-2012

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 30 ಪ್ರಕರಣಗಳು ವರದಿಯಾಗಿ ಅದರಲ್ಲಿ 5 ರಸ್ತೆ ಅಪಘಾತ ಪ್ರಕರಣ 5 ಮನುಷ್ಯ ಕಾಣೆಯಾದ ಪ್ರಕರಣ. 3 ಯು.ಡಿ.ಆರ್ ಪ್ರಕರಣ. 4 ಕಳ್ಳತನ ಪ್ರಕರಣ. 1 ಅತ್ಯಾಚಾರ ಪ್ರಕರಣ ಮತ್ತು 12 ಇತರೆ ಪ್ರಕರಣಗಳು ವರದಿಯಾಗಿರುತ್ತೆ

ಮನುಷ್ಯ ಕಾಣೆಯಾದ ಪ್ರಕರಣ

ಕಿರುಗಾವಲು ಪೊಲೀಸ್ ಠಾಣೆ

1] ಮೊ.ಸಂ 30/12 ಕಲಂ ಹುಡುಗಿ ಕಾಣೆಯಾಗಿದ್ದಾಳೆ ದಿಃ 23-02-2012ರ ಬೆಳಗ್ಗೆ ನನ್ನ ಮಗಳು ಅಶ್ವಿನಿ ಬಿನ್ ಸುರೇಶ್, 16 ವರ್ಷ ಶಾಲೆಗೆ ಹೋಗುವುದಾಗಿ ಹೇಲಿ ಹೋದವಳು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲ ವೆಂದು ನಾವು ನಮ್ಮ ಸಂಭಂದಿಕರ ಮನೆಗಳ ಕಡೆಗಳಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ

ಮದ್ದೂರು ಪೊಲೀಸ್ ಠಾಣೆ

2]ಮೊ.ಸಂ 111/12 ಕಲಂ ಹೆಂಗಸು ಕಾಣೆಯಾಗಿದ್ದಾಳೆ ಪಿರ್ಯಾದಿ ಟಿ.ಎಲ್ ಶಿವಕುಮಾರ್ ಹೆಂಡತಿ ಮಮತಾ @ ಮನುವಿಗೆ ತಾನು ತೆಂಗಿನ ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ವಾಪಸ್ ಬೆಳಿಗ್ಗೆ 10-30 ಗಂಟೆಯಲ್ಲಿ ಮನೆಗೆ ಬಂದಾಗ ಮನೆಗೆ ಬೀಗ ಹಾಕಿದ್ದು, ನನ್ನ ಹೆಂಡತಿ ಮಮತಾ @ ಮನು ನಾನು ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿಕೊಂಡು ಬೀಗದ ಕೀಯನ್ನು ಪಕ್ಕದ ಮನೆಯ ಮಮತಾ ಎಂಬುವವರ ಕೈಗೆ ಬೀಗದ ಕೀಯನ್ನು ಕೊಟ್ಟು ಹೋಗಿರುತ್ತಾಳೆ.

3] ಮೊ.ಸಂ 112/12 ಕಲಂ ಹುಡುಗ ಕಾಣೆಯಾಗಿದ್ದಾನೆ ದಿನಾಂಕ 24-02-12 ರಂದು ಪಿರ್ಯಾದಿ ಸವಿತಾ ರವರ ಮಗ ವಿನಯ್ಕುಮಾರ್ ಅಣ್ಣಳ್ಳಿದೊಡ್ಡಿಯಿಂದ ತುಂಬಕೆರೆ ಗ್ರಾಮಕ್ಕೆ ಸ್ಕೂಲಿಗೆ ಹೋಗುವುದಾಗಿ ಬೆಳಿಗ್ಗೆ 8-00 ಗಂಟೆಯಲ್ಲಿ ಹೇಳಿ ಹೋದವನು ಅತ್ತ ಸ್ಕೂಲಿಗೂ ಹೋಗದೇ ಹಾಗೂ ವಸತಿಶಾಲೆಗೂ ಹೋಗದೆ ಇತ್ತ ಮನೆಗೂ ಬಾರದೇ ಕಾಣೆಯಾಗಿರುತ್ತಾನೆ

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ

4] ಮೊ.ಸಂ 41/12 ಕಲಂ ಹುಡುಗಿ ಕಾಣೆಯಾಗಿದ್ದಾಳೆ ಪಿರ್ಯಾದಿ ನಿಂಗಮ್ಮ ರವರು ಅವರಿಗೆ ಉಷಾರಿಲ್ಲದ ಕಾರಣ ತಮ್ಮ ಮನೆಯಿಂದ ಮೊಮ್ಮಗಳು ಎಂ.ಟಿ.ವಿದ್ಯಾಶ್ರೀದೇವಿಯನ್ನು ಕರೆದುಕೊಂಡು ಶರ್ಮಿಳಾ ನರ್ಸಿಂಗ್ ಹೋಂ ಡಾಕ್ಟರ್ ಬಳಿ ಹೋಗಿದ್ದು ಚಿಕಿತ್ಸೆ ಪಡೆದು ನೋಡಲಾಗಿ ತಮ್ಮ ಮೊಮ್ಮಗಳು ಇಲ್ಲದ್ದನ್ನು ಕಂಡು ಮನೆಗೆ ಹೋಗಿರಬಹುದೆಂದು ಹೋಗಿ ನೋಡಲಾಗಿ ಅಲ್ಲಿಯು ಇರಲಿಲ್ಲ ಕಾಣೆಯಾಗಿರುತ್ತಾಳೆ

ಬೆಳಕವಾಡಿ ಪೊಲೀಸ್ ಠಾಣೆ

5] ಮೊ.ಸಂ 34/12 ಕಲಂ ಹೆಂಗಸು ಮತ್ತು ಮಕ್ಕಳು ಕಾಣೆಯಾಗಿದ್ದಾರೆ ಪಿರ್ಯಾದಿ ಚಂದ್ರಶೇಖರ ರವರ ಹೆಂಡತಿ ವಿಜಯ ಲಕ್ಷ್ಮಿ, 23 ವರ್ಷ, ಮತ್ತು ಮಕ್ಕಳಾದ ರಶ್ಮಿ, 5 ವರ್ಷ. ಶಶಂಕ, ಸು|| 1.5 ವರ್ಷ ದಿನಾಂಕ:22/02/12 ರಂದು ಬೆಳಕವಾಡಿ ಟೌನ್ನಲ್ಲಿ ತರಕಾರಿ ತರುತ್ತೇವೆ ಎಂದು ಹೋದವರು ಇನ್ನೂ ಮನೆಗೆ ವಾಪಸ್ ಬಂದಿರುವುದಿಲ್ಲ,

ಯು.ಡಿ.ಆರ್ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಯು.ಡಿ.ಆರ್ ನಂ 09/12 ಕಲಂ 174 ಸಿ.ಆರ್.ಪಿ.ಸಿ ದಿನಾಂಕ 24-02-12 ರಂದು ಮೃತನಿಗೆ ಈಗ್ಗೆ ಸುಮಾರು 3 ತಿಂಗಳಿಂದ ಬೀತಿ ಶಂಕೆ ಕಾಣಿಸುತಿದ್ದು ಸುಮಾರು ಆಸ್ಪತ್ರೆ ಮತ್ತು ದೇವಾಲಯಗಳಲ್ಲಿ ತೋರಿಸಿದರು ಗುಣ ಮುಖವಾಗಿರಲಿಲ್ಲ. ಮಾನಸಿಕವಾಗಿ ಅಸ್ವಸ್ಥನಾಗಿದ್ದು ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಆಲೆ ಮನೆಯ ಹತ್ತಿರ ಜಂತಿಗೆ ನೇಣ ಬಿಗಿದು ಕೊಂಡು ಅತ್ಮಹತ್ಯೆ ಮಾಡಿಕೊಂಡಿರುತ್ತಾನೆ

ಬೆಸಗರಹಳ್ಳಿ ಪೊಲೀಸ್ ಠಾಣೆ

2] ಯು.ಡಿ.ಆರ್ ನಂ 06/12 ಕಲಂ 174 ಸಿ.ಆರ್.ಪಿ.ಸಿ ದಿನಾಂಕ 24-02-12 ರಂದು ಮೃತ ರಾಜು 38 ವರ್ಷ ಈತನು ಸಾಲದ ಬಾದೆ ತಾಳಲಾರದೇ ರೇಷ್ಮೆತೋಟಕ್ಕೆ ಬಳಸುವ ಔಷಧಿ ಕುಡಿದಿದ್ದು, ಚಿಕಿತ್ಸೆಗಾಗಿ ಮಂಡ್ಯ ಸಕರ್ಾರಿ ಅಸ್ವತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಪಲಕಾರಿಯಾಗದೇ

ಕೆ.ಆರ್ ಸಾಗರ ಪೊಲೀಸ್ ಠಾಣೆ

3] ಯು.ಡಿ.ಆರ್ ನಂ 06/12 ಕಲಂ 174 ಸಿ.ಆರ್.ಪಿ.ಸಿ ಮೃತ ಚಾಮುಂಡಿ ಬಿನ್ ಕುಪ್ಪಯ್ಯ 50 ವರ್ಷ ಈತನು ತನ್ನ ಮಗನಿಗೆ ಹೆಣ್ಣು ನೋಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋದವನು ವಾಪಸ್ಸು ಮನೆಗೆ ಬಾರದೇ ಅಣ್ಣೆಕಟ್ಟಿನ ನೀರಿಗೆ ಬಿದ್ದು ಅತ್ಮಹತ್ಯೆ ಮಾಡಿಕೊಂಡಿರುತ್ತಾನೆ

ಕಳ್ಳತನ ಪ್ರಕರಣ

ಮದ್ದೂರು ಪೊಲೀಸ್ ಠಾಣೆ

1] ಮೊ.ಸಂ 110/12 ಕಲಂ 457-380 ಐಪಿಸಿ ದಿನಾಂಕ 24-02-12 ರಂದು ಪಿರ್ಯಾದಿ ನಿರಂಜನಚಾರ್ಯ ರವರು ದಿನ ಪ್ರತಿಯಂತೆ ದಿನದ ದೇವಿಪೂಜೆಯನ್ನು ಮುಗಿಸಿ ರಾತ್ರಿ 8-05 ಕ್ಕೆ ದೇವಸ್ಥಾನದ ಪೂಜಾ ಕಾರ್ಯವನ್ನು ಮುಗಿಸಿ ದೇವಸ್ಥಾನ ಬಾಗಿಲುಗಳನ್ನು ಭದ್ರಪಡಿಸಿ ಮನೆಗೆ ತೆರಳಿದ್ದು ಬೆಳಿಗ್ಗೆ ಎಂದಿನಂತೆ ನಿತ್ಯಕಾರ್ಯವನ್ನು ಮಾಡಲೆಂದು ದೇವಸ್ಥಾನದ ಬಳಿ ಬಂದು ನೋಡಿದಾಗ ಯಾರೂ ಕಳ್ಳರು ದೇವಸ್ಥಾನ ಬಾಗಿಲು ಬೀಗಗಳನ್ನು ಮುರಿದು ಗೋಲಕವನ್ನು ಮುರಿದು ದೇವರ ಬಳಿಯಿಂದ ಬೆಳ್ಳಿ ಪಾತ್ರೆಯನ್ನು ಕಳವಾಗಿರುತ್ತದೆ

ಮದ್ದೂರು ಪೊಲೀಸ್ ಠಾಣೆ

2] ಮೊ.ಸಂ 113/12 ಕಲಂ 457-380 ಐಪಿಸಿ ಪಿರ್ಯಾದಿ ಕೆ.ಎನ್. ಪುಟ್ಟರಾಜೇಗೌಡ ರವರಿಗೆ ದೇವಸ್ಥಾನದ ಅರ್ಚಕರಾದ ಕುಮಾರಸ್ವಾಮಿ ರವರು ಫೋನ್ ಮಾಡಿ ಯಾರೋ ಕಳ್ಳರು ರಾತ್ರಿ ನಮ್ಮ ದೇವಸ್ಥಾನದ ಬೀಗವನ್ನು ಮುರಿದು ಒಳಗೆ ಹೋಗಿ ದೇವರ ಹುಂಡಿಯನ್ನು ಹಾಗೂ ದೇವರ ಬೆಳ್ಳಿಯ ನಾಮ, ಬೆಳ್ಳಿಯ ಕಣ್ಣುಗಳನ್ನು ಕಳ್ಳತನವಾಗಿದೆ ಎಂದು ತಿಳಿಸಿದ್ದು, ನಂತರ ಪಿರ್ಯಾದಿ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಕಂಡುಬಂದಿರುತ್ತದೆ

ಕಿಕ್ಲೇರಿ ಪೊಲೀಸ್ ಠಾಣೆ

3] ಮೊ.ಸಂ 25/12 ಕಲಂ 454-380 ಐಪಿಸಿ ದಿನಾಂಕ 24-02-12 ರಂದು ಯಾರೋ ಕಳ್ಳರು ಪಿರ್ಯಾದಿ ಶಕೀಲ ರವರು ಅವರ ಮನೆಯ ಬೀಗ ಮುರಿದು ಒಳಪ್ರವೇಶಿ ಮನೆಯಲ್ಲಿದ್ದ 1] ಒಂದು ಜೋತೆ ಮಾಟಿ, 2]ಒಂದು ಉಂಗುರ 3] ಒಂದು ತಾಳಿ. ಒಟ್ಟು ಮೌಲ್ಯ 20 ಸಾವಿರ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ

4] ಮೊ.ಸಂ 40/12 ಕಲಂ 379 ಐಪಿಸಿ ಪಿರ್ಯಾದಿ ನಂದೀಶ್ ನು ಬಾಬ್ತು ಕೆಎ-05 ಹೆಚ್ಜಿ 9516 ನಂಬರಿನ ಹೋಂಡ ಶೈನ್ ಮೋಟಾರ್ ಸೈಕಲನ್ನು ಮಂಡ್ಯದ ತರಕಾರಿ ಮಾಕರ್ೆಟ್ನಲ್ಲಿ ಭಗವಾನ್ದಾಸ್ ರವರ ಅಂಗಡಿ ಗಲ್ಲಿಯಲ್ಲಿ ಬೀಗ ಹಾಕಿ ನಿಲ್ಲಿಸಿದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ

ಅತ್ಯಾಚಾರ ಪ್ರಕರಣ

ಕೆಸ್ತೂರು ಪೊಲೀಸ್ ಠಾಣೆ

1] ಮೊ.ಸಂ 23/12 ಕಲಂ 448-376-506 ಐಪಿಸಿ ದಿನಾಂಕ 19-02-2012 ರಂದು ಬೆಳಿಗ್ಗೆ 08-30 ಗಂಟೆಯ ಸಮಯದಲ್ಲಿ ಮಲ್ಲನಾಯಕನಹಳ್ಳಿಯ ಪಿರ್ಯಾದಿ ಗೌರಮ್ಮ ರವರು ಅವರ ಮನೆಯಲ್ಲಿ 14 ವರ್ಷದ ಮೇಘನಳು ಒಬ್ಬಳೇ ಇದ್ದ ಸಮಯವನ್ನು ನೋಡಿಕೊಂಡು ಅದೇ ಗ್ರಾಮದ ಮರಿಯಪ್ಪನ ಮಗ ಸಿದ್ದರಾಜು ಎಂಬುವವನು ಮನೆಗೆ ಹೋಗಿ ಮೇಘನಳನ್ನು ಬಲವಂತವಾಗಿ ಎತ್ತಿಕೊಂಡು ರೂಮಿನೊಳಕ್ಕೆ ಹೋಗಿ ಅತ್ಯಾಚಾರ ಮಾಡಿ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುತ್ತಾನೆ