Moving text

Mandya District Police

IMPORTANT DETECTION OF MANDYA RURAL CIRCLE POLICE STAFF

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ ದಿಃ 01.09.2012

ಮಂಡ್ಯ ಗ್ರಾಮಾಂತರ ವೃತ್ತದ ಅಪರಾದ ಪತ್ತೆ ದಳದಿಂದ ಕೊಲೆ ಮಾಡಿದ ಆರೋಪಿಗಳನ್ನು ಮತ್ತು ಮಂಡ್ಯ ನಗರದಲ್ಲಿ ಕನ್ನ ಕಳುವು ಮಾಡಿದ್ದ ಆರೋಪಿಗಳ ಬಂಧನ ಮತ್ತು ರೂ 1,50,000/- ಬೆಲೆಬಾಳುವ ವಸ್ತುಗಳ ವಶ ಮತ್ತು 2 ಘೋರ ಕೇಸುಗಳ ಪತ್ತೆ.


ದಿನಾಂಕಃ02-8-2012 ರ ಬೆಳಿಗ್ಗೆ 6-30 ಗಂಟೆಯಲ್ಲಿ ಹುಲಿವಾನ ಗ್ರಾಮದ ಉಮೇಶ ರವರ ಕಬ್ಬಿನ ಗದ್ದೆಯ ಪಕ್ಕ ಬಾಳಾದಿಟ್ಟು ಕಾಲುವೆಯಲ್ಲಿ ಅಪರಿಚಿತ ಗಂಡಸಿನ ಶವ ಬೆಂಕಿಯಿಂದ ಉರಿಯುತ್ತಿದ್ದು ಹೋಗಿ ನೋಡಲಾಗಿ ಸುಮಾರು 25 ರಿಂದ 28 ರ ವಯಸ್ಸಿನ ಗಂಡಸಿನ ಶವವಾಗಿರುತ್ತೆದೆ. ಯಾರೋ ದುಷ್ಕರ್ಮಿಗಳು ಸದರಿ ಗಂಡಸನ್ನು ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟಿದ್ದು ಶವ ಹೊಗೆಯಿಂದ ಕೊಡಿರುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಚಂದ್ರು ಎಂಬುವರು ನೀಡಿದ ದೂರಿನ ಮೇರೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಮೃತ ವ್ಯಕ್ತಿಯು ಅರಕೆರೆ ಹೋಬಳಿ, ದೇವರಗುಡ್ಡನಕೊಪ್ಪಲು ಗ್ರಾಮದ ಚಿಕ್ಕಸಿದ್ದಯ್ಯನ ಮಗ ನಂಜುಂಡ ಎಂದು ತನಿಖೆಯಿಂದ ತಿಳಿದು ಬಂದಿರುತ್ತದೆ.

ಈ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ. ಜಿ.ಕೃಷ್ಣಮೂರ್ತಿ, ಎ.ಎಸ್.ಐ, ಜಾರ್ಜ್ ವಿಲ್ಸನ್ ಹಾಗೂ ಇತರೆ ಸಿಬ್ಬಂದಿಗಳು ದಿನಾಂಕ: 30-08-2012 ರಂದು ಈ ಕೇಸಿನ ಆರೋಪಿಗಳಾದ 1. ಜಯಶಂಕರ 2. ಸೋಮ @ ಸೋಮಶೇಖರ ರವರುಗಳನ್ನು ಬಂಧಿಸಿ ಈ ಕೇಸಿಗೆ ಸಂಬಂಧಪಟ್ಟಂತೆ ಮೃತನಿಂದ ತೆಗೆದುಕೊಂಡು ಹೋಗಿದ್ದ ರೂ, 20,000 ಗಳನ್ನು 2 ನೇ ಆರೋಪಿ ಸೋಮ @ ಸೋಮಶೇಖರ ತನ್ನ ಇಂಡಿಯನ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾಗಿ ತಿಳಿದು ಬಂದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.

ಈ ಮೆಲ್ಕಂಡ ಕೊಲೆ ಪ್ರಕರಣವಲ್ಲದೆ ಮೇಲ್ಕಂಡ 2 ಜನ ಆರೋಪಿಗಳು ಮತ್ತೊಬ್ಬ ಆರೋಪಿ 3 ಶಿವು @ ಶಿವ ಶಂಕರ ಎಂಬುವನೊಡನೆ ಸೇರಿ ಜೂನ್ 2012 ರಲ್ಲಿ ಮಂಡ್ಯ ನಗರದ ಗಾಂದಿನಗರ, 6ನೇ ಕ್ರಾಸ್ನಲ್ಲಿ ಶ್ರೀ. ಚಂದ್ರಶೇಖರ್ ಎಂಬುವರ ಮನೆಯ ಬೀಗದ ಕೀಯನ್ನು ಡ್ಯೂಪ್ಲಿಕೇಟ್ ಕೀ ನಿಂದ ತೆಗೆದು, ಸದರಿ ಮನೆಯಿಂದ ಲ್ಯಾಪ್ಟ್ಯಾಪ್, ಕ್ಯಾಮೆರಾ, ಚಿನ್ನದ ಮೂರು ಉಂಗುರಗಳು, ಚಿನ್ನದ ಸ್ಟಡ್ ಮತ್ತು ಡ್ರಾಪ್ಸ್, ಬೆಳ್ಳಿಯ ಕುಂಕುಮದ ಬಟ್ಟಲುಗಳು, ಬೆಳ್ಳಿಯ ಚಿಕ್ಕ ದೀಪಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸುಮಾರು 1,50,000 ರೂ. ಬೆಲೆ ಬಾಳುವ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಆರೋಪಿಗಳ ಹೆಸರು ಮತ್ತು ವಿಳಾಸ :

1. ಜಯಶಂಕರ ಕೆ.ಸಿ. ಬಿನ್ ಚನ್ನಬಸವೇಗೌಡ, 23 ವರ್ಷ, ಮಂಡ್ಯ ನಗರದ ಕೆ.ಹೆಚ್.ಬಿ. ಕಾಲೋನಿಯ, ಶೃತಿ ರೇಷ್ಮೆ ಮೊಟ್ಟೆ ಉತ್ಪಾದನ ಕೇಂದ್ರದಲ್ಲಿ ಕೆಲಸ, ಹಾಲಿ ವಾಸ ಕೆ.ಹೆಚ್.ಬಿ. ಕಾಲೋನಿ, ಚಿಕ್ಕ ಮಂಡ್ಯ ಕೆರೆ, ಮಂಡ್ಯ ಸಿ.ಟಿ. ಸ್ವಂತ ಊರು ಕರಿಹುರಳಿಕೊಪ್ಪಲು ಗ್ರಾಮ, ಬನ್ನೂರು ಹೋಬಳಿ, ಟಿ.ಎನ್. ಪುರ ತಾಲ್ಲೋಕು, ಮೈಸೂರು ಜಿಲ್ಲೆ.

2. ಆರ್.ಎನ್. ಸೋಮಶೇಖರ @ ಸೋಮ ಬಿನ್ ನಂಜುಂಡಯ್ಯ, 27 ವರ್ಷ, ಮಂಡ್ಯದ ಬಿ.ಎಸ್.ಎನ್.ಎಲ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರಿನ ಚಾಲಕ, ಹಾಲಿ ವಾಸ ಪಿ. ನಾಗೇಂದ್ರರವರ ಬಾಡಿಗೆ ಮನೆ ಯಲ್ಲಿ ವಾಸ, 11 ನೆ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ನಗರ, ಸ್ವಂತ ಊರು ರಾಮಂದೂರು, ಕಿರುಗಾವಲು ಹೋಬಳಿ, ಮಳವಳ್ಳಿ ತಾಲ್ಲೂಕು.

3. ಡಿ.ಸಿ. ಶಿವಕುಮಾರ @ ಶಿವು ಬಿನ್ ಚಿಕ್ಕಜ್ಞಾನಾಚಾರ್,24 ವರ್ಷ, ಕಾರ್ಪೆ ಂಟರ್ ಕೆಲಸ, ಹಾಲಿ ವಾಸ ಅಂಸಿಯಮ್ಮನ ಮನೆಯಲ್ಲಿ ಬಾಡಿಗೆ ಮನೆ, 1 ನೇ ಕ್ರಾಸ್, ಚಂಪಕದಮ್ಮ ದೇವಸ್ಥಾನದ ಬೀದಿ, ಬನ್ನೇರಗಟ್ಟೆ ಗ್ರಾಮ, ಆನೆಕಲ್ ತಾಲ್ಲೋಕು, ಬೆಂಗಳೂರು, ಸ್ವಂತ ಊರು ದೊಡ್ಡಅರಳಿಗೆರೆ ಗ್ರಾಮ, ಸೂಲಿಬೇಲಿ ಹೋಬಳಿ, ಹೊಸಕೊಟೆ ತಾಲ್ಲೋಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂಧಿಯವರ ಪತ್ತೆ ಕಾರ್ಯದ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.