Moving text

Mandya District Police

Detection of Stolen Property from Mandya Sub Division Police Staff

                                   ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ                                                         
                                    ಮಂಡ್ಯ ಜಿಲ್ಲೆ. ಮಂಡ್ಯ ದಿಃ 09.08.2012                                                                 
                                                
                                                     ಪತ್ರಿಕಾ ಪ್ರಕಟಣೆ

     ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ ವಿವಿಧ ಕಳವು ಪ್ರಕರಣದಲ್ಲಿ 4 ಜನ ಆರೋಪಿಗಳ ಬಂಧನ. ಇವರುಗಳಿಂದ ಒಟ್ಟು ಸುಮಾರು 9,00,000/-  ರೂ ಮೌಲ್ಯದ ಬೆಲೆಬಾಳುವ 185 ಗ್ರಾಂ ತೂಕದ ಚಿನ್ನಾಭರಣಗಳು 600 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು ನಗದುಹಣ 52,000-00 ರೂ  ಮತ್ತು 5 ಮೋಟಾರ್ ಸೈಕಲ್ ಗಳ  ವಶ. 


   ಮಂಡ್ಯ ನಗರದ ವಿವಿಧ ಕಡೆಗಳಲ್ಲಿ ಹಗಲು ಮತ್ತು ರಾತ್ರಿವೇಳೆಯಲ್ಲಿ ಮನೆಕಳ್ಳತನ ಹಾಗೂ ಮೋಟಾರ್ ಸೈಕಲ್ಗಳ ಕಳ್ಳತನ ಆಗುತ್ತಿದ್ದು ಆ ಪ್ರಕರಣಗಳ ಪತ್ತೆ ಬಗ್ಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ  ಕಾರ್ಯೊನ್ಮುಖರಾದ ತಂಡವು  ದಿನಾಂಕ.26.07.2012 ರಂದು  ಮಧ್ಯಾಹ್ನ 12-00 ಗಂಟೆಯಲ್ಲಿ ಮಂಡ್ಯದ ವಿ.ವಿ ರಸ್ತೆಯಲ್ಲಿರುವ ರೇಖಾ ಜ್ಯೂಯಲರ್ಸ್ ಅಂಗಡಿಯ ಬಳಿ ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಆರೋಪಿ ಮಹೇಶ @ ಆಕಾಶ್ ಎಂಬುವನನ್ನು ಹಿಡಿದು ವಿಚಾರಣೆಗೆ ಒಳಪಡಿಸಲಾಗಿ ಸದರಿ ಆರೋಪಿಯು  ತನ್ನ ಅತ್ತಿಗೆಯಾದ ಬೆಂಗಳೂರಿನ ಜರಗನಹಳ್ಳಿಯ ವಾಸಿ ಸುಶೀಲಮ್ಮ ಕೋಂ ಲೇಟ್ ನಾಗರಾಜು ಎಂಬುವರ ಮನೆಯಲ್ಲಿ ನಕಲಿ ಕೀಯಿಂದ ಮನೆ ಡೋರ್ಲಾಕ್ ಬೀಗವನ್ನು ತೆಗೆದು ಆ ಮನೆಯಲ್ಲಿ ಕಳವುಮಾಡಿಕೊಂಡು ಬಂದು ಮಾರಾಟ ಮಾಡಿದ 130 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು ಮಾರಲು ಪ್ರಯತ್ನಪಡುತ್ತಿದ್ದ 600 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು  ವಶಪಡಿಸಿಕೊಂಡಿರುತ್ತದೆ. 

ಆರೋಪಿತನ ಹೆಸರು ಮತ್ತು ವಿಳಾಸ :

  ಎ.ಪಿ.ಮಹೇಶ @ ಆಕಾಶ ಬಿನ್ ಪುಟ್ಟಸ್ವಾಮಿ, 26 ವರ್ಷ, ಕಾರ್ ಚಾಲಕ, ಮತ್ತು ವ್ಯವಸಾಯ ಕೆಲಸ, ವಾಸ ಆನೆದೊಡ್ಡಿ ಗ್ರಾಮ, ಕೊಪ್ಪ ಹೋಬಳಿ,ಮದ್ದೂರುತಾಲ್ಲೋಕ್.ಕೇರಾಫ್ ಗೌರಮ್ಮ, 5 ನೇ ಕ್ರಾಸ್, ಬಸವನಗುಡಿ, ಗುತ್ತಲು ರಸ್ತೆ, ಮಂಡ್ಯ ಸಿಟಿ. ಆರೋಪಿಯು  ದಿನಾಂಕ: 31-07-2012 ರಿಂದ   ನ್ಯಾಯಂಗ ಬಂಧನದಲ್ಲಿರುತ್ತಾನೆ.

   2] ದಿಃ 28-03-2012 ರಂದು ಮಂಡ್ಯ ನಗರದ ಪೇಟೆ ಬೀದಿಯಲ್ಲಿರುವ ಶುಭ್ಗೋಲ್ಡ್ ಚಿನ್ನದ ಅಂಗಡಿಯಲ್ಲಿ ಚಿನ್ನದ ಆಭರಣಗಳನ್ನು ಖರೀದಿಸುವ ನೆಪದಲ್ಲಿ ಕಳವು ಮಾಡಿಕೊಂಡು ಹೋಗಿದ್ದ ಚಿನ್ನದ ಸರ ಮತ್ತು ಆರೋಪಿತಳನ್ನು ದಿನಾಂಕ 28-07-2012 ರಂದು ಮಂಡ್ಯದ ಪೇಟೆ ಬೀದಿಯಲ್ಲಿ ಆರೋಪಿತಳಾದ ಸಾವಿತ್ರಮ್ಮಳನ್ನು ಪತ್ತೆ ಮಾಡಿ ಹಿಡಿದು ಅವಳು ನೀಡಿದ ಸುಳಿವಿನ ಮೇರೆಗೆ ಶುಭ್ ಗೋಲ್ಟ್ ಚಿನ್ನದ ಅಂಗಡಿಯಲ್ಲಿ  ಕಳವು ಮಾಡಿಕೊಂಡು ಹೋಗಿ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದ ಚೈನ್  ಮತ್ತು  ಮಂಡ್ಯದ ಕೆ.ಎಸ್.ಅರ್.ಟಿ,ಸಿ ಬಸ್ ನಿಲ್ದಾಣದಲ್ಲಿ ಬಸ್ಗೆ ಹತ್ತುವ ಮಹಿಳೆಯರ ವ್ಯಾನಿಟಿ ಬ್ಯಾಗಿನ ಜೀಪ್ ಎಳೆದು ಕಳವು ಮಾಡಿ ಬಚ್ಚಿಟ್ಟಿದ್ದ ನಗದು ಹಣ 52,000/- ರೂಪಾಯಿ ಮತ್ತು 19 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿರುತ್ತದೆ. 

ಆರೋಪಿ ಹೆಸರು ಮತ್ತು ವಿಳಾಸ :

ಸಾವಿತ್ರಮ್ಮ ಕೋಂ ಸ್ವಾಮಿಗೌಡ @ ಸ್ವಾಮಿ, 45 ವರ್ಷ, ಮನೆಕೆಲಸ, ವಾಸ: ಮಂಡ್ಯ ಕೊಪ್ಪಲು ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ  ಜಿಲ್ಲೆ. ಆರೋಪಿತಳನ್ನು ದಿನಾಂಕ 28-07-2012 ರಂದು ನ್ಯಾಯಾಲಯಕ್ಕೆ ಹಾಜರ್ ಪಡಿಸಿರುತ್ತದೆ.

   3] ದಿಃ 21-07-12 ರಂದು ಮಂಡ್ಯದ ಸುರಭಿ ಕಲ್ಯಾಣ ಮಂಟಪದ ಬಳಿ ಮೋಟಾರ್ ಸೈಕಲ್ನ್ನು ಕಳವು ಮಾಡಿಕೊಂಡು ಹೋಗಿದ್ದ ಗೋವಿಂದರಾಜು ಈತನನ್ನು ದಿನಾಂಕ. 01.08.2012 ರಂದು ಬೆಳಗಿನ ಜಾವ 2.30 ಗಂಟೆಯಲ್ಲಿ ಮಂಡ್ಯದ ಕೆ.ಆರ್. ರಸ್ತೆಯಲ್ಲಿ ಹಿಡಿದು ವಿಚಾರಣೆಗೆ ಒಳಪಡಿಸಲಾಗಿ ಸದರಿ ಆರೋಪಿಯು ಮಂಡ್ಯದ ವಿವಿದ ಕಡೆಗಳಲ್ಲಿ ಕಳವು ಮಾಡಿ ಮಾರಾಟ ಮಾಡಿದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತದೆ. 

                                                         ಆರೋಪಿಯ ಹೆಸರು ಮತ್ತು ವಿಳಾಸ :

ಗೋವಿಂದರಾಜು @ ಗೊವಿಂದ @ ಗುಂಡ ಬಿನ್ ತಮ್ಮೇಗೌಡ, 21 ವರ್ಷ, ವ್ಯವಸಾಯ ವಾಸ ಕೆಂಪೇಗೌಡನಕೊಪ್ಪಲು ಗ್ರಾಮ, ಬನ್ನೂರು ಹೋಬಳಿ, ಟಿ.ನರಸೀಪುರ ತಾಲ್ಲೋಕ್, ಮೈಸೂರು ಜಿಲ್ಲೆ.   ಆರೋಪಿಯು ದಿನಾಂಕ 01-08-2012 ರಿಂದ  ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.

   4] ದಿನಾಂಕ 23-06-2012 ರಂದು ಮಂಡ್ಯದ ನೂರಡಿ ರಸ್ತೆಯ ಸೇವಂತಿ ನೋಕಿಯ ಸೆಲ್ ಕೇರ್ ಅಂಗಡಿಯಲ್ಲಿಗೆ  ಆರೋಪಿ ಬಾಲಗಂಗಾಧರ ಎಂಬುವನು ರಿಪೇರಿಗಾಗಿ ಮೊಬೈಲ್  ಹ್ಯಾಂಡ್ಸೆಟ್ ಕೊಟ್ಟಿದ್ದು ಸಂಜೆ ಸುಮಾರು 05-45 ಗಂಟೆಯಲ್ಲಿ ಅದನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ  ಅಲ್ಲಿ ಕೆಲಸ ಮಾಡುವ ದಿವ್ಯಶ್ರೀ ಎಂಬುವರ ಬಾಬ್ತು 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟನ್ನು ಕಳವು ಮಾಡಿಕೊಂಡು ಹೋಗಿದ್ದವನನ್ನು ದಿನಾಂಕ 03-08-2012 ರಂದು ಚನ್ನಪಟ್ಟಣದ ಮುದಗೆರೆ ಬಳಿ ಪತ್ತೆ ಮಾಡಿ ಹಿಡಿದು ವಶಕ್ಕೆ ತೆಗದುಕೊಂಡುಆತನು ಕಳವು ಮಾಡಿದ  ದಿವ್ಯಶ್ರೀಯವರ ಬಾಬ್ತು ಚಿನ್ನದ ಬ್ರಾಸ್ ಲೈಟ್ ಮತ್ತು ಆತನ ಮೊಬೈಲ್ ಹ್ಯಾಂಡ್ ಸೆಟ್ ಅನ್ನು ವಶಪಡಿಸಿಕೊಂಡಿರುತ್ತೆ. 

ರೋಪಿ ಹೆಸರು ಮತ್ತು ವಿಳಾಸ :

ಬಾಲಗಂಗಾಧರ @ ಬಾಲು ಬಿನ್ ಶಿವಲಿಂಗಯ್ಯ, 23 ವರ್ಷ, ವ್ಯವಸಾಯ, ವಾಸ: ದೊಡ್ಡಮಳೂರು ಗ್ರಾಮ. ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ.

    ಮೇಲ್ಕಂಡ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಮಾನ್ಯ ಮಂಡ್ಯ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕರಾಧ ಶ್ರೀ, ಚನ್ನಬಸವಣ್ಣ, ಎಸ್,ಎಲ್, ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ, ಕೆ.ಆರ್, ಕಾಂತರಾಜ್, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಪಿ.ಎಸ್,ಐ ಶ್ರೀ, ಕೆ, ಪ್ರಭಾಕರ್, ಮಹಿಳಾ ಪಿ,ಎಸ್,ಐ ಶ್ರೀಮತಿ, ವಿ.ಡಿ. ಮಮತ, ಪ್ರೋಬೆಷರಿ ಪಿ.ಎಸ್.ಐ, ಶ್ರೀ, ಲೋಕೇಶ್, ಶ್ರೀ, ನಾಯಕ್, ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಎ.ಎಸ್.ಐ ಸಿ,ಕೆ. ಪುಟ್ಟಸ್ವಾಮಿ, ಮುಖ್ಯಪೇದೆ, ನಾರಾಯಣ, ನಿಂಗರಾಜು, ಪಿ,ಅಕರ್ೇಶ, ಪರಶುರಾಮ, ಪೇದೆಗಳಾದ ಕೆ.ಸಿ. ನಟರಾಜು, ಮಂಜುನಾಥ, ಬಿ.ಎನ್. ತಿಲಕ್ ಕುಮಾರ್, ಪುಟ್ಟಸ್ವಾಮಿ, ಜೀಪ್ ಚಾಲಕರುಗಳಾದ ರವಿ, ಶ್ರೀನಿವಾಸ, ಯೋಗೇಶ, ಬಲರಾಮ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.