Moving text

Mandya District Police

Press Note on Nagamangala Town PS

ಪೊಲೀಸ್ ಸೂಪರಿಂಟೆಂಡ್ರವರ ಕಛೇರಿ 
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕಃ 29-04-2012 

ಪತ್ರಿಕಾ ಪ್ರಕಟಣೆ. 

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕು, ಸಿಂಗಾಪುರದ ನಿವಾಸಿಗಳಾದ ಮಂಜ @ ಮಂಜೇಗೌಡ ಬಿನ್ ಸಿದ್ದೇಗೌಡ, 23ವರ್ಷ, ಮತ್ತು ರವಿ ಬಿನ್ ವೆಂಕಟೇಗೌಡ,  28ವರ್ಷ ಎಂಬುವವರನ್ನು ಬಂದಿಸಿ 9 ಲಕ್ಷ ಬೆಲೆ ಬಾಳುವ ಮಾಲುಗಳ ವಶ.

ಕಳವು ಮಾಡಿದ ಮೊಟಾರ್ ಬೈಕನ್ನು ಮಾರಾಟಮಾಡಲು ದಿನಾಂಕಃ 26-04-2012ರಂದು ಸಂಜೆ 05.00 ಗಂಟೆ ಸಮಯದಲ್ಲಿ, ನಾಗಮಂಗಲ ಟೌನ್ನಲ್ಲಿ ಪ್ರಯತ್ನಿಸುತ್ತಿದ್ದಾಗ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವೆಂಕಟೇಗೌಡ ರವರು ಕೆ.ಆರ್. ಪೇಟೆ ತಾಲ್ಲೂಕು, ಸಿಂಗಾಪುರದ ನಿವಾಸಿಗಳಾದ 1] ಮಂಜ @ ಮಂಜೇಗೌಡ ಬಿನ್ ಸಿದ್ದೇಗೌಡ, 23ವರ್ಷ ಮತ್ತು 2] ರವಿ ಬಿನ್ ವೆಂಕಟೇಗೌಡ, 28ವರ್ಷ ಎಂಬುವವರನ್ನು ಮೊಟಾರ್ ಬೈಕ್ ಸಮೇತ ವಶಕ್ಕೆ ತೆಗೆದುಕೊಂಡು ಕೂಲಂಕುಶವಾಗಿ ವಿಚಾರಣೆಮಾಡಿದಾಗ 2 ವರ್ಷದ ಹಿಂದೆ ಬೋಗಾದಿಯಲ್ಲಿ ಬಟ್ಟೆ ಒಗೆದುಕೊಂಡು ಬರುತ್ತಿದ್ದ ಹೆಂಗಸಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದಾಗಿ, 1 ತಿಂಗಳ ಹಿಂದ ಚೀಣ್ಯಾ ಗ್ರಾಮದ ಬಳಿ ನೀರು ಕುಡಿಯಲು ಕೇಳಿ ಬಟ್ಟೆ ತೊಳೆಯುತ್ತಿದ್ದ ಹೆಂಗಸಿನ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದಾಗಿ, ಕಳೆದ 15 ದಿವಸಗಳ ಹಿಂದೆ ಸಂಕನಹಳ್ಳಿ ಗ್ರಾಮದ ಬಳಿ ದನಕರುಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಹೆಂಗಸಿನ ಬಳಿ ಸರ ಕಿತ್ತುಕೊಳ್ಳಲು ಪ್ರಯತ್ನ ಮಾಡಿದ್ದಾಗಿ, 95 ಗ್ರಾಂ ತೂಕದ 2 ಚಿನ್ನದಮಾಂಗಲ್ಯ ಸರಗಳನ್ನು ಕೆ.ಆರ್.ಪೇಟೆಯ ಶ್ರೀ ದುಗರ್ಾ ಬ್ಯಾಂಕರ್ಸ್ನ ಮಾಲೀಕರಾದ ಪುಕ್ರಾಜ್ ಎಂಬಾತನಿಗೆ ಮಾರಾಟಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅದೊ ಅಲ್ಲದೇ 1] ರಂಗಸ್ವಾಮಿ @ ಸ್ವಾಮಿ, ಕುದೂರು ಗ್ರಾಮ ಮತ್ತು 2] ಸಂತೋಷ @ ಪರಾಕ್ ಬಿಲ್ಲೇನಹಳ್ಳಿ ಗ್ರಾಮ, ಇವರುಗಳೊಂದಿಗೆ ಸೇರಿಕೊಂಡು ನಾಗಮಂಗಲ, ಬೆಳ್ಳೂರು, ಪಾಂಡವಪುರ ಮತ್ತು ಕೆ,ಆರ್.ಪೇಟೆ ಕಡೆಗಳಲ್ಲಿಯೂ ಸಹ ಮೊಟಾರ್ ಬೈಕ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ 11 ಮೊಟಾರ್ ಬೈಕ್ಗಳನ್ನು ಸಹಾ ವಶಪಡಿಸಿಕೊಂಡಿದ್ದು ಮೇಲ್ಕಂಡ ಚಿನ್ನಾಭರಣ ಮತ್ತು ದ್ವಿಚಕ್ರಗಳ ಒಟ್ಟು ಮೌಲ್ಯ ಸುಮಾರು 9 ಲಕ್ಷ ರೂ ಬೆಲೆ ಬಾಳುವ ವಸ್ತುಗಳನ್ನು ನಾಗಮಂಗಲ ಪೊಲೀಸರು ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡಿರುತ್ತಾರೆ. 

ಸದರಿ ಆರೋಪಿಗಳನ್ನು ಬಂಧಿಸುವಲ್ಲಿ ಬಾಗವಹಿಸಿದ್ದ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ.                     ಶ್ರೀ ವೆಂಕಟೇಗೌಡ, ಸಿಬ್ಬಂದಿಗಳಾದ ಶ್ರೀ ಪ್ರಶಾಂತ್, ಶ್ರೀ ಅನಿಲ್ ಕುಮಾರ್, ಶ್ರೀ ಹಫೀಸ್ ಪಾಷ, ಹಾಗೂ ಚಂದ್ರಶೇಖರ್ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳನ್ನು ಪ್ರಶಂಸಿರುತ್ತಾರೆ. 

Press Note on Mandya Rural PS Murder Case

                ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ 
          ಮಂಡ್ಯ ಜಿಲ್ಲೆ, ಮಂಡ್ಯ,  ದಿನಾಂಕಃ 17-04-2012  

                              ಪತ್ರಿಕಾ ಪ್ರಕಟಣೆ
ಮಂಡ್ಯ ತಾಲ್ಲೂಕು, ಸಂಪಹಳ್ಳಿ ಗ್ರಾಮದ ಶಿವಲಿಂಗಯ್ಯ @ ಚಿಕ್ಕೋನು ಎಂಬುವವರ ಕೊಲೆ ಪ್ರಕರಣವನ್ನು ಪತ್ತೆ ಮಾಡಿ, ಆರೋಪಿಯನ್ನು ದಸ್ತಗಿರಿ ಮಾಡಿರುವ ಬಗ್ಗೆ. 

      ದಿನಾಂಕಃ 13-04-2012 ರಂದು ಬೆಳಿಗ್ಗೆ ಮಂಡ್ಯ ತಾಲ್ಲೂಕು, ಸಂಪಹಳ್ಳಿ ಗ್ರಾಮದ ಶಿವಲಿಂಗಯ್ಯ @ ಚಿಕ್ಕೋನು ಮತ್ತು ಅದೇ ಗ್ರಾಮದ ಕಾಳೇಗೌಡರ ಮಗ ಸತೀಶ ಜಮೀನಿಗೆ ನೀರು ಕಟ್ಟುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದು, ಸತೀಶನು ಶಿವಲಿಂಗಯ್ಯನಿಗೆ ಎಲೆಗುದ್ದಲಿಯಿಂದ ತಲೆಗೆ ಹೊಡೆದು ತೀವ್ರ ರಕ್ತ ಗಾಯಗಳನ್ನುಂಟು ಮಾಡಿ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದನು. ಈ ಸಂಬಂದ ಸ್ಥಳೀಯ ಪೊಲೀಸ್ ಅದಿಕಾರಿಗಳು ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.  

ಈ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ಮಂಡ್ಯ ಗ್ರಾಮಾಂತರ ವೃತ್ತದ ಸಿಪಿಐ ಶ್ರೀ. ಜಿ. ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು.  ಈ ತಂಡವು ಕಾರ್ಯಾಚರಣೆ ನಡೆಸಿ ಕೊಲೆಯಾದ 72 ಗಂಟೆಗಳ ಒಳಗೆ ದಿನಾಂಕ: 16-04-2012 ರಂದು ಬೆಳಿಗ್ಗೆ ಆರೋಪಿ ಸತೀಶನನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ, ಆತನು ಕೊಟ್ಟ ಸುಳುವಿನ ಮೇಲೆ ಕೊಲೆ ಮಾಡಲು ಉಪಯೋಗಿಸಿದ ಗುದ್ದಲಿಯನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.  

   ಈ ಕೊಲೆ ಪ್ರಕರಣದ ಪತ್ತೆ ಕಾರ್ಯ ಕೈಗೊಂಡ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ. 
 

Press Note on Mandya East PS Crime Rep.15-04-2012


                                                       ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ 
                                                  ಮಂಡ್ಯ ಜಿಲ್ಲೆ, ಮಂಡ್ಯ,  ದಿನಾಂಕಃ 16-04-2012  
                            
                                                                  ''ಪತ್ರಿಕಾ ಪ್ರಕಟಣೆ''

     ರಾಯಲ್ ಛಾಲೆಂಜರ್ ಬೆಂಗಳೂರು [ಆರ್.ಸಿ.ಬಿ] ವಿರುದ್ದ ರಾಜಸ್ಥಾನ್ ರಾಯಲ್ [ಆರ್ಆರ್] ಕ್ರಿಕೆಟ್ ಮ್ಯಾಚ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿಕೊಂಡು ಜೂಜಾಟವಾಡುತ್ತಿದ್ದ   9 ಜನ ಆಸಾಮಿಗಳ ಬಂಧನ, ಪಣಕ್ಕಿಟ್ಟಿದ್ದ ನಗದು ಹಣ 2,10,550-00 ರೂ,      16 ಮೊಬೈಲ್ ಹ್ಯಾಂಡ್ಸೆಟ್ಗಳು ಮತ್ತು 3 ಮೋಟಾರ್ ಸೈಕಲ್ಗಳ ವಶ.

     ದಿನಾಂಕಃ 15-04-2012 ರಂದು ರಾತ್ರಿ 8-00 ಗಂಟೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಛಾಲೆಂಜರ್ ಬೆಂಗಳೂರು [ ಆರ್.ಸಿ.ಬಿ] ವಿರುದ್ದ ರಾಜಸ್ಥಾನ ರಾಯಲ್ [ಆರ್ಆರ್] ಕ್ರಿಕೆಟ್ ಮ್ಯಾಚ್ ಪ್ರಾರಂಭವಾಗಿ ನಡೆಯುತ್ತಿದ್ದು ಸದರಿ ಕ್ರಿಕೆಟ್ ಮ್ಯಾಚ್ನಲ್ಲಿ ಹಣ, ಮೊಬೈಲ್ ಹ್ಯಾಂಡ್ಸೆಟ್, ಮೋಟಾರ್ ಸೈಕಲ್ಗಳನ್ನು ಪಣವಾಗಿ ಕಟ್ಟಿಕೊಂಡು ಮಂಡ್ಯ ನಗರದ ಹಾಲಹಳ್ಳಿ 1ನೇ ಕ್ರಾಸ್ನಲ್ಲಿರುವ ಅನಿಲ ಕುಮಾರ ಬಿನ್ ನಾಗೇಗೌಡ [ ಭೂತೇಗೌಡ] ಎಂಬುವರ ಮನೆಯ ರೂಂನಲ್ಲಿ ಟಿವಿ ನೋಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಎಂಬ ಜೂಜಾಟವನ್ನು ಆಡುತ್ತಿದ್ದ ಮನೆಯ ಮೇಲೆ ಮಂಡ್ಯ ಪೂರ್ವ ಠಾಣೆಯ ಪಿ.ಎಸ್.ಐ. ಮತ್ತು ಸಿಬ್ಬಂದಿಯವರುಗಳು ರಾತ್ರಿ 9-30 ಗಂಟೆಯಲ್ಲಿ ದಾಳಿಮಾಡಿ ಈ ಕೆಳಕಂಡ ಆರೋಪಿಗಳನ್ನು ಹಿಡಿದು ವಶಕ್ಕೆ ತೆಗೆದುಕೊಂಡು ಕ್ರಿಕೆಟ್ ಬೆಟ್ಟಿಂಗ್ ಕಟ್ಟಿದ್ದ ನಗದು ಹಣ 2,10,550-00 ರೂಗಳು, 16 ವಿವಿಧ ಕಂಪನಿಯ ಮೊಬೈಲ್ ಹ್ಯಾಂಡ್ಸೆಟ್ಗಳು, 3 ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡಿರುತ್ತಾರೆ. ಸದರಿ ಆಸಾಮಿಗಳು ಕ್ರಿಕೆಟ್ ಬೆಟ್ಟಿಂಗ್ ಕಟ್ಟಲು ಬಳಸುತ್ತಿದ್ದ ಶಾಪರ್್ ಕಲರ್ ಟಿವಿ ಮತ್ತು 4 ಕ್ಯಾಲುಕೇಟರ್ಗಳನ್ನು ಸಹ ವಶಪಡಿಸಿಕೊಂಡು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

                                                       ಆರೋಪಿಗಳ ಹೆಸರು ಮತ್ತು ವಿಳಾಸ.

1] ಪಂಚಾಕ್ಷರಿ ಬಿನ್ ಲೇಟ್ ನಿಂಗೇಗೌಡ, 34 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಹಾಲಹಳ್ಳಿ ಸ್ಲಂ ಮಂಡ್ಯ ಸಿಟಿ. ಸ್ವಂತ ಸ್ಥಳ ಬೂತನ ಹೊಸೂರು ಗ್ರಾಮ, ಮಂಡ್ಯ ತಾಲ್ಲೋಕು. 
2] ನಾಗೇಶ ಬಿನ್ ವೆಂಕಟರಾಮು, 33 ವರ್ಷ, ವಾಸ ಮನೆ ನಂ. 140. ಎಲ್.ಜೆ. ಟೆಂಪಲ್ ಸ್ಟ್ರೀಟ್. ಹಳೆ ನಗರ, ಮಂಡ್ಯ. 
3] ಅನಿಲ್ಕುಮಾರ್ ಬಿನ್ ನಾಗೇಗೌಡ, 33ವರ್ಷ, ವ್ಯವಸಾಯ, ವಾಸ 1ನೇಕ್ರಾಸ್, ಹಾಲಹಳ್ಳಿ, ಮಂಡ್ಯ 
4] ದೇವರಾಜು ಬಿನ್ ನಂಜುಂಡಯ್ಯ, 34 ವರ್ಷ, ಟೈಲರ್ ಕೆಲಸ, ವಾಸ 7 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. 
5] ಆನಂದ ಬಿನ್ ವೆಂಕಟೇಶ, 26 ವರ್ಷ, ವಾಸ 4 ನೇ ಕ್ರಾಸ್, ಬೋವಿ ಕಾಲೋನಿ. ಮಂಡ್ಯ. 
6] ವೇಣುಗೋಪಾಲ ಬಿನ್ ರಾಮೇಗೌಡ, 28 ವರ್ಷ, ಆಪ್ಟಿಕಲ್ ಕೆಲಸ, ವಾಸ 4 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ ಸಿಟಿ. 
7] ಶಿವರಾಜ್ ಬಿನ್ ಲೇಟ್ ನಿಂಗೇಗೌಡ, 26 ವರ್ಷ, ಕಾಪೀ ಟಿ ವ್ಯಾಪಾರ, ವಾಸ ಕೇರಾಪ್ ಪಂಚಾಕ್ಷರಿ, ಹಾಲಹಳ್ಳಿ ಸ್ಲಂ ಮಂಡ್ಯ           ಸಿಟಿ. ಸ್ವಂತ ಸ್ಥಳ ಬೆಳ್ಳಾಳೆ ಗ್ರಾಮ, ಕನಕಪುರ ತಾಲ್ಲೋಕು.
8] ಮಧು ಬಿನ್ ಮಾದಯ್ಯ, 19 ವರ್ಷ, , ವಾಸ ಕೇರಾಪ್ ನಂಜುಂಡಯ್ಯ 7 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. ಸ್ವಂತ               ಸ್ಥಳ ರಾಮನಾಥಮೋಳೆ, ಕನಕಪುರ ತಾಲ್ಲೋಕು. 
9] ಶಂಕರ ಬಿನ್ ಲೇಟ್ ಸಿದ್ದಯ್ಯ, 28 ವರ್ಷ, ಲಾರಿ ಚಾಲಕ, ವಾಸ 5 ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ. 

         ಈ ಮೇಲ್ಕಂಡ ದಾಳಿಯಲ್ಲಿ ಪಾಲ್ಗೊಂಡಿದ್ದ ಮಂಡ್ಯ ಪೂರ್ವ ಠಾಣೆಯ ಪಿ.ಎಸ್.ಐ. ಶ್ರೀ ಎಂ. ಮಂಜುನಾಥ ಅಪರಾಧ ವಿಭಾಗದ ಪಿ.ಎಸ್.ಐ. ಶ್ರೀ ಎಂ.ಡಿ.ಶಿವರಾಜು ಹಾಗೂ ಸಿಬ್ಬಂದಿಯವರುಗಳುನ್ನು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಪ್ರಶಂಸಿರುತ್ತಾರೆ

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-04-12 ರಂದು ಒಟ್ಟು 23 ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು, 3 ಅಕ್ರಮ ಮರಳು ಸಾಗಣಿಕೆ ಪ್ರಕರಣಗಳು, 1 ಮಹಿಳಾ ದೌರ್ಜನ್ಯ ಪ್ರಕರಣ, 2 ಯು.ಡಿಆರ್ ಪ್ರಕರಣಗಳು ಹಾಗೂ 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  
 
ಕಳ್ಳತನ ಪ್ರಕರಣಗಳು :

1. ಕೆಸ್ತೂರು ಪೊಲೀಸ್ ಠಾಣೆ ಮೊ.ಸಂ.51/12 ಕಲಂ.379 ಐಪಿಸಿ.

     ದಿ:11-04-12 ರಂದು ಪಿರ್ಯಾದಿ ಮಲ್ಲಿಕಾರ್ಜನ ಬಿನ್ ಈರೇಗೌಡ, ಮುಟ್ಟನಹಳ್ಳಿ ಗ್ರಾಮ, ಮದ್ದೂರು ತಾಲೋಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ವಿವರವೇನೆಂದರೆ ಕೆ.ಎ. 02 ಇ.ಡಬ್ಲ್ಯೂ. 7935 ಹೀರೋ ಹೋಂಡಾ ಪ್ಯಾಷನ್ ಬೈಕನಲ್ಲಿ ಬಂದು ಬೈಕನ್ನು ದೇವಸ್ಥಾನದ ಮುಂದಿನ ಜಾಗದಲ್ಲಿ ನಿಲ್ಲಿಸಿ ಹೋಗಿ ನಂತರ ಪೂಜೆ ಮುಗಿಸಿಕೊಂಡು ವಾಪಸ್ಸು ಬಂದು ನೋಡಲಾಗಿ ಸದರಿ ಬೈಕನ್ನು ಯಾರೋ ಕಳ್ಳರು ಕಳ್ಳತಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿ ಕೊಡಿ ಇತ್ಯಾದಿ ದೂರು.

2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ212/12 ಕಲಂ.379 ಐ.ಪಿ.ಸಿ

     ದಿ: 11-04-2012 ರಂದು ಎಂ.ಸ್ವಾಮಿ ಬಿನ್ ಮುದ್ದೇಗೌಡ, ತಡಗವಾಡಿ ಗ್ರಾಮ, ಶ್ರೀರಂಗಪಟ್ಟಣ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ನನ್ನ ಮೋಟಾರ್ ಬೈಕ್ ವಾಹನ ಟಿವಿಎಸ್ ವಿಕ್ಟರ್ ಗಾಡಿ ನಂ ಕೆ.ಎ- 11 - ಕೆ -4295 ರಲ್ಲಿ ಮಿನಿವಿಧಾನ ಸೌಧದ ಆವರಣದಲ್ಲಿ ಸುಮಾರು 1-00 ಗಂಟೆ ವೇಳೆಯಲ್ಲಿ ವಾಹನ ನಿಲ್ಲಿಸಿ ಬೀಗ ಹಾಕಿ ತಾಲ್ಲೂಕು ಕಛೇರಿಗೆ ಹೋಗಿ ನನ್ನ ಸ್ವಂತ ಕೆಲಸ ಮುಗಿಸಿ 1-30 ಗಂಟೆಗೆ ಹೊರಗೆ ಬಂದು ಮೋಟಾರ್ ಬೈಕ್ ನೋಡಲಾಗಿ ಇರಲಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿ ಕಳ್ಳತನ ಮಾಡಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೆ.  ವಾಹನದ ಅಂದಾಜು ಬೆಲೆ ಸುಮಾರು 20,000 ರೂ. ಆಗುತ್ತದೆ. ಎಂದು ದೂರು.

ಅಕ್ರಮ ಮರಳು ಸಾಗಣಿಕೆ ಪ್ರಕರಣಗಳು :

1. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.68/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
     
     ದಿ: 11-04-2012 ರಂದು ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಯಡವನಹಳ್ಳಿ ಗ್ರಾಮದ ಶಿಂಷಾನದಿ ಪಾತ್ರದಲ್ಲಿ, ಕೊಪ್ಪ ಹೋ, ಮದ್ದೂರು ತಾ ಇಲ್ಲಿ ನಂಬರ್ ಇಲ್ಲದ ಟ್ರಾಕ್ಟರ್ ಚಾಲಕರು ಮತ್ತು ಮಾಲೀಕರು, ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿ ಯಲ್ಲಿರುತ್ತದೆ. ಆದರೂ ಮೇಲ್ಕಂಡ ಟ್ರಾಕ್ಟರ್ ಚಾಲಕ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಸಾಗಣಿಕೆ ಮಾಡಿರುತ್ತಾರೆ.

2. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.69/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
    
      ದಿ:11-04-12 ರಂದು ಪಿರ್ಯಾದಿ ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಶಿಂಷಾನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿ ಯಲ್ಲಿರುತ್ತದೆ. ಆದರೂ ಕೆಎ-11-ಟಿ-9523/9524 ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ಮತ್ತು ಮಾಲೀಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಸಾಗಣಿಕೆ ಮಾಡಿರುತ್ತಾರೆ ಅವರ ಮೇಲೆ ಕ್ರಮ ಜರುಗಿಸಲು ದೂರು.

3. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.70/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
       
     ದಿ:11-04-12 ರಂದು ಪಿರ್ಯಾದಿ ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಶಿಂಷಾನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಆದರೂ ಕೆಎ-11-ಟಿ-4720/4721 ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ಮತ್ತು ಮಾಲೀಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಗಣಿಗಾರಿಗೆ ಮತ್ತು ಸಾಗಾಣಿಕೆಯಲ್ಲಿ ತೊಡಗಿದು ಅವರ ಮೇಲೆ ಕ್ರಮ ಜರುಗಿಸಲು ದೂರು.

ಮಹಿಳಾ ದೌರ್ಜನ್ಯ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ಸಂ.56/12 ಕಲಂ.143-504-324-498(ಎ)-506 ಕೂಡ 149 ಐಪಿಸಿ

     ದಿ:11-04-2012 ರಂದು ಗಾಯತ್ರಿ ಕೋಂ ನಂಜಪ್ಪ,  ಅಂಚೇಬೀರನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಏನೆಂದರೆ ಈಗ್ಗೆ ಸುಮಾರು 11 ತಿಂಗಳ ಹಿಂದೆ ಅಂಚೇಬಿರನಹಳ್ಳಿ ಗ್ರಾಮ ನಂಜಪ್ಪ ಎಂಬುವವರಿಗೆ 10,000/- ರೂ ವರದಕ್ಷಿಣೆ, 15 ಗ್ರಾಂ ಚಿನ್ನ ಕೊಟ್ಟು ನನ್ನ ಮದುವೆ ಮಾಡಿದ್ದು ಸರಿಯಸ್ಟೆ, ಪಿರ್ಯಾದಿಯವರ ನಾದಿನಿ, ಅತ್ತಿಗೆ, ಇವರ ಗಂಡ ಎಲ್ಲರೂ ಪಿರ್ಯಾದಿಯವರ ಮನೆಯಲ್ಲಿ ಉಳಿದುಕೊಂಡಿದ್ದರು ಈಗಿರುವಲ್ಲಿ ಕೆಲವು ದಿವಸಗಳು ಅನ್ಯೋನ್ಯವಾಗಿದ್ದು ನಂತರ ಮೇಲ್ಕಂಡ ಆರೋಪಿಗಳು ಪಿರ್ಯಾದಿಯವರಿಗೆ ಮತ್ತು ಅವರ ಗಂಡನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದರು. ದಿನಾಂಕ 10-04-12 ರಂದು ಸಂಜೆ 7-30 ಗಂಟೆ ಯಲ್ಲಿ ಮೇಲ್ಕಂಡ ಆರೋಪಿಗಳು ಪಿರ್ಯಾದಿಯವರನ್ನು ಅವರ ಗಂಡನನ್ನು ಉದ್ದೇಶಿಸಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ 4 ರವರು ಮಚ್ಚನಿಂದ ಪಿರ್ಯಾದಿಯವರ ಕೈಗೆ ಹೊಡೆದು ಗಾಯಗೊಳಿಸಿ, ಪಿರ್ಯಾದಿಯವರ ಗಂಡನನ್ನು ಹಿಡಿದುಕೊಂಡು ಎಳೆದಾಡಿ ತರಚಿದ ಗಾಯಗೊಳಿಸಿ ಎಲ್ಲರೂ ಇವತ್ತಲ್ಲ ನಾಳೆ ಕೊಲೆ ಮಾಡುತ್ತೆವೆ ಎಂದು ಕೊಲೆ ಬೆದರಿಕೆಯನ್ನು ಹಾಕಿ ಗಲಾಟೆ ಮಾಡಿದರು ಎಂದು ಎಂಬಿತ್ಯಾದಿಯಾಗಿ ದೂರು..


ಯು.ಡಿಆರ್ ಪ್ರಕರಣಗಳು :

1. ಕೆ,ಆರ್,ಸಾಗರ ಪೊಲೀಸ್ ಠಾಣೆ ಮೊ.ಸಂ. ಯುಡಿಆರ್ ನಂ.15/12 ಕಲಂಃ174 ಸಿಆರ್.ಪಿ.ಸಿ

     ದಿ:11-04-12 ರಂದು ಈರಮ್ಮ ಕೋಂ ಲೇಟ್ ಕೆಂಪೇಗೌಡ, 40 ವರ್ಷ, ವಕ್ಕಲಿಗರು, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲೋಕು. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯ ಮಗಳಾದ ಶೃತಿ ಡಾಟರ್ ಆಪ್ ಲೇಟ್ ಕೆಂಪೇಗೌಡ, 19 ವರ್ಷ, ಮನೆ ಕೆಲಸ, ಒಕ್ಕಲಿಗರು, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲೋಕು ರವರಿಗೆ ಕಳೆದ 6 ತಿಂಗಳಿಂದ ಆಗ್ಗಾಗ್ಗೆ ಹೊಟ್ಟೆ ನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ದಿನಾಂಕ: 07-04-12 ರಂದು ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಶೃತಿಯು ಅಡುಗೆ ಮನೆಗೆ ತಿಂಡಿ ತಿನ್ನಲು ಹೋಗಿದ್ದಾಗ ಹೊಟ್ಟೆನೋವು ಬಂದು ತಾಳಲಾರದೆ ಅಡುಗೆ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ತೆಗೆದುಕೊಂಡು ಮೈಮೇಲೆ ಸುರುದುಕೊಂಡು ಬೆಂಕಿ ಕಡ್ಡಿ ಗೀರಿ ಹಚ್ಚಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಶೃತಿಯು ಮೃತಪಟ್ಟಿರುತ್ತಾಳೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ದೂರು ಮೇರೆಗೆ.

2. ಪಾಂಡವ ಪುರ ಪೊಲೀಸ್ ಠಾಣೆ ಮೊ.ಸಂ. 17/12 ಕಲಂ. 174 ಸಿಆರ್.ಪಿ.ಸಿ

     ದಿ: 11-04-12 ರಂದು ಪಿರ್ಯಾದಿ ಆಕಾಶ್. ಡಿ. ಬಿನ್ ದಾಸಪ್ಪ, ಶಿವರಾಂ ಬಡಾವಣೆ, ಕೆನ್ನಾಳು ಗ್ರಾಮ, ಪಾ ಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಮನೆಯ ಮುಂದಿನ ಮೈಸೂರು ಪಾಂಡವಪುರ ರಸ್ತೆಯ ಫುಟ್ಪಾತ್ ನ ಹುಲ್ಲಿನ ಮೇಲೆ ಒಬ್ಬ ಅಪರಿಚಿತ ಗಂಡಸು ಸುಮಾರು 35 ರಿಂದ 40 ವರ್ಷ ಆಸಾಮಿಯು ಮಲಗಿಕೊಂಡಿದ್ದು,  ಹತ್ತಿರ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದು ಈ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ನರಳಿ ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ದೂರಿನ ಮೇರೆಗೆ ಠಾಣಾ ಯುಡಿಆರ್ ನಂ 17/2012 ಕಲಂ 174 ಸಿ.ಆರ್.ಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ. 

Press Note on Nagamangala Town PS

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
  ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 04-04-2012 

ಪತ್ರಿಕಾ ಪ್ರಕಟಣೆ.

ನಾಗಮಂಗಲ ಟೌನಿನಲ್ಲಿರುವ ಸರ್ಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್. ಮದ್ಯದ ಅಂಗಡಿಯಲ್ಲಿ ಕಳುವಾಗಿದ್ದ ಮದ್ಯದ ಬಾಟಲಿಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿರುವ ಬಗ್ಗೆ. 

     ದಿನಾಂಕ:01-04-2012 ರಂದು ಮದ್ಯರಾತ್ರಿ ನಾಗಮಂಗಲ ಟೌನಿನ ಮುಖ್ಯರಸ್ತೆಯಲ್ಲಿರುವ  ಸರ್ಕಾರಿ  ಸ್ವಾಮ್ಯದ ಎಂಎಸ್ಐಎಲ್.ನ ಮದ್ಯಮಾರಾಟದ ಅಂಗಡಿಗೆ ಹಾಕಿದ್ದ ಷೆಟರ್ ಬಾಗಿಲನ್ನು ಮುರಿದು ತೆಗೆದು ಸದರಿ  ಮಳಿಗೆಯಲ್ಲಿದ್ದ  750 ಎಂ.ಎಲ್ನ 3 ಮದ್ಯದ ಬಾಟೆಲ್ಗಳು ಹಾಗೂ 94,908 .ರೂ. ನಗದು ಹಣವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಎಂಎಸ್ಐಎಲ್ ಜಿಲ್ಲಾ ಮೆಲ್ವಿಚಾರಕರಾದ ಹೆಚ್.ಎಂ.ಶಂಕರಯ್ಯ ರವರು ನೀಡಿದ್ದ ದೊರಿನ ಮೇರೆಗೆ ನಾಗಮಂಗಲ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಸ್ಥಳೀಯ ಪೊಲೀಸ್ ಅದಿಕಾರಿಗಳು ತನಿಖೆ ಕೈಗೊಂಡಿದ್ದರು.  

     ಈ ವಿಚಾರದಲ್ಲಿ ಪ್ರಕರಣದ ತನಿಖಾದಿಕಾರಿಗಳಾದ ಶ್ರೀ. ಟಿ.ಡಿ. ರಾಜು, ಸಿಪಿಐ, ನಾಗಮಂಗಲ ವೃತ್ತ, ಶ್ರೀ. ವೆಂಕಟೇಗೌಡ, ಪಿಎಸ್ಐ, ನಾಗಮಂಗಲ ಟೌನ್ ಠಾಣೆ ಹಾಗೂ ಸಿಬ್ಬಂದಿಯವರು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದು, ಸದರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 1] ಮಹೇಂದ್ರ ಬಿನ್ ಮಾಯಣ್ಣಗೌಡ, 32 ವರ್ಷ, ಬಸ್ತಿ ಗ್ರಾಮ, ಬೂಕರನಕೆರೆ ಹೋಬಳಿ ಕೆ.ಆರ್. ಪೇಟೆ ತಾಲ್ಲೊಕು, 2] ಮಹೇಶ ಬಿನ್ ಬಸಪ್ಪ 25ವರ್ಷ, ಚೋಕನಹಳ್ಳಿ, ವರುಣಾ ಹೋಬಳಿ, ಮೈಸೂರು ಜಿಲ್ಲೆ. 3] ರಾಮಲಿಂಗೇಗೌಡ ಬಿನ್ ಮರಿಗೌಡ, 32 ವರ್ಷ, ಬೇಬಿ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೊಕು, ರವರುಗಳನ್ನು  ದಿನಾಂಕಃ 03-04-2012 ರಂದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ, ತಾವು ಮೂರು ಜನರು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಎಲ್ಲರೂ ಮಾತನಾಡಿಕೊಂಡು ದಿನಾಂಕ 01-04-2012 ರ ರಾತ್ರಿ ಜಾಕ್ನಿಂದ ಅಂಗಡಿಯ ರೋಲಿಂಗ್ ಷೆಟರ್ ಅನ್ನು ಎತ್ತಿ ಹಣ ಮತ್ತು ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪನ್ನು ಒಪ್ಪಿಸಿಕೊಂಡಿರುತ್ತಾರೆ. ಅವರ ಹೇಳಿಕೆ ಅನ್ವಯ ಆರೋಪಿತರಿಂದ ಕಳುವು ಮಾಡಿದ್ದ ಹಣದ ಪೈಕಿ ರೂ.  80,900 ಹಣ ಹಾಗೂ ಒಂದು ಕಾರಿನ ಜಾಕ್ ಅನ್ನು ವಶಪಡಿಸಿಕೊಂಡು, ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತದೆ. 

     ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ  ವೃತ್ತನಿರೀಕ್ಷಕರಾದ ಶ್ರೀ. ಟಿ.ಡಿ.ರಾಜು, ನಾಗಮಂಗಲ ಪುರ ಠಾಣೆಯ ಪಿ.ಎಸ್.ಐ ಶ್ರೀ. ವೆಂಕಟೇಗೌಡ ಹಾಗೂ ಸಿಬ್ಬಂದಿಯವರು ರವರನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಶಿಸಿರುತ್ತಾರೆ.