Moving text

Mandya District Police

DAILY CRIME REPORT DATED : 27-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,   1 ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.

ದಿನಾಂಕ: 27-02-2013 ರಂದು ಪಿರ್ಯಾದಿ ವಸಂತ್ ಕುಮಾರ್ ಬಿನ್ ನಾಗರಾಜಶೆಟ್ಟಿ, ಬಿ.ಜೆ ಮೋಳೆ ಗ್ರಾಮ, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ದೊಡ್ಡಪ್ಪ ನಂಜಶೆಟ್ಟಿ @ ನಾಗಶೆಟ್ಟಿ, ಬಿ.ಜೆ ಮೋಳೆ ಗ್ರಾಮ, ಮಳವಳ್ಳಿ ತಾ|| ರವರಿಗೆ ಹೊಟ್ಟೆನೋವು ಬರುತ್ತಿದ್ದು, ಯಾವುದೇ ಚಿಕಿತ್ಸೆ ಕೊಡಿಸಿದ್ದರೂ ವಾಸಿಯಾಗದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ವಿಷವನ್ನು ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದು, ಶವದ ಮುಂದಿನ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರು ಮೇರೆಗೆ ಈ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 27-02-2013 ರಂದು ಪಿರ್ಯಾದಿ ಅಶೋಕಕುಮಾರ  ಬಿನ್. ಅಪ್ಪು ಸಂಪಂಗಿ, ಗಾರೆ ಕೆಲಸ,  ವಾಸ. ನಂ.8,  19ನೇ ಬ್ಲಾಕ್, ಕೆ.ಎಸ್.ಡಿ.ಬಿ. ಕ್ವಾಟ್ರಸ್, ಕಾವೇರಿ ನಗರ, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶ್ರೀನಿವಾಸ  35 ವರ್ಷ, ವಾಸ  ನಂ-8, 19 ನೇ ಬ್ಲಾಕ್, ಕೆ.ಎಸ್.ಡಿ.ಬಿ. ಕ್ವಾಟ್ರಸ್, ಕಾವೇರಿ ನಗರ ಬೆಂಗಳೂರು ಈತನಿಗೆ ಮೂಚರ್ೆ ರೋಗವಿದ್ದು  ಈತನು ಚಿಕಿತ್ಸೆ ಪಡೆಯುತ್ತಿದ್ದು  ಆ ದಿನ ಮೇಸ್ತ್ರಿ ದಿವಾಕರರವರ ಹತ್ತಿರ ಪೈಂಟ್ ಕೆಲಸ ಮಾಡುತ್ತಿದ್ದಾಗ ದಿನಾಂಕ: 26-02-2013 ರಂದು ಮದ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಹೊಸ ಬಸ್ ನಿಲ್ದಾಣದ ಪಕ್ಕ ಹೊಸದಾಗಿ ಕಟ್ಟುತ್ತಿರುವ ಜಯರಾಮು ರವರ ಬಿಲ್ಡಿಂಗ್ಗೆ ಬಣ್ಣ ಹೊಡೆಯುತ್ತಿದ್ದಾಗ ಆ ಸಮಯದಲ್ಲಿ ಮೃತ ಶ್ರೀನಿವಾಸನಿಗೆ     ಮೂರ್ಛ ರೋಗ ಬಂದು ಸುಮಾರು 15 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಏಟಾಗಿದ್ದು ತಕ್ಷಣ ಅವನ ಸ್ನೇಹಿತರು ಹಾಗು ಮೇಸ್ತ್ರಿ ದಿವಾಕರ ಎಲ್ಲರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:26-02-2013ರ ಮದ್ಯಾಹ್ನ ಸುಮಾರು 12-30 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 143-498(ಎ)-504-341-323-506 ಕೂಡ 149 ಐಪಿಸಿ ಮತ್ತು 3 ಮತ್ತು 4 ಡಿ.ಪಿ.ಆಕ್ಟ್.

ದಿನಾಂಕ: 27-02-2013 ರಂದು ಪಿರ್ಯಾದಿ ಕೆ.ಪಿ ಪವಿತ್ರ ಕೊಂ. ತಮ್ಮಯ್ಯ, ಶೆಟ್ಟಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯ  ಗಂಡ ತಮ್ಮಯ್ಯ,  ಅತ್ತೆ ನಾಗಮ್ಮ, ಮಾವ ವೆಂಕಟಯ್ಯ ಹಾಗು ಪ್ರೇಮ ಮತ್ತು ಸಾವಿತ್ರಿ ರವರುಗಳು ಸೇರಿಕೊಂಡು ಮತ್ತೆ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಪೀಡಿಸುತ್ತಿದ್ದರಿಂದು, ಹಾಗೂ ದಿನಾಂಕ: 26-02-2013 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಮೇಲ್ಕಂಡ ಆರೋಪಿತರೆಲ್ಲರು ಸೇರಿಕೊಂಡು ಪಿರ್ಯಾದಿಯವರಿಗೆ  ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ, ಆರೋಪಿ-4 ರವರು ಪಿರ್ಯಾದಿಯವರನ್ನು ತಬ್ಬಿ ಹಿಡಿದುಕೊಂಡು ಮುಂದಲೆ ಹಿಡಿದು ಎಳೆದಾಡಿ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೆ ಮನೆಗೆ ಬರಬೇಡ ಎಂದು ಆರೋಪಿತರೆಲ್ಲರೂ ಮನೆಯಿಂದ ಹೊರಕ್ಕೆ ತಬ್ಬಿ ನಿನಗೆ ಇನ್ನೂ ಮಕ್ಕಳಾಗಿಲ್ಲ ನೀನು ಎಲ್ಲಾದರೂ ಕೆರೆ ಬಾವಿ ಬಿದ್ದು ಸಾಯಿ ತಮ್ಮಯ್ಯನಿಗೆ ಬೆರೆ ಮದುವೆ ಮಾಡುತ್ತೇವೆ ಎಂದು ಹೊಡೆದು ಗಲಾಟೆ ಮಾಡಿರುತ್ತಾರೆ ಅವರಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 38/13 ಕಲಂ.11 [1] [ಡಿ] [ಇ] ಆಫ್ ಪ್ರಿವೆನ್ಷನ್ ಆಫ್ ಕ್ರುಯಲ್ಟಿ ಟು ಅನಿಮಲ್ ಆಕ್ಟ್ ಸೆಕ್ಷನ್ 4 & 11 ಆಫ್ ಕೌ ಸ್ಲಾಟರ್ ಆಕ್ಟ್ & ಕ್ಯಾಟಲ್ ಪ್ರಿವೆನ್ ಷನ್ ಆಕ್ಟ್ 1964.

ದಿನಾಂಕಃ 27-02-2013 ರಂದು ಪಿರ್ಯಾದಿ ಹೆಚ್.ಟಿ.ಪುಟ್ಟಸ್ವಾಮಿ, ಎಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ದಿನಾಂಕಃ 27-02-2013 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ಳೂರಿನ ಲ್ಯಾಂಕೋ ಚೆಕ್ ಪೋಸ್ಟ್ ಬಳಿ ಹಾಸನದ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಚೆಕ್ ಮಾಡುತ್ತಿರುವಾಗ ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಕೆಎ-13-ಬಿ-342ರ ಲಾರಿಯನ್ನು ಚೆಕ್ ಮಾಡಿದಾಗ ಅದರಲ್ಲಿ 06 ಹಸುಗಳು ಹಾಗೂ 20 ಎಮ್ಮೆಗಳಿದ್ದು, ಸದರಿ ರಾಸುಗಳನ್ನು ಅತ್ಯಂತ ಹಿಂಸಾತ್ಮಕವಾಗಿ, ಇಕ್ಕಟ್ಟಾದ ಜಾಗದೊಳಗೆ ಅಷ್ಟು ರಾಸುಗಳಿಗೆ ನಿಲ್ಲಲು ಅಥವ ಮಲಗಲು ಸಾಕಷ್ಟು ಸ್ಥಳಾವಕಾಶ ಹಾಗೂ ಬೆಳಕು ಇಲ್ಲದೆ ಅತ್ಯಂತ ಕ್ರೂರವಾಗಿ ತುಂಬಿ, ಸದರಿ ಲಾರಿಯನ್ನು ಅದರಲ್ಲಿದ್ದ ರಾಸುಗಳನ್ನು ಹಾಗೂ ಲಾರಿಯ ಚಾಲಕ ಮತ್ತು ಕೂಲಿಕೆಲಸಗಾರರನ್ನು ವಶಕ್ಕೆ ತೆಗೆದುಕೊಂಡು ಸ್ವತಃ ಪ್ರಕರಣ ದಾಖಲಿಸಿರುತ್ತಾರೆ.

DAILY CRIME REPORT DATED : 26-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-02-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 20 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 498(ಎ)504.506 ಕೂಡ 34 ಐ.ಪಿ.ಸಿ ಕೂಡ 3-4 ಡಿ.ಪಿ. ಆಕ್ಟ್.

ದಿನಾಂಕಃ 26-02-2013 ರಂದು ಪಿರ್ಯಾದಿ ಆಶಾ .ಆರ್ ಕೋಂ. ಪರಮೇಶ್, ಆರತಿ ಉಕ್ಕಡ ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರಿಗೆ ಆರೋಪಿ 1, ಪರಮೇಶ್ ರವರೊಂದಿಗೆ  ಗಂಡನ  ಮನೆಯವರ  ಬೇಡಿಕೆಯಂತೆ 1.50.000/- ವಿವಾಹದ  ವರದಕ್ಷಿಣೆಯಾಗಿ ನೀಡಿದ್ದರು ನನ್ನ ಗಂಡ, ಅತ್ತೆ, ನಾದಿನಿ ಪುನಃ  ನೀನು  ತಾಯಿ ಮನೆಗೆ  ಹೋಗಿ ಹಣ  ಮತ್ತು ಒಡವೆಗಳನ್ನು ತೆಗೆದುಕೊಂಡು  ಬಾ ಎಂದು  ಕಿರುಕುಳ ನೀಡುತ್ತಿದ್ದು ಗಂಡ , ನಾದಿನಿ, ಅತ್ತೆ ನನಗೆ  ಸರಿಯಾಗಿ  ಊಟವನ್ನು   ಕೊಡದೆ  ಹಲ್ಲೆಯನ್ನು  ಸಹ ಮಾಡಿ  ಅವ್ಯಾಚ್ಯ ಶಬ್ದಗಳಿಂದ   ನಿಂದಿಸಿ ಮನೆಯಿಂದ   ಹೊರಗೆ  ಕಳುಹಿಸಿರುತ್ತಾರೆ,  ನೀನು ಪುನಃ   ಬಂದರೆ   ನಿನ್ನನ್ನು ಸೀಮೆ  ಎಣ್ಣೆಯಿಂದ  ನಿನ್ನನ್ನು  ಮುಗಿಸುತ್ತೇನೆ ಎಂಬುದಾಗಿ  ಜೀವ  ಬೆದರಿಕೆ  ಹಾಕಿರುತ್ತಾರೆ. ನನ್ನ ಗಂಡ ಪರಮೇಶ್, ನಾದಿನಿ, ಅತ್ತೆ  ಲಕ್ಷ್ಮಮ್ಮ  ನೀನು ಈ ಮನೆಯಲ್ಲಿ ಇರಬೇಕಾದರೆ ಪುನಃ 50.000/- ರೂ ತೆಗೆದುಕೊಂಡು  ಬಾ ಎಂದು  ಮನೆಯಿಂದ  ಹೊರ ಹಾಕಿರುತ್ತಾರೆ ಆದ್ದರಿಂದ  ದಯಮಾಡಿ ತಿಳಿಸಿರುವ  ಮೂವರ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಬೇಕೆಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯುಡಿಆರ್ ನಂ 10/2013 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕಃ 26-02-2013 ರಂದು ಪಿರ್ಯಾದಿ ಉಮಾ ಕೋಂ. ಲೇ|| ಹೆಚ್.ಎನ್. ಮಹೇಶ, ಹೊಸಹೊಳಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಹೆಚ್.ಎನ್. ಮಹೇಶ ಬಿನ್. ನಂಜಪ್ಪಶೆಟಿ,್ಟ ಹೊಸಹೊಳಲು ಗ್ರಾಮ, ಕೆ.ಆರ್.ಪೇಟೆ ತಾ|| ರವರು ತಮಗೆ ಬರುತ್ತಿದ್ದ ಹೊಟ್ಟೆನೋವನ್ನು ತಾಳಲಾರದೆ ತನ್ಮೂಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಬೇರೆ ಯಾವುದೇ ಕಾರಣವಿರುವುದಿಲ್ಲ. ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬಹುದೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 457-380 ಐ.ಪಿ.ಸಿ.

       ದಿನಾಂಕ: 26-02-2013 ರಂದು ಪಿರ್ಯಾದಿ ಹೆಚ್. .ವಿಜಯಲಕ್ಷ್ಮಿ, ಕಾರ್ಯಕರ್ತೆ, ಅಂಗನವಾಡಿ, 1 ಕೇಂದ್ರ. ಚಿಕ್ಕರಸಿನಕೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 25-02-13 ರಂದು ರಾತ್ರಿ ವೇಳೆಯಲ್ಲಿ ಯಾರೋ  ಕಳ್ಳರು ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಒಳಗೆ ಇದ್ದ 2 ಸಿಲಿಂಡರ್ ಗಳನ್ನು ಕಳುವು ಮಾಡಿರುತ್ತಾರೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮದ್ದೂರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 279-337-304(ಎ) ಐ.ಪಿ.ಸಿ.

ದಿನಾಂಕ: 26-02-2013 ರಂದು ಪಿರ್ಯಾದಿ ನಾಗರಾಜು, 28 ವರ್ಷ, ಬಣಜಿಗಶಟ್ಟರು, ವ್ಯವಸಾಯ, ಹುಲಿಯೂರುದುರ್ಗ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಕೆ.ಎ.-11-2151 ರ ಮಹೇಂದ್ರ ಮ್ಯಾಕ್ಸಿಕ್ಯಾಬ್ ಚಾಲಕ ಹೆಸರು ವಿಳಾಸ ತಿಳಿಯಬೇಕಾಗಿದೆ, ಮ್ಯಾಕ್ಸಿಕ್ಯಾಬನ್ನು ಮದ್ದೊರು ಕಡೆಯಿಂದ ಚನ್ನಪಟ್ಟಣದ ಕಡೆಗೆ ಹೋಗಲು ಮೈಸೂರು ಬೆಂಗಳೂರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬಹಳ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ವೆಂಕಟೇಶ್ ಮತ್ತು ಶ್ರೀನಿವಾಸ್ ರವರು ಬರುತ್ತಿದ್ದ ಮೋಟರ್ ಸೈಕಲ್ ಗೆ, ರಭಸವಾಗಿ ಡಿಕ್ಕಿಹೊಡೆಸಿದ ಪರಿಣಾಮ ಅವರುಗಳು ಮೋಟರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಹೋದರು, ಶ್ರೀನಿವಾಸ್ ರವರು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಂಜೆ ಸತ್ತು ಹೋಗಿರುತ್ತಾನೆ. ಮೇಲ್ಕಂಡ ಅಪಘಾತ ಉಂಟುಮಾಡಿದ ಮ್ಯಾಕ್ಸಿಕ್ಯಾಬ್ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 25-02-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-02-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಕಳವು ಪ್ರಕರಣ,  3 ಮನುಷ್ಯ ಕಾಣೆಯಾದ ಪ್ರಕರಣಗಳು ಹಾಗು 9 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.  

ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ.04/13 ಕಲಂ,174 ಸಿ.ಆರ್.ಪಿ.ಸಿ.

ದಿನಾಂಕ: 25/02/2013 ರಂದು ಪಿರ್ಯಾದಿ ಗೌರಮ್ಮ ಕೋಂ ಲೇಟ್ ನಾಗೇಗೌಡ @ ಕೆಂಚೇಗೌಡ, 50 ವರ್ಷ, ವಕ್ಕಲಿಗರು, ಮನೆಕೆಲಸ, ಗಾಜನೂರು ಗ್ರಾಮ ರವರು ನೀಡಿದ ದೂರು ಏನೆಂದರೆ ಹೊಟ್ಟೆನೋವಿನ ಬಾಧೆ ತಾಳಲಾರದೇ ಯಾವುದೋ ವಿಷದ ಔಷದಿಯನ್ನು ತೆಗೆದುಕೊಂಡು ಒದ್ದಾಡುತ್ತಿದ್ದನು. ಅದನ್ನು ಕಂಡು ಕೂಗಿಕೊಂಡಾಗ ಅಲ್ಲೇ ಪಕ್ಕದಲ್ಲಿದ್ದ ನಮ್ಮೂರಿನ ಶ್ರೀನಿವಾಸ ಬಿನ ಬಸವರಾಜು, ಹಾಗೂ ಇತರರು ಸೇರಿಕೊಂಡು ತಕ್ಷಣ ಮಳವಳ್ಳಿ ಸಕರ್ಾರಿ ಆಸ್ಪತ್ರೆಗೆ ತೋರಿಸಿ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಿಸದೆ, ದಿನಾಂಕ: 24-02-2013 ರ ರಾತ್ರಿ 10-00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ. 


ಕಳವು ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 78/13 ಕಲಂ. 457-380 ಐ.ಪಿ.ಸಿ.

ದಿನಾಂಕ: 25-02-2013 ರಂದು ಪಿರ್ಯಾದಿ ಬಿ.ಎನ್. ಮುಖ್ಯೋಪಾದ್ಯಾಯರು, ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಕೇಗೌಡನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬೀಗಗಳನ್ನು ಹೊಡೆದು ಬಾಗಿಲು ತೆರೆದಿದ್ದು ಕೊಠಡಿಯನ್ನು ಪರಿಶೀಲಿಸಲಾಗಿ ವಾಲಿಬಾಲ್-1, ತ್ರೋಬಾಲ್-1, ಷಟ್ಲ್ ಕಾಕ್ ಬ್ಯಾಟ್-2, ಕ್ರಿಕೆಟ್ ಬ್ಯಾಟ್-1, ಚೆಸ್ ಬೋರ್ಡ್  ಮತ್ತು ಕಾಯಿನ್-1, ಲುಡೋ-1, ಈ ಸಾಮಗ್ರಿಗಳ ಬೆಲೆ ಅಂದಾಜು ಸುಮಾರು ರೂ 1800/- ಗಳಾಗಿದ್ದು ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಮೇಲ್ಕಂಡ ಕ್ರೀಡಾ ಸಾಮಗ್ರಿಗಳನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 25-02-2013 ರಂದು ಪಿರ್ಯಾದಿ ಬಾಗ್ಯ ಕೋಂ ಬೋರೇಗೌಡ ದೊದ್ದನಕಟ್ಟೆ ಗ್ರಾಮ, ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗನಾದ ರಂಜನ್, 13 ವರ್ಷ, ಇವನು ಸಂಜೆಯತನಕ ಮನೆಯಲ್ಲೇ ಇದ್ದು, ನಂತರ ಸುಮಾರು 05-00 ಗಂಟೆಯ ವೇಳೆಯಲ್ಲಿ ನಾವುಗಳು ಯಾರು ಇಲ್ಲದ ವೇಳೆಯಲ್ಲಿ ಆತ ಮನೆಬಿಟ್ಟು ಹೋಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 31/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 25-02-2013 ರಂದು ಪಿರ್ಯಾದಿ ಪುಟ್ಟಲಕ್ಷ್ಮಮ್ಮ ಕೋಂ. ವೆಂಕಟೇಶ್ಗೌಡ, ಜೆ.ಪಿ.ಎಂ ಬಡಾವಣೆ, ಹಲಗೂರು ಟೌನ್, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಗಂಡನಾದ ಸಿ.ವೆಂಕಟೇಶ್ಗೌಡ, ಹಲಗೂರು ಟೌನ್, ಮಳವಳ್ಳಿ ತಾಲ್ಲೂಕು ರವರು ಮನೆಯಿಂದ ಹೊರಟು ಮಳವಳ್ಳಿಗೆ ಹೋಗಿ ಬರುತ್ತೆನೆಂದು ಹೇಳಿ ಹೋದವರು ಇದುವರೆಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ ನಾವು ನಮ್ಮ ಸಂಬಂಧಿಕರು ಹಾಗೂ ಇತರೆ ಕಡೆಗಳಲ್ಲಿ ಹುಡುಕಲಾಗಿ ನಮ್ಮ ಯಜಮಾನರು ಸಿಕ್ಕಿರುವುದಿಲ್ಲ ಕಾಣೆಯಾಗಿರುವ ನನ್ನ ಯಜಮಾನರನ್ನು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಕಿಕ್ಕೇರಿ ಪೊಲೀಸ್ ಠಾಣೆ ಪೊಲೀಸ್ ಠಾಣೆ ಮೊ.ನಂ. 36/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 25-02-2013 ರಂದು ಪಿರ್ಯಾದಿ ರಾಜೇಗೌಡ ಬಿನ್. ಜವರೇಗೌಡ, ಮಾದಾಪುರ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ರವರು ನೀಡಿದ ದೂರು ಏನೆಂದರೆ ದಂಡಿಘಟ್ಟ ದಾಖ್ಲೆಗೆ ಸೇರಿದ ಲಕ್ಷ್ಮೀಪುರ ತೋಟದ ಮನೆ ರಾಮೇಗೌಡರ ಮಗ ರವಿಕುಮಾರ ಎಂಬುವವರಿಗೆ ಮದುವೆ ಮಾತುಕತೆ ಆಗಿದ್ದು ದಿನಾಂಕ: 23-02-2013 ರಂದು ಪಿರ್ಯಾದಿಯವರ  ಮೊಬೈಲ್ ಗೆ.  ಫೋನ್ ಮಾಡಿ ನನಗೆ ಮದುವೆ ಇಷ್ಟವಿಲ್ಲವೆಂದು ಫೋನ್ ಮಾಡಿ ಕಟ್  ಮಾಡಿ ಹೋದವಳು ಇದುವರೆವಿಗೂ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 24-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-02-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 7 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ವಾಹನ ಕಳವು ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 379 ಐ.ಪಿ.ಸಿ.

ದಿನಾಂಕ: 24-02-2013 ರಂದು ಪಿರ್ಯಾದಿ ಕಿಶೋರ್ ಬಿನ್. ಲೇ| ರಾಜು, ಪಾಲಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 23-02-2013 ರಂದು ಪಿರ್ಯಾದಿಯವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಏಂ-09-ಕ-3474 ಕಾರ್ ನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 2.40.000/- ರೂ ಆಗಿರುತ್ತೆ  ಪತ್ತೆ  ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 143-341-323-506 ಕೂಡ 149 ಐ.ಪಿ.ಸಿ ಮತ್ತು 3 ಕ್ಲಾಸ್ 1 (ಘಿ) ಎಸ್.ಸಿ/ಎಸ್.ಟಿ. ಆಕ್ಟ್.

ದಿನಾಂಕ: 24-02-2013 ರಂದು ಪಿರ್ಯಾದಿ ಪುರುಷೋತ್ತಮ್ ಬಿನ್. ಲೇ: ಸಿ.ಡಿ.ರಾಜು, 35ವರ್ಷ, ಪರಿಶಿಷ್ಟಜಾತಿ, ವ್ಯವಸಾಯ, ಅಣಸಾಲೆ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮನೆಗೆ ಹೋಗುವಾಗ ಆರೋಪಿಗಳಾದ 1 ಭೂಮಿಸಿದ್ದಯ್ಯ, 2. ಮಹೇಶ್, 3. ಕೆಂಚ, 4 ನಾಗರಾಜು, 5.ಭೂಮಿಸಿದ್ದಯ್ಯ ಇಲ್ಲರೂ ರಾಮನಾಥಮೋಳೆ ಗ್ರಾಮ, ಮಳವಳ್ಳಿ ತಾಲ್ಲೂಕು ರವರುಗಳು ಅಡ್ಡಗಟ್ಟಿ ಹೊಡೆದಿರುತ್ತಾರೆ. ಇವರುಗಳು ಹೊಲಯ ನನ್ನ ಮಕ್ಕಳ ಅಂತ ಬೈಯುತ್ತ ಮನೆಯವರೆವಿಗೂ ಓಡಿಸಿಕೊಂಡು ಬಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಮೇಲ್ಕಂಡ ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿ ಇವರುಗಳ ಮೇಲೆ ಕ್ರಮತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಅರಿಕೆ ಮತ್ತು ಈ ಬಗ್ಗೆ ಗ್ರಾಮದಲ್ಲಿ ತೀರ್ಮಾನ ಮಾಡಿಕೊಳ್ಳಲು ಕಾದಿದ್ದು ತೀರ್ಮಾನವಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ.


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-02-2013 ರಂದು ಪಿರ್ಯಾದಿ ನಸೀಬ್ಖಾನ್ ಬಿನ್. ಲೇಟ್. ಮುಸ್ತಾಪ್ ಖಾನ್, 29 ವರ್ಷ ರವರುಗಳು ನೀಡಿದ ದೂರಿನ ವಿವರವೇನೆಂದರೆ ನಮ್ಮ ತಂದೆ  ಮುಸ್ತಾನ್ ಖಾನ್  ಬಿನ್. ಸುಬಾನ್ ಖಾನ್, 50 ವರ್ಷ ರವರು ಅಪಘಾತದಿಂದ ಆದ ಗಾಯಗಳಿಂದ ಮೃತಪಟ್ಟಿರುತ್ತಾರೆಯೋ ಅಥವಾ ಇನ್ಯಾವ ಕಾರಣದಿಂದ ಮೃತಪಟ್ಟಿರುತ್ತಾರೋ ಎಂಬುದರ ಬಗ್ಗೆ ವೈದ್ಯರಿಂದ ಪರೀಕ್ಷಿಸಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ  ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ. 

ದಿನಾಂಕ: 24-02-2013 ರಂದು ಪಿರ್ಯಾದಿ ಕುಳಂದೇರಾಜ್ ಬಿನ್. ಆರೋಗ್ಯಸ್ವಾಮಿ, ನಂಃ 2/156, ನಾರ್ತ್ . ಸ್ಟ್ರೀಟ್, ದವಸಿಮೇಳೈ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಮೌಳಿ ರಾಯ್ ಅಲೆಕ್ಸ್ ಬಿನ್. ಕುಳಂಧೈರಾಜ್, 29ವರ್ಷ, ಕ್ರಿಶ್ಚಿಯನ್ ಜನಾಂಗ ರವರು ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಈಜಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 52/13 ಕಲಂ. 457-380 ಐ.ಪಿ.ಸಿ.

ದಿನಾಂಕ: 24-02-2013 ರಂದು ಪಿರ್ಯಾದಿ ಬಸವರಾಜು, ಮುಖ್ಯೋಪಾಧ್ಯಾಯರು, ಚೀಕನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 23.02.2013 ರ ರಾತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೀಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ 03 [ಮೂರು] ಸಿಲಿಂಡರ್ಗಳು ಅಂದರೆ ಅಕ್ಷರ ದಾಸೋಹದಿಂದ ಕೊಟ್ಟಿರುವ ಹೆಚ್.ಪಿ. ಸಿಲಿಂಡರ್ ಗಳು ಕಳ್ಳತನವಾಗಿರುತ್ತವೆ  ಪತ್ತೆ  ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 24-02-2013 ರಂದು ಪಿರ್ಯಾದಿ ಬಸವಲಿಂಗಯ್ಯ ಬಿನ್. ಲೆಃ ನಿಂಗಯ್ಯ, ಗೊರವಾಲೆ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಮಗಳು 19 ವರ್ಷ ರವರು ದಿನಾಂಕ: 20-02-2013 ರ ಬೆಳಿಗ್ಗೆ 08.30 ಗಂಟೆಯಲ್ಲಿ ಮಂಡ್ಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದಳು ಎಂದು ಗೊತ್ತಾಯಿತು. ಇದುವರೆಗೂ ವಾಪಸ್ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಲಾಗಿ ಇದುವರೆಗೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 279.304 (ಎ) ಐ.ಪಿ.ಸಿ.

ದಿನಾಂಕ: 24-02-2013 ರಂದು ಪಿರ್ಯಾದಿ ಕುಮಾರ ಬಿನ್ ಲೇಟ್ ಮಾದಪ್ಪ, 40ವರ್ಷ. ಲಿಂಗಾಯಿತರು, ವ್ಯವಸಾಯ ವಾಸ ಬಾಚನಹಳ್ಳಿ. ಬಿಜಿಪುರ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ನಂ. ಕೆಎ-06-ಸಿ-4908,  ಟೆಂಪೋ ಚಾಲಕ. ಹೆಸರು ವಿಳಾಸ ತಿಳಿಯಬೇಕಾಗಿದೆ ಅತಿಜೋರಾಗಿ ಓಡಿಸಿಕೊಂಡು ಹೋಗಿ ಮೃತನಿಗೆ ಡಿಕ್ಕಿ ಮಾಡಿಸಿದ ಪರಿಣಾಮ  ಮೃತನಿಗೆ ಮೂಗು ಬಾಯಿ ಕಿವಿಯ ಹತ್ತಿರ ರಕ್ತಸ್ರಾವವಾಗಿ ಚಿಕಿತ್ಸೆಗಾಗಿ ಮಳವಳ್ಳಿ ಸರ್ಕಾರಿ  ಆಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿವಸ ಮದ್ಯಾಹ್ನ 01.00 ಗಂಟೆಯ ಸಮಯದಲ್ಲಿ ಮೃತಪಟ್ಟಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 23-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-02-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಶಾಲೆ ಕಳ್ಳತನ ಪ್ರಕರಣಗಳು,  2 ಸಾಮಾನ್ಯ/ವಾಹನ ಕಳವು ಪ್ರಕರಣಗಳು,  1 ವಂಚನೆ ಪ್ರಕರಣ,  2 ರಾಬರಿ ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಶಾಲೆ ಕಳ್ಳತನ ಪ್ರಕರಣಗಳು :

1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 457-380 ಐ.ಪಿ.ಸಿ.

ದಿನಾಂಕ: 23-02-2013 ರಂದು ಪಿರ್ಯಾದಿ ಡಿ. ಗೋವಿಂದಯ್ಯ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಚೊಟ್ಟನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶಾಲೆಯ ಅಡುಗೆ ಮನೆಯ ಬೀಗವನ್ನು ಯಾರೋ ಕಳ್ಳರು ಮೀಟಿ ಮುರಿದು ಹಾಕಿ ಒಳಗಡೆ ಇದ್ದ ಎರಡು ಇಂಡೇನ್ ಗ್ಯಾಸ್ ಸಿಲೆಂಡರ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಬೆಲೆ ರೂ 1300/-ಗಳಾಗುತ್ತವೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 457-380 ಐ.ಪಿ.ಸಿ.

ದಿನಾಂಕ:23-02-2013 ರಂದು ಪಿರ್ಯಾದಿ ಹೆಚ್.ಎನ್.ನಂಜಪ್ಪ ಬಿನ್ ಜಿ. ನಂಜುಂಡೇಗೌಡ, ಮುಖ್ಯೋಪಾದ್ಯಾಯರು, ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಕೋಡಿದೊಡ್ಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು  ಶಾಲೆಯ ಅಡಿಗೆ ಮನೆಯಲ್ಲಿ ಡೋರ್ ಲಾಕ್, ಬೀಗ, ಜಡಿದು ಒಳಗಿದ್ದ ಎರಡು ಸಿಲಿಂಡರ್, ಒಂದು ಗ್ಯಾಸ್ ಸ್ಟವ್, 5 ಕೆಜಿ ಬಟ್ಟು, 1 ಕೆಜಿ ಬಟ್ಟು, 2 ಕೆಜಿ ಬಟ್ಟುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 379 ಐ.ಪಿ.ಸಿ.

       ದಿನಾಂಕ: 23-02-2013 ರಂದು ಪಿರ್ಯಾದುದಾರ ಪುಟ್ಟಮ್ಮ ಕೋಂ. ಮಲ್ಲಣ್ಣ, ತೈಲೂರು ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಶ್ರೀ ಮುತ್ತರಾಯ ಸ್ವಾಮಿ ದೇವಸ್ಥಾನ ಜಾತ್ರೆ ಪೂಜಾ ಕಾರ್ಯಕ್ಕೆ ಬಂದಿದ್ದು ಈ ಸಮಯದಲ್ಲಿ ಯಾರೋ ಕಳ್ಳರು  ದೇವರ ಪ್ರಸಾದ ಸ್ವೀಕರಿಸಿ  ಕೈತೊಳೆಯುತ್ತದ್ದ ಸ್ಥಳದಲ್ಲಿ ಪಿರ್ಯಾಯ ದಿಯವರ 30ಗ್ರಾಂ ಚಿನ್ನದ ಸರ 3ಗ್ರಾಂ ತಾಳಿ 1ಗ್ರಾಂ ಗುಂಡುಗಳು ಒಟ್ಟು 34 ಗ್ರಾಂ ಅಂಜಲಿ ಕಟ್ಟಿಂಗ್ ನ ಚಿನ್ನದ ಮಾಂಗಲ್ಯ ಸರ ಬೆಲೆ-85000/-ರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 379 ಐ.ಪಿ.ಸಿ.

ದಿನಾಂಕ: 23-02-2013 ರಂದು ಪಿರ್ಯಾದಿ ಶಿವಲಿಂಗಯ್ಯ ಬಿನ್. ಲೇಟ್. ಕಲ್ಲಶೆಟ್ಟಿ, 40ವರ್ಷ, ಚಾಲಕ ವೃತ್ತಿ, ಗಾಣಿಗಶೆಟ್ಟಿ ಜನಾಂಗ, ಸ್ವಂತ ಸ್ಥಳ: ಆಲಕೆರೆ ಗ್ರಾಮ, ಕೆರಗೋಡು ಹೋಬಳಿ, ಹಾಲಿ ವಾಸಳ ಹಳೆಬೂದನೂರು ಗ್ರಾಮ, ಮಂಡ್ಯ ತಾಲ್ಲೊಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮನೆಯ ಮುಂದೆ ನಿಲ್ಲಿಸಿದ್ದ ಮಹೀಂದ್ರ ಮ್ಯಾಕ್ಸ್ ಪಿಕ್ಅಪ್ ಗೂಡ್ಸ್ ವಾಹನ. ಸಂಖ್ಯೆ.ಕೆಎ-36-9329 ನ್ನು ದಿ:22-01-2013 ರ ರಾತ್ರಿವೇಳೆ ಯಾರೋ ಕಳ್ಳರು ಕಳುವು ಮಾಡಿರುತ್ತಾರೆ. ಈ ವಾಹನದ ಅಂದಾಜು ಬೆಲೆ 1,00,000/-ರೂಗಳಾಗಿರುತ್ತೆ. ನನ್ನ ವಾಹನವು ಕಳವು ಅಗಿರುವ ಬಗ್ಗೆ ಅಲಕೆರೆ ಗ್ರಾಮದ ನನ್ನ ಅಕ್ಕ ಜಯಮ್ಮ ರವರ ಮಗ ವೆಂಕಟೇಶ, ಅಲಕೆರೆ ಗ್ರಾಮ, ಕೆರಗೋಡು ಹೋಬಳಿ, ಮಂಡ್ಯ ತಾಲ್ಲೊಕು ರವರ . ಮೇಲೆ ಅನುಮಾನವಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 75/13 ಕಲಂ. 465-468-471-420 ಐ.ಪಿ.ಸಿ.

ದಿನಾಂಕ: 23-02-2013ರಂದು ಪಿರ್ಯಾದಿ ಆರ್.ಕಾತರ್ಿಕೇಯನ್, ವಿಜಯಾ ಬ್ಯಾಂಕ್ ಮ್ಯಾನೇಜರ್, ಮದ್ದೂರು ಶಾಖೆ, ಮದ್ದೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಚೇತನ್ ಪಿ. ಮುಡುಗೋಳು ವಿಜಯ ಬ್ಯಾಂಕ್ ಕ್ಲಕರ್್ ಮದ್ದೂರು ಟೌನ್ ರವರು, ವಿಜಯಾ ಬ್ಯಾಂಕ್ನಲ್ಲಿ ಅವದಿ ಮುಗಿದಿರುವ ಅಕೌಂಟ್ ಗೆ 500/- ರೂ. ಹಣ ಕಟ್ಟಿ ಅಕೌಂಟ್ನ್ನು ತೆರೆದು ಬ್ಯಾಂಕ್ ನ ಚೆಕ್ಗಳನ್ನು ಜಮಾ ಮಾಡಿ ಸದರಿ ಅಕೌಂಟ್ನಿಂದ ಎ.ಟಿ.ಎಂ. ನಿಂದ ಪಡೆದುಕೊಂಡು ಬ್ಯಾಂಕ್ ಗೆ ವಂಚಿಸಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾಬರಿ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ, 37/13 ಕಲಂ. 392 ಐ.ಪಿ.ಸಿ.

ದಿನಾಂಕ: 23-02-2013 ರಂದು ಪಿರ್ಯಾದಿ ಸುಶೀಲ ಕೋಂ. ಸೋಮಶೇಖರ್, 25 ವರ್ಷ, ಗಂಗಾಮತ ಜನಾಂಗ, ವಾಸ ಶೆಟ್ಟಹಳ್ಳಿ ರಸ್ತೆ, ಕೋಟೆ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿಯವರು ಶ್ರೀ. ಪಟ್ಟಲದಮ್ಮನ ದೇವಸ್ಥಾನದ ಬಳಿ ಸಿಡಿ ಹಬ್ಬದ ಸಂಬಂದವಾಗಿ ಕೊಂಡವನ್ನು ನೋಡುತ್ತಾ, ದೇವರಿಗೆ ಕೈ ಮುಗಿಯುತ್ತಾ ನಿಂತ್ತಿದ್ದಾಗ, ಅವರ  ಹಿಂಭಾಗದಲ್ಲಿ ದೇವರ ಭಕ್ತರಂತೆ ನಿಂತ್ತಿದ್ದವರುಗಳು ನನ್ನ ಕತ್ತಿಗೆ ಹಿಂದಿನಿಂದ ಕೈ ಹಾಕಿ, ನನ್ನ ಕತ್ತಿನದಲ್ಲಿದ್ದ ಒಂದು ಎಳೆ ಮಾಂಗಲ್ಯ ಸರ, ಎರಡು ಗುಂಡು, ಹಾಗೂ ಎರಡು ಕಾಸುಗಳಿಂದ ಕೂಡಿದ ಸುಮಾರು 33 ಗ್ರಾಂ, ತೂಕದ ಚಿನ್ನದ ಚೈನ್, ಅಂದಾಜು ಬೆಲೆ ಸುಮಾರು 82,500/- ರೂ.ಗಳು. ಕಿತ್ತುಕೊಂಡಿರುತ್ತಾರೆ.  ಅದ್ದರಿಂದ ಕಳ್ಳರನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.


ಯು.ಡಿ.ಆರ್. ಪ್ರಕರಣ : 

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 23-02-2013 ರಂದು ಪಿರ್ಯಾದುದಾರ ಕೃಷ್ಣಮೂತರ್ಿ @ ಮೂರ್ತಿ  ಬಿನ್. ಲೇ||ನಾಗಪ್ಪ. ಸ್ವಂತ ಊರು. 2 ನೇ ಹಂತ. 10 ನೇ ಅಡ್ಡರಸ್ತೆ. ಮನೆ ನಂ-54 ಬಿ.ಕೆ.ನಗರ. ಯಶವಂತಪುರ. ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ಜ್ಯೋತಿ @ ಜ್ಯೋತಮ್ಮ. ಅಂಕನಹಳ್ಳಿ ಗ್ರಾಮ, ದೇವಲಾಪುರ ಹೋ||, ನಾಗಮಂಗಲ ತಾ|| ರವರು ಯಾವುದೋ ವಿಷವನ್ನು ಕುಡಿದು ಒದ್ದಾಡುತ್ತಿದ್ದಳು. ಆಗ ನಮ್ಮ ತೋಟದ ಮಾಲೀಕರಾದ ರಾಮಕೃಷ್ಣ ಮತ್ತು ಕಾರೀನ ಚಾಲಕರಾದ ರಾಮಚಂದ್ರರವರು ತಕ್ಷಣ ಕಾರಿನಲ್ಲಿ ಕುಣಿಗಲ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರು. ನಂತರ  ಅಲ್ಲಿಂದ ಚಿಕಿತ್ಸೆಗೆ ತುಮಕೂರು ನಗರದ ಸರ್ಕಾರಿ  ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿರವರು ದಿನಾಂಕಃ 23-02-2013 ರಂದು ಮದ್ಯಾಹ್ನ 01-55 ಗಂಟೆಯ ಸಮಯದಲ್ಲಿ ತುಮಕೂರಿನ ಸರ್ಕಾರಿ  ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 22-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 22-02-2013 ರಂದು ಒಟ್ಟು 12 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ವಾಹನ ಕಳವು ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳವು ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 379 ಐ.ಪಿ.ಸಿ.

ದಿನಾಂಕ: 22-02-2013 ರಂದು ಪಿರ್ಯಾದಿ ಮಮತಾ ಕೋಂ. ಸತೀಶ್, ಸೋಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮೂರು ಜನ ಅಪರಿಚಿತ ಹೆಂಗಸರು ನಿಂತಿದ್ದು, ಅವರು ನನ್ನ ತಾಯಿಯನ್ನು ತಳ್ಳಿ ಜೊರಾಗಿ ನೂಕಿದಾಗ, ನಮ್ಮ ತಾಯಿ ಪಕ್ಕಕ್ಕೆ ಸರಿದುಕೊಂಡರು, ಆಗ ಯರೋ ಮೂರು ಜನ ಅಪರಿಚಿತ ಹೆಂಗಸರು ನನ್ನ ತಾಯಿಯ ಕತ್ತಿನಲ್ಲಿದ್ದ  ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ, ಕತ್ತಿನಲ್ಲಿದ್ದ ಮಾಂಗಲ್ಯ ಸರ ಸುಮಾರು 20 ಗ್ರಾಂ. ಆಗಿದ್ದು, ಸುಮಾರು 55,000-00 ರೂ. ಗಳಾಗುತ್ತದೆ.  ಅದ್ದರಿಂದ ಕಳ್ಳರನ್ನು ಪತ್ತೆ ಮಾಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 22-02-2013 ರಂದು ಪಿರ್ಯಾದಿ ಕುಮಾರ ಬಿನ್. ಮೊಗಣ್ಣೇಗೌಡ, ಹರವು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ನಮ್ಮ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ನನ್ನ ತಂದೆ ಮೊಗಣ್ಣೇಗೌಡರವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ನಂದಿಸಲು ಸಾಧ್ಯವಾಗದೇ ಬೆಂಕಿ ಪಕ್ಕದ ತಿಮ್ಮೇಗೌಡರವರ ಜಮೀನಿಗೂ ಸಹ ಹರಡುತ್ತಿದ್ದಾಗ, ನನ್ನ ತಂದೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾಗ ಬೆಂಕಿಯ ಜ್ವಾಲೆ ನಮ್ಮ ತಂದೆಗೆ ತಗುಲಿ ನಮ್ಮ ತಂದೆ ಹಾಕಿಕೊಂಡಿದ್ದ ಬಟ್ಟೆಗೆ ಹತ್ತಿಕೊಂಡು ಸ್ಥಳದಿಂದ ಹೊರಗಡೆ ಬರಲಾರದೆ ಬೆಂಕಿಯ ನಡುವೆ ಸಿಕ್ಕಿಕೊಂಡು ಸ್ಥಳದಲ್ಲೆ ಬಿದ್ದು, ಬೆಂಕಿ ಜ್ವಾಲೆಯಿಂದ ಸುಟ್ಟಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುತ್ತಾರೆ, ನನ್ನ ತಂದೆಯ ಸಾವಿಗೆ ಬೇರೆ ಯಾವುದೇ ಕಾರಣ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 380 ಐ.ಪಿ.ಸಿ.

ದಿನಾಂಕ: 22-02-2013 ರಂದು ಪಿರ್ಯಾದಿ ಎಂ, ಸಿದ್ದಪ್ಪಾಜಿ, ಸ್ವರ್ಣಸಂದ್ರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದ್ವಿಚಕ್ರವಾಹನದ ಪಾರ್ಕಿಂಗ್  ಸ್ಟಾಂಡ್ ನಲ್ಲಿ  ಬೆಳಿಗ್ಗೆ 6-00 ಗಂಟೆಗೆ ಬೀಗ ಹಾಕಿ ನಿಲ್ಲಿಸಿ ಕೆಲಸಕ್ಕೆ ಹೋದೆನು, ವಾಪಸ್ ಕೆಲಸ ಮುಗಿಸಿಕೊಂಡು ಮದ್ಯಾಹ್ನ 02-00 ಗಂಟೆಗೆ ಬೈಕ್ ನಿಲ್ಲಿಸಿದ್ದ ಸ್ಟಾಂಡ್ ಬಳಿ ಬಂದು ನೋಡಲು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದರು. ಆದರೂ ಸಹ ಸಿಗಬಹುದೆಂದು ಈ ತನಕ ಎಲ್ಲಾ ಕಡೆಗಳಲ್ಲಿ ಹುಡುಕಿದೆನು ಸಿಕ್ಕಿರುವುದಿಲ್ಲ ಆದ್ದರಿಂದ ಕಳುವಾಗಿರುವ ನನ್ನ ಬೈಕ್ ನ್ನು, ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ ತಡೆ ಕಾಯಿದೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 323-506 ಕೂಡ 149 ಐಪಿಸಿ, ಮತ್ತು 3ಕ್ಲಾಸ್ [1]-10 ಎಸ್.ಸಿ./ಎಸ್.ಟಿ ಆಕ್ಟ್ 1989.

ದಿನಾಂಕ: 22-02-2013 ರಂದು ಪಿರ್ಯಾದಿ ಪಿ. ಕೃಷ್ಣ ಕುಮಾರ್, ಕಾರ್ಯದರ್ಶಿ, ಜೀವನ್ ಜ್ಯೋತಿ ವಿದ್ಯಾಸಂಸ್ಥೆ,  ಕಾರಸವಾಡಿ ರಸ್ತೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಶಾಲೆಯಲ್ಲಿ ಇದ್ದಾಗ ಮೇಲ್ಕಂಡ ಆರೋಪಿತರುಗಳು ಬಂದು ನೀನು ನಮ್ಮನ್ನೆಲ್ಲ ಕೆಲಸಕ್ಕೆ ತೆಗೆದಿಕೊ ಇಲ್ಲದಿದ್ದರೆ ತಲಾ 2 ಲಕ್ಷ ರೂ. ಹಣ ಕೊಡು ಎಂದು ಹೆದರಿಸಿದರಲ್ಲದೆ ನೀನು ನಿನ್ನ ಜಾತಿ ಬುದ್ದಿ ಎಲ್ಲಿ ಬಿಡುತ್ತೀಯ ಎಂದು ಅವಾಚ್ಯ ಶéಬ್ದಗಳಿಂದ ಬೈಯುತ್ತಿದ್ದು ವೀರನಗೌಡ ಪಾಟೀಲ್  ಕತ್ತಿನಪಟ್ಟಿ  ಹಿಡಿದು ಕೈ ಮಾಡಿದರಲ್ಲದೆ ಜೀವ ಭಯ ಉಂಟು ಮಾಡಿರುತ್ತಾರೆಂದು ಇತ್ಯಾದಿಯಾಗಿ ಈ ದಿನ ನೀಡಿದ ಪಿರ್ಯಾದುವಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  

DAILY CRIME REPORT DATED : 21-02-2013ದಿನಾಂಕ: 21-02-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ರಾಬರಿ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 379 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ಯೋಗೇಶ ವಿ ಕೆ ಬಿನ್ ಕೃಷ್ಣೇಗೌಡ 36-ವರ್ಷ, ವಕ್ಕಲಿಗರು, ರೈತ, ವಳಗೆರೆಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮದ್ದೂರಿನ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣದ ಹೊರಾವರಣದಲ್ಲಿ ಕೆಎ-11-ಎಸ್-4084 ಹಿರೊಹೋಂಡಾ ಮೋಟಾರ್ ಸೈಕಲ್ ನಿಲ್ಲಿಸಿ ಮೈಸೂರಿಗೆ ಹೋಗಿದ್ದು ವಾಪಸ್ ಬಂದು ನೋಡಿದಾಗ ಯಾರೋ ಕಳ್ಳರು ಬೈಕ್ ಅನ್ನು ಕಳುವು ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 379 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ಎಂ.ಕೆ. ಕುಮಾರ್ ಬಿನ್. ಲೇ: ಹೆಚ್.ಕೆ.ಕೃಷ್ಣೇಗೌಡ, ಭದ್ರತಾ ರಕ್ಷಕ, ಮಂಡ್ಯ ವಿಭಾಗೀಯ ಕಾರ್ಯಗಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ 20-21 -02-2013 ರಾತ್ರಿ 5-00 ಎಎಂ ಗಂಟೆಗೆ  ಮಂಡ್ಯ ಸಿಟಿ ಕೆ.ಎಸ್. ಆರ್. ಟಿ. ಸಿ ವಿಭಾಗೀಯ ಕಾರ್ಯಗಾರದ ಪೂರ್ವದ ಕಾಂಪೌಂಡ್ ಹತ್ತಿರ ಸ್ಕ್ರಾಪ್ ಯಾರ್ಡ್ ನಿಂದ ಆರೋಪಿ ಮಹಮ್ಮದ್ ಹುಸೇನ್ ಖಾನ್, ಆಲಿಯಾಸ್ ಹುಸೇನ್ ಬಿನ್. ಅಮಿದ್ ಖಾನ್, 25 ವರ್ಷ ಕೂಲಿ,  ಹಾಲಹಳ್ಳಿ ಸ್ಲಂ, ಮಂಡ್ಯ ಸಿಟಿ ರವರು ಅಂದಾಜು  900/-ರೂ. ಬೆಲೆ ಬಾಳುವ ಪ್ಲೇಟ್ ಗಳನ್ನ ಕಳುವು ಮಾಡಿದ್ದು ಮಾಲು ಸಮೇತ ಆಸಾಮಿಯನ್ನು ಕರೆ ತಂದು ಹಾಜರ್ ಪಡಿಸಿ  ಮುಂದಿನ ಕ್ರಮದ ಬಗ್ಗೆ ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 21-02-2013 ರಂದು ಚನ್ನಯ್ಯ ಬಿನ್. ಬೊಮ್ಮಯ್ಯ, ಹರಳಹಳ್ಳಿ ಗ್ರಾಮ, ಪಾಂಡವಪುರ ತಾ. ಮಂಡ್ಯ ಜಿಲ್ಲೆರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು, 21 ವರ್ಷ, ಹರಳಹಳ್ಳಿ ಗ್ರಾಮ, ಪಾ ಪುರ ತಾ. ರವರು ದಿನಾಂಕ: 19-02-2013 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ತಮ್ಮ ಮನೆಯಿಂದ ಪಾಂಡವಪುರ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಹುಡುಗಿ ಕಾಣೆಯಾಗಿದ್ದಾಳೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 21-02-2013 ರಂದು ಪಿರ್ಯಾದಿ ನರಸಿಂಹಯ್ಯ ಬಿನ್ ಗಾಳಪ್ಪ, ಬೈರೋಹಳ್ಳಿ, ಸೂಲಿಕೆರೆ ಪೋಸ್ಟ್, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ತಮ್ಮ ರಾಮಯ್ಯ ಬಿನ್ ಗಾಳಪ್ಪ, 41ಷರ್ವ, ಕೂಲಿಕೆಲಸ, ಬೈರೋಹಳ್ಳಿ, ಸೂಲಿಕೆರೆ ಪೋಸ್ಟ್, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೊಕು ರವರು ಬೆಂಗಳೂರಿನ ಕೆಂಗೇರಿಯಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಲು ಪಾದಯಾತ್ರೆಯಲ್ಲಿ ಚನ್ನಪಟ್ಟಣ ಮಾರ್ಗವಾಗಿ ಹಲಗೂರು, ಬೀಮೇಶ್ವರಿಗೆ ದಿನಾಂಕಃ 19-2-13 ರಂದು ಸಂಜೆ ಬಂದು ಅಲ್ಲಿ ಊಟ ಮಾಡಿ ತಂಗಿದ್ದು ರಾತ್ರಿ 10-30 ಗಂಟೆಯಿಂದ 11 ಗಂಟೆಯ ಸಮಯದಲ್ಲಿ ಮೂತ್ರ ವಿಸರ್ಜನೆಗೆಂದು ಹೋದವರು ವಾಪಸ್ಸು ಬಂದಿರುವುದಿಲ್ಲ ಎಲ್ಲಾ ಕಡೆ ಹುಡಕಲಾಗಿ ಸಿಕ್ಕಿರುವುದಿಲ್ಲ ನಾವು ನಮ್ಮ ಸಂಬಂಧಿಕರ ಮನೆ ಹಾಗೂ ಇತೆ ಕಡೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುವ ನನ್ನ ತಮ್ಮನನ್ನು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

     ದಿನಾಂಕ: 21-02-2013 ರಂದು ಪಿರ್ಯಾದಿ ಹೆಚ್.ಮೆಹಬೂಬ್ ಬಾಷ ಬಿನ್. ಲೇಟ್. ಮಹಮದ್ ಹಾಯಸಾಬ್, ಯಹಲ್ಲಾ ಮಸೀದಿ ಪಕ್ಕ, ಸೋಂಕಳ್ಳಿ ಮೊಹಲ್ಲಾ, ಮೈಸೂರು ರಸ್ತೆ, ನಾಗಮಂಗಲ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯವರ ಸೊಸೆ,  21 ವರ್ಷ, ಮುಸ್ಲೀಂ, ವಾಸ ಯಹಲ್ಲಾ ಮಸೀದಿ ಪಕ್ಕ, ಸೋಂಕಳ್ಳಿ ಮೊಹಲ್ಲಾ, ಮೈಸೂರು ರಸ್ತೆ, ನಾಗಮಂಗಲ ಟೌನ್ ಮತ್ತು ಫಿರ್ಯಾದಿಯ ಮಗಳು, ಮೊಮ್ಮಗಳು ರವರುಗಳು ನಾಗಮಂಗಲದಿಂದ ಮಂಡ್ಯಕ್ಕೆ ಬಂದಿದ್ದು ಮಂಡ್ಯದ ಪಿಡಬ್ಲ್ಯುಡಿಯ ಕಛೇರಿಯ ಮುಂಭಾಗದ ಫುಟ್ಪಾತ್ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ ತಮ್ಮ ಸೊಸೆ ಕಾಣೆಯಾಗಿರುತ್ತಾಳೆ. ಇದುವರೆಗೆ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ತಮ್ಮ ಸೊಸೆರವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 393 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ನಂಜುಂಡಪ್ಪ ಬಿನ್ ಶಿವಪ್ಪ, ಸಾಸಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಆರೋಪಿ ಕೇಶವ ಬಿನ್ ಶಿವಯ್ಯ, ಸುಮಾರು 25 ವರ್ಷ, ಸಾಸಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ಪಿಯರ್ಾದಿಯವರ ಹೆಂಡತಿಯ ಕೊರಳ ಪಟ್ಟಿಗೆ ಕೈ ಹಾಕಿ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿರುತ್ತಾರೆ ತಕ್ಷಣ ಕಿರುಚಿಗೊಂಡಾಗ ಸಾಸಲು ಗ್ರಾಮದವರು ಬಂದು ಆರೋಪಿತನನ್ನು  ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಬಂದು ಹಾಜರ್ ಪಡಿಸಿರುತ್ತಾರೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 35/2013 ಕಲಂ. 279-337-338-304 (ಎ)  ಐಪಿಸಿ ಕೂಡ 184-187 ಐಎಂವಿ ಕಾಯ್ದೆ.

ದಿನಾಂಕ 21-02-2013 ರಂದು ಪಿರ್ಯಾದಿ ಕೆ.ಎಂ ಮಲ್ಲಯ್ಯ ಬಿನ್ ಲೇ|| ಮಹಾಲಿಂಗಯ್ಯ, ನಿವೃತ್ತ ಸರ್ಕಾರಿ  ನೌಕರರು, ವಿಹೆಚ್ ರಸ್ತೆ ಕೆ.ಆರ್ ಪೇಟೆ ಟೌನ್, 571426 ರವರು ನೀಡಿದ ದೂರಿನ ವಿವರವೇನೆಂದರೆ ಕೋಡಿಮಾರನಹಳ್ಳಿ ಗ್ರಾಮದ ಹತ್ತಿರದ ತಿರುವು ರಸ್ತೆಯಲ್ಲಿ, ಕೆ.ಆರ್ ಪೇಟೆ-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ಕೆಎ-02-ಎಂಬಿ-5827 ರ ಟಾಟಾ ಸುಮಾ ಕಾರಿನ ಚಾಲಕ ಹೆಸರು ವಿಳಾಸ ಗೊತ್ತಿಲ್ಲ. ಇವರು ತನ್ನ ಬಾಬ್ತು ಟಾಟಾ ಸುಮೋ ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಅಡ್ಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಮೃತ ಒಡಿಸುತ್ತಿದ್ದ ಮೊಟಾರ್ ಬೈಕ್ ಗೆ  ಡಿಕ್ಕಿ ಮಾಡಿದ ಪರಿಣಾಮ ಮೃತನ ಕಾಲಿಗೆ, ಮರ್ಮಾಂಗಕ್ಕೆ  ಇನ್ನಿತರ ಕಡೆ ಪೆಟ್ಟು ಬಿದ್ದು ಮೃತಪಟ್ಟಿರುತ್ತಾನೆಂದು ಮತ್ತು ಹಿಂದೆ ಕುಳಿತ್ತಿದ್ದ ಅವನ ಸ್ನೇಹಿತ ಅಭಿಷೇಕನಿಗೆ ಕಾಲು ಮುರಿದು ಹೋಗಿದ್ದು ತೀವ್ರತರವಾದ ಪೆಟ್ಟಾಗಿರುತ್ತೆ ಎಂದು ಕೆ.ಆರ್ ಪೇಟೆ ಆಸ್ಪತ್ರೆಯಲ್ಲಿ ಜನರು ತಿಳಿಸಿದರು ಆದ ಕಾರಣ ಮೇಲ್ಕಂಡ ಟಾಟಾ ಸುಮೋ ಕಾರಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಇತ್ಯಾದಿಯಾಗಿ ಕೆ.ಆರ್ ಪೇಟೆ ಸಾರ್ವಜನಿಕ ಆಸ್ಪತ್ರೆಯ ಬಳಿ ದೂರನ್ನು ಸಲ್ಲಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 20-02-2013ಮಂಡ್ಯ. ಜಿಲ್ಲೆಯಲ್ಲಿ ದಿನಾಂಕ: 20-02-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 4 ಕಳವು ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 1 ಭಾರತೀಯ ಶಸ್ತಾಸ್ತ್ರಗಳ ಕಾಯಿದೆ ಅಧಿನಿಯಮ ಪ್ರಕರಣ, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ, 2 ಯು.ಡಿ.ಆರ್. ಪ್ರಕರಣಗಳು ಹಾಗು 13 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಕಳ್ಳತನ ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 454-457-511 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಎಸ್ ನಾಗರಾಜು, ವ್ಯವಸ್ಥಾಪಕರು, ವಿಜಯ ಬ್ಯಾಂಕ್, ಎಂ.ಸಿ ರೋಡ್, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಕಟ್ಟಡದ ಪೂರ್ವ ಗೋಡೆಯಲ್ಲಿ ಹಾಕಿರುವ ಕಬ್ಬಿಣದ ಸರಳಿನ ಗ್ರೀಲ್ನ್ನು ಯಾರೋ ದುಷ್ಕರ್ಮಿಗಳು ಮುರಿದು ಶಾಖೆಯ ಒಳಗಡೆ ನುಗ್ಗಿ ಕಳವು ಮಾಡುವ ಪ್ರಯತ್ನ ಮಾಡಿರುವುದು ಕಂಡುಬಂದಿರುತ್ತದೆ. ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣಗಳು :

1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 51/13 ಕಲಂಃ 379 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಎಂ.ಆರ್ ಪದ್ಮನಾಭ ಬಿನ್. ರತ್ನರಾಜಯ್ಯ, 3ನೇ ಕ್ರಾಸ್, ಅಶೋಕನಗರ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಕೆಎ-11-ಎಲ್-4154 ಟಿವಿಎಸ್ ಎಕ್ಸ್.ಎಲ್.ಸೂಪರ್ ಮೊಪೆಡ್ ನ್ನು, ಮಂಡ್ಯ ಜನರಲ್ ಆಸ್ಪತ್ರೆಯ ರಕ್ತ ನಿಧಿ ಮುಂಭಾಗ ನಿಲ್ಲಿಸಿ ಪುನಃ ಮಧ್ಯಾಹ್ನ 03-00 ಗಂಟೆಗೆ ಮೊಪೆಡ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೊಡಲು ನನ್ನ ಮೊಪೆಡ್ ಇರಲಿಲ್ಲ ಸಿಗಬಹುದೆಂದು ಇಲ್ಲಿಯವರೆಗೆ ಎಲ್ಲಾಕಡೆ ಹುಡುಕಾಡಿದೆನು ಮೊಪೆಡ್ ನ್ನು, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 379 ಐ.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಬಾಲಕೃಷ್ಣ, 35 ವರ್ಷ, ಒಕ್ಕಲಿಗರು, ವ್ಯವಸಾಯ, ವಡ್ಡರಹಳ್ಳಿಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಬಿಳಿಗುಲಿ ಗ್ರಾಮದ ಸರ್ವೆ.  ನಂಬರ್ ನಲ್ಲಿ  ಒಂದು ಪಂಪ್ಸೆಟ್ ಇರುತ್ತದೆ. 100 ಅಡಿ ಉದ್ದ 3 ಇಂಚು ಅಗಲದ ಒಂದು ಕಪ್ಪು ಬಣ್ಣದ ಮಡ್ಡಿ ಪೈಪನ್ನು ನನ್ನ ಬಾವಿಯ ಏರಿಯ ಮೇಲೆ ಇಟ್ಟಿದ್ದೆ. ಪೈಪನ್ನು ಯಾರೋ ಕಳ್ಳರು ಕಳವು ಮಾಡಿಕೊಂಡರು. ಈ ಪೈಪನ್ನು ನಮ್ಮ ಗ್ರಾಮದ ಆನಂದ ಬಿನ್. ಲೇಟ್. ಮರೀಗೌಡ, ವಡ್ಡರಹಳ್ಳಿಕೊಪ್ಪಲು ಗ್ರಾಮ, ದುದ್ದ ಹೋಬಳಿ ರವರ ಮೇಲೆ ಅನುಮಾನ ಇರುತ್ತದೆ. ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 379 ಐ.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಶ್ರೀನಿವಾಸೇಗೌಡ.ಸಿ.ಎನ್. ಚಿನಕುರಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಚಿಕ್ಕಭೋಗನಹಳ್ಳಿ ಗ್ರಾಮದ ಎಲ್ಲೆಯ ಸರ್ವೆ. ನಂ 83/2 ರಲ್ಲಿ ಜಮೀನು ಹೊಂದಿದ್ದು, ಸದರಿ ಜಮೀನಿನಲ್ಲಿ ಮೋಟಾರ್ ಪಂಪ್ ಸೆಟ್ ಅಳವಡಿಸಿದ್ದು, ಮೋಟಾರ್ ಪಂಪ್ ನ್ನು,  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದ್ದು, ಕಳವು ಮಾಡಿಕೊಂಡು ಹೋಗಿರುವ ಪಂಪ್ ಸೆಟ್ ನ ಅಂದಾಜು ಬೆಲೆ ಸುಮಾರು 8000/- ಸಾವಿರ ರೂಗಳಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ. 


4. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಹೆಚ್.ಎಸ್. ಬಸವಣ್ಣ ಬಿನ್. ಶಿವನಂಜಪ್ಪ, ಹಾಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಜೀವನಕ್ಕಾಗಿ ಒಂದು ಕೆಎ-11 ಎ-1270  ಟಾಟಾ ಏಸ್ ಗೂಡ್ಸ್ ಆಟೋವನ್ನು ಇಟ್ಟುಕೊಂಡಿದ್ದು ಮನೆಮುಂದೆ ನಿಲ್ಲಿಸಿದ್ದ ಟಾಟಾ ಏಸ್ ಗೂಡ್ಸ್ ವಾಹನದ ಹಿಂಭಾಗದ ಎರಡು ಚಕ್ರಗಳು ಮತ್ತು ಬ್ಯಾಟರಿಯನ್ನು ನೆನ್ನೆ ರಾತ್ರಿ  ವೇಳೆಯಲ್ಲಿ ಯಾರೋ ಕಳ್ಳರು ಬಿಚ್ಚಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಈ ಬಗ್ಗೆ ನನ್ನ ಅಣ್ಣನಾದ ನಂಜಪ್ಪನ ಮೇಲೆ ಅನುಮಾನವಿರುತ್ತೆ. ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 40/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 20-02-2013 ರಂದು ಪಿರ್ಯಾದಿ ಡೈಸಿ ಕೋಂ. ಜೆ.ಅಂಟೋನಿ, 46ವರ್ಷ, ಮನೆ.ನಂ. ಕೆಎಲ್ 933, 9ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯವರ ಗಂಡ ಜೆ.ಅಂತೋಣಿ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಇವರು ಈ ಹಿಂದೆ ಆಗಾಗ್ಗೆ ಮನೆಬಿಟ್ಟು ಹೋಗಿ ತಿಂಗಳುಗಟ್ಟಲೆ ಹೊರಗಡೆ ಇದ್ದು ವಾಪಸ್ ಬರುವ ವಾಡಿಕೆಯಿದ್ದು ಅದರಂತೆ ಈಗಲೂ ವಾಪಸ್ ಬರುತ್ತಾರೆಂದು ತಿಳಿದು ಸುಮ್ಮನಿದ್ದೆವು. ಇದುವರೆವಿಗೂ ತಮ್ಮ ಪತಿ ವಾಪಸ್ ಮನೆಗೆ ಬಾರದ ಕಾರಣ ಸಂಬಂಧಿಕರ ಮತ್ತು ಸ್ನೇಹಿತರುಗಳ ಮನೆಗಳಲ್ಲಿ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಜೆ.ಅಂಟೋನಿ ರವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಭಾರತೀಯ ಶಸ್ತಾಸ್ತ್ರಗಳ ಕಾಯಿದೆ ಅಧಿನಿಯಮ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 143-307-429 ಕೂಡ 149-149 ಐ.ಪಿ.ಸಿ. 25 & 30 ಇಂಡಿಯನ್ ಆಮ್ಸ್ ಆಕ್ಟ್.

ದಿನಾಂಕ: 20-02-2013 ರಂದು ಪಿರ್ಯಾದಿ ದಿ:-19-02-2013 ರಂದು ರಾತ್ರಿ 9 ಗಂಟೆಯಲ್ಲಿ ನಾನು ಮತ್ತು ನನ್ನ ಅಕ್ಕನ  ಮಗನಾದ ಬಿ.ಕೆ ಶಿವಕುಮಾರ್ ಇಬ್ಬರೂ ಹೋಗಿ ಪಂಪ್ಸೆಟ್ ಮನೆಯ ಮೇಲೆ ಮಲಗಿದ್ದೆವು. ನಮ್ಮ ಜೊತೆಯಲ್ಲಿ ಸಾಕಿದ ನಾಯಿಯನ್ನು ಸಹ ಕರೆದುಕೊಂಡು ಹೋಗಿ ಚೈನು ಹಾಕಿ ಕಟ್ಟಿ ಹಾಕಿ ಮಲಗಿದ್ದೆವು ಬೆಳಗಿನ ಜಾವ ಸುಮಾರು 03.15  ಗಂಟೆ ಸಮಯಕ್ಕೆ ನಾವು ಕಟ್ಟಿ ಹಾಕಿದ್ದ ನಮ್ಮ ನಾಯಿ ಇದ್ದಕ್ಕಿದಂತೆ ಜೋರಾಗಿ ಬೋಗಳುತ್ತಾ ಇತ್ತು ಆವಾಗ ದೂರದಲ್ಲಿ ಯಾರೋ 4-5 ಜನರು ನಿಂತಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಹಣೆ ಮೇಲೆ ಬ್ಯಾಟರಿ ಲೈಟನ್ನು ಹಾಕಿಕೊಂಡಿದ್ದ ನಾಯಿ ಬೊಗಳುತ್ತಲೆ ಇತ್ತು ಆವಾಗ ನಾನು  ಅವರಿಗೆ ಯಾರು ಅಲ್ಲಿ ನಿಂತಿಕೊಂಡಿರುವುದು ಅಂತ ಕೂಗುತ್ತಾ ನಾಯಿಯನ್ನು ಕಟ್ಟಿದ್ದ ಚೈನನ್ನು ಬಿಚ್ಚಬೇಕು ಅನ್ನುವಷ್ಟರಲ್ಲಿ ಅಲ್ಲೆ  ನಿಂತಿದ್ದ 4  ಜನರಲ್ಲಿ ಯಾರೊ ಒಬ್ಬ ಬಂದೂಕಿನಿಂದ  ಕೊಲೆ ಮಾಡುವ ಉದ್ಧೇಶದಿಂದ ಗುಂಡು ಹಾರಿಸಿದನು. ನಾನು ಹಿಂದಕ್ಕೆ ಸರಿದಾಗ ಆ ಗುಂಡು ನನ್ನ ಸಾಕಿದ ನಾಯಿಗೆ ಬಿದ್ದು ನನ್ನ ಎರಡು ಕಾಲುಗಳ ಪಾದಕ್ಕೂ ಏಟು ಬಿದ್ದು ನಾಯಿಗೆ ಗುಂಡು ತಗುಲಿ ಮಿಲಮಿಲನೆ ಒದ್ದಾಡಿ ಸತ್ತು ಹೋಯಿತು, ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 143-355 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. (XI) ಎಸ್.ಸಿ./ಎಸ್.ಟಿ. ಕಾಯಿದೆ 1989.

ದಿನಾಂಕ: 20-02-2013 ರಂದು ಪಿರ್ಯಾದಿ ಪದ್ಮ ಕೊಂ. ಲೇ: ಶಂಕರ, ಮಣಿಪುರ, ಮೊಡಚಾಕನಹಳ್ಳಿಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಎಸ್.ಸಿ [ ಆದಿ ಕರ್ನಾಟಕ ] ಜಾತಿಗೆ ಸೇರಿದ್ದು ಅವರು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ [ ಹೆಚ್,ಐ.ವಿ. ] ಪಿಯರ್ ಆಗಿ ಕೆಲಸ  ನಿರ್ವಹಿಸುತ್ತಿದ್ದು  ಸರ್ಕಾರದಿಂದ ಗರೀಬಿ ಸೈಟ್ ನಲ್ಲಿ  ವಾಸವಾಗಿರುತ್ತೇನೆ. ನನಗೆ ನಮ್ಮ  ಗ್ರಾಮದ ನಿವಾಸಿಗಳಾದ ವಕ್ಕಲಿಗ ಜಾತಿಗೆ ಸೇರಿದ, ಶಿವಲಿಂಗಯ್ಯ, ಚಿಕ್ಕತಾಯಮ್ಮ, ಲಕ್ಷ್ಮಿ ಮತ್ತು ಗಂಗಾಮತಕ್ಕೆ ಸೇರಿದ ಪ್ರೇಮಮ್ಮ, ಬೋರಮ್ಮ ಎಂಬುವವರು ನನ್ನನ್ನು ಜಾತಿಯ ಬಗ್ಗೆ ತುಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳವನ್ನು ನೀಡಿರುತ್ತಾರೆ ಮತ್ತು ನನ್ನನ್ನು ವಿನಾಕಾರಣ ಜಗಳಕ್ಕೆ ಎಳೆದು ನನ್ನನ್ನು ಚಪ್ಪಲಿಯಿಂದ ಹೊಡೆದಿರುತ್ತಾರೆ. ಈ  ರೀತಿ ದಿನ ನನಗೆ ಕಿರುಕುಳ ನೀಡಿರುತ್ತಾರೆ. ನಾನು ನೀರು ಹಿಡಿಯಲು ಹೋದರೆ ನನ್ನನ್ನು ಮುಟ್ಟಿಸಕೊಳ್ಳಬೇಕೆಂದು ಸುಮ್ಮ ಸುಮ್ಮನೆ ಜಗಳ ತೆಗೆಯುತ್ತಾರೆ. ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತೇನೆ. ಡಾಕ್ಟರ್ ನನಗೆ ತಲೆಯನ್ನು ಸ್ಕ್ಯಾನ್ ಮಾಡಲು ಬರೆದುಕೊಟ್ಟಿರುತ್ತಾರೆ. ನನಗೆ ಯಾರ ಬೆಂಬಲವೂ ಇಲ್ಲ. ತಂದೆ, ತಾಯಿ, ಗಂಡ ತೀರಿಕೊಂಡಿರುತ್ತಾರೆ. 8 ವರ್ಷದ ಮಗನ ಜೊತೆ ಗರೀಬಿ ಸೈಟಿನಲ್ಲಿ ವಾಸವಾಗಿರುತ್ತೇನೆ. ಬೇರೆ ಕಡೆ ವಾಸ ಮಾಡಲು ಸಾಧ್ಯವಿಲ್ಲ. ನನಗೆ ಇದೇ ಗ್ರಾಮದಲ್ಲಿ ವಾಸಮಾಡಿಕೊಂಡು ನೆಮ್ಮದಿಯಿಂದ ಜೀವನ ನಡೆಸಲು ಖಾವಂದರಾದ ತಾವು ಇವರೆಲ್ಲರ ಕಿರುಕುಳದಿಂದ ನನನ್ನು ತಪ್ಪಿಸಿ ನನಗೆ ಮತ್ತು ನನ್ನ ಮಗನಿಗೆ ಪ್ರಾಣ ರಕ್ಷಣೆ ಕೋರಿ ತಮ್ಮಲ್ಲಿ ಮನವಿ ಮಾಡಿಕೊಂಡಿರುತ್ತೇನೆ. ಎಂದು ಇತ್ಯಾದಿ  ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಹೆಚ್ಬಿ ಮಂಜುನಾಥ ಬಿನ್. ಹೆಚ್. ಬೀರಯ್ಯ, ಹೇಮಾವತಿ ಬಡಾವಣೆ ಕೆ.ಆರ್.ಪೇಟೆ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೆ.ಆರ್.ಪೇಟೆ ಬಸ್ ನಿಲ್ದಾಣದ ಪಕ್ಕದಲ್ಲಿ ಅಂದರೆ ಟಿ.ಬಿ. ವೃತ್ತದಿಂದ ದುರ್ಗಾ ಭವನ್ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿ ಒಬ್ಬ ಅನಾಥ ಭಿಕ್ಷುಕ ಮೃತಪಟ್ಟಿರುತ್ತಾನೆ. ಈತನು ಕೆ.ಆರ್.ಪೇಟೆಯಲ್ಲಿ ಭಿಕ್ಷೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ಈತನು ಹೊಟ್ಟೆಗೆ ಸರಿಯಾದ ಆಹಾರ ಇಲ್ಲದೆಯೋ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ. ಮೃತನ ಹೆಸರು ವಿಳಾಸ ತಿಳಿದಿರುವುದಿಲ್ಲ ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬಹುದೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಕುಮಾರ.ಎಂ.ಇ. ರಾಗಿಮುದ್ದನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ತಂದೆಯವರ ತಮ್ಮನ ಮಗನಾದ ಬಸವೇಗೌಡ, 30 ವರ್ಷ, ಎಂಬುವರಿಗೆ ಈಗ್ಗೆ ಸುಮಾರು ಒಂದು ವರ್ಷದಿಂದ ಹೊಟ್ಟೆ ನೋವು ಬರುತ್ತಿದ್ದು ಚಿಕಿತ್ಸೆ ಕೊಡಿಸಿದ್ದರೂ ಗುಣವಾಗದೆ ಇದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹೊಟ್ಟೆ  ನೋವಿನ ಬಾಧೆಯನ್ನು ತಾಳಲಾರದೆ ತಮ್ಮ ವಾಸದ ಮನೆಯಲ್ಲಿ ಯಾವುದೋ ವಿಷಸೇವನೆ ಮಾಡಿ ಒದ್ದಾಡುತ್ತಿದ್ದು ಚಿಕಿತ್ಸೆಗಾಗಿ ಪಾಂಡವಪುರ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 19-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ವನ್ಯಪ್ರಾಣಿಗಳ ಸಂರಕ್ಷಣಾ ಕಾಯಿದೆ ಆಧಿನಿಯಮ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಕಳವು ಪ್ರಕರಣ,  1 ಕೊಲೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 143-355 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. ಎಸ್.ಸಿ./ಎಸ್.ಟಿ. ಕಾಯಿದೆ 1989

ದಿನಾಂಕ: 19-02-2013 ರಂದು ಪಿರ್ಯಾದಿ ಪದ್ಮ ಕೊಂ. ಲೇ. ಶಂಕರ, ಮಣಿಪುರ, ಮೊಡಚಾಕನಹಳ್ಳಿಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಶಿವಲಿಂಗಯ್ಯ, ವಕ್ಕಲಿಗರು, 2]ಚಿಕ್ಕತಾಯಮ್ಮ 3] ಲಕ್ಷ್ಮಿ. 4] ಪ್ರೇಮಮ್ಮ. 5]  ಬೋರಮ್ಮ ಇಲ್ಲರೂ ಮೊಡಚಾಕನಹಳ್ಳಿ ಗ್ರಾಮಸ್ಥರು ನನ್ನನ್ನು ಜಾತಿಯ ಬಗ್ಗೆ ತುಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳವನ್ನು ನೀಡಿರುತ್ತಾರೆ ಮತ್ತು ನನ್ನನ್ನು ವಿನಾಕಾರಣ ಜಗಳಕ್ಕೆ ಎಳೆದು ನನ್ನನ್ನು ಚಪ್ಪಲಿಯಿಂದ ಹೊಡೆದಿರುತ್ತಾರೆ. ಈ ರೀತಿ ದಿನ ನನಗೆ ಕಿರುಕುಳ ನೀಡಿರುತ್ತಾರೆ. ನಾನು ನೀರು ಹಿಡಿಯಲು ಹೋದರೆ ನನ್ನನ್ನು ಮುಟ್ಟಿಸಿಕೊಳ್ಳಬೇಕೆಂದು ಸುಮ್ಮ ಸುಮ್ಮನೆ ಜಗಳ ತೆಗೆಯುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-02-2013 ರಂದು ಪಿರ್ಯಾದಿ ಸೋಮಶೇಖರ ಬಿನ್. ಶಿವಯ್ಯ, ಕಾಗೇಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗ ಕೆ.ಎಸ್.ಕಿರಣ್ಕುಮಾರ್ ಬಿನ್. ಸೋಮಶೇಖರ್ ಕೆ.ಎಸ್. 14 ವರ್ಷ ಕಾಗೇಪುರ ಶವ ಸಿಕ್ಕಿರುತ್ತೆ. ಈತನ ಮೇಲೆ ಯಾವುದೇ ಬಟ್ಟೆಯಾಗಲಿ ಇತರೆ ವಸ್ತುಗಳು ಸಿಕ್ಕಿರುವುದಿಲ್ಲ ಮೃತ ಕಿರಣ್ಕುಮಾರ್ನ ಜೊತೆ ಇತರೆ 5 ಹುಡುಗರು ಹೋಗಿದ್ದು ಪಿಯರ್ಾದಿ ನನ್ನ ಮಗನಿಗೆ ಈಜು ಬರುತ್ತಿದ್ದು ಸಾವನ್ನಪ್ಪಿರುವುದು ಅನುಮಾನಸ್ಪದವಾಗಿ ಕಂಡುಬಂದಿರುತ್ತೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವನ್ಯಪ್ರಾಣಿಗಳ ಸಂರಕ್ಷಣಾ ಕಾಯಿದೆ ಆಧಿನಿಯಮ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 379 ಐಪಿಸಿ ರೆ/ವಿ ಕಲಂ 51 (1) ಅಫ್ ವೈಲ್ಡ್ ಲೈಪ್ ಪ್ರೋಟೆಕ್ಷನ್ ಆಕ್ಟ್.

ದಿನಾಂಕ: 19-02-2013 ರಂದು ಪಿರ್ಯಾದಿ ಹೆಚ್.ಎನ್.ವಿನಯ್, ಪಿ.ಎಸ್.ಐ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಅವರಿಗೆ ಬಂದ ಮಾಹಿತಿಯ ಮೇರೆಗೆ, ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಚೀಣ್ಯಾ-ಗಂಗವಾಡಿ ರಸ್ತೆಯ, ಶನಿದೇವರ ದೇವಸ್ಥಾನದ ಬಳಿ ಆರೋಪಿ ರಾಮಲಿಂಗ ಬಿನ್ ನಾಗೇಗೌಡ, 34ವರ್ಷ, ವಕ್ಕಲಿಗರು, ವ್ಯವಸಾಯ, ಹುಳ್ಳೇನಹಳ್ಳಿ ಗ್ರಾಮ ರವರು ಒಂದು ಕಾಡುಪ್ರಾಣಿಯ ಚರ್ಮ ಮತ್ತು ಕೊಂಬುಗಳನ್ನು ಮಾರಾಟ ಮಾಡಿ ಹಣ ಪಡೆಯುವ ಸಲುವಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೋಗಿತ್ತಿದ್ದವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 19-02-2013 ರಂದು ನಾಗರತ್ನಮ್ಮ ಕೋಂ. ಲೇಟ್. ಮಹೇಂದ್ರ, ಬಾಬುರಾಯನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು  ದಿನಾಂಕ: 29-01-2013 ರಂದು ಮದ್ಯಾಹ್ನ 02-00 ಗಂಟೆಯಲ್ಲಿ ಸುಷ್ಮಾರವರು ಶ್ರೀರಂಗಪಟ್ಟಣಕ್ಕೆ ಹೋಗಿ ಬಟ್ಟೆ ತರುತ್ತೇನೆಂದು ಶ್ರೀರಂಗಪಟ್ಟಣಕ್ಕೆ ಹೋದವಳು ಸಂಜೆಯಾದರೂ ಸಹ ವಾಪಸ್ಸು ಮನೆಗೆ ಬಂದಿರುವುದಿಲ್ಲಾ. ನಾವು ನೆಂಟರಿಷ್ಟಟರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಲಾಗಿ ಇದುವರೆವಿಗೂ ನನ್ನ ಮಗಳು ಪತ್ತೆಯಾಗಿರುವುದಿಲ್ಲಾ  ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 379 ಐ.ಪಿ.ಸಿ.

ದಿನಾಂಕ: 19-02-2013 ರಂದು ಪಿರ್ಯಾದಿ ಪದ್ಮಮ್ಮ ಕೋಂ. ಚೆಲುವೇಗೌಡ, ವಡಿಯಾಂಡಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ದಿನಾಂಕ: 10-02-2013  ರಂದು ಆರತಿ ಉಕ್ಕಡ ಗ್ರಾಮಕ್ಕೆ ಹೋಗಿದ್ದು ಜನ ಸಂದಣಿ ಇದ್ದು ಪೂಜೆ ಮುಗಿಸಿಕೊಂಡು ಮದ್ಯಾಹ್ನ  01-15  ಗಂಟೆ ಸಮಯದಲ್ಲಿ ತನ್ನ  ಕತ್ತಿನಲ್ಲಿದ್ದ  ಮಾಂಗಲ್ಯ ಸರವನ್ನು ನೋಡಿಕೊಳ್ಳಲಾಗಿ   ಸರ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿದ್ದು ಅದು 25 ಗ್ರಾಂ. ತೂಕ ಇದ್ದು ಬೆಲೆ ಸು, 48.000/- ಆಗಿರುತ್ತೆ  ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 27/13 ಕಲಂ.392 ಐ.ಪಿ.ಸಿ.

   ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಭಾಗ್ಯಮ್ಮ,  ಜೀವಶಾಸ್ರ್ತ ವಿಭಾಗದಲ್ಲಿ ಸಹಾಯಕ ಕೆಲಸ, ಶಾಂತಿಕಾಲೇಜು, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಶಾಂತಿಕಾಲೇಜಿಗೆ ಕೆಲಸಕ್ಕೆ ಹೋಗುತ್ತಿರುವಾಗ ನೀರಿನ ಟ್ಯಾಂಕ್ ಹತ್ತಿರ ರಸ್ತೆಯಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದನು ಆಗ ನಾನು ಕಳ್ಳನು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದಾನೆ ಎಂದು ಕೂಗಿಕೊಂಡೆ ಮತ್ತು ಆತನ ಹಿಂದೆಯೇ ಓಡಿ ಹೋದೆ, ಆತನು ಮುಂದೆ ಸ್ವಲ್ಪ ದೂರದಲ್ಲಿ ನಿಂತಿದ್ದ ಸ್ಕೂಟರ್ ನಲ್ಲಿ ಹತ್ತಿಕೊಂಡು ಹೋಗಿರುತ್ತಾರೆ ನನ್ನ ಕತ್ತಿನಲ್ಲಿ ತರಚಿತ ಗಾಯವಾಗಿರುತ್ತದೆ, ಮಾಂಗಲ್ಯ ಮತ್ತು ಸರ ಒಟ್ಟು 35 ಗ್ರಾಂ. ಇದರ ಬೆಲೆ 90000/- ರೂ.ಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

PRESS NOTE ON MANDYA RURAL PS Cr.No.256/12 DATED : 19-02-2013


                                                                                            ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
                                                                                                  ಮಂಡ್ಯ ಜಿಲ್ಲೆ, ದಿನಾಂಕಃ 19-02-2013.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ 256/2012 
ಕಲಂ. 302,201 ಐಪಿಸಿ ಕೊಲೆ ಪ್ರಕರಣದ ಪತ್ತೆ ಬಗ್ಗೆ.

     ದಿನಾಂಕಃ 15-06-2012 ರಂದು ಶ್ರೀ. ಸುಲೇಮಾನ್, ಮಂಡ್ಯ ಸಿಟಿ ರವರು ಮಂಡ್ಯ ಗ್ರಾಮಾಂತರ ಠಾಣೆಗೆ ಹಾಜರಾಗಿ ಒಂದು ಪಿರ್ಯಾದನ್ನು ನೀಡಿದ್ದು, ಮೃತ ರಾಮಮೂರ್ತಿಯು ತನ್ನ ಬಳಿ 10 ವರ್ಷಗಳಿಂದ ಸುಲ್ತಾನ್ ಬೀಡಿ ಬಂಡಲ್ ಗಳನ್ನು  ತನ್ನ ಆಟೋರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಮಂಡ್ಯ ಸುತ್ತಮುತ್ತಲ ಅಂಗಡಿಗಳಿಗೆ ವಿತರಣೆ ಮಾಡಿ, ನಂತರ ಮಂಡ್ಯ ನಗರದ ಪ್ಯಾಕ್ಟರಿ ಸರ್ಕಲ್ ನಲ್ಲಿ ಬಾಡಿಗೆ ಹೊಡೆಯುತ್ತಿದ್ದು, ದಿನಾಂಕ: 13-06-2012 ರಂದು ರಾಮಮೂರ್ತಿ ಬೀಡಿ ಬಂಡಲ್ ಗಳನ್ನು  ತೆಗೆದುಕೊಂಡು ಹೋಗಲು ಬಂದಿಲ್ಲವಾದ್ದರಿಂದ ಬೆಂಗಳೂರಿನಲ್ಲಿರುವ ರಾಮಮೂರ್ತಿರವರ ಹೆಂಡತಿ ಮತ್ತು ಮಗನಿಗೆ ಪೋನ್ ಮಾಡಿ ವಿಚಾರ ತಿಳಿಸಿದೆನು, ನಂತರ ತಾನು ಮಂಡ್ಯ ಸಿಟಿಯಲ್ಲಿರುವಾಗ ದೂರವಾಣಿ ಮೂಲಕ ಸಂತೆಕಸಲಗೆರೆ ಬಳಿ ಭೂಮಿಸಿದ್ದೇಶ್ವರ ದೇವಸ್ಥಾನಕ್ಕೆ ಸೇರಿದ ನೀಲಗಿರಿ ತೋಪಿನ ಬಳಿ ಒಂದು ಗಂಡಸಿನ ಶವ ಇರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಶವವು ರಾಮಮೂರ್ತಿಯವರದ್ದಾಗಿರುತ್ತದೆ. ಇವರನ್ನು ದಿನಾಂಕ: 12-06-2012 ರ ನಂತರ ಯಾರೋ ದುಷ್ಕರ್ಮಿಗಳು ರಾಮಮೂರ್ತಿಯ ಕತ್ತಿಗೆ ಪ್ಲಾಸ್ಟಿಕ್ ದಾರದಿಂದ ಬಿಗಿದು ಕೊಲೆ ಮಾಡಿ, ಕೊಲೆಯನ್ನು ಮರೆ ಮಾಚಲು ಹಾಕಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಅದಿಕಾರಿಗಳು ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. 

     ನಂತರ ಮಂಡ್ಯ ಗ್ರಾಮಾಂತರ ವೃತ್ತದ ಪ್ರಬಾರ ಪೊಲೀಸ್ ಇನ್ಸ ಪೆಕ್ಟರ್ ಶ್ರೀ. ಎನ್.ಸಿ.ನಾಗೇಗೌಡರವರು ಪ್ರಕರಣದ ತನಿಖೆಯನ್ನು ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಎ.ಎನ್. ರಾಜಣ್ಣ ರವರ ಮಾರ್ಗದರ್ಶನದಲ್ಲಿ ಮತ್ತು ಮಂಡ್ಯ ಉಪ ವಿಭಾಗದ ಡಿವೈ.ಎಸ್.ಪಿ. ರವರಾದ ಶ್ರೀಮತಿ ಡಾ.ಶೋಭಾರಾಣಿರವರ ಸಲಹೆಯಂತೆ ತನಿಖೆ ಮುಂದುವರೆಸಿ, ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸದರಿ ಪ್ರಕರಣದಲ್ಲಿ ಮೃತ ರಾಮಮೂರ್ತಿ ರವರನ್ನು ಸಂತೆ ಕಸಲಗೆರೆ ಬಳಿ ಭೂಮಿ ಸಿದ್ದೇಶ್ವರ ದೇವಸ್ಥಾನಕ್ಕೆ ಸೇರಿದ ನೀಲಗಿರಿ ತೋಪಿನ ಬಳಿ ಕೊಲೆ ಮಾಡಿ ಬಿಸಾಡಿ ಹೋಗಿದ್ದ ಆರೋಪಿಗಳಾದ 1) ಸರವಣ ಬಿನ್ ಲೇ| ಸ್ವಾಮಿ ನಾಥನ್, 27 ವರ್ಷ, ಆಟೋ ಡ್ರೈವರ್ ಕೆಲಸ, ಮನೆ ನಂ-36/1 ಸಾಯಿ ಬಾಬಾ ನಗರ, 2 ನೇ ಕ್ರಾಸ್, ಶ್ರೀರಾಂಪುರ, ಬೆಂಗಳೂರು-21, ಸ್ವಂತ ಊರು 2 ನೇ ಕ್ರಾಸ್, ಹರಿಶ್ಚಂದ್ರ ಸರ್ಕಲ್ ಹತ್ತಿರ, ಮಂಡ್ಯ ನಗರ. 2) ಜಿ. ರಾಜನ್ @ ರಾಜ ಬಿನ್ ಗಂಗಾಧರ, 29 ವರ್ಷ,  ಶ್ರೀ ಬ್ಯಾಟರಿ ವರ್ಕ್ ಶಾಪ್ ನಲ್ಲಿ ಕೆಲಸ, ವಾಸ 6 ನೇ ಕ್ರಾಸ್, ಗಾಂದಿನಗರ, ಗುತ್ತಲು ರಸ್ತೆ, ಮಂಡ್ಯ ನಗರರವರುಗಳನ್ನು ದಿನಾಂಕಃ 18-02-2013 ರಂದು ಪತ್ತೆ ಮಾಡಿದ್ದು, ಆರೋಪಿಗಳು ಸದರಿ ಮೃತ ರಾಮಮೂರ್ತಿಯ ಜೊತೆಯಲ್ಲಿ ಹಳೇ ವೈಷಮ್ಯದಿಂದ ಹಾಗೂ ರಾಮಮೂರ್ತಿಯು  ಆರೋಪಿಯಾದ ಜಿ. ರಾಜನ್ ರವರ ಚಿಕ್ಕಮ್ಮಳ ಮೇಲೆ ಕಣ್ಣಾಕಿರುವುದಾಗಿ ತಿಳಿದು ಬಂದ ಹಿನ್ನಲೆಯಲ್ಲಿ ಆತನನ್ನು ಕೊಲೆ ಮಾಡಲು ನಿರ್ದರಿಸಿ, ಅವನದೇ ಆಟೋ ರಿಕ್ಷಾ ನಂ. ಕೆಎ-06-ಎ-2376 ಆಟೋದಲ್ಲಿ ಸಂತಕಸಲಗೆರೆ ಬಳಿ ಇರುವ ಭೂಮಿಸಿದ್ದೇಶ್ವರ ದೇವಸ್ಥಾನಕ್ಕೆ ಬಾಡಿಗೆಗೆ ಹೋಗಿಬರೋಣ ಎಂದು ಕರೆದುಕೊಂಡು ಬಂದು, ಕಾರಸವಾಡಿ, ಕೊತ್ತತ್ತಿ, ಕಡೆಗಳಲ್ಲಿ ಸುತ್ತಾಡಿ ದಿನಾಂಕ:12-06-2012 ರಂದು ಸಂಜೆ, ಪ್ಲಾಸ್ಟಿಕ್ ವೈರ್ ನಿಂದ ಕತ್ತಿಗೆ ಬಿಗಿದು, ಕತ್ತನ್ನು ಚಾಕುವಿನಿಂದ ಕುಯ್ದು ಕೊಲೆ ಮಾಡಿ ಕೊಲೆಯನ್ನು ಮರೆಮಾಚಲು ಶವವನ್ನು ಮೇಲ್ಕಂಡ ಸ್ಥಳದಲ್ಲಿ ಬಿಸಾಡಿ, ನಂತರ ಆರೋಪಿಗಳು ಮೃತ ರಾಮಮೂರ್ತಿಯ ಆಟೋವನ್ನು ಕೆ.ಎಂ.ದೊಡ್ಡಿ ರಸ್ತೆಯ ಮೆಲ್ಲಹಳ್ಳಿ ಬಳಿ ಇರುವ ಹೆಬ್ಬಾಳದ ಬದಿಯಲ್ಲಿ ಬಿಟ್ಟು, ಹೊರಟು ಹೋಗಿದ್ದು, ಸದರಿ ಆಟೋವನ್ನು ಪತ್ತೆ ಮಾಡಿದ್ದು, ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷರಾದ ಶ್ರೀ. ಎನ್.ಸಿ.ನಾಗೇಗೌಡ, ಪ್ರೊಬೇಷನರಿ ಪಿ.ಎಸ್.ಐ. ಬ್ಯಾಟರಾಯಗೌಡ, ಸಿಬ್ಬಂದಿಯವರಾದ ರಘುಪ್ರಕಾಶ್, ಮಹೇಶ, ರಾಮಣ್ಣ, ಬೊಮ್ಮೇಗೌಡ ಜೀಪ್ ಚಾಲಕ ಡ್ರೈವರ್ ಲೋಕೇಶ್ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಶಿಸಿರುತ್ತಾರೆ. 

DAILY CRIME REPORT DATED : 18-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-02-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು,  1 ಕೊಲೆ ಪ್ರಕರಣ,  1 ಕಳವು ಪ್ರಕರಣ, 3 ಮನುಷ್ಯ ಕಾಣೆಯಾದ ಪ್ರಕರಣಗಳು,  4 ಯು.ಡಿ.ಆರ್. ಪ್ರಕರಣಗಳು,  1 ರಾಬರಿ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.      


ಕಳ್ಳತನ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 454-457-380 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಬಸವಲಿಂಗಶೆಟ್ಟಿ, 59ವರ್ಷ, ಮುಖ್ಯೋ ಪಾಧ್ಯಾಯ ರು, ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ, ತಡಗವಾಡಿ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ರೂಮಿನ ಒಳಗೆ ಪ್ರವೇಶ ಮಾಡಿ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್, ಒಂದು ಮಿಕ್ಸಿ ಹಾಗೂ ಸಾಂಬಾರಿಗೆ ತಂದು ಇಟ್ಟಿದ್ದ 10 ಪ್ಯಾಕ್ ಎಣ್ಣೆಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಬೆಲೆ 5650/- ರೂ.ಆಗುತ್ತದೆ ಪತ್ತೆ ಮಾಡಿಕೊಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 454-457-380 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಪಿ.ಇಂದಿರಾ, 39 ವರ್ಷ, ಅಂಗನವಾಡಿ ಕಾರ್ಯಕರ್ತೆ,  ತಡಗವಾಡಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಂಗನವಾಡಿ ಕೇಂದ್ರದ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು, ಒಳಗಿನ ಅಡುಗೆ ಮನೆಯ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು  ಮೀಟಿ ಮುರಿದು, ಒಂದು ಇಂಡೇನ್ ಗ್ಯಾಸ್ ಸಿಲಿಂಡರ್ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಗ್ಯಾಸ್ ಸಿಲಿಂಡರ್ನ ಬೆಲೆ ಸುಮಾರು 3000/- ರೂ. ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 302-392-ಕೂಡ ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಎಸ್. ಮಣಿ ಬಿನ್. ಸಗಾದೇವನ್, 39 ವರ್ಷ, ವಾಸ ನಂ 400, 3 ನೇ ಕ್ರಾಸ್, ಹಾಲಹಳ್ಳಿ,  ಮಂಡ್ಯ ರವರು ನೀಡಿದ ದೂರು ಏನೆಂದರೆ ಈಗ್ಗೆ ಸುಮಾರು 3-4 ವರ್ಷಗಳ ಹಿಂದೆ ನನ್ನ ತಮ್ಮ ರವಿಗೆ ಹೊಡೆದಿದ್ದು, ಆಗ ಆರೋಪಿ-4, ಮರೇಣುಕಾ ಹಾಲಹಳ್ಳಿ ವಾಸಿ ಮಂಡ್ಯರವರು ನನ್ನ ತಮ್ಮನ ಹತ್ತಿರ ಎಷ್ಟೇ ಖರ್ಚಾದರೂ  ಕೊಲೆ ಮಾಡುತ್ತೇನೆಂದು ಹೇಳಿದ್ದ ವಿಚಾರವನ್ನು  ನನ್ನ ತಮ್ಮ ನನಗೆ ತಿಳಿಸಿದ್ದು, ಈತನ ಮೇಲೂ ಮತ್ತು ಉಳಿದ ಆರೋಪಿಗಳ ಮೇಲು ಸಹ ನನ್ನ ತಮ್ಮನ ಕೊಲೆಯ ಸಾವಿನ ಬಗ್ಗೆ ಅನುಮಾನವಿರುತ್ತದೆ. ಆರೋಪಿಗಳು  ದಿನಾಂಕ: 17-02-2013 ರಂದು ರಾತ್ರಿ 11-30 ಗಂಟೆಗೆ ಫೋನ್ ಮಾಡಿ ನನ್ನ ತಮ್ಮನನ್ನು ಕರೆಯಿಸಿಕೊಂಡು ಈ ದಿನ ದಿನಾಂಕ: 18-02-2013 ರ ಬೆಳಗಿನ ಜಾವ 05-30 ಗಂಟೆ ನಡುವೆಯಲ್ಲಿ ಹಳೆಯ ದ್ವೇಷ ಇಟ್ಟುಕೊಂಡು ಕುತ್ತಿಗೆಗೆ ಯವುದೋ ಪ್ಲಾಸ್ಟಿಕ್ ವೈರ್ನ್ನು ಬಿಗಿದು ಕೊಲೆ ಮಾಡಿ ಮೇಲ್ಕಂಡ ಉಂಗುರಗಳು, ಚೈನ್, ವಾಚ್ ಮತ್ತು ಮೊಬೈಲ್ ಹ್ಯಾಂಡ್ ಸೆಟ್ ಇವುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ 80,000-00 ರೂಗಳೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಕಲಂ.  41 ಕ್ಲಾಸ್.(ಡಿ) ಕೂಡ 102 ಸಿ.ಆರ್.ಪಿ.ಸಿ. ಹಾಗೂ 379 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಬಿ.ಸಿ.ಕುಮಾರ್, ಸಿ.ಪಿ.ಸಿ.-305, ಹಲಗೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ನಾಗರಾಜು ಬಿನ್. ಲೇಟ್. ಕಾಳನಿಂಗೇಗೌಡ, ವಯಸ್ಸು 61 ವರ್ಷ, ಒಕ್ಕಲಿಗರು, ಕೂಲಿಕೆಲಸ ವಾಸ-ಹಾಡ್ಲಿ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ಆರತಿ ಉಕ್ಕಡದ ಮಾರಮ್ಮ ದೇವಸ್ಥಾನದ ಬಳಿ ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯ ಬಳಿ ಅವರಿಗೆ ಅರಿವಿಲ್ಲದಂತೆ ಕತ್ತಿನದಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಬಂದು ಅದನ್ನು ಮಾರಾಟ ಮಾಡಲು ಹಲಗೂರಿನ ಗಣೇಶ್ ಭವನ್ ಮುಂಭಾಗದಲ್ಲಿ ನಿಂತಿದ್ದಾಗ ಆರೋಪಿಯು ಪಿರ್ಯಾದಿಯವರನ್ನು ಕಂಡು ಅನುಮಾಸ್ಪದವಾಗಿ ಓಡಲು ಪ್ರಯತ್ನಸಿದಾಗ ಪಿರ್ಯಾದಿಯವರು ಆತನನ್ನು ಹಿಡಿದು ವಿಚಾರ ಮಾಡಿದಾಗ ಆತನ ಬಳಿ ಒಂದು ಚಿನ್ನದ ಮಾಂಗಲ್ಯ ಸರ ಇದ್ದು ಇದರ ಬಗ್ಗೆ ಹೇಳಿದಾಗ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡ ಮೇರೆಗೆ ಆರೋಪಿ ಮತ್ತು ಮಾಲನ್ನು ತಂದು ಹಾಜರುಪಡಿಸಿ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ.46/13 ಕಲಂ. ಹುಡುಗ ಕಾಣೆಯಾಗಿದ್ದಾನೆ.  

     ದಿನಾಂಕ: 18-02-2013 ರಂದು ಪಿರ್ಯಾದಿ ಸುಶೀಲಮ್ಮ ಕೊಂ. ರಾಮಚಂದ್ರ, ಕೆ.ಜಿ ಕೋಡಿಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗ ಲೊಕೇಶ್ ಬಿನ್ ರಾಮಚಂದ್ರ, 12 ವರ್ಷ, 7ನೇ ತರಗತಿ ವಿದ್ಯಾಥರ್ಿ, ಮುರಾಜರ್ಿ ಸ್ಕೂಲ್, ಕೋಟೆಬೆಟ್ಟ ನಾಗಮಂಗಲ ತಾಲ್ಲೋಕು, ಸ್ವಂತ ಊರು ಕೆ.ಜಿ.ಕೊಡಹಳ್ಳಿ ಗ್ರಾಮ, ಶೀಳನೆರೆ ಹೋಬಳಿ ಕೆ.ಆರ್.ಪೇಟೆ ತಾಲ್ಲೋಕು ರವರು ದಿನಾಂಕ: 04-02-2013 ರ ಹಿಂದಿನ ದಿನಗಳಲ್ಲಿ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 18-02-2013 ರಂದು ಪಿರ್ಯಾದಿ ನಾಗರಾಜು ಬಿನ್. ತಿಮ್ಮೇಗೌಡ, ಎಸ್.ಬಿ. ಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ತಿಮ್ಮೇಗೌಡ @ ಪುಟ್ಟೇಗೌಡ ಬಿನ್. ಚನ್ನಪಿಳ್ಳೇಗೌಡ, 65 ವರ್ಷ, ವಕ್ಕಲಿಗರು, ವ್ಯವಸಾಯ, ಸಂತೆಬಾಚಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರು ದಿನಾಂಕ: 12-02-2013 ರ ಹಿಂದಿನ ದಿನಗಳಲ್ಲಿ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. ಹೆಂಗಸು  ಕಾಣೆಯಾಗಿದ್ದಾಳೆ.

ದಿನಾಂಕ: 18-02-2013 ರಂದು ಪಿರ್ಯಾದಿ ಸಿದ್ದೇಗೌಡ ಬಿನ್. ಚನ್ನೇಗೌಡ, ಕ್ಯಾತನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಜಯಮ್ಮ, 45 ವರ್ಷ, ಒಕ್ಕಲಿಗರು, ಎಣ್ಣೆಗೆಂಪು ಬಣ್ಣ, ದುಂಡುಮುಖ, 5.5 ಅಡಿ ಎತ್ತರ ಇವರು ದಿನಾಂಕ: 09-02-2013 ರಂದು ಬೆಳಿಗ್ಗೆ 09-30 ಗಂಟೆಯಲ್ಲ್ಲ್ಲಿಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕಿನಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

      ದಿನಾಂಕ: 18-02-2013 ರಂದು ಪಿರ್ಯಾದಿ ಬಲರಾಮ.ಬಿ.ಎಸ್ ಬಿನ್. ಸಣ್ಣಶೆಟ್ಟಿ, ಭೈರಾಪುರ ಗ್ರಾಮ, ಶೀಳನೆರೆ ಹೋಬಳಿ, ಕೆ.ಆರ್.ಪೇಟೆ ತಾಲೋಕು ರವರು ನೀಡಿದ ದೂರು ಏನೆಂದರೆ ನನ್ನ ಮಗ ಬಿ.ಕೃಷ್ಣ, 14 ವರ್ಷ, 9ನೇ ತರಗತಿ, ಭೈರಾಪುರ ಗ್ರಾಮ, ಶೀಳನೆರೆ ಹೋ|| ಕೆ.ಆರ್.ಪೇಟೆ ತಾ. ರವರು ಹಾಗು ಸೋಮಶೇಖರರವರ ಮಗ ಕೆ.ಎಸ್ ಕಿರಣ್ ಕುಮಾರ್ ರವರು ಶೀಳನೆರೆ ಪ್ರೌಢಶಾಲೆಗೆ ವ್ಯಾಸಂಗಕ್ಕೆ ಹೋದವರು ಮನೆಗೆ ವಾಪಸ್ ಬಾರದ ಕಾರಣ ಇವರಿಬ್ಬರು ಕಾಣೆಯಾಗಿರುತ್ತಾರೆಂದು ಸೋಮಶೇಖರ್ ರವರು ಠಾಣೆಗೆ ದೂರು ನೀಡಿರುತ್ತಾರೆ. ನಾವು ನನ್ನ ಮಗನನ್ನು ಹುಡುಕುತ್ತಿದ್ದು ಈ ದಿವಸ ಅಂದರೆ  ದಿನಾಂಕಃ 18-02-2013 ರಂದು ಚೌಡಘಟ್ಟ ಗ್ರಾಮದ ಬಳಿ ಇರುವ ಕಾಳಮ್ಮನ ಕಟ್ಟೆಯಲ್ಲಿ ಹುಡುಗನ ಶವ ನೀರಿನಲ್ಲಿ ತೇಲುತ್ತಿರುತ್ತೆ ಎಂಬ ವಿಚಾರವನ್ನು ತಿಳಿದು ನಾವುಗಳು ಹೋಗಿ ನೋಡಲಾಗಿ ಕಟ್ಟೆಯಲ್ಲಿರುವ ಶವವು ನನ್ನ ಮಗ ಕೃಷ್ಣನಾಗಿರುತ್ತಾನೆ. ನನ್ನ ಮಗ ಕೃಷ್ಣನು ಕಟ್ಟೆಯಲ್ಲಿ ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾನೆ ವಿನಃ ಬೇರೆ ಯಾವುದೇ ಕಾರಣವಿರುವುದಿಲ್ಲ. ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬಹುದೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ರಫಿಕ ಅಹಮದ್ ಬಿನ್. ಅಮೀರ್ ಪಾಷಾ, ಮೈಸೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಕುಟುಂಬ ದೊಡನೆ  ಶ್ರಿರಂಗಪಟ್ಟಣಕ್ಕೆ ಪ್ರವಾಸಕ್ಕೆ ಬಂದಿದ್ದು ಎಲ್ಲರೊಡನೆ ನೀರಿನಲ್ಲಿ ಆಟಾಡುತ್ತಿದ್ದಾಗ ಪರ್ವಿನ್  ತಾಜ್.  ಕೋಂ. ಜುಬೇರ್ ಅಹಮದ್. 23 ವರ್ಷ ರವರು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾರೆ  ದಿನಾಂಕ: 18-02-2013  ರಂದು ಬೆಳಿಗ್ಗೆ ಶವ ಸಿಕ್ಕಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 174 ಸಿ.ಆರ್. ಪಿ.ಸಿ.

ದಿನಾಂಕ: 18-02-2013 ರಂದು ಪಿರ್ಯಾದಿ ಶಶಿಕುಮಾರ್ ಬಿನ್. ಲೇಟ್. ನಾರಾಯಣ, 34 ವರ್ಷ, ಒಕ್ಕಲಿಗರು, ಹೊಟೇಲ್ ವ್ಯಾಪಾರ, ಗೋಸೇಗೌಡರ ಬೀದಿ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು ಸುಮಾರು 65-70 ವರ್ಷ ವಯಸ್ಸು, ದಿನಾಂಕ: 18-02-2013 ರಂದು ಮದ್ಯಾಹ್ನ 03-00 ಗಂಟೆಯ ಹಿಂದಿನ ಸಮಯದಲ್ಲ್ಲಿ, ಸ್ನಾನಘಟ್ಟಕ್ಕೆ ಹೋಗುವ ಸೇತುವೆಯ ಗೋಡೆಯ ಬಳಿ, ಶ್ರೀರಂಗಪಟ್ಟಣ ಟೌನ್. ಇಲ್ಲಿ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ.ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕಾಗಿ ಕೋರಿಕೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್..ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಸಿದ್ದರಾಜು ಬಿನ್. ಲೇಟ್. ಸಿದ್ದಯ್ಯ, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರ ತಂದೆ ಸಿದ್ದಯ್ಯ, 75 ವರ್ಷ, ಗಾಂಧಿನಗರ, ಮಂಡ್ಯ ಸಿಟಿರವರಿಗೆ 75 ವರ್ಷ ವಯಸ್ಸಾಗಿ ಅವರ ತುಂಬಾ ಕೃಷರಾಗಿದ್ದು ಬೆಳಿಗ್ಗೆ 11-00 ಗಂಟೆ ನಂತರ ಕಾರಸವಾಡಿ ರಸ್ತೆಯಲ್ಲಿರುವ ತಮ್ಮ ಜಮೀನನ್ನು ನೋಡಿಕೊಂಡು ಬರಲು ಕಾರಸವಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 27/13 ಕಲಂ. 392 ಐ.ಪಿ.ಸಿ.

ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಭಾಗ್ಯಮ್ಮ ಕೋಂ.ಲೇಟ್ ಕೆ.ಶಿವಲಿಂಗಯ್ಯ, 32 ವರ್ಷ, ವಕ್ಕಲಿಗರು , ಜೀವಶಾಸ್ರ್ತ ವಿಭಾಗದಲ್ಲಿ ಸಹಾಯಕ ಕೆಲಸ, ಶಾಂತಿಕಾಲೇಜು, ವಾಸ: ಎನ್.ಇ.ಎಸ್.ಬಡಾವಣೆ, ಮಳವಳ್ಳಿ ಔನ್. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದನು ಆಗ ನಾನು ಕಳ್ಳನು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದಾನೆ ಎಂದು ಕೂಗಿಕೊಂಡೆ ಮತ್ತು ಆತನ ಹಿಂದೆಯೇ ಓಡಿಹೋದೆ, ಆತನು ಮುಂದೆ ಸ್ವಲ್ಪ ದೂರದಲ್ಲಿ ನಿಂತಿದ್ದ ಸ್ಕೂಟರ್ ನಲ್ಲಿ ಹತ್ತಿಕೊಂಡು ಹೋಗಿರುತ್ತಾರೆ. ನನ್ನ ಕತ್ತಿನಲ್ಲಿ ತರಚಿತ ಗಾಯವಾಗಿರುತ್ತದೆ. ಮಾಂಗಲ್ಯ ಮತ್ತು ಸರ ಒಟ್ಟು 35 ಗ್ರಾಂ,. ಇದರ ಬೆಲೆ 90,000/- ರೂ.ಗಳಾಗುತ್ತದೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 76/13 ಕಲಂ. 498(ಎ)-506 ಕೂಡ 34 ಐ.ಪಿ.ಸಿ ಮತ್ತು 3-4 ಡಿ.ಪಿ. ಕಾಯ್ದೆ.

ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಎನ್. ಪಲ್ಲವಿ ಕೋಂ. ಎಂ.ಜೆ.ಮಂಜು, 20 ವರ್ಷ, ಪರಿಶಿಷ್ಠಜಾತಿ, ಎಂ.ಬೆಟ್ಟಹಳ್ಳಿ ಗ್ರಾಮ, ಪಾಂಡವಪುರ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕಾದರೆ ಚಿನ್ನ, 2 ಲಕ್ಷ ಹಣವನ್ನು ಹಾಗೂ ಮೈಸೂರಿನಲ್ಲಿ ಒಂದು ಸೈಟನ್ನು ನನ್ನ ಹೆಸರಿಗೆ ತೆಗೆದುಕೊಡ ಬೇಕು ಎಂದು ಅವರ ಗಂಡ 1) ಎಂ.ಜೆ. ಮಂಜು ಬಿನ್ ಜವರಯ್ಯ, ಹಾಗು 2) ಸಾಕಮ್ಮ ಕೋಂ. ಜವರಯ್ಯ       3) ಜವರಯ್ಯ(ಗಂಟೆ)  4) ಲಾವಣ್ಯ ಬಿನ್. ಜವರಯ್ಯ, ಎಲ್ಲರೂ ಎಂ.ಬೆಟ್ಟಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು. ರವರುಗಳು ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ ಎಂದು ಹಾಗೂ ಪಿರ್ಯಾಧಿಯ ಅತ್ತೆ ಸಾಕಮ್ಮ ಹಾಗೂ ಮಾವ ಜವರಯ್ಯ(ಗಂಟೆ) ಹಾಗೂ ಅವರ ನಾದಿನಿ ಲಾವಣ್ಯ ಸಹ ಇವರೊಂದಿಗೆ ಸೇರಿ ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಆರೋಪಿ-1 ರವರನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 17-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-02-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅತ್ಯಾಚಾರ ಪ್ರಕರಣ,  5 ಸಾಮಾನ್ಯ / ವಾಹನ ಕಳವು ಪ್ರಕರಣಗಳು ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಅತ್ಯಾಚಾರ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. 341-506-376 ಕೂಡ 34 ಐ.ಪಿ.ಸಿ.

ದಿನಾಂಕ: 17-02-2013 ರಂದು ತಮ್ಮಯ್ಯ, ಲಿಂಗಾಪುರ ಗ್ರಾಮ, ಕಿಕ್ಕೇರಿ ಹೋಬಳಿ ರವರ ಮಗಳು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿರವರುಗಳಾದ 1)ಅರುಣ, 2)ನಾಗರಾಜು ಇಬ್ಬರೂ ಲಿಂಗಾಪುರ ಗ್ರಾಮರವರು  ಬಂದು ನನ್ನನ್ನು ಹಿಡಿದುಕೊಂಡು ಶಿವರುದ್ರನ ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ಕೈ ಕಾಲುಗಳನ್ನು ಹಿಡಿದು ಕೆಳಕ್ಕೆ ಕೆಡವಿಕೊಂಡು ಬಾಯಿಗೆ ಬಟ್ಟೆಯನ್ನು ಹಾಕಿ ಅಮುಕಿ ಹಿಡಿದುಕೊಂಡು ಅರುಣ ಎಂಬುವನು ತನ್ನ ಬಟ್ಟೆಯನ್ನು ಬಿಚ್ಚಿ ಬಲಾತ್ಕಾರವಾಗಿ ಅತ್ಯಚಾರ ಮಾಡಿರುತ್ತಾನೆಂದು, ನಾಗರಾಜುರವರು ಪಕ್ಕದಲ್ಲಿ ನಿಂತಕೊಂಡು ಯಾರಾದರೂ ಬರುತ್ತಾರೆಯೇ ಎಂದು ನೊಡಿಕೊಳ್ಳುತ್ತಿದ್ದನೆಂದು ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ತನಗೆ ಚಾಕು ಹಾಕುತ್ತೆನೆ, ಆಸಿಡ್ ಹಾಕುತ್ತೆನೆ ಎಂದು ಹೆದರಿಸಿದ್ದರಿಂದ ಬಂದು ದೂರು ಕೊಡುತ್ತಿದ್ದೆನೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಸಾಮಾನ್ಯ / ವಾಹನ ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 379 ಐ.ಪಿ.ಸಿ.

     ದಿನಾಂಕ: 17-02-2013 ರಂದು ಪಿರ್ಯಾದಿ ಸುಬ್ಬಲಕ್ಷ್ಮೀ ಕೋಂ. ಲೇಟ್. ನಾರಾಯಣ, ವಾಸ- 2 ನೇ ಕ್ರಾಸ್, ರಂಗನಾಥ ನಗರ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ದೇವಸ್ಥಾನಕ್ಕೆ ಸರದಿಯಲ್ಲಿ ಹೋಗುವಾಗ ಯಾರೋ ಕಳ್ಳರು ನನಗೆ ಅರಿವಿಲ್ಲದಂತೆ ನನ್ನ ಕತ್ತಿನಲ್ಲಿದ್ದ ಲಕ್ಷ್ಮೀಡಾಲರ್ ಸಹಿತವಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ. ಚಿನ್ನದ ಸರ ಸುಮಾರು 45 ಗ್ರಾಂ ತೂಕವಿರುತ್ತದೆ.  ಈ ಚಿನ್ನದ ಸರದ ಬೆಲೆ ಸುಮಾರು 1 ಲಕ್ಷ 20 ಸಾವಿರ ರೂಪಾಯಿಗಳಾಗಿರಬಹುದು. ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 379 ಐ.ಪಿ.ಸಿ.

      ದಿನಾಂಕ: 17-02-2013 ರಂದು ಪಿರ್ಯಾದಿ ನಂಜಮ್ಮ, ವಾಸ- # 46, ವಿಜಯತೇ ನಿಲಯ, ವಿ.ವಿ ಲೇ. ಔಟ್, 3 ನೇ ಅಡ್ಡ ರಸ್ತೆ, ಗುತ್ತಲು ಪೋಸ್ಟ್, ಮಂಡ್ಯ ಸಿಟಿ ರವರು ನೀಡಿದ ದೂರಿನ  ವಿವರವೇನೆಂದರೆ ಪಿರ್ಯಾಧಿಯವರು ತನ್ನ ಕುಟುಂಬದೊಡನೆ ರಥಸಪ್ತಮಿಯ ಪ್ರಯುಕ್ತ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗದಲ್ಲಿದ್ದಾಗ ಜನಜಂಗುಳಿಯಲ್ಲಿ ತನ್ನ ಕತ್ತಿನಲ್ಲಿದ್ದ ಸುಮಾರು 26 ಗ್ರಾಂ ತೂಕದ ಚಿನ್ನದ ಸರವನ್ನು (ಅವಲಕ್ಕಿ ಸರ) ಕಳ್ಳರು ಪಿರ್ಯಾದಿಯರಿಗೆ ಅರಿವಿಲ್ಲದಂತೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಮೌಲ್ಯ ಸುಮಾರು 48 ಸಾವಿರ ರೂ. ಆಗಿರಬಹುದು ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 379 ಐ.ಪಿ.ಸಿ.

ದಿನಾಂಕ: 17-02-2013 ರಂದು ಪಿರ್ಯಾದಿ ಹೆಚ್.ಸಿ.ನಿಶ್ಚಿತ ಕೋಂ. ಚಂದ್ರಶೇಖರ್, 24 ವರ್ಷ, ಒಕ್ಕಲಿಗರು, ಗೃಹಿಣಿ, ವಾಸ 1781/ಬಿ, ಪಾಪೇಗೌಡರ ಬೀದಿ, 14ನೇ ಕ್ರಾಸ್, ಮಂಗಳವಾರಪೇಟೆ, ಚನ್ನಪಟ್ಟಣ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ತಮ್ಮ ಗಂಡನ ಊರಿಗೆ ಹೋಗಲು ಚನ್ನಪಟ್ಟಣ ಕಡೆಗೆ ಹೋಗುವ ಉದಯರಂಗ ಖಾಸಗಿ ಬಸ್ಸನ್ನು ಹತ್ತಿ ಕುಳಿತುಕೊಂಡು ತನ್ನ ವ್ಯಾನಿಟಿ ಬ್ಯಾಗನ್ನು ನೋಡಿಕೊಂಡಾಗ ಜಿಪ್ ಓಪನ್ ಆಗಿದ್ದು ಒಳಗಡೆ ಇಟ್ಟಿದ್ದ ವಡವೆ ಬಾಕ್ಸ್ ಇರಲಿಲ್ಲ. ಸದರಿ ವಡವೆ ಬಾಕ್ಸ್ನಲ್ಲಿದ್ದ 25 ಗ್ರಾಂ ತೂಕದ ನೆಕ್ಲೆಸ್ ಇದರಲ್ಲಿ ಹಸಿರು ಬಣ್ಣದ ಹರಳುಗಳು ಮತ್ತು ಡಾಲರ್ ಇರುತ್ತೆ, 7 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ ಮತ್ತು ಹ್ಯಾಂಗಿಂಗ್ಸ್ ಇವು ಹಸಿರು ಹರಳಿನಿಂದ ಕೂಡಿರುತ್ತೆ, ಇವುಗಳನ್ನು ವಡವೆ ಬಾಕ್ಸ್ ಸಮೇತ ಯಾರೋ ಕಳ್ಳರು ಮೇಲ್ಕಂಡ ವಡವೆಗಳನ್ನು ಕಳವು ಮಾಡಿರುತ್ತಾರೆ. ಇವುಗಳ ಒಟ್ಟು ಬೆಲೆ 85,000-00 ರೂ.ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 379 ಐ.ಪಿ.ಸಿ.

  ದಿನಾಂಕ: 17-02-2013 ರಂದು ಪಿರ್ಯಾದಿ ಎಂ ಮಹದೇವಪ್ಪ ಬಿನ್. ಲೇಟ್. ಮಲ್ಲಣ್ಣ, ಮನೆ ನಂ. ಕೆಟಿ 681, ಚಾಮುಂಡೇಶ್ವರಿನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಹುಷಾರಿಲ್ಲದರಿಂದ ಡಾ.ಕ್ಟರ್ ಬಳಿ ತೋರಿಸಲು ವಿಕ್ರಮ್ ಆಸ್ಪತ್ರೆ ಮುಂಭಾಗ ರಸ್ತೆಯಲ್ಲಿ ಕೆಎ 11-ಕೆ-1076 ಟಿವಿಎಸ್ ಎಕ್ಸ್.ಎಲ್.ಸೂಪರ್ ಸುಜುಕಿ ಮೊಪೆಡ್ ಬೀಗ ಹಾಕಿ ನಿಲ್ಲಿಸಿ ಮೊಪೆಡ್ನ ಕವರ್ ನಲ್ಲಿ ಮಂಡ್ಯ ವಿವಿದ ಬ್ಯಾಂಕಗ್ಗಳ ಪಾಸ್ ಪುಸ್ತಕಗಳಿದ್ದು ಎ.ಪಿ.ಎಲ್. ರೇಷನ್ ಕಾಡರ್್ನ್ನು ಇಟ್ಟು ಚಿಕಿತ್ಸೆಗೆ ಚಿಕಿತ್ಸೆ ಪಡೆದು ಅಲ್ಲಿಂದ   ವಾಪಸ್ಸು ಬಂದು ನೋಡಲಾಗಿ ನನ್ನ ಮೊಪೆಡ್ ಇರಲಿಲ್ಲ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿ ಕೊಡಬೇಕೆಂದು ನಿಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


5. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 41 ಕ್ಲಾಸ್[ಡಿ.]  ಕೂಡ 102 ಸಿ,ಆರ್.ಪಿ.ಸಿ. ಹಾಗು 379 ಐ.ಪಿ.ಸಿ.

ದಿನಾಂಕ: 17-02-2013 ರಂದು ಪಿರ್ಯಾದಿ ಬಿ.ಎಂ ಸತ್ಯನಾರಾಯಣ, ಎ.ಎಸ್.ಐ. ಶಿವಳ್ಳಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಸಿಬ್ಬಂದಿಯವರಾದ   ಸಿ.ಪಿ.ಸಿ-128 ಜಿ.ಆರ್ ಆನಂದರವರನ್ನು ಆರೋಪಿ ಮತ್ತು ಕಳುವು ಮಾಲಿನ ಬಗ್ಗೆ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಒಂದು ಹುಡುಗನು ನಮ್ಮನ್ನು ನೋಡಿ ಮೊಪೆಡ್ ನ್ನು  ಬೀಳಿಸಿ ಓಡಿ ಹೋಗಲು ಯತ್ನಿಸಿದ್ದು ತಕ್ಷಣ ಹಿಡಿದುಕೊಂಡು ಆತನು ತಂದಿದ್ದ ಟಿ,ವಿ.ಎಸ್. ನ್ನು  ಪರಿಶೀಲಿಸಲಾಗಿ ಹಿಂದೆ ಮುಂದೆ ನಂಬರ್ ಪ್ಲೇಟ್ ಇಲ್ಲದ ಕಾರಣ ಈ ಬಗ್ಗೆ ವಿಚಾರ ಮಾಡಲಾಗಿ ಹುಡುಗನು ನಾನು ಈ ಟಿ.ವಿ.ಎಸ್ ನ್ನು ಮಂಡ್ಯದ ಸರ್ಕಾರಿ ಅಸ್ಪತ್ರೆಯ ಮುಂಭಾಗ ಕಳುವು ಮಾಡಿದ್ದೆಂದು ನುಡಿದ ಮೇರೆಗೆ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 16-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-02-2013 ರಂದು ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳ್ಳತನ ಪ್ರಕರಣ ಹಾಗು 6 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 16-02-2013 ರಂದು ಪಿರ್ಯಾದಿ ಮಾಸ್ತಯ್ಯ ಬಿನ್. ಹುಚ್ಚಯ್ಯ, 38 ವರ್ಷ, ಗಂಗಾಮತಸ್ಥ ಜನಾಂಗ, ಅರಕೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಫಿಯರ್ಾದಿಯ ಬಾಮೈದ ಮಹದೇವ ಬಿನ್. ರುದ್ರ, 25 ವರ್ಷ, ಗಂಗಾಮತಸ್ಥ ಜನಾಂಗ ರವರು ದಿನಾಂಕ: 02-01-2013 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ತನ್ನ ಹೆಂಡತಿಯ ಊರು ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಬೆಂಗಳೂರಿಗೂ ಹೋಗದೆ ಪಿರ್ಯಾದಿಯವರ ಮನೆಗೂ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ನೆಂಟರಿಷ್ಟರ ಮನೆಗಳಲ್ಲಿ ಹುಡುಕಾಡಿದರೂ ಸಿಗದಿದ್ದ ಕಾರಣ, ಈ ದಿನ ತಡವಾಗಿ ಬಂದು ಹುಡುಕಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. ಮಕ್ಕಳು ಕಾಣೆಯಾಗಿದ್ದಾರೆ.

    ದಿನಾಂಕ: 16-02-2013 ರಂದು ಪಿರ್ಯಾದಿ ಸೋಮಶೇಖರ ಬಿನ್. ಶಿವಯ್ಯ, ಶೀಳನೆರೆ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ 1] ಕೆ.ಎಸ್.ಕಿರಣ್ಕುಮಾರ್. 14 ವರ್ಷ ಹಾಗು 2] ಬಿ. ಕೃಷ್ಣ, 14 ವರ್ಷ. ಭೈರಾಪುರ ಗ್ರಾಮ ರವರುಗಳು ಶಾಲೆಗೆಂದು ಹೋದವರು, ಶಾಲೆಗೆ ಹೋಗಿರುವುದಿಲ್ಲ. ಬ್ಯಾಗುಗಳನ್ನು ಶಾಲೆಯ ಬಳಿ ಇಟ್ಟು ಎಲ್ಲಿಯೋ ಹೊರಟು ಹೋಗಿರುತ್ತಾರೆ ನಾವು ನಮ್ಮ ಸಂಬಂದಿಕರು, ಸ್ನೇಹಿತರನ್ನು ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 16-02-2013 ರಂದು ಪಿರ್ಯಾದಿ ತಿಮ್ಮೇಗೌಡ, (ಕಾಳಮ್ಮನ-ಗುಡ್ಡಪ್ಪ) ಕಡಿಲುವಾಗಿಲು, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ: 09/10-01-2013 ರಂದು 1] ಜೋಗಿಶೆಟ್ಟಿ ಬಿನ್. ಟೈಲರ್ ಚಲುವಶೆಟ್ಟಿ, ಕಡಿಲುವಾಗಿಲು ಗ್ರಾಮ ಮತ್ತು 2]  ತಿಮ್ಮ,  ಬನ್ನಹಳ್ಳಿ ಗ್ರಾಮರವರುಗಳು ವೀರಭದ್ರೇಶ್ವರ ಸ್ವಾಮಿ ದೇವಾಲಯ, ಕಾಳಮ್ಮ ಮತ್ತು ಮದ್ದನಹಟ್ಟಿ ಅಮ್ಮನ ದೇವಾಲಯಗಳ ಬಾಗಿಲುಗಳ ಬೀಗ ಮುರಿದು ಹುಂಡಿಯಲ್ಲಿ ಇದ್ದ ಹಣ ಹಾಗೂ ದೇವರುಗಳ ವಿಗ್ರಹಗಳಲ್ಲಿ ಇದ್ದ ಬೆಳ್ಳಿ ಛತ್ರಿ ಹಾಗೂ ಇತರೆ ಬೆಲೆ ಬಾಳುವ ಪದಾರ್ಥಗಳನ್ನು ಆರೋಪಿಗಳು ಕಳ್ಳತನ ಮಾಡಿರುವುದು ಅನುಮಾನವಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 15-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-02-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿರುತ್ತವೆ ಅವುಗಳಲ್ಲಿ 5 ಯು.ಡಿ.ಆರ್. ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964 ಅಧಿನಿಯಮ ಪ್ರಕರಣ,  1 ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ದೇವರಾಜು ಬಿನ್. ಲೇ. ಚಲುವಯ್ಯ, ಮರಳಗಾಲ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ವೈಕುಂಟಯ್ಯ    ಬಿನ್ ಲೇ| ಚಲುವಯ್ಯ ರವರಿಗೆ ನೋವು ಜಾಸ್ತಿಯಾಗಿ ಹೊಟ್ಟೆ ನೋವಿನ ಔಷಧ ಕುಡಿಯುವ ಬದಲು ಯಾವುದೋ ಕ್ರಿಮಿನಾಷಕ ಔಷಧಿ ಕುಡಿದು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

       ದಿನಾಂಕ: 15-02-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇ. ಕುಮಾರ, 32 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕುಮಾರ ಬಿನ್. ಲೇ. ಪಳಿನಿ, 60 ವರ್ಷ, ರವರು ಡ್ರೈನೇಜ್ನ್ನು ಸ್ವಚ್ಚಗೊಳಿಸುತ್ತಿದ್ದಾಗ, ಆಕಸ್ಮಿಕವಾಗಿ ಚರಂಡಿಗೆ ಬಿದ್ದಿದ್ದು, ಪೆಟ್ಟಾಗಿದ್ದ ಕುಮಾರರವರನ್ನು ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಮಂಡ್ಯ ಜಿಲ್ಲಾ ಆಸ್ಪತ್ರೆಯ ಬಳಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

3. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

      ದಿನಾಂಕ: 15-02-2013 ರಂದು ಪಿರ್ಯಾದಿ ನರೇಶ್, ಸಹಾಯಕ ಇಂಜಿನಿಯರ್, ಬಿ.ಡಬ್ಯೂ.ಎಸ್.ಎಸ್.ಬಿ.  ಟಿ.ಕೆ.ಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನೆಟ್ಕಲ್ ಎನ್ಬಿಆರ್ ಕೆರೆಯಲ್ಲಿ ಒಂದು ಅಪರಿಚಿತ ಗಂಡಸು, ಸುಮಾರು 45 ರಿಂದ 50 ವರ್ಷ, ಶವ ತೇಲುತ್ತಿರುತ್ತದೆ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

4. ಶಿವಳ್ಳಿ  ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಅರ್.ಪಿ.ಸಿ.

     ದಿನಾಂಕ: 15-02-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ಲೆಃ ಕರೀಗೌಡ, ಪುರದಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಅಪರಿಚಿತ ಗಂಡಸು, ಸುಮಾರು 50-55 ವರ್ಷ ರವರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವನೆ ಮಾಡಿಯೋ ಆಥವಾ ಹೃದಯಾಘಾತದಿಂದಲೋ ಅಥವಾ ಯಾವುದೋ ಖಾಯಿಲೆಯಿಂದ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸತ್ತಿರುತ್ತಾನೆ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

5.ಪಾಂಡವಪುರ ಪೊಲೀಸ್ ಠಾಣೆ ಯುಡಿಆರ್ ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ಈರೇಗೌಡ ಬಿನ್. ಲೇಟ್. ಹೊನ್ನೇಗೌಡ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಜ್ಯೋತಿ ಕೋಂ. ಸೋಮೇಗೌಡ @ ತಮ್ಮೇಗೌಡ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :


ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 279, 304[ಎ] ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 15-02-2013 ರಂದು ಪಿರ್ಯಾದಿ ಡಿ.ಎನ್ ನಟರಾಜು, ಸಿಪಿಸಿ-701, ಮಂಡ್ಯ ಗ್ರಾಮಾಂತರ ಠಾಣೆ ರವರು ನೀಡಿದ ದೂರು ಏನೆಂದರೆ ಒಬ್ಬ ಗಂಡಸು ರಸ್ತೆಯಲ್ಲಿ ಬಿದ್ದಿದ್ದು ಹತ್ತಿರ ಹೋಗಿ ನೋಡಲಾಗಿ ಗಂಡಸಿನ  ತಲೆಯ ಮೇಲೆ ಯಾವುದೋ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಸದರಿ ವಾಹನ, ಚಾಲಕನ ಹೆಸರು ಮತ್ತು ವಿಳಾಸ ಪತ್ತೆ ಮಾಡಬೇಕಾಗಿದೆ.  ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.  


ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964 ಅಧಿನಿಯಮ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 4, 5, 8, 9 ಮತ್ತು 11 [ಡಿ] ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964.

ದಿನಾಂಕ: 15-02-2013 ರಂದು ಪಿರ್ಯಾದಿ ಬಾಲು ಹೆಚ್.ಎನ್. ಆರಕ್ಷಕ ಉಪ ನಿರೀಕ್ಷಕರು, ಮಂಡ್ಯ ಪೂರ್ವ ಪೊಲೀಸ್ ಠಾಣೆ,  ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ. ಬಿ. ಮಂಜು11ಎ 4305 ರ ಚಾಲಕ ಮತ್ತು ಮಾಲೀಕ, 2] ಕೆ, ಎ, 11 ಎ 3960ರ ಚಾಲಕ.  3] ಕೆ, ಎ, 11 ಎ 4640 ರ ಚಾಲಕ
4] ಕೆ,ಎ, 11ಎ 2476ರ ಚಾಲಕ ಮತ್ತು 5] ಸಾಧಿಕ್ ರವರುಗಳು ಗೂಡ್ಸ್ ಟೆಂಪೋದಲ್ಲಿ ಎಮ್ಮೆಗಳನ್ನು ಮತ್ತು ಹಸುಗಳನ್ನು ತುಂಬಿಕೊಂಡು ಬರುತ್ತಿದ್ದಾರೆೆ. ಅವುಗಳನ್ನು ರಕ್ಷಿಸಿ ಎಂದು ಬಂದಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳ ಜೊತೆ ಮತ್ತು ಪಂಚಾಯ್ತುದಾರರ ಸಮಕ್ಷಮ ಮಧ್ಯಾಹ್ನ 12-30 ಗಂಟೆಯಿಂದ 13-30 ಗಂಟೆಯವರೆಗೆ ಕ್ರಮ ಕೈಗೊಂಡು ವಿವರವಾದ ಮಹಜರ್ ಕ್ರಮವನ್ನು ಜರುಗಿಸಿ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 379 ಐ.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ವಿಠಲಾಪುರ ರಸ್ತೆಯಲ್ಲಿರುವ ಕುಂದನಕುಪ್ಪೆ, ಎಲ್ಲೆಯ ಸವರ್ೆ ನಂಬರ್ 401 & 407 ರ ಜಮೀನಿನಲ್ಲಿ ಪಂಪ್ಸೆಟ್ಗೆ ಅಳವಡಿಸಿದ್ದ ಸುಮಾರು 100 ಮೀಟರ್ ಉದ್ದದ್ದ ಕೇಬಲ್ ವೈರನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 324, 323, 498(ಎ) ಐ.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ಗೋವಿಂದರಾಜು @ ಗೋಪಿ ಬಿನ್. ನಂಜಯ್ಯ, ಯರಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಯು ಬಂದು ಸಂಸಾರದ ವಿಚಾರದಲ್ಲಿ ಜಗಳ ತೆಗೆದು ಇಟ್ಟಿನ ದೊಣ್ಣೆಯಿಂದ ಕಾಯಿ ತುರಿಯುವ ಮಣೆಯಿಂದ, ಮತ್ತು ಚೂರಿಯಿಂದ, ಕೈಯಿಂದ ಹೊಡೆದು ಪಿಯರ್ಾದಿಯವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 14-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-02-2013 ರಂದು ಒಟ್ಟು 8 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅಪಹರಣ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   

ಮನುಷ್ಯ ಕಾಣೆಯಾದ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 14-02-2013 ರಂದು ಪಿರ್ಯಾದಿ ಎನ್.ಡಿ.ಪುಟ್ಟರಾಜು ಬಿನ್. ಲೇ. ದೇವೇಗೌಡ, 36ವರ್ಷ, ವಕ್ಕಲಿಗರು, ವ್ಯವಸಾಯ, ನರಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಅಣ್ಣನ ಮಗಳು, 21 ವರ್ಷರವರು  ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಬಿಟ್ಟು ಹೋಗಿದ್ದು ವಾಪಸ್ ಮನೆಗೆ ಬಂದಿರುವುದಿಲ್ಲ, ಪಿರ್ಯಾದಿಯವರು ಎಲ್ಲಾ ಕಡೆ ಹುಡುಕಾಡಿ ಪತ್ತಯಾಗದ ಕಾರಣ, ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 55/13 ಮನುಷ್ಯ ಕಾಣೆಯಾಗಿದ್ದಾನೆ.

       ದಿನಾಂಕ: 14-02-2013 ರಂದು ಪಿರ್ಯಾದಿ ಮಾದಯ್ಯ ಬಿನ್. ಬುಯ್ಯೇಗೌಡ, 65 ವರ್ಷ, ಹಳೆಬೂದನೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರು ಠಾಣೆಗೆ ಹಾಜರಾಗಿ ತನ್ನ ಗಂಡು ಮಗ ಕುಂದೂರಯ್ಯ @  ಪುಟ್ಟಸ್ವಾಮಿ, 36 ವರ್ಷ ಒಕ್ಕಲಿಗರು, ಹಳೆಬೂದನೂರು ಗ್ರಾಮ, ಮಂಡ್ಯ ತಾರವರು ದಿನಾಂಕಃ-12-01-2013ರಂದು ಮದ್ಯಾಹ್ನ 01-00 ಗಂಟೆ ಸಮಯದಲ್ಲಿ ಮನೆಯಿಂದ ಹೋದವನು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 31/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

      ದಿನಾಂಕ: 14-02-2013 ರಂದು ಪಿರ್ಯಾದಿ ಮೋಹನ್ಕುಮಾರ್, ಚೋಳನಹಳ್ಳಿ ಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರೂಪ ಎಂಬುವವರು ನಾಗಮಂಗಲ ಕಾಲೇಜಿಗೆ ಹೋದವಳು ವಾಪಸ್ಸು ಬಂದಿರುವುದಿಲ್ಲ. ಎಲ್ಲಾ ಸಂಬಂದಿಕರ ಮನೆಯಲ್ಲಿ ಹುಡುಕಿ ಈ ದಿನ ದೂರು ನೀಡಿರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 366(ಎ) ಕೂಡ 34 ಐ.ಪಿ.ಸಿ.

        ದಿನಾಂಕ: 14-02-2013 ರಂದು ಪಿರ್ಯಾದಿ ವೆಂಕಟಸ್ವಾಮಿ ಬಿನ್ ಲೇ. ತವಕುಂಡಯ್ಯ, ಹನುಮಂತನಗರ, ಸಿ.ಎ.ಕೆರೆ ಹೋಬಳಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ಹೆಚ್.ವಿ. ಕಾಲೇಜಿಗೆ ಹೋಗುತ್ತೇನೆಂದು ಮನೆಯಿಂದ ಹೋಗಿದ್ದು ವಾಪಸ್ಸು ಮನೆಗೆ ಬಂದಿರುವುದಿಲ್ಲ ಆರೋಪಿ-1 1] ಶರ್ಮ @ ಮಲ್ಕಜ ಹಾಗು ಇತರೆ 3 ಜನರು ಎಲ್ಲರೂ ತಿಪ್ಪೂರು ಗ್ರಾಮ, ಕನಕಪುರ ತಾ..ರವರು ಪಿರ್ಯಾದಿಯವರ ಮಗಳನ್ನು ಪ್ರೀತಿಸುತ್ತಿದ್ದು ಆರೋಪಿಗಳು ಒಟ್ಟಾಗಿ ಪಿರ್ಯಾದಿಯವರ ಮಗಳನ್ನು ಅಪಹರಣ ಮಾಡಿರುವ ಗುಮಾನಿ ಇರುತ್ತೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  ರಸ್ತೆ ಅಪಘಾತ ಪ್ರಕರಣ : 

ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 279, 304 (ಎ) ಐಪಿಸಿ ರೆಃವಿ 187 ಐಎಂವಿ ಕಾಯ್ದೆ.

ದಿನಾಂಕ: 14-02-2013 ರಂದು ಪಿರ್ಯಾದಿ ಎ.ಸಿ. ಜವರಾಯಿಗೌಡ ಬಿನ್ ಚಿಕ್ಕತಿಮ್ಮಯ್ಯ, ಅಜ್ಜಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ, ಮದ್ದೂರು ತಾಲ್ಲೋಕು ರವರು ನೀಡಿದ ದೂರಿನ  ವಿವರವೇನೆಂದರೆ  ಪಿರ್ಯಾದಿ    ದೊಡ್ಡಮ್ಮನ ಮಗ ಅಪರಿಚಿತ ಲಾರಿಯ ಚಾಲಕ,  ಹೆಸರು  ವಿಳಾಸ  ತಿಳಿಯಬೇಕಾಗಿದೆ  ನಡೆದುಕೊಂಡು  ರಸ್ತೆ  ದಾಟುತ್ತಿದ್ದಾಗ  ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗಲು ಯಾವುದೋ ಒಂದು ಲಾರಿಯ ಚಾಲಕ ಲಾರಿಯನ್ನು ಬಹಳ ವೇಗವಾಗಿ ಅಜಾಗರೂಕತೆಯಿಂದ  ಓಡಿಸಿಕೊಂಡು  ಬಂದು  ರಸ್ತೆ  ದಾಟುತ್ತಿದ್ದ ಎನ್.ಹೆಚ್. ವೆಂಕಟೇಶನಿಗೆ  ರಭಸವಾಗಿ  ಡಿಕ್ಕಿ  ಹೊಡೆಸಿ  ಲಾರಿಯನ್ನು  ನಿಲ್ಲಿಸದೆ ಹೊರಟುಹೋದ  ಚಿಕಿತ್ಸೆಗಾಗಿ  ಮದ್ದೊರು  ಸರ್ಕಾರಿ  ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ  ನಂತರ ವೈದ್ಯರ  ಸಲಹೆ  ಮೇರೆಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ  ಮಧ್ಯೆ  ಮೃತಪಟ್ಟಿರುತ್ತಾನೆಂದು  ಕೊಟ್ಟ  ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 13-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಾಬರಿ ಪ್ರಕರಣಗಳು,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ, 1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  1 ಕೊಲೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ರಾಬರಿ ಪ್ರಕರಣಗಳು :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 392 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಚೈತ್ರ ಬಿನ್. ಶಿವನಂಜು, 18 ವರ್ಷ, ಬಿಎಸ್ಸಿ ವಿಧ್ಯಾರ್ಥಿನಿ , ಬೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಪೀಹಳ್ಳಿ ಕೆರೆ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜೆ 05-15 ಗಂಟೆಯಲ್ಲಿ ಒಂದು ಬೈಕ್ ಮೇಲೆ ಒಬ್ಬ ಅಸಾಮಿ ಕುಳಿತಿದ್ದು, ಮತ್ತೊಬ್ಬ ಕೆಳಗೆ ನಿಂತಿದ್ದು, ನಿಂತಿದ್ದ ಅಸಾಮಿ ನಮ್ಮ ಬಳಿಗೆ ಬಂದು ರೇಜರ್ ತೋರಿಸಿ, ನನ್ನ ಕತ್ತಿನಲ್ಲಿ ಹಾಕಿದ್ದ ಚಿನ್ನದ ಚೈನನ್ನು ಬಲವಂತವಾಗಿ ಕಿತ್ತುಕೊಂಡು ಓಡಿ ಹೋಗಿರುತ್ತಾನೆ, ಚಿನ್ನದ ಸರವು 15 ಗ್ರಾಂ. ತೂಕವಿದ್ದು, ಇದರ ಮೌಲ್ಯ 30 ಸಾವಿರ ರೂ ಆಗುತ್ತದೆ. ಆರೋಪಿಯನ್ನು ಪತ್ತೆ ಮಾಡಿ ಚಿನ್ನದ ಸರವನ್ನು ಕೊಡಿಸಿ ಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 384 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ಸಿದ್ದಯ್ಯ. ಬೆಸಗರಹಳ್ಳಿ ಅಡ್ಡರಸ್ತೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ರವಿ ಬಿನ್. ಸೋಮಯ್ಯ, ಇಗ್ಗಲೂರು ಗ್ರಾಮ, ಚನ್ನಪಟ್ಟಣ ತಾ. ರವರು ಕೋಳಿ ಫಾರಂನಲ್ಲಿ ಮಲಗಿದ್ದಾಗ ಆರೋಪಿ ಬಂದು ಚಾಕು ತೋರಿಸಿ ಅವರ ಬಳಿ ಇದ್ದ 12000=00 ರೂ ಗಳನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 498(ಎ)-504 ಕೂಡ34 ಐ.ಪಿ.ಸಿ.ಮತ್ತು ಕಲಂ4 ಡಿ.ಪಿ.ಕಾಯಿದೆ.

     ದಿನಾಂಕ: 13-02-2013 ರಂದು ಪಿರ್ಯಾದಿ ಅಂಜಲಿ ಕೋಂ. ಚಂದ್ರೇಗೌಡ, 20 ವರ್ಷ, ಒಕ್ಕಲಿಗರು, ಗೃಹಿಣಿ, ಹೊಸಕೋಟೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಚಂದ್ರೇಗೌಡ ಬಿನ್ ಲೇಟ್. ಅಂಕೇಗೌಡ ಹಾಗು ಅತ್ತೆ ಲಕ್ಷ್ಮಮ್ಮ ಕೋಂ. ಲೇಟ್ ಅಂಕೇಗೌಡ, ಇಬ್ಬರೂ ಹೊಸಕೋಟೆ ಗ್ರಾಮ ರವರುಗಳು ಪಿರ್ಯಾದಿಯವರನ್ನು ವರದಕ್ಷಿಣೆಯಾಗಿ ಎರಡು ಲಕ್ಷ ರೂ.ಗಳನ್ನು ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ಕೊಟ್ಟಿದ್ದು, ದಿಃ-12-02-2013 ರಂದು ಬೆಳಿಗ್ಗೆ 6 ಗಂಟೆಯಲ್ಲಿ ಪಿರ್ಯಾಧಿಯ ಗಂಡ ಮತ್ತು ಅತ್ತೆ ಇಬ್ಬರು ಪಿರ್ಯಾದಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಬೈದು ಮನೆಯಿಂದ ಹೊರಗೆ ನೂಕಿರುತ್ತಾರೆ ಕ್ರಮ ಕೈಗೊಳ್ಳಿ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 36/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

     ದಿನಾಂಕ: 13-02-2013 ರಂದು ಪಿರ್ಯಾದಿ ಶೀನೆಗೌಡ ಬಿನ್. ಲೇಟ್. ಯಾಲಕ್ಕಿಗೌಡ, ಕಬ್ಬಲಗೆರೆ ಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ದಿನಾಂಕ: 07-02-2013 ರಂದು ಸಂಜೆ 05-00 ಗಂಟೆಯಲ್ಲಿ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೋದವಳು ಮತ್ತೆ ವಾಪಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಪತ್ತೆಮಾಡಿಕೊಡಿ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 379 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಎಂ.ಎಸ್.ಇಂದ್ರ ವಾಸ ನಂ. 4/10, 1ನೇ ಕ್ರಾಸ್, 1ನೇ ಮುಖ್ಯರಸ್ತೆ, ಆಜಾದ್ನಗರ, ಬೆಂಗಳೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಪರ್ಸ್ ನ್ನು,  ನೋಡಲು ವ್ಯಾನಿಟಿ ಬ್ಯಾಗ್ನ ಜಿಪ್ ತೆಗೆದಾಗ ಅದರಲ್ಲಿ ಪಸರ್್ ಇರಲಿಲ್ಲ. ಸದರಿ ಪಸರ್್ನಲ್ಲಿಟ್ಟಿದ್ದ 12 ಗ್ರಾಂ ತೂಕದ ಲಕ್ಷ್ಮಿ ಡಾಲರ್ ಇರುವ ಹಗ್ಗದ ಮಾದರಿಯ ಚಿನ್ನದ ಚೈನ್, 5 ಗ್ರಾಂ ತೂಕದ ಹಸಿರು ಹರಳಿರುವ ಚಿನ್ನದ ಉಂಗುರ ಮತ್ತು 700-00 ರೂ. ನಗದು ಹಣವನ್ನು ಯಾರೋ ಕಳ್ಳರು ಬಸ್ಸನ್ನು ಹತ್ತುವಾಗ ಪರ್ಸ್ ಸಮೇತ ಕಳವು ಮಾಡಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 48,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :


ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

  ದಿನಾಂಕ: 13-02-2013 ರಂದು ಪಿರ್ಯಾದಿ ಮಂಜುಳ ಬೊಪ್ಪಸಮುದ್ರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-02-2013 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಯೋಗೇಶ ಬಿನ್ ದೊಡ್ಡೈದೇಗೌಡ ಬೊಪ್ಪಸಮುದ್ರ ರವರು ಗದ್ದೆಗೆ ಹೊಡೆಯುವ ಔಷದಿಯನ್ನು ಕುಡಿದು ಒದ್ದಾಡುತ್ತಿದ್ದಾಗ ಚಿಕಿತ್ಸೆಗೆ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಬಗ್ಗೆ ಮಂಡ್ಯ ಜಿಲ್ಲಾ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13-02-2013 ರಂದು ಸುಮಾರು ಸಂಜೆ 06-00 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :


ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 353-504-506 ಕೂಡ 34 ಐಪಿಸಿ ಹಾಗೂ ಕಲಂ-3 ಕ್ಲಾಸ್() ಸಬ್ ಕ್ಲಾಸ್ (ಘಿ) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ.  

     ದಿನಾಂಕ: 13-02-2013 ರಂದು ಪಿರ್ಯಾದಿ ಎಸ್.ಜಿ ವಸಂತಕುಮಾರ್, ಸಹ ಶಿಕ್ಷಕರು, ಶ್ರೀ ಯದುಶೈಲ ಪ್ರೌಢಶಾಲೆ, ಮೇಲುಕೋಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ.ಬಿ ನರಸಿಂಹೇಗೌಡ, 2] ಜವರೇಗೌಡ, ಕಾಡೇನಹಳ್ಳಿ, 3] ವಿ. ಮಚಂದ್ರ, ಕೊಡಗಹಳ್ಳಿ, 4] ಅನಂತರಾಮಶೆಟ್ಟ, ಮೇಲುಕೋಟೆ ರವರುಗಳು,  ಮುಖ್ಯ ಶಿಕ್ಷಕರನ್ನು ಬೈಯುತ್ತಿದ್ದರು. ಆಗ ಪಿರ್ಯಾಧಿಯನ್ನು ಆರೋಪಿ ಕೆ.ಬಿ ನರಸಿಂಹೇಗೌಡರು ಬಾರೋ ಲೋ ಬಡ್ಡಿ ಮಗನೇ ದನ ತಿನ್ನೋ ಹೊಲೆಯ ನನ್ನ ಮಕ್ಕಳಿಗೆ ಕೆಲಸ ಕೊಟ್ಟಿದ್ದೇ ತಪ್ಪಾಯ್ತು. ಕಾಲಿನ ಚಪ್ಪಲಿ  ಎಲ್ಲಿರ್ಸಬೇಕು ಅಲ್ಲೆ ಇರ್ಸಬೇಕು ಎಂದು ಕೆಂಡಾ ಮಂಡಲವಾಗಿ ಪಿರ್ಯಾದಿಯನ್ನು ಹೊಡೆಯಲು ಮುಂದಾಗಿದ್ದು, ಇದರಿಂದ ಪ್ರಾಣಭಯ ಉಂಟಾಗಿದ್ದು, ಶಾಲೆಯಲ್ಲಿ ಕಾರ್ಯನಿರ್ವಹಿಸಲು ತೊಂದರೆ ಉಂಟಾಗಿದೆ. ಆದ್ದರಿಂದ ದಯಮಾಡಿ ಆರೋಪಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 302-201 ಐ.ಪಿ.ಸಿ.

ದಿನಾಂಕ: 13-02-2013 ರಂದು ಪಿರ್ಯಾದಿ ಆನಂದೇಗೌಡ, ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದಿನಾಂಕ:13-02-2013ರಂದು ಮೃತನ ಶವ ಪರೀಕ್ಷಾ ವರದಿಯನ್ನು ನೀಡಿದ್ದು ಮೃತನ ಸಾವಿನ ಕಾರಣದ ಬಗ್ಗೆ  All the above injuries are antemortum in nature. And death is due to ligature strangulation '' ಎಂದು ಅಭಿಪ್ರಾಯ ಪಟ್ಟಿದ್ದು ಮೃತನನ್ನು ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಯಾವುದೋ ಸಾದನದಿಂದ ಮೃತನ ಕುತ್ತಿಗೆಗೆ ಬಿಗಿದು ಉಸಿರು ಕಟ್ಟಿಸಿ ಸಾಯಿಸಿರುವುದು ವೈಧ್ಯಾಧಿಕಾರಿಗಳ ಅಭಿಪ್ರಾಯದಿಂದ ಕಂಡು ಬಂದಿರುವುದರಿಂದ ಈ ಯುಡಿಅರ್ ಪ್ರಕರಣದಲ್ಲಿ ದಿನಾಂಕ:13-02-2013 ರಂದು ಬೆಳಿಗ್ಗೆ 11-00ಗಂಟೆಯ ಸಮಯದಲ್ಲಿ ಕನರ್ಾಟಕ ಸರ್ಕಾರದ  ಪರವಾಗಿ ನಾನು ಸ್ವಯಂ ವರದಿಯನ್ನು ತಯಾರಿಸಿ ಠಾಣಾ ಮೊ.ಸಂ.  53/2013 ಕಲಂ 302-201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

DAILY CRIME REPORT DATED : 12-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಅರ್. ಪ್ರಕರಣ,  2 ಕೊಲೆ ಪ್ರಕರಣಗಳು ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 12-02-2013 ರಂದು ಪಿರ್ಯಾದಿ ಚೆಲುವರಾಜು ಬಿನ್ ಮಲ್ಲೇಸಿಂಗ್ರಯ್ಯ, ಬಿಲ್ಲೇನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ,  ಮೂತರ್ಿ ರವರ ಹೆಂಡತಿ, 20 ವರ್ಷ ಕಾಗೇರೆ ಗ್ರಾಮ ರವರು ದಿನಾಂಕ: 02-02-2013 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಬಿಲ್ಲೇನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 12-02-2013 ರಂದು ಪಿರ್ಯಾದಿ ಶಿವಲಿಂಗಯ್ಯ ಬಿನ್. ಜವರಯ್ಯ, ಬಳ್ಳೇಕರೆ ಗ್ರಾಮ, ಸಂತೇಬಾಚಹಳ್ಳಿ ರವರು ನೀಡಿದ ದೂರು ಏನೆಂದರೆ ಅವರ ತಂದೆ ಜವರಯ್ಯ, 70 ವರ್ಷ ರವರು ಈಗ್ಗೆ 8-9 ವರ್ಷಗಳ ಹಿಂದೆ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  ಯು.ಡಿ.ಅರ್. ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 12-02-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇಟ್. ಸಿದ್ದೇಗೌಡ, 40 ವರ್ಷ, ಒಕ್ಕಲಿಗರು, ತಗ್ಗಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು, ಸುಮಾರು 80 ವರ್ಷ ರವರು ತಗ್ಗಹಳ್ಳಿ ಗ್ರಾಮದ ಬಸ್ ನಿಲ್ದಾಣದ ಶೆಲ್ಟರ್ನಲ್ಲಿ  ಬಂದು ಮಲಗಿದ್ದು ಗ್ರಾಮದ ಜನರು ಊಟ ಕೊಟ್ಟರೂ ಸಹ  ಆಹಾರವನ್ನು ಸೇವಿಸುತ್ತಿರಲಿಲ್ಲ,  ಮಲಗಿದಾಗ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಕೊಲೆ ಪ್ರಕರಣಗಳು  :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 65/13 ಕಲಂ. 302 ಕೂಡ 34 ಐ.ಪಿ.ಸಿ.

   ದಿನಾಂಕ: 12-02-2013 ರಂದು ಪಿರ್ಯಾದಿ ಶಿವಲಿಂಗ ಬಿನ್. ಲೇಟ್. ಲಾರಿನಿಂಗಪ್ಪ, ಅಣ್ಣಳ್ಳಿದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಸೋದರ ಮಾವ ಬಿ, ಕೃಷ್ಣನ ಶವವನ್ನು ಹೊರಗಡೆ ಎತ್ತುಕೊಂಡು ಬಂದು ನೋಡಲಾಗಿ ಆತನ ಮೂಗು ಮುಖ ಗಡ್ಡದ ಹತ್ತಿರ ತರಚಿದಂತಹ ಸಣ್ಣ ಸಣ್ಣ ಗಾಯಗಳು ಆಗಿರುವುದು ಕಂಡು ಬಂತು ಅದನ್ನು ನೋಡಿದರೆ ಮೇಲ್ಕಂಡ ನನ್ನ ಸೋದರ ಮಾವನ ಸಾವಿನ ಬಗ್ಗೆ ಸಂಶಯವಿರುತ್ತದೆ ಆರೋಪಿತರಾದ 1) ವರಲಕ್ಷಿ ಕೋಂ. ಲೇಟ್ ಬಿ.ಕೃಷ್ಣ ಹಾಗು  2] ಶಿವರಾಜು ಬಿನ್ ಬೊಳ್ಳಗೌಡ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2.  ಅರಕೆರೆ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 302 ಐ.ಪಿ.ಸಿ.

     ದಿನಾಂಕ: 12-02-2013 ರಂದು ಪಿರ್ಯಾದಿ ಎನ್.ಎಸ್. ನವೀನ್. ಬಿನ್. ಶಿವಶಂಕರ್, 27 ವರ್ಷ, ನೇರಲೇಕೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ದುರಾತ್ಮರು ಆಯುದದಿಂದಲೇ ಅಥವಾ ಕತ್ತು ಹಿಸುಕಿ ಸಾಯಿಸಿಯೋ ಅಥವಾ ಮತ್ತಾವುದೋ ರೀತಿಯಲ್ಲಿ ಸಾಯಿಸಿದ್ದು ಕಂಡುಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 11-02-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-02-2013 ರಂದು ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ವಂಚನೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ  ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 379 ಐ.ಪಿ.ಸಿ.

     ದಿನಾಂಕ: 11-02-2013 ರಂದು ಪಿರ್ಯಾದಿ ಶಿವಶಂಕರ. ಬಿ. ಬಿನ್. ಲೇ ಬೋರಯ್ಯ, 50 ವರ್ಷ, ಚಿಕ್ಕಮಂಡ್ಯ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಫಿರ್ಯಾದಿಯವರ ಬಾಬ್ತು ಕೆ.ಎ-11-ಆರ್-3034ರ ಮೋಟಾರ್ ಸೈಕಲ್ ನ್ನು, ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 25,500/- ರೂ. ಆಗುತ್ತದೆ. ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 379 ಐ.ಪಿ.ಸಿ.

    ದಿನಾಂಕ: 11-02-2013 ರಂದು ಯದುರಾಜೇಗೌಡ, ಆಡಳಿತಾಧಿಕಾರಿ, ಎಸ್.ಪಿ.ಸಿ.ಎಲ್ ಲಿಮಿಟೆಡ್, ಟಿ.ಕೆ.ಹಳ್ಳಿ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಟಿ.ಕೆ.ಹಳ್ಳಿ ಗ್ರಾಮದ ಬಿಡಬ್ಯ್ಲೂಎಸ್ಎಸ್ಬಿ ಕಾವೇರಿ ಕುಡಿಯುವ ನೀರಿನ ಸರಬರಾಜಿಗೆ ಉಪಯೋಗಿಸುತ್ತಿದ್ದ ನೀರೆತ್ತುವ 1] 8 ಹೆಚ್.ಪಿ. ನೀರೆತ್ತುವ ಮೋಟಾರ್, 2] 2 ಹೆಚ್.ಪಿ.ನೀರೆತ್ತುವ ಮೋಟಾರ್, 3] 500 ಮೀಟರ್ ಕೇಬಲ್ ವೈರ್ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆವಂಚನೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 468-420 ಐ.ಪಿ.ಸಿ.

     ದಿನಾಂಕ: 11-02-2013 ರಂದು ಪಿರ್ಯಾದಿ ರಘು ಎಂ.ಪಿ. ವಿಭಾಗೀಯ ಭದ್ರತಾ ನಿರೀಕ್ಷಕ, ಕ.ರಾ.ರ.ಸಾ.ಸಂಸ್ಥೆ. ಮಂಡ್ಯ ವಿಭಾಗ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಕಾಶ್ ಎಸ್.ಎನ್ ಬಿನ್ ನರೆಸೇಗೌಡ, ಬೆಳ್ಳಾಳೆ ಗ್ರಾಮ, ಪಾಂಡವಪುರ ತಾಲ್ಲೂಕು. ರವರು ಕ.ರಾ.ರ.ಸಾ. ಸಂಸ್ಥೆಯ ಪಾಸ್ ಹೋಲುವ ರೀತಿಯಲ್ಲಿ ಒಂದು ನಕಲಿ ಪಾಸನ್ನು ಸೃಷ್ಠಿಸಿಕೊಂಡು ಸದರಿ ಪಾಸ್ನಲ್ಲಿ ವಿಭಾಗೀಯ ನಿಯಂತ್ರಾಣಧಿಕಾರಿಗಳು ಕ.ರಾ.ರ.ಸಾಂ.ಸಂಸ್ಥೆಯ ಮಂಡ್ಯ ವಿಭಾಗ ಮಂಡ್ಯ ರವರ ಮೊಹರಿನ ರೀತಿಯಲ್ಲಿ ನಕಲಿ ಮೊಹರನ್ನು ಉಯೋಗಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸದರಿ ಪಾಸನ್ನು ಬಳಸಿ ಕ.ರಾ.ರ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಿ ಸಂಸ್ಥೆಗೆ ವಂಚನೆ ಎಸಗಿ ಉಚಿತವಾಗಿ ಪ್ರಯಾಣಿಸಿರುತ್ತಾರೆ. ಸದರಿಯವರು ಈ ರೀತಿ ಮೂರು ತಿಂಗಳಿನಿಂದ ಆರ್ಥಿಕ  ನಷ್ಠ ಉಂಟು ಮಾಡಿರುತ್ತಾರೆ ಹಾಗೂ ಈ ದಿನದ ಸದರಿ ವಾಹನದ ಮಾರ್ಗ ಕಾರ್ಯಚರಣೆಗೆ  ಅಡಚಣೆ ಉಂಟಾಗಿ ಸಂಸ್ಥೆಗೆ ಸುಮಾರು 10,000/- ನಷ್ಟ ಮಾಡಿರುತ್ತಾರೆ ಆದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 11-02-2013 ರಂದು ಪಿರ್ಯಾದಿ ಗೌರಮ್ಮ ಕೋಂ ಶಾಂತಪ್ಪ, ಆಲಂಬಾಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಶಾಂತಪ್ಪ ಬಿನ್. ಬಸಪ್ಪ, 58 ವರ್ಷ, ಆಲಂಬಾಡಿ ಗ್ರಾಮರವರು  ನಂಜನಗೂಡು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲ, ನಾವು ಸಂಬಂಧಿಕರ, ಸ್ನೇಹಿತರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲ  ಪತ್ತೆಮಾಡಿಕೊಡಿ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 10-02-2013 ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 4 ಯು.ಡಿ.ಆರ್. ಪ್ರಕರಣಗಳು, 3 ಮನುಷ್ಯ ಕಾಣೆಯಾದ ಪ್ರಕರಣಗಳು, 1 ರಸ್ತೆ ಅಪಘಾತ ಪ್ರಕರಣ,  1 ಕಳವು ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ವೆಂಕಟೇಶ್, ಬಸ್ತೀಪುರ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಲಕ್ಷ್ಮಮ್ಮ ರವರ ಗಂಡ ವೆಂಕಟೇಶ್ ಬಿನ್ ದಾಸಯ್ಯ, 40 ವರ್ಷ, ಬಿಇಎಂಎಲ್ ನೌಕರ, ಗಂಗಾಮತ, ವಾಸಃ ಬಸ್ತೀಪುರ ಗ್ರಾಮ, ರವರಿಗೆ ಕಳೆದ 5 ವರ್ಷದಿಂದ ಹೊಟ್ಟೆನೋವು ಬರುತ್ತಿದ್ದು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದು,  ಯಾವುದೋ ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದವರನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆ ಮೈಸೂರಿನ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿರುತ್ತೆ. ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಕಾರಣವಿರುವುದಿಲ್ಲ. ಶವದ ಬಗ್ಗೆ  ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 (|||) ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಮಧು, 32ವರ್ಷ, ವಕ್ಕಲಿಗ, ವ್ಯವಸಾಯ, ಹೆಬ್ಬಕವಾಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಶಂಕರ ಬಿನ್ ಮುದ್ದೇಗೌಡ, ವಕ್ಕಲಿಗರು, ವ್ಯವಸಾಯ, ಹೆಬಕವಾಡಿ ಗ್ರಾಮ ಎಂಬುವವರು ಮರ ಒಂದಕ್ಕೆ ಲುಂಗಿ ಮತ್ತು ಟವಲ್ನಿಂದ ಕತ್ತಿಗೆ ಮತ್ತು ಮರಕ್ಕೆ ಕಟ್ಟಿಕೊಂಡು ಮರಣ ಹೊಂದಿರುತ್ತಾನೆ, ಸದರಿಯವರ ಸಾವಿನ ಬಗ್ಗೆ ಅನುಮಾನವಿರುತ್ತೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಯೋಗನರಸಿಂಹ ಬಿನ್. ರಾಜಣ್ಣ, ರಂಗನಾಥಸ್ವಾಮಿ ದೇವಸ್ಥಾನದ ಪಾರುಪತ್ತೆದಾರರು,  ಕೊಳದ ಗರಡಿ ಬೀದಿ ರವರು ನೀಡಿದ ದೂರಿನ ವಿವರವೇನೆಂದರೆ ಸುಮಾರು 40-45 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡಸು  ದೇವಸ್ಥಾನದ  ಹಿಂಬಾಗದ  ಹಕರ್ಿಲೆಸ್ ಮರಕ್ಕೆ  ನೇಣುಹಾಕಿಕೊಂಡು ಮೃತಪಟ್ಟಿದ್ದು,  ಬಿಳಿಯ ಶರ್ಟ, ಕಪ್ಪು ಕಲರ್ ಪ್ಯಾಂಟ್ ಧರಿಸಿರುತ್ತಾರೆ.   ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  .


4. ಕೆರೆಗೋಡು ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಡಿ.ವೈ.ಪ್ರಸನ್ನ ಬಿನ್. ಡಿ.ಎಸ್.ಯೋಗನಂದೇಗೌಡ, ಡಿ.ಎನ್.ಪುರ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಸಹೋದರ ಡಿ.ವೈ. ಸತೀಶ ಬಿನ್ ಡಿ.ಎಸ್. ಯೋಗಾನಂದೇಗೌಡರವರಿಗೆ ಈಗ್ಗೆ 02 ವರ್ಷಗಳಿಂದ ವಾಸಿಯಾಗದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದರಿಂದ ಮನನೊಂದು ತನ್ನ ಜಮೀನಿನ ಬಳಿ ಯಾವುದೋ ಕ್ರಿಮಿನಾಶಕ ವಿಷ ಔಷಧಿಯನ್ನು ಸೇವನೆ ಮಾಡಿ, ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ 08-30 ಗಂಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

 1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 14/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 10-02-2013 ರಂದು ಪಿರ್ಯಾದಿ ಜವರಯ್ಯ ಬಿನ್. ಗೆಂಡಯ್ಯ, ಕನ್ನಲಿ ಗ್ರಾಮ, ಮಂಡ್ಯ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಹೆಂಡತಿ ಅರಸಮ್ಮ ಕೋಂ. ಜವರಯ್ಯ 70 ವರ್ಷ, ಗಂಗಾಮತ ಜನಾಂಗ, ಕನ್ನಲಿ ಗ್ರಾಮ. ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದ ಸರಳ ಸಮೂಹಿಕ ಮದುವೆಗೆ ಗ್ರಾಮದವರ ಜೊತೆಯಲ್ಲಿ ಲಾರಿಯಲ್ಲಿ  ಮದುವೆ ಬಂದಿದ್ದು ವಾಪಸ್ಸ್  ಕನ್ನಲಿ ಗ್ರಾಮಕ್ಕೆ ಬರಲಿಲ್ಲ ಪಿರ್ಯಾದಿಯವರು ಜೊತೆಯಲ್ಲಿ ಬಂದಿದ್ದರವರನ್ನು ವಿಚಾರ ಮಾಡಲಾಗಿ ಸದರಿಯವರುಗಳು ಅರಸಮ್ಮಳು ನಾವು ಬರುವಾಗ ನಮ್ಮಗಳ ಜೊತೆಯಲ್ಲಿ ಬರಲಿಲ್ಲವೆಂದು ತಿಳಿಸಿರುತ್ತಾರೆ ನಾವು ಇದುವರೆಗೂ ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 10-02-2013 ರಂದು ಪಿರ್ಯಾದಿ ಹೊನ್ನೇಗೌಡ ಬಿನ್ ರಾಜಪ್ಪ, 40ವರ್ಷ, ವಕ್ಕಲಿಗರು, ಮೊಬೈಲ್ಅಂಗಡಿಯಲ್ಲಿ ವ್ಯಾಪಾರ, ಕೆಂಪೇಗೌಡ ವೃತ್ತ, ಬೆಳ್ಳೂರು ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕಃ 01-02-2013ನೇ ತಾರೀಖಿನಂದು ಡಿ.ಕೋಡಿಹಳ್ಳಿಯಿಂದ ಕಿರಣ್ ಬಿನ್ ತಮ್ಮಣ್ಣ, 14ವರ್ಷ, ವಕ್ಕಲಿಗರು, 8ನೇ ತರಗತಿಯ ವಿದ್ಯಾಥರ್ಿ, ವಾಸ ಡಿ. ಕೋಡಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋಬಳಿ ಎಂಬ ಹುಡುಗ ಬೆಳ್ಳೂರಿನಲ್ಲಿರುವ ನಮ್ಮ ಮನೆಗೆ ಬಂದಿದ್ದು, ಎರಡು ಮೂರು ದಿನಗಳು ಇಲ್ಲಿಯೇ ಇದ್ದು, ದಿನಾಂಕಃ 04-02-2013 ನೇ ತಾರೀಖಿನಂದು ಸೋಮವಾರ ಬೆಳಿಗ್ಗೆ ಮನೆಯಿಂದ ಡಿ.ಕೋಡಿಹಳ್ಳಿಯಲ್ಲಿರುವ ಅವರ ತಾಯಿಯ ಮನೆಗೆ ಹೋಗುತ್ತೇನೆಂದು ತಿಳಿಸಿ ಹೋದವನು ಅಲ್ಲಿಗೂ ಹೋಗದೆ ಶಾಲೆಗೂ ಸಹ ಹೋಗದೆ ಇರುವುದು. ನಮಗೆ ತಿಳಿದು ಬಂದಿರುತ್ತದೆ. ಸದರಿ ಕಾಣೆಯಾದ ಬಾಲಕನನ್ನು [ಕಿರಣ] ಪತ್ತೆಮಾಡಿ ಕೊಡಬೇಕೆಂದು ದೂರು ನೀಡಿರುತ್ತಾರೆ.  ನಮ್ಮ ಸಂಬಂದಿಕರ ಎಲ್ಲಾ ಊರುಗಳಲ್ಲಿ ಹುಡುಕಿ ಈ ದಿನ ತಡವಾಗಿ ದೂರು ನೀಡಿರು- ತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. ಹೆಂಗಸು  ಕಾಣೆಯಾಗಿದ್ದಾಳೆ.

ದಿನಾಂಕ: 10-02-2013 ರಂದು ಪಿರ್ಯಾದಿ ಕೃಷ್ಣಾಚಾರಿ ಬಿನ್. ಲೇ|| ಸಿದ್ದಪ್ಪಾಜಿ, 39 ವರ್ಷ, ವಿಶ್ವಕರ್ಮ ಜನಾಂಗ,  ವಾಸ ಕಬ್ಬನಹಳ್ಳಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೋಕ್ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಹೆಂಡತಿ ಸುಶೀಲ ಕೋಂ. ಕೃಷ್ಣಚಾರಿ, ಮಂಡ್ಯ ಸುರಭಿ ನರ್ಸಿಂಗ್  ಹೋಂ. ಮಂಡ್ಯ, ಕಬ್ಬನಹಳ್ಳಿ ಗ್ರಾಮ ರವರು ದಿನಾಂಕ:  07-02-2013 ರಂದು ಸಂಜೆ 07-30 ಗಂಟೆಯಲ್ಲಿ, ಅಶೋಕ ನಗರದ ಸುರಭಿ ನರ್ಸಿಂಗ್ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ವೈದ್ಯರಿಗೆ ಹೇಳಿ ಮನೆಗೆ ಹೋಗುತ್ತೇನೆ ಎಂದು ಹೇಳಿ  ಹೋದವಳು ಮನೆಗೆ ಬಂದಿರುವುದಿಲ್ಲಾ ಪಿರ್ಯಾದಿಯವರು ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


ರಸ್ತೆ ಅಪಘಾತ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 62/13 279-337-304(ಎ) ಐ.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ವೀರಣ್ಣ ಕೆ.ಎ-42-ಎಫ್-205, ಕೆ.ಎಸ್.ಆರ್.ಟಿ.ಸಿ. ಚಾಲಕ, ಬಿಲ್ಲೆ. ಸಂಖ್ಯೆ 583, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-28-ಎಂ.ಬಿ-8888 ಟಾಟಾ ಸುಮೊ ಚಾಲಕ , ಮಹೆೇಶ, ಬೆಂಗಳೂರು ರವರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಸ್ತೆಯಲ್ಲಿ ಕೆಎ-28-ಎಂ.ಬಿ.-8888 ರ ಚಾಲಕನು ಟಾಟಾ ಸುಮೋದಲ್ಲಿ ಮೈಸೂರು ಕಡೆಗೆ ಹೋಗುತ್ತಿದ್ದು, ಟಿ.ಎಂ.ಹೊಸೂರು ಗೇಟ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿವ್ಶೆಡರ್ ಗೆ,   ಡಿಕ್ಕಿ ಮಾಡಿಸಿದ ಪರಿಣಾಮ ಟಾಟಾ ಸುಮೋವು ಪಲ್ಟಿ ಹೊಡೆದು ಮೈಸೂರು - ಬೆಂಗಳೂರು ರಸ್ತೆಯಲ್ಲಿ ಸ್ವಲ್ಪ ದೂರು ಉಜ್ಜಿಕೊಂಡು ಹೋಗಿ ಮಂಡ್ಯದ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನ ಬಲಬದಿಯ    ಹಿಂಭಾಗಕ್ಕೆ ಡಿಕ್ಕಿ ಹೊಡೆದು  ಟಾಟಾ ಸುಮೋದಲ್ಲಿದ್ದ 3 ಜನ ಪುರಷರು ಸ್ಥಳದಲ್ಲಿಯೇ ಮೃತಪಟ್ಟಿದ್ದು  ಹಾಗೂ ಟಾಟಾ ಸುಮೋದಲ್ಲಿದ್ದ 06 ಜನರಿಗೆ ಪೆಟ್ಟಾಗಿರುತ್ತದೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 379 ಐ.ಪಿ.ಸಿ.

ದಿನಾಂಕ: 10-02-2013 ರಂದು ಪಿರ್ಯಾದಿ ಡಾ. ಪ್ರವೀಣ್ ಕುಮಾರ್ ಬಿನ್. ಲೇಟ್. ಕೆ.ಬೋರೇಗೌಡ, 40 ವರ್ಷ, ಗೋಪಾಲಪುರ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ದಿನಾಂಕ-09-02-13ರಂದು ರಾತ್ರಿ ಯಾರೋ ಕಳ್ಳರು ಗೋಪಾಲಪುರ ಗ್ರಾಮದ ಸರ್ವೆ. ನಂ. 36/7 ರಲ್ಲಿ ಬೆಳೆದಿದ್ದ ಸುಮಾರು 30 ತೇಗದ ಮರಗಳ ಪೈಕಿ 5 ತೇಗದ ಮರಗಳನ್ನು ಕಡಿದುಕೊಂಡು ಹೋಗಿರುತ್ತಾರೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.