Moving text

Mandya District Police

press Note 09-07-2012

ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ. ದಿಃ09-07-2012 
ಪತ್ರಿಕಾ ಪ್ರಕಟಣೆ

ಇಂಡಿಕಾ ಕಾರಿನಲ್ಲಿ ಬಂದು ಖಾರದಪುಡಿ ಹಾಕಿ ಸರಗಳ್ಳತನ ಮಾಡುತ್ತಿದ್ದ ದರೋಡೆ ಕೋರರ ಬಂಧನ. 
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಮೊ. ನಂ 120/2012 ಕಲಂ: 399-402 ಐಪಿಸಿ.

ಹಳ್ಳಿಯಿಂದ ಬೆಂಗಳೂರಿಗೆ ವಲಸೆ ಹೋಗಿ ಆಟೋರಿಕ್ಷಾ ಹಾಗೂ ಕಾರು ಚಾಲನೆ ಮಾಡಿಕೊಂಡಿದ್ದ ಐವರು ವ್ಯಕ್ತಿಗಳು ಸುಲಭವಾಗಿ ಹಣ ಸಂಪಾದನೆ ಮಾಡಲು ತಾವು ಚಾಲನೆ ಮಾಡುತ್ತಿದ್ದ ಕಾರನ್ನೆ ಬಳಸಿ ಒಂಟಿಯಾಗಿ ಹೋಗುವ ಮಹಿಳೆಯರಿಗೆ ಮಚ್ಚು ತೋರಿಸಿ ಹೆದರಿಸಿ ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಸರಗಳ್ಳತನ ಮಾಡುತ್ತಿದ್ದ ದರೋಡೆ ಕೋರರ ತಂಡವನ್ನು ನಾಗಮಂಗಲ ಪೊಲೀಸರು ಪತ್ತೆಮಾಡಿದ್ದಾರೆ. 

ನಾಗಮಂಗಲ ತಾಲ್ಲೂಕು, ಹೊಣಕೆರೆ ಹೋಬಳಿ, ಮಾರನಾಯಕನಹಳ್ಳಿ ಗ್ರಾಮದ ಮಂಜುನಾಥ, ಕೆ.ಆರ್.ಪೇಟೆ ನಾರಾಯಣಪುರ ವಾಸಿ ಲೋಕೇಶ, ಮಾಯಸಂದ್ರ ಹೋಬಳಿ ಹೊನಕೆರೆ ಗ್ರಾಮದ ವಾಸಿ ನವೀನ ಇವರುಗಳು ಬೆಂಗಳೂರಿನಲ್ಲಿ ಆಟೋರಿಕ್ಷಾ ಮತ್ತು ಬಾಡಿಗೆ ಕಾರು ಚಾಲನೆಮಾಡಿಕೊಂಡಿದ್ದು ನವೀನ ಮಾಚರ್್ ತಿಂಗಳಲ್ಲಿ ಆಡಂಬರದ ಜೀವನ ಶೈಲಿಯಿಂದ ಸಾಲ ಮಾಡಿಕೊಂಡಿದ್ದು ಇವರುಗಳು ಬೆಂಗಳೂರಿನಲ್ಲಿ ನವೀನನು ಓಡಿಸುತ್ತಿದ್ದ ಇಂಡಿಕಾ ಕಾರಿನಲ್ಲಿ ತನ್ನ ಸ್ನೇಹಿತರುಗಳಾದ ಕೆ.ರ್.ಎಸ್.ನ ವಾಸಿ ರಾಜು ಮತ್ತು ಬೆಂಗಳೂರು ವಾಸಿ ಜಾಯ್ ಇವರೊಂದಿಗೆ ದರೋಡೆಮಾಡಿ ಹಣ ಮಾಡುವ ಉದ್ದೇಶದಿಂದ ಕಾರಿನಲ್ಲಿ ಲಾಂಗ್ ಮತ್ತು ಖಾರದ ಪುಡಿಯನ್ನು ಇಟ್ಟುಕೊಂಡು ದಿನಾಂಕಃ30-05-2012 ರಂದು ರಾತ್ರಿ ನಾಗಮಂಗಲ ತಾಲ್ಲೂಕು ಬ್ರಹ್ಮದೇವರಹಳ್ಳಿಯ ಬಳಿ ಮೊಟಾರ್ ಬೈಕ್ನಲ್ಲಿ ಹೋಗುತ್ತಿದ್ದ ದಂಪತಿಗಳನ್ನು ವಿಳಾಸ ಕೇಳುವ ನೆಪದಲ್ಲಿ ಅಡ್ಡಹಾಕಿ ಮಚ್ಚು ತೋರಿಸಿ ಹೆದರಿಸಿ ಅವರಿಂದ ಒಂದು ಜೊತೆ ಓಲೆ, ಒಂದು ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ನಂತರ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ದಿನಾಂಕಃ02-06-2012 ರಂದು ಕೆ.ಆರ್.ಪೇಟೆ ತಾಲ್ಲೂಕು, ಬೂಕನಕೆರೆಯ ಬಳಿ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಒಂಟಿ ಹೆಂಗಸಿಗೆ ವಿಳಾಸ ಕೇಳುವ ನೆಪದಲ್ಲಿ ಅಡ್ಡಹಾಕಿ ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಒಂದು ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿದ್ದು, ಇದಾದ ನಂತರ ಸುಲಭವಾಗಿ ಕುರಿಗಳನ್ನು ಕಳವುಮಾಡಬಹುದೆಂದು ಇಂಡಿಕಾ ಕಾರು ರಿಪೇರಿಗೆ ಬಂದಿದ್ದ ಕಾರಣ ಬೇರೊಂದು ಮಾರುತಿ ವ್ಯಾನ್ ಬಳಸಿ ಪುನಃ ದಿನಾಂಕ ಃ27/28-06-2012 ರಂದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾಗ ನಾಗಮಂಗಲ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ ಬಂಧಿತರಿಂದ ಒಂದು ಇಂಡಿಕಾ ಕಾರು, ಒಂದು ಮಾರುತಿ ವ್ಯಾನ್, ಓಲೆ, ಮೊಬೈಲ್ ಹಾಗೂ ಒಂದು ಮಾಂಗಲ್ಯಸರವನ್ನು ವಶಪಡಿಸಿಕೊಂಡಿರುತ್ತೆ. ಇವುಗಳ ಅಂದಾಜು ಮೌಲ್ಯ ಸುಮಾರು 1.22.800 ರೂ ಆಗಿರುತ್ತೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. 

ಮೇಲ್ಕಂಡ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮವಹಿಸಿದ ನಾಗಮಂಗಲದ ವೃತ್ತನಿರೀಕ್ಷಕರಾದ ಶ್ರೀ ಟಿ.ಡಿ.ರಾಜು, ನಾಗಮಂಗಲ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಹೆಚ್.ಎನ್.ವಿನಯ್ ಹಾಗೂ ಪ್ರೋ ಪಿ.ಎಸ್.ಐ ನಾರಾಯಣ ಹಾಗೂ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಆಧೀಕ್ಷಕರು ಪತ್ತೆ ತಂಡವನ್ನು ಪ್ರಶಂಸಿದ್ದಾರೆ.