Moving text

Mandya District Police

DCR Of Mandya Dist As on 23-02-2012

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 16 ಪ್ರಕರಣಗಳು ವರದಿಯಾಗಿ ಅದರಲ್ಲಿ 2 ರಸ್ತೆ ಅಪಘಾತ ಪ್ರಕರಣ. 2 ಕಳ್ಳತನ ಪ್ರಕರಣ. 3 ಮನುಷ್ಯ ಕಾಣೆಯಾದ ಪ್ರಕರಣ. 1 ರಾಬರಿ ಪ್ರಕರಣ ಮತ್ತು ಇತರೆ 8 ಪ್ರಕರಣಗಳು ವರದಿಯಾಗಿರುತ್ತೆ

ಕಳ್ಳತನ ಪ್ರಕರಣ

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

1] ಮೊ.ಸಂ 38/12 ಕಲಂ 457-380 ಐಪಿಸಿ ದಿನಾಂಕಃ 21-02-12ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆ, ಸುನುಗನಹಳ್ಳಿಯಲ್ಲಿ ಇಟ್ಟಿದ್ದ ಅನ್ನದಾಸೋಹದ ಆಹಾರ ಪದಾರ್ಥಗಳು, ಮತ್ತು ಪಾತ್ರೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ

2] ಮೊ.ಸಂ 38/12 ಕಲಂ 379 ಐಪಿಸಿ ಪಿರ್ಯಾದಿ ಹೆಚ್.ಕೆ.ಸಿದ್ದಯ್ಯ ರವರು ಅವರ ಬಾಬ್ತು ಕೆಎ-15 ಜೆ 302 ನಂಬರಿನ ಹೀರೊಹೋಂಡ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿಯ ಎದುರುಗಡೆ ಇರುವ ಪಾರ್ಕ್ ನ ಮುಂದೆ ಬೀಗ ಹಾಕಿ ನಿಲ್ಲಿಸಿ ಪಾಕರ್್ನ ಒಳಗಡೆ ಹೋಗಿ ವಿಶ್ರಾಂತಿ ಪಡೆದುಕೊಂಡು ವಾಪಸ್ ಸಂಜೆ 6-45 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆವಿಗೂ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ

ಮನುಷ್ಯ ಕಾಣೆಯಾಗಿದ್ದಾನೆ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ

1] ಮೊ.ಸಂ 81/12 ಕಲಂ ಹುಡುಗ ಕಾಣೆಯಾಗಿದ್ದಾನೆ ದಿನಾಂಕ 22/02/11 ರಂದು ಪಿರ್ಯಾದಿ ಶಿವಣ್ಣ ರವರ ಮಗ ರಘುವೀರ್ ಬಿನ್ ಶಿವಣ್ಣ 13 ವರ್ಷ ಮಂಡ್ಯ ಸಿಟಿ ಗೀತಾ ಫ್ರಾಡಶಾಲೆಯಲ್ಲಿ 8 ನೇ ತರಗತಿಯಲ್ಲಿ ಒದುತ್ತಿದ್ದು ದಿಃ-17-02-12 ರಂದು ಬೆಳಿಗ್ಗೆ 08-00 ಗಂಟೆಗೆ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಸಂಜೆಯಾದರೂ ಮನೆಗೆ ಬರಲಿಲ್ಲ ನಂತರ ನಮ್ಮ ಸಂಬಂದಿಕ ಮನೆ, ಅವನ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ

ಕೆ.ಆರ್ ಸಾಗರ ಪೊಲೀಸ್ ಠಾಣೆ

2] ಮೊ.ಸಂ 28/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 22/02/12 ರಂದು ಕಾಣೆಯಾದ ಮನುಷ್ಯ ಶಂಕರನು ಬತ್ತವನ್ನು ಕಟ್ಟಾವು ಮಾಡಲು ಹಣವನ್ನು ತೆಗೆದುಕೊಂಡು ಮನೆಯಿಂದ ಹೊರಗೇ ಹೋದವನು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ

ಶಿವಳ್ಳಿ ಪೊಲೀಸ್ ಠಾಣೆ

3] ಮೊ.ಸಂ 021/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 22/02/12 ರಂದು ಕಾಣೆಯಾದ ಮನುಷ್ಯ ದಾಳಯ್ಯ ಬಿನ್ ಲೇಟ್ ದಾಳಿಗೌಡ 60 ವರ್ಷ ತಂದೆಯವರು ದಿನಾಂಕ:17-02-2012 ರಂದು ಇದುವೆರೆಗೂ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಹಿಂತಿರುಗಿ ಬಂದಿರುವುದಿಲ್ಲ ಇದುವರೆಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ.

ರಾಬರಿ ಪ್ರಕರಣ

ಬೆಳ್ಳೂರು ಪೊಲೀಸ್ ಠಾಣೆ

1] ಮೊ.ಸಂ 27/12 ಕಲಂ 392 ಐಪಿಸಿ ದಿನಾಂಕ 22-02-11 ರಂದು ಪಿರ್ಯಾದಿ ನವೀನ್ ಕುಮಾರ್ ಮತ್ತು ಅವರ ಮನೆಯವರು ಪ್ರವಾಸದಿಂದ ಬೆಂಗಳೂರಿಗೆ ಕೆಎ-01-ಬಿ-1490 ಕ್ವಾಲೀಸ್ ಕಾರಿನಲ್ಲಿ ವಾಪಸ್ಸು ಬೆಳ್ಳೂರು ಮಾರ್ಗವಾಗಿ ಹೋಗುತ್ತಿದ್ದಾಗ ತಿಟ್ಟನಹೊಸಹಳ್ಳಿ - ಎ ನಾಗತಿಹಳ್ಳಿ ಮಧ್ಯ ಯಾರೋ ಅಪರಿಚಿತರು 4 ಜನ ಮಾರುತಿ ಅಮ್ನಿ ಕೆಎ-02-ಎಂ-1152 ಮೇಲ್ಕಂಡ ಸ್ಥಳದಲ್ಲಿ ಅಡ್ಡಗಟ್ಟಿ ಮಾಕಾಸ್ತ್ರಗಳನ್ನು ತೋರಿಸಿ ವಾಹನದಲ್ಲಿ ಪಿರ್ಯಾದಿ ಮತ್ತು ಅವರ ಮನೆಯವರನ್ನು ಹೆದರಿಸಿ ಅವರ ಬಳಿ 6 ರಿಂದ 7 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ

Press Note

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ
ದಿನಾಂಕಃ 18-02-2012
ಪತ್ರಿಕಾ ಪ್ರಕಟಣೆ

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ 4 ಮಂದಿ ಆರೋಪಿಗಳ ಬಂಧನ ಇವರುಗಳಿಂದ 1ಲಕ್ಷ ರೂ ಮೌಲ್ಯದ ಕಳುವು ಮಾಡಿದ್ದ 1140 ಕೆ.ಜಿ.ಯಷ್ಟು ಕಬ್ಬಿಣದ ಆಂಗ್ಲರ್ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಟಾಟಾ 407 ನಂಬರ್ ಕೆ.ಎ-12, 2488 ವಾಹನ ವಶ.

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದವರು ಬಾತ್ಮೀದಾರರ ಮಾಹಿತಿ ಮೇರೆಗೆ ದಿನಾಂಕಃ 17-02-2012 ರಂದು ಬೆಳಗಿನ ಜಾವ 0500 ಗಂಟೆಯಲ್ಲಿ ಮಂಡ್ಯ ನಗರದ ಸಿವಿಲ್ ಬಸ್ ನಿಲ್ದಾಣದ ಬಳಿ ಇರುವ ಸಾಯಿ ಮಂದಿರದ ರಸ್ತೆಯ ರಾಜರಾಜೇಶ್ವರಿ ವೇ ಬ್ರಿಡ್ಜ್ ಪಕ್ಕದಲ್ಲಿ ಟಾಟಾ 407 ವಾಹನ ಸಂಖ್ಯೆ ಕೆಎ-12, 2488 ರಲ್ಲಿ ಅನುಮಾನಸ್ಪದವಾಗಿ ಇದ್ದ 4 ಜನ ಆಸಾಮಿಗಳನ್ನು ಅದರಲ್ಲಿದ್ದ 1140 ಕೆ.ಜಿ ತೂಕವಿದ್ದ 13 ಕಬ್ಬಿಣದ ಆಂಗ್ಲರ್ಗಳ ಸಮೇತ ಅವರುಗಳನ್ನು ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿಲಾಗಿ ಸದರಿ ಆಸಾಮಿಗಳು ರಾಮನಗರ-ಕನಕಪುರ ರಸ್ತೆಯಲ್ಲಿ ಕೈಲಂಚ ಗ್ರಾಮ ಹೆಂಚಿನ ಫ್ಯಾಕ್ಟರಿ ಬಳಿ ಇದ್ದ ಸುಮಾರು 25,000/-ರೂ ಮೌಲ್ಯದ 13 ಕಬ್ಬಿಣದ ಆಂಗ್ಲರ್ಗಳನ್ನು ಕಳುವು ಮಾಡಿಕೊಂಡು ಬಂದು ಮಂಡ್ಯದಲ್ಲಿ ಮಾರಾಟಮಾಡಲು ಹೊಂಚುಹಾಕುತ್ತಿದ್ದಾಗಿ ತಿಳಿಸಿದ್ದು, ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಮೆಲ್ಕಂಡ ಕಬ್ಬಿಣದ ಆಂಗ್ಲರ್ಗಳು ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿಗಳ ಹೆಸರು-ವಿಳಾಸ :

1] ಅಜ್ಜುಂ. ಬಿನ್, ಮಹಮದ್ ಯೂಸಫ್, 26 ವಸ ವಾಸ, ಹೊಂಗನೂರು, ರಾಮನಗರ ಟೌನ್.
2] ಮುರುಗ, ಬಿನ್, ರಾಜ,23 ವರ್ಷ, ವಾಸ, ಆಸ್ಪತ್ರೆ ಶೆಡ್, ಮಂಡ್ಯ ಸಿಟಿ.
3] ಸಲೀಂ ಪಾಷ, ಬಿನ್ ತಾಜ್ ಪಾಷಾ, 23ವರ್ಷ, ವಾಸ, ಟಿಪ್ಪು ನಗರ, ರಾಮನಗರ ಟೌನ್
4] ಖುರಂ ಪಾಷಾ, ಬಿನ್ ಮಹಮದ್ ಗೌಸ್, 35ವರ್ಷ, ವಾಸ-ಲೇಬರ್ ಕಾಲೋನಿ, ಮಂಡ್ಯ ಟೌನ್

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಪೂರ್ವ ಠಾಣೆಯ ಪಿಎಸ್ಐ ಎಂ. ಮಂಜುನಾಥ್ ಮತ್ತು ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳನ್ನು ಪೊಲೀಸ್ ಅದೀಕ್ಷಕರಾದ ಶ್ರೀ. ಕೌಶಲೇಂದ್ರಕುಮಾರ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.