Moving text

Mandya District Police

Press Note 20-08-2017

                                                                                                  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
                                                                                               ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 20-08-2017


                                                                        -:ಪತ್ರಿಕಾ ಪ್ರಕಟಣೆ:-


ದಿಃ19/08/2017 ರಂದು ಸಂಜೆ ಶ್ರೀರಂಗಪಟ್ಟಣ ತಾಲ್ಲೂಕು ನಗುವನಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಪಕ್ಕದ ಪಾಲಹಳ್ಳಿಯ ರಜತ ಎಂಬುವರು  ‘ಮಾರ್ಗಡಾಬ’ ಹೋಟೆಲು ಮತ್ತು ಇದಕ್ಕೆ ಹೊಂದಿಕೊಂಡಿರುವ ರೂಮುಗಳನ್ನು ಇಟ್ಟುಕೊಂಡು ಅನೈತಿಕ ವ್ಯವಹರಣೆ ನಡೆಸುತಿದ್ದು, ಇವರ ಡಾಬಗೆ ಹೊಂದಿಕೊಂಡಿರುವ ರೂಮುಗಳಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೇತ ದಾಳಿ ಮಾಡಿ ಪಂಚರ ಸಮಕ್ಷಮ ಪರಿಶೀಲಿಸಲು ಹೋದಾಗ, ಡಾಬಾ ಉಸ್ತುವಾರಿ ನೋಡಿಕೊಳ್ಳುತಿದ್ದವರು ಡಾಬಾ ಹೋಟೆಲಿಗೆ ಹೊಂದಿಕೊಂಡಿರುವ ರೂಮುಗಳ ಬಾಗಿಲುಗಳನ್ನು ಹಾಕಿಕೊಂಡಿದ್ದು, ನಂತರ ವಿಚಾರ ಮಾಡಿ ಬಾಗಿಲು ತೆರೆಸಿ ನೋಡಿದಾಗ ಡಾಬ ನೋಡಿಕೊಳ್ಳುವವರಲ್ಲದೆ ಒಟ್ಟು 19 ಜನ ಪುರಷ ವ್ಯಕ್ತಿಗಳನ್ನು ದಸ್ತಗಿರಿ ಮಾಡಲಾಗಿದೆ. ಇವರು ವೇಶ್ಯವಾಟಿಕೆಯಲ್ಲಿ ತೊಡಗಿದ್ದರೆಂದು ಕಂಡು ಬಂದಿದ್ದು, ಪರಿಶೀಲಿಸಿದಾಗ ರೂಮುಗಳಲ್ಲಿ ಯಾವ ಮಹಿಳೆಯರು ಇರಲಿಲ್ಲದ ಕಾರಣ ಅನುಮಾನ ಬಂದು ಪರಿಶೀಲಿಸಿದ ಕಾಲದಲ್ಲಿ, ರೂಮಿನ ಗೋಡೆಗೆ ಅಂಟಿಸಿದಂತೆ ಇದ್ದ ಗೋಡೆಯ ಟೈಲ್ಸ್‍ಗಳನ್ನು ತೆರವುಗೊಳಿಸಿ ನೋಡಿದಾಗ ಸಂದಿಯೊಳಗೆ ಕೊಠಡಿಯೊಂದು ಇದ್ದು ಅದರೊಳಗೆ 7 ಜನ ಮಹಿಳೆಯರು ಬಚ್ಚಿಟ್ಟುಕೊಂಡಿದ್ದುದು ತಿಳಿದು ಬಂದಿರುತ್ತದೆ. ವೇಶ್ಯವಾಟಿಕೆ ನಡೆಸುತಿದ್ದ ವ್ಯಕ್ತಿಗಳು ಪೊಲೀಸರು ದಾಳಿ ಮಾಡಿದ ಕಾಲದಲ್ಲಿ ಮಹಿಳೆಯರನ್ನು ಬಚ್ಚಿಟ್ಟುಕೊಳ್ಳಲು ಗುಹೆಯಂತಹ ಕೊಠಡಿಯನ್ನು ಪೂರ್ವಯೋಜಿತವಾಗಿ ನಿರ್ಮಿಸಿಕೊಂಡು, ದಾಳಿಮಾಡಿದವರಿಗೆ ಗೋಡೆ ಎಂದು ತಿಳಿದುಕೊಳ್ಳಲು ಮರೆಮಾಚಿರುವುದು ಕಂಡು ಬಂದಿರುತ್ತದೆ. ದಾಳಿ ಕಾಲದಲ್ಲಿ ಒಟ್ಟು 7 ಜನ ಮಹಿಳೆಯರನ್ನು ರಕ್ಷಣೆ ಮಾಡಿದ್ದು ನಿಯಮಾನುಸಾರ ಅವರುಗಳನ್ನು ವಾರಸುದಾರರು ಬಂದು ಕರೆದುಕೊಂಡು ಹೋಗುವವರೆಗೆ ಮಹಿಳಾ ಶಾಂತ್ವಾನ ಕೇಂದ್ರಕ್ಕೆ ಬಿಡಲಾಗುತ್ತಿದೆ. 

‘ಮಾರ್ಗ ಡಾಬ’ ದ ರೂಮುಗಳಿಗೆ ಸಂತೋಷ ಎಂ. @ ಸಂದೇಶ ಬನ್ನಿಮಂಟಪ ಮೈಸೂರು, ನಂದಕುಮಾರ್ ಹೆಚ್.ಡಿ. @ ನಂದನ್ ಹುಚ್ಚೇಗೌಡನದೊಡ್ಡಿ ಗ್ರಾಮ ಮಳವಳ್ಳಿ ತಾಲ್ಲೂಕು, ನಾಗೇಶ ನಾಗಮಂಗಲ ಟೌನ್ ಮತ್ತು ಕಿರಣ ಎಂಬುವರು ಮಹಿಳೆಯರನ್ನು ವೇಶ್ಯವಾಟಿಕೆ ಉದ್ದೇಶಕ್ಕಾಗಿ ಕರೆತರುತಿದ್ದರೆಂದು ತಿಳಿದು ಬಂದಿರುತ್ತದೆ. ಜಗದೀಶ ಉತ್ತರಕನ್ನಡ ಜಿಲೆ,್ಲ ದರ್ಶನ ಕೆ.ಎನ್. ಕದಬಳ್ಳಿ ಗ್ರಾಮ ನಾಗಮಂಗಲ ತಾಲ್ಲೂಕು. ಭರತೇಶ ಹೆಚ್.ಸಿ. ಹೊನ್ನಶೆಟ್ಟಹಳ್ಳಿ ಗ್ರಾಮ ಚನ್ನರಾಯಪಟ್ಟಣ ತಾಲ್ಲೂಕು,  ಮಣಿ @ ತಿಪ್ಪೇಶ ಹೊಸಹಳ್ಳಿ ಗ್ರಾಮ ದಾವಣಗೆರೆ ತಾಲ್ಲೂಕು, ಹುಲಿಗಪ್ಪ ಮಲ್ಲಪ್ಪ ನರಗುಂದ ಸುರುಕೋಡು ಗ್ರಾಮ ನರಗುಂದ ತಾಲ್ಲೂಕು ರವರುಗಳು ಡಾಬ ರೂಮುಗಳ ಉಸ್ತುವಾರಿ ನೋಡಿಕೊಂಡು ಗುಹೆಯಂತಹ ಕೊಠಡಿಯಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯವಾಟಿಕೆ ನಡೆಸಿ ಹಣ ಸಂಪಾದಿಸಿ ಮಾಲೀಕರು ಸೇರಿದಂತೆ ಎಲ್ಲರೂ ಹಂಚಿಕೊಂಡು ಜೀವನ ನಡುಸುತಿದ್ದರೆಂದು ಕಂಡು ಬಂದಿದೆ. ಈ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗಿರಾಕಿಗಳಾದ ಸುರೇಶ, ಮಹಮದ್ ಬಸೀರ್, ಜೆಸಿಲ್ ಟಿ.ಕೆ ಷಹಾಹನ್, ಹರೀಶ ಕುಮಾರ್ ಕೇರಳ ರಾಜ್ಯರವರಾಗಿದ್ದು ಮಿತೀಶ್ ರಂಜನ್ ಜಾರ್ಖಂಡ್ ರಾಜ್ಯ, ನಾಗರಾಜು ತುಮಕೂರು ಜಿಲ್ಲೆ, ಮೆಹಬೂಬ್ ಪಾಷ, ರಾಯಿಲ್ ಖಾನ್, ಸೈಯದ್ ಮುಜಾಹಿಲ್, ಖಾದಿರ್ ಖಾನ್ ಮೈಸೂರು ನಗರದವರಾಗಿರುತ್ತಾರೆ.

ಪಾಲಹಳ್ಳಿ ಗ್ರಾಮದ ಪಿ.ವಿ.ಶೇಷಪ್ಪ ರವರು ಇದಕ್ಕಾಗಿ ‘ಟೂರಿಸ್ಟ್ ಹೋಂ’ ಎಂಬ ಹೆಸರಿನಲ್ಲಿ ತಮ್ಮ ಜಮೀನಿನಲ್ಲಿ ರೂಮುಗಳನ್ನು ನಿರ್ಮಿಸಿ, ಮೈಸೂರು ಸಿಟಿ ಟೀಚರ್ಸ್ ಬಡಾವಣೆಯ ಸಿ.ಎಸ್.ಮನು ಎಂಬುವರು ಬಾಡಿಗೆ ಕರಾರು ಮಾಡಿಕೊಂಡು ಇವರೆಲ್ಲರೂ ತಿಳಿದು ತಿಳಿದೇ ಕಾನೂನು ಬಾಹಿರವಾಗಿ ವೇಶ್ಯವಾಟಿಕೆ ಚಟುವಟಿಗೆ ನಡೆಸಿ ಸಂಪಾದಿಸಿದ ಹಣವನ್ನು ಹಂಚಿಕೊಂಡು ವ್ಯವಹಾರ ನಡೆಸುತಿದ್ದರೆಂದು ಕಂಡು ಬಂದಿರುತ್ತದೆ ಹಾಗೂ ತಲೆ ಮರೆಸಿಕೊಂಡಿರುತ್ತಾನೆ.

ದಾಳಿ ಮಾಡಿದ ಕಾಲದಲ್ಲಿ ವೇಶ್ಯವಾಟಿಕೆ ಉದ್ದೇಶಕ್ಕಾಗಿ ಇಟ್ಟುಕೊಂಡಿದ್ದ ಒಟ್ಟು ನಗದು 50345/- ರೂ ನಗದು, 17 ಮೊಬೈಲ್ ಪೋನುಗಳು, 1 ಚವರ್ಲೆಟ್ ತವೆರಾ ಕಾರು, 4 ಮೊಟಾರು ಬೈಕುಗಳು, ಸ್ಥಳದಲ್ಲಿ ದೊರೆತ ಹಲವಾರು ಕಾಂಡೂಮ್ಸ್ ಪ್ಯಾಕೆಟುಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ. ಮುಖ್ಯ ಆರೋಪಿ ಪಾಲಹಳ್ಳಿ ರಜತ ಮತ್ತು ಕಿರಣ್ ತಲೆಮರೆಸಿಕೊಂಡಿರುತ್ತಾರೆ.

ಸದರಿ ದಾಳಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವರಾದ ಶ್ರೀಮತಿ ರಾಧಿಕ, ಐ.ಪಿ.ಎಸ್., ಅಡಿಷನಲ್ ಎಸ್.ಪಿ., ಶ್ರೀಮತಿ ಲಾವಣ್ಯ.ಬಿ.ಎನ್.,ಕೆ.ಎಸ್.ಪಿ.ಎಸ್., ರವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಆರಕ್ಷಕ ಉಪಾಧೀಕ್ಷಕರಾದ ಶ್ರೀ ವಿಶ್ವನಾಥ್ ರವರು ಪಿಎಸ್‍ಐ ಶ್ರೀರಂಗಪಟ್ಟಣ ಟೌನ್, ಗ್ರಾಮಾಂತರ, ಕೆ.ಆರ್.ಸಾಗರ ಮತ್ತು ವಿಶೇಷವಾಗಿ ಮಹಿಳಾ ಪಿಎಸ್‍ಐ ಅರಕೆರೆ ಠಾಣೆ ಹಾಗೂ ಸಿಬ್ಬಂದಿಗಳು ಬಾಗಿಯಾಗಿ ಮರೆಮಾಚಲು ಗುಹೆಯಂತಹ ಕೊಠಡಿಯಲ್ಲಿದ್ದ ಮಹಿಳೆಯರನ್ನು ಪತ್ತೆ ಮಾಡಿ ರಕ್ಷಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.  

Halaguru PS HBT Case Detected  - Press Note

Press Note - Srirangapatana Rural PS Murder Case Detected

                                                                                                       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
                                                    ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 09-08-2017

ಪತ್ರಿಕಾ ಪ್ರಕಟಣೆ 

                      ದಿಃ03/08/2017 ರಂದು ಮುಂಜಾನೆ ಪಾಂಡವಪುರ ತಾಲ್ಲೂಕು ಕೆ.ಬೆಟ್ಟಹಳ್ಳಿ ಬಳಿ ಚಾಗಶೆಟ್ಟಹಳ್ಳಿ ಗ್ರಾಮದ ಕಡೆಯ ರಸ್ತೆಯಲ್ಲಿ ದೊರೆತ ಮಹಿಳಾ ಶವವು ಕೆ.ಬೆಟ್ಟಹಳ್ಳಿ ಗ್ರಾಮದ ರಘು ಎಂಬುವರ ಹೆಂಡತಿ 38 ವರ್ಷದ ಮಮತ ರವರ ಶವ ದೊರೆತಿದ್ದು, ಈಕೆಯು ದಿಃ02/08/2017 ರಂದು ರಾತ್ರಿ 8.30 ಗಂಟೆಯಲ್ಲಿ ಮನೆಯಿಂದ ಹೋಗಿದ್ದು ಈಕೆಯನ್ನು ಯಾರೋ, ಯಾವುದೋ ರೀತಿಯಲ್ಲಿ ಕೊಲೆ ಮಾಡಿ  ರುವ ಬಗ್ಗೆ ಅನುಮಾನ ಇರುವುದಾಗಿ ಮೃತಳ ಮಗ ಸಂಧೀಪ ನೀಡಿದ ದೂರಿನಂತೆ ಕೊಲೆ ಪ್ರಕರಣ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ.240/2017 ಕಲಂ 302, 201 ಐಪಿಸಿ ವರದಿಯಾಗಿತ್ತು. 

            ಮೃತಳು ಹಾಗೂ ಹಾರೋಹಳ್ಳಿ ಗ್ರಾಮದ ಗಾರೆಕೆಲಸದ ಕೃಷ್ಣನಿಗೆ ಸಂಬಂಧಿಸಿದಂತೆ ತಳಮಟ್ಟದಿಂದ ಮಾಹಿತಿಯನ್ನು ಸಂಗ್ರಹಿಸಿ ತಲೆಮರೆಸಿಕೊಂಡಿದ್ದ ಹಾರೋಹಳ್ಳಿ ಗ್ರಾಮದ ಕೃಷ್ಣನನ್ನು ದಿಃ07/08/2017 ರಂದು ಮುಂಜಾನೆ ಪಾಂಡವಪುರದಲ್ಲಿ ತನಿಖಾಧಿಕಾರಿಗಳು ಪತ್ತೆ ಮಾಡಿ ತನಿಖೆ ನಡೆಸಿದಾಗ, ಕೃಷ್ಣ ಹಾರೋಹಳ್ಳಿ ಗ್ರಾಮ ಈತನು ಮೃತೆ ಮಮತಳೊಂದಿಗೆ 12 ವರ್ಷಗಳಿಂದ ಪರಿಚಯ ಇಟ್ಟುಕೊಂಡಿದ್ದು, ತನ್ನೊಂದಿಗೆ ಗಾರೆಕೆಲಸಕ್ಕೆ ಕರೆದುಕೊಂಡು ಹೋಗುತಿದ್ದು ಇತ್ತೀಚೆಗೆ ಈಕೆ ತನಗಿಂತ ಬೇರೆಯವರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿರಬಹುದೆಂಬ ದ್ವೇಷವನ್ನು ಹೊಂದಿ, ಕೊಲೆ ಮಾಡುವ ಉದ್ದೇಶದಿಂದ ದಿಃ02/08/2017 ರಂದು ರಾತ್ರಿ ಆಕೆಯನ್ನು ಹಾರೋಹಳ್ಳಿಯ ರಾಮಕೃಷ್ಣೆಗೌಡರ ಬೋರೆಹೊಲದ ಬಳಿ ಹೇಮಾವತಿ ಪಾಳು ಸೀಳು ನಾಲೆಯ ಬಳಿಗೆ ಕರೆದುಕೊಂಡು ಹೋಗಿ ಆಕೆಗೆ ಮದ್ಯಪಾನ ಮಾಡಿಸಿ, ಆಕೆಯ ಕುತ್ತಿಗೆಗೆ ಟವಲಿನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಈ ಅಪರಾದ ತನ್ನ ಮೇಲೆ ಬರದಂತೆ ಮುಚ್ಚಿಹಾಕಿ ಸಾಕ್ಷಿ ನಾಶಗೊಳಿಸುವ ಉದ್ದೇಶದಿಂದ ಶವವನ್ನು ಅದೇ ರಾತ್ರಿ ಕೆ.ಬೆಟ್ಟಹಳ್ಳಿಯ ಬಳಿಗೆ ಬೈಕಿನಲ್ಲಿ ಸಾಗಿಸಿ, ಆಕೆಯೇ ವಿಷ ಕುಡಿದು ಸತ್ತಿರುತ್ತಾಳೆಂದು ಭಾವಿಸಿಕೊಳ್ಳಲೆಂದು, ಹೆಣದ ಬಳಿಗೆ ಹೈಡ್ರೋಜನ್ ಪೆರಾಕ್ಸ್‍ಡ್ ಖಾಲಿ ಡಬ್ಬಿಯನ್ನು ಇಟ್ಟು ಹೊರಟು ಹೋಗಿದುದು ತನಿಖೆಯಿಂದ ತಿಳಿದು ಬಂದಿರುತ್ತದೆ

                  ಸದರಿ ಪ್ರಕರಣವನ್ನು  ಡಿ.ಎಸ್.ಪಿ. ಶ್ರೀ. ವಿಶ್ವನಾಥ್‍ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕರಾದ ಶ್ರೀ.ಎಂ.ಚಂದ್ರಶೇಖರ್, ಯೋಗಾಂಜನಪ್ಪ, ಪಿ.ಎಸ್.ಐ,. ಶ್ರೀರಂಗಪಟ್ಟಣ ಟೌನ್, ಪಿಎಸ್‍ಐ ಬ್ಯಾಟರಾಯಗೌಡ, ಹಾಗೂ ಸಿಬ್ಬಂದಿಯವರಾದ ವಿಜಯ್‍ಕುಮಾರ್, ಕೆ.ಕುಮಾರ, ವರದರಾಜ, ರವೀಶ.ಎಸ್.ಇವರುಗಳು ಪ್ರಕರಣವನ್ನು ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಲು ಶ್ರಮಿಸಿರುತ್ತಾರೆ. ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಇವರೆಲ್ಲರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ ಜಿಲ್ಲೆರವರು ಪ್ರಶಂಶಿಸಿರುತ್ತಾರೆ. 

Press Note - Maddur PS HBT Case Detected