Moving text

Mandya District Police

PRESS NOTE DATE 31-05-2014ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ 
 ಮಂಡ್ಯ ಜಿಲ್ಲೆ. ಮಂಡ್ಯ ದಿಃ 31-05-2014 

ಪತ್ರಿಕಾ ಪ್ರಕಟಣೆ 

ವಿಷಯಃ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಆವರಣದಲ್ಲಿ ಕಳವು ಹಾಗೂ ಇತರೆ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡು ಮಾಲೀಕರು ಪತ್ತೆಯಾಗದೇ  ಅನಾಥವಾಗಿ ಬಿದ್ದಿರುವ  ವಾಹನಗಳ ಮಾಲೀಕರುಗಳನ್ನು ಪತ್ತೆ ಮಾಡಿ ವಿಲೇವಾರಿ ಮಾಡುವ ಬಗ್ಗೆ ಒಂದು ತಂತ್ರಾಂಶವನ್ನು ಕಂಪ್ಯೂಟರ್ ನಲ್ಲಿ  ಅಳವಡಿಸಿ ಪತ್ತೆ ಮಾಡಲು ಫಲಶೃತಿಯಾಗಿರುವ ಬಗ್ಗೆ.


DAILY CRIME REPORT OF MANDTA DISTRICT DTD : 30-05-2014
DAILY CRIME REPORT OF MANDYA DISTRICT DTD : 29-05-2014
DAILY CRIME REPORT OF MANDYA DISTRICT DTD : 28-05-2014
DAILY CRIME REPORT OF MANDYA DISTRICT DTD : 27-05-2014
DAILY CRIME REPORT OF MANDYA DISTRICT DTD : 26-05-2014
DAILY CRIME REPORT OF MANDYA DISTRICT DTD : 25-05-2014
DAILY CRIME REPORT OF MANDYA DISTRICT DTD : 24-05-2014
DAILY CRIME REPORT OF MANDYA DISTRICT DTD : 23-05-2014
DAILY CRIME REPORT OF MANDYA DISTRICT DTD : 22-05-2014
DAILY CRIME REPORT OF MANDYA DISTRICT DTD : 21-05-2014

PRESS NOTE 21-05-2014

ಪೊಲೀಸ್ ಸೂಪರಿಂಟೆಂಡೆಂಟ್   ರವರ ಕಛೇರಿ                                                                                    ಮಂಡ್ಯ ಜಿಲ್ಲೆ. ಮಂಡ್ಯ ದಿಃ-21-05-2014

ಪತ್ರಿಕಾ ಪ್ರಕಟಣೆ

     ದಿನಾಂಕಃ 19-05-2014 ರಂದು ಮದ್ದೊರು ತಾಲ್ಲೂಕು, ವಳಗೆರೆಹಳ್ಳಿ ಗ್ರಾಮದ ಸಮೀಪ ಅದೇ ಗ್ರಾಮದ ಶಿವರಾಜು ಎಂಬುವವರ ಮೇಲೆ ಚಿರತೆಯ ದಾಳಿ ನಡೆದು ಸದರಿಯವರು ಮೃತಪಟ್ಟಿದ್ದು, ಈ ವಿಚಾರದಲ್ಲಿ ಸದರಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಅನೇಕ ತಂಡಗಳನ್ನು ರಚಿಸಿ ಸೆರೆ ಹಿಡಿಯುವ ಕಾರ್ಯ ಆಚರಣೆಯಲ್ಲಿರುತ್ತದೆ.

     ಮದ್ದೊರು ತಾಲ್ಲೂಕು, ಮಂಡ್ಯ ತಾಲ್ಲೂಕಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಚಿರತೆ ಕಂಡು ಬಂದಲ್ಲಿ ಸಾರ್ವಜನಿಕರು / ಗ್ರಾಮಸ್ಥರು ಕೂಡಲೇ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ದೊರವಾಣಿ ಸಂಖ್ಯೆಃ 9480804800 ಅಥವಾ 08232-224888 ಅಥವಾ 08232- 224904 ಗಳಿಗೆ ಮಾಹಿತಿಯನ್ನು ಕೂಡಲೇ ತಿಳಿಸುವಂತೆ ಈ ಮೂಲಕ ಕೋರಲಾಗಿದೆ.

     ಮದ್ದೊರು ತಾಲ್ಲೂಕು, ಮಂಡ್ಯ ತಾಲ್ಲೂಕಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಾಗೂ ಕಬ್ಬಿನ ಗದ್ದೆಗಳಲ್ಲಿ ಚಿರತೆ ಅಡಗಿ ಇರಬಹುದೆಂದು ಊಹಿಸಲಾಗಿದ್ದು, ಅರಣ್ಯ ಅದಿಕಾರಿಗಳು ಸದರಿ ಚಿರತೆಯನ್ನು ಸರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವುದರಿಂದ ಆ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ ಹಾಗೂ ರಾತ್ರಿ ವೇಳೆ ಅಂತಹ ಸ್ಥಳಗಳ ಸರಹದ್ದಿನಲ್ಲಿ ಒಬ್ಬರು ಅಥವಾ ಇಬ್ಬರು ತಿರುಗಾಡದಂತೆಯೂ ತೀರ ಅವಶ್ಯಕತೆ ಕಂಡು ಬಂದಲ್ಲಿ ರಾತ್ರಿ ವೇಳೆ ಸಂಚರಿಸುವ ಸಮಯದಲ್ಲಿ ಗುಂಪಾಗಿ ಎಲ್ಲರ ಕೈಯಲ್ಲೂ ಲಾಠಿ, ದೊಣ್ಣೆ ಹಾಗೂ ಟಾರ್ಚರ್ ಗಳನ್ನು ಜೊತೆಯಲ್ಲಿ ಕೊಂಡೊಯ್ಯವಂತೆ ಈ ಮೂಲಕ ಕೋರಲಾಗಿದೆ 
DAILY CRIME REPORT OF MANDYA DISTRICT DTD : 20-05-2014
DAILY CRIME REPORT OF MANDYA DISTRICT DTD : 19-05-2014
DAILY CRIME REPORT OF MANDYA DISTRICT DTD : 18-05-2014
MANDYA DISTRICT DAILY CRIME REPORT DATE 09-05-2014
MANDYA DISTRICT DAILY CRIME REPORT DATE 03-05-2014
MANDYA DISTRICT DAILY CRIME REPORT 02-05-2014

PRESS NOTE


ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ
 ಮಂಡ್ಯ ಜಿಲ್ಲೆ, ಮಂಡ್ಯ 
  ದಿನಾಂಕಃ 02-05-2014

ಪತ್ರಿಕಾ ಪ್ರಕಟಣೆ

ಕೆ.ಆರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀಯುತ ಕೆ.ರಾಜೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಪಿಸಿ 678 ಕೃಷ್ಣೇಗೌಡ, ಪ್ರಶಾಂತ ಕುಮಾರ ಪಿಸಿ-492 ರವರು ದಿನಾಂಕ 30-04-2014 ರಂದು ರಾತ್ರಿ ಗಸ್ತಿನಲ್ಲಿದ್ದು ಬೆಳಗಿನ ಜಾವ 05-00 ಗಂಟೆಯಲ್ಲಿ ತೆಂಡೆಕೆರೆ ಸರ್ಕಲ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಮೈಸೂರು ಕಡೆಯಿಂದ ಬಂದ ಒಂದು ಪ್ಯಾಸೆಂಜರ್ ಆಟೋ ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾಗ ಕೆಎ-55-2893 ಆಟೋದಲ್ಲಿದ್ದ ಆರೋಪಿತರಾದ 1) ಯಲ್ಲಪ್ಪ @ ಯಲ್ಲಪ್ಪಬೋವಿ ಬಿನ್ ಚಿಕ್ಕಸುಬ್ಬಯ್ಯ @ ಚಿಕ್ಕಸುಬ್ಬಯ್ಯಬೋವಿ, 38 ವರ್ಷ, ಬೋವಿಜನಾಂಗ ಆಟೋ ಡ್ರೈವರ್ ನಂ 7, ರಿಂಗ್ರೋಡ್ ಸಾತಗಹಳ್ಳಿ ಇಂಜಿನೀಯರಿಂಗ್ ಕಾಲೇಜು ಪಕ್ಕ ಮೈಸೂರು ಮತ್ತು 2) ಸರೋಜ @ ರಾಧ ಕೊಂ ರಾಜು, 25 ವರ್ಷ, ಬೋವಿ ಜನಾಂಗ, ಗಂಧದಕಡ್ಡಿ ವ್ಯಾಪಾರ ಮಾಡುವ ಕೆಲಸ ನಂ 7, 1 ನೇ ಕ್ರಾಸ್, ಕುರಿಮಂಡಿ ಆಲದಮರದ ಪಕ್ಕ, ಕೆಸರೆ, ಮೈಸೂರು ಸಿಟಿ ಎಂದು ತಿಳಿಸಿದ್ದು  ಆಟೋ ಪರಿಶೀಲಿಸಿದಾಗ ಹಿಂಬಾಗದ ಸೀಟಿನಲ್ಲಿ ಪ್ಲಾಸ್ಟಿಕ್ ಕವರಿನ ಒಳಗೆ 18 ಜೊತೆ ಬೆಳ್ಳಿ ಕಾಲು ಚೈನುಗಳಿದ್ದು ವಿಚಾರಣೆಮಾಡಿದಾಗ ಸದರಿ ವಸ್ತುಗಳನ್ನು ಮದ್ದೂರಿನ ಬಜಾರ್ ಸ್ಟ್ರೀಟ್ ನಲ್ಲಿರುವ ಒಂದು ಜ್ಯೂಯಲರ್ಸ್ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿ ಮಾಡಲು ಹೋಗಿ ಅಂಗಡಿಯವರಿಗೆ ಗೊತ್ತಾಗದೇ 18 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ನಾವು ಮತ್ತು ನಮ್ಮ ಸಂಬಂದಿಕರಾದ 1) ಸುಬ್ಬಮ್ಮ @ ಸುಜಾತ ಮತ್ತು 2) ಮಂಜು @ ಮಂಜುಳ ಮೈಸೂರು ರವರು ಜೊತೆಗೂಡಿ ಕಳ್ಳತನ ಮಾಡಿದ್ದು ಗಿರಾಕಿಗಳು ಸಿಕ್ಕರೆ ಮಾರಾಟ ಮಾಡಿ ಬಂದ ಹಣವನ್ನು ನಾವೆಲ್ಲರೂ ಹಂಚಿಕೊಳ್ಳೋಣ ಎಂದು ಬರುತ್ತಿದ್ದೆವು ತಿಳಿಸಿದ್ದು ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಆಟೋವನ್ನು ಮತ್ತು 18 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ಅಮಾನತ್ತುಪಡಿಸಿಕೊಂಡು ಅರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ನಂತರ ಮೇಲ್ಕಂಡ ಆರೋಪಿಗಳನ್ನು ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಆರೋಪಿತರಿಂದ ಸುಮಾರು 60.000 ರೂಪಾಯಿ ಬೆಲೆ ಬಾಳುವ 1200 ಗ್ರಾಂ ತೂಕದ ಬೆಳ್ಳಿಯ 18 ಜೊತೆ ಕಾಲು ಚೈನುಗಳನ್ನು ಆರೋಪಿತರಿಂದ ವಶ ಪಡಿಸಿಕೊಂಡಿರುತ್ತೆ.

ಈ ಪ್ರಕರಣವನ್ನು ಮಾನ್ಯ ಶ್ರೀರಂಗಪಟ್ಟಣ ಅರಕ್ಷಕ ಉಪ ಪೊಲೀಸ್ ಅದಿಕ್ಷಕರಾದ ಶ್ರೀಮತಿ ಎಂ.ಎಸ್. ಗೀತಾ ರವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಕೆ. ರಾಜೇಂದ್ರ ರವರು ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಡಿ.ಪಿ. ಧನರಾಜ್ ಮತ್ತು ಸಿಬ್ಬಂದಿಗಳಾದ ಪಿಸಿ 678 ಕೃಷ್ಣೇಗೌಡ, ಪ್ರಶಾಂತ ಕುಮಾರ ಪಿಸಿ-492 ಇವರುಗಳ ಕಾರ್ಯವನ್ನು ಅವರುಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ. 

PRESS NOTE

   ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
    ಮಂಡ್ಯ ಜಿಲ್ಲೆ, ಮಂಡ್ಯ 
  ದಿನಾಂಕಃ 02-05-2014

ಪತ್ರಿಕಾ ಪ್ರಕಟಣೆ

       ದಿನಾಂಕಃ 01-05-2014 ರಂದು ಮಂಡ್ಯ ನಗರದ ಮಹಾವೀರ ಚಿತ್ರಮಂದಿರದಲ್ಲಿ ಮಾಣಿಕ್ಯ ಎಂಬ ಸುದೀಪ್ ಅಭಿನಯದ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಈ ಸಮಯದಲ್ಲಿ ಸುದೀಪ್ರವರು ಮಾತನಾಡುವ ಧ್ವನಿಯು ಅಸ್ಪಷ್ಟವಾಗಿ ಕೇಳುತ್ತಿದೆ ಎಂದು ಪ್ರೇಕ್ಷಕರು ಈ ಬಗ್ಗೆ ಚಿತ್ರಮಂದಿರದ ಮೇಲ್ವಿಚಾರಕರನ್ನು ಪ್ರಶ್ನಿಸುತ್ತಿದ್ದ ಸಮಯದಲ್ಲಿ ರೊಚ್ಚಿಗೆದ್ದ ಕೆಲವು ಕಿಡಿಗೇಡಿಗಳು ಚಿತ್ರಮಂದಿರದ ಪೀಠೋಪಕರಣಗಳು ಮತ್ತು ಗ್ಲಾಸುಗಳನ್ನು ಹೊಡೆದು ಗಲಾಟೆ ಮಾಡಿದ್ದು, ನಂತರ ಚಲನಚಿತ್ರ ಪ್ರದರರ್ಶಿಸಲು ಸಾಧ್ಯವಾಗದ ಕಾರಣ ಪ್ರೇಕ್ಷಕರಿಗೆ ಬೆಳಗ್ಗಿನ ಪ್ರದರ್ಶನ ಮತ್ತು ಮದ್ಯಾಹ್ನದ ಪ್ರದರ್ಶನದ ಎರಡು ವೇಳೆಯ ಹಣವನ್ನು ವಾಪಸ್ ನೀಡಿ ಕಳುಹಿಸಿರುತ್ತಾರೆ. ಗಲಾಟೆ ಸಮಯದಲ್ಲಿ ಚಿತ್ರಮಂದಿರ ಹಾನಿಗೊಳಗಾಗಿದ್ದ ಸಂಬಂಧವಾಗಿ ಚಿತ್ರಮಂದಿರದ ಮ್ಯಾನೇಜರ್ ಆದ ರಾಮು ಎಂಬುವವರು ಮಂಡ್ಯ ಪೂರ್ವ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಕೇಸಿನ ಆರೋಪಿಗಳಾದ 1] ವಿನಿಲ್ಕುಮಾರ್ ಬಿನ್ ರಾಮಚಂದ್ರ, 24 ವರ್ಷ, ಒಕ್ಕಲಿಗರು, ವ್ಯವಸಾಯ, ಕನ್ನಲಿ ಗ್ರಾಮ, ಮಂಡ್ಯ ತಾಲ್ಲೂಕು. 2] ಹೆಚ್.ಎನ್.ದೀಪು ಬಿನ್ ನಾಗರಾಜು 27 ವರ್ಷ, ಒಕ್ಕಲಿಗರು, ಕ್ಲಬ್ನಲ್ಲಿ ಸಪ್ಲೈಯರ್ ಕೆಲಸ, ಸ್ವಂತ ಊರು ಹುಚ್ಚಲಗೆರೆ ಮಂಡ್ಯ ತಾಲ್ಲೂಕು. 3] ರಮೇಶ ಬಿನ್ ಲೇಟ್ ಸವಡೆ ಉರುಗಯ್ಯ, 26 ವರ್ಷ, ಗಂಗಾಮತಸ್ತರು, ವ್ಯವಸಾಯ, ವಾಸ ಚೀರನಹಳ್ಳಿ ಗ್ರಾಮ, ಮಂಡ್ಯ ತಾಲ್ಲೂಕು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. 
MANDYA DISTRICT DAILY CRIME REPORT DATE 01-05-2014