Moving text

Mandya District Police

Raid On 24-08-2011

ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 240/11 ಕಲಂ 87 ಕೆ.ಪಿ. ಆಕ್ಟ್
1] ದಿನಾಂಕ 24-08-11 ರಂದು ಪಿರ್ಯಾದಿ ಶ್ರೀ ರೇಣುಕಾ ಪ್ರಸಾದ್ ಪಿ,ಎಸ್.ಐ ಕೆ,ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಏನೆಂದರೆ ತಂಡೆಕೆರೆ ಗ್ರಾಮದ ಸಂತೆ ಮೈಧಾನದ ಬೆಲ್ಲದ ಮಂಡಿ ಮುಂಭಾಗದ ಹೊರಂಗಣದಲ್ಲಿ ಸಾರ್ವಜನಿಕರು ವ್ಯಾಪರ ಮಾಡುವ ಸೀಮೆಂಟ್ ಕಟ್ಟಡದ ಜಗಲಿಯ ಮೇಲೆ ಆರೋಪಿತರಾದ ಚಲುವಯ್ಯ ಮತ್ತು ಇತರೆ 8 ಜನರು ಅಕ್ರಮವಾಗಿ ಅಂದರ್ ಬಾಯರ್ ಜೂಜಾಟವನ್ನು ಆಡುತ್ತಿದ್ದಾರೆಂದು ಮಾಹಿತಿಯ ಮೇರೆಗೆ ಸಿಬ್ಬಂದಿಯವರೊಡನೆ ದಾಳಿ ಮಾಡಿ 52 ಇಸ್ಪೀಟ್ ಎಲೆಗಳನ್ನು. 2 ಮೋಬೈಲ್ ಸೆಟ್ ಗಳು ಹಾಗೂ ನಗದು 66.720/- ರೂ ಹಾಗೂ ಇಸ್ಪೀಟ್ ಆಡಲು ಉಪಯೋಗಿಸಿದ ಒಂದು ಹಳೆಯ ಚಾಪೆಯನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿರುತ್ತೆ

ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ 377/11 ಕಲಂ 87 ಕೆ.ಪಿ. ಆಕ್ಟ್
2] ದಿನಾಂಕ 24-08-11 ರಂದು ಆರೋಪಿಗಳಾದ ನಾಗರಾಜು ಮತ್ತು ಇತರೆ 3 ಜನರು ಪಾಂಡವಪುರ ಟೌನ್ ಕೆರೆ ಕೋಡಿಯ ಗದ್ದೆಯ ಬಯಲಿನಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸಪೀಟ್ ಜೂಜಾಟವಾಡುತ್ತದ್ದಾರೆಂದು ಪಿರ್ಯಾದಿ ಶ್ರೀ ಕೃಷ್ಣಮೂರ್ತಿ ಪಿ,ಐ ಪಾಂಡವಪುರ ಪೊಲೀಸ್ ಠಾಣೆ ರವರು ಒಂದು ಖಚಿತ ಮಾಹಿತಿಯ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಆರೋಪಿಗಳನ್ನು ವಶಕ್ಕೆ ತೆಗೆದು ಕೊಂಡು ಅವರ ಬಳಿ ಇದ್ದ 24.530 ರೂ, ಮೋಟಾರ್ ಸೈಕಲ್ ಮತ್ತು ಮೊಪೆಡ್ ಮತ್ತು ಮೊಬೈಲ್ ಪೋನ್ ಗಳನ್ನು ಅಮಾನತ್ತು ಪಡಿಸಿ, ಸದರಿ ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರು ಪಡಿಸಿರುತ್ತೆ,

Press Note Dated: 22-08-2011.


Press Note Dated: 22-08-2011.

ಪತ್ರಿಕಾ ಪ್ರಕಟಣೆ

ಪೊಲೀಸ್ ಅಧೀಕ್ಷಕ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ರವರಿಗೆ.
ಎಲ್ಲಾ ಪತ್ರಿಕಾ ಮಾಧ್ಯಮ/ದೃಶ್ಯ ಮಾಧ್ಯಮದವರಿಗೆ
ಮಂಡ್ಯ ಜಿಲ್ಲೆ,
ಮಂಡ್ಯ

ಮಾನ್ಯರೇ,

ಮಾನ್ಯ ಇನ್ಸಪೆಕ್ಟರ್ ಜನರಲ್ ಆಫ್ ಪೊಲೀಸ್, ದಕ್ಷಿಣ ವಲಯ, ಮೈಸೂರು ರವರು ದಿನಾಂಕ:23/08/2011 ರಂದು ಬೆಳಿಗ್ಗೆ 11.0 ಗಂಟೆಗೆ ಮಂಡ್ಯ ನಗರಕ್ಕೆ ಆಗಮಿಸುತ್ತಿದ್ದು, ಅದೇ ಸಮಯಕ್ಕೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ಪತ್ರಿಕಾ ಸಂದರ್ಶನದಲ್ಲಿ ಭಾಗವಹಿಸಲಿದ್ದಾರೆ. ಸದರಿ ಸಭೆಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಮಂಡ್ಯ ರವರು ಭಾಗವಹಿಸಲಿದ್ದಾರೆ. ಆದುದರಿಂದ ಎಲ್ಲಾ ಪತ್ರಿಕಾ ಸಂದರ್ಶನಕ್ಕೆ ದಿನಾಂಕ:23/08/2011 ರಂದು ಬೆಳಗ್ಗೆ 11.00 ಗಂಟೆಗೆ ಜಿಲ್ಲೆಯ ಎಲ್ಲಾ ಪತ್ತಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮದವರು ಭಾಗವಹಿಸಲು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಕೋರಲಾಗಿದೆ.

ತಮ್ಮ ವಿಶ್ವಾಸಿ
ಜಿಲ್ಲಾ ಪೊಲೀಸ್ ಅಧಿಕಾರಿಗಳು
ಮಂಡ್ಯ ಜಿಲ್ಲೆ, ಮಂಡ್ಯ

ಗೆ,
ಜಿಲ್ಲಾ ವಾರ್ತಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ ರವರಿಗೆ ಮಾಹಿತಿಗಾಗಿ ರವಾನಿಸುತ್ತಾ ಎಲ್ಲಾ ಪತ್ರಿಕಾ ಮಾಧ್ಯಮ/ದೃಶ್ಯ ಮಾಧ್ಯಮದವರನ್ನು ಪತ್ರಿಕಾಗೋಷ್ಠಿಗೆ ಕರೆತರಲು ಈ ಮೂಲಕ ಕೋರಲಾಗಿದೆ.

Press Note Dated: 02-08-2011.

ಪೊಲೀಸ್ ಪ್ರಕಟಣೆ

ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ, ಮಂಡ್ಯ ನಗರದಲ್ಲಿ ಹಾಗೂ ಶ್ರೀರಂಗಪಟ್ಟಣದಲ್ಲಿ 2008 ಹಾಗೂ 2009 ನೇ ಸಾಲಿನಲ್ಲಿ ಅನಧಿಕೃತವಾಗಿ ವಾಸವಾಗಿದ್ದ ಬಾಂಗ್ಲಾದೇಶಿಯರ ವಿರುದ್ಧ ವಿದೇಶಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದ ಆರೋಪಿಗಳ ಪೈಕಿ ಈ ಕೆಳಕಂಡ ಏಳು ಬಾಂಗ್ಲಾದೇಶಿಯರುಗಳಿಗೆ ನ್ಯಾಯಾಲಯದಿಂದ ಶಿಕ್ಷೆ ವಿಧಿಸಿ ಶಿಕ್ಷೆ ಅವಧಿ ಪೂರ್ಣಗೊಂಡ ನಂತರ ಸದರಿ ಬಾಂಗ್ಲಾದೇಶಿಯರನ್ನು ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಬಾಂಗ್ಲಾದೇಶ್ಕಕೆ ಗಡಿಪಾರು ಮಾಡುವವರೆಗೆ ಶ್ರೀರಂಗಪಟ್ಟಣದ ರಿವರ್ ವ್ಯಾಲಿ ನವಜೀವನ ಆಶ್ರಯಧಾಮದಲ್ಲಿ ಪೊಲೀಸ್ ಉಸ್ತುವಾರಿಯಲ್ಲಿ ಇಡಲಾಗಿತ್ತು. ಸದರಿ ಈ ಕೆಳಕಂಡ ಏಳು ಜನ ಬಾಂಗ್ಲಾದೇಶಿಯರು ದಿನಾಂಕ:02-08-2011 ರಂದು ಸದರಿ ಆಶ್ರಯಧಾಮದಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ.

1) ಶ್ರೀಮತಿ ಸಾಹಿನಾ ಖಾತುನ್ ತಂದೆ ನೌವ್ ಶೇರ್ ಷೇಖ್, ನಂಬರ್ 28, ಶಿರ್ಲಾಬಾದ್ ರೋಡ್, ಖುಲ್ ನಾ ಬಾಂಗ್ಲಾದೇಶ.

2) ನಿಪಾ ಡಾಟರ್ ಆಫ್ ಮುಜಾಮ್, 20 ವರ್ಷ, ಮುಸ್ಲಿಂ ಜನಾಂಗ, ಮನೆಕೆಲಸ, ಗೋಬರ್ ತರ್ಕಲ್, ಗಾಟ್ತಲಾಮು, ಸುನಾಡಾಂಗ ಸಿಟಿ, ಕುಲ್ ನಾ ಜಿಲ್ಲೆ, ಬಾಂಗ್ಲಾದೇಶ ( ನ್ಯಾಯಾಲಯದ ತೀರ್ಪಿನ ವಿಚಾರದಲ್ಲಿ ಅಫೀಲು ಬಾಕಿ ಇರುತ್ತದೆ)

3) ಪಿಂಕಿ ಕೋಂ ಮುನ್ನ, 25 ವರ್ಷ, ಮುಸ್ಲಿಂ ಜನಾಂಗ, ಕಡೋಲಿಯಾ, ನೋಡಾಯಲ್, ಜೋಷರ್ ರಾಜ್ಯ, ಬಾಂಗ್ಲಾದೇಶ.

4) ಕವಿತಾ ಕೋಂ ಸುಜಾನ್, 20 ವರ್ಷ, ಮುಸ್ಲಿಂ ಜನಾಂಗ, ಬೋಂಗ, ಕಡೊಲಿಯಾ, ನೋಡಾಯಲ್, ಜೋಷರ್ ರಾಜ್ಯ, ಬಾಂಗ್ಲಾದೇಶ.

5) ಕಾಜಲ್ @ ಮೀನು ಕೋಂ ನಜೀರ್ ತಾಲ್ಲೂಕ್ ದಾರ್, 25 ವರ್ಷ, ಮುಸ್ಲಿ ಜನಾಂಗ,ದಿಯಾರ ಗ್ರಾಮ, ಜೇಲಾ ಥಾನರುಕ್ಷ, ಜೇಲ್ ಕಾನ ಘಾಟ್, ಬಾಂಗ್ಲಾದೇಶ.

6) ಪನ್ನಾ @ ಜ್ಯೋತಿ ಕೋಂ ಬೀಲು ಬಿಪಾಸ್, 26 ವರ್ಷ, ಮುಸ್ಲಿಂ ಜನಾಂಗ, ಕಡೋಲಿಯಾ, ನೋಡಾಯಲ್, ಜೋಷರ್ ರಾಜ್ಯ, ಬಾಂಗ್ಲಾದೇಶ.

7) ಹಸೀನಾ ಕೋಂ ಮುಸ್ತಾಯಿಶೇಖ್, 25 ವರ್ಷ, ಮುಸ್ಲಿಂ ಜನಾಂಗ, ಕಡೋಲಿಯಾ, ನೋಡಾಯಲ್, ಜೋಷರ್ ರಾಜ್ಯ, ಬಾಂಗ್ಲಾದೇಶ.