Moving text

Mandya District Police

DAILY CRIME REPORT DATED : 30-05-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 30-05-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು / ಸರ ಕಳವು ಪ್ರಕರಣ,  1 ಅಪಹರಣ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು ಹಾಗು 12 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.    


ವಾಹನ ಕಳವು ಸರ ಕಳವು ಪ್ರಕರಣ :

 1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 253/13 ಕಲಂ. 379 ಐ.ಪಿ.ಸಿ.

ದಿನಾಂಕ:30-05-2013 ರಂದು ಪಿರ್ಯಾದಿ ಹೆಚ್.ಬಿ. ಮಂಜುನಾಥ ಬಿನ್. ಲೇಟ್. ಹೆಚ್. ಬೀರಯ್ಯ, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರು ಏನೆಂದರೆ ಯಾರೂ ಕಳ್ಳರು ಪಿರ್ಯಾದಿಯವರ ಬಾಬ್ತು ನಂ. ಕೆಎ-54/ಇ-2872 ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ತರಕಾರಿ ತರಲು ಹೋಗಿ ಬಂದು ನೋಡಿದಾಗ ಸ್ಥಳದಲ್ಲಿ ಮೋಟಾರ್ ಸೈಕಲ್ ಇರಲಿಲ್ಲ, ನಂತರ ಹುಡುಕಲಾಗಿ ಎಲ್ಲೂ ಸಿಗಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಮೌಲ್ಯ ಸುಮಾರು 37000 ರೂ/- ಆಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 351/13 ಕಲಂ. 379 ಐ.ಪಿ.ಸಿ.

ದಿನಾಂಕ: 30-05-2013 ರಂದು ಪಿರ್ಯಾದಿ ಲೋಕೇಶ್, ಎಸ್. ಬಿನ್. ಲೇಟ್. ಶಿವಣ್ಣ. ಪಿ.ಎಂ ವಾಸ-ಮನೆ. ನಂ. 86, ಶ್ರೀರಂಗಪಟ್ಟಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿ-26-05-2013 ರಂದು ಸಾಯಂಕಾಲ 04-30 ಗಂಟೆಯಲ್ಲಿ, ಶ್ರೀ ಗುಂಬಜ್ನ ಪ್ರವೇಶ ದ್ವಾರದ ಬಳಿ ಯಾರೋ ಕಳ್ಳರು ಆ ಜನ ಜಂಗುಳಿಯಲ್ಲಿ ನನ್ನ ಮಗಳ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 352/13 ಕಲಂ. 366(ಎ) ಕೂಡ 34 ಐ.ಪಿ.ಸಿ.

ದಿನಾಂಕ: 30-05-2013 ರಂದು ಪಿರ್ಯಾದಿ ಬಾಲು ಬಿನ್. ಲೇಟ್. ರಾಮಲಿಂಗೇಗೌಡ, ಗಣಂಗೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಯೋಗೇಶ್ ಬಿನ್  ರಾಮಚಂದ್ರ 2] ಸಾಕಮ್ಮ 3] ಶ್ವೇತ ಕೋಂ ಬೋರೇಗೌಡ ಮತ್ತು 4]ಮಹೇಶ ಬಿನ್ ಜವರಯ್ಯನ ರವರುಗಳು ದಿನಾಂಕ: ದಿನಾಂಕ:24-05-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ, ಗಣಂಗೂರು ಗ್ರಾಮ, ಶ್ರೀರಂಗಪಟ್ಟಣ ತಾ. ನಿಂದ ಆರೋಪಿ-1 ಯೋಗೇಶ ಪಿರ್ಯಾದಿಯವರ ಮಗಳನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಲು ಇತರೆ ಆರೋಪಿಗಳು ಸಹಕರಿಸಿರುತ್ತಾರೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 151/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ:30-05-2013 ರಂದು ಪಿರ್ಯಾದಿ ದಾಸಶೆಟ್ಟಿ ಬಿನ್. ತಿಮ್ಮಶೆಟ್ಟಿ, ಬಿರುವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 29-05-2013  ರಂದು ಸಂಜೆ 06-00 ಗಂಟೆಯಲ್ಲಿ ಬೀರುವಳ್ಳಿ ಗ್ರಾಮದ ಪಿರ್ಯಾದಿ ಮನೆಯಿಂದ ಅವರ ಹೆಂಡತಿ ನಾಗಮ್ಮ, 28 ವರ್ಷ ರವರು ತವರು ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ಮಾವನ ಮನೆಗೆ ಪೋನ್ ಮಾಡಿ ಕೇಳಲಾಗಿ ಅಲ್ಲಿಗೆ ಹೋಗಿರುವುದಿಲ್ಲ. ಇತರೆ ಸಂಬಂಧಿಕರನ್ನು ವಿಚಾರಿಸಿದರೂ ಸಹ ಸಿಕ್ಕಿರುವುದಿಲ್ಲ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 22/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:30-05-2013 ರಂದು ಪಿರ್ಯಾದಿ ಪುಟ್ಟನರಸಮ್ಮ, ತಾಳಶಾಸನ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕ: 17-04-2013 ರಿಂದ ದಿನಾಂಕ: 29-05-2013 ರ ನಡುವೆ ಮಂಜುನಾಥರವರ ಆಲೆಮನೆ, ತಾಳಶಾಸನ ಗ್ರಾಮದಲ್ಲಿ ಪಿರ್ಯಾದಿಯವರ ಮಗ ಕೃಷ್ಣಶೆಟ್ಟಿ, 55 ವರ್ಷ, ತಾಳಶಾಸನ ಗ್ರಾಮ, ಪಾಂಡವಪುರ ತಾಲ್ಲೂಕು ರವರು ಆಲೆಮನೆಯಲ್ಲಿ ಒಲೆಗೆ ಬೆಂಕಿ ಹಾಕುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ಹೊರಗೆ ಬಂದು ಕೃಷ್ಣಶೆಟ್ಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟಗಾಯಗಳಾಗಿ ಚಿಕಿತ್ಸೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:30-05-2013 ರಂದು ಪಿರ್ಯಾದಿ ಡಾ: ಸಚಿದೇಶ, ಸಬ್ಬನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 21-4-2013 ರಂದು ಜೀವನದಲ್ಲಿ ಜಿಗುಪ್ಸೆಗೊಂಡು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಸುಟ್ಟ ಗಾಯವಾಗಿ ಸತ್ತಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 29-05-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-05-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  2 ಯು.ಡಿ.ಅರ್./ಅನುಮಾನಾಸ್ಪದ ಸಾವಿನ ಪ್ರಕರಣಗಳು,  1 ಶಾಲೆ ಕಳ್ಳತನ ಪ್ರಕರಣ,  1 ಬೆಂಕಿ ಅಪಘಾತ ಪ್ರಕರಣ,  1 ವಾಹನ ಕಳವು ಪ್ರಕರಣ,  1 ಕೊಲೆ ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 15 ಇತರೆ ಐ.ಪಿ.ಸಿ./ಕೆ,ಪಿ.ಆಕ್ಟ್/ಐ.ಟಿ.ಪಿ. ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.    

ಮನುಷ್ಯ ಕಾಣೆಯಾದ ಪ್ರಕರಣ :

ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 90/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

ದಿನಾಂಕ: 29-05-2013 ರಂದು ಪಿರ್ಯಾದಿ ಆರ್.ರಾಜು ಚಲ್ಲರಹಳ್ಳಿಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಸಿ.ಆರ್.ಲಕ್ಷ್ಮೀದೇವಿ, 20 ವರ್ಷ, ಚಲ್ಲರಹಳ್ಳಿಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ನನ್ನ ಮಗಳನ್ನು ಇಲ್ಲಿಯವರೆವಿಗೂ ಹುಡುಕಿದರು ಸಿಕ್ಕಿರುವುದಿಲ್ಲ ದಿನಾಂಕ: 22-05-2013 ರಂದು ಮೇಲುಕೋಟೆಯ ಪ್ರವಾಸಿ ಮಂದಿರದ ಬಳಿ ಇರುವ ರೂಮಿನಿಂದ ನನ್ನ ಮಗಳು ನನ್ನ ಸೋದರ ಮಾವ ಮಂಜಾಭೋವಿ ಮಗ ಗೋವಿಂದರಾಜುವಿನೊಡನೆ  ಹೋಗಿರಬಹುದೆಂದು ಅನುಮಾನವಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಅರ್./ಅನುಮಾನಾಸ್ಪದ ಸಾವಿನ ಪ್ರಕರಣಗಳು :

1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 29-05-2013 ರಂದು ಪಿರ್ಯಾದಿ ಕೆ.ಸಿ.ನಿಂಗಣ್ಣ ಬಿನ್. ಚನ್ನೇಗೌಡ, 58 ವರ್ಷ, ವಕ್ಕಲಿಗರು, 2ನೇ ದಜರ್ೇ ಮೇಸ್ತ್ರಿ, ಕೆ.ಆರ್.ಪೇಟೆ ಕೆಇಬಿ ಘಟಕ, ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ದಿನಾಂಕ: 29.05.2013 ರಂದು ಎಂಜಿನಿಯರಿಂಗ್ ಕಾಲೇಜಿನ ಆವರಣದ ಟ್ರಾನ್ಸ್ಫಾರಂ ಬಳಿ ನಾನು ಮತ್ತು ಎ.ಹೆಚ್.ನಂಜುಂಡೇಗೌಡರವರು ಸ್ಥಳಕ್ಕೆ ರಿಪೇರಿ ಕೆಲಸಕ್ಕಾಗಿ ಹೋಗಿದ್ದು ನಂಜುಂಡೇಗೌಡರು ರಿಪೇರಿ ಮಾಡುತ್ತಿದ್ದಾಗ ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಟ್ರಾನ್ಸ್ಫಾರಂನಿಂದ ವಿದ್ಯುತ್ ತಗುಲಿದ್ದು ಚಿಕಿತ್ಸೆಗಾಗಿ ಕೆ.ಆರ್.ಪೇಟೆ ಸಕರ್ಾರಿ ಆಸ್ಪತ್ರೆಗೆ ಸೇರಿಸುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ ಈ ಸಂಬಂಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ಶಿವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 (ಸಿ) ಸಿ.ಅರ್.ಪಿ.ಸಿ.

ದಿನಾಂಕ:29-05-2013 ರಂದು ಪಿರ್ಯಾದಿ ಎಂ.ಹೆಚ್. ಶಿವಕುಮಾರ್ ಬಿನ್. ಸಂತೋಷ್ಪೇಟೆ, ಚಿಕ್ಕಪೇಟೆ ಕ್ರಾಸ್, ಬೆಂಗಳೂರು ರವರು ನೀಡಿದ ದೂರು ಏನೆಂದರೆ ನನ್ನ ಹೆಂಡತಿ ಎಂ.ಹೆಚ್. ಪ್ರೇಮ ನಿಖರ ಗಾರ್ಡನ್ ಪಾಮ್ ಹೌಸ್, ಶಂಭೂನಹಳ್ಳಿ ಗ್ರಾಮ ರವರಿಗೆ ದಿನಾಂಕ:29-05-2013 ರಂದು ಹೃದಯ ವಿಕ್ ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಚಳಿ ಜಾಸ್ತಿಯಾಗಿ ಉಸಿರಾಟದ ತೊಂದರೆಯಾಗಿ ಸತ್ತು ಹೋಗಿದ್ದಾರೆ, ಆದರೂ ಇವರ ಸಾವಿನಲ್ಲಿ ನನಗೆ ಅನುಮಾನವಿರುತ್ತದೆ. ಆದುದ್ದರಿಂದ ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೆ ಎಂದು ನೀಡಿದ ದೂರಿನ ಮೆರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


ಶಾಲೆ ಕಳ್ಳತನ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 248/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 29-05-2013 ರಂದು ಪಿರ್ಯಾದಿ ದೇವೇಗೌಡ, ಮುಖ್ಯೋಪಾಧ್ಯಾಯರು, ಸಕರ್ಾರಿ ಪ್ರೌಢಶಾಲೆ, ಕೆ.ಬೆಳ್ಳೂರು ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದಿನಾಂಕ: 24-05-2013 ರಿಂದ ದಿನಾಂಕ: 28-05-2013 ರ ದಿನಗಳಲ್ಲಿ, ಸರ್ಕಾರಿ  ಪ್ರೌಢಶಾಲೆ, ಕೆ. ಬೆಳ್ಳೂರುನಲ್ಲಿ ಯಾರೋ ಕಳ್ಳರು ಶಾಲೆಯ ಕೋಣೆಯ ಕಿಟಕಿ ಬಾಗಿಲು ಮತ್ತು ಕಂಬಿಯನ್ನು ಮುರಿದು ಒಳನುಗ್ಗಿ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿದ್ದ 3 ಅಡುಗೆ ಅನಿಲದ ಸಿಲಿಂಡರುಗಳನ್ನು ಯಾರೋ ಕಳ್ಳರು ಕದ್ದುಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರು ಸಂಬಂಧ ಪ್ರಕರಣ ದಾಖಲಿಸಲಾಗಿದೆ.  


ಬೆಂಕಿ ಅಪಘಾತ ಪ್ರಕರಣ  :

 ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 235/13 ಕಲಂ. 435 ಐ.ಪಿ.ಸಿ.

       ದಿನಾಂಕ: 29-05-2013 ರಂದು ಪಿರ್ಯಾದಿ ಸೋಮಶೇಖರ ಲೇಟ್. ಕಾಳೇಗೌಡ, 47 ವರ್ಷ, ಒಕ್ಕಲಿಗರು, ಬಂದೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 19-05-2013 ರಂದು ಎಂ.ಸಿ.ರಸ್ತೆ, ಕಲ್ಲಹಳ್ಳಿಯ ಡಾ|| ರಾಘವೇಂದ್ರರವರ ಮನೆಯ ಹತ್ತಿರ ಯಾರೋ ದುಷ್ಕರ್ಮಿಗಳು  ಅವರ ಹೋಂಡ ಆಕ್ಟಿವ ಸ್ಕೂಟರ್ ಗೆ ಬೆಂಕಿ ಹಚ್ಚಿರುತ್ತಾರೆಂದು ವಿಚಾರ ಗೊತ್ತಾಗಿ ಕೂಡಲೇ ಫಿರ್ಯಾದಿಯವರು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮೇಲ್ಕಂಡ ಸ್ಕೂಟರ್ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದು ಮನೆಯ ಬಾಗಿಲಿಗೂ ಬೆಂಕಿ ಬಿದ್ದಿತ್ತು. ಆಗ ಫಿರ್ಯಾದಿ ಮತ್ತು ಇತರರು ಸೇರಿ ಬೆಂಕಿಯನ್ನು ಆರಿಸಿದ್ದು ಅಷ್ಟರಲ್ಲಿ ಹೋಂಡ ಆಕ್ಟಿವ ಸ್ಕೂಟರ್ ಸುಟ್ಟುಹೋಗಿರುತ್ತದೆ. ಇದರ ಬೆಲೆ ಸುಮಾರು 47,000/- ರೂ.ಗಳಾಗಿರುತ್ತದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 234/13 ಕಲಂ. 379 ಐ.ಪಿ.ಸಿ.

        ದಿನಾಂಕ: 29-05-2013 ರಂದು ಪಿರ್ಯಾದಿ ಆರ್.ಉದಯ ಕೇರಾಫ್. ಮಲ್ಲಣ್ಣ, 9ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ, ಸ್ವಂತ ಸ್ಥಳ ಮುತ್ತೇಗೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 28-05-2013 ರಂದು ರಾತ್ರಿವೇಳೆ ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ, ಫಿರ್ಯಾದಿಯವರ ಮನೆಯ ಮುಂಭಾಗದ ಬಳಿ ಯಾರೋ ಕಳ್ಳರು ಅವರ ಟಾಟಾ ಸುಮೋ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 2,20,000/- ರೂ.ಗಳಾಗಿರುತ್ತದೆ. ಸದರಿ ಕಾರಿನ ಮುಂಭಾಗ ಗ್ಲಾಸಿನ ಮೇಲೆ 'ಲಕ್ಷ್ಮಿನರಸಿಂಹಸ್ವಾಮಿ ಪ್ರಸನ್ನ' ಎಂತಲೂ ಕೆಳಗಡೆ 'ಪಿ.ಆರ್.ಕೆ.' ಎಂತಲೂ ಹಿಂಭಾಗದ ಗ್ಲಾಸ್ನ ಮೇಲೆ 'ನಿವೇದಿತ' ಮತ್ತು 'ಬೇಟಿ ಆಕಸ್ಮಿಕ, ನೆನಪು ನಿರಂತರ' ಎಂಬುದಾಗಿ ಇರುತ್ತದೆ. ಸದರಿ ಟಾಟಾ ಸುಮೋ ವಾಹನವನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 302 ಐ.ಪಿ.ಸಿ.

        ದಿನಾಂಕ: 29-05-2013 ರಂದು ಪಿರ್ಯಾದಿ ಶ್ರೀ ಚಂದ್ರ ಬಿನ್. ಲೇಟ್: ಸಿದ್ದಯ್ಯ, 35, ವ್ಯವಸಾಯ, ತಿರುಮಲಪುರ ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದಿನಾಂಕ: 29-05-2013 ರಂದು ರಾತ್ರಿ 08-00 ಗಂಟೆಯಲ್ಲಿ ಯಾರೋ ದುಷ್ಕಮರ್ಿಗಳು ನನ್ನ ತಾಯಿ ನಾಗಮ್ಮ ಕೋಂ ಲೇಟ್. ಸಿದ್ದಯ್ಯ, 65 ವರ್ಷ, ರವರ ಕುತ್ತಿಗೆಗೆ ಯಾವುದೋ ಹಗ್ಗದಿಂದ ಬಿಗಿದಿರುವ ಗುರುತು ಇರುತ್ತದೆ ನನ್ನ ತಾಯಿಯ ಮೈಮೇಲೆ ಇದ್ದ ಸುಮಾರು 25 ಗ್ರಾಂ ಚಿನ್ನದ  ಮಾಂಗಲ್ಯ ಚೈನ್,ತಾಳಿ ಹಾಗು ಬಿಳಿಕಲ್ಲಿ ವಾಲೆಯನ್ನು ಕಿತ್ತುಕೊಂಡು ಹೋಗಿರುತ್ತಾರೆ. ನನ್ನ ತಾಯಿಯನ್ನು ದುಷ್ಕರ್ಮಿಗಳು  ಕೊಲೆ ಮಾಡಿ ಹೋಗಿರುತ್ತಾರೆ. ಅದ್ದರಿಂದ  ನನ್ನ ತಾಯಿಯನ್ನು ಕೊಲೆ ಮಾಡಿರುವ ದುಷ್ಕಮರ್ಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ನನ್ನ ಹೇಳಿಕೆಯ ದೂರನ್ನು ನೀಡುರುತ್ತೇನೆ ಎಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಠಾಣಾ ಮೊ.ಸಂ.81/2013, ಕಲಂ. 302 ಐ.ಪಿ.ಸಿ. ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ : 

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 143-147-341-504-324-114 ಕೂಡ 149 ಐಪಿಸಿ ಕೂಡ 3 ಕ್ಲಾಸ್ (1) & (10) ಎಸ್.ಸಿ./ಎಸ್.ಟಿ. ಕಾಯ್ದೆ 1989 

 ದಿನಾಂಕ: 29-05-2013 ರಂದು ಪಿರ್ಯಾದಿ ಮಂಜುನಾಥ. ಜೆ  ಬಿನ್. ಜವರಯ್ಯ 28 ವರ್ಷ, ಪರಿಶಿಷ್ಟ ಜಾತಿ, ಕೂಲಿಕೆಲಸ, ವಾಸ:- ಗರುಡನಉಕ್ಕಡ ಗ್ರಾಮ,  ಕೆ. ಶೆಟ್ಟಹಳ್ಳಿ ಹೋ|  ಶ್ರೀರಂಗಪಟ್ಟಣ ತಾ|. ರವರ ಪಿರ್ಯಾದಿನ ಸಾರಾಂಶವೇನೆಂದರೆ ಆರೋಪಿ ಅಂಗಡಿಯ ಮಾಲೀಕ ಮಂಜ ಹಾಗು ಇತರ 5 ಜನರು ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ ಇವರುಗಳು ನಾನು ಟೀ ಕೊಡಲು ಕೇಳಿದ್ದಕ್ಕೆ, ನೀನು ಯಾವ ಊರು ಎಂದು ಕೇಳಿದ ನಾನು ಗರುಡನ ಉಕ್ಕಡ ಎಂದು ಹೇಳಿದೆ.  ಅದಕ್ಕೆ  ಅವನು ಗರುಡನ  ಉಕ್ಕಡದವರು ಪರಿಶಿಷ್ಠ  ಜನಾಂಗದವರು  ನಾನು ಟೀ ನಿನಗೆ  ಕೊಡುವುದಿಲ್ಲಾ  ಎಂದು  ಹೇಳಿದ,  ಅದಕ್ಕೆ ನಮಗೆ  ಟೀ  ಕೊಡಬಾರದೆಂದು ಹೇಳುತ್ತೀಯಾ ಇದು ಸರಿಯಲ್ಲಾ ಎಂದು ಹೇಳಿದೆ ಅದಕ್ಕೆ  ಡಾಬಾದ  ಮಂಜ ಎಂಬುವನು ಟೀ ಅಂಗಡಿಯ ಮಾಲೀಕನಿಗೆ  ಸಪೋರ್ಟ ಮಾಡಿದ್ದು ಜಾತಿ ನಿಂದನೆ ಮಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 28-05-2013


ಮಂಡ್ಯ ಜಿಲ್ಲೆಯಲ್ಲಿ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಂಚನೆ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  3 ವಾಹನ ಕಳವು/ಮರಳು ಕಳವು/ಸಾಮಾನ್ಯ ಕಳವು ಪ್ರಕರಣಗಳು ಹಾಗು ಇತರೆ 17 ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಇ. ಆಕ್ಟ. ಪ್ರಕರಣಗಳು ದಾಖಲಾಗಿರುತ್ತವೆ. 

ವಂಚನೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 264/13 ಕಲಂ. 420 ಐ.ಪಿ.ಸಿ.

ದಿನಾಂಕ: 28-05-2013 ರಂದು ಪಿರ್ಯಾದಿ ಸವಿತ ಕೋಂ. ರಾಮೇಗೌಡ, 30 ವರ್ಷ, ಗೃಹಿಣಿ, ಉರಮಾರಕಸಲಗೆರೆ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮತ್ತು ನಾದಿನಿ ಶಿಲ್ಪ ಹಾಗೂ ಅತ್ತೆ ಮೂರು ಜನರು ಮನೆಯ ಬಳಿ ಇರುವಾಗ ಇಬ್ಬರು ಸುಮಾರು 30 ರಿಂದ 35 ವರ್ಷ ವಯಸ್ಸಿನ ಗಂಡಸರು ಬಂದು ಚಿನ್ನ ಬೆಳ್ಳಿ ಪಾಲಿಸ್ ಮಾಡುವುದಾಗಿ ಹೇಳಿ ಮೊದಲು ಬೆಳ್ಳಿ ಕಾಲ್ ಚೈನನ್ನು ಪಾಲಿಶ್ ಮಾಡಿಕೊಟ್ಟು ನಂತರ ಮೂರು ಜನರ ಬಳಿ ಇದ್ದ ಒಂದು ಹಗ್ಗದ ಮಾದರಿಯ ಸುಮಾರು 25 ಗ್ರಾಂ ತೂಕದ ಚಿನ್ನದ ಸರ, ಒಂದು ಟೂಬ್ಲೈಟ್ ಮಾದರಿಯ ಚಿನ್ನದ ಸರ ಮತ್ತು ತಾಳಿ, ಎರಡು ಕಾಸು, ಎರಡು ಗುಂಡು ಸೇರಿ ಸುಮಾರು  35 ಗ್ರಾಂ ತೂಕದ ಮಾಂಗಲ್ಯ ಸರ,  ಒಂದು ಹಗ್ಗದ ಮಾದರಿಯ ಚಿನ್ನದ ಸರ ಮತ್ತು ತಾಳಿ, ಎರಡು ಕಾಸು, ಎರಡು ಗುಂಡು ಸೇರಿ ಸುಮಾರು 48 ಗ್ರಾಂ. ತೂಕದ ಮಾಂಗಲ್ಯ ಸರಗಳನ್ನು ಪಡೆದುಕೊಂಡು  ಕುಕ್ಕರ್ ಪ್ಲೇಟ್ ತರಿಸಿ ಅದರಲ್ಲಿ ಪೌಡರ್ ಹಾಕಿತೊಳೆದು  ನಂತರ ಕುಕ್ಕರ್ ಪ್ಲೇಟ್ಗೆ ಕೆಂಪು ಪೌಡರ್ ಮತ್ತು ಅರಿಸಿನ ಪುಡಿಯನ್ನು ಬೆರಸಿ ನೀರು ಕೆಂಪಾಗಾಯಿತು ಅದರಲ್ಲಿ ಚಿನ್ನದ ಸರಗಳನ್ನು ಹಾಕಿದ ನಂತರ ಅವರ ಕೈನಲ್ಲಿದ್ದ ಕಚರ್ಿಪಿನಿಂದ ಚಿನ್ನದ ಸರಗಳನ್ನು ವರಿಸುವರಂತೆ ನಾಟಕವಾಡಿ ಇವರು ಅವರುಗಳನ್ನು ನಂಬಿದ ನಂತರ ಕುಕ್ಕರನ್ನು ಅವರ ಕೈಗೆ ಕೊಟ್ಟು 10 ನಿಮಿಷ ಕಾಯಿಸಿ ಚಿನ್ನ ಪಾಲಿಸ್ ಆಗಿರುತ್ತದೆ ಎಂದು ಹೇಳಿದ್ದು ತಾವುಗಳು ಮನೆಯೊಳಗೆ ಹೋಗುವಷ್ಟರಲ್ಲಿ ತಾವು ತಂದಿದ್ದ ಬೈಕಿನಲ್ಲಿ ಇಬ್ಬರು ಹೊರಟು ಹೋಗಿದ್ದು  ಕುಕ್ಕರ್ ಒಳಗಡೆ ನೋಡಲಾಗಿ ಖಾಲಿ ಇದ್ದು, ತಮಗೆ ನಂಬಿಸಿ ಮೋಸ ಮಾಡಿ ಮೇಲ್ಕಂಡ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿರುತ್ತಾರೆ, ಮೇಲ್ಕಂಡ ಚಿನ್ನದ ಬೆಲೆ ಸುಮಾರು 2 ಲಕ್ಷ ರೂಗಳಾಗಿದ್ದು ಆರೋಪಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆೆ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 233/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 28-05-2013 ರಂದು ಪಿರ್ಯಾದಿ ಟಿ.ಹನುಮಂತ ಬಿನ್ ಲೇಟ್ ತಿಮ್ಮಯ್ಯ, 52 ವರ್ಷ, ಒಕ್ಕಲಿಗರು, ವಾಸ ಕೇರಾಫ್. ನಂದಿನಿಕುಮಾರ್ ನಿಲಯ, 2ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-05-2013 ರಂದು ಪಿರ್ಯಾದಿಯವರ ಮನೆ, 2ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿಯಿಂದ ಅವರ ಮಗಳು ಕೆ.ಹೆಚ್.ವರಲಕ್ಷ್ಮಿ @ ಬೇಬಿ ಎಂಬುವವಳು ಮನೆ ಪಾಠಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಇದುವರೆವಿಗೂ ತಮ್ಮ ಸಂಬಂಧಿಕರ ಮತ್ತು ಸ್ನೇಹಿತರ ಮನೆಗಳಲ್ಲಿ ವಿಚಾರಿಸಲಾಗಿ ಪತ್ತೆ ಆಗಿರುವುದಿಲ್ಲ ಅವಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 235/13 ಕಲಂ. ಹುಡುಗಿ  ಕಾಣೆಯಾಗಿದ್ದಾಳೆ.

       ದಿನಾಂಕ: 28-05-2013 ರಂದು ಪಿರ್ಯಾದಿ ಸರಸ್ವತಿ ಕೋಂ. ಹೆಚ್.ಎಂ.ರಾಜು, ಬಿಳಿಗೇಗೌಡ ರವರ ಮನೆ, 3ನೇ ಕ್ರಾಸ್, ಹಾಲಹಳ್ಳಿ , ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 27-05-2013 ರಂದು ರಾತ್ರಿ 09-00 ಗಂಟೆಯಲ್ಲಿ ಮಂಡ್ಯ ಸಿಟಿ, ಹಾಲಹಳ್ಳಿ, 3 ನೇ ಕ್ರಾಸ್ ನ,  ಪಿರ್ಯಾದಿಯವರು ವಾಸವಿರುವ  ಮನೆಯಿಂದ ದೀಪಿಕಾ ಬಿನ್. ಹೆಚ್.ಎಂ.ರಾಜು, 19 ವರ್ಷ, ವಕ್ಕಲಿಗರು, ಬಟ್ಟೆ ಅಂಗಡಿಯಲ್ಲಿ ಕೆಲಸ, ವಾಸ, 3 ನೇ ಕ್ರಾಸ್, ಹಾಲಹಳ್ಳಿ, ಮಂಡ್ಯ ಸಿಟಿ ರವರು ಅಂಗಡಿಯಿಂದ ಶಾಂಪೂ ತರಲು ಮನೆಯಿಂದ ಹೋದವಳು ನಂತರ ಮನೆಗೆ ವಾಪಸ್ಸು ಬರಲಿಲ್ಲಾ ನಾವು ಅಲ್ಲಿ ಇಲ್ಲಿ  ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲಾ ಕಾಣೆಯಾಗಿರುತ್ತಾಳೆ ಇವಳನ್ನು ಪತ್ತೆ  ಮಾಡಿಕೊಡಬೇಕೆಂದು ದೂರು ನೀಡಿರುತ್ತಾರೆ ಹಾಗು ನನಗೆ  ಚೇತನ ಎಂಬ ಹುಡುಗನ ಮೇಲೆ ಅನುಮಾನವಿರುತ್ತದೆ ಎಂಬ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 28-05-2013 ರಂದು ಪಿರ್ಯಾದಿ ಪ್ರದೀಪ ರಾವ್ ಶಿಂಧೆ ಬಿನ್. ದೇವರಾವ್ ಸಿಂಧೆ, ಬೂಕನಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಶಿಂಧೆ ಬಿನ್. ಧರ್ಮರಾವ್ ಶಿಂಧೆ, 18 ವರ್ಷ ರವರಿಗೆ ಸುಮಾರು 10-12 ವರ್ಷಗಳಿಂದ ಹೊಟ್ಟನೋವು ಬರುತ್ತಿದ್ದು ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ದಿನಾಂಕ: 28-05-2013 ರಂದು ಬೆಳಗ್ಗೆ 06-00 ಗಂಟೆಯಲ್ಲಿ ಹೊಟ್ಟೆನೋವು ಜಾಸ್ತಿಯಾಗಿ ನೋವಿನ ಬಾಧೆಯನ್ನು ತಾಳಲಾರದೇ ತೋಟದ ಗಿಡಕ್ಕೆ ಹೊಡೆಯಲು ತಂದು ಇಟ್ಟಿದ್ದ ಯಾವುದೋ ಕ್ರಿಮಿನಾಶಕ ಔಷದಿಯನ್ನು ಹೊಟ್ಟೆನೋವಿನ ಔಷಧಿ ಎಂದು ತಿಳಿದು ಆಕಸ್ಮಿಕವಾಗಿ ಕುಡಿದು ಒದ್ದಾಡುತ್ತಿದ್ದಾಗ ಆಂಬುಲೆನ್ಸ್ನಲ್ಲಿ ಕೆ.ಆರ್.ಪೇಟೆ ಆಸ್ಪತ್ರೆಗೆ ತರುವಾಗ ನಮ್ಮ ತಂದೆ ದೇವರಾವ್ಸಿಂಧೆ ರವರು ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2.ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 28-05-2013 ರಂದು ಪಿರ್ಯಾದಿ ಗಿರೀಶ್ನಾಯಕ ಬಿನ್. ಲೇಟ್. ಮಾದುನಾಯಕ, 30ವರ್ಷ, ಕೂಲಿ ಕೆಲಸ, ಸೋಲಿಗರದೊಡ್ಡಿ, ಹಲಗೂರು ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಾವ ವೆಂಕಟನಾಯಕ ಬಿನ್. ಲೇಟ್. ಕೃಷ್ಣನಾಯಕ್, ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರ, ಸೋಲಿಗರ ದೊಡ್ಡಿ ಗ್ರಾಮರವರಿಗೆ  ಹಿಂದಿನಿಂದಲೂ ಆಗಾಗ್ಗೆ ಹೊಟ್ಟೆ ನೋವು ಬರುತಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಹೊಟೆನೋವು ವಾಸಿಯಾಗದೆ ಇದ್ದು ದಿನಾಂಕ: 22-05-2013 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಮನೆಯಲ್ಲಿದ್ದ ಕ್ರಿಮಿನಾಶಕವನ್ನು ಔಷದಿ ಎಂದು ತಿಳಿದು ಆಕಸ್ಮಿಕವಾಗಿ ಕುಡಿದಿದ್ದು, ಪಿರ್ಯಾದಿಯವರು ವೆಂಕಟನಾಯಕರವರನ್ನು ದಿನಾಂಕ 22-05-2013 ರಂದು ಹಲಗೂರು ಆಸ್ಪತ್ರೆಗೆ ತೋರಿಸಿ, ನಂತರ ಮಳವಳ್ಳಿ ಆಸ್ಪತ್ರೆಗೆ ತೋರಿಸಿ, ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲುಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-05-2013 ರ ರಾತ್ರಿ 09-30 ಗಂಟೆ ಸಮಯದಲ್ಲಿ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಿ ಎಂದು ಕೊಟ್ಟ ಲಿಖಿತ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತೆ.


ವಾಹನ ಕಳವು/ಮರಳು ಕಳವು/ಸಾಮಾನ್ಯ ಕಳವು ಪ್ರಕರಣಗಳು :

1.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 236/13 ಕಲಂ. 379 ಐ.ಪಿ.ಸಿ.

ದಿನಾಂಕ: 28-05-2013 ರಂದು ಪಿರ್ಯಾದಿ ಹೆಚ್.ಸಿ ಅಭಿಷೇಕ್ ಬಿನ್. ಚಿಕ್ಕೇಗೌಡ, 5ನೇ ಕ್ರಾಸ್, ಹಾಲಹಳ್ಳಿ ಸ್ಕೂಲ್ ರಸ್ತೆ, ಮಂಡ್ಯಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ 23-05-2013 ರ ರಾತ್ರಿ 09-00 ರಿಂದ 09-30 ಗಂಟೆಯಲ್ಲಿ, ಮಂಡ್ಯ ಸಿಟಿ ಎಸ್.ಎಫ್. ಸರ್ಕಲ್ ಹತ್ತಿರವಿರುವ ವಿಜಯಾನಂದ ಮಿಲ್ಟ್ರಿ ಹೋಟೆಲ್ ಮುಂದೆ ಅವರ ಬೈಕ್. ನಂ. ಕೆ.ಎ.11 ಎಸ್.7665 ರ ಹೀರೊಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ನಿಲ್ಲಿಸಿ ಬೀಗ ಹಾಕಿ ಹೋಟೆಲ್ ಗೆ ಊಟಕ್ಕೆ ಹೋದೆನು. ಅದೇ ರಾತ್ರಿ ವಾಪಸ್ಸು 09-30 ಗಂಟೆಗೆ ಊಟ ಮುಗಿಸಿ ನನ್ನ ಬೈಕ್ ನಿಲ್ಲಿಸಿದ ಸ್ಥಳಕ್ಕೆ ನೋಡಲು ನನ್ನ ಬೈಕ್ ಇರಲಿಲ್ಲ, ನಾನು ಯಾರೋ ಮಿಸ್ಸಾಗಿ ತೆಗೆದುಕೊಂಡು ಹೋಗಿರಬಹುದೆಂದು ಇದುವರೆಗೂ ಕಾದು ಎಲ್ಲಾ ಕಡೆಗಳಲ್ಲಿ ಹುಡುಕಿ ನೋಡದೆನು. ಸಿಕ್ಕಿರುವುದಿಲ್ಲ.  ಆದ್ದರಿಂದ ಯಾರೋ ಕಳ್ಳರು ನನ್ನ ಬೈಕನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ. 

2. ಹಲಗೂರು ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 188-379 ಐ.ಪಿ.ಸಿ.

ದಿನಾಂಕ: 28-05-2013 ರಂದು ಪಿರ್ಯಾದಿ .ಸಿ.ಶ್ರೀಕಂಠಸ್ವಾಮಿ ಗ್ರಾಮ ಲೆಕ್ಕಿಗರು. ತಾಃ ಕಛೇರಿ. ಮಳವಳ್ಳಿ ತಾಃ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 28-05-2013 ರಂದು ರಾತ್ರಿ 09-25 ಗಂಟೆ ಸಮಯದಲ್ಲಿ ಕನಕಪುರ-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಪಿರ್ಯಾದಿಯವರು ತಮ್ಮ ಸಿಬ್ಬಂದಿಯವರ ಜೊತೆ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಬಗ್ಗೆ ಪುರದದೊಡ್ಡಿ ಗೇಟ್ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ  ನಂ. ಕೆಎ-10-7789 ಲಾರಿಯ ಚಾಲಕ ಮತ್ತು ಮಾಲೀಕ ಇವರುಗಳು ನಂ. ಕೆಎ-18.-ಎ-1921 & ಕೆಎ-17-ಎ-7555 ಕ್ಯಾಂಟರ್ ವಾಹನದ ಚಾಲಕರು ಮತ್ತು ಮಾಲೀಕರುಗಳು, ಹೆಸರು ವಿಳಾಸ ತಿಳಿಯಬೇಕಾಗಿದೆ ಇವರುಗಳು ಅಕ್ರಮವಾಗಿ ಕಳ್ಳತನದಿಂದ ಯಾವುದೇ ಪರವಾನಗೆಯನ್ನು ಹೊಂದದೆ ಮರಳನ್ನು ಕದ್ದು ಸಾಗಿಸುತ್ತಿದ್ದವರನ್ನು ಹಿಡಿದು ವಿಚಾರ ಮಾಡಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿ ವಾಹನದ ಚಾಲಕರುಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿರುತ್ತಾರೆ ಸದರಿ ವಾಹನದ ಚಾಲಕರು ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 343/13 ಕಲಂ. 379 ಐ.ಪಿ.ಸಿ.

ದಿನಾಂಕ: 28-05-2013 ರಂದು ಪಿರ್ಯಾದಿ ಕುಮಾರ ಬಿನ್. ತಿಮ್ಮೇಗೌಡ, 26 ವರ್ಷ, ಒಕ್ಕಲಿಗರು, ವ್ಯವಸಾಯ, ಗೌಡಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 28-05-2013 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ, ಶ್ರೀರಂಗಪಟ್ಟಣ ತಾಲ್ಲೋಕು, ಶ್ರೀರಾಂಪುರ ಗ್ರಾಮದ ಚೌಡೇಶ್ವರಿ ಜಲ್ಲಿ ಕ್ರಷರ್ ಬಳಿ ಪಿರ್ಯಾದಿಯವರು ಮತ್ತು ಅವರ ಸ್ನೇಹಿತಿ ಭರತೇಶ ರವರು ಶ್ರೀರಾಂಪುರ ಬಳಿ ಇರುವ ಚೌಡೇಶ್ವರಿ ಜಲ್ಲಿ ಕ್ರಷರ್ ಬಳಿ ನನ್ನ ಬಾಬ್ತು ಮೋಟರ್ ಸೈಕಲ್ನಲ್ಲಿ ಹೋಗುತ್ತಿದ್ದಾಗ ಆರೋಪಿ ಪ್ರಸನ್ನ ಬಿನ್ ಪುಟ್ಟಯ್ಯ, 36 ವರ್ಷ, ಇತರೆ 3 ಜನರು ಗಣಂಗೂರು ಗ್ರಾಮ, ಎಲ್ಲರೂ ಶ್ರೀರಂಗಪಟ್ಟಣ ತಾಲ್ಲೋಕು ರವರುಗಳು ಚೌಢೇಶ್ವರಿ ಜಲ್ಲಿ ಕ್ರಷರ್ ನಿಂದ ಕೆ.ಎ-11-8250 ಟಾಟಾ-ಏಸ್ ಆಪೇ ಆಟೋದಲ್ಲಿ ಸುಮಾರು 16,000/- ರೂ. ಬೆಲೆ ಬಾಳುವ ಕಬ್ಬಿಣದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದು ಆಟೋದಿಂದ ಮನು, ಪ್ರಸನ್ನ ಮತ್ತು ಚಂದ್ರು ರವರುಗಳು ಓಡಿ ಹೋಗಿದ್ದು ಪುಟ್ಟಯ್ಯನ ಪ್ರಸನ್ನ ರವರನ್ನು ಹಿಡಿದು ಕೊಂಡು ಬಂದು ಈ ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 27-05-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-05-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  4 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 15 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಇ. ಆಕ್ಟ್ ಪ್ರಕರಣಗಳು ವರದಿಯಾಗಿರುತ್ತವೆ.  

ಕಳ್ಳತನ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 137/13 ಕಲಂ. 457-380 ಐ.ಪಿ.ಸಿ.

ದಿನಾಂಕ:27-05-2013 ರಂದು ಪಿರ್ಯಾದಿ ಪರಮೇಶ್ ಬಿನ್. ಶಿವರುದ್ರಪ್ಪ ಟಿ. ಕಾಗೇಪುರ ಗ್ರಾಮ, ಮಳವಳ್ಳಿ ತಾಲ್ಲೂಕುರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:25-05-2013 ರಂದು ರಾತ್ರಿ ವೇಳೆಯಲ್ಲಿ ಅವರ ಬಾಬ್ತು ಭುವನೇಶ್ವರಿ ಪೇಂಟ್ಸ್ ಮತ್ತು ಹಾರ್ಡ್ ವೇರ್ ಅಂಗಡಿಯಲ್ಲಿ ಯಾರೋ ಕಳ್ಳರು ಅಂಗಡಿಯ ಶೆಲ್ಟರನ್ನು ಹೊಡೆದು ಸುಮಾರು 38000/- ರೂ. ನಗದು ಹಣವನ್ನು ಕಳವು ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 138/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕಃ 27-05-2013 ರಂದು ಪಿರ್ಯಾದಿ ಎಂ ಕರಿಯಪ್ಪ ಬಿನ್. ಯಾಮಗಿರಿಗೌಡ, ಎಂ. ಬಸವಪುರ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 26-05-2013 ರಂದು ಮದ್ಯಾಹ್ನ 03-00 ಗಂಟೆ ಸಮಯದಲ್ಲಿ ಮಳವಳ್ಳಿ ಟೌನ್ ನ, ಕೆ. ಸರ್ಕಲ್ ಬಳಿ ಪಿರ್ಯಾದಿಯವರ ಮಗ ಕೆ. ಚಿಕ್ಕರಾಜು ಬಿನ್ ಕರಿಯಪ್ಪ, 15 ವರ್ಷ ಎಂಬುವವನು ಮಳವಳ್ಳಿಗೆ ಜೆರಾಕ್ಸ್ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 162/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕಃ 27-05-2013 ರಂದು ಪಿರ್ಯಾದಿ ಶಿವಣ್ಣ ಬಿನ್. ತಿರುಮಲಯ್ಯ, 48ವರ್ಷ, ಗೊಲ್ಲರು, ವ್ಯವಸಾಯ, ವಾಸ ಹೊಸಕ್ಕಿಪಾಳ್ಯಗ್ರಾಮ, ಬೆಳ್ಳೂರು ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 25-05-2013 ರಂದು ಸಂಜೆ 05-00 ಗಂಟೆಯಲ್ಲ್ಲಿ ಹೊಸಕ್ಕಿಪಾಳ್ಯದಿಂದ ಸುನೀತ. ಹೆಚ್.ಎಸ್. ಬಿನ್. ಲೇಟ್. ತಿರುಮಲಯ್ಯ, 20 ವರ್ಷ ರವರು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆವಿಗೂ ಬಾರದ ಕಾರಣ ಎಲ್ಲಾ ಕಡೆ  ಹುಡುಕಾಡಿದೆವು. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 231/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

       ದಿನಾಂಕಃ 27-05-2013 ರಂದು ಪಿರ್ಯಾದಿ ಕರೀಗೌಡ ಬಿನ್. ಲೇಟ್. ಜವರೇಗೌಡ, ತಂಗಳಗೆರೆ ಗ್ರಾಮ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 25-05-2013 ರಂದು 09-30 ಪಿ.ಎಂ. ನಲ್ಲಿ, ಆರ್.ಎ.ಪಿ.ಸಿ.ಎಂ.ಎಸ್. ಸೊಸೈಟಿಯ ಪೆಟ್ರೋಲ್ ಬಂಕ್ ಬಳಿಯಿಂದ ಟಿ.ಕೆ.ಗಿರೀಶ ಬಿನ್. ಕರೀಗೌಡ, 25 ವರ್ಷ, ಒಕ್ಕಲಿಗರು ರವರನ್ನು ಹುಲಿವಾನಕ್ಕೆ ಹೋಗು ಅಂತ ಹೇಳಿ ಲೊಕೇಶನನ್ನು ಕಳುಹಿಸಿದ್ದು ಇದುವರೆಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಆತನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮದ್ದೂರು ಪೊಲೀಸ್ ಠಾಣೆ ಮೊ.ನಂ. 245/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

ದಿನಾಂಕಃ 27-05-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ಸೋಮಶೇಖರ, ಬಿದರಕೋಟೆ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16-05-2013 ರಂದು ಸಂಜೆ 05-45 ಗಂಟೆಯಲ್ಲಿ, ಶಾಯಿ ಗಾಮರ್ೆಂಟ್ಸ್ ನಿಂದ ಸೌಜನ್ಯ ಬಿ.ಎಸ್ ಬಿನ್. ಸೋಮಶೇಖರ, 20 ವರ್ಷ ಎಂಬುವವರು ಕೆಲಸ ಮುಗಿದ ನಂತರ ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಇದುವರೆವಿಗೂ ನೆಂಟರ ಮತ್ತು ಆಕೆಯ ಸ್ನೇಹಿತೆಯರ ಊರು ಮತ್ತು ಮನೆಗಳಲ್ಲಿ ಹುಡುಕಿದರೂ ಸಹ ಸಿಕ್ಕಿರುವುದಿಲ್ಲ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 232/13 ಕಲಂ. 379 ಐ.ಪಿ.ಸಿ.

   ದಿನಾಂಕಃ 27-05-2013 ರಂದು ಪಿರ್ಯಾದಿ ಎಸ್.ಸುರೇಶ ಬಿನ್. ಸಿದ್ದಶೆಟ್ಟಿ, 37 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16-02-2013 ರಂದು 02-30 ಗಂಟೆಯಿಂದ 03-00 ಪಿಎಂ ನಲ್ಲಿ, ಶ್ರೀಅನ್ನ ಪೂಣರ್ೇಶ್ವರಿ ದೇವಸ್ಥಾನದ ತಮ್ಮ ಬಾಬ್ತು ಕೆಎ-03-ಇಎಕ್ಸ್-8248 ನಂಬರಿನ ಟಿವಿಎಸ್ ಎಕ್ಸೆಲ್ ಹೆವಿ ಡ್ಯೂಟಿ ಮೊಪೆಡನ್ನು ಮಂಡ್ಯದ ವಿದ್ಯಾನಗರದಲ್ಲಿರುವ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ಮುಂಭಾಗ ಬೀಗ ಹಾಕಿ ನಿಲ್ಲಿಸಿ ದೇವಸ್ಥಾನದ ಒಳಗಡೆ ಹೋಗಿ ಪೂಜೆ ಮುಗಿಸಿಕೊಂಡು ನಂತರ ವಾಪಸ್ಸು ನೋಡಲಾಗಿ ಮೊಪೆಡ್ ಇರಲಿಲ್ಲ ಯಾರೋ ಕಳವು ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 246/13 ಕಲಂ. 498(ಎ)-323-324-504-506 ಕೂಡ 34 ಐ.ಪಿ.ಸಿ.

      ದಿನಾಂಕಃ 27-05-2013 ರಂದು ಪಿರ್ಯಾದಿ ಮೀನಾ ಕೋಂ. ರಮೇಶ, ವಳಗೆರೆಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ರಮೇಶ ಹಾಗು ಇತರೆ 4 ಜನರು ಪಿರ್ಯಾದಿಯವರಿಗೆ ಕಾಲಿನಿಂದ ಹೊಟ್ಟೆಯ ಭಾಗಕ್ಕೆ ತುಳಿದು ಮನೆಯಿಂದ ಹೊರಗೆ ಎಳೆದು ಹಾಕಿ ಮತ್ತೆ ಮನೆಗೆ ಬರಬೇಡ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 279-304(ಎ) ಕೂಡ 187 ಐ.ಎಂ.ವಿ. ಆಕ್ಟ್. 

      ದಿನಾಂಕಃ 27-05-2013 ರಂದು ಪಿರ್ಯಾದಿ ಚಿಕ್ಕಣ, ಸಿಂಗ್ರಿಗೌಡನ ಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ಕಎ-11-ಎ-4997 ವಾಹನದ ಚಾಲಕ, ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ತಮ್ಮ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯ ಅಕ್ಕನ ಮಗನ ಪಲ್ಸರ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಜವರೇಗೌಡ ಎಂಬುವವರು ಮೃತಪಟ್ಟಿರುತಾನೆಂದು ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 26-05-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-05-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  1 ವಾಹನ ಕಳವು ಪ್ರಕರಣ,  2 ರಸ್ತೆ ಅಪಘಾತ ಪ್ರಕರಣಗಳು ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. ಹುಡುಗಿ ಕಾಣೆಯಾದ ಪ್ರಕರಣ.

ದಿನಾಂಕ: 26-05-2013  ರಂದು ಪಿರ್ಯಾದಿ ಶಿವಲಿಂಗೇಗೌಡ, ಜವರೇಗೌಡ, ತಿಪ್ಪಾಪುರ ಗ್ರಾಮ, ದುದ್ದಾ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನನ್ನ ಮಗಳು ಕೆಲಸ ಮಾಡುವ ಚಾಕಿ ಕೇಂದ್ರದಲ್ಲಿ ವಿಚಾರ ಮಾಡಲಾಗಿ ಅಲ್ಲೆ ಕೆಲಸ ಮಾಡುತ್ತಿದ್ದ ಸುನಿಲ್ ಎಂಬುವನು ಸಹ ಕೆಲಸಕ್ಕೆ ಬರುತ್ತಿಲ್ಲ ಎಂದು ತಿಳಿದು ಬಂತು.  ನನಗೆ ನನ್ನ ಮಗಳು ಕಾಣೆಯಾಗಿರುವ ಬಗ್ಗೆ ಬೆಸಗರಹಳ್ಳಿ  ಸುನಿಲ್ ಎಂಬುವವನ ಮೇಲೆ ಅನುಮಾನ ಇರುತ್ತದೆ. ನನ್ನಮಗಳು ಇಲ್ಲಿಯವರೆಗೂ ಸಹ ಮನೆಗೆ ಬರದಿದ್ದ ಕಾರಣ ಹಾಗೂ ನಾವು ಹುಡುಕಿದರೂ ಸಿಗದಿದ್ದ ಕಾರಣ ಈ ದಿನ ತಡವಾಗಿ ತಮ್ಮ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ ಎಂದು ನೀಡಿದ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 136/13 ಕಲಂ. 379 ಐ.ಪಿ.ಸಿ.

ದಿನಾಂಕ:26-05-2013  ರಂದು ಪಿರ್ಯಾದಿ ಬಸವರಾಜು ಬಿನ್. ಲೇಟ್. ಬಸಪ್ಪ, ಗೌಡಗೆರೆ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 24-05-2013ರಂದು  ಮದ್ಯಾಹ್ನ 02-00 ಗಂಟೆಯಲ್ಲಿ ಮಳವಳ್ಳಿ ಟೌನ್ ಆಸ್ಪತ್ರೆಯ ಆವರಣದಲ್ಲಿ ಪಿರ್ಯಾದಿಯವರ ಬಾಬ್ತು ಮೊಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಹುಡುಕಲಾಗಿ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 115/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಕಾಯ್ದೆ.

ದಿನಾಂಕ:26-05-2013  ರಂದು ಪಿರ್ಯಾದಿ ಕೆ.ಎಂ. ದಿನೇಶ ಬಿನ್. ಲೇಟ್. ಮರಿಯಪ್ಪ, 41ವರ್ಷ, ಪರಿಶಿಷ್ಠ ಜಾತಿ, ಅಂಬೇಡ್ಕರ್ ಬಡಾವಣೆ, ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ.-17-ಎ-1344 ಎಸ್ಎಲ್ಎನ್ ಬಸ್ ಚಾಲಕ.ಬಸ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸರ್ವೋದಯ ಕಾಲೇಜ್ ಕಡೆಯಿಂದ ರಸ್ತೆಗೆ ಬರುತ್ತಿದ್ದ ಹುಡುಗನಿಗೆ  ಬಸ್ ಡಿಕ್ಕಿಪಡಿಸಿದ್ದು  ಹುಡುಗ ಮತ್ತು ಆತನು ತಳ್ಳಿಕೊಂಡು ಬರುತ್ತಿದ್ದ ಟಿವಿಎಸ್. ಮೇಲೆ ಹರಿದ ಕಾರಣ ಟಿವಿಎಸ್ ಜಖಂಗೊಂಡು ಹುಡುಗನ ದೇಹದ ಮೇಲೆ ಬಸ್ ಹರಿದು ಹುಡುಗ ಸ್ಥಳದಲ್ಲಿಯೇ ಮೃತ ಹೊಂದಿರುತ್ತಾನೆಂದು ಸದರಿ ಬಸ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 166/13 ಕಲಂ. 279-304[ಎ] ಐಪಿಸಿ ಕೂಡ 187 ಐಎಂವಿ ಕಾಯ್ದೆ.

ದಿನಾಂಕ:26-05-2013  ರಂದು ಪಿರ್ಯಾದಿ ಸಂತೋಷ ಪಿ. ಬಿನ್. ಪಂಚಲಿಂಗಯ್ಯ, ಮಣಿಗೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 25-05-2013 ರಂದು 6-40 ರಸ್ತೆಯ ಹೆಬ್ಬಳದಿಂದ ಹಿಂದೆ , ಮದ್ದೂರು ಯಾವುದೋ ವಾಹನ ಅತೀವೇಗ ಅಜಾಗರೂಕತೆಯಿಂದ ಬಂದು ಮೃತ ಪಂಚಲಿಂಗಯ್ಯನ ಬೈಕ್ಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಾಗಿರುತ್ತೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 25-05-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-05-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಪಹರಣ ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಕೆ.ಪಿ. ಆಕ್ಟ್ ಪ್ರಕರಣಗಳು ವರದಿಯಾಗಿರುತ್ತವೆ. 


ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

1. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 114/13 ಕಲಂ. 307-498(ಎ) ಐಪಿಸಿ ರೆವಿ 3 & 4 ಡಿ.ಪಿ. ಕಾಯ್ದೆ..

ದಿನಾಂಕ: 25-05-2013 ರಂದು ರಾತ್ರಿ 09-00 ಗಂಟೆಯಲ್ಲಿ ಕೆಂಚೇಗೌಡ ಬಿನ್ ಲೇ. ಬೊಚ್ಚೇಗೌಡ, 65ವರ್ಷ, ವ್ಯವಸಾಯ, ಹುಲಿಕೆರೆ ಗ್ರಾಮ, ದುದ್ದ ಹೋ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1) ಪರಮೇಶ ಬಿನ್ ಚಿಕ್ಕಯ್ಯ, 2] ಚಿಕ್ಕಯ್ಯ, 3] ಹೊಂಬಾಳಮ್ಮ ಕೋಂ. ಚಿಕ್ಕಯ್ಯ - ಎಲ್ಲರೂ ಕೋಡಿದೊಡ್ಡಿ ಗ್ರಾಮ, . ಕೊಪ್ಪ ಹೋ. ಮದ್ದೂರು ತಾ. ರವರು ವರದಕ್ಷಿಣೆ ಹಣವನ್ನು ಕೊಟ್ಟಿಲ್ಲ ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ್ಲ ಫೋನ್ ಮಾಡಿ ನಿಮ್ಮ ರಶ್ಮಿಕಳು ವಿಷ ಕುಡಿದಿದ್ದು ಮಂಡ್ಯ ಜಿಲ್ಲಾ ಆಸ್ಪತ್ತೆಗೆ ತಂದು ಸೇರಿಸಿರುತ್ತೇವೆ ಎಂದು ಹುಡುಗನ ತಂದೆ ಚಿಕ್ಕಯ್ಯನವರು ನಮಗೆ ಫೋನ್ ಮಾಡಿ ತಿಳಿಸಿದರು. ನಂತರ ನಾವುಗಳು ಜಿಲ್ಲಾಸ್ಪತ್ರೆಗೆ ಬಂದು ರಶ್ಮಿಕ್ಳನ್ನು ನೋಡಿದೆವು. ಆಕೆಗೆ ಪ್ರಜ್ಞೆ ಇಲ್ಲದೇ ಮಾತನಾಡುತ್ತಿರಲಿಲ್ಲ. ರಾತ್ರಿ ವಿಷ ಕುಡಿದು ಒದ್ದಾಡುತ್ತಿದ್ದಳು. ಅವಳನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸುತ್ತಿದ್ದೇವೆ ಎಂದು ಹೇಳಿದರು. ಆದರೆ ರಶ್ಮಿಕ್ ಕತ್ತಿನಲ್ಲಿ ಮುಖದ ಮೇಲೆ ಗಾಯವಾಗಿರುವ ಗುರುತುಗಳು ಇದ್ದವು. ಯಾವುದೋ ಹಗ್ಗದಿಂದ ಬಿಗಿದು ಸಾಯಿಸಲು ಪ್ರಯತ್ನಿಸಿದ್ದು ನಮಗೆ ಅನುಮಾನವಿದ್ದು, ನನ್ನ ಮಗಳಾದ ರಶ್ಮಿಕ್ಗಳಿಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿ ವಿಷ ಕುಡಿಸಿಯೋ ಸಾಯಿಸಲು ಪ್ರಯತ್ನಿಸಿರುವ ರಶ್ಮಿಕಳ ಗಂಡ ಆಕೆಯ ಮಾವ ಹಾಗೂ ಅತ್ತೆಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 498(ಎ)-323-506 ಕೂಡ 34 ಐ.ಪಿ.ಸಿ.

ದಿನಾಂಕ: 25-05-2013 ರಂದು ಪಿರ್ಯಾದಿ ಪೂಣರ್ಿಮ, ಕೋಂ. ಶಿವಶಂಕರ್, ಹಾಗನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಈಗ್ಗೆ 13 ವರ್ಷದ ಹಿಂದೆ ಶಿವಶಂಕರ ಎಂಬುವವರ ಜೊತೆ ವಿವಾಹವಾಗಿದ್ದು, ನನಗೆ ಒಂದು ಗಂಡು ಮತ್ತು ಒಂದು ಗೆಣ್ಣು ಮಗು ಇರುತ್ತದೆ, ಮದುವೆ ಕಾಲದಲ್ಲಿ ವರೋಪಚಾರವಾಗಿ ನೀಡಿದಂತಹ ಚಿನ್ನವನ್ನೆಲ್ಲ ಮಾರಿಕೊಂಡು ದಿನವೆಲ್ಲಾ ಕುಡಿದು ಹೊಡೆಯುವುದು ಮಾನಸಿಕ ಹಿಂಸ ನೀಡುವುದು ಮಾಡಿರುತ್ತಾರೆ ಇದಕ್ಕೆ ನಮ್ಮ ಆರೋಪಿಗಳಾದ ಗಂಡ ಶಿವಶಂಕರ ಮಾವ ನಿಂಗಪ್ಪ, ಅತ್ತೆ ರತ್ನಮ್ಮ, ಮತ್ತು ನಾದಿನಿ ಮೀನಾ ಇಲ್ಲರೂ ಹಾಗನಹಳ್ಳಿ ಗ್ರಾಮರವರುಗಳು ಸಪೋ ಟರ್್ ಮಾಡಿರುತ್ತಾರೆ ಈ ದಿನ ಹಣದ ವಿಷಯಕ್ಕೆ ಜಗಳ ತೆಗೆದು ನನ್ನ ಗಂಡ ಮಾವ ಅತ್ತೆ ನಾದಿನಿ ಎಲ್ಲ ಸೇರಿಕೊಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಪಹರಣ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 260/13 ಕಲಂ. 366(ಎ) ಐ.ಪಿ.ಸಿ.

         ದಿನಾಂಕ: 25-05-2013 ರಂದು ರಾತ್ರಿ 09-00 ಗಂಟೆಯಲ್ಲಿ ಪಿರ್ಯಾದಿ ಮಂಜುಳ ಬಿನ್. ಸೋಮಣ್ಣ, ಸಾತನೂರು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಗುರು, 2] ಮಹದೇವ, ಇಬ್ಬರೂ ಮಂಡ್ಯ ಸಿಟಿ ರವರುಗಳು ಪಿರ್ಯಾದಿಯವರ 17 ವರ್ಷದ ಮಗಳನ್ನು ಬಲವಂತವಾಗಿ ಗುರು ಎಂಬುವವನು ಕೈ ಹಿಡಿದು ಸ್ಕೂಟರ್ ನ, ಮಧ್ಯದಲ್ಲಿ ಕೂರಿಸಿಕೊಂಡು ಅಪಹರಣ ಮಾಡಿಕೊಂಡು ಮಂಡ್ಯದ ಕಡೆಗೆ ಹೊರಟು ಹೋದರು. ಆಗ ನಾನು ನಮ್ಮ ಅಲ್ಲೇ ಇದ್ದ ನಮ್ಮ ಗ್ರಾಮದ ನಾಗಣ್ಣ, ಮತ್ತು ಅವರ ಮಗ ರಾಜು ಮೂವರೂ ಕೂಗಿಕೊಂಡು ಓಡಿ ಹಿಂಬಾಲಿಸಿಕೊಂಡು ಹೋದೆವು. ಆದರೂ ಸ್ಕೂಟರ್ನಲ್ಲಿ ಜೋರಾಗಿ ಹೊರಟು ಹೋದರು ನನ್ನ ಮಗಳನ್ನು ಬಲವಂತವಾಗಿ ಸ್ಕೂಟರ್ ಮೇಲೆ ಕೂರಿಸಿಕೊಂಡು ಅಪಹರಣ ಮಾಡಿಕೊಂಡು ಹೋದ ಗುರು ಮತ್ತು ಮಹದೇವ ಎಂಬುವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಪ್ರಾರ್ಥನೆ.


ಯು.ಡಿ.ಆರ್. ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.

       ದಿನಾಂಕ: 25-05-2013 ರಂದು ಪಿರ್ಯಾದಿ ರತ್ನಮ್ಮ ಕೊಂ. ರಮೇಶ, ಹರಿಹರಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಅತ್ತೆ ಸರೋಜಮ್ಮ ಹರಿಹರಪುರಕ್ಕೆ ಬಂದಿದ್ದು ದಿನಾಂಕ:24-05-2013ರಂದು ಬೆಳಗ್ಗೆ 10-00 ಗಂಟೆಯಲ್ಲಿ ಸ್ನಾನಮಾಡಲೆಂದು ನೀರು ಒಲೆಗೆ ಬೆಂಕಿ ಹಾಕಲು ಸೀಮೆಎಣ್ಣೆಯನ್ನು ಹಾಕಿ ಬೆಂಕಿಹಾಕುವಾಗ ಸೀರೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಮುಖ, ಕೈ, ಬೆನ್ನಿಗೆ ಸುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 24-05-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-05-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  3 ಕಳ್ಳತನ/ಕಳವು ಪ್ರಕರಣಗಳು,   1 ಅಪಹರಣ ಪ್ರಕರಣ,  1 ಪ್ರಿವೆನ್ಸನ್ ಆಫ್ ಕೌ ಸ್ಲಾಟರ್ ಆಕ್ಟ್ & ಕ್ಯಾಟಲ್ ಪ್ರಿಸರ್ವೇಷನ್ ಆಕ್ಟ್ ಮತ್ತು ಕ್ರುಯಲ್ಟಿ ಟು  ಅನಿಮಲ್ಸ್ ಆಕ್ಟ್,  2 ರಸ್ತೆ ಅಪಘಾತ ಪ್ರಕರಣಗಳು,  1 ರಾಬರಿ ಪ್ರಕರಣ ಹಾಗು ಇತರೆ 12 ಐ.ಪಿ.ಸಿ./ಸಿ.ಆರ್.ಪಿ.ಸಿ ಪ್ರಕರಣಗಳು ವರದಿಯಾಗಿರುತ್ತವೆ.  
 

ಮನುಷ್ಯ ಕಾಣೆಯಾದ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 193/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 24-05-2013 ರಂದು ಪಿರ್ಯಾದಿ ದ್ಯಾಮಣ್ಣ ಬಿನ್. ದೇವಪ್ಪ, ಚಿನಕುರಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ ಹೆಂಡತಿ ರತ್ನಳು ಕೂಢ ಸತೀಶನ ಜೊತೆ ಹೋಗಿರಬಹುದೆಂದು ನಮಗೆ ಸಂಶಯ ಇರುತ್ತದೆ. ನನ್ನ ಹೆಂಡತಿ ಮನೆಯಿಂದ ಹೋಗುವಾಗ ತಾಳಿ ಕಾಲುಂಗುರ ಬಿಚ್ಚಿ ಮನೆಯಲ್ಲೇ ಇಟ್ಟು ಉಟ್ಟ ಬಟ್ಟೆಯಲ್ಲಿ ಏನು ತೆಗೆದುಕೊಂಡು ಹೋಗದೆ ಮನೆಯಿಂದ ಹೊರಟು ಹೋಗಿರುತ್ತಾಳೆ ಕಾಣೆಯಾಗಿರುವ ನನ್ನ ಹೆಂಡತಿ ರತ್ನಳನ್ನು ಹುಡುಕಿಸಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಸ್ವಾಮಿ, ಹೆಚ್ಸಿ-133, ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಕೆ.ಆರ್. ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಒಬ್ಬ ಅಪರಿಚಿತ ಬಿಕ್ಷುಕ ಈ ಕಾಲುವೆಯಲ್ಲಿ ಮೃತಪಟ್ಟಿದ್ದು ಈ ಬಿಕ್ಷುಕ ಸುಮಾರು ಒಂದು ವಾರದಿಂದ ದೇವಸ್ಥಾನದ ಹತ್ತಿರ ಬಿಕ್ಷೆ ಮಾಡಿಕೊಂಡು ಜೀವನ ಮಾಡುತಿದ್ದು ಈತನಿಗೆ ಸುಮಾರು 50 ವರ್ಷ ವಯಸ್ಸಾಗಿರುತ್ತೆ. ಸುಮಾರು 5.5 ಅಡಿ ಎತ್ತರ ಹೊಂದಿದ್ದು ಕಪ್ಪು ಬಿಳಿ ಕೂದಲು, ಕಪ್ಪು ನಿಕ್ಕರ್, ಹಸಿರು ಹಳದಿ ಗೆರೆಯುಳ್ಳ ಶರ್ಟ್ ನ್ನು,  ಧರಿಸಿರುತ್ತಾನೆ. ಸದರಿ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಮೃತಪಟ್ಟಿರುತ್ತಾರೆ. ಶವವು ಕೆ.ಆರ್. ಪೇಟೆ ಸರ್ಕಾರಿ  ಆಸ್ಪತ್ರೆಯ ಶವಗಾರದಲ್ಲಿರುತ್ತೆಂದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಶ್ರೀನಿವಾಸಮೂರ್ತಿ, ಡಿ.ಹಲಸಹಳ್ಳಿ, ಕಸಬಾ ಹೋಬಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗಳು ಚೈತ್ರ ರವರಿಗೆ ಕಳೆದ 10 ವರ್ಷಗಳಿಂದ ಎದೆನೋವು ಮತ್ತು ಹೊಟ್ಟೆ ನೋವು ಬರುತಿದ್ದು ಚಿಕಿತ್ಸೆ ಪಡೆಯುತಿದ್ದರೂ ವಾಸವಾಗಿದ್ದು, ದಿನಾಂಕಃ 22-5-2013 ರ ಸಂಜೆ 07-00 ಗಂಟೆಯ ಸಮಯದಲ್ಲಿ ಹೊಟ್ಟೆನೋವು ಬಂದು ತಾಳಲಾರದೆ ಮನೆಯಲ್ಲಿದ್ದ ಯೋವುದೋ ವಿಷವನ್ನು ಕುಡಿದಿದ್ದು, ಚೈತ್ರರವರನ್ನು ಮಳವಳ್ಳಿ ಆಸ್ಪತ್ರೆಗೆ ತೋರಿಸಿ, ನಂತರ ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಿದ್ದು ದಿನಾಂಕಃ24-05-2013 ರಂದು ಬೆಳಗಿನ ಜಾವ 03-00 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಶವದ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಶವವನ್ನು ಕೊಡಿಸಿಕೊಡಿ ಎಂದು ಕೊಟ್ಟ ಲಿಖಿತ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತೆ.


3. ಬೆಳ್ಳೂರು ಪೊಲೀಸ್ ಠಾಣೆ ಯುಡಿಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಆರ್.ಪ್ರಕಾಶ್, ಲಕ್ಷ್ಮಿಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ರಾಮಯ್ಯ ಲಕ್ಷ್ಮಿಪುರ ಗ್ರಾಮ, ಬಿಂಡಿಗನವಿಲೆ ಹೋಬಳಿ ರವರು ಮನೆಯ ಒಳಗಡೆಯಿಂದ ಹೊರಗಡೆಗೆ ಸಿಮೆಂಟ್ ಮೂಟೆಯನ್ನು ತೆಗೆದುಕೊಂಡು ಬರುವಾಗ ಆಕಸ್ಮಿಕವಾಗಿ ಕಾಲು ಎಡವಿ ನೆಲಕ್ಕೆ ಕುಸಿದು ಬಿದ್ದವರನ್ನು ಚಿಕಿತ್ಸೆಗಾಗಿ ಎ.ಸಿ.ಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 10-32 ಗಂಟೆ ಸಮಯದಲ್ಲಿ ಮೃತಪಟ್ಟಿತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 138/13 ಕಲಂ. 498(ಎ) ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಕುಮಾರಿ ಕೋಂ. ನಾಗೇಂದ್ರ, 26 ವರ್ಷ, ಮನೆಕೆಲಸ, ಬೆಳಗೊಳ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ 1]ನಾಗೇಂದ್ರ 2]ಸುರೇಶ, 3]ವೆಂಕಟೇಶ, ಬೆಳಗೊಳ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಯಾದ ನಾಗೇಂದ್ರ ನು ನನಗೆ ವರದಕ್ಷಿನೆ ಕಿರುಕುಳ ನೀಡುತಿದ್ದು, ಜೊತೆಗೆ ನಾನು ಬೇರೆ ಮದುವೆಯಾಗುವುದಾಗಿ ತಿಳಿಸಿ ಖಾಲಿ ಸ್ಟ್ಯಾಂಪ್ ಪೇಪರ್ ಗೆ ಸಹಿ ಹಾಕು ಇನ್ನು ಮುಂದೆ ನನಗೂ ನಿನಗೂ ಯಾವ ಸಂಬಂದವಿರುವುದಿಲ್ಲ ಎಂದು ಹೇಳಿ ಚಿತ್ರ ಹಿಂಸೆ ನೀಡಿರುತ್ತಾರೆ, ಹಾಗೂ ನಾಗೇಂದ್ರನ ಸ್ನೇಹಿತರಾದ ಸುರೇಶ್  ಹಾಗೂ ವೆಂಕಟೇಶ್ ರವರು ಕೂಡ ನನಗೆ ಹಿಂಸೆ ನೀಡುತ್ತಿದ್ದು ಅವರಿಂದ ನನಗೆ ರಕ್ಷಣೆ ನೀಡಿ ಈ ಮೇಲ್ಕಂಡ ರವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನನಗೆ ನ್ಯಾಯ ದೂರಕಿಸಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ/ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 243/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಎಂ. ಮಹೇಶ ಬಿನ್. ಮಾದಯ್ಯ, ಹೆಚ್.ಕೆ.ವಿ. ನಗರ, ಚನ್ನೇಗೌಡನ ದೊಡ್ಡಿ, ಮದ್ದೂರು ಟೌನ್ ರವರು ನೀಡಿದ ದೂರಿನವಿವರವೇನೆಂದರೆ ಪಿರ್ಯಾದಿಯವರು ಹೆಚ್ಕೆವಿ ನಗರ ಚನ್ನೆಗೌಡನ ದೊಡ್ಡಿದ ಅವರ ಮನೆಯಿಂದ ಹೊರಗೆ ಹೋಗಬೇಕಾದರೆ ಮನೆಗೆ ಬೀಗ ಹಾಕಿಕೊಂಡು ಬೀಗದ ಕೀಯನ್ನು ಮನೆಯ ಮುಂಭಾಗದ ಕಿಟಕಿಯ ಹಿಂದೆ ಇಟ್ಟು ಹೋಗುತ್ತಿದ್ದರು. ಇದನ್ನು ನೋಡಿಕೊಂಡವರು ಯಾರೋ ಮನೆಯ ಅಕ್ಕಪಕ್ಕದವರು ಕಳ್ಳತನ ಮಾಡಿರಬಹುದು ಅಥವಾ ಯಾರೋ ಕಳ್ಳರು ಇಲ್ಲದ ಸಮಯವನ್ನು ನೋಡಿ ಕಿಟಕಿಯಲ್ಲಿ ಇದ್ದ ಕೀಯನ್ನು ತೆಗೆದುಕೊಂಡು ಬೀಗ ತೆಗೆದು ಒಳಗೆ ಹೋಗಿ ಮೇಲ್ಕಂಡ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಮೇಲ್ಕಂಡ ಒಡವೆಗಳ ಬೆಲೆ ತಿಳಿಯಬೇಕಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 180/13 ಕಲಂ. 457-380-379 ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಎ.ಬಿ ನಾಗೇಶ್, 48 ವರ್ಷ, ಒಕ್ಕಲಿಗರು, ಅರಕೆರೆ ಟೌನ್. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಫಿಯರ್ಾದಿಯವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಮನೆಯ ಒಳಗೆ ಬಂದು ಫಿಯರ್ಾದಿಯವರ ಬಾಬ್ತು 18,200/- ರೂ. ನಗದು, ಒಂದು ಟೈಟಾನ್ ವಾಚ್ ಅನ್ನು ಮತ್ತು ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕೆ.ಎ-11-ವೈ-8223ರ ಮೋಟಾರ್ ಸೈಕಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಮೌಲ್ಯ 64,563/- ಆಗಿರುತ್ತದೆ. ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 229/13 ಕಲಂ. 379 ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಮಹಮ್ಮದ್ ತೌಸಿಫ್, 21ವರ್ಷ, ಕೇರಾಫ್ ಅಪ್ರೋಜ್, ನಂ. 1749, 5ನೇ ಕ್ರಾಸ್, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-05-13 ರಂದು 03-00 ಗಂಟೆಯಲ್ಲಿ ಪಿ.ಇ.ಎಸ್. ಮಂಡ್ಯ ನಗರಸಭೆ ಕಛೇರಿಯ ಹತ್ತಿರ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 20,000/- ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

 ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 87/13 ಕಲಂ. 363 ಕೂಡ 34 ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಹೆಚ್.ಸಿ.ಜಯರಾಮೇಗೌಡ, 45ವರ್ಷ, ಹಳೇಬೀಡು ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಆರೋಪಿಗಳಾದ ಹೆಚ್.ಎಂ.ಗಣೇಶ, ಹೆಚ್.ಟಿ.ಕುಮಾರಸ್ವಾಮಿ , ಪ್ರಸನ್ನ, ಬಸವರಾಜ ಹಳೇಬೀಡು ಗ್ರಾಮ, ಮೇಲುಕೋಟೆ ಹೋಬಳಿ ರವರುಗಳು ಪಿರ್ಯಾದಿಯ ಮಗಳನ್ನು ಆರೋಪಿ-1ರವರು ಆಕೆಯನ್ನು ಮನೆಯಿಂದ ಒತ್ತಾಯವಾಗಿ ಕರೆದುಕೊಂಡು ತನ್ನ ಮೋಟಾರ್ ಬೈಕ್ನಲ್ಲಿ ಅಪಹರಿಸಿಕೊಂಡು ಹೋದುದಾಗಿ ಆರೋಪಿ-2 ರಿಂದ 4ರವರು ಆರೋಪಿ-1 ಹೆಚ್.ಎಂ.ಗಣೇಶರವರಿಗೆ ಸಹಾಯಕರಾಗಿದ್ದುದಾಗಿ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 337/13 ಕಲಂ. 5, 8, 9 & 11 ಪ್ರಿವೆನ್ಸನ್ ಆಫ್ ಕೌ ಸ್ಲಾಟರ್ ಆಕ್ಟ್ & ಕ್ಯಾಟಲ್ ಪ್ರಿಸರ್ವೇಷನ್ ಆಕ್ಟ್ 1975 ಮತ್ತು ಕಲಂ. 11() & (ಜ) ಕ್ರುಯಲ್ಟಿ ಟು  ಅನಿಮಲ್ಸ್ ಆಕ್ಟ್.

ದಿನಾಂಕ: 24-05-2013 ರಂದು ಪಿರ್ಯಾದಿ ಬಿ.ಜೆ ಕುಮಾರ್ .ಪಿ,.ಎಸ್,ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಮಜ್ಜು, 24 ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ಮತ್ತು 2] ಬಾಬು, 28 ವರ್ಷ, ಮುಸ್ಲಿಂ, ಕೂಲಿಕೆಲಸ, ಮುರುಕನಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾಲ್ಲೂಕು ರವರು ಪಿರ್ಯಾದಿಯವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ  ದಾಳಿ  ಮಾಡಲಾಗಿ ಕೆ.ಆರ್.ಪೇಟೆ ಕಡೆಯಿಂದ ಬಂದ ಕೆಎ-11-6426 ರ ಗೂಡ್ಸ್ ಆಟೋವನ್ನು ತಡೆದು ನಿಲ್ಲಿಸಿ ಆಟೋದಲ್ಲಿದ್ದ ಆಸಾಮಿಗಳ ಹೆಸರು ವಿಚಾರ ಮಾಡಿ  ಆಟೋವನ್ನು ಪರಿಶೀಲಿಸಲಾಗಿ 2  ಇಲಾತಿ ಹಸು ಮತ್ತು 2 ನಾಟಿ ಹಸುವಿನ ಕರುಗಳು ಇದ್ದವು. ಸದರಿಯವರುಗಳನ್ನು ಇವುಗಳ ಬಗ್ಗೆ ವಿಚಾರ ಮಾಡಿದಾಗ ನಾವುಗಳು ನಮ್ಮ ಗ್ರಾಮದ ಅಕ್ಕ ಪಕ್ಕದ ಗ್ರಾಮಗಳಲ್ಲಿ ಮೇಲ್ಕಂಡ 2 ಇಲಾತಿ ಹಸು ಮತ್ತು 2 ನಾಟಿ ಹಸುವಿನ ಕರುಗಳನ್ನು ಖರೀದಿ ಮಾಡಿಕೊಂಡು ಅವುಗಳನ್ನು ಮೈಸೂರಿನ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದು ಇವುಗಳನ್ನು ಕಸಾಯಿಖಾನೆಗೆ ಸಾಗಿಸಲು ಯಾವುದೇ ಲೈಸೆನ್ಸ್ ಇಲ್ಲವೆಂದು ತಿಳಿಸಿದ ಮೇರೆಗೆ. ಸ್ವಯಂ ವರದಿ ತಯಾರುಮಾಡಿ ಪ್ರಕರಣ ದಾಖಲಿಸಿರುತ್ತೆ.


ರಸ್ತೆ ಅಪಘಾತ ಪ್ರಕರಣ : 

1. ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. 279-304(ಎ)ಐ.ಪಿ.ಸಿ. ಕೂಡ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 24-05-2013 ರಂದು ಪಿರ್ಯಾದಿ ಮಂಜ ಬಿನ್. ಲೇಟ್. ಕೃಷ್ಣ, ವಾಸ:- ಚಾಮನಹಳ್ಳಿ ಗ್ರಾಮ, ಕಸಬಾ ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಯಾವುದೋ ಒಂದು ಅಪರಿಚಿತ ಸ್ಕಾಪರ್ಿಯೋ ಕಾರಿನ ಚಾಲಕ ಕಾರಿನ ನಂಬರ್ ಚಾಲಕನ ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ದಿನಾಂಕ: 24-05-2013 ರಂದು ಸಂಜೆ 04-30 ಗಂಟೆಯಲ್ಲಿ ಮದ್ದ್ದೂರು ಟೌನಿನ, ಮದ್ದೂರಮ್ಮ ದೇವಸ್ತಾನದ ಮುಂದೆ ಮೈಸೂರು ಕಡೆಯಿಂದ ಬೆಂಗಳೂರು ಕಡೆಗಾದಂತೆ ಬಂದ ಒಂದು ಸ್ಕಾರ್ಪಿಯೋ ಕಾರಿನ ಚಾಲಕ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿರವರ ಅಜ್ಜಿಗೆ ಡಿಕ್ಕಿ ಹೊಡೆಸಿ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ ಅಪಘಾತಕ್ಕೀಡಾದ ಕರಿಯಮ್ಮ @ ಚುಂಚಮ್ಮ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರಗಿಸುವಂತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬಿಂಡಿಗನನವಿಲೆ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 279, 304 [ಎ] ಐ.ಪಿ.ಸಿ.

ದಿನಾಂಕ: 24-05-2013 ರಂದು ಪಿರ್ಯಾದಿ ಎನ್.ಟಿ.ಬಾಲಮೂತರ್ಿ, ಎ.ನಾಗತಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಒಂದು ಕಾರು ಬರುತ್ತಿದ್ದು, ಅದರ ಚಾಲಕ ಕಾರನ್ನು ಅತಿವೇಗ ಹಾಗೂ ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು ವರಲಕ್ಷ್ಮಿ @ ನಾಗರತ್ನ ರವರಿಗೆ ಹಿಂಭಾಗದಿಂದ ಡಿಕ್ಕಿ ಹೊಡೆಯಿಸಿ ಸುಮಾರು 50 ಅಡಿ ದೂರ ರಸ್ತೆಯಲ್ಲಿ ವರಲಕ್ಷ್ಮಿ @ ನಾಗರತ್ನ ರವರ ದೇಹವನ್ನು ಎಳೆದುಕೊಂಡು ಹೋಗಿ ಕಾರನ್ನು ನಿಲ್ಲಿಸಿದ ತಕ್ಷಣ ನಾನು ಹೋಗಿ ನೋಡಲಾಗಿ ಕಾರಿನ ತಳಭಾಗ ದೇಹ ಸಿಕ್ಕಿಕೊಂಡಿದ್ದು, ಮೃತಪಟ್ಟಿದ್ದಳು. ಕೆಎ-05 ಎಂ.ಜಿ-1148 ರ (ಐಕಾನ್ ಕಾರ್ ಆಗಿರುತ್ತದೆ.) ಚಾಲಕನ ಹೆಸರು ತೇಜಸ್ವಿ ಎಂದು ತಿಳಿಯಿತು ಮುಂದಿನ ಕ್ರಮ ಜರಗಿಸುವಂತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಕೆ ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 392 ಐ.ಪಿ.ಸಿ.

ದಿನಾಂಕ:24-05-2013 ರಂದು ಪಿರ್ಯಾದಿ ಟಿ. ನಾರಾಯಣ್, ಪಾಲಹಳ್ಳಿ, ಹಾಲಿ ವಾಸ ಮೈಸೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಅವರ ಕಾರಿನಲ್ಲಿ ಹೋಗಿ ತಮ್ಮ ಜಮೀನಿನ ಬಳಿ ಸೈಟು                   ನೋ ಡುತ್ತಿದ್ದವರಿಗೆ 3 ಜನ ಬಂದು ಕೈ ಗಳಿಂದ ಹೊಡೆದು ಕತ್ತಿನಲ್ಲಿದ್ದ 52 ಗ್ರಾಂ. ಚಿನ್ನದ ಚೈನು, ಜೇಬಿನಲ್ಲಿದ್ದ 2000/-ರೂ ಹಣ, ಒಂದು ನೋಕಿಯಾ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 23-05-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-05-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  1 ಕಳವು ಪ್ರಕರಣ,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಂಚನೆ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಅಪಹರಣ ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 366(ಎ) ಐ.ಪಿ.ಸಿ.

ದಿನಾಂಕ: 23-05-2013 ರಂದು ಪಿರ್ಯಾದಿ ಕಮಲ್ಲಮ್ಮ ಕೋಂ. ಲೇಟ್. ಪುಟ್ಟಸ್ವಾಮಿ, ಚಾಪುರದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-05-2013 ರಂದು ಮದ್ಯಾಹ್ನ  01-00 ಗಂಟೆ ಸಮಯದಲ್ಲಿ ನನ್ನ 16 ವರ್ಷದ ಮಗಳು ಉಪ್ಪಾರದೊಡ್ಡಿ ಗ್ರಾಮಕ್ಕೆ ನೆಂಟರ ಮನೆಗೆ ಹೋಗಿ ಬರುತ್ತೇನೆಂದು ಹೋದವಳು, ಊರಿಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾಳೆ ಅವಳನ್ನು ಯಾರೊ ಬಲವಂತವಾಗಿ ಕರೆದುಕೊಂಡು ಹೋಗಿರಬಹುದೆಂದು ಅನುಮಾನವಿರುತ್ತದೆ ಅವರನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. 379 ಐ.ಪಿ.ಸಿ.

ದಿನಾಂಕ: 23-05-2013 ರಂದು ಪಿರ್ಯಾದಿ ಕುಶ, ಕೆ ಬಿನ್ ಕೃಷ್ಣ, 28 ವರ್ಷ, ವಾಸ ನಂ.55, ಹೌಸಿಂಗ್ ಬೋಡರ್್ಕಾಲೋನಿ, ಶಾಂತಿನಗರ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ-07-05-2013 ರ ಸಂಜೆ 17-00 ಗಂಟೆಯಲ್ಲಿ ಸುಂಕಾತೊಣ್ಣೂರು ಗ್ರಾಮದಲ್ಲಿ 12 ಬ್ಯಾಟರಿಗಳನ್ನು ದಿನಾಂಕ: 07-05-2013 ರಂದು ಯಾರೋ ಕಳ್ಳರು ಸಂಜೆ ಏಳು ಗಂಟೆ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಅಂದಾಜು ಬೆಲೆ 12,000/- ಸಾವಿರ ರೂಗಳಾಗುತ್ತವೆ. ಈ ಟವರ್ ಹತ್ತಿರಕ್ಕೆ ಏರ್ ಟೆಲ್ ಎರಿಸನ್ ಕಂಪನಿಯ ಎಫ್.ಎಂ. ಇಂಜಿನಿಯರ್ ಶ್ರೀಧರ್ರವರು ಬಂದು ಹೋದರೆಂದು ವಿಚಾರ ಗೊತ್ತಾಗಿರುತ್ತೆ ಆದ್ದರಿಂದ ಇವರ ಮೇಲೆ ನಮಗೆ ಅನುಮಾನವಿರುತ್ತದೆ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 257/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 23-05-2013 ರಂದು ಪಿರ್ಯಾದಿ ಹೆಚ್.ಎನ್. ಪುಟ್ಟಸ್ವಾಮಿ ಬಿನ್. ಲೇಟ್. ನಿಂಗೇಗೌಡ, 46 ವರ್ಷ, ಹೆಮ್ಮಿಗೆ ಗ್ರಾಮ, ಮಂಡ್ಯ ತಾ.. ರವರು ನೀಡಿದ ದೂರು ಏನೆಂದರೆ ಅವರ ಮಗಳು  ಹೆಚ್.ಪಿ. ಶಾಲಿನಿ ಕೋಂ. ಹೆಚ್.ಎನ್. ಪುಟ್ಟಸ್ವಾಮಿ, 21 ವರ್ಷ, ಹೆಮ್ಮಿಗೆ ಗ್ರಾಮ, ಮಂಡ್ಯ ತಾ.. ದಿನಾಂಕ:22-05-2013 ರಂದು ಬೆಳಿಗ್ಗೆ 06-30 ಗಂಟೆಯಲ್ಲಿ.ಹೆಮ್ಮಿಗೆ ಗ್ರಾಮದಿಂದ ಸಿ.ಪಿ.ಸಿ. ಪಾಲಿಟೆಕ್ನಿಕ್ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುವ ತಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ದೂರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 100/13 ಕಲಂ. ಹುಡುಗರು ಕಾಣೆಯಾಗಿದ್ದಾರೆ.

ದಿನಾಂಕ: 23-05-2013 ರಂದು ಪಿರ್ಯಾದಿ ಮಹೇಶ ಹೆಚ್,ಸಿ ಬಿನ್ ಲೇಟ್ ಚಿಕ್ಕಪುಟ್ಟಯ್ಯ ಮಾರುತಿನಗರ 7ನೇ ಕ್ರಾಸ್  ಮಂಡ್ಯ ಸಿಟಿ ನೀಡಿದ ದೂರಿನ ಸಾರಾಂಶವೇನೆಂದರೆ 1. ಹೆಚ್,ಎಂ. ಕೇಶವ ಬಿನ್ ಮಹೇಶ ಹೆಚ್,ಸಿ 12 ವರ್ಷ, 6ನೇ ತರಗತಿ, 2. ವಿಶ್ವನಾಥ ಆರ್, ಬಿನ್. ರಾಜು, 11 ವರ್ಷ, 5ನೇ ತರಗತಿ ದಿನಾಂಕ: 29-03-2013 ರಂದು ಶಾಲೆಗಳಿಗೆ ರಜೆ ಇದ್ದ ಕಾರಣ ಇಬ್ಬರು ಮನೆಯ ಮುಂದೆ ಸಾಯಂಕಾಲ 04-30 ಗಂಟೆಯಲ್ಲಿ ಆಟವಾಡಿಕೊಂಡಿದ್ದವರು ರಾತ್ರಿಯಾದರೂ ವಾಪಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳ ಕಡೆ ಹೋಗಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಅವರುಗಳನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 228/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 23-05-2013 ರಂದು ಪಿರ್ಯಾದಿ ಶಿವರುದ್ರಯ್ಯ ಬಿನ್. ಹುಚ್ಚಯ್ಯ, ಅಧೀಕ್ಷಕರು, ಬಾಲಕರ ಬಾಲಮಂದಿರ, 6ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 21-05-2013 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ 6ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯ ಸಿಟಿ ಬಾಲಮಂದಿರದಲ್ಲಿದ್ದ ಪ್ರಶಾಂತ್ ಎಂಬುವನು ತಪ್ಪಿಸಿಕೊಂಡು ಓಡಿಹೋಗಿರುತ್ತಾನೆ. ಕೂಡಲೇ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಪ್ರಶಾಂತ್ ಎಂಬ ಹುಡುಗನನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 118/13 ಕಲಂ. 420 ಐ.ಪಿ.ಸಿ.

ದಿನಾಂಕ: 23-05-2013 ರಂದು ಪಿರ್ಯಾದಿ ಸಿದ್ದೇಗೌಡ, 36ವರ್ಷ., ಒಕ್ಕಲಿಗರು, ವ್ಯವಸಾಯ ವಾಸ: ನೆಲಮಾಕನಹಳ್ಳಿ ಗ್ರಾಮ, ಕಸಬಾಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 14-05-2013  ನಂತರದ ದಿನಗಳಲ್ಲಿ ನೆಲಮಾಕನಹಳ್ಳಿ ಗ್ರಾಮದಲ್ಲಿ ಕಾಲಂ. ನಂ.8 ರಲ್ಲಿ ಕಂಡ ಆರೋಪಿ ಪಿರ್ಯಾದಿಯವರಿಂದ  ಮೋಸದಿಂದ ಎಟಿಎಂ ಪಡೆದುಕೊಂಡು ಎಸ್.ಬಿ. ಖಾತೆ ನಂ. 1521101006406 ರಲ್ಲಿ 62000/- ರೂ ಗಳ ಹಣ ಡ್ರಾ ಮಾಡಿರುವುದಾಗಿ ಪಿರ್ಯಾದು ನೀಡಿರುತ್ತಾರೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 23-05-2013 ರಂದು ಪಿರ್ಯಾದಿ ಸಿದ್ದೇಗೌಡ ಕೆ.ಲೋಕೇಶ, ಸಿಪಿಸಿ 684, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 21-05-2013 ರಂದು  ಮಂಡ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯದ ಬಳಿ ಚಂದ್ರಣ್ಣ ಬಿನ್. ರಾಮಶೆಟ್ಟಿ, 65ವರ್ಷ, ನಾಗಮಂಗಲದ ವಾಸಿ ಎಂದು ತಿಳಿದುಬಂದಿದ್ದು ಈತನಿಗೆ ಬಲಗಾಲಿನಲ್ಲಿ ಗ್ಯಾಂಗ್ರಿನ್ ಗಾಯವಾಗಿರುವುದರಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುವಂತೆ ಕಂಡುಬಂದಿರುತ್ತದೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 163/13 ಕಲಂ. 506 ಐಪಿಸಿ ಮತ್ತು 3 ಕ್ಲಾಸ್ [1][10] [11]ಆಫ್ ಎಸ್.ಸಿ./ಎಸ್.ಟಿ ಪಿ.ಎ.ಆಕ್ಟ್ 1989.

ದಿನಾಂಕ: 23-05-2013 ರಂದು ಪಿರ್ಯಾದಿ ನಿಂಗರಾಜಮ್ಮ ಕೋಂ. ಆನಂದ, ಯಲಾದಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೈ.ಡಿ. ಚಂದ್ರಶೇಖರ @ ಶೇಖರ ಬಿನ್. ಲೇಟ್. ಸೆಡ್ಡಿನ ದೇವೇಗೌಡ, ಯಲಾದಹಳ್ಳಿ ಗ್ರಾಮ ರವರು ಪಿರ್ಯಾದಿಯವರ ಮನೆಗೆ ನುಗ್ಗಲು ಯತ್ನಿಸಿ ಈ ರಾತ್ರಿ 2,000/-ರೂ. ಕೊಡುತ್ತೇನೆ ನಿನ್ನ ಜೊತೆ ಮಲಗುತ್ತೇನೆ ಎಂದಾಗ ಪಿಯರ್ಾದಿ ಕಿರಿಚಿಕೊಂಡಾಗ ಪಿಯರ್ಾದಿ ಗಂಡ ಮತ್ತು ಅಕ್ಕಪಕ್ಕದ ಮನೆಯವರು ಬರುವಷ್ಟರಲ್ಲಿ ನೀನೇನಾದರೂ ನಿನ್ನ ಗಂಡ ಹಾಗೂ ನಿನ್ನ ಜಾತಿಯವರಿಗೆ ಈ ವಿಷಯ ಹೇಳಿದರೆ ನಿನ್ನ ಮನೆಗೆ ಬೆಂಕಿ ಹಾಕುತ್ತೇನೆ ನಿನ್ನನ್ನು ಕೊಲೆ ಮಾಡುತ್ತೇನೆ ಸೂಳೆಮುಂಡೆ, ಬಡ್ಡೀ, ನಿನ್ನ ತಾಯಿನಾಕೆಯ್ಯಾ, ಹೊಲೆಯ ಬಡ್ಡೀಮಗಳೇ ಎಂದು ಜಾತಿ ಹೆಸರು ಹಿಡಿದು ಬೈಯ್ದು ಎಳೆದಾಡಿದ. ಹಿಡಿಯಲು ಯತ್ನಿಸಿದಾಗ ಕತ್ತಲಲ್ಲಿ ಪರಾರಿಯಾಗಿರುತ್ತಾನೆ ಆತನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 22-05-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 22-05-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ವಂಚನೆ ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು ಹಾಗು 9 ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 

ವಂಚನೆ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 226/13 ಕಲಂ. 420 ಕೂಡ 34 ಐ.ಪಿ.ಸಿ.

ದಿನಾಂಕ: 22-05-2013 ರಂದು ಪಿರ್ಯಾದಿ ಎಲ್.ಪದ್ಮ ಕೋಂ. ಕೆಂಪೇಗೌಡ, ನಂ.436, 10ನೇ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ಸಿಟಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯು ಸಾಮಾನು ತೆಗೆದುಕೊಂಡು ಬರಲು ಪೇಟೆಬೀದಿಯ ಹತ್ತಿರ ಹೋಗುತ್ತಿದ್ದಾಗ ಅಲ್ಲಿ ಒಬ್ಬ ಹೆಂಗಸು ನೆಲದ ಮೇಲೆ ಬಿದ್ದಿದ್ದ ಹಣವನ್ನು ಎತ್ತಿಕೊಂಡು ಫಿರ್ಯಾದಿಗೆ ತೋರಿಸಿ ಇಬ್ಬರು ಹಂಚಿಕೊಳ್ಳೋಣವೆಂದು ತಿಳಿಸಿ ಸ್ಟೇಡಿಯಂ ಒಳಗಡೆ ಹೋಗುತ್ತಿದ್ದಾಗ  ನಿನ್ನ ಕತ್ತಿನಲ್ಲಿರುವ ಸರವನ್ನು ಬಿಚ್ಚಿ ಇಟ್ಟಿಕೋ ಅಂತ ಹೇಳಿ ಆ ಹೆಂಗಸು ಈ ಸರವನ್ನು ಕಿತ್ತುಕೊಳ್ಳಬಹುದು, ಅದನ್ನು ನಿನ್ನ ಸೆರಗಿಗೆ ಗಂಟು ಹಾಕುತ್ತೇನೆಂದು ಹೇಳಿ ತಾನೇ ಗಂಟು ಹಾಕಿ, ಹೋದವಳು ವಾಪಸ್ ಬರಲಿಲ್ಲ. ಆಗ ಫಿರ್ಯಾದಿಯು ತನ್ನ ಸೆರಗಿನಲ್ಲಿದ್ದ ಚಿನ್ನದ ಸರವನ್ನು ಕತ್ತಿಗೆ ಹಾಕಿಕೊಳ್ಳೋಣವೆಂದು ಸೆರಗಿನ ಗಂಟನ್ನು ಬಿಚ್ಚಿದಾಗ ಮರಳು ಇತ್ತು ಆ ಹೆಂಗಸರನ್ನು ಹುಡುಕಿದರೂ ಸಿಗಲಿಲ್ಲ. ಇಬ್ಬರು ಹೆಂಗಸರು ತನಗೆ ಮೋಸ ಮಾಡುವ ಉದ್ದೇಶದಿಂದ ತನ್ನ ಕತ್ತಿನಲ್ಲಿದ್ದ 1 ಲಕ್ಷ ರೂ. ಬೆಲೆ ಬಾಳುವ 58 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿಸಿಕೊಂಡು ಸೆರಗಿಗೆ ಗಂಟುಹಾಕುತ್ತೇನೆಂದು ಹೇಳಿ ಮರಳನ್ನು ಸೆರಗಿಗೆ ಕಟ್ಟಿ ಮೋಸ ಮಾಡಿರುತ್ತಾರೆ. ಇವರುಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು  ನೀಡಿದ ದೂರು.


 2. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 162/13 ಕಲಂ. 468-471-420 ಐ.ಪಿ.ಸಿ. 

ದಿನಾಂಕ: 22-05-2013 ರಂದು ಪಿರ್ಯಾದಿ ಶ್ರೀ.ರಘು ಎಂ.ಪಿ. ಭದ್ರತಾ ಮತ್ತು ಜಾಗ್ರತಾಧಿಕಾರಿಗಳು, ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಡ್ಯ ವಿಭಾಗ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ಜಿ.ಟಿ.ರಮೇಶ್ ಬಿನ್. ತಮ್ಮೇಗೌಡ, ಕೆಟಿ-366, ಚಾಮುಂಡೇಶ್ವರಿ ನಗರ, ಮಂಡ್ಯ ರವರು ದಿನಾಂಕ:.22-05-2013 ರಂದು ರಾತ್ರಿ 08-00 ಗಂಟೆ ಹನುಮಂತ ನಗರದ ಬಳಿ ಸಿಬ್ಬಂದಿಯವರಿಗೆ ಉಚಿತವಾಗಿ ಪ್ರಯಾಣಿಸಲು ನೀಡುವ ಉಚಿತ ಪಾಸ್ ಸಂಖ್ಯೆ 005285 ಅನ್ನು ಸದರಿಯವರು ಮದ್ದೂರು ಘಟಕದಲ್ಲಿ ಶಿಶುಕ್ಷಕರಾಗಿ ಕರ್ತವ್ಯ ನಿರ್ವಹಿಸುವಾಗ ಸದರಿ ಉಚಿತ ಪಾಸನ್ನು ಕದ್ದು ಸದರಿ ಪಾಸ್ನಲ್ಲಿ ತನ್ನ ಬಾವಚಿತ್ರವನ್ನು ಅಂಟಿಸಿಕೊಂಡು  ಹಾಗು ಮದ್ದೂರು ಘಟಕ ವ್ಯವಸ್ಥಾಪಕರ ಮೊಹರನ್ನು ನಕಲಿಯಾಗಿ ಸೃಷ್ಠಿ ಮಾಡಿಕೊಂಡು 2003 ನೇ ಸಾಲಿನಿಂದ 2013 ರ ವರೆಗೆ 11 ವರ್ಷ ಸಂಸ್ಥೆಯ  ಉಚಿತ ಪಾಸನ್ನು ದುರ್ಬಳಕೆ ಮಾಡಿಕೊಂಡಿದ್ದು ತದನಂತರ 2004 ರಲ್ಲಿ ಸದರಿ ವ್ಯಕ್ತಿಯು ಆರೋಗ್ಯ ಇಲಾಖೆಯ ಕೆಲಸಕ್ಕೆ ಸೇರಿದ ನಂತರ ದಿನ ಪ್ರತಿ ಮಂಡ್ಯದಿಂದ ಹಲಗೂರಿಗೆ ಸದರಿ ಉಚಿತ ಪಾಸನ್ನು ಉಪಯೋಗಿಸಿಕೊಂಡು ದಿನಂಪ್ರತಿ ರೂ 45 ರಂತೆ * 25 ದಿನಗಳು * 12 ತಿಂಗಳು * 11 ವರ್ಷಕ್ಕೆ ರೂ 1,48,500 ಗಳಷ್ಟು ಸಂಸ್ಥೆಗೆ ಆಥರ್ಿಕ ನಷ್ಟ ಉಂಟುಮಾಡಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 162/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 22-05-2013 ರಂದು ಪಿರ್ಯಾದಿ ನಂಜೇಗೌಡ ಬಿನ್. ಕಿಕ್ಕೇರಿಗೌಡ, ಹಿರಳಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎಚ್.ಎನ್.ಹರೀಶ್ ಬಿನ್. ನಂಜೇಗೌಡ, 33 ವರ್ಷ, ಹಿರಳಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯವರ ಮಗ ಎಚ್.ಎನ್. ಹರೀಶ್ ಈಗ್ಗೆ ಎರಡು ವರ್ಷಗಳಿಂದ ಮನೆಯಿಂದ ಕಾಣೆಯಾಗಿರುತ್ತಾನ್ತೆ ಆದರೆ ಸುಮಾರು ಎರಡು ವರ್ಷಗಳಿಂದಲೂ ಸಹ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ಆದ್ದರಿಂದ ಕಾಣೆಯಾಗಿರುವ ಅವರ ಮಗನನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 22-05-2013 ರಂದು ಪಿರ್ಯಾದಿ ಜಾವಿದ್ ಬಿನ್ ಲೇ|| ಮಕ್ಬುಲ್ ಖಾನ್, 28ವರ್ಷ, ಮುಸ್ಲಿಂ ಜನಾಂಗ, ಕುಲುಮೆ ಕೆಲಸ, ಮನೆ. ನಂ. 81, ನಾಲಬಂದವಾಡಿ. ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಹಸೀನಾ ಬಿನ್. ಲೇ||  ಶಫಿಉಲ್ಲಾ, 36 ವರ್ಷ, ಮುಸ್ಲಿಂ ಜನಾಂಗ, ಬೀಡಿ ಕಟ್ಟುವ ಕೆಲಸ, ಮನೆ. ನಂ. 81, ನಾಲಬಂದವಾಡಿ, ಮಂಡ್ಯ ಸಿಟಿ ರವರು ಸೀಮೆಣ್ಣೆ ದೀಪ  ಹಚ್ಚಲು ಹೋದಾಗ  ಪಕ್ಕದಲ್ಲಿದ್ದ ಸೀಮೆಎಣ್ಣೆ ಇದ್ದ ಕ್ಯಾನು ಆಕಸ್ಮಿಕವಾಗಿ ಬಿದ್ದು ಹೋಗಿ ಅದರಲ್ಲಿದ್ದ ಸೀಮೆಎಣ್ಣೆ ಎಲ್ಲಾ ನೆಲಕ್ಕೆ ಚೆಲ್ಲಿ ಹೋಗಿದ್ದು, ಆ ಸಮಯದಲ್ಲಿ ಮೃತೆ ಬೆಂಕಿ ಕಡ್ಡಿ ಗೀರಿದಾಗ ಮೃತೆಗೆ ಬೆಂಕಿ ತಗುಲಿ ಮೈಮೇಲಿದ್ದ ಬಟ್ಟೆಯಲ್ಲಾ ಹತ್ತಿಕೊಂಡ  ತಕ್ಷಣ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಿ ನಂತರ ಅದೇ ದಿನ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರು ಕೆ.ಆರ್. ಆಸ್ಪತ್ರೆಯ ಬನರ್್ ವಾಡರ್್ಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2.ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 22-05-2013 ರಂದು ಪಿರ್ಯಾದಿ ಕೆ.ಎಂ.ಜಗದೀಶ ಬಿನ್. ಲೇಟ್. ಮರೀಗೌಡ, ಕಟ್ಟೇರಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಕೃಷ್ಣೇಗೌಡ ಬಿನ್ ಲೇ,ನಂಜೇಗೌಡ, ಕಟ್ಟೇರಿ ಗ್ರಾಮ, ಪಾಂಡವಪುರ ತಾ. ರವರು ದಿನಾಂಕ: 19-05-2013 ರಂದು ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದವನನ್ನು ಚಿಕಿತ್ಸೆಗಾಗಿ ಪಾಂಡವಪುರ ಸರ್ಕಾರಿ  ವೈದ್ಯರಲ್ಲಿ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆೆ ಸಂಬಂಧ ಮೈಸೂರಿನ ಕೆ,ಆರ್,ಆಸ್ಪತ್ರೆಯಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.

ದಿನಾಂಕ: 22-05-2013 ರಂದು ಪಿರ್ಯಾದಿ ವಿಶ್ವಚಾರ್ ಬಿನ್. ಲೇಟ್. ಪುಟ್ಟಚಾರ್, 70 ವರ್ಷ, ವಿಶ್ವಕರ್ಮ ಜನಾಂಗ, ಯಲಿಯೂರು ಗ್ರಾಮ, ಚನ್ನಪಟ್ಟಣ ತಾಲ್ಲೋಕ್, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಲತಾಶ್ರೀ ಕೊಂ. ಲೋಕೇಶ, ವಿಶ್ವಕರ್ಮ ಜನಾಂಗ, ಗೃಹಿಣಿ, ಕೆ.ಎಂ.ದೊಡ್ಡಿ ಟೌನ್, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 22-05-2013 ರಂದು ಸಂಜೆ 04-30 ಗಂಟೆಯಲ್ಲಿ, ಮಂಡ್ಯ ಸರ್ಕಾರಿ  ಆಸ್ಪತ್ರೆಯಲ್ಲಿ ಲತಾಶ್ರೀ. ಯವರು ಖಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:19-05-2013 ರಂದು ಮನೆಯಲ್ಲಿ ಮದ್ಯಾಹ್ನ 03-00 ಗಂಟೆ ಸಮಯದಲ್ಲಿ ಆಕೆಗೆ ಚಿಕಿತ್ಸೆಗಾಗಿ ನೀಡುತ್ತಿದ್ದ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಂಡ ಕಾರಣ ತುಂಬಾ ಅಸ್ವಸ್ಥರಾಗಿದ್ದು, ಕೆ.ಎಂ.ದೊಡ್ಡಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 21-05-2013



ದಿನಾಂಕ: 21-05-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 08 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು  6 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. 

ಕಳ್ಳತನ ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 457,380 ಐ.ಪಿ.ಸಿ.

      ದಿನಾಂಕ: 20-05-2013 ರಂದು ಪಿರ್ಯಾದಿ ಡಾ||. ದೊರೆಸ್ವಾಮಿ, ವೈಧ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ,, ಹಲ್ಲೆಗೆರೆ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಹಲ್ಲೆಗೆರೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ .ಕೇಂದ್ರದ ಜಾಲರಿಯನ್ನು ಕಿತ್ತುಹಾಕಿ ಒಳಗಿದ್ದ 1). UPS ( ವಿಡಿಯೋಕಾನ್ ಕಂಪನಿ), 2) ಬ್ಯಾಟರಿ ಯುನಿವರ್ಸೆಲ್. 3) CPU ವಿಪ್ರೋ 4). ಮಾನಿಟರ್ ವಿಪ್ರೋ. 5). ಮೌಸ್ ವಿಪ್ರೋ 6). ಬಿ.ಎಸ್.ಎನ್.ಎಲ್. ಮೊಡೆಮ್ ಈ ಮೇಲ್ಕಂಡ ಸ್ವತ್ತನ್ನು ಕಳುವು ಮಾಡಿಕೊಂಡು ಹೋಗಿದ್ದು, ಅಂದಾಜು ಬೆಲೆ 25,000/- ರೂ ಗಳಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 332/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

      ದಿನಾಂಕ: 20-05-2013 ರಂದು ಪಿರ್ಯಾದಿ ವಿ. ಸ್ವಾಮಿಗೌಡ ಬಿನ್. ಲೇ|. ವೀರಭದ್ರೇಗೌಡ, ಹಳೆಯೂರು ಬೀದಿ,  ಕ್ಯಾತನಹಳ್ಳಿ  ಗ್ರಾಮ, ಪಾ,ಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೆಂಪಮ್ಮ, ವಯಸ್ಸು: 80 ವರ್ಷ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರುವುದಿಲ್ಲಾ ಹಾಗೂ ಅವರು ಮೈಸೂರು ಕಡೆ ಹೋಗುವ ಬಸ್  ಹತ್ತಿರುವುದನ್ನು ಗ್ರಾಮಸ್ಥರು  ನೋಡಿರುತ್ತಾರೆ. ಅವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 20-05-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-05-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ಮನೆ ಕಳ್ಳತನ ಪ್ರಕರಣ,  2 ವಾಹನ ಕಳವು ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು ಹಾಗು 13 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಹಾಗು ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಎಂ,ಎಸ್ ದೇವರಾಜು ಬಿನ್. ಲೇಟ್. ಕೆ,ವಿ ಶ್ರೀನಿವಾಸ ಶೆಟ್ಟಿ, 58 ವರ್ಷ, ನಂ,1420, 5ನೇಕ್ರಾಸ್, ಅಶೋಕ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸುಬ್ಬು ಅಪರಿಚಿತ, 75 ವರ್ಷ, ಪೂರ್ಣ ವಿಳಾಸ ತಿಳಿಯಬೇಕಾಗಿದೆ ಇವರು ದಿನಾಂಕ: 20-05-2013 ರಂದು ಮದ್ಯಾಹ್ನ 01-30 ಗಂಟೆಯಲ್ಲಿ ಯಾವುದೋ ಖಾಯಿಲೆಯಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುವುದು ಕಂಡು ಬಂದಿದ್ದು ಮೃತನ ಮೈಮೇಲೆ ಬಿಳಿ ಬನಿಯನ್ ಹಾಗೂ ಕಾಟನ್ ನಿಕ್ಕರ್ ಇದ್ದು ಸಾದಾರಣ ಮೈಕಟ್ಟು ಎಣ್ಣೆಗೆಂಪು ಬಣ್ಣವುಳ್ಳವನಾಗಿದ್ದು ಮೃತನ ವಿಳಾಸ ತಿಳಿದು ಬಂದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ಕೊಟ್ಟ ಪಿರ್ಯಾದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಯಾರಬ್ ಬಿನ್. ಸೈಯ್ಯದ್ ಬಾಷಾ, ಆಂದ್ರ ಕಾಲೋನಿ, ಎ ನಾರಾಯಣಪುರ, ಕೆ,ಆರ್,ಪುರಂ ರೈಲ್ವೇಸ್ಟೇಷನ್, ಬೆಂಗಳೂರು-16 ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-05-2013 ರಂದು ಬಲುಮುರಿ ಪಾಲ್ಸ್, ಬೆಳಗೊಳ, ಶ್ರೀರಂಗಪಟ್ಟಣ ತಾಲ್ಲೂಕು ರವರು ಬಲಮುರಿಯ ನದಿ ನೀರಿನಲ್ಲಿ ಈಜಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಹೋದನೆಂದು ತನ್ನ ತಮ್ಮನ ಸ್ನೇಹಿತರು ತಿಳಿಸಿದ ಮೇರೆ ನಾನು ಬಲಮುರಿಗೆ ಬಂದು ಹುಡುಕಿದರೂ ನನ್ನ ತಮ್ಮನ ಶವ ಸಿಗಲಿಲ್ಲ ಈ ದಿನ ಅಂದರೆ ದಿನಾಂಕ: :-19-05-2013 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಬಲಮುರಿ ನೀರಿನಲ್ಲಿ ನನ್ನ ತಮ್ಮನ ಶವ ಸಿಕ್ಕಿರುತ್ತೆ. ಆದ್ದರಿಂದ ನನ್ನ ತಮ್ಮ ಜಾಕೀರ್ ಹುಸೇನ್ ಶವದ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಲಾಗಿದೆ. 


ಮನೆ ಕಳ್ಳತನ ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 100/13 ಕಲಂ. 457-380 ಐ.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಸಿಬಿಗತ್ ವುಲ್ಲಾ ಬೇಗ್, ಬಿನ್. ಗಫಾರ್ ಬೇಗ್. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-05-2013 ರಂದು ರಾತ್ರಿ ವೇಳೆಯಲ್ಲಿ ಕೊಪ್ಪ ಹೋಬಳಿ ಹೊಸಕೆರೆ ಗ್ರಾಮದಲ್ಲಿ, ಮದ್ಯರಾತ್ರಿ ಯಾರೋ ಕಳ್ಳರು ಪಿರ್ಯಾದಿಯವರ ತೋಟದ ಮನೆಯ ಹೆಂಚುಗಳನ್ನು ತೆಗೆದು ಅಲ್ಲಿ ಇದ್ದ ಕೊಳವೆ ಬಾವಿಯ 150 ಮೀಟರ್ ವೈರ್ ಮತ್ತು ಎರಡು ಬಂಡಲ್ ಮುಳ್ಳು ತಂತಿಯನ್ನು ಕಳ್ಳತನ ಮಾಡಿರುತ್ತಾರೆ ಇದರ ಬೆಲೆ ಸುಮಾರು 20000/- ರೂ ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ಪಿರ್ಯಾದು.


ವಾಹನ ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 232/13 ಕಲಂ. 379 ಐ.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಹರ್ಷ ಆರ್. ರುದ್ರಾಕ್ಷಿಪುರ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16-05-2013 ರಂದು ಪಿರ್ಯಾದಿ ಟೀ ಕುಡಿಯಲು ಮೋಟಾರ್ ಸೈಕಲ್  ನಿಲ್ಲಿಸಿದ್ದಾಗ ಯಾರೂ  ಮೆರಿಂಡಾ ಕೂಲ್ ಡ್ರಿಂಕ್ಸ್  ನೀಡಿದರು, ಅದನ್ನು ಕುಡಿದ ಮೇಲೆ ಪಿರ್ಯಾದಿಗೆ ಪ್ರಜ್ಞೆ ತಪ್ಪಿದಂತಾಗಿ ಅಲ್ಲೆ ಮಲಗಿಕೊಂಡಿದ್ದಾರೆ ಆನಂತರ ಅವರ ಬೈಕ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 252/13 ಕಲಂ. 379 ಐ.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಕಾಳಪ್ಪ ಬಿನ್. ಯಲ್ಲಪ್ಪ, ನಾಲಬಂದವಾಡಿ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರ ಬಾಬ್ತು ಹಂದಿಶೆಡ್ಡಿನ ಮುಂಭಾಗ ನಿಲ್ಲಿಸಿ ಹಂದಿಗಳಿಗೆ ನೀರು ತರಲು ತಮ್ಮ ಮನೆಗೆ ಹೊಗಿ ಬರುವಷ್ಟರಲ್ಲಿ ತಾನು ಬೀಗ ಹಾಕಿ ನಿಲ್ಲಿಸಿದ್ದ ಕೆಎ-11-ಎಕ್ಸ್-8081 ಮಹೇಂದ್ರ ಡ್ಯೂರೋ ಮೋಟಾರ್ ಸೈಕಲ್ ಸದರಿ ಸ್ಥಳದಲ್ಲಿ ಇರಲಿಲ್ಲ, ನಾನು ತಕ್ಷಣ ಅಕ್ಕಪಕ್ಕ ಹುಡುಕಿ ಸಿಗದ ಕಾರಣ ಈ ದಿನ ತಡವಾಗಿ ಬಂದು ಕಳುವಾಗಿರುವ ತನ್ನ ಬಾಬ್ತು ಮೋಟಾರ್ ಸೈಕಲ್ ಬೆಲೆ ಅಂದಾಜು 37000/- ರೂಗಳಾಗುತ್ತದೆ  ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.    


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 154/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 20-05-2013 ರಂದು ಪಿರ್ಯಾದಿ ಶ್ರೀ.ಲಕ್ಷ್ಮಣಗೌಡ, ಕಾಡುಅಂಕನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 18-05-2013 ರಂದು ಬೆಳಿಗ್ಗೆ 08-30 ಗಂಟೆಯಲ್ಲಿ ನಂಜುಂಡ @ ಸಂಜಯ ಬಿನ್ ಎ.ವಿ.ಲಕ್ಷ್ಮಣಗೌಡ, ಸುಮಾರು 08ವರ್ಷ, ವಕ್ಕಲಿಗರು, ವಾಸ ಅಂಗಳಪರಮೇಶ್ವರಿ ದೇವಸ್ಥಾನದ ಹಿಂಭಾಗ, ಮಾಗಡಿ ಮುಖ್ಯ ರಸ್ತೆ, ಚಿಕ್ಕಗೊಲ್ಲರಹಟ್ಟಿ, ಇಂದಿರಾಕಾಲೋನಿ ರವರು ತಂದೆ ತಾಯಿಯವರ ಮನೆಯಿಂದ ಎಲ್ಲಿಗೆ ಹೋಗಿದ್ದಾನೆ ಎಂಬುದು ತಿಳಿದು ಬಂದಿಲ್ಲ ಈ ಬಗ್ಗೆ ನಾವುಗಳು ನೆಂಟರ ಮತ್ತು ಬಳಗದವರ ಮನೆಯಲ್ಲಿ ಹುಡುಕಿದರು ಸಹ ಕಾಣೆಯಾಗಿರುತ್ತಾನೆ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 330/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 20-05-2013 ರಂದು ಪಿರ್ಯಾದಿ ದೇವೇಗೌಡ ಬಿನ್. ಲೇಟ್. ಕೆಂಪೇಗೌಡ, 50 ವರ್ಷ, ಅರಳಕುಪ್ಪೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರವಿಕುಮಾರ ಬಿನ್. ಲೇಟ್. ಕೆಂಪೇಗೌಡ, 36 ವರ್ಷ, ಅರಳಕುಪ್ಪೆ ಗ್ರಾಮ ರವರು ದಿನಾಂಕ: 18-05-2013 ರಂದು ಮದ್ಯಾಹ್ನ  02-00 ಗಂಟೆಯಲ್ಲಿ ಟ್ರಾಕ್ಟರ್ ಗೆ ಡೀಸಲ್  ತರುತ್ತೇನೆ ಎಂದು ಹೇಳಿ ಹೋದವರು  ವಾಪಸ್ ಬಂದಿರುವುದಿಲ್ಲಾ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 229/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

       ದಿನಾಂಕ: 20-05-2013 ರಂದು ಪಿರ್ಯಾದಿ ರಾಧ ಕೋಂ. ಹಂಸ, ಜಯಲಕ್ಷ್ಮೀ ಟಾಕೀಸ್ ಮುಂಬಾಗ, 1ನೇ ಕ್ರಾಸ್, ಮಂಡ್ಯ (ರಾಮಕೃಷ್ಣರವರ ಮನೆ ಬಾಡಿಗೆ) ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16-04-2013 ರಂದು ಬೆಳಿಗ್ಗೆ 06-00 ಗಂಟೆಯ ನಂತರ ರಾತ್ರಿ 08-30 ರ ಪಿರ್ಯಾದಿಯವರು ವಾಸವಿರುವ ಮನೆಯಿಂದ ದಿನಾಂಕ: 22-04-2013 ರಂದು ಬಂದ ಮೇಸೆಜ್ ನಲ್ಲಿ, ನಾನು ಒಂದು ತಿಂಗಳು ನಂತರ ಬರುತ್ತೇನೆ ಎಂಬುದಾಗಿ ಬಂದಿದ್ದು ನನ್ನ ಗಂಡ ಇಲ್ಲಿಯ ತನಕ ವಾಪಸ್ಸು ಬಂದಿರುವುದಿಲ್ಲ ನನ್ನ ಗಂಡ ಎಲ್ಲಿದ್ದನೋ ಗೊತ್ತಿಲ್ಲ ಆದ್ದರಿಂದ ನನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 

DAILY CRIME REPORT DATED : 19-05-2013.


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-05-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿರುತ್ತವೆ ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ಕಳ್ಳತನ ಪ್ರಕರಣ,  3 ಮಹಿಳಾ ದೌರ್ಜನ್ಯ /ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ಕೊಲೆ/ವರದಕ್ಷಿಣೆ ಸಾವಿನ ಪ್ರಕರಣ,  1 ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ,  4 ರಸ್ತೆಅಪಘಾತ ಹಾಗು ವಿದ್ಯುಚ್ಚಕ್ತಿ ಅಪಥಾತ ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 17 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಐ.ಎಂ.ವಿ. ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.     


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 174(ಸಿ) ಸಿ.ಆರ್.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಅಕ್ಬರ್ ಬಿನ್. ಇಂತಿಯಾಜ್, ಹರಳಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:18-05-2013 ರಂದು ಪಾಂಟವಪುರ ಟೌನ್ ನ ಚಂದ್ರಶೇಖರಯ್ಯ ರವರ ಕಲ್ಲು ಕೋರೆ ಬಳಿ, ಇಂತಿಯಾಜ್, ಹರಳಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ಎಂಬುವವರು ಮನೆಯಿಂದ ಟೀ ಕುಡಿದುಕೊಂಡು ಬರುತ್ತೇನೆಂದು ಹೇಳಿ ಹೋದವರು ವಾಪಸ್ ಬಂದಿರುವುದಿಲ್ಲ ಒಬ್ಬ ವ್ಯಕ್ತಿ ಮೈಸೂರಿನ ಚಂದ್ರಶೇಖರಯ್ಯ ರವರ ಕಲ್ಲು ಕೋರೆಯ ಬಳಿ ಸತ್ತು ಹೋಗಿದ್ದಾರೆ ಎಂದು ತಿಳಿಸಿದರು. ಆಗ ನಾವು ಅಲ್ಲಿ ಹತ್ತಿರಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಯವರ ಶವವಾಗಿತ್ತು. ನಮ್ಮ ತಂದೆಯವರು ದಿನಾಂಕಃ 18-05-2013 ರಂದು ಸಂಜೆ ಎಲ್ಲೋ ಕಲ್ಲು ಬಂಡೆಯಿಂದ ಕೆಳಕ್ಕೆ ಬಿದ್ದು ತಲೆಗೆ ಮೈ ಕೈಗೆ ಪೆಟ್ಟಾಗಿ ಮೂಗು ಬಾಯಲ್ಲಿ ರಕ್ತ ಬಂದು ಸತ್ತಿರುವಂತೆ ಕಂಡು ಬಂದಿರುತ್ತೆ. ಆದರೂ ನಮ್ಮ ತಂದೆಯವರ ಸಾವಿನಲ್ಲಿ ನಮಗೆ ಅನುಮಾನವಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 27/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಹೆಚ್.ಎಲ್. ಹರೀಶ, ಹಾರೋಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಲಕ್ಷಮ್ಮ 73 ವರ್ಷ ಹಾರೋಹಳ್ಳೀ ಗ್ರಾಮ ಎಂಬುವರಿಂದ ನರ್ಸ್ ಅನುಸೂಯ ಎಂಬುವವರು ಮನೆಯನ್ನು ಕ್ರಯಕ್ಕೆ ತೆಗೆದುಕೊಂಡಿದ್ದು ನಂತರ ಆಕೆಯನ್ನು ಮಡುವಿನಕೋಡಿ ಗ್ರಾಮದ ಗೌರಮ್ಮನ ಮನೆಗೆ ಬಿಟ್ಟಿದ್ದು ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆಕೆಯನ್ನು ದಿನಾಂಕ:17-5-2013 ರಂದು ಪಾಂಡವಪುರ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ಮೈಸೂರು ಜಯದೇವ ಆಸ್ಪತ್ರೆಗೆ ಸೇರಿಸಿದ್ದು ಅವರು ದಿನಾಂಕ:18-5-2013 ರಂದು ಸಂಜೆ 07-00 ಗಂಟೆಯಲ್ಲಿ ಮೃತಪಟ್ಟಿದ್ದು ಆಕೆಯ ಸಾವಿನಲ್ಲಿ ಅನುಮಾನವಿದೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ. 
 

ಕಳ್ಳತನ ಪ್ರಕರಣ :

 ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 380, ಐ.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಯೋಗೇಶ್ ಚಂದನ್, ಬಿನ್. ಶ್ರೀ. ನಾರಯಣ್, 40 ವರ್ಷ, ರಾಜಸ್ಥಾನ, ಬಿ-92, ತಲವಂಡಿ, ಕೋಟ- 324005 ಚಾಟರ್ೆಡ್ ಅಕೌಂಟ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:18-05-2013 ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ಪಂಪ್ ಹೌಸ್ ಸರ್ಕಲ್ ಬಳಿ ಇರುವ ನ್ಯೂ ಶಾರದ ರೆಸಾಟರ್್ಗೆ ಬೇಟಿ ನೀಡಿದ್ದು, ರೆಸಾರ್ಸ್ ನಲ್ಲಿ  ರಾತ್ರಿ ಮಲಗಿದ್ದಾಗ ಈ ದಿನ ಮದ್ಯರಾತ್ರಿಯಿಂದ ಬೆಳಗಿನ ವೇಳೆಯಲ್ಲಿ ಅವರ ಬಳಿಯಿದ್ದ 35.000 ರೂ ಹಣವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ /ವರದಕ್ಷಿಣೆ ಕಿರುಕುಳ/ನಿಷೇಧ ಕಾಯಿದೆ ಪ್ರಕರಣಗಳು :

1.ಕೊಪ್ಪ ಪೊಲೀಸ್ ಠಾಣೆ ಮೊ.ನಂ. 112/13 ಕಲಂ. 498(ಎ) ಐ.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಎ.ಅಭಿಲಾಷ ಬಿನ್. ಶಿವರಾಮೇಗೌಡ, 24ವರ್ಷ. ಒಕ್ಕಲಿಗರು, ಗೃಹಿಣಿ. ಅರಗಿನಮೆಳೆ ಗ್ರಾಮ. ಕೊಪ್ಪ ಹೋ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಗಂಡ ಅನ್ಯೊನ್ಯವಾಗಿದ್ದು ತದ ನಂತರ ನನಗೆ ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದನು. ಗಂಡನ ಮನೆ ಕೋಡಿನಾಗನಹಳ್ಳಿಯಲ್ಲಿ ಗಂಡ ಎನ್.ರಘು, ಅತ್ತೆ ಪುಟ್ಟರಾಜಮ್ಮ, ನಂಜೇಗೌಡ( ಮಾವ), ಮೈದ ಪ್ರಸನ್ನ, ನಾದಿನಿ ಚಂದ್ರಕಲಾ, ಎಲ್ಲರೂ ಕೋಡಿನಾಗನಹಳ್ಳಿ ಗ್ರಾಮ, ಕೊಪ್ಪ ಹೋ. ಮದ್ದೂರು ಸಹಾ ನನ್ನೊಡನೆ ಪ್ರತಿನಿತ್ಯ ಗಲಾಟೆ ಮಾಡುವುದು ಎಲ್ಲರೂ ಕೈಯಿಂದ ಹೊಡೆದು ಕಾಲಿನಿಂದ ತುಳಿದು ದೈಹಿಕವಾಗಿ ಹಿಂಸೆ ನೀಡುವುದು ಮಾಡುತ್ತಿರುತ್ತಾರೆ ಎನ್.ರಘು ನನ್ನೊಡನೆ ಬಾಳ್ವೆ ಮಾಡುವುದಿಲ್ಲ, ಐವತ್ತು ಸಾವಿರ ರೂ ಹಣ ನೀಡುತ್ತೇನೆ ನೀನು ನಿನ್ನ ತಂದೆ ಮನೆಯಲ್ಲಿಯೇ ಇರು ಎಂದು ಸಬೂಬು ಹೇಳಿದನು. ಈ ವರೆವಿಗೂ ಸಹಾ ನನ್ನೊಡನೆ ಬಾಳ್ವೆ ಮಾಡಲೂ ಸಹಾ ಮುಂದಾಗದೆ ತೊಂದರೆ ನೀಡುತ್ತಿರುವುದನ್ನೆ ಮುಂದುವರೆಸುತ್ತಿರುವ ಮೇಲ್ಕಂಡವರ ಮೇಲೆ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 329/13 ಕಲಂ. 498 (ಎ) 504 324 506 ಐ.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಸರೋಜ ಕೊಂ. ನಂದೀಶ, ವಕ್ಕಲಿಗರು, ರಾಂಪುರ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ನಂದೀಶ ಬಿನ್. ಕೃಷ್ಣಗೌಡ, ರಾಂಪುರ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ಪಿರ್ಯಾದಿಯವರ ಶೀಲವನ್ನು ಶಂಕಿಸಿ ಮಾನಸಿಕವಾಗಿ ದೈಹಿಕವಾಗಿ ಹಿಂಸೆಕಿರುಕುಳ ನೀಡಿ ದಿನಾಂಕ:19-05-2013 ರಂದು ಸಂಜೆ 06-30 ಗಂಟೆಯಲ್ಲಿ ಕೂಡಗೂಲಿನಿಂದ ತಲೆಗೆ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 
 

3.ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 143-498(ಎ)-506 ಕೂಡ 3 ಮತ್ತು 4 ಡಿ ಪಿ ಆಕ್ಟ್ 

ದಿನಾಂಕ: 19-05-2013 ರಂದು ಪಿರ್ಯಾದಿ ಶೃತಿ ಕೊಂ. ಎಂ. ಬಾಬು ರಾಜೇಂದ್ರ ಪ್ರಸಾದ್, ಬಿನ್. ಪಾರ್ಥಸಾರಥಿ, ಅರಳಕುಪ್ಪೆ ಗ್ರಾಮ, ಶ್ರಿರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಅವರ ಗಂಡ 1)ಎಂ. ಬಾಬು ರಾಜೇಂದ್ರಪ್ರಸಾದ್ 2)ಸುಲೋಚನ 3) ಮರೀಗೌಡ ಇವರೂ ಅರಳಕುಪ್ಪೆ ಗ್ರಾಮ ಹಾಗು 4) ಸೌಮ್ಯ            5) ದಿವಾಕರ, ಕಪ್ಪರನ ಕೊಪ್ಪಲು ಗ್ರಾಮ ಇವರುಗಳು ಪಿರ್ಯಾದಿಯವರಿಗೆ ಸಮಾನ ಉದ್ದೇಶದಿಂದ ವರದಕ್ಷಿಣೆ ತೆಗುದುಕೊಂಡು ಬಾ ಎಂದು ಮಾನಸಿಕ ಹಾಗೂ ಮತ್ತು ದೈಹಿಕ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿರುತ್ತೇರೆಂದು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ/ವರದಕ್ಷಿಣೆ ಸಾವಿನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 221/13 ಕಲಂ. 143, 304[ಬಿ], 302 ಕೂಡ 149 ಐ.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಸಿ.ದೇವರಾಜು ಬಿನ್. ಚನ್ನೇಗೌಡ, 50 ವರ್ಷ, ಒಕ್ಕಲಿಗರು, ವಾಸ ಬೊಮ್ಮನಾಯ್ಕನಹಳ್ಳಿ ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ. ಹಾಲಿ ವಾಸ ನಂ, 28, 4ನೇ ಮೈನ್, 4ನೇ ಕ್ರಾಸ್, 7ನೇ ಬ್ಲಾಕ್, ಬಿಎಸ್ಕೆ 3ನೇ ಹಂತ, ಬೆಂಗಳೂರು ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 18-05-2013 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ಮಂಡ್ಯದಿಂದ ರೈಸ್ಮಿಲ್ ಗುರು ಎಂಬುವರು ಫಿರ್ಯಾದಿಗೆ ಪೋನ್ ಮಾಡಿ ನಿಮ್ಮ ಮಗಳು ತೇಜುಗೆ ಉಷಾರಿಲ್ಲದೆ ಮಂಡ್ಯದ ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಮೃತಪಟ್ಟಿರುತ್ತಾಳೆಂದು ತಿಳಿಸಿದ್ದು ಕೂಡಲೇ ಫಿರ್ಯಾದಿಯು ತಮ್ಮ ಸಂಬಂಧಿಕರೊಂದಿಗೆ ಆಸ್ಪತ್ರೆಗೆ ಬಂದು ತಮ್ಮ ಮಗಳ ಶವವನ್ನು ನೋಡಲಾಗಿ ಆಕೆಯ ಕುತ್ತಿಗೆಯಲ್ಲಿ ಯಾವುದೋ ವಸ್ತುವಿನಿಂದ ಕೊರೆದಿರುವಂತಹ ಗುರುತು ಕಂಡು ಬಂದಿರುತ್ತದೆ. ತಮ್ಮ ಮಗಳಿಗೆ ಆರೋಪಿತರಾದ 1] ಡಾ|| ರಾಘವೇಂದ್ರ (ಗಂಡ) 2] ಇಂದ್ರಮ್ಮ (ಅತ್ತೆ) 3] ಲಿಂಗೇಗೌಡ (ಮಾವ) 4] ಶ್ವೇತ (ನಾದಿನಿ) 5] ಸ್ಮಿತ (ನಾದಿನಿ ಗಂಡನ ಅಕ್ಕ) 6] ಶಂಕರೇಗೌಡ (ಗಂಡನ ಸೋದರ ಮಾವ) ಎಲ್ಲರೂ ಕಲ್ಲಹಳ್ಳಿ, ಮಂಡ್ಯ ಸಿಟಿ. ರುಗಳೆಲ್ಲರೂ ಸೇರಿಕೊಂಡು ಇನ್ನು ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ದಿನಾಂಕ: 18-05-2013 ರಂದು ಯಾವುದೋ ವಸ್ತುವಿನಿಂದ ತಮ್ಮ ಮಗಳ ಕುತ್ತಿಗೆಯನ್ನು ಬಿಗಿದು ನಂತರ ಆಸ್ಪತ್ರೆಗೆ ತಂದು ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ. ಈ ಬಗ್ಗೆ ಮೇಲ್ಕಂಡ ಆರೋಪಿತರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 222/13 ಕಲಂ. 436 ಐ.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಮಲ್ಲನಗೌಡ ಪಾಟೀಲ್ ಬಿನ್. ಲೇಟ್ ಫಕೀರ್ಗೌಡ, ಮ್ಯಾನೇಜರ್, ವಿ.ಆರ್.ಎಲ್. ಲಾಜಿಸ್ಟಿಕ್ ಲಿಮಿಟೆಡ್ ಕಂಪನಿ, ಮಂಡ್ಯ ಶಾಖೆ. ವಾಸ ಎಂ.ಸಿ.ರಸ್ತೆ, ಕಲ್ಲಹಳ್ಳಿ, ಮಂಡ್ಯ ಸಿಟಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-05-2013 ರಂದು ಬೆಳಗಿನ ಜಾವ 03-00 ಗಂಟೆಯಲ್ಲಿ ಯಾರೋ ದುಷ್ಕಮರ್ಿಗಳು ತಮ್ಮ ಕಂಪನಿಯ ಕಾಂಪೌಂಡ್ ಮೇಲೆ ನೆಗೆದು ಒಳಪ್ರವೇಶಿಸಿ ರಾತ್ರಿ ಪಾಳಯದಲ್ಲಿದ್ದ ವಾಚ್ಮನ್ ಶಿವಣ್ಣನನ್ನು ತಳ್ಳಿ ಒಂದು ಕಡೆ ಕೂರಿಸಿ ತಮ್ಮ ಗೋದಾಮಿನ ಒಳ ಆವರಣದಲ್ಲಿ  ವ್ಯಾಪಾರಸ್ಥರಿಗೆ ವಿತರಿಸಲು ಇಟ್ಟಿದ್ದ ದಾಸ್ತಾನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುತ್ತಾರೆ. ಇದರಿಂದಾಗಿ ಬಟ್ಟೆಗಳು, ಆಟೋಮೊಬೈಲ್ ಸಂಬಂಧಿತ ವಸ್ತುಗಳು, ಫ್ರಿಡ್ಜ್, ಕಂಪ್ಯೂಟರ್ ಮತ್ತು ಸಾಮಾಗ್ರಿಗಳು, ಔಷಧಿ ಮತ್ತು ಸಂಬಂಧಿಸಿದ ವಸ್ತುಗಳು, ಟಿ.ವಿ., ಕಛೇರಿಯ ಕೆಲವು ಪ್ರಮುಖ ದಾಖಲೆ ಪತ್ರಗಳು ಇನ್ನು ಹಲವಾರು ವಸ್ತುಗಳು ಸುಟ್ಟು ಕರಕಲಾಗಿದ್ದು ಇದರಿಂದ ಸುಮಾರು 8 ರಿಂದ 10 ಲಕ್ಷ ರೂ.ಗಳು ನಷ್ಟ ಉಂಟಾಗಿರುತ್ತದೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಹಾಗು ವಿದ್ಯುಚ್ಚಕ್ತಿ ಅಪಥಾತ ಪ್ರಕರಣಗಳು :

1. ಮದ್ದೂರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 279, 304(ಎ) ಐಪಿಸಿ ರೆಃವಿ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 19-05-2013 ರಂದು ಪಿರ್ಯಾದಿ ಸ್ವಾಮಿ ಜಿ.ವಿ. ಬಿನ್. ವೆಂಕಟರಾಮು, 36 ವರ್ಷ,  ನಂ. 27, 1ನೇ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, ಕಸ್ತೂರಿ ಬಾ ನಗರ, ಮೈಸೂರು ರೋಡ್ ಬೆಂಗಳೂರು-26 ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾವುದೋ ಒಂದು ಅಪರಿಚಿತ ಕಾರಿನ ಚಾಲಕ, ಕಾರಿನ ನಂಬರ್. ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ದಿನಾಂಕ: 18-05-2013 ರಂದು ರಾತ್ರಿ 10-30 ಗಂಟೆಗೆ  ಮದ್ದೂರು ಟೆೌನಿನ, ಕೊಲ್ಲಿ ಸರ್ಕಲ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೋಗಿ ನೋಡಲಾಗಿ ಈ ಅಪಘಾತವಾಗಿ ಬಿದ್ದಿದ್ದ ವ್ಯಕ್ತಿ ನಮ್ಮ ಮದುವೆಗೆ ಬಂದಿದ್ದ ನಮ್ಮ ಬಡಾವಣೆಯ ಜಯಶಂಕರ್ ಆಗಿದ್ದು ಆ ಸಮಯದಲ್ಲಿ ಅವರು ಪ್ರಜ್ಞಾಹೀನರಾಗಿದ್ದು ನಂತರ ಅವರನ್ನು ಚಿಕಿತ್ಸೆಯ ಬಗ್ಗೆ ಮದ್ದೂರು ಸಕರ್ಾರಿ ಆಸ್ಪತ್ರೆಗೆ ಯಾವುದೋ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಸೇರಿಸಿ ನಂತರ ಮದ್ದೂರು ಸಕರ್ಾರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಚಿಕಿತ್ಸೆಯನ್ನು ನೀಡುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಕೆ. ಬಿ ಆಶ್ವಥ ಬಿನ್. ಬೋರೇಗೌಡ. 23 ವರ್ಷ. ಒಕ್ಕಲಿಗರು. ವ್ಯವಸಾಯ ವಾಸ  ಟಿ . ಕಾಗೇಪುರ. ಕಿರುಗಾವಲು ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: ದಿನಾಂಕ 19-05-2013 ರಂದು ರಾತ್ರಿ 07-30 ಗಂಟೆಯ ಸಮಯದಲ್ಲಿ ಸೈಕಲ್ ಸವಾರ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಭುಗತಗಹಳ್ಳಿ, ಎಂ.ಬಸವನಪುರ ಗೇಟ್ ಹತ್ತಿರ ಹೋಟೆಲ್ನಲ್ಲಿ ಊಟಮಾಡಿಕೊಂಡು ವಾಪಸ್ ಕಾಗೇಪುರಕ್ಕೆ ಹೋಗುವ ಉದ್ದೇಶ ದಿಂದ ಸೈಕಲ್ನಲ್ಲಿ ಮಳವಳ್ಳಿ - ಮದ್ದೂರು ರಸ್ತೆಯ ಎಂ ಬಸವನಪುರ ಗ್ರಾಮದ  ಬಸ್ ನಿಲ್ದಾಣದ ಹತ್ತಿರ ಕಾಗೇಪುರ ಕಡೆಗಾದಂತೆ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಮದ್ದೂರು ಕಡೆಯಿಂದ ಬಂದ ಮನೋಹರ, ಕೆಎ10 ಎಪ್ 0015ಕೆಎಸ್ಆರ್ಟಿಸಿ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಬಲಬಾಗಕ್ಕೆ ಬಂದು ಸೈಕಲ್ಗೆ  ಮುಖಾಮುಖಿ ಡಿಕ್ಕಿ ಮಾಡಿದ ಪರಿಣಾಮ ಲಕ್ಷ್ಮಣನಿಗೆ ಬಲಬಾಗದ ಹಣೆ, ಬಲತೋಳು ಮತ್ತು ಎಢ ಮೊಣಕಾಲಿನ ಹತ್ತಿರ ಪೆಟ್ಟಾಗಿ ಚಿಕಿತ್ಸೆಗಾಗಿ ಮಳವಳ್ಳಿ ಸಕರ್ಾರಿ  ಆಸ್ಪತ್ರೆಗೆ  ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 08.20 ಗಂಟೆಯ ಸಮಯದಲ್ಲಿ ಮೃಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 157/13 ಕಲಂ. 304(ಎ) ಐ.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಹೆಚ್.ಬಿ.ಕಾಂತರಾಜು ಬಿನ್. ಹೆಚ್.ಎಸ್. ಬೋರೇಗೌಡ, ಬಿದರಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:19-05-2013 ರಂದು ಮದ್ಯಾಹ್ನ 03-30 ಗಂಟೆಯಲ್ಲಿ, ಬಿದರಹೊಸಳ್ಳಿ-ಯಲಾದಳ್ಳಿ ಮುಖ್ಯ ರಸ್ತೆಯ ಕೆಜ್ಜೆಯರ ಸೇತುವೆ ಬಳಿ ಇರುವ ಟ್ರಾನ್ಸಫಾರಂ ಬಳಿ ಪಿರ್ಯಾದಿಯವರ ತಮ್ಮ ಯೋಗೇಶನು ಗದ್ದೆಯ ಹತ್ತಿರ ಹೋಗುತ್ತಿದ್ದಾಗ ಟ್ರಾನ್ಸಫಾರಂನಿಂದ ತುಂಡಾಗಿ ಬಿದಿದ್ದ ತಂತಿ ತಗುಲಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ, ಇದಕ್ಕೆ ಕೆ.ಇ.ಬಿ. ಅಧಿಕಾರಿಗಳ ನಿರ್ಲಕ್ಷತೆ ಕಾರಣವಾಗಿರುತ್ತೆ. ಈ ಬಗ್ಗೆ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 192/13 ಕಲಂ. 304, 201 ಐ.ಪಿ.ಸಿ.

ದಿನಾಂಕ: 19-05-2013 ರಂದು ಪಿರ್ಯಾದಿ ಕೆ. ನರೇಂದ್ರ ಕುಮಾರ್, ಪಿಎಸ್ಐ, ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಕೆಂಪಣ್ಣ @ ಕೆಂಪಪ್ಪ, ಬೇಬಿ ಗ್ರಾಮ, ಪಾಂಡವಪುರ ತಾಲ್ಲೂಕು ಎಂಬುವವರಿಗೆ ದಿನಾಂಕ: ದಿನಾಂಕಃ 09-04-2013 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ, ಬೇಬಿ ಗ್ರಾಮದ ಜಮೀನಿನ ಬಳಿ ದಿನಾಂಕ: 18-05-2013 ರಂದು ಎಫ್.ಎಸ್.ಎಲ್. ವರದಿಯನ್ನು ಪಡೆದಿದ್ದು ವರದಿಯನ್ನು ಪರಿಶೀಲಿಸಿ ನೋಡಲಾಗಿ ವೈದ್ಯರು ತಮ್ಮ ಅಭಿಪ್ರಾಯದಲ್ಲಿ ಮೃತನು  I am of the opinion that the cause is due to Cardio Respiratory arrest due to Electrical Injury  ಎಂದು ಅಬಿಪ್ರಾಯ ನೀಡಿದ ವರದಿಯನ್ನು ನೀಡಿದ್ದು ಸದರಿ ವರದಿಯನ್ನು ದಿನಾಂಕ:-19-05-2013ರಂದು ಬೇಳಿಗ್ಗೆ 10-00ಗಂಟೆಗೆ ಸ್ವೀಕರಿಸಿಕೊಂಡಿರುತ್ತೆ. ಸದರಿ ಮೃತನ ಕೆಂಪಣ್ಣ @ ಕೆಂಪಪ್ಪ ರವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರಿಂದ ಈ ಬಗ್ಗೆ ತನಿಖೆ ಕೈಗೊಳ್ಳಬೇಕಾಗಿರುವುದರಿಂದ ಈಗಾಗಲೆ ದಾಖಲಾಗಿರುವ ಯು.ಡಿ.ಆರ್. ನಂ. 13/2013 ಕಲಂ: 174[ಸಿ]ಸಿಆರ್ಪಿಸಿ. ಪ್ರಕರಣವನ್ನು ಬದಲಾಯಿಸಿ ಮೊ. ನಂ. 192/2013 ಕಲಂ: 304-201 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.


ಮನುಷ್ಯ ಕಾಣೆಯಾದ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 114/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 19-05-2013 ರಂದು ಪಿರ್ಯಾದಿ ಪುಟ್ಟರಾಜಮ್ಮ ಕೋಂ. ನಾಗರಾಜು @ ಎಮ್ಮೆನಾಗ, ವ್ಯವಸಾಯ, ಶಶಿಯಾಲಪುರ ಗ್ರಾಮ, ಮಳವಳ್ಳಿ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-05-2013 ರಂದು ಮಳವಳ್ಳಿ ತಾಲ್ಲೂಕು, ಶಶಿಯಾಲಪುರ ಗ್ರಾಮದಲ್ಲಿ ಸಾಯಂಕಾಲದ ವೇಳೆಯಲ್ಲಿ ಪಿರ್ಯಾದಿಯವರ ಗಂಡನಾದ ನಾಗರಾಜು @ಎಮ್ಮೆ ನಾಗರವರು ದಿನಾಂಕ: 11-05-2013 ರಂದು ತಮ್ಮ ಗ್ರಾಮದ ಗೋಪಾಲನ ಮಗ ರವಿಯವರ ಮದುವೆಗೆಂದು ಬೆಂಗಳೂರಿಗೆ ಹೋಗಿದ್ದು ಮದುವೆ ಮುಗಿದ ನಂತರ ಕಾಡುಗೋಡಿಯಲ್ಲಿರುವ ತನ್ನ ಸಂಬಂಧಿಕರನ್ನು ನೋಡಲು ತಮ್ಮ ಗ್ರಾಮದ ಸಿದ್ದರಾಜು @ಮಣಕ ಎಂಬುವರ ಜೊತೆ ರಾತ್ರಿ 08-00 ಗಂಟೆ ಸಮಯದಲ್ಲಿ ಹೋಗುತ್ತಿದ್ದು ಟ್ರಾಫಿಕ್ ಜಾಮ್ ಆಗಿದ್ದು ನಾಗರಾಜು ಆ ಸಮಯದಲ್ಲಿ ಎಲ್ಲೋ ಕಾಣೆಯಾಗಿದ್ದು ಮನೆಗೂ ಬಂದಿರುವುದಿಲ್ಲ ಮತ್ತು ನಮ್ಮ ಸಂಬಂಧಿಕರ ಮನೆಗೂ ಹೋಗಿರುವುದಿಲ್ಲ ಎಲ್ಲೋ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

Daily Crime Report Dated : 18-05-2013

Daily Crime Report 18-05-2013

DCR Dated : 17-05-2013

Daily Crime Report 17-05-2013

DCR Dated:16-05-2013

Daily Crime Report dated :16-05-2013

Click the above link

DAILY CRIME REPORT DATED : 15-05-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-05-2013 ರಂದು ಒಟ್ಟು 29 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 3 ಅಕ್ರಮ ಮರಳು ಕಳವು ಮತ್ತು ಸಾಗಾಣಿಕೆ/ವಾಹನ ಕಳವು/ಸಾಮಾನ್ಯ ಕಳವು ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ ಹಾಗು 24 ಇತರೆ ಐ.ಪಿ.ಸಿ.ಸಿ./ಸಿ.ಆರ್.ಪಿ.ಸಿ./ಅಬಕಾರಿ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 172/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 15-05-2013 ರಂದು ಪಿರ್ಯಾದಿ ವೆಂಕಟಾಚಲ, ನಯನಕ್ಷತ್ರಿಯ ಜನಾಂಗ, ಅರಕೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎ.ವಿ ದಿವ್ಯಶ್ರೀ, 20 ವರ್ಷ, ಮನೆಕೆಲಸ, ಅರಕೆರೆ ರವರು ದಿನಾಂಕ: 07-05-2013 ರಂದು ಸಂಜೆ 04-30 ಅರಕೆರೆ ಟೌನ್ ನ, ಫಿರ್ಯಾದಿಯವರ ಮನೆಯಿಂದ ಬಿಸಿಲು ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಕ್ರಮ ಮರಳು ಕಳವು ಮತ್ತು ಸಾಗಾಣಿಕೆ/ವಾಹನ ಕಳವು/ಸಾಮಾನ್ಯ ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 223/13 ಕಲಂ. 504-143-147-149-188-379-353 ಐ.ಪಿ.ಸಿ.

       ದಿನಾಂಕ: 15-05-2013 ರಂದು ಪಿರ್ಯಾದಿ ರವಿ ಜೆ. ಸಕರ್ಾರಿ ನೌಕರರು ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಪ್ರಕಾಶ್, ಮಹದೇವ, ಜಯರಾಮು, ನಂಜೇಗೌಡ, ನಂಜುಡೇಗೌಡ ಬನ್ನಹಳ್ಳಿ ಗ್ರಾಮ ರವರುಗಳು ಅಕ್ರಮವಾಗಿ ಮರಳನ್ನು ಎತ್ತಿನ ಗಾಡಿಯಿಂದ ಸಾಗಿಸುತ್ತಿದ್ದಾಗ ಮೇಲ್ಕಂಡವರನ್ನು, ಮರಳು ಸಾಗಿಸುವುದನ್ನು ತಡೆಗಟ್ಟಲು ಮುಂದಾದಾಗ ಬನ್ನಹಳ್ಳಿ ಗ್ರಾಮದ ಪ್ರಕಾಶ್ ಬಿನ್ ಹುಲೀಗೌಡ, ಮಹದೇವು ಬಿನ್. ಬಳ್ಳೇಗೌಡ ರವರು ರವಿ ಜೆ.ಮೇಲೆ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಶಟರ್್ನ ಕಾಲರ್ ಹಿಡಿದು ಎಳೆದಾಡಿ ಹಲ್ಲೆ ನಡೆಸಿರುತ್ತಾರೆ. ಹಾಗೂ ಬನ್ನಹಳ್ಳಿ ವೃತ್ತದ ಗ್ರಾಮಲೆಕ್ಕಗರಾದ ದೇವಪ್ಪ ರವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾ ಸರ್ಕಾರಿ  ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 132/13 ಕಲಂ. 41 ಕ್ಲಾಸ್.-ಡಿ, 102 ಸಿ.ಆರ್.ಪಿ.ಸಿ. ಕೂಡ 379 ಐ.ಪಿ.ಸಿ.

ದಿನಾಂಕ: 15-05-2013 ರಂದು ಪಿರ್ಯಾದಿ ಸಂತೋಷ್ ಕಶ್ಯಪ್, ಪಿಎಸ್ಐ, ಕೆ.ಆರ್.ಪೇಟೆ ಗ್ರಾ. ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:15-05-2013 ರಂದು ಮಧ್ಯಾಹ್ನ 02-00 ಗಂಟೆಯಲ್ಲಿ, ಅಂಚನಹಳ್ಳಿ ಗ್ರಾಮದ ಬೋರ್ವೆಲ್ ಹಳ್ಳದ ಹತ್ತಿರ ಪಿಎಸ್ಐ ರವರು ಸಿಬ್ಬಂದಿಯವರ ಜೊತೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಆರೋಪಿ ಕೆಎ-12-ಎಲ್-1659 ರ ಹಿರೋಹೊಂಡಾ ಬೈಕನ್ನು ಓಡಿಸಿಕೊಂಡು ಬರುತ್ತಿದ್ದು ಪಿರ್ಯಾದಿಯವರನ್ನು ನೋಡಿ ಬೈಕನ್ನು ಬಿಟ್ಟು ಓಡುತ್ತಿದ್ದಾಗ ಆಸಾಮಿಯನ್ನು ಹಿಡಿದು ಬೈಕಿನ ಬಗ್ಗೆ ಪ್ರಶ್ನಿಸಲಾಗಿ ಸರಿಯಾದ ಮಾಹಿತಿ ನೀಡದೆ ತಡವರಿಸುತ್ತಾ ಯಾವುದೇ ದಾಖಲೆಯನ್ನು ಹಾಜರುಪಡಿಸದಿದ್ದರಿಂದ ಆಸಾಮಿಯನ್ನು ಬೈಕ್ ಸಮೇತ ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಲಾಗಿ ಆಸಾಮಿಯು ತಾನು ಈ ಹಿಂದೆ ಕೆಎ-12-ಎಲ್-1659 ರ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಐ.ಸಿ.ಎಲ್. ಫ್ಯಾಕ್ಟರಿಯ ಹತ್ತಿರ ಕಳವು ಮಾಡಿರುವುದಾಗಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



3.  ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 447-506-379 ಕೂಡ 34 ಐ.ಪಿ.ಸಿ.

ದಿನಾಂಕ: 15-05-2013 ರಂದು ಪಿರ್ಯಾದಿ ಮಂಟೆಸ್ವಾಮಿ, ಕೆ.ಆರ್. ಕ್ಯಾತಘಟ್ಟ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಸಿದ್ದೇಗೌಡ, 2] ಸಿದ್ದರಾಜು, 3] ಭಾಗ್ಯ, 4] ಲಕ್ಷ್ಮಿ, ಎಲ್ಲರೂ ಕ್ಯಾತಘಟ್ಟ ಗ್ರಾಮದವರು ಇವರುಗಳು ಹಿಂದಿನಿಂದ ತೊಂದರೆ ನೀಡುತ್ತಿದ್ದು ದಿನಾಂಕ:11-05-2013 ರಂದು ಕ್ಯಾತಘಟ್ಟ ಗ್ರಾಮದ ಸರ್ವೆ. ನಂ.68/5ಬಿ ಪಿರ್ಯಾದಿಯವರ ಪಿತಾರ್ಜಿತ  ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ತೆಂಗಿನ ಫಸಲನ್ನು ಕಟಾವು ಮಾಡಿರುತ್ತಾರೆ ಹಾಗೂ ತೊಂದರೆ ನೀಡಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಯು.ಡಿ.ಆರ್. ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 15-05-2013 ರಂದು ಪಿರ್ಯಾದಿ ದೇವಮ್ಮ, ಒಕ್ಕಲಿಗರು, ತಗ್ಗಹಳ್ಳಿ ಗ್ರಾಮ, ಮಂಡ್ಯ ತಾಲೊಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪುಷ್ಪಲತಾ, 30 ವರ್ಷ, ಒಕ್ಕಲಿಗರು, ಗೃಹಿಣೆ, ವಾಸ ಟಿ. ಮಲ್ಲಿಗೆರೆ ಗ್ರಾಮ, ಮಂಡ್ಯ ತಾ. ರವರಿಗೆ ಸರಿಯಾಗಿ ಮಾತು ಬರುತ್ತಿರಲ್ಲಿ, 8 ವರ್ಷಗಳ ಹಿಂದೆ ಟಿ.ಮಲ್ಲಿಗೆರೆ ಗ್ರಾಮದ ಲೇಟ್. ಕೆಂಪೇಗೌಡರ ಮಗನಾದ ಪ್ರಕಾಶನಿಗೆ ಮದುವೆಮಾಡಿದ್ದು, ನನ್ನ ಮಗಳು ಗಭರ್ಿಣಿಯಾಗಿದ್ದು, ನಮ್ಮಮನೆಗೆ ಬಂದಿದ್ದಳು, ದಿನಾಂಕ: 02-05-2013 ರಂದು ರಾತ್ರಿ 09-00 ಗಂಟೆಯಲ್ಲಿ ನಮ್ಮ ಮಗಳ ಗಂಡನಾದ ಪ್ರಕಾಶ ಮನೆಗೆ ಬಂದಿದ್ದು, ನನ್ನ ಮಗಳು ಹಾಲು ಕಾಯಿಸಲು ಪುಷ್ಪಲತಾ ಸೀಮೇಎಣ್ಣೆ ಸ್ಟೌವ್ ಹಚ್ಚಲು ಸ್ಟೌವ್ ಪಂಪ್ ಮಾಡುತ್ತಿದ್ದು, ಸೀಮೆಎಣ್ಣೆ ಹೊರಚಿಮ್ಮಿ ದಗ್ ಎಂದು ಚೆಂಕಿ ಹತ್ತಿಕೊಂಡು ಆಕಸ್ಮಿಕವಾಗಿ ಬೆಂಕಿ ನನ್ನ ಮಗಳು ತೊಟ್ಟಿದ ನೈಟಿಗೆ ತಗುಲಿ ಬೆಂಕಿ ಹತ್ತಿಕೊಂಡು ನನ್ನ ಅಳಿಯ ಪ್ರಕಾಶ್ ಓಡಿಹೋಗಿ ಬೆಂಕಿಹಾರಿಸಿದರು, ಇದರಿಂದ ನನ್ನ ಮಗಳಿಗೆ ಮುಖ ಎದೆಭಾಗ ಹೊಟ್ಟೆ, ಮತ್ತು ಮಂಡಿಯಿಂದ ಕೆಳಗಡೆ ಸುಟ್ಟಗಾಯವಾಗಿದ್ದು ನನ್ನ ಅಳಿಯನಿಗೂ ಬಲಕೈ ಸುಟ್ಟಗಾಯವಾಗಿತ್ತು ನಂತರ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್. ಆಸ್ಪತ್ರೆಗೆ ಸೇರಿಸಿದ್ದು, ನನ್ನ ಮಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ, ನನ್ನ ಮಗಳ ಮೃತದೇಹವು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ, ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ಇತ್ಯಾದಿ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

Daily Crime Report 14-05-2013




ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-05-2013 ರಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  4 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳ್ಳತನ ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  2 ವಾಹನ ಕಳವು ಪ್ರಕರಣ ಹಾಗು ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣಗಳು,   2 ರಾಬರಿ ಪ್ರಕರಣಗಳು ಹಾಗು 17 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ದಾಖಲಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 189/13 ಕಲಂ. 279-304[ಎ] ಐ.ಪಿ.ಸಿ.

ದಿನಾಂಕ: 14-05-2013 ರಂದು ಪಿರ್ಯಾದಿ ಪುಟ್ಟರಾಜು.ವಿ.ಆರ್. ಬಿನ್. ಲೇಟ್. ರಾಮೇಗೌಡ, ವಿಠಾಲಪುರ ಗ್ರಾಮ, ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-05-2013  ರಂದು ಮದ್ಯಾಹ್ನ 03-30ಗಂಟೆಯಲ್ಲಿ ,ಪಾಂಡವಪುರ ತಾಲ್ಲೋಕು ಬಸವನಗುಡಿ ಕೊಪ್ಪಲು ಬಳಿ ಆರೋಪಿ .ವಿಜಯ್ ವಿ.ಡಿ. ಬಿನ್ ದೇವೇಗೌಡ, ಕೆಎ-11-ಟಿ-6824 ರ ಟ್ರಾಕ್ಟರ್ ಚಾಲಕ, ವಿಠಾಲಪುರ ಗ್ರಾಮ ರವರು ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದಾಗ ಟ್ರಾಕ್ಟರ್ ಅನ್ನು ನಮ್ಮ ಅಣ್ಣ ದೇವೇಗೌಡ ಎಂಬುವವರ ಮಗನಾದ ವಿಜಯ.ವಿ.ಡಿ. ಎಂಬುವರು ಚಾಲನೆ ಮಾಡುತ್ತಿದ್ದು, ಅವರ ಸಹಾಯಕರಾಗಿ ಕಾತರ್ಿಕ್ ಎಂಬುವವರು ತೆರಳಿರುತ್ತಾರೆ. ಈ ಸಂಧರ್ಬದಲ್ಲಿ ಮಾರ್ಗ ಮಧ್ಯೆದಲ್ಲಿ ಅಂದರೆ ಬಸವನಗುಡಿಕೊಪ್ಪಲು ಗ್ರಾಮದ ಬಳಿ ಟ್ರಾಕ್ಟರ್ನ ಬ್ರೇಕ್ ವೈಪಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ವಿಧ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತದೆ. ಈ ಸಂದರ್ಭದಲ್ಲಿ ವಿಜಯ್ ಎಂಬುವವರಿಗೆ ತೀವ್ರವಾಗಿ ಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿ ಅವರು ಚಿಕಿತ್ಸೆ ಸ್ಪಂದಿಸದ ಕಾರಣ  ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಆದಕಾರಣ ತಾವು ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 279-337-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 14-05-2013 ರಂದು ಪಿರ್ಯಾದಿ ಕುಮಾರ ಬಿನ್ ಲೇಟ್ ಚಿಕ್ಕಪಕೀರಯ್ಯ, ನಾರ್ಥಬ್ಯಾಂಕ್, ಪಾಂಡವಪುರ ತಾಲೋಕು ರವರು ನೀಡಿದ ದೂರು ಏನೆಂದರೆ ಆರೋಪಿ ಸಿಟಿಎಂ: 9223ರ ಲಾರಿ ಚಾಲಕ, ಹೆಸರು ವಿಳಾಸ ತಿಳಿಯಬೇಕಿದೆ ರವರು ಕಟ್ಟೇರಿ ಹೊಸೂರು ಸರ್ಕಲ್ ಬಳಿ, ಮಾದೇಗೌಡ ಮತ್ತು ಹರೀಶ ಎಂಬುವವರು ಕೆಟ್ಟು ಹೋಗಿರುವ ಕೆಎ-02-ವಿ-2458 ರ ಮೋಟಾರು ಸೈಕಲ್ ಅನ್ನು ರಿಪೇರಿಗಾಗಿ ರಸ್ತೆಯ ಎಡಭಾಗದಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಲಾರಿ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಡಿಕ್ಕಿಹೊಡೆಸಿದ್ದರಿಂದ ಇಬ್ಬರನ್ನು ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಭಾನವಿ ಆಸ್ಪತ್ರೆಗೆ ಸೇರಿಸಿದ್ದು,, ಚಿಕಿತ್ಸೆ ಫಲಕಾರಿಯಾಗದೆ ಮಾದೇಗೌಡ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-05-2013 ರಂದು ಪಿರ್ಯಾದಿ ಕುಮಾರ ಬಿನ್. ಚಿಕ್ಕಹನುಮೇಗೌಡ. ಎಲ್.ಎಸ್. ಲಕ್ಷ್ಮೀಸಾಗರ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ಚಿಕ್ಕಹನುಮೇಗೌಡ.ಎಲ್.ಎಸ್. 55 ವರ್ಷ, ಲಕ್ಷ್ಮೀಸಾಗರ ಗ್ರಾಮ, ಪಾಂಡವಪುರ ತಾಲ್ಲೋಕು ರವರಿಗೆ ಸ್ವಲ್ಪ ತಲೆ ಸರಿಇರಲಿಲ್ಲ.  ಅವರನ್ನು ಬೆಂಗಳೂರು ನಿಮ್ಹಾನ್ಸ್ಗೆ ಕರೆದುಕೊಂಡು ಹೋಗಬೇಕಾಗಿದ್ದು, ಹಿಂದಿನ ರಾತ್ರಿ  ನಾವೆಲ್ಲರೂ ರಾತ್ರಿ ಊಟ ಮಾಡಿ ಮಲಗಿಕೊಂಡೆವು. ರಾತ್ರಿ ಎಚ್ಚರವಾದಾಗ ನೋಡಿದಾಗ ಕಾಣಲಿಲ್ಲ. ಮೇಲುಕೋಟೆ ಠಾಣೆಗೆ ದೂರು ನೀಡಿದ್ದೆವು. ಅಲ್ಲಿ ಕಾಣೆಯಾದ ರೀತಿಯ ಕೇಸು ದಾಖಲಾಗಿರುತ್ತದೆ. ಅಲ್ಲಿಂದ ಬಂದು ಕೆರೆತಣ್ಣೂರು ಕರೆಯ ಕಡೆ ಹುಡುಕಲಾಗಿ ಮದ್ಯಾಹ್ನ ಕೆರೆಯ ತೂಬಿನ ಪಕ್ಕ  ನೀರಿನಲ್ಲಿ ಹೋಗಿ ನೋಡಲಾಗಿ ಅದು ನಮ್ಮ ತಂದೆ ಶವವಾಗಿ ಕಂಡುಬಂದಿದ್ದು, ನಮ್ಮ ತಂದೆ ಮಲವಿಸರ್ಜನೆಗೆ ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವಂತೆ ಕಂಡು ಬಂದಿರುತ್ತದೆ ನಮ್ಮ ತಂದೆಯ ಸಾವಿನ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ ಶವದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಮ್ಮಲ್ಲಿ ಕೋರಿಕೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2.ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ: 14-05-2013 ರಂದು ಪಿರ್ಯಾದಿ ಪ್ರಸನ್ನ ಎಂ.ಎಸ್. ಬಿನ್. ಲೇಟ್. ಶ್ರೀನಿವಾಸ ಶೆಟ್ಟಿ,  ಬಣಜಿಗ ಜನಾಂಗ, ರೈಲ್ವೆ ಸ್ಟೇಷನ್ ಹಿಂಭಾಗ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದೊಡ್ಡಗರುಡನಹಳ್ಳಿ ಗ್ರಾಮದಲ್ಲಿ ಪಿರ್ಯಾಯವರ ತಂಗಿ ರೇಖಾ ಕೋಂ. ಸಿದ್ದರಾಜು, 25 ವರ್ಷ, ದೊಡ್ಡಗರುಡನಹಳ್ಳಿ ಗ್ರಾಮ,  ಮಂಡ್ಯ ತಾಲ್ಲೂಕು ರವರಿಗೆ ಆಗಾಗ್ಗೆ ಎದೆನೋವು  ತಲೆನೋವು ಕಾಣಿಸುತ್ತಿದ್ದು ಈ ಬಗ್ಗೆ ನಾವು ಹಾಗು ಆಕೆಯ ಗಂಡನಾದ ಸಿದ್ದರಾಜು ರವರನ್ನು ವೈದ್ಯರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು, ದಿನಾಂಕ: 14-05-2013 ರಂದು 03-30 ಗಂಟೆಯ ಸಮಯದಲ್ಲಿ  ತಲೆ ನೋವು ಮತ್ತು ಎದೆನೋವು  ಇದ್ದರಿಂದ ಜೀವನದಲ್ಲಿ ಜಿಗುಪ್ಸೆ ಬಂದು  ರೇಖಾಳು ನೇಣು  ಹಾಕಿಕೊಂಡು ಮೃತ ಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 75/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 14-05-2013 ರಂದು ಪಿರ್ಯಾದಿ ಎಲ್.ಸಿ ಕುಮಾರ ಬಿನ್. ಎಲ್.ಎಸ್. ಚಿಕ್ಕಹನುಮೇಗೌಡ, 28ವರ್ಷ, ಲಕ್ಷ್ಮೀಸಾಗರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ತಂದೆ ಚಿಕ್ಕಹನುಮೇಗೌಡ.ಎಲ್.ಎಸ್,55 ವರ್ಷ,  ಲಕ್ಷ್ಮೀಸಾಗರ ಗ್ರಾಮ ರವರು ಈಗ್ಗೆ ಮೂರು ನಾಲ್ಕು ದಿನಗಳಿಂದ ತಲೆ ಸರಿಯಲ್ಲದಂತೆ ವತರ್ಿಸುತ್ತಿದ್ದು  ಭಾನುವಾರ ರಾತ್ರಿ ನಾನು ಮತ್ತು ನಮ್ಮ ಮನೆಯವರು ನಮ್ಮ ತಂದೆಗೆ ಬೆಳಿಗ್ಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಊಟ ಮಾಡಿಸಿ ನಾನು, ನನ್ನ ತಮ್ಮ ಎಸ್.ಸಿ.ಶ್ರಿನಿವಾಸ,  ನನ್ನ ತಂದೆ ಎಲ್.ಎಸ್.ಚಿಕ್ಕಹನುಮೇಗೌಡ ಮೂರು ಜನರು ನಮ್ಮ ಮನೆಯ ಒಂದೆ ರೂಮ್ನಲ್ಲಿ ಮಲಗಿಕೊಂಡೆವು ನಾವುಗಳು ಮಧ್ಯರಾತ್ರಿ ಎಚ್ಚರವಾಗಿದ್ದು ನಮಗೆ ನಿದ್ದೆ ಬಂದಿದ್ದು ರಾತ್ರಿ   12-45 ಗಂಟೆ ಸಮಯದಲ್ಲಿ ಎಚ್ಚರವಾಗಿ ನೋಡಲಾಗಿ ನನ್ನ ತಂದೆ ಮಲಗಿದ್ದ ಜಾಗದಲ್ಲಿ ಇರಲಿಲ್ಲ. ನಂತರ ನಾನು ಮತ್ತು ನನ್ನ ತಮ್ಮ ಹಾಗೂ ನಮ್ಮ ಕಡೆಯವರೆಲ್ಲರೂ ಎಲ್ಲ ಕಡೆ ಹುಡುಕಲಾಗಿ ಸಿಗಲಿಲ್ಲ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 130/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 14-05-2013 ರಂದು ಪಿರ್ಯಾದಿ ಶ್ರೀನಿವಾಸ ಬಿನ್. ವೆಂಕಟೇಶ, ಸೀಬಯ್ಯನ ಮಂಟಿ, ಬೆಳಗೊಳ, ಶ್ರೀರಂಗಪಟ್ಟಣ ರವರು ನೀಡಿದ ದೂರು ಏನೆಂದರೆ ದಿನಾಂಕ:12-05-2013 ರಂದು ಬೆಳಗೊಳ ಗ್ರಾಮದ, ಲಲಿತಾಂಬನ ಕ್ಲಿನಿಕ್ ನಲ್ಲಿ ನಮ್ಮ ತಂದೆ ನನ್ನ ಮಗು ಅಜಯ್ಕುಮಾರ್ ಬಿನ್ ಶ್ರೀನಿವಾಸ್, 1 1/2 ವರ್ಷ ನನ್ನು, ಬೆಳಗೊಳ ಗ್ರಾಮ, ಶ್ರೀರಂಗಪಟ್ಟಣ ತಾ. ನ ಡಾಕ್ಟರ್ಗೆ ತೋರಿಸಿ, ಡಾಕ್ಟರ್ರವರ ಸಲಹೆಯ ಮೇರೆಗೆ ಟಾನಿಕನ್ನು ತರಲು ನನ್ನ ಹೆಂಡತಿ ದಶರ್ಿನಿ ಕೋಂ. ಶ್ರೀನಿವಾಸ, 16 ವರ್ಷ ರವರನ್ನು ಹಾಗು ಮಗುವನ್ನು ಕ್ಲಿನಿಕ್ ಬಳಿ ಇರುವಂತೆ ಹೇಳಿ ಕ್ಲಿನಿಕ್ಗೆ ಸ್ವಲ್ಪ ದೂರದಲ್ಲಿ ಇರುವ ಮೆಡಿಕಲ್ ಸ್ಟೋರ್ನಲ್ಲಿ ಟಾನಿಕನ್ನು ತೆಗೆದುಕೊಂಡು ವಾಪಸ್ ಕ್ಲಿನಿಕ್ ಬಳಿ ಬಂದಾಗ ನನ್ನ ಹೆಂಡತಿ ಮತ್ತು ಮಗು ಇರಲಿಲ್ಲ ಇಬ್ಬರು ಕಾಣೆಯಾಗಿರುತ್ತಾರೆ ಎಂದು ನಮ್ಮ ತಂದೆಯವರು ಮನೆಗೆ ಬಂದು ನನಗೆ ತಿಳಿಸಿದರು ಆಗ ನಾನು ಮತ್ತು ನಮ್ಮ ತಂದೆ ಇಬ್ಬರೂ ನೆಂಟರಿಷ್ಟರ ಮನೆಗೆ ಪೋನ್ ಮಾಡಿ ಮತ್ತು ನಮ್ಮ ಅತ್ತೆ ಮಾವರವರಿಗೂ ಸಹ ಪೋನ್ ಮಾಡಿ ಹುಡುಕಲಾಗಿ ನನ್ನ ಹೆಂಡತಿ ಮತ್ತು ಮಗು ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ ನನ್ನ ಹೆಂಡತಿ ಮತ್ತು ಮಗು ಕಾಣೆಯಾಗಿದ್ದು ಈ ದಿವಸ ತಡವಾಗಿ ಬಂದು ದೂರು ನೀಡಿರುತ್ತೇನೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 129/13 ಕಲಂ. ಗಂಡಸು ಕಾಣೆಯಾಗಿದ್ದಾನೆ.

       ದಿನಾಂಕ: 14-05-2013 ರಂದು ಪಿರ್ಯಾದಿ ಖಾದರ್ ಷರೀಪ್, ಬಿನ್. ಮೆಹಬೂಬ್ ಷರೀಪ್, ಕೆ.ಆರ್. ಸಾಗರ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಜಾವೇದ್ ಷರೀಪ್, ಬಿನ್ ಮೆಹಬೂಬ್ ಷರೀಪ್ 32 ವರ್ಷ,ಮುಸ್ಲಿಂ ಜನಾಂಗ, ಕೆ.ಆರ್. ಸಾಗರ ರವರು, ಕುರಿ ಮೇಕೆಯನ್ನು ಸಾಲವಾಗಿ ತಂದಿದ್ದ ಹಣವನ್ನು ಸಂಬಂದಪಟ್ಟವರಿಗೆ ಕೊಡಲು ಹೋಗುತ್ತೇನೆ ಎಂದು ಹೇಳಿ ಹೋದವರು ವಾಪಸ್ಸು ಬಂದಿರುವುದಿಲ್ಲ ಹಾಗೂ ಈ ದಿವಸ ಎಲ್ಲಾ ಕಡೆ ಹುಡುಕಲಾಗಿ ನಮ್ಮ ನೆಂಟರ ಮನೆ, ಸ್ನೇಹಿತರ ಮನೆ ಹಾಗು ಮಾಂಸದ ಅಂಗಡಿಯವರಿಗೂ ದೂರವಾಣಿ ಮಾಡಿ ಕೇಳಲಾಗಿ ನನ್ನ ಅಣ್ಣ ಬಂದಿಲ್ಲ ಎಂದು ತಿಳಿಸಿದರು, ಸದರಿ ನನ್ನ ಅಣ್ಣ ಜಾವೇದ್ ಷರೀಪ್ ರವರು ಕಾಣೆಯಾಗಿರುತ್ತಾರೆ, ಅವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

4.ಮದ್ದೂರು ಪೊಲೀಸ್ ಠಾಣೆ ಮೊ.ನಂ. 222/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 14-05-2013 ರಂದು ಪಿರ್ಯಾದಿ ರವಿ ಸಿ. ಬಿನ್. ಲೇಟ್. ಚೌಡಯ್ಯ, ಕೆ. ಹೊನ್ನಲಗೆರೆ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 11-05-2013 ರಂದು ಪಿರ್ಯಾದಿಯವರ ತಂಗಿ ತಂಗಿ ಮಲಕಮ್ಮ ರವರ ಮಗಳು ಶೃತಿಯನ್ನು ಚನ್ನಪಟ್ಟಣ ತಾ. ಮಳೂರು ಪಟ್ಟಣದ ಕೆ. ಬಸವರಾಜು ರವರ ಮಗ ಪ್ರತಾಪ್ ಎಂಬುವರಿಗೆ ಮದುವೆ ಮಾಡಿದ್ದು, ಶೃತಿ ಈಗ್ಗೆ 5 ದಿನಗಳ ಹಿಂದೆ ತನಗೆ ಹೊಟ್ಟೆನೋವು ಇದೆ ಎಂದು ತನ್ನ ಗಂಡನ ಮನೆಯಿಂದ ನಮ್ಮೂರಿಗೆ ಬಂದಿದ್ದು, ದಿನಾಂಕಃ 11-05-2013 ರಂದು ಶೃತಿಯು ಬೆಳಿಗ್ಗೆ 09-00 ಗಂಟೆಯಲ್ಲಿ ನಮ್ಮ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದು, ನಾವು ಈವರೆಗೂ ಆಕೆಯ ಗಂಡನ ಮನೆ ಮತ್ತು ನೆಂಟರ ಹಾಗೂ ಸ್ನೇಹಿತರ ಊರು ಮತ್ತು ಮನೆಗಳಲ್ಲಿ ಹುಡುಕಿದರೂ ಸಿಕ್ಕಿರುವುದಿಲ್ಲವಾದ್ದರಿಂದ ಶೃತಿಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.

ಕಳ್ಳತನ ಪ್ರಕರಣ : 

ಬಸರಾಳು ಪೊಲೀಸ್ ಠಾಣೆ ಮೊ.ನಂ. 76/13 ಕಲಂ. 457-380 ಐಪಿಸಿ ಕೂಡ ಸಬ್ ಸೆಕ್ಷನ್. (1) (19) ಆಮರ್್ ಆಕ್ಟ್ 1958.

     ದಿನಾಂಕ:14-05-2013 ರಂದು ಪಿರ್ಯಾದಿ ನಾಗರಾಜು ವಿ.ಅರ್. ಸಹಾಯಕ ಸಂರಕ್ಷಣಾಧಿಕಾರಿ, ಬಾರತೀಯ ಪುರಾತತ್ವ  ಇಲಾಖೆ, ಶ್ರೀರಂಗಪಟ್ಟಣ ಉಪವಲಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-05-2013 ರಂದು ರಾತ್ರಿ ವೇಳೆಯಲ್ಲಿ ಬಸರಾಳು ಗ್ರಾಮದ ಪುರಾತತ್ವ ಇಲಾಖೆಗೆ ಸೇರಿದ ಶ್ರೀ ಮಲ್ಲಿಕಾಜರ್ುನ ಸ್ವಾಮಿ ದೇವಸ್ಥಾನದ ಮಹಾದ್ವಾರದ ಎಡಬಾಗದಲ್ಲಿ ಬಿನ್ನವಾಗಿಟ್ಟಿದ್ದ ಶಿವಲಿಂಗವನ್ನು ಯಾರೋ ಕಳ್ಳರು ದೇವಸ್ತಾನದ ಗೇಟನ್ನು ಹಾರಿ ಒಳನುಗ್ಗಿ ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಸ್ಮಾರಕದ ವಸ್ತು ಆದ್ದರಿಂದ ಇದರ ಬೆಲೆ ನಿಗದಿಪಡಿಸಲು ಸಾದ್ಯವಿಲ್ಲ ಆದ್ದರಿಂದ ಕಳುವಾಗಿರುವ ಶಿವಲಿಂಗವನ್ನು ಪತ್ತೆ ಹಚ್ಚಿ ಕಳವು ಮಾಡಿರುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 77/13 ಕಲಂ. 498(ಎ)-307 ಐ.ಪಿ.ಸಿ. ಮತ್ತು 3 & 4 ಡಿ.ಪಿ. ಆಕ್ಟ್.

ದಿನಾಂಕ:14-05-2013 ರಂದು ಪಿರ್ಯಾದಿ ದೀಪಿಕ ಕೋಂ. ಸೋಮಚಾರಿ, 24 ವರ್ಷ, ತಿರುಮಲಪುರ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಸೋಮಚಾರಿ ಬಿನ್. ರಂಗಾಚಾರಿ ಹಾಗು ಅತ್ತೆ ಗೌರಮ್ಮ ಕೋಂ. ರಂಗಚಾರಿ, ತಿರುಮಲಪುರ ಗ್ರಾಮ, ಹೋಬಳಿ, ಮಂಡ್ಯ ತಾಲ್ಲೂಕು ರವರುಗಳು ಅವರಿಗೆ       ಮಾನಸಿಕವಾಗಿ ಹಾಗೂ ದ್ಯೆಹಿಕವಾಗಿ ಕಿರುಕುಳ ನೀಡಿ ವರದಕ್ಷಿಣೆ ಹಣ ತರುವಂತೆ ಹಿಂಸೆ ನೀಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಪಟ್ಟಿದ್ದು (ಕೊಲೆಮಾಡುವ ಉದ್ದೇಶದಿಂದ)ಹಾಗೂ ನನ್ನ ಇಬ್ಬರು ಮಕ್ಕಳನ್ನು ನನಗೆ ನೀಡದೆ ಮನೆಯಿಂದ ಹೊರಗೆ ತಳ್ಳಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣ ಹಾಗು ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 221/13 ಕಲಂ. 379 ಐ.ಪಿ.ಸಿ.
      ದಿನಾಂಕ: 14-05-2013 ರಂದು ಪಿರ್ಯಾದಿ ಶಿವಲಿಂಗಯ್ಯ ಬಿನ್. ಲೇಟ್. ಚನ್ನಯ್ಯ, ಉಪ್ಪಿನಕೆರೆ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:    11-05-2013 ರಂದು ಮದ್ದೂರು ಟೌನ್ನ. ಶ್ರೀ. ಅನ್ನಪೂಣರ್ೇಶ್ವರಿ ಛತ್ರದ ಬಳಿ ಮೋಟಾರ್ ಸೈಕಲ್ನಲ್ಲಿ ಬಂದಿದ್ದು, ಬೆಳಿಗ್ಗೆ 07-30 ರ ಸಮಯದಲ್ಲಿ ಮದ್ದೂರಿನ ಅನ್ನಪೂಣರ್ೇಶ್ವರಿ ಕಲ್ಯಾಣ ಮಂಟಪದ ಮುಂಭಾಗ ನಿಲ್ಲಿಸಿ, ಲಾಕ್ ಮಾಡಿಕೊಂಡು ನಾನು ಗ್ಯಾಸ್ ತೆಗೆದುಕೊಳ್ಳಲು ಹೋಗಿ ಗ್ಯಾಸ್ ತೆಗೆದುಕೊಂಡು (ಸಿಲಿಂಡರ್) ವಾಪಸ್ಸು ನಾನು ಮೊಟಾರ್ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಹೋಗಿ, ನೋಡಿದಾಗ ಮೋಟಾರ್ ಸೈಕಲ್ ಕಾಣಲಿಲ್ಲ. ನನ್ನ ಮೋಟಾರ್ ಸೈಕಲ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 35000/- ರೂ ಆಗಿರುತ್ತೆ. ಪತ್ತೆಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 106/13 ಕಲಂ. 379, 511, 353 ರೆವಿ 188 ಐ.ಪಿ.ಸಿ.

     ದಿನಾಂಕ: 14-05-2013 ರಂದು ಪಿರ್ಯಾದಿ ದೇವರಸೇಗೌಡ, ರೆವಿನ್ಯೂ ಅಧಿಕಾರಿ, ತಗ್ಗಹಳ್ಳಿ ವೃತ್ತ, ಕೊಪ್ಪ ಹೋ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಚಿಕ್ಕಮಲ್ಲಯ್ಯ ಬಿನ್ ಕಳಸೇಗೌಡ, ಅರಗಿನಮೇಳೆ ಗ್ರಾಮ, 2] ಕೆ.ಎ-41 ಎ-6576ರ ಲಾರಿ ಚಾಲಕ ಮತ್ತು ಮಾಲೀಕರು, 3] ಕೆ.ಎ.-41 ಎ-7191 ಲಾರಿ ಚಾಲಕ ಮತ್ತು ಮಾಲೀಕರು ಇವರುಗಳು ಶಿಂಷಾ ನದಿಯಿಂದ ಅರಗಿನಮೇಳೆಗೆ ಹಾದು ಹೋಗುವ ನದಿಯಲ್ಲಿ ಚಿಕ್ಕಮಲ್ಲಯ್ಯ ಬಿನ್. ಕಳಸೇಗೌಡ ಆದ ಇವನು ಇವರ ಜಮೀನಿನಲ್ಲಿ ಜಾಡೋಂದನ್ನು ಮಾಡಿಕೊಂಡು ಅಲ್ಲಿ ನಡೆಯುವಂತಹ ಅಕ್ರಮ ಮರಳು ದಂಧೆಯಲ್ಲಿ ಪಾಲ್ಗೊಂಡಿದ್ದಾನೆ. ಈ ಎರಡು ಲಾರಿಗಳ ಮಾಲೀಕರು ಹಾಗು ಲಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಹಾಗೂ ಲಾರಿಗಳನ್ನು ನಿಮ್ಮ ವಶಕ್ಕೆ ತೆಗೆದುಕೊಂಡು ಲಾರಿ ಚಾಲಕರು ಹಾಗೂ ಮಾಲೀಕರ ಮೇಲೆ ಮರಳು ದಂದೆಗೆ ಕಾರಣ ಕರ್ತನಾದ ಚಿಕ್ಕಮಲ್ಲಯ್ಯ ಬಿನ್ ಕಳಸೇಗೌಡನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ರಾಬರಿ ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 320/13 ಕಲಂ. 394 ಐ.ಪಿ.ಸಿ.

ದಿನಾಂಕ: 14-05-2013 ರಂದು ಪಿರ್ಯಾದಿ ಡಿ.ಎಸ್.ಮಂಜುನಾಥ ಬಿನ್. ಶಾಂತವೀರಪ್ಪ, 27 ವರ್ಷ, ಕುಡ್ಲೂರು ಗ್ರಾಮ, ಸೋಮವಾರ ಪೇಟೆ ತಾಲ್ಲೋಕು, ಕುಡಿಗೆ ಪೋಸ್ಟ್, ಕೊಡುಗು ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ.46-ಎಂ-1000 ಟಾಟಾ ಸುಮೋ ಕಾರಿನಲ್ಲಿ ಬಂದ ಅಪರಿಚಿತ 4 ಜನ ವ್ಯೆಕ್ತಿಗಳು, ಎಲ್ಲರೂ ಕನ್ನಡ ಭಾಷಯಲ್ಲಿ ಮಾತನಾಡುತ್ತಾರೆ. ವಯಸ್ಸು ಸುಮಾರು 25 ವರ್ಷದಿಂದ 30 ವರ್ಷದವರಾಗಿರುತ್ತಾರೆ ಇವರುಗಳು, ನಾನು ಕೆ.ಆರ್.ಎಸ್ ರಸ್ತೆಯಲ್ಲಿ ಬರುತ್ತಿರುವಾಗ ನನ್ನ ಹಿಂದಿನಿಂದ ಒಂದು ಟಾಟಾ ಸುಮೋ ಕಾರು ನನ್ನ ಹಿಂದೆ ಬರುತ್ತಿದ್ದು ನಂತರ ಪಿ.ಹೊಸಹಳ್ಳಿ ಗೇಟ್ ಬಳಿ ನನ್ನ ಲಾರಿಯನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿ ನಿಲ್ಲಿಸಿದರು. ಟಾಟಾಸುಮೋದಿಂದ 3 ಜನರು ಕೆಳಗಿಳಿದು ನನ್ನನ್ನು ಲಾರಿಯಿಂದ ಕೆಳಗೆ ಎಳೆದುಕೊಂಡು, ಪೈಕಿ ಕೆಂಪು ಟೀ ಶಟರ್್ ಹಾಕಿರುವವನು , ಕೈಯಿಂದ ಹೊಡೆದು ತನ್ನ ಕೈಯಲ್ಲಿದ್ದ ಚಾಕುವನ್ನು ನನ್ನ ಕತ್ತಿನ ಬಳಿ ಹಿಡಿದುಕೊಂಡು ದುಡ್ಡುಕೊಡು ಮಗನೇ ಎಂದು ಹೆದುರಿಸಿದ. ಇನ್ನಿಬ್ಬರು ಲಾರಿಯ ಕ್ಯಾಬಿನ್ಗೆ ಹತ್ತಿ ಹುಡುಕಿ ಡ್ಯಾಸ್ ಬೋಡರ್್ ಬಳಿ ಇಟ್ಟಿದ್ದ ಪಸರ್್ನ್ನು ತೆಗೆದುಕೊಂಡು ಅದರಲ್ಲಿ ಇದ್ದ 9000 ರೂಗಳನ್ನು ಸುಲಿಗೆ ಮಾಡಿದರು ಹಾಗೂ     ಕ್ಲೀನರ್ ಮಲ್ಲಿಕಾಜರ್ುನ ಬಳಿ ಇದ್ದ 65 ರೂಪಾಯಿಗಳನ್ನು ಸಹ ಕಿತ್ತುಕೊಂಡರು ಹಾಗೂ ನನ್ನ ಕತ್ತಿನ ಬಳಿ ಚಾಕುವನ್ನು ಇಟ್ಟು ಹೆದರಿಸಿ 10 ಲೀಟರ್ ಡೀಸೆಲ್ ಅನ್ನು ನನ್ನ ಲಾರಿಯಿಂದ ಕ್ಯಾನ್ಗೆ ಹಾಕಿಸಿಕೊಂಡು ಕಾರಿನಲ್ಲಿ ಒಬ್ಬ ಕುಳಿತಿದ್ದ ನಂತರ ಅವರು ಯಾರಿಗೂ ಹೇಳಬೇಡ ಹೇಳಿದರೆ ಇದೇ ರೋಡ್ನಲ್ಲಿ ಬರುವಾಗ ಚಾಕುವಿನಿಂದ ಚುಚ್ಚಿ ಕೊಲೆ ಮಾಡುತ್ತೀವಿ ಎಂದು ಹೆದರಿಸಿ ಹೊರಟು ಹೋದರು ಎಂದು ನೀಡಿ ಪಿರ್ಯಾದಿನ ಮೇಲೆ ಕೇಸು ನೊಂದಾಯಿಸಿರುತ್ತೆ. 

2. ಹಲಗೂರು ಪೊಲೀಸ್ ಠಾಣೆ ಮೊ.ನಂ. 108/13 ಕಲಂ. 457-380-392 ಐ.ಪಿ.ಸಿ.
ದಿನಾಂಕ: 14-05-2013 ರಂದು ಪಿರ್ಯಾದಿ ಎಂ.ಪಿ.ಚಂದ್ರಶೇಖರ್ ಬಿನ್. ಲೇಟ್. ಎಸ್.ಪುಟ್ಟಸ್ವಾಮಿ, ಮಾರಗೌಡನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದಿಯವರ ಮನೆಯಲ್ಲಿ ಕಳುವು ಮಾಡಲು ಹಿಂಬಾಗಿಲ ಚಿಲಕ ಮೀಟಿ ಒಳಗೆ ಬಂದು ಪ್ಯಾಂಟ್ ಜೇಬಿನಲ್ಲಿದ್ದ 18 ಸಾವಿರ ಹಣ, ದೇವರ ಮನೆಯಲ್ಲಿದ್ದ 2800/- ರೂ ಹಣ ತೆಗೆದುಕೊಂಡು ನನ್ನ ಪತ್ನಿಯ ಕತ್ತಿನಲ್ಲಿದ್ದ 30ಗ್ರಾಂ ಮಾಂಗಲ್ಯ ಸರ ಹಾಗೂ ಒಂದು ನೋಕಿಯಾ ಮೊಬೈಲ್ ಹ್ಯಾಂಡ್ಸೆಟ್ ಒಟ್ಟು 90 ಸಾವಿರ ರೂ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ವ್ಯಕ್ತಿಗಳನ್ನು ಪತ್ತೆಮಾಡಿ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.