Moving text

Mandya District Police
DAILY CRIME REPORT OF MANDYA DISTRICT DTD : 17-10-2013

PRESS NOTE OF PANDAVAPURA PS DTD : 17-10-2013

ಪತ್ರಿಕಾ ಪ್ರಕಟಣೆ
       ದಿನಾಂಕ 17-10-2013 ರಂದು ದೊರೆತ ಖಚಿತ ವರ್ತಮಾನದ ಮೇರೆಗೆ ಪಾಂಡವಪುರ ತಾಲ್ಲೋಕು, ಹರಳಹಳ್ಳಿ ಗ್ರಾಮದಲ್ಲಿರುವ ಆರ್.ಕೆ. ಬ್ರಿಕ್ಸ್ ಗೊಡನ್ನಲ್ಲಿ ಅನದಿಕೃತವಾಗಿ ಕಲ್ಲು ಬಂಡೆ ಸಿಡಿಸಲು ಉಪಯೋಗಿಸುವ ಸ್ಪೋಟಕ ವಸ್ತು (ಅಮೋನಿಯಂ ನೈಟ್ರೇಟ್) ಗಳನ್ನು ದಾಸ್ತಾನು ಮಾಡಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಶ್ರೀರಂಗಪಟ್ಟಣ ಉಪವಿಭಾಗದ ಡಿ.ಎಸ್.ಪಿ, ಗೀತಾ ಎಂ.ಎಸ್ ರವರ ನೇತೃತ್ವದಲ್ಲಿ ಪಾಂಡವಪುರ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ್ ಹಾಗು ಸಿಬ್ಬಂದಿಗಳಾದ ರಾಜೇಶ್, ವಿಜಯಕುಮಾರ್, ಚಾಲಕ ಚಂದ್ರಶೇಖರ್ ಇವರುಗಳೋಂದಿಗೆ, ದಾಳಿ ನಡೆಸಲಾಗಿ ಗೋಡೋನ್ನಲ್ಲಿ ಅಕ್ರಮವಾಗಿ ರಹದಾರಿ ಇಲ್ಲದೆ ದಾಸ್ತಾನು ಮಾಡಿದ್ದ 50 ಕೆ.ಜಿಯ 19 ಚೀಲ ಅಮೋನಿಯಂ ನೈಟ್ರೇಟ್ನ್ನು ವಶಪಡಿಸಿಕೊಂಡು ಗೋಡೋನ್ನಲ್ಲಿದ್ದ ಆಸಾಮಿ ಮೋಸಿಮ್ಖಾನ್ ಬಿನ್ ಏಜಾಜ್ ಅಲಿಖಾನ್ ಹರಳಹಳ್ಳಿ ಈತನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ಬಂದನಕ್ಕೆ ಒಳಪಡಿಸಿದೆ,  ದಾಸ್ತಾನು ಮಾಡಿದ್ದ, ಆಸಾಮಿ ನಾಜೀಮುಲ್ಲಾಷರೀಪ್ ವಿರುದ್ದ ಮೊ.ನಂ. 367/2013 ಕಲಂ 3, 4, 5 ಸ್ಪೋಟಕ ವಸ್ತುಗಳ ಅದಿನಿಯಮದ ರೀತ್ಯಾ ಪ್ರಕರಣ ದಾಖಲಾಗಿದ್ದು, ಆರೋಪಿ ನಾಜಿಮುಲ್ಲಾಷರೀಪ್ ತಲೆ ಮರೆಸಿಕೊಂಡಿದ್ದು ಪತ್ತೆ ಬಗ್ಗೆ ಕ್ರಮ ಕೈಗೊಂಡಿದೆ.  ಪ್ರಕರಣದ ಪತ್ತೆ ಕಾರ್ಯದಲ್ಲಿ ಡಿ.ಎಸ್.ಪಿ ಶ್ರೀರಂಗಪಟ್ಟಣ, ಪಿ.ಐ ಪಾಂಡವಪುರ ಹಾಗು ಪಾಂಡವಪುರ ಪೊಲೀಸ್ ಠಾಣಾ ಸಿಬ್ಬಂದಿಗಳು ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ. 

       ಮೇಲ್ಕಂಡ ಪ್ರಕರಣದಲ್ಲಿ ಆರೋಪಿಯನ್ನು ದಸ್ತಗಿರಿಮಾಡಿ ಮಾಲನ್ನು ವಶಪಡಿಸಿಕೊಂಡ ಅಧಿಕಾರಿ ಮತ್ತು ಸಿಬ್ಬಂಧಿಯವರನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ. 
 

PRESS NOTE DTD : 17-10-2013


ಪತ್ರಿಕಾ ಪ್ರಕಟಣೆ

ಕೊಪ್ಪ ಪೊಲೀಸ್ ಠಾಣೆ ಮೊ.ನಂಃ181/13 ಕಲಂಃ 302 ಐ.ಪಿ.ಸಿ.ರ ಪ್ರಕರಣದ ಆರೋಪಿಯ ಬಂದನ

       ಮದ್ದೊರು ತಾಲ್ಲೂಕು, ಡಿ. ಮಲ್ಲಿಗೆರೆ ಗ್ರಾಮದ ಎನ್.ಮಾಸ್ತೀಗೌಡ ಬಿನ್ ಬಾವಿಮನೆನಂಜೇಗೌಡ, 41ವರ್ಷ ಮತ್ತು ಪುಟ್ಟಸ್ವಾಮಿ ಬಿನ್ ಬಾವಿಮನೆ ನಂಜೇಗೌಡ, 48 ವರ್ಷ,  ರವರುಗಳು ಸ್ವಂತ ಅಣ್ಣತಮ್ಮಂದಿರಾಗಿದ್ದು ಇವರು ವಿಬಾಗವಾಗಿ ಒಂದೇ ಮನೆಯಲ್ಲಿ ತಮ್ಮ ಸಂಸಾರ ಸಮೇತ ಬೇರೆಯಾಗಿ ವಾಸವಾಗಿದ್ದು ಇಬ್ಬರಿಗೂ ಆಗಾಗ ಸಣ್ಣಪುಟ್ಟ ವಿಚಾರಗಳಿಗೆಲ್ಲಾ ಜಗಳ ಮಾಡಿಕೊಳ್ಳುತ್ತಿದ್ದು ದಿನಾಂಕಃ15-10-13 ರಂದು ರಾತ್ರಿ ಸುಮಾರು 0930 ಗಂಟೆಯಲ್ಲಿ          ಎನ್. ಮಾಸ್ತಿಗೌಡ ಮತ್ತು ಆತನ ಹೆಂಡತಿ ಶ್ರೀಮತಿ. ಪ್ರೇಮ ಇಬ್ಬರೂ ಟಿ.ವಿ ನೋಡುತ್ತಾ ಕುಳಿತಿದ್ದಾಗ ಮಾಸ್ತಿಗೌಡನ ಸಹೋದರ ಪುಟ್ಟಸ್ವಾಮಿ ಟಿ.ವಿ ಶಬ್ದ ಜಾಸ್ತಿಯಾಗಿದ್ದು ಕಡಿಮೆ ಮಾಡುವಂತೆ ತಿಳಿಸಿದಾಗ ಒಬ್ಬರಿಗೊಬ್ಬರಿಗೆ ಮಾತು ಬೆಳೆದು ಜಗಳ ಶುರುವಾಗಿ ಪುಟ್ಟಸ್ವಾಮಿಯು ಒಂದು ಕಬ್ಬಿಣದ ಪೈಪನ್ನು ತಂದು ಮಾಸ್ತಿಗೌಡನ ಹೆಂಡತಿ ಶ್ರೀಮತಿ. ಪ್ರೇಮಳ ತಲೆಗೆ ಹೊಡೆದು ಗಾಯಗೊಳಿಸಿದ್ದು ಕೂಡಲೇ ಆರೋಪಿಯು ಅದೇ ಕಬ್ಬಿಣದ ಪೈಪನ್ನು ತೆಗೆದುಕೊಂಡು ಪುಟ್ಟಸ್ವಾಮಿಯ ತಲೆಗೆ ಬಲವಾಗಿ ಹೊಡೆದು ತೀವ್ರ ಗಾಯಗೊಳಿಸಿದ್ದು ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಮದ್ದೊರು ಸಾರ್ವಜನಿಕ ಅಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ತೀವ್ರ ಗಾಯಗೊಂಡಿದ್ದ ಪುಟ್ಟಸ್ವಾಮಿಯು ಮಾರ್ಗಮದ್ಯದಲ್ಲಿ ಮೃತಪಟ್ಟಿದ್ದು, ಮೇಲ್ಕಂಡ ಘಟನೆ ನಡೆದ ನಂತರ ಆರೋಪಿಯು ಗ್ರಾಮ ಬಿಟ್ಟು ತಲೆಮರೆಸಿಕೊಂಡು ಹೊರಟು ಹೋಗಿರುತ್ತಾನೆ. ಈ ವಿಚಾರವಾಗಿ ಮೃತನ ಹೆಂಡತಿ ನೀಡಿದ ಪಿಯರ್ಾದುವಿನ ಮೇರೆಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. 

    ಪಿಎಸ್ಐ, ಕೊಪ್ಪ ಠಾಣೆ ರವರು ಆರೋಪಿಯ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿ ದಿನಾಂಕಃ16-10-13 ರಂದು ಮದ್ದೊರು ತಾಲ್ಲೂಕು, ಸೊಳ್ಳೇಪುರ ಗ್ರಾಮದಲ್ಲಿ ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು, ನಂತರ ಕೊಪ್ಪ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು, ಸಿಪಿಐ, ಮದ್ದೊರು ರವರ ಮುಂದೆ ಹಾಜರುಪಡಿಸಿದ್ದು, ಆತನನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ. 

PRESS NOTE DTD : 17-10-2013


                                                           

    ಪತ್ರಿಕಾ ಪ್ರಕಟಣೆ

   ದಿನಾಂಕ:15-10-2013ರಂದು ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ ಶಿವಸ್ವಾಮಿ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ 145 ಕೃಷ್ಣಶೆಟ್ಟಿ ಹೆಚ್.ಸಿ 292 ಚೌಡಶೆಟ್ಟಿ ಪಿ.ಸಿ 441 ಪ್ರಭುಸ್ವಾಮಿ ಪಿ.ಸಿ 67  ಎಂ ಲೋಕೇಶ ರವರುಗಳು ಉಪವಿಭಾಗದ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಮಳವಳ್ಳಿ ಗ್ರಾಮಾಂತರ ಠಾಣಾ ಸರಹದ್ದಿನ ಮಾರೇಹಳ್ಳಿ ಗ್ರಾಮದ ಮಾರ್ಕಂಡಯ್ಯ ರೈಸ್ ಮಿಲ್ ಬಳಿ ಮಳವಳ್ಳಿ - ಕೊಳ್ಳೇಗಾಲ ರಸ್ತೆಯ ರಸ್ತೆಯ ಎಡಬದಿಯಲ್ಲಿ ಒಬ್ಬ ಆಸಾಮಿ ಒಂದು ಕಾರನ್ನು ನಿಲ್ಲಿಸಿಕೊಂಡು ಅನುಮಾನಾಸ್ವದವಾಗಿ  ಕಾರಿನ ಮರೆಯಲ್ಲಿ ನಿಂತಿದ್ದು ಜೀಪ್ ಹತ್ತಿರಕ್ಕೆ ಹೋಗುತ್ತಿದ್ದಂತೆ ಆತ ಓಡಿ ಹೋಗಲು ಪ್ರಯತ್ನಿಸಿದವನನ್ನು ಸಿಪಿಐ ಮತ್ತು ಸಿಬ್ಬಂದಿಯವರು ಹಿಂಬಾಲಿಸಿ ಸುತ್ತುವರಿದು ಹಿಡಿದು ಆತನ ಹೆಸರು ವಿಳಾಸವನ್ನು ವಿಚಾರ ಮಾಡಲಾಗಿ ಆತನ ಹೆಸರು ಸಿ.ಎನ್ ಲೋಕೇಶ  @ ಲೋಕಿ ಬಿನ್ ನರಸಿಂಹಯ್ಯ 32 ವರ್ಷ ನಾಯಕ್ ಜನಾಂಗ  ಭ್ರಮರಾಂಭ ಬಡಾವಣೆ 4 ನೇಕ್ರಾಸ್ ಮನೆ ನಂ 369 ಚಾಮರಾಜನಗರ   ಟೌನ್ ಎಂದು ತಿಳಿಸಿದ್ದು ಆತನ  ವಶದಲ್ಲಿದ್ದ  ಕಾರಿನ ಬಗ್ಗೆ  ವಿಚಾರ ಮಾಡಲಾಗಿ ಆತ  ಕಾರನ್ನು  ಬೆಂಗಳೂರಿನಲ್ಲಿ ಈಗ್ಗೆ ಕೆಲವು ದಿನಗಳ ಹಿಂದೆ ಕಳವು ಮಾಡಿರುವುದಾಗಿ ತಿಳಿಸಿದ್ದು  ಸದರಿ ಆಸಾಮಿಯನ್ನು ಹಾಗೂ ಆತನ ವಶದಲ್ಲಿದ್ದ ಕಾರ್ ನಂ ಕೆ.ಎ-09 ಎನ್. 1226 ಜೆನ್ ಕಾರನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ.237/13 ಕಲಂ 41(ಡಿ) ರೆವಿ 102 ಸಿಆರ್ಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. 

ನಂತರ ಮೇಲ್ಕಂಡ ಆರೋಪಿಯನ್ನು ದಸ್ತಗಿರಿ ಮಾಡಿ ಕೂಲಂಕುಷವಾಗಿ ವಿಚಾರ ಮಾಡಲಾಗಿದ್ದು ಆತನ ಸ್ವ ಇಚ್ಚಾ ಹೇಳಿಕೆಯ ಮೇರೆಗೆ ತಾನು ಕಳವು ಮಾಡಿದ್ದ ಮತ್ತೊಂದು ಸ್ವಿಪ್ಟ್ ಕಾರ್ ನಂಃ.ಕೆಎ-01 ಎಂ.ಎಫ್-8515, ಪಲ್ಸರ್ ಮೋಟಾರ್ ಬೈಕ್ ನಂ.ಕೆಎ-09 ಇಟಿ-7657, ಯಮಹ ಮೋಟಾರ್ ಬೈಕ್ ನಂ. ಕೆಎ-17 ಆರ್-2008 ರ ವಾಹನಗಳನ್ನು ಸಹ ಅಮಾನತ್ತು ಪಡಿಸಿಕೊಂಡಿದ್ದು, ಎಲ್ಲಾ ಮಾಲುಗಳ ಅಂದಾಜು ಮೌಲ್ಯ ಏಳು ಲಕ್ಷ ರೂಗಳಾಗಿರುತ್ತೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.

      ಮೇಲ್ಕಂಡ ಆರೋಪಿಯನ್ನು ದಸ್ತಗಿರಿ ಮಾಡಿ ಮಾಲುಗಳನ್ನು ವಶಪಡಿಸಿಕೊಂಡು ಮಳವಳ್ಳಿ ಗ್ರಾಮಾಂತರ ವೃತ್ತದ ಮೇಲ್ಕಂಡ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ