Moving text

Mandya District Police

DCR of

Raid as 22-12-11

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 345/11 ಕಲಂ 285 ಐಪಿಸಿ ಮತ್ತು ಕಲಂ 3 [ಬಿ] [ಸಿ] 4 [1] [] 6 & 7 ಎಲ್.ಪಿ.ಜಿ ರೆಗ್ಯೂಲೇಷನ್ ಫಾರ್ ಸಪ್ಲೈಸ್ ಮತ್ತು ಡಿಸ್ಟ್ರಿಬ್ಯುಷನ್ ಆರ್ಡರ್ 2000 ಮತ್ತು 3 & 7 .ಸಿ. ಆಕ್ಸ್

ದಿನಾಂಕ: 22-12-11 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಆರೋಪಿ -1 ಸೈಯದ್ ಬುರಾನ್ ರವರು ಅವರ ಮನೆಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆಂದು ಪಿರ್ಯಾದಿ ಎನ್.ಸಿ ನಾಗೇಗೌಡ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಎಸ್.ಬಿ ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿ ದೊರೆತ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಪಂಚರನ್ನು ಕರೆದುಕೊಂಡು ಆರೋಪಿ-1 ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಆರೋಪಿ-1 ರವರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು ಆತನನ್ನು ಹಿಡಿದು ವಿಚಾರಿಸಲಾಗಿ ತಾನು ಕಿರುಗಾವಲಿನ ಆರೋಪಿ-3 ರವರಿಂದ ಆರೋಪಿ- ವಿನೋದ್ ರವರ ಮುಖಾಂತರ ಹೆಚ್ಚಿನ ಹಣ ಕೊಟ್ಟು ಗ್ಯಾಸ್ ಸಿಲಿಂಡರ್ಗಳನ್ನು ಮಾರುತಿ ಆಮ್ನಿ ಕಾರಿನಲ್ಲಿ ತಂದು ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿದ್ದು ನಂತರ ಆರೋಪಿಯನ್ನು ಕರೆದುಕೊಂಡು ಕಿರುಗಾವಲಿಗೆ ಹೋಗಿ ಆರೋಪಿ- ಪುಟ್ಟಸ್ವಾಮಿ ರವರ ಮನೆಯನ್ನು ಪರಿಶೀಲಿಸಿ ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದು ಗ್ಯಾಸ್ ಸಿಲಿಂಡರ್ಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಆರೋಪಿ-ಪುಟ್ಟಸ್ವಾಮಿ ರವರ ಕೋಳಿ ಅಂಗಡಿಯಲ್ಲಿದ್ದ ಆರೋಪಿ-2 ರವರನ್ನು ವಶಕ್ಕೆ ತೆಗೆದುಕೊಂಡಿದ್ದು ಒಟ್ಟು ಭಾರತ್ ಕಂಪನಿಯ 8 ಗೃಹ ಬಳಕೆಯ ಎಲ್ಪಿಜಿ ಭರತ್ ಸಿಲಿಂಡರ್, ಭಾರತ್ ಕಂಪನಿಯ 2 ವಾಣಿಜ್ಯ ಬಳಕೆಯ ಖಾಲಿ ಸಿಲಿಂಡರ್, ಇಂಡೇನ್ ಕಂಪನಿಯ 10 ಗೃಹ ಬಳಕೆಯ ಖಾಲಿ ಸಿಲಿಂಡರ್, 3 ಚಿಕ್ಕ ಖಾಲಿ ಸಿಲಿಂಡರ್, ಒಂದು ರೀಫಿಲ್ಲಿಂಗ್ ರಾಡ್, ನಂ. ಸಿಟಿಎಕ್ಸ್ 4495 ರ ಮಾರುತಿ ಓಮ್ನಿ ಕಾರು ಮತ್ತು ನಗದು ಹಣ 1225-00 ರೂ. ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿ-1 & 2 ರವರನ್ನು ಮುಂದಿನ ಕ್ರಮದ ಬಗ್ಗೆ ಠಾಣೆಗೆ ಹಾಜರುಪಡಿಸಿರುವುದಾಗಿ ಇತ್ಯಾದಿ

Press Note: West PS On 18-12-2011

ಪತ್ರಿಕಾ ಪ್ರಕಟಣೆ
ದಿನಾಂಕ 17-12-2011 ರಂದು ಶ್ರೀರಂಗಪಟ್ಟಣ ಠಾಣೆಯ ಅಪರಾಧ ಪತ್ತೆ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಸಿಪಿಸಿ-01 ,ಕೆ.ಎನ್. ಸಿದ್ದರಾಜು, ಸಿಪಿಸಿ - 638 ಪ್ರಕಾಶ್, ಸಿಪಿಸಿ-633 ಕೃಷಶೆಟ್ಟಿ ರವರುಗಳು ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ಬಳಿ ಬೆಳಿಗ್ಗೆ 0715 ಗಂಟೆಯಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಇಬ್ಬರು ಅಸಾಮಿಗಳನ್ನು ಹಿಡಿದು ಪ್ರಶ್ನಿಸಲಾಗಿ ತಮ್ಮ ಹೆಸರು 1] ರಘು ಡಿ ಕೆ ಬಿನ್ ಲೇಟ್ ಕಾಳೇಗೌಡ 20 ವರ್ಷ, ಒಕ್ಕಲಿಗರು ವ್ಯವಸಾಯ ವಾಸ ಕಂಪೇಗೌಡ ಸರ್ಕಲ್ ದೊಡ್ಡ ಬ್ಯಾಡರಹಳ್ಳಿ ಗ್ರಾಮ ಪಾಂಡವಪುರ ತಾಲ್ಲೂಕ್. 2] ನಿಂಗೇಗೌಡ @ ನಿಂಗ ಬಿನ್ ತಮ್ಮೇಗೌಡ 24 ವರ್ಷ, ವಕ್ಕಲಿಗರುವ್ಯವಸಾಯ ವಾಸ ಕಂಪೇಗೌಡ ಸರ್ಕಲ್ ದೊಡ್ಡ ಬ್ಯಾಡರಹಳ್ಳಿ ಗ್ರಾಮ ಪಾಂಡವಪುರ ತಾಲ್ಲೂಕು ಎಂತಲೂ ತಿಳಿಸಿದ್ದು, ಅವರ ಬಳಿ ಇದ್ದ ಮೊಟಾರ್ ಸೈಕಲ್ ಮತ್ತು ಪಂಪ್ಸೆಟ್ನ ಬಗ್ಗೆ ಯಾವುದೇ ಸರಿಯಾದ ಮಾಹಿತಿಯನ್ನು ನೀಡದೆ ಇದ್ದಾಗ ಅವರುಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪಿಎಸ್ಐ ರವರ ಮುಂದೆ ಹಾಜರು ಪಡಿಸಲಾಗಿ ಪಿಎಸ್ಐ ರವರು ಮೆಲ್ಕಂಡವರುಗಳನ್ನು ಕೂಲಂಕುಷವಾಗಿ ವಿಚಾರ ಮಾಡಲಾಗಿ, ಸದರಿ ಆಸಾಮಿಗಳು ಮತ್ತೊಬ್ಬ ಕಾಳೇನಹಳ್ಳಿ ಕುಮಾರನ ಜೊತೆಯಲ್ಲಿ ಸೇರಿ ಪಾಂಡವಪುರ ತಾಲ್ಲೂಕು, ತಿಮ್ಮನ ಕೊಪ್ಪಲು, ತಿರುಮಾಲಾಪುರ, ಕನಗನಮರಡಿ, ದೊಡ್ಡಬ್ಯಾಡರಹಳ್ಳಿ, ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು, ಗಣಂಗೂರು ಗ್ರಾಮಗಳಲ್ಲಿ ಜಮೀನಿಗೆ ಅಳವಡಿಸಿದ್ದ ಪಂಪ್ಸೆಟ್ ಮೋಟಾರ್ಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಅವರ ಸ್ವಯಿಚ್ಚಾ ಹೇಳಿಕೆ ಮೇರೆಗೆ ಮೇಲ್ಕಂಡಂತೆ ಆರೋಪಿಗಳು ಕಳುವು ಮಾಡಿರುವ ಒಟ್ಟು 5 ಪಂಪ್ಸೆಟ್ ಮೋಟಾರ್ ಹಾಗೂ ಕೃತ್ಯಕ್ಕೆ ಬಳಸಿರುವ ಹಿರೋ ಹೊಂಡಾ ಮೊಟಾರ್ ಸೈಕಲ್ ನಂ. ಕೆಎ 09-ಈಜಿ-6119 ನ್ನು ಅಮಾನತ್ತುಪಡಿಸಿದ್ದು, ಅವುಗಳ ಅಂದಾಜು ಬೆಲೆ 1 ಲಕ್ಷ ರೂಗಳಾಗಿರುತ್ತದೆ. ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಯವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಪ್ರಶಂಶಿಸಿರುತ್ತಾರೆ.

Press Note: West PS On 16-12-2011


ಪತ್ರಿಕಾ ಪ್ರಕಟಣೆ
ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆ ದಳದಿಂದ 8 ಮಂದಿ ಆರೋಪಿಗಳ ಬಂಧನ ಇವರುಗಳಿಂದ 2 ಲಕ್ಷ ರೂ ಮೌಲ್ಯದ ಕಳುವು ಮಾಡಿ ಸುಟ್ಟಿರುವ ಏರಟೆಲ್ ಫೀಡರ್ ವೈರ್ ನ ಬಾಬ್ತು 447 ಕೆ.ಜಿ. ಯಷ್ಟು ತಾಮ್ರದ ಕೇಬಲ್ ವಶ
ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆ ದಳದವರು ದಿನಾಂಕ:13-12-2011 ರಂದು ಮಾರುತಿ ಓಮ್ನಿ ಕಾರ್ ನಂ ಕೆಎ-03-ಎನ್ 570 ರಲ್ಲಿ ಅನುಮಾನಸ್ಪದವಾಗಿ ಇದ್ದ 4 ಜನ ಅಸಾಮಿಗಳನ್ನು ಅದರಲ್ಲಿದ್ದ ಸುಟ್ಟಿರುವ ತಾಮ್ರದ ಕೇಬಲ್ ನ ಸಮೇತ ಬಂಧಿಸಿ ಅವರುಗಳನ್ನು ವಿಚಾರಣೆಗೊಳಪಡಿಸಲಾಗಿ ಸದರಿ ಅಸಾಮಿಗಳು ಈ ಕೆಳಕಂಡ ಇತರೆ ಆರೋಪಿಗಳ ಜೊತೆ ಸೇರಿ ಈಗ್ಗೆ ಸುಮಾರು 1 ತಿಂಗಳಿನಿಂದ ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಸೇರಿದ ಬೂದಿಹಾಳದ ಬಳಿ ಇರುವ ಏರಟೆಲ್ ನ ಗೋಡಾನ್ ಬಳಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 7 ಲಕ್ಷ ರೂ ಮೌಲ್ಯದ ಏರಟೆಲ್ ಫೀಡರ್ ಕೇಬಲ್ ನ್ನು ಬಂಡಲ್ ಸಮೇತ 3 ಬಾರಿ ಕಳವು ಮಾಡಿಕೊಂಡು ಬಂದು ಮಂಡ್ಯ ಕೆರೆ ಅಂಗಳದಲ್ಲಿ ಮಂಡ್ಯ ಕೆರೆ ಅಂಗಳದಲ್ಲಿ ಮಂಡ್ಯದ ಜಬ್ಬರ್ ಸರ್ಕಲ್ ನ ವಾಸಿ ಫಾರುಕ್ ಅಬ್ದುಲ್ಲಾ ಎಂಬುವವರೊಂದಿಗೆ ಸೇರಿ ಸುಟ್ಟು ಹಾಕಿ ಆತನಿಗೆ ಮಾರಾಟ ಮಾಡಿದ 447 ಕೆ.ಜಿ ಯಷ್ಟು ತಾಮ್ರದ ಕೇಬಲ್ ನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಒಟ್ಟು ಮೌಲ್ಯ 2 ಲಕ್ಷ ರೂಗಳಾಗಿರುತ್ತದೆ.

ಆರೋಪಿಗಳ ಹೆಸರು ವಿಳಾಸ
1.ಅಂದಾನಿ ಬಿನ್ ಲೇ|| ದೊಡ್ಡಯ್ಯ, 28 ವರ್ಷ, ಪರಿಶಿಷ್ಟ ಜನಾಂಗ, ಡ್ರೈವರ್ ಕೆಲಸ, ವಾಸ ಮಲ್ಲೇಶ್ವರ ಬಡಾವಣೆ, ರಾಮನಗರ ಟೌನ್.
2.ಶಿವಕುಮಾರ @ ರವಿ ಬಿನ್ ಮಹದೇವ, 24 ವರ್ಷ, ದೊಂಬಿದಾಸರ ಜನಾಂಗ, ಕೂಲಿ ಕೆಲಸ, ವಾಸ ಹನುಮಂತ ನಗರ, ಐಜೂರು, ರಾಮನಗರ ಟೌನ್.
3] ರಂಗನಾಥ ಬಿನ್ ರಂಗಪ್ಪ, 28ವರ್ಷ, ದೊಂಬಿದಾಸರ ಜನಾಂಗ, ಕೂಲಿ ಕೆಲಸ, ವಾಸ-26ನೇ ವಾಡರ್್, 2ನೇ ಕ್ರಾಸ್, ಐಜೂರು, ರಾಮನಗರ ಟೌನ್
4] ಪ್ರತಾಪ ಬಿನ್ ವೀರ, 19ವರ್ಷ, ತಮಿಳು ಜನಾಂಗ, ಪ್ಲಂಬರ್ ಕೆಲಸ, ವಾಸ-ತಮಿಳು ಕಾಲೋನಿ ಚನ್ನಪಟ್ಟಣ ಟೌನ್
5] ರಾಜೇಶ ಬಿನ್ ಲೇ. ನಾಗರಾಜು. 23 ವರ್ಷ, ವಕ್ಕಲಿಗರು, ಕೂಲಿಕೆಲಸ, ವಾಸ-ಕೋಡಿಪುರ, 25ನೇ ವಾಡರ್್, ಐಜೂರು, ರಾಮನಗರ ಟೌನ್
6] ಮುನಿಯ ಬಿನ್ ಏಳುಮಲೈ, 24 ವರ್ಷ, ಪರಿಶಿಷ್ಟ ಜನಾಂಗ, ಕೂಲಿ ಕೆಲಸ, ವಾಸ- ಕಾಶೀಮಠ, ಐಜೂರು, ರಾಮನಗರ ಟೌನ್
7] ಕಾಳಯ್ಯ ಬಿನ್ ಲೇ. ರಾಮಸ್ವಾಮಿ, 23 ವರ್ಷ, ಪರಿಶಿಷ್ಟ ಜನಾಂಗ, ಕೂಲಿ ಕೆಲಸ, ವಾಸ- ನಾಗರಕಟ್ಟೆ, ಐಜೂರು, ರಾಮನಗರ ಟೌನ್
8] ಫಾರುಕ್ ಅಬ್ದುಲ್ಲಾ ಬಿನ್ ಸುಬಾನುಲ್ಲಾ, 35 ವರ್ಷ, ಮುಸ್ಲೀಂ ಜನಾಂಗ, ಟಿಂಕರ್ ಕೆಲಸ, ವಾಸ- ನಾಲಬಂದವಾಡಿ, ಜಬ್ಬರ್ ಸರ್ಕಲ್, ಮಂಡ್ಯ. ಸದರಿ ಆರೋಪಿಗಳನ್ನು ದಿನಾಂಕಃ15-12-2011 ರಂದು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಯವರಾದ ಮಂಡ್ಯ ಪಶ್ಚಿಮ ಠಾಣೆಯ ಪಿಎಸ್ಐ ಜೆ. ಮಂಜು, ಮಂಡ್ಯ ಪಶ್ಚಿಮ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಕೆ. ಪ್ರಭಾಕರ್, ಎಎಸ್ಐ ಸಿ.ಕೆ.ಪುಟ್ಟಸ್ವಾಮಿ, ಎಎಸ್ಐ ಕೆ.ಎಸ್. ಶಿವಲಿಂಗೇಗೌಡ ಸಿಬ್ಬಂದಿಗಳಾದ ನಾರಾಯಣ, ನಿಂಗಣ್ಣ, ಅಕರ್ೇಶ, ಟಿ.ಲಿಂಗರಾಜು, ಕೆ.ಸಿ.ನಟರಾಜು, ಪುಟ್ಟಸ್ವಾಮಿ, ಮಂಜುನಾಥ, ಭರತ್, ಪರಶುರಾಮ, ಚಂದ್ರಶೇಖರ, ಜೀಪ್ ಚಾಲಕರುಗಳಾದ ರವಿ, ಶ್ರೀನಿವಾಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಪ್ರಶಂಶಿಸಿರುತ್ತಾರೆ.

press Note: West PS On 14-12-2011

ಪತ್ರಿಕಾ ಪ್ರಕಟಣೆ

ಸ್ನೇಹಿತನಿಂದಲೇ ಮನೆ ಕಳವು ಃ ಚಿನ್ನಾಭರಣ, ನಗದು ವಶ

ದಿನಾಂಕ 07-12-2011 ರಂದು ನಾಗಮಂಗಲ ತಾಲ್ಲೂಕು, ಬಿಂಡಿಗನವಿಲೆ ಠಾಣಾ ವ್ಯಾಪ್ತಿಯ ಡಿ.ಕೋಡಿಹಳ್ಳಿ ಗ್ರಾಮದ ತಿಮ್ಮಯ್ಯ ಬಿನ್ ಲೇ ತಿಮ್ಮಯ್ಯ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಹೊಲ ಕುಯ್ಯಲು ಹೋಗಿದ್ದು ಮತ್ತು ವಾಪಸ್ಸ್ ಬಂದು ನೋಡಲಾಗಿ ಮನೆಯ ಚಿಲಕವನ್ನು ಮುರಿದು ಮನೆಯಲ್ಲಿನ ಬೀರುವಿನಲ್ಲಿದ್ದ 60.000/- ರೂ ಮೌಲ್ಯದ ಚಿನ್ನ, ಬೆಳ್ಳಿ ವಡವೆ ಹಾಗೂ 10.000 ರೂ ನಗದು ಹಣವನ್ನು ಕಳುವು ಮಾಡಿದ್ದು, ಅದೇ ರೀತಿ ತಿಮ್ಮೇಗೌಡ ಬಿನ್ ಲೇ ಗೌಡೇಗೌಡ ಮನೆಯಲ್ಲಿಯೂ ಸಹ 48500/- ರೂ ನಗದನ್ನು ಕಳವು ಮಾಡಿದ್ದು ಈ ಬಗ್ಗೆ ಬಿಂಡಿಗನವಿಲೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣಗಳ ತನಿಖೆಯನ್ನು ಸಿಪಿಐ, ನಾಗಮಂಗಲ ವೃತ್ತ ರವರು ಕೈಗೊಂಡಿದ್ದು, ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಸಿಬ್ಬಂದಿಯೊಡನೆ ಮಾಹಿತಿ ಪಡೆದಿದ್ದು, ಮೇಲ್ಕಂಡ ಕೃತ್ಯ ನಡೆಯುವ ಹಿಂದಿನ ದಿನದಲ್ಲಿ ಡಿ. ಕೋಡಿಹಳ್ಳಿ ಗ್ರಾಮದ ನಂಜುಂಡೇಗೌಡರ ಮಗ ಹರೀಶ, ರಾಮೇಗೌಡನ ಮಗ ಕಿರಣ ಮತ್ತು ಕೇಸಿನ ಪಿರ್ಯಾದಿ ಪೂಜಾರಿ ತಿಮ್ಮಯ್ಯನ ಮಗ ಮಹೇಶ ಎಂಬುವವರು ಜೊತೆಯಲ್ಲಿದ್ದು, ಈ ಘಟನೆ ನಡೆದ ನಂತರ ಆರೋಪಿ ಹರೀಶನು ಗ್ರಾಮದಲ್ಲಿಲ್ಲದೆ ಬೆಂಗಳೂರಿಗೆ ಹೋಗಿರುವುದಾಗಿ ಮಾಹಿತಿ ತಿಳಿದುಬಂದಿದ್ದು, ಸ್ಥಳೀಯ ಪೊಲೀಸ್ ಅದಿಕಾರಿಗಳು ಹಾಗೂ ಸಿಬ್ಬಂದಿಗಳು ಆತನ ಚಲನ ವಲನಗಳ ಮೇಲೆ ನಿಗಾ ಇಟ್ಟು ನಂತರ ಆತನನ್ನು ದಿನಾಂಕಃ 13-12-2011 ರಂದು ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಂಡು ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ತಮ್ಮ ಗ್ರಾಮದ ರಾಮೇಗೌಡನ ಮಗ ಕಿರಣ್ ಎಂಬಾತನು ಆಟೋರಿಕ್ಷಾ ಸಾಲ ಕಟ್ಟಲು ಹಳ್ಳದ ಹೊಸಹಳ್ಳಿ ಗ್ರಾಮದಲ್ಲಿ 50.000 ರೂಗಳನ್ನು ಬಡ್ಡಿಗೆ ತೆಗೆದುಕೊಂಡಿದ್ದು, ಆಗ ತಾನು ಸಹ ಆತನ ಜೊತೆಯಲ್ಲಿ ಹೋಗಿದ್ದು, ಆ ದುಡ್ಡನ್ನು ಪೂಜಾರಿ ತಿಮ್ಮಯ್ಯನವರ ಮಗ ಮಹೇಶನ ಮನೆಯಲ್ಲಿಟ್ಟಿದ್ದನು. ತಾನು ಸ್ವಲ್ಪ ಸಾಲ ಮಾಡಿಕೊಂಡಿದ್ದರಿಂದ ಅದನ್ನು ತೀರಿಸುವ ಸಲುವಾಗಿ ಮೆಲ್ಕಂಡ ಎರಡು ಮನೆಗಳಲ್ಲಿ ಕಳ್ಳತನ ಮಾಡಿದ್ದಾಗಿ ತಿಳಿಸಿರುತ್ತಾನೆ. ನಂತರ ಆತನನ್ನು ದಸ್ತಗಿರಿ ಮಾಡಿ ಆತನು ನೀಡಿದ ಸುಳಿವಿನ ಮೇರೆಗೆ ಕಳವು ಮಾಡಿದ್ದ 60,000/- ರೂ ಬೆಲೆ ಬಾಳುವ ಒಡವೆಗಳು ಹಾಗೂ 32.500/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗಬಂದನಕ್ಕೆ ಒಪ್ಪಿಸಿರುತ್ತಾರೆ.

ಆರೋಪಿಯನ್ನು ಪತ್ತೆ ಮಾಡಲು ಶ್ರಮ ವಹಿಸಿದ ನಾಗಮಂಗಲ ವೃತ್ತನಿರೀಕ್ಷಕರಾದ ಶ್ರೀ. ಟಿ.ಡಿ.ರಾಜು, ಸಿಬ್ಬಂದಿಯವರಾದ ಸಿಪಿಸಿ 404, ಜಿ.ನಾಗರಾಜು, ಬಿಂಡಿಗನವಿಲೆ ಠಾಣೆ ರವರು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.

Mandya District Police Annual Sports Meet-2011
Press Note: West PS On 01-11-2011

Press Note: West PS On 01-11-2011

-ಃ ಪತ್ರಿಕಾ ಪ್ರಕಟಣೆ ಃ-
   
ಮಂಡ್ಯ ನಗರದ ಎಂ.ಸಿ. ರಸ್ತೆಯಲ್ಲಿರುವ ಸಕರ್ಾರಿ ಮಹಾವಿದ್ಯಾಲಯದ ಬಳಿ ಹೊಂಚುಹಾಕುತ್ತಿದ್ದ  3 ಜನ ದರೋಡೆಕಾರರಾದ ಕೆ.ಪಿ. ಚಂದ್ರ @ ದರಸಗುಪ್ಪೆ ಚಂದ್ರ, ಮೋಹನ ಕುಮಾರ @ ಪುರಿಬಟ್ಟಿ ಮೋಹನ, ವಿನಯ @ ಗಾಂಧಿ ಇವರುಗಳ ಬಂಧನ ಇವರುಗಳಿಂದ, ಒಂದು ಮೋಟಾರ್ ಸೈಕಲ್ ಮತ್ತು ಅಕ್ರಮವಾಗಿ ಇಟ್ಟುಕೊಂಡಿದ್ದ ಒಂದು ರಿವಾಲ್ವಾರ್ ಹಾಗೂ 4 ಗುಂಡುಗಳ ವಶ  
 
ದಿನಾಂಕ 01-12-11 ರಂದು ಬೆಳಗಿನ ಜಾವ  0435 ಗಂಟೆಯ ಸಮಯದಲ್ಲಿ ಮಂಡ್ಯ ನಗರ ಸರ್ಕಲ್ ಇನ್ಸ್ಪೆಕ್ಟರ್ ಅಪ್ ಪೊಲೀಸ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಪಿಐ, ಮಂಡ್ಯ ನಗರ ರವರು  ಸಿಬ್ಬಂದಿಯವರ ಸಮೇತ ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ಬಳಿ ದರೋಡೆಮಾಡಲು ಹೊಂಚುಹಾಕುತ್ತಿದ್ದ ಈ ಕೆಳಕಂಡ ಅಸಾಮಿಗಳ ಮೇಲೆ ದಾಳಿ ಮಾಡಿ ಅವರ ವಶದಲ್ಲಿದ್ದ  ಅಪಾಯಕಾರಿ ವಸ್ತುಗಳಾದ ಲಾಂಗು ಮಚ್ಚು, ಒಂದು ಚೂರಿ, ಖಾರದ ಪುಡಿ ಪೊಟ್ಟಣ, 2 ಹಗ್ಗಗಳು, ಎರಡು ಕಾಡು ಮರದ ದೊಣ್ಣೆಗಳು, ಮೂರು ಮಂಕಿ ಕ್ಯಾಪ್, ರೂ. 1000/- ನಗದು ಹಣ, ಒಂದು ಪ್ಲಾಸ್ಟಿಕ್ ಚೀಲ, ಒಂದು ಹಿರೋಹೊಂಡಾ ಎಸ್ಎಸ್ ಸಿಡಿ 100 ಮೋಟಾರ್ ಸೈಕಲ್, 4 ಮೊಬೈಲ್ ಹ್ಯಾಂಡ್ಸೆಟ್ಗಳ ಸಮೇತ ಹಿಡಿದು ವಶಕ್ಕೆ ತೆಗೆದುಕೊಂಡು ಠಾಣಾ.ಮೊ.ಸಂ. 326/11 ಕಲಂ. 399-402 ಭಾ.ದ.ಸಂ. ರೀತ್ಯ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. 
 
ಆರೋಪಿಗಳ ಹೆಸರು ವಿಳಾಸ ಕೆಳಕಂಡಂತಿರುತ್ತದೆ.
1]  ಕೆ.ಪಿ. ಚಂದ್ರ @ ಪಿ.ಕೆ. @ ದರಸಗುಪ್ಪೆ ಚಂದ್ರ ಬಿನ್ ಪುಟ್ಟೇಗೌಡ, 28ವರ್ಷ, ವಕ್ಕಲಿಗರು, ವ್ಯವಸಾಯ ವಾಸ-ಕಪ್ಪರನಕೊಪ್ಪಲು [ದರಸಗುಪ್ಪೆ] ಗ್ರಾಮ,    ಶ್ರೀರಂಗಪಟ್ಟಣ ತಾ, ಮಂಡ್ಯ ಜಿಲ್ಲೆ
  
 2] ಮೋಹನ್ಕುಮಾರ @ ಮೋಹನ @ ಪುರಿಬಟ್ಟಿ ಮೋಹನ ಬಿನ್ ಲೇ. ವೆಂಕಟಪ್ಪ, 27ವರ್ಷ, ಗಾಣಿಗಶೆಟ್ಟರ ಜನಾಂಗ, ನಾರಾಯಣಪ್ಪರ ಪುರಿಬಟ್ಟಿಯಲ್ಲಿ ಕೆಲಸ,ವಾಸ-3ನೇ ಕ್ರಾಸ್, ಸಿಹಿನೀರುಕೊಳ, ಮಂಡ್ಯ
 
3] ವಿನಯ @ ಗಾಂಧಿ ಬಿನ್ ಕೃಷ್ಣೇಗೌಡ, 22ವರ್ಷ, ವಕ್ಕಲಿಗರು, ವಾಸ-ಕೊಮ್ಮೇರಹಳ್ಳಿ ಗ್ರಾಮ, ಮಂಡ್ಯ ತಾಲ್ಲೋಕು   
 
ನಂತರ ಮೆಲ್ಕಂಡ ಆರೋಪಿಗಳನ್ನು ಅ ದಿನವೇ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ವಶಕ್ಕೆ ಪಡೆದುಕೊಂಡು ನಂತರ ವಿಚಾರಣೆ ಕಾಲದಲ್ಲಿ ಮೇಲ್ಕಂಡ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಅನಧಿಕೃತವಾಗಿ ಪರವಾನಿಗೆ ಇಲ್ಲದ ಒಂದು ರಿವಾಲ್ವಾರ್ ಮತ್ತು 4 ಗುಂಡುಗಳನ್ನು ಮಂಡ್ಯ ತಾಲ್ಲೋಕು ರಾಗಿಮುದ್ದನಹಳ್ಳಿ ಬಳಿ ಇರುವ ತೆಂಗಿನ ತೋಟ ಒಂದರಲ್ಲಿ ಬಚ್ಚಿಟ್ಟಿದ್ದನ್ನು ಅವರುಗಳ ಮುಖಾಂತರ ತನಿಖಾದಿಕಾರಿಗಳು ವಶಪಡಿಸಿಕೊಂಡಿರುತ್ತಾರೆ
 
     ಮೆಲ್ಕಂಡ ಆರೋಪಿಗಳು ಈ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳೊಂದಿಗೆ ಸೇರಿ ತಮ್ಮ ಎದುರಾಳಿಗಳನ್ನು ಕೊಲೆ ಮಾಡಲು ಸಂಚು ಮಾಡಿದ್ದು, ಅದಕ್ಕೆ ಉಪಯೋಗಿಸಲು ಬಚ್ಚಿಟ್ಟಿರುವುದಾಗಿ ವಿಚಾರಣೆ ಕಾಲದಲ್ಲಿ ತಿಳಿದು ಬಂದಿರುತ್ತೆ.  ಈ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ. ನಂತರ ಆರೋಪಿಗಳನ್ನು ಈ ದಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅವರುಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿರುತ್ತದೆ. 

ಈ ಮೆಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ.ಕೆ.ಆರ್ ಕಾಂತರಾಜ್, ಮಂಡ್ಯ ಪಶ್ಚಿಮ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಶ್ರೀ ಜೆ. ಮಂಜು, ಅಪರಾಧ ವಿಭಾಗದ ಪಿಎಸ್ಐ ಶ್ರೀ ಕೆ. ಪ್ರಭಾಕರ್, ಮಂಡ್ಯ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಸಿ. ಕೆ. ಪುಟ್ಟಸ್ವಾಮಿ, ನಿಂಗಣ್ಣ, ನಾರಾಯಣ, ಅರ್ಕೇಶ, ಟಿ. ಲಿಂಗರಾಜು, ಮಂಜುನಾಥ್, ತಿಲಕ್ಕುಮಾರ್, ಪರಶುರಾಮ, ಪುಟ್ಟಸ್ವಾಮಿ, ಭರತ್, ಮುದ್ದುಮಲ್ಲಪ್ಪ, ಜೀಪ್ ಚಾಲಕರಾದ ರವಿ, ಶ್ರೀನಿವಾಸ  ಹಾಗೂ ಇತರೆ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.