Moving text

Mandya District Police
Mandya District Daily Crime Report Date: 31-12-2015
Mandya District Daily Crime Report Date: 30-12-2015

PRESS NOTE DATE 30-12-2015

                                                                                         ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ, 
                                                                                ಮಂಡ್ಯ ಜಿಲ್ಲೆ, ಮಂಡ್ಯ. ದಿನಾಂಕಃ 30-12-2015

ಪತ್ರಿಕಾ ಪ್ರಕಟಣೆ

2016 ರ ನೂತನ ವರ್ಷಾಚರಣೆಯ ಸಂಬಂsದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಈ ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಪೊಲೀಸ್ ಇಲಾಖಾ ವತಿಯಿಂದ ಕೈಗೊಳ್ಳಲಾಗಿದೆ.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ 2015 ನೇ ಸಾಲಿನ ನವೆಂಬರ್ ಮಾಹೆಯವರೆಗೆ ಒಟ್ಟು 115 ಜನರು ಮೃತಪಟ್ಟಿರುವುದು ವರದಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ, ಎಡಮುರಿ, ಕೆ.ಆರ್. ಸಾಗರದ ಹಿನ್ನೀರಿನ ಕಡೆ ಮತ್ತು ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಗ್ರಾಮದ ಕಾವೇರಿ ನದಿ ಪಾತ್ರಗಳಲ್ಲಿ ಇಂತಹ ಅಹಿತಕರ ಘಟನೆಗಳನ್ನು ತಡೆಯುವ ಸಲುವಾಗಿ ಮುಂಜಾಗ್ರತೆಯಾಗಿ 2016 ರ ಹೊಸವರ್ಷ ಆಚರಣೆ ಸಂಬಂದs ದಿಃ 31-12-2015 ಮತ್ತು ದಿಃ 01-01-2016 ರಂದು ಮೇಲ್ಕಂಡ ಸ್ದಳಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಮಾನ್ಯ ಜಿಲ್ಲಾದಿಕಾರಿಗಳು ಆದೇಶ ಹೊರಡಿಸಿರುವುದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಸದರಿ ಸ್ದಳಗಳ ಬಳಿ ತೆರಳದಂತೆ ಕೋರಲಾಗಿದೆ. 

    1] ಜಿಲ್ಲೆಯಲ್ಲಿ ಇರುವ ಎಲ್ಲಾ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಲ್ಲಿ  ಹಾಗೂ ಇನ್ನಿತರೆ ಕಡೆಗಳಲ್ಲಿ ನಡೆಸುವ ಹೊಸ ವರ್ಷದ ಕಾರ್ಯಕ್ರಮಗಳು ರಾತ್ರಿ 1230 ಗಂಟೆಯೊಳಗೆ ಮುಕ್ತಾಯಗೊಳಿಸಲು ತಿಳಿಸಲಾಗಿದೆ. 

   2] ಹೊಟೇಲ್, ರೆಸ್ಟೋರೆಂಟ್, ಕ್ಲಬ್ ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಲ್ಲಿ  ಹಾಗೂ ಇನ್ನಿತರೆ ಕಡೆಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳು ಆಯಾಯ ಹೋಟೆಲ್ ಹಾಗೂ ಸಂಸ್ಥೆಗಳ ಒಳ ಆವರಣದಲ್ಲಿಯೇ ನಡೆಯಬೇಕು ಹಾಗೂ ಕಾರ್ಯಕ್ರಮಗಳು ನಡೆಯುವ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅದರ ಮಾಲೀಕರು ಹಾಗೂ ಕಾರ್ಯಕ್ರಮ ಆಯೋಜಕರು ನೋಡಿಕೊಳ್ಳುವುದು, ಒಂದು ಪಕ್ಷ ಯಾವುದಾದರೂ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. 

    3] ಯಾವುದೇ ವ್ಯಕ್ತಿಗಳು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಂತೆ ಸೂಚಿಸಲಾಗಿದ್ದು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. 

    4] ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಹೊಸವರ್ಷ ಆಚರಣೆ ನೆಪದಲ್ಲಿ ಬಲವಂತವಾಗಿ ನಿಲ್ಲಿಸಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಮಾಡದಂತೆ ಹಾಗೂ ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ ಅಸಭ್ಯವಾಗಿ ವರ್ತಿಸುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. 

5] ನೀರಿನ ತಾಣಗಳಾದ ಕೆ.ಅರ್. ಸಾಗರದ ಬಳಿ, ಬಲಮುರಿ, ಎಡಮುರಿ, ಕಾವೇರಿ ಹೊಳೆ, ಗೋಶಾಯಿಘಾಟ್, ಮುತ್ತತ್ತಿ ಹಾಗೂ ಇನ್ನಿತರೆ ನೀರಿರುವ ಸ್ಥಳಗಳ ಬಳಿ ತೆರಳದಂತೆ ಈ ಮೂಲಕ ಕೋರಲಾಗಿದೆ. 

     6] ಹೊಸವರ್ಷ ಆಚರಣೆ ಸಂಬಂsದ ಏರು sದ್ವನಿಯಲ್ಲಿ sದ್ವನಿವರ್ದಕಗಳನ್ನು ಬಳಸದಂತೆ ಹಾಗೂ ರಾತ್ರಿ 1000 ಗಂಟೆಯ ನಂತರ ಧ್ವನಿವರ್ಧಕಗಳನ್ನು ಬಳಸದಂತೆ ಸೂಚಿಸಲಾಗಿದೆ. 

      ಜಿಲ್ಲೆಯ ಸಮಸ್ತ ಜನತೆಗೆ 2016 ನೇ ಸಾಲಿನ ಹೊಸವರ್ಷದ ಶುsಬಾಷಯಗಳನ್ನು ಹಾಗೂ ಸರ್ವರಿಗೂ ಸನ್ಮಂಗಳವನ್ನು ಉಂಟು ಮಾಡಲೆಂದು ಪೊಲೀಸ್ ಇಲಾಖಾ ವತಿಯಿಂದ ಹಾರೈಸಲಾಗಿದೆ."

"ಎಲ್ಲರೊಳಗೊಂದಾಗು ಮಂಕುತಿಮ್ಮ"
Mandya District Daily Crime Report Date: 29-12-2015
Mandya District Daily Crime Report Date: 28-12-2015
Mandya District Daily Crime Report Date: 27-12-2015
Mandya District Daily Crime Report Date: 26-12-2015
Mandya District Daily Crime Report Date: 25-12-2015
Mandya District Daily Crime Report Date: 24-12-2015
Mandya District daily crime report 23-12-2015
Mandya District Daily Crime Report Date: 22-12-2015
Mandya District Daily Crime Report Date: 21-12-2015
Mandya District Daily Crime Report Date: 20-12-2015
Mandya District Daily Crime Report Date: 19-12-2015
Mandya District Daily Crime Report Date: 18-12-2015
Mandya District Daily Crime Report Date: 17-12-2015
Mandya District Daily Crime Report Date: 16-12-2015
Mandya District Daily Crime Report Date: 15-12-2015
Mandya District Daily Crime Report Date: 14-12-2015
Mandya District Daily Crime Report Date: 13-12-2015
Mandya District Daily Crime Report Date: 12-12-2015

Press Note Dated: 12-12-2015


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 12-12-2015
ಪತ್ರಿಕಾ ಪ್ರಕಟಣೆ

ಜಾತ್ರೆ, ಬಸ್ಸುಗಳಲ್ಲಿ, ಬಸ್ಸ್ಟ್ಯಾಂಡ್ ಹಾಗೂ ಇತರೆ ಕಡೆಗಳಲ್ಲಿ ಚಿನ್ನದ ಸರ, ವಡವೆಗಳನ್ನು ಕಳುವು ಮಾಡುತ್ತಿದ್ದ ಆರೋಪಿಗಳ ಬಂಧನ


ಮಂಡ್ಯ ತಾಃ ಶಿವಳ್ಳಿ ಪೊಲೀಸ್ ಠಾಣಾ ಸರಹದ್ದಿನ ಹುಲಿಕೆರೆ ಗ್ರಾಮದ ಮಹದೇಶ್ವರ ಸ್ವಾಮಿ ಜಾತ್ರೆಯಲ್ಲಿ ಹೆಂಗಸರಿಂದ ಚನ್ನದ ಸರ ಕಳುವು ಮಾಡಿದ್ದ ಸಂಬಂಧವಾಗಿ ಶಿವಳ್ಳಿ ಠಾಣಾ ಮೊ.ಸಂ:183/2015 ಮತ್ತು 184/2015ರ ಪ್ರಕರಣಗಳು ದಾಖಲಾಗಿದ್ದು ಈ ಪ್ರಕರಣಗಳ ಪತ್ತೇಕಾರ್ಯದಲ್ಲಿ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷರಾದ ಶ್ರೀ ಲೋಕೇಶ್‍ರವರು ಅಪರಾಧ ತಂಡವನ್ನು ರಚಿಸಿಕೊಂಡು ನಿರಂತರ ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡು ಜಾತ್ರೆ, ಬಸ್ಸು, ಹಾಗೂ ಇತರೆ ಕಡೆಗಳಲ್ಲಿ ಕಳುವು ಮಾಡಿದ್ದ ಈ ಕೆಳಕಂಡ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡು ಆರೋಪಿಗಳಿಂದ ಶಿವಳ್ಳಿ ಪೊಲೀಸ್ ಠಾಣೆಯ  2 ಪ್ರಕರಣಗಳು, ಮಂಡ್ಯ ಗ್ರಾಮಾಂತರ ಠಾಣೆಯ 1 ಪ್ರಕರಣ ಹಾಸನ ಜಿಲ್ಲೆಯ ಬೇಲೂರು ಠಾಣೆಯ 1 ಪ್ರಕರಣ, ಹಾಗೂ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ 5 ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳನ್ನು ಪತ್ತೆಮಾಡಿದ್ದು ಅವರುಗಳಿಂದ ಒಟ್ಟು 7ಲಕ್ಷದ 20 ಸಾವಿರ ರೂ ಬೆಲೆಯ 276.7 ಗ್ರಾಂ ಚಿನ್ನದ ವಡವೆಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಆರೋಪಿಗಳ ವಿವರ
1] ಜ್ಯೋತಿ ಕೋಂ ಹನುಮಂತ, 30 ವರ್ಷ, ಕೂಲಿ ಕೆಲಸ, ವಾಸ ಶಾಂತಮ್ಮ ರವರ ಮನೆಯಲ್ಲಿ ಬಾಡಿಗೆ ಮನೆ ವಾಸ, 3 ನೇ ಕ್ರಾಸ್, ಗಣೇಶ ದೇವಸ್ಥಾನದ ಬೀದಿ, ಕೋಳಿ ಪಾರಂ ಲೇಔಟ್, ಆನೆಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ, ಸ್ವಂತ ಊರು ಗೆಂಡೆಹೊಸಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕು.
2] ಗಿರೀಶ್ @ ಗಿರಿ ಬಿನ್ ಲೇಟ್ ಸ್ವಾಮಿ, 29 ವರ್ಷ, ಕೊರಮ ಜನಾಂಗ, ಕಲ್ಲು ಹೊಡೆಯುವ ಕೆಲಸ, ಹಾಲಿ ವಾಸ ನಾರಾಯಣಪ್ಪ ಎಂಬುವರ ಮನೆಯಲ್ಲಿ ಬಾಡಿಗೆ ವಾಸ, 7ನೇ ಕ್ರಾಸ್, ಬಸ್ಸು ನಿಲ್ದಾಣದ ಪಕ್ಕ, ಪಾಪರೆಡ್ಡಿ ಲೇ ಔಟ್, ಜಿಗಣಿ, ಆನೆಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ, ಸ್ವಂತ ಊರು ಗೂಳಘಟ್ಟ ಗ್ರಾಮ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ.
3] ರಾಜು @ ಮೋಡರಾಮ್ @ ರಾಜೀವ್‍ಗಾಂಧಿ @ ಅಶೋಕ್ @ ಸೇಟು ರಾಜು ಬಿನ್ ಡೋಲಾರಾಮ್, 34 ವರ್ಷ, ಸೀರ್ವಿ ಜನಾಂಗ, ಬೆಂಗಳೂರಿನ ಭನ್ನೇರಘಟ್ಟ ರಸ್ತೆಯಲ್ಲಿ ಗೊಟ್ಟಿಗೆರೆ ಗ್ರಾಮದಲ್ಲಿರುವ ಕೂನಿಬಾಯಿ ರವರ ಹಾಯ್ ಮಾತಾಜಿ ಜ್ಯೂವೆಲರಿ ಅಂಗಡಿಯಲ್ಲಿ ಕೆಲಸ, ವಾಸ 1 ನೇ ಕ್ರಾಸ್, ಕೆಂಬತ್ತಹಳ್ಳಿ ರೋಡ್, ಶಾರದಮ್ಮ ಬಿಲ್ಡಿಂಗ್, ಗೊಟ್ಟಿಗೆರೆ ಗ್ರಾಮ, ಭನ್ನೇರಘಟ್ಟ ಗ್ರಾಮ, ಬೆಂಗಳೂರು ಗ್ರಾಮಾಂತರ, ಸ್ವಂತ ಊರು ಕೋಕ್ರಾ ಗ್ರಾಮ ಸೋಜತ್ ಸಿಟಿ, ಪಾಲಿ ಜಿಲ್ಲೆ. ರಾಜಸ್ಥಾನ್ ರಾಜ್ಯ

   ಈ ಮೇಲ್ಕಂಡ ಪ್ರಕರಣಗಳ ಪತ್ತೆಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಗ್ರಾಮಾಂತರ ವೃತ್ತನಿರೀಕ್ಷಕರಾದ ಶ್ರೀ ಲೋಕೇಶ್, ಮ.ಪಿಎಸ್‍ಐ ಶ್ರೀಮತಿ ಭವಿತ, ಮತ್ತು ಅಪರಾಧ ಪತ್ತೆ ಸಿಬ್ಬಂದಿಯವರಾದ ಶ್ರೀ ಚಿಕ್ಕಯ್ಯ, ಮಹೇಶಕುಮಾರ್, ಅನಿಲ್‍ಕುಮಾರ್, ಉಮರ್‍ಅಹಮದ್, ಕರಿಗಿರಿಗೌಡ, ಶ್ರೀರಾಮ, ಉಮೇಶ, ಆಂತೋಣಿರವರು ಚಾಲಕ ಪುಟ್ಟರಾಜು ರವರುಗಳನ್ನು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟರು, ಮಂಡ್ಯ ಜಿಲ್ಲೆ, ಮಂಡ್ಯರವರು ಪ್ರಶಂಶಿಸಿರುತ್ತಾರೆ.
Mandya District Daily Crime Report Date: 11-12-2015
Mandya District Daily Crime Report Date: 10-12-2015
Mandya District Daily Crime Report Date: 09-12-2015
Mandya District Daily Crime Report Date: 08-12-2015
Mandya District Daily Crime Report Date: 07-12-2015
Mandya District Daily Crime Report Date: 06-12-2015
DAILY CRIME REPORT DATE 05-12-2015

PRESS NOTE DATE 05-12-2015


                                                                                        ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                                        ಮಂಡ್ಯ ಜಿಲ್ಲೆ,
                                                                              ಮಂಡ್ಯ,  ದಿನಾಂಕಃ-05-12-2015.

-:ಪತ್ರಿಕಾ ಪ್ರಕಟಣೆ:-


     ಈ ದಿವಸ ದಿನಾಂಕಃ-05-12-2015 ರಂದು ಮದ್ಯಾಹ್ನ 1-00 ಗಂಟೆಯ ಸಮಯದಲ್ಲಿ ಶ್ರೀಮತಿ.ಭವಿತ, ಮ.ಪಿ.ಎಸ್.ಐ ಮಂಡ್ಯ ಗ್ರಾಮಾಂತರ ಠಾಣೆರವರಿಗೆ ಜಿಲ್ಲಾ ಪೋಲಿಸ್ ಕಛೇರಿಯಿಂದ ಬಂದ ಮಾಹಿತಿ ಏನೆಂದರೆ, ಮಂಡ್ಯ ನಗರದ ಗಾಂದಿನಗರ 8 ನೇ ಕ್ರಾಸ್‍ನಲ್ಲಿರುವ ಶ್ರೀಮತಿ ಕಾಳಮ್ಮ ಎಂಬುವವರಿಗೆ ಸೇರಿದ ಮನೆ ನಂಬರ್ 2033/6 ರಲ್ಲಿ ಮನೆಯ ಮಾಲೀಕರ ಮಗನಾದ  ಸಿ.ಎಂ.ರಾಮು ಎಂಬುವವನು ಹುಡುಗಿಯರನ್ನಿಟ್ಟುಕೊಂಡು ವೇಶ್ಯವಾಟಿಕೆ ದಂದೆಯಲ್ಲಿ ತೊಡಗಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆಂತಲೂ  ಈ ಬಗ್ಗೆ ದಾಳಿ ನಡೆಸಿ ನಿಯಾಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದರ ಮೇರೆಗೆ ಸದರಿ ವಿಚಾರವನ್ನು ಡಿ.ವೈ.ಎಸ್.ಪಿ. ಮಂಡ್ಯ ಉಪ-ವಿಭಾಗರವರಿಗೆ ತಿಳಿಸಿ ಅವರಿಂದ ಸರ್ಚ್‍ವಾರೆಂಟ್ ಪಡೆದು ಅವರ ಜೊತೆಯಲ್ಲಿ ಪಶ್ಚಿಮ ಪೋಲಿಸ್ ಠಾಣೆಯ ಮಹಿಳಾ ಪಿ.ಎಸ್.ಐ. ಜಯಲಕ್ಮಮ್ಮ ಹಾಗು ಇತರೆ ಸಿಬ್ಬಂದಿಗಳೊಂದಿಗೆ ಹಾಗೂ ಪಂಚಾಯ್ತುದಾರರನ್ನು ನೇಮಕ ಮಾಡಿಕೊಂಡು ಮೆಲ್ಕಂಡ ಮನೆಯ ಮೇಲೆ ದಾಳಿ ಮಾಡಲಾಗಿ ಸದರಿ ಮನೆಯು  ಮಂಡ್ಯ ಸಿಟಿ ಗಾಂದಿನಗರದ 8 ನೇ ಕ್ರಾಸಿನಲ್ಲಿರುವ ಶ್ರೀಮತಿ ಕಾಳಮ್ಮ ಎಂಬುವವರಿಗೆ ಸೇರಿದ ಮನೆ ನಂಬರ್ 2033/6 ಆಗಿದ್ದು, ಸದರಿ ಮನೆಯು 1ನೇ ಅಂತಸ್ತಿನಲ್ಲಿರುವ ಆರ್.ಸಿ.ಸಿ. ಮನೆ ಆಗಿರುತ್ತದೆ.

       ಮನೆಯ ಬಾಗಿಲನ್ನು ತಟ್ಟಿದಾಗ ಒಳಗಿಂದ ಬಾಗಿಲು ತೆರೆದಾಗ ಇಬ್ಬರು ಹೆಣ್ಣುಮಕ್ಕಳು ಅರೆಬರೆ ಬಟ್ಟೆಯನ್ನು ಧರಿಸಿರುವ ಸ್ಥಿತಿಯಲ್ಲಿದ್ದು, ಮತ್ತು ಇಬ್ಬರು ಗಂಡಸರು ಅರೆ ಬೆತ್ತಲೆ ಸ್ಥಿತಿಯಲ್ಲಿದ್ದು,  ಸದರಿ ಗಂಡಸರನ್ನು ವಿಚಾರಮಾಡಲಾಗಿ ಒಬ್ಬನು ತನ್ನ ಹೆಸರು ಸಿ.ಎಂ ರಾಮು ಬಿನ್ ಮಂಚಯ್ಯ 45 ವರ್ಷ, ಕೂಲಿಕೆಲಸ, ವಾಸ:- ನಂಬರ್ 2033/6 ಗಾಂದಿನಗರ, 8ನೇ ಕ್ರಾಸ್, ಮಂಡ್ಯ ಸಿಟಿ  ಎಂತಲೂ ತಾನು ಇದೇ ಮನೆಯಲ್ಲಿ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದು, ತನ್ನ ಬಳಿಯಿರುವ ಮೊಬೈಲ್‍ಗಳ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ವೇಶ್ಯಾವಾಟಿಕೆಯನ್ನು ನಡೆಸುತ್ತಿರುವುದಾಗಿ ತಿಳಿಸಿರುತ್ತಾನೆ, ಮತ್ತೊಬ್ಬನು ತನ್ನ ಹೆಸರು ಗಂಗಾಧರ ಬಿನ್ ಲೇಟ್ ಕಾಳೇಗೌಡ, 23 ವರ್ಷ, ವಕ್ಕಲಿಗರು, ಡ್ರೈವರ್ ಕೆಲಸ, ವಾಸ:-ಕಾಳೇನಳ್ಳಿ  ಗ್ರಾಮ. ಎಂತಲೂ ತಿಳಿಸಿರುತ್ತಾನೆ. ಹೆಣ್ಣುಮಕ್ಕಳನ್ನು ವಿಚಾರ ಮಾಡಲಾಗಿ ಒಬ್ಬಳು ಆದಿವಾಲ ಗ್ರಾಮ, ಹಿರಿಯೂರು ಹೋಬಳಿ, ಚಿತ್ರದುರ್ಗಾ ಜಿಲ್ಲೆ ಎಂತಲೂ ಮತ್ತೊಬ್ಬಳು, ಚಿಕ್ಕಜಾಜೂರು ಗ್ರಾಮ, ಚಿತ್ರದುರ್ಗಾ ಜಿಲ್ಲೆ, ಎಂತಲೂ ತಿಳಿಸಿರುತ್ತಾರೆ. ಇಬ್ಬರೂ ಹೆಣ್ಣುಮಕ್ಕಳು ತಾವು ನೆನ್ನೆ ರಾತ್ರಿ ಅಂದರೆ ದಿನಾಂಕ:04-12-2015 ರಂದು ಬಂದಿದ್ದಾಗಿಯೂ ಸದರಿ ಮನೆಯಲ್ಲಿರುವ ರಾಮು ಎಂಬುವರು ತಮ್ಮನ್ನು ವೇಶ್ಯಾವಾಟಿಕೆಗಾಗಿ ಕರೆಸಿ, ವೈಶ್ಯಾವಾಟಿಕೆಯಲ್ಲಿ ತೊಡಗಿಸಿರುತ್ತಾರೆಂದು ತಿಳಿಸಿರುತ್ತಾರೆ. 

    ಸದರಿ ಮೇಲ್ಕಂಡ ಸಿ.ಎಂ ರಾಮುರವರು ಕಾನೂನಿಗೆ ವಿರುದ್ದವಾಗಿ ತಮ್ಮ ಮನೆಯನ್ನು  ವೇಶ್ಯವಾಟಿಕೆಯ ದಂಧೆಗೆ ಉಪಯೋಗಿಸಿ ಹುಡುಗಿಯರನ್ನು ವೇಶ್ಯವಾಟಿಕೆ ದಂಧೆಗೆ ತೊಡಗಿಸಿ ಇದರಿಂದ ಹಣ ಸಂಪಾದನೆ ಮಾಡುವ ದಂಧೆಯಲ್ಲಿ ತೊಡಗಿದ್ದರಿಂದ ಮತ್ತು ಗಂಗಾದರ ಎಂಬುವವನು ವೇಶ್ಯವಾಟಿಕೆಯಲ್ಲಿ ತೊಡಗಿದ್ದರಿಂದ, ಗಂಗಾಧರ ಮತ್ತು ಸಿ.ಎಂ.ರಾಮುರವರುಗಳ  ವಿರುದ್ದ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ. 

CRIME PREVENTION MONTH-2015

ಅಪರಾಧ ತಡೆ ಮಾಸಾಚರಣೆ – ಡಿಸೆಂಬರ್ 2015.

ವಿಷಯ: ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಸಲುವಾಗಿ  ಜೂಜಾಟ ಮತ್ತು ಪೆಟ್ಟಿಗೆ ಅಂಗಡಿಗಳಲ್ಲಿ                                                   ಮದ್ಯಮಾರಾಟ ಮಾಡುವುದನ್ನು ತಡೆಗಟ್ಟುವ ಬಗ್ಗೆ.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು.

1.  ನಿಗದಿತ ಸಮಯಕ್ಕಿಂತ ಹೆಚ್ಚು ವೇಳೆ ಮದ್ಯದ ಅಂಗಡಿಗಳನ್ನು ಬಾರ್ ಮತ್ತು ರೆಸ್ಟೊರೆಂಟ್‍ಗಳನ್ನು ಹಾಗೂ ಮನರಂಜನಾ ಕೇಂದ್ರಗಳನ್ನು ತೆರೆಯದಂತೆ ಎಲ್ಲಾ ಪೊಲೀಸ್ ಅಧಿಕಾರಿಗಳು ಪ್ರತಿ ನಿತ್ಯ ತಪಾಸಣೆ ನಡೆಸುವುದು.

2.  ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ಆರೋಪಗಳಿದ್ದಲ್ಲಿ ಅಂತಹವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು ಮತ್ತು ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲು ವರದಿ ಸಲ್ಲಿಸುವುದು.

3.  ಪ್ರತಿ ದಿನ ಎಲ್ಲಾ ಮನರಂಜನಾ ಕೇಂದ್ರಗಳನ್ನು ತಪಾಸಣೆ ನಡೆಸುವುದು ಹಾಗೂ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮ ವಹಿಸುವುದು.

4.  ಸ್ಥಳೀಯ ಸುದ್ದಿ ಮಾಧ್ಯಮಗಳಲ್ಲಿ ಅಪರಾಧ ತಡೆ ಮಾಸಾಚರಣೆ ವಿಚಾರದಲ್ಲಿ ವೀಡಿಯೋ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.

5.  ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುವವರ ವಿರುದ್ಧ ಹೆಚ್ಚಿನ ಸಂಚಾರಿ ಪ್ರಕರಣಗಳನ್ನು ದಾಖಲಿಸುವುದು ಹಾಗೂ ಚಾಲನೆ ಮಾಡುವಾಗ ಮೊಬೈಲ್‍ಗಳನ್ನು ಬಳಸುವ ಹಾಗೂ ಅತಿವೇಗವಾಗಿ ಚಾಲನೆ ಮಾಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು.

6.  ಎಲ್ಲಾ ಪೊಲೀಸ್ ಅಧಿಕಾರಿಗಳು ಕನಿಷ್ಠ ಒಂದು ಶಾಲೆಗೆ ಭೇಟಿ ನೀಡಿ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವುದು, ಸಮಾಜದಲ್ಲಿ  ಜೂಜಾಟ ಮತ್ತು ಮದ್ಯ ಸೇವನೆ ವಿಷಯದಲ್ಲಿ ಹಾಗೂ ಸಾಮಾಜದಲ್ಲಿರುವ ಪಿಡುಗುಗಳನ್ನು ಕಡಿಮೆ ಮಾಡುವ ವಿಚಾರದಲ್ಲಿ ಪ್ರಬಂಧ ಸ್ಪರ್ಧೆಯನ್ನು ಮಕ್ಕಳಿಗೆ ಏರ್ಪಡಿಸುವುದು. ಉತ್ತಮ ಪ್ರಬಂಧ ಬರೆದಿರುವವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು.

7.  ಅಪರಾಧ ತಡೆ ಮಾಸಾಚರಣೆ ಮತ್ತು ಬೀಗ ಹಾಕಿರುವ ಮನೆಗಳ ಕಳ್ಳತನ ನಡೆಯದಂತೆ ಗಸ್ತು ಏರ್ಪಡಿಸುವ ವಿಚಾರದಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದು.

8.  ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ವಿಚಾರದಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿರುವ ಅಂಗಡಿ ಮಾಲೀಕರನ್ನು ನಿವಾಸಿಗಳನ್ನು ಕೋರಿಕೊಂಡು ಅದನ್ನು ಅಳವಡಿಸಲು ಕ್ರಮ ಕೈಗೊಳ್ಳುವುದು.

9.  ಕಾಣೆಯಾಗಿರುವ ಮಕ್ಕಳ ಪತ್ತೆ ಕಾರ್ಯವನ್ನು ತಂತ್ರಾಂಶದ ಮೂಲಕ ಪತ್ತೆ ಮಾಡಲು ಎಲ್ಲಾ ಪೊಲೀಸ್ ಅಧಿಕಾರಿಗಳು ಕಾರ್ಯಮಗ್ನರಾಗುವುದು.

10.   ಡಿಸೆಂಬರ್ ಮಾಹೆಯ ಅಂತ್ಯದಲ್ಲಿ ಕಳವು ಪ್ರಕರಣಗಳನ್ನು ಪತ್ತೆ ಮಾಡಿರುವ ಬಗ್ಗೆ ಕಳವು ಮಾಲುಗಳ ಪ್ರದರ್ಶನ ಕೂಟ ಏರ್ಪಡಿಸುವುದು.

Crime Prevention Month – December 2015

Theme: Curbing Gambling and Sale of Liquor in Petty Shops;
Safety of Women and Children

Action to be taken by Police Officers and Staff
1.  

1.    Every day officers will check that wine shops, bar, restaurants and clubs do not remain open for time more than prescribed.

2.  For any complaint on petty shops selling liquor, cases should be booked and recommendation for their shop license cancellation should be sent.

3.    All clubs to be checked regularly to ensure that no illegal activity takes place.

4. Crime Prevention Awareness Video to be shown on local news channels

5.    More number of traffic cases to be booked on people doing drunken driving, use of mobile while driving and over speeding.

6.    All officers will go to minimum one school and spread awareness about child safety and traffic awareness. They will also take essay competition on the topic of “Disadvantages of gambling and liquor to the society: Ways to reduce these social evils”. Best essays will be rewarded.

7.    All officers will hold public meeting in their limits and create awareness about crime prevention and systems like locked houses beat system.

8.    All officers will contact in their areas the shop owners and residents and request them to install CCTV cameras in important areas.

9.    All officers will make efforts to trace missing children on mission mode.

10.       Property returns parade to be conducted at the end of the month.

PRESS NOTE DATE 05-12-2015

                                                                                       ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                                  ಮಂಡ್ಯ ಜಿಲ್ಲೆ,
                                 ಮಂಡ್ಯ, ದಿನಾಂಕಃ  05-12-2015.

-: ಪತ್ರಿಕಾ ಪ್ರಕಟಣೆ. :-

       ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಶಿವಶೈಲ ಕ್ಷೇತ್ರ, ಪಟ್ಟಸೋಮನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಯುತ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಶಿವಪ್ಪರವರ ಒಂಟಿ ತೋಟದ ಮನೆಗೆ ದಿನಾಂಕ: 25-10-2015 ರಂದು ರಾತ್ರಿ ವೇಳೆಯಲ್ಲಿ ಢಕಾಯಿತರು ಮನೆಗೆ ನುಗ್ಗಿ ಜಸ್ಟೀಸ್ ಶಿವಪ್ಪ ಹಾಗೂ ಅವರ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ, ಬಲವಂತವಾಗಿ ಅವರಿಂದ 12,70,000/- ರೂ. ಬೆಲೆ ಬಾಳುವ ಒಡವೆ ಹಾಗೂ ನಗದನ್ನು ದೋಚಿಕೊಂಡು ಹೋಗಿದ್ದು, ಈ ಸಂಭಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ.378/2015. ಕಲಂಃ 395 ಕೂಡ 149 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. 

      ಈ ಪ್ರಕರಣವನ್ನು ಬೇಧಿಸಲು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಸದರಿ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಘಟನಾ ಸ್ಥಳದಲ್ಲಿ ದೊರೆತ ಭೌತಿಕ ಸಾಕ್ಷಿಗಳು, ಆಧುನಿಕ ತಂತ್ರಜ್ಞಾನ, ಸ್ಥಳೀಯವಾಗಿ ದೊರೆ ಮಾಹಿತಿ, ಹಳೆಯ ಎಂ.ಓ.ಬಿ.ದಾರರ ಬಗ್ಗೆ ತಳಮಟ್ಟದಿಂದ ಮಾಹಿತಿ ಸಂಗ್ರಹಿಸಿ ಸದರಿ ದರೋಡೆ ಪ್ರಕರಣವನ್ನು ಬೇಧಿಸಿ, ಈ ಕೃತ್ಯದಲ್ಲಿ ಭಾಗಿಯಾಗಿದ್ದವರ ಪೈಕಿ ಒಟ್ಟು 16 ಆರೋಪಿಗಳನ್ನು ಬಂಧಿಸಿ, ಅವರುಗಳಿಂದ ಈ ಪ್ರಕರಣದಲ್ಲಿ ದೋಚಲಾಗಿದ್ದ 52,000/- ರೂ. ನಗದು ಹಾಗೂ 187 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಕೊಳ್ಳಲಾಗಿತ್ತು.

ಸದರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ 1] ಜಗದೀಶ @ ಜಗ, 2] ಕೃಷ್ಣಕುಮಾರ @ ಗಜ, 3]ವಿನೋದ @ ವಿನಿ, 4]ಅಯ್ಯಪ್ಪ @ ಲವ ರವರುಗಳನ್ನು ದಿನಾಂಕ 30-11-2015 ರಂದು ದಸ್ತಗಿರಿ ಮಾಡಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ್ ಪಡಿಸಿಕೊಂಡು ಸದರಿ ಆರೋಪಿಗಳು ಈ ಪ್ರಕರಣದ ಜೊತೆಗೆ ಇನ್ನು ಒಟ್ಟು ಈ ಕೆಳಕಂಡ  11 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.

1] ಮೈಸೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣೆಯ 1 ಪ್ರಕರಣ, 
2] ಮೈಸೂರು ಸಿಟಿ ಸರಸ್ವತಿ ಪುರಂ ಪೊಲಿಸ್ ಠಾಣೆಯ 1 ಪ್ರಕರಣ, 
3] ತುಮಕೂರು ಜಿಲ್ಲೆ ನ್ಯೂ ಎಕ್ಸ್‍ಟೆನ್ಷನ್ ಪೊಲೀಸ್ ಠಾಣೆಯ 1 ಪ್ರಕರಣ, 
4] ಮದ್ದೂರು ಪೊಲೀಸ್ ಠಾಣೆಯ 1 ಪ್ರಕರಣ, 
5] ಮಂಡ್ಯ ಪೂರ್ವ ಪೊಲೀಸ್ ಠಾಣೆಯ 3 ಪ್ರಕರಣ, 
6] ಅರಕೆರೆ ಪೊಲೀಸ್ ಠಾಣೆಯ 2 ಪ್ರಕರಣ, 
7] ಕೆ.ಆರ್.ಸಾಗರ ಪೊಲೀಸ್ ಠಾಣೆಯ 1 ಪ್ರಕರಣ 
8] ಪಾಂಡವಪುರ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ ಬಾಗಿಯಾಗಿರುವುದು ಕಂಡು ಬಂದಿರುತ್ತದೆ.

 ಸದರಿಯವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಒಟ್ಟು 11 ಪ್ರಕರಣಗಳಿಗೆ ಸಂಬಂದಪಟ್ಟ 1] ಒಂದು 53 ಇಂಚಿನ ಸೋನಿ ಎಲ್.ಇ.ಡಿ ಟಿವಿ. 2] ಒಂದು 32 ಇಂಚಿನ ಸೋನಿ ಎಲ್.ಇ.ಡಿ ಟಿ.ವಿ. 3] ಒಂದು ಖಾಲಿ ಸಿಲೆಂಡರ್, ಹಾಗೂ ಒಟ್ಟು 293 ಗ್ರಾಂ ಚಿನ್ನ ಮತ್ತು ಒಂದು ಕೆ.ಜಿ ಬೆಳ್ಳಿಯ ಸಾಮಾನುಗಳನ್ನು ಒಟ್ಟು ಸುಮಾರು 8,55,500/- ( ಎಂಟು ಲಕ್ಷದ ಐವತ್ತೈದು ಸಾವಿರದ ಐನೂರು ರೂ.ಗಳು ) ಗಳಷ್ಟು ಮೌಲ್ಯದ ಮಾಲುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಟವೆರಾ ಕಾರ್ ನಂ. ಎಂ.ಹೆಚ್.-14, ಸಿಎಕ್ಸ್-5102 ಹಾಗೂ ಸ್ವಿಫ್ಟ್ ಡಿಜೈರ್ ಕಾರ್ ಕೆ.ಎ.-05-ಎ.ಇ-6793 ಕಾರನ್ನು ವಶಕ್ಕೆ ಪಡೆದುಕೊಂಡಿರುತ್ತೆ. 

ಹಾಗು ಜೆಸ್ಟಿಸ್ ಶಿವಪ್ಪ ರವರ ಮನೆಯ ದರೋಡೆ ಕೇಸಿಗೆ ಸಂಬಂಧಪಟ್ಟಂತೆ ಬೆಂಗಳೂರಿನ ವಕೀಲರಾದ ರಾಜಶೇಖರ್ ಎಂಬುವವರು ಆರೋಪಿಗಳಿಗೆ ಕಳ್ಳತನ ಮಾಡಲು ಸಹಕಾರ ನೀಡಿ ಆರೋಪಿಗಳು ಕದ್ದು ತಂದ ಮಾಲನ್ನು ಮಧ್ಯವರ್ತಿಯಾಗಿ ಮಾರಾಟ ಮಾಡಿಸಿ ಹಣ ಕೊಡಿಸುವ ವೇಳೆಯಲ್ಲಿಯೇ ಖುದ್ದಾಗಿ, ನೇರವಾಗಿ ಸಿಕ್ಕಿಕೊಂಡಿದ್ದು, ಸದರಿಯವರನ್ನು ಸಹ ಈ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದು, ಸದರಿಯವರಿಂದ ಒಂದು ಚಿನ್ನದ ಚೈನು ಮತ್ತು ಒಂದು ಕೆ.ಜಿ. ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡು, ರಾಜಶೇಖರ್‍ರವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿಯಾಗಿರುತ್ತಾರೆ. ಇವರು ವಕೀಲ ವೃತ್ತಿಯ ಜೊತೆಗೆ ಕಳ್ಳತನ ಆರೋಪಿಗಳ ಜೊತೆ ಶಾಮೀಲಾಗಿದ್ದು, ಸದರಿಯವರು ಮೇಲೆ ಒಟ್ಟು 4 ಪ್ರಕರಣಗಳಲ್ಲಿ ಆರೋಪಿಯಾಗಿರುತ್ತಾರೆ. 

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಇವರುಗಳ ವಿರುದ್ದ ಅನೇಕ ಜಿಲ್ಲೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿರುತ್ತವೆ. ಜಸ್ಟೀಸ್ ಶಿವಪ್ಪರವರ ಮನೆಯಲ್ಲಿ ಹೆಚ್ಚಿನ ಸಂಪತ್ತು ಇದೆ ಎಂದು ಭಾವಿಸಿ, ಈ ಕೃತ್ಯವೆಸಗಿರುತ್ತಾರೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಒಟ್ಟು 20 ಜನ ಆರೋಪಿಗಳನ್ನು ದಸ್ತಗಿರಿ ಮಾಡಿಕೊಂಡಿದ್ದು, ಉಳಿಕೆ 3 ಆರೋಪಿಗಳ ಬಗ್ಗೆ ಪತ್ತೆ ಕಾರ್ಯ ಮುಂದುವರೆದಿರುತ್ತೆ. 

ಸದರಿ ಆರೋಪಿತರುಗಳ ಪತ್ತೆಗಾಗಿ ಶ್ರೀ ಸಿದ್ದೇಶ್ವರ್, ಡಿ.ಎಸ್.ಪಿ. ಶ್ರೀರಂಗಪಟ್ಟಣ, ಶ್ರೀ ಪ್ರಕಾಶ್.ಬಿ.ಎಸ್. ಪಿಐ, ಪಾಂಡವಪುರ ಪೊಲೀಸ್ ಠಾಣೆ, ಶ್ರೀ ಲೋಕೇಶ್, ವೃತ್ತ ನಿರೀಕ್ಷಕರು, ಶ್ರೀ ಅಯ್ಯನಗೌಡ, ಪಿ.ಎಸ್.ಐ. ಪಾಂಡವಪುರ, ಶ್ರೀ ಅಜರುದ್ದೀನ್, ಪಿ.ಎಸ್.ಐ. ಅರಕೆರೆ ಪೊಲಿಸ್ ಠಾಣೆ. ಹಾಗೂ ಪೊಲೀಸ್ ಸಿಬ್ಬಂದಿಗಳು ಶ್ರಮವಹಿಸಿದ್ದು, ಈ ಪ್ರಕರಣದ ಆರೋಪಿಗಳು ಹಾಗೂ ಮಾಲುಗಳನ್ನು ಪತ್ತೆ ಮಾಡುವಲ್ಲಿ ಶ್ರಮ ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟರು, ಮಂಡ್ಯ ಜಿಲ್ಲೆ, ಮಂಡ್ಯರವರು ಪ್ರಶಂಶಿಸಿ, ಪತ್ತೆ ಕಾರ್ಯದಲ್ಲಿ ತೊಡಗಿದ್ದ ತಂಡಕ್ಕೆ ಒಂದು ಲಕ್ಷ ರೂ. ನಗದು ಬಹುಮಾನವನ್ನು ಮಂಜೂರು ಮಾಡಲು, ಮಾನ್ಯ ಐ.ಜಿ.ಪಿ. ದಕ್ಷಿಣ ವಲಯ, ಮೈಸೂರುರವರಿಗೆ ಶಿಫಾರಸ್ಸು ಸಲ್ಲಿಸಿರುತ್ತಾರೆ.

Mandya District Daily Crime Report Date: 04-12-2015
Mandya District Daily Crime Report Date: 03-12-2015
Mandya District Daily Crime Report Date: 02-12-2015
Mandya District Daily Crime Report Date: 01-12-2015