Moving text

Mandya District Police
Mandya District Daily Crime Report Date: 16-01-2016

PRESS NOTE DATE 16-01-2016

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 16-01-2016

ಪತ್ರಿಕಾ ಪ್ರಕಟಣೆ
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಕೊಲೆ ಪ್ರಕರಣದ ಪತ್ತೆ
ಆರೋಪಿಗಳು ನ್ಯಾಯಾಂಗ ಬಂಧನಕ್ಕೆ.
  
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 313/2015 ಕಲಂ-302, 201 ಐಪಿಸಿ.

ದಿನಾಂಕ: 14-12-15 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿ ಪೂರ್ಣಿಮಾ ರವರು ಠಾಣೆಗೆ ಹಾಜರಾಗಿ ಮಂಡ್ಯ ತಾಲ್ಲೂಕು, ದುದ್ದ ಹೋಬಳಿ, ಸೌದೇನಹಳ್ಳಿ ಗ್ರಾಮದ, ಪರಿಶಿಷ್ಟ ಜನಾಂಗದ ಕಾಲೋನಿಯ ಲೋಕೇಶ್ರವರ ಮಗಳಾದ ನನ್ನನ್ನು ಸುಮಾರು 8 ವರ್ಷಗಳ ಹಿಂದೆ, ನಾಗಮಂಗಲ ತಾಲ್ಲೂಕು, ಹೊನಕೆರೆ ಹೋಬಳಿಯ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ವಾಸವಾಗಿರುವ ಬೆಟ್ಟಯ್ಯನವರ ಮಗನಾದ ರವೀಂದ್ರ ರವರಿಗೆ ನನ್ನನ್ನು ಕೊಟ್ಟು ಮದುವೆ ಮಾಡಿರುತ್ತಾರೆ. ನಮಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತ್ತಾರೆ. ನನ್ನ ಗಂಡ ಚಿಣ್ಯ ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ ಸುಮಾರು 8 ವರ್ಷಗಳಿಂದ ಕರ್ತವ್ಯ ಮಾಡುತ್ತಿದ್ದರು. ಈಗ್ಗೆ 3 ತಿಂಗಳ ಹಿಂದೆ ಕೆಎ-46/1019 ಅಪೆ ಪ್ಯಾಸೆಂಜರ್ ಆಟೋವನ್ನು ತೆಗೆದುಕೊಂಡು ಬಂದು ಬಿಡುವಿನ ವೇಳೆಯಲ್ಲಿ ಜಕ್ಕನಹಳ್ಳಿಯಿಂದ-ನಾಗಮಂಗಲಕ್ಕೆ ಪ್ರಯಾಣಿಕರನ್ನು ಕೂರಿಸಿಕೊಂಡು ಟ್ರಿಪ್ ಮಾಡುತ್ತಿದ್ದು ಸರಿಯಷ್ಟೆ. ಹೀಗಿರುವಾಗ ದಿನಾಂಕ 14-12-15 ರಂದು ಬೆಳಿಗ್ಗೆ 6 ಗಂಟೆಗೆ ಟ್ರಿಪ್ ಮಾಡುತ್ತೇನೆಂದು ಹೇಳಿ ನನ್ನ ಗಂಡ ಮೇಲ್ಕಂಡ ಆಟೋವನ್ನು ತೆಗೆದುಕೊಂಡು ಹೋಗಿದ್ದರು. ನನ್ನ ಗಂಡ ರಾತ್ರಿಯಾದರೂ ಸಹ ಮನೆಗೆ ಬಂದಿರಲಿಲ್ಲ. ದಿನಾಂಕ : 14-12-2015 ರಂದು ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಯಾರೋ ನಮ್ಮ ಮನೆಯ ಬಳಿಗೆ ಬಂದು, ಜುಟ್ಟನಹಳ್ಳಿ ರಸ್ತೆ ಪಕ್ಕದಲ್ಲಿ ಕೆಎ-46/1019 ಅಪೆ ಪ್ಯಾಸೆಂಜರ್ ಆಟೋ ನಿಂತಿದ್ದು, ಅಲ್ಲೇ ಸ್ವಲ್ಪ ದೂರದಲ್ಲಿ ಒಬ್ಬ ವ್ಯಕ್ತಿಗೆ ತಲೆಗೆ ಪೆಟ್ಟಾಗಿ ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ, ನಾನು, ನಮ್ಮತ್ತೆ ನಾಗಮ್ಮ, ಹಾಗೂ ನಮ್ಮ ಗ್ರಾಮದ ಸತೀಶ್ಕುಮಾರ್, ಸುರೇಶ್ಕುಮಾರ್, ದೀಪು ರವರುಗಳು ಬಂದು ಜುಟ್ಟನಹಳ್ಳಿ ರಸ್ತೆ ಹತ್ತಿರ ಬಂದು ನೋಡಲಾಗಿ ನನ್ನ ಗಂಡ ಮೃತಪಟ್ಟಿರುತ್ತಾರೆ. ರಸ್ತೆ ಪಕ್ಕದಲ್ಲಿ, ರಸ್ತೆಯ ಕಡೆಗಾದಂತೆ, ನನ್ನ ಗಂಡನ ತಲೆ ಇದ್ದು, ಹಳ್ಳದ ಕಡೆಗೆ ಕಾಲು ಇದ್ದು, ತಲೆಯಲ್ಲಿ ರಕ್ತಸ್ರಾವವಾಗಿರುತ್ತದೆ. ಅಲ್ಲೇ ಸ್ವಲ್ಪ ದೂರದಲ್ಲಿ ಕೆಎ-46/1019 ಅಪೆ ಪ್ಯಾಸೆಂಜರ್ ಆಟೋವನ್ನು ಪೊದೆಗೆ ತಳ್ಳಿರುತ್ತಾರೆ. ದಿನಾಂಕ: 14-12-15 ರಂದು ರಾತ್ರಿ 9 ಗಂಟೆಯ ಹಿಂದಿನ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ನನ್ನ ಗಂಡನ ತಲೆಗೆ, ಯಾವುದೋ ಆಯುಧದಿಂದ ಹೊಡೆದು, ಕೊಲೆ ಮಾಡಿ, ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುತ್ತಾರೆ. ಆದ್ದರಿಂದ ತಾವುಗಳು, ನನ್ನ ಗಂಡ ರವೀಂದ್ರನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಕಂಡು ಹಿಡಿದು, ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಪ್ರಾರ್ಥನೆ ಎಂದು ನೀಡಿದ ದೂರಿನ ಮೇರೆಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 313/2015 ಕಲಂ-302, 201 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.

 ಮೇಲ್ಕಂಡ ಪ್ರಕರಣದ ಆರೋಪಿತಗಳ ಪತ್ತೆ ಬಗ್ಗೆ ಡಿವೈಎಸ್ಪಿ ಶ್ರೀ. ಸಿ.ಎನ್.ಜನಾರ್ಧನ್ ನಾಗಮಂಗಲ ಉಪವಿಭಾಗರವರ ಉಸ್ತುವಾರಿಯಲ್ಲಿ ನಾಗಮಂಗಲ ವೃತ್ತದ ಸಿಪಿಐ ರವರಾದ ಶ್ರೀ. ಕೆ.ಪ್ರಭಾಕರ್ ರವರ ನೇತೃತ್ವದಲ್ಲಿ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ ಶ್ರೀ ನಿರಂಜನ್ ಮತ್ತು ಸಿಬ್ಬಂದಿಗಳಾದ ಸಿಹೆಚ್ಸಿ 45 ಸರ್ಪಭೂಷಣ್, ಸಿಪಿಸಿ 78 ಇಂದ್ರಕುಮಾರ, ಸಿಪಿಸಿ 784 ಷಣ್ಮುಖಪ್ಪ, ಸಿಪಿಸಿ 492 ಪ್ರಶಾಂತಕುಮಾರ, ಸಿಪಿಸಿ 365 ಅರುಣಕುಮಾರ, ಸಿಪಿಸಿ 354 ಮಂಜುನಾಥ, ಸಿಪಿಸಿ 769 ದಿನೇಶ್ರವರನ್ನೊಳಗೊಂಡ ಒಂದು ತಂಡವನ್ನು ರಚನೆ ಮಾಡಿದ್ದು, ಸದರಿ ತಂಡವು ಕೃತ್ಯ ನಡೆದ ಸ್ಥಳದಲ್ಲಿನ ಭೌತಿಕ ಕುರುಹುಗಳು, ಬಾತ್ಮೀದಾರರಿಂದ ದೊರೆತ ಇತರೆ ಮಾಹಿತಿಯನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ದಿನಾಂಕ: 15-01-2016 ರಂದು ಆರೋಪಿ 1 ಹರೀಶ ಮತ್ತು ಆರೋಪಿ 2 ಆನಂದ ರವರನ್ನ ಪತ್ತೆ ಮಾಡಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

 ಆರೋಪಿಗಳ ಪತ್ತೆಗೆ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.