Moving text

Mandya District Police

Detection in S R PATNA POLICE STATION

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
  ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 30-03-2012 

ಪತ್ರಿಕಾ ಪ್ರಕಟಣೆ

ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿ,  ಬಾಬುರಾಯನಕೊಪ್ಪಲಿನಲ್ಲಿ ಇತ್ತೀಚಗೆ ಲಾರಿಯ ಕಳ್ಳತನವಾಗುತ್ತಿದ್ದು ಈ ಲಾರಿಗಳು ಕಳ್ಳತನವಾದ 2-3 ದಿನಗಳಲ್ಲಿ ಕೊಳ್ಳೇಗಾಲ,  ಸಂತೆಮರಳ್ಳಿ, ಚಾಮರಾಜನಗರಗಳ ಕಡೆ ಕಾಡು ರಸ್ತೆಗಳಲ್ಲಿ ಚಕ್ರಗಳನ್ನು ಬಿಚ್ಚಿಕೊಂಡು ಅಲ್ಲಿಯೇ ನಿಲ್ಲಿಸಿ, ಕಳ್ಳರು ಹೋರಟು ಹೋಗುತ್ತಿದ್ದರೆಂದು, ಈ ಸಂಬಂಧವಾಗಿ ಲಾರಿಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಪತ್ತೆ ಬಗ್ಗೆ ಶ್ರೀರಂಗಪಟ್ಟಣ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಎ.ವಿ.ವೆಂಕಟೇಶ ಮೂತರ್ಿರವರ ನೇತೃತ್ವದಲ್ಲಿ ಪಿ.ಎಸ್.ಐ ವೆಂಕಟರಾಮಪ್ಪ ಮತ್ತು ಸಿಬ್ಬಂದಿಗಳಾದ ಸಿ.ಪಿ.ಸಿ-01 ಸಿದ್ದರಾಜು, 471- ಕೆ.ಶ್ರೀನಿವಾಸಮೂತರ್ಿ, 633-ಕೃಷ್ಣಶೆಟ್ಟಿ, 638-ಪ್ರಕಾಶರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ದಿನಾಂಕಃ 26-03-12 ರಂದು ಬಾಬುರಾಯನಕೊಪ್ಪಲಿನಲ್ಲಿ ಬೆಳಿಗ್ಗೆ 1030 ಗಂಟೆಯಲ್ಲಿ     ಕೆ.ಎ-16-ಎ-8449 ಲಾರಿಯು ಕಳ್ಳತನವಾಗಿದ್ದು, ಇದರ ಪತ್ತೆ ಬಗ್ಗೆ ಪಿ.ಎಸ್.ಐ, ಶ್ರೀರಂಗಪಟ್ಟಣ ಮತ್ತು ಸಿಬ್ಬಂದಿಗಳನ್ನು ನೇಮಿಸಿ ಕಳುಹಿಸಿದ್ದು ದಿನಾಂಕ-29-03-2012 ರಂದು ಬೆಳಿಗ್ಗೆ 06-30 ಗಂಟೆಯಲ್ಲಿ ಲಾರಿ ಮತ್ತು ಆರೋಪಿಗಳನ್ನು ತಲಾಸು ಮಾಡಿಕೊಂಡು ಹೋಗಿದ್ದ ಸಿಬ್ಬಂದಿಯವರಿಗೆ ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಬಳಿಯ ಹುಲ್ಲೇಪುರ ಗ್ರಾಮದ ಬಳಿ ಆರೋಪಿಗಳು ಟೈರ್ಗಳನ್ನು ಬಿಚ್ಚುತ್ತಿದ್ದು ಕಂಡು ಬಂದಿದ್ದು, ಕೂಡಲೇ ಆರೋಪಿಗಳನ್ನು ಅದಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು,  ಆರೋಪಿಗಳ ಹೆಸರು 1] ದೊರೆಸ್ವಾಮಿ ಬಿನ್ ಲೇಟ್ ಸುಬ್ಬಯ್ಯ, 50 ವರ್ಷ, ವ್ಯವಸಾಯ, ವಾಸ-ಹುಲ್ಲೇಪುರ ಗ್ರಾಮ, ಚಾಮರಾಜನಗರ ತಾಲ್ಲೋಕು & ಜಿಲ್ಲೆ. 2] ನಟರಾಜ ಬಿನ್ ಲೇಟ್ ಲೆಂಕಶೆಟ್ಟಿ, 26 ವರ್ಷ, ಕೂಲಿ ಕೆಲಸ, ವಾಸ- ಮಹಂತಾಳಪುರ ಗ್ರಾಮ, ಸಂತೆಮರಳ್ಳಿ ಹೋಬಳಿ, ಚಾಮರಾಜನಗರ ಜಿಲ್ಲೆ ಎಂದು ತಿಳಿಸಿದ್ದು, ಅವರ ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿಸಿ ರಮೇಶ ಎಂಬುವವನು ತಪ್ಪಿಸಿಕೊಂಡು ಹೋಗಿರುತ್ತಾನೆ. 

     ಇವರನ್ನು  ಪಿ.ಎಸ್.ಐ ರವರು ವಿಚಾರ ಮಾಡಲಾಗಿ ಆರೋಪಿಗಳು ಲಾರಿಯನ್ನು ತಾವೇ ಕಳ್ಳತನ ಮಾಡಿ, ಟೈರ್ ಗಳನ್ನು ಬಿಚ್ಚುತ್ತಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳನ್ನು ಲಾರಿ ಸಮೇತ ಶ್ರೀರಂಗಪಟ್ಟಣ ಠಾಣೆಗೆ ಕರೆದುಕೊಂಡು ಬಂದು ಸಿ.ಪಿ.ಐ ವೆಂಕಟೇಶ ಮೊರ್ತಿರವರ ಮುಂದೆ ಹಾಜರುಪಡಿಸಿದ್ದು, ಸಿ.ಪಿ.ಐರವರು ಕೂಲಂಕುಶವಾಗಿ ವಿಚಾರ ಮಾಡಲಾಗಿ ಆರೋಪಿಗಳು ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಈವರೆಗೆ ಕಳ್ಳತನವಾಗಿ ಶ್ರೀರಂಗಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆಃ 328/11, 545/11, 605/11, 640/11, 159/12, 189/12  ರ ಒಟ್ಟು 6 ಪ್ರಕರಣಗಳಲ್ಲಿ ಕಳುವಾಗಿರುವ ಲಾರಿಗಳನ್ನು ಕಾಡಿಗೆ ಹೋಗುವ ರಸ್ತೆಗಳಲ್ಲಿ ತೆಗೆದುಕೊಂಡು ಹೋಗಿ ಅವುಗಳ ಚಕ್ರಗಳನ್ನು ಬಿಚ್ಚಿಕೊಂಡು ಅಲ್ಲಿಯೇ ನಿಲ್ಲಿಸುತ್ತಿದ್ದರೆಂದು ತಮ್ಮ ಸ್ವ-ಇಚ್ಚಾ ಹೇಳಿಕೆಯ ಕಾಲದಲ್ಲಿ  ತಿಳಿಸಿರುತ್ತಾರೆ. 

ಮೇಲ್ಕಂಡ 5 ಪ್ರಕರಣಗಳಲ್ಲಿ ಈಗಾಗಲೇ ಲಾರಿಗಳು ಕೊಳ್ಳೇಗಾಲ ಮತ್ತು ಸುತ್ತ ಮುತ್ತ ಕಾಡಿಗೆ ಹೋಗುವ ರಸ್ತೆಗಳಲ್ಲಿ 3-4 ಚಕ್ರವಿಲ್ಲದೇ ನಿಂತಿದ್ದವುಗಳನ್ನು ಪತ್ತೆ ಹಚ್ಚಿ ಸ್ಥಳೀಯ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 

ಆರೋಪಿಗಳಿಂದ 1] ಒಂದು ಕೆ.ಎ-16-ಎ-8449 ಲಾರಿ 2] 15 ಡಿಸ್ಕ್ ಸಹಿತ ಇರುವ ಚಕ್ರಗಳು 3] 2 ಟಾರ್ಪಲ್ 4] ಒಂದು ಜಾಕ್ ಮತ್ತು ರಾಡು 5] 2 ಹಗ್ಗಗಳು ಇವುಗಳನ್ನು ಆರೋಪಿ ದೊರೆಸ್ವಾಮಿಯ ಮನೆಯಲ್ಲಿ ಅಡಗಿಸಿಟ್ಟಿದ್ದು ಅವುಗಳನ್ನು ಪೊಲೀಸ್ ಅದಿಕಾರಿಗಳು ಅಮಾನತ್ತುಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 10,50,000/- ರೂಗಳಾಗಿರುತ್ತೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದೀಕ್ಷಕರಾದ ಶ್ರೀ. ಕೌಶಲೇಂದ್ರಕುಮಾರ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.

Detection of Kidnapped Engineer case from Pandavapura PS Police

               ಪೊಲೀಸ್ ಸೂಪರಿಂಟೆಂಡೆಂಡ್ ರವರ ಕಛೇರಿ
                                  ಮಂಡ್ಯಜಿಲ್ಲೆ. ಮಂಡ್ಯ 
                                    ದಿನಾಂಕಃ 29-03-2012 

                                                                    ಪತ್ರಿಕಾ ಪ್ರಕಟಣೆ.

     ಬೆಂಗಳೂರಿನ ಮೆಟ್ರೋದಲ್ಲಿ ಡೆಪ್ಯೂಟಿ ಚೀಪ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ. ಕೆ.ಆರ್ ಶಿವಾನಂದ ಬಿನ್ ರಾಮಪ್ಪ, 44 ವರ್ಷ ಎಂಬುವವರ ಅಪಹರಣವನ್ನು ಮಂಡ್ಯ ಜಿಲ್ಲಾ ಪೊಲೀಸರು ಚಾಕಚಕ್ಯತೆಯಿಂದ ಪತ್ತೆ ಹಚ್ಚಿ ಅವರ ಪ್ರಾಣ ರಕ್ಷಣೆ ಮಾಡಿರುವ ಬಗ್ಗೆ.

     ಶ್ರೀ. ಕೆ.ಆರ್ ಶಿವಾನಂದ ಬಿನ್ ರಾಮಪ್ಪ, 44 ವರ್ಷ, ಮೆಟ್ರೋದಲ್ಲಿ ಡೆಪ್ಯೂಟಿ ಚೀಪ್ ಇಂಜಿನಿಯರ್. ಬೆಂಗಳೂರು ರವರು ದಿನಾಂಕಃ 28/03/2012 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ಬೆಂಗಳೂರಿನ ಶಾಂತಿನಗರದ ಮೆಟ್ರೋ ರೈಲ್ ಕಾರ್ಪೊ ರೇಷನ್ ಲಿಮಿಟೆಡ್  ಕಛೇರಿಯ ಕಾರ್ ಪಾರ್ಕಿಂಗ್ ಬಳಿ ಟಾಟಾ ಇಂಡಿಕಾ ಕಾರ್ ಕೆ.ಎ-50-2011 ನ್ನು ಹತ್ತಿದಾಗ ಅದರಲ್ಲಿ ಇಬ್ಬರು ಆರೋಪಿತರು ಕುಳಿತುಕೊಂಡಿದ್ದು ನಂತರ ಮತೋಬ್ಬ ವ್ಯಕ್ತಿ ಕಾರಿಗೆ ಹತ್ತಿಕೊಂಡು, ಚಾಲಕ ಜಯಂತ್ ಎಂಬುವವನೊಂದಿಗೆ ಸೇರಿಕೊಂಡು ಕೆ.ಅರ್. ಶಿವಾನಂದ ರವರನ್ನು ಅಲ್ಲಿಂದ ಅಪಹರಣ ಮಾಡಿ ಹಣ ಸುಲಿಗೆ ಮಾಡುವ ಸಲುವಾಗಿ, ಅವರ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ಬಿಗಿದು ಹಲ್ಲೆ ಮಾಡಿ, ಬೆಂಗಳೂರಿನಿಂದ ಹೊರಟು ಮೈಸೂರು ರಸ್ತೆಯಲ್ಲಿ ಸಂಚರಿಸಿ ಅವರ ಬಳಿ ಇದ್ದ ಚಿನ್ನಾಭರಣ, ನಗದು ಹಣ ಹಾಗೂ ಬ್ಯಾಂಕ್ನ ಎ.ಟಿ.ಎಂ ಕಾರ್ಡ್ ಗಳನ್ನು ಸುಲಿಗೆ ಮಾಡಿ ಪ್ರಾಣ ಬೆದರಿಕೆ ಹಾಕಿ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ ಅದೇ ಕಾರಿನಲ್ಲಿ ಸಂಚರಿಸುತ್ತಿರುವಾಗ ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಪಾಂಡವಪುರದ ಪೊಲೀಸರು ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಆರೋಪಿಗಳು ವಾಹನವನ್ನು ನಿಲ್ಲಿಸದೇ ಮುಂದೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಕೂಡಲೇ ಚೆಕ್ ಪೋಸ್ಟ್ನ ಪೊಲೀಸ್ ಸಿಬ್ಬಂದಿಗಳು ಮುಂದಿನ ಚೆಕ್ಪೋಸ್ಟ್ಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ವಾಹನದ ಬಗ್ಗೆ ಮಾಹಿತಿ ನೀಡಿದ್ದು ಪಾಂಡವಪುರ - ಮೇಲುಕೋಟೆ ಮುಖ್ಯ ರಸ್ತೆಯ ಜಕ್ಕನಹಳ್ಳಿ ಚೆಕ್ ಪೋಸ್ಟ್ ಬಳಿ ಬೆಳಗಿನ ಜಾವ 2-30 ಗಂಟೆಗೆ ಅಲ್ಲಿನ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಈ ವಾಹನವನ್ನು ಪರಿಶ್ರಮ ಹಾಗೂ ಚಾಕಚಕ್ಯತೆಯಿಂದ ತಡೆದು, ಪರಿಶೀಲನೆ ಮಾಡಿ ಕಾರಿನಲ್ಲಿದ್ದ ಆರೋಪಿ ಕಲ್ಯಾಣ್ಕುಮಾರ್ ಬಿನ್ ಬಸವರಾಜು, 24ವರ್ಷ, ಕೊಪ್ಪಳ ಈತನನ್ನು ವಶಕ್ಕೆ ತೆಗೆದುಕೊಂಡು ಅಪಹರಣಕ್ಕೊಳಗಾಗಿದ್ದ ಇಂಜಿನಿಯರ್ ಶ್ರೀ. ಕೆ.ಆರ್. ಶಿವಾನಂದ ರವರನ್ನು ರಕ್ಷಣೆ ಮಾಡಿರುತ್ತಾರೆ. ಇನ್ನುಳಿಕೆ ಮೂರು ಜನ ಆರೋಪಿಗಳು ಕಾರಿನಿಂದ ಕತ್ತಲೆಯಲ್ಲಿ ತಪ್ಪಿಸಿಕೊಂಡು ಹೋಗಿರುತ್ತಾರೆ.  

     ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು, ಎರಡು ಬ್ಲೇಡ್ ಕಟರ್ ಗಳು , ವೈರ್ ಹಾಗೂ ಸುಲಿಗೆ ಮಾಡಿದ್ದ ಎ.ಟಿ.ಎಂ. ಕಾರ್ಡ್, ಚೆಕ್ ಗಳನ್ನು ಮೇಲುಕೋಟೆ ಪೊಲೀಸರು ವಶಪಡಿಸಿಕೊಂಡು, ಮೆಲ್ಕಂಡ ಇಂಜಿನಿಯರ್ ಕೆ.ಆರ್. ಶಿವಾನಂದ್ ರವರು ನೀಡಿದ ಪಿರ್ಯಾದಿ ನ ಮೇರೆಗೆ ಅಪಹರಣ ಮತ್ತು ಸುಲಿಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಕೈಗೊಂಡು, ಅವರಿಗೆ ಕೂಡಲೇ ಚಿಕಿತ್ಸೆಯನ್ನು ಕೊಡಿಸಲಾಗಿರುತ್ತದೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. 

     ವಿಷಯ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ಅದಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಈ ಅಪಹರಣ ಪ್ರಕರಣವನ್ನು ಕ್ಷಣಾರ್ದದಲ್ಲಿ ಶ್ರಮವಹಿಸಿ ಪತ್ತೆ ಹಚ್ಚಿದ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಸಿರುತ್ತಾರೆ.   

Keragodu PS Cr.No. 50/2012 u/s 302-201 IPC

     ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ
ಮಂಡ್ಯಜಿಲ್ಲೆ. ಮಂಡ್ಯ 
  ದಿನಾಂಕಃ 28-03-2012 
                                 
                                                 ಪತ್ರಿಕಾ ಪ್ರಕಟಣೆ.
 
            ಕೆರಗೋಡು ಪೊಲೀಸ್ ಠಾಣಾ ಮೊ.ಸಂ  50/2012 ಕಲಂ 302-201 ಐಪಿಸಿ.

      ದಿನಾಂಕಃ21-3-2012 ರ ಬೆಳಿಗ್ಗೆ 8-30 ಗಂಟೆಯಲ್ಲಿ ಕೆ.ಗೌಡಗೆರೆಯ ಶಿವರಾಮುರವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಒಂದು ಗಂಡಸಿನ ಸುಮಾರು 26ವರ್ಷ ಪ್ರಾಯದ ಶವ ತೇಲುತ್ತಿದ್ದು.  ಶವದ ಎರಡು ಕಾಲುಗಳನ್ನು ಕಲ್ಲು ಸೇರಿಸಿ ಕಟ್ಟಿದ್ದು ತಲೆಯ ಭಾಗದಿಂದ ಪ್ಲಾಸ್ಟಿಕ್ ಕವರಿಗೆ ಕಲ್ಲು ಸೇರಿಸಿ ಹಾಕಿ ಕಟ್ಟಿದ್ದು ಶವದ ತಲೆಯಲ್ಲಿ , ಬಲ ಕೆನ್ನೆಯಲ್ಲಿ, ಕುತ್ತಿಗೆಯಲ್ಲಿ ಹರಿತವಾದ ರಕ್ತಗಾಯಗಳಿದ್ದು , ಮೃತನು ಎಸ್.ಐ.ಕೋಡಿಹಳ್ಳಿಯ ಶಿವಣ್ಣರವರ ಮಗ ಕೆ.ಎಸ್.ಸುನೀಲ್ ಆಗಿದ್ದು.  ಈತನನ್ನು ಯಾರೋ ದುಷ್ಕಮರ್ಿಗಳು ಯಾವುದೋ ದ್ವೇಷದಿಂದ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಬಾವಿ ನೀರಿಗೆ ಹಾಕಿ ಮೃತನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು.  ಈ ಬಗ್ಗೆ ಬಿ.ಎಸ್.ಕಾಂತರವರು ಕೊಟ್ಟ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಯಿತು.

   ಈ ಕೇಸಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಿಪಿಐ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು. ಈ ತಂಡವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಗಳಾದ 1. ರವಿ 2. ವರದರಾಜು 3. ಮಹೇಶ ರವರುಗಳನ್ನು ದಿಃ26-03-2012 ರಂದು ಬಂಧಿಸಿ ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿ ಮೃತ ಸುನೀಲನಿಂದ ತೆಗೆದುಕೊಂಡು ಹೋಗಿದ್ದ 60,000=00 ಬೆಲೆ ಬಾಳುವ ಹೊಸ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ಅಮಾನತ್ತುಪಡಿಸಿರುತ್ತಾರೆ.  

   ಈ ತಂಡದಲ್ಲಿ ಸಿಪಿಐ ಕೃಷ್ಣಮೂರ್ತಿ ರವರು ಮಂಡ್ಯ ಗ್ರಾಮಾಂತರ ವೈತ್ತ ಹಾಗು ಎ.ಎಸ್.ಐ. ಜಾರ್ಜ್ ವಿಲ್ಸನ್, ಸಿಬ್ಬಂದಿಗಳಾದ ರಮೇಶ್, ಚಿಕ್ಕಯ್ಯ, ಬಾಲಾಜಿ,  ಪ್ರದೀಪ್ಕುಮಾರ್, ಮರಿಯಪ್ಪ ಆರ್.ಬ್ಯಾಳಿ, ರಾಘವೇಂದ್ರ ಇಂಗಳಗಿ, ಶ್ರೀರಾಮ, ಸೋಮಶೇಖರ ರವರು ಕಾರ್ಯ ನಿರ್ವಹಿಸಿದ್ದು.  ಇವರ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಸಂಶಿಸಿ ಮೆಚ್ಚಿ ಬಹುಮಾನ ಘೋಷಿಸಿರುತ್ತಾರೆ. 

Mandya Rural PS Cr.No.50/2012 u/s 302-201 IPC

A-1. Ravi.  A-2 Varadaraju.               Deceased K.S.Sunil s/o Shivanna
                                                A-3.Mahesha                                        S.I. Kodihalli, Mandya

Mandya Rural PS Cr.No.50/2012 u/s 302-201 IPC

             ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
           ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 28-03-2012 
        
                                                                                 ಪತ್ರಿಕಾ ಪ್ರಕಟಣೆ.
 
                                      ಕೆರಗೋಡು ಪೊಲೀಸ್ ಠಾಣಾ ಮೊ.ಸಂ  50/2012 ಕಲಂ 302-201 ಐಪಿಸಿ

      ದಿನಾಂಕಃ21-3-2012 ರ ಬೆಳಿಗ್ಗೆ 8-30 ಗಂಟೆಯಲ್ಲಿ ಕೆ.ಗೌಡಗೆರೆಯ ಶಿವರಾಮುರವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಒಂದು ಗಂಡಸಿನ ಸುಮಾರು 26ವರ್ಷ ಪ್ರಾಯದ ಶವ ತೇಲುತ್ತಿದ್ದು.  ಶವದ ಎರಡು ಕಾಲುಗಳನ್ನು ಕಲ್ಲು ಸೇರಿಸಿ ಕಟ್ಟಿದ್ದು ತಲೆಯ ಭಾಗದಿಂದ ಪ್ಲಾಸ್ಟಿಕ್ ಕವರಿಗೆ ಕಲ್ಲು ಸೇರಿಸಿ ಹಾಕಿ ಕಟ್ಟಿದ್ದು ಶವದ ತಲೆಯಲ್ಲಿ , ಬಲ ಕೆನ್ನೆಯಲ್ಲಿ, ಕುತ್ತಿಗೆಯಲ್ಲಿ ಹರಿತವಾದ ರಕ್ತಗಾಯಗಳಿದ್ದು , ಮೃತನು ಎಸ್.ಐ.ಕೋಡಿಹಳ್ಳಿಯ ಶಿವಣ್ಣರವರ ಮಗ ಕೆ.ಎಸ್.ಸುನೀಲ್ ಆಗಿದ್ದು.  ಈತನನ್ನು ಯಾರೋ ದುಷ್ಕಮರ್ಿಗಳು ಯಾವುದೋ ದ್ವೇಷದಿಂದ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಬಾವಿ ನೀರಿಗೆ ಹಾಕಿ ಮೃತನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು.  ಈ ಬಗ್ಗೆ ಬಿ.ಎಸ್.ಕಾಂತರವರು ಕೊಟ್ಟ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಯಿತು.

   ಈ ಕೇಸಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಿಪಿಐ ಕೃಷ್ಣಮೂರ್ತಿರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು. ಈ ತಂಡವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಗಳಾದ 1. ರವಿ 2. ವರದರಾಜು 3. ಮಹೇಶ ರವರುಗಳನ್ನು ದಿಃ26-03-2012 ರಂದು ಬಂಧಿಸಿ ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿದ್ದು, ಆರೋಪಿ-2 ವರದರಾಜುವಿನ ಪತ್ನಿಯೊಡನೆ ಮೃತ ಸುನೀಲ್ ಅನೈತಿಕ ಸಂಬಂಧ ಹೊಂದಿದ್ದನೆಂಬ ಸಂಶಯದ ಮೇಲೆ ಕೊಲೆ ಮಾಡಿರುತ್ತಾರೆ. ಮೃತ ಸುನೀಲನಿಂದ ತೆಗೆದುಕೊಂಡು ಹೋಗಿದ್ದ 60,000=00 ಬೆಲೆ ಬಾಳುವ ಹೊಸ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ಅಮಾನತ್ತುಪಡಿಸಿರುತ್ತಾರೆ.  

   ಈ ತಂಡದಲ್ಲಿ ಸಿಪಿಐ ಕೃಷ್ಣಮೂತರ್ಿರವರ ಮಂಡ್ಯ ಗ್ರಾಮಾಂತರ ವೈತ್ತ ಹಾಗು ಎ.ಎಸ್.ಐ. ಜಾರ್ಜ್ ವಿಲ್ಸನ್, ಸಿಬ್ಬಂದಿಗಳಾದ ರಮೇಶ್, ಚಿಕ್ಕಯ್ಯ, ಬಾಲಾಜಿ,  ಪ್ರದೀಪ್ಕುಮಾರ್, ಮರಿಯಪ್ಪ ಆರ್.ಬ್ಯಾಳಿ, ರಾಘವೇಂದ್ರ ಇಂಗಳಗಿ, ಶ್ರೀರಾಮ, ಸೋಮಶೇಖರ ರವರು ಕಾರ್ಯ ನಿರ್ವಹಿಸಿದ್ದು.  ಇವರ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಸಂಶಿಸಿ ಮೆಚ್ಚಿ ಬಹುಮಾನ ಘೋಷಿಸಿರುತ್ತಾರೆ. 

Press Note Dated 03-03-2012

ಪೊಲೀಸ್ ಸೂಪರಿಂಟೆಂಡೆಂಟ್ ರವ ರವರ ಕಛೇರಿ

ಮಂಡ್ಯ ಜಿಲ್ಲೆ. ಮಂಡ್ಯ. ದಿಃ 03-03-2012

ಪತ್ರಿಕಾ ಪ್ರಕಟಣೆ

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ 3 ಮಂದಿ ಆರೋಪಿಗಳ ಬಂಧನ, ಇವರುಗಳಿಂದ 50,000-00 ರೂ ಮೌಲ್ಯದ ಚಿನ್ನದ ಮಾಂಗಲ್ಯ ಸರ, ನಗದು ಹಣ 50,000-00 ರೂಗಳ ವಶ

ಮಂಡ್ಯ ಉಪ-ವಿಭಾಗದ ಅಪರಾದ ಪತ್ತೆ ದಳದವರು ದಿನಾಂಕಃ 01-03-2012 ರಂದು ಮಂಡ್ಯ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದಾಗ 3 ಜನ ಆಸಾಮಿಗಳು ಬಸ್ ಪ್ರಯಾಣಿಕರಂತೆ 2-3 ಬಸ್ಸಿಗೆ ಹತ್ತಿ ಇಳಿಯುತ್ತಿದ್ದವರ ಮೇಲೆ ಅನುಮಾನ ಬಂದು ವಶಕ್ಕೆ ತೆಗೆದುಕೊಂಡು ಬಂದು ವಿಚಾರಣೆಗೊಳಪಡಿಸಲಾಗಿ ಈಗ್ಗೆ ಸುಮಾರು 2 ತಿಂಗಳ ಹಿಂದೆ ಮಂಡ್ಯ ರೈಲ್ವೇ ಸ್ಟೇಷನ್ನಲ್ಲಿ ಬೆಂಗಳೂರು ಕಡೆಗೆ ಹೋಗಲು ಟ್ರೈನ್ ಹತ್ತುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ 1 ವರ್ಷದ ಹಿಂದೆ ಮಂಡ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೈಸೂರಿಗೆ ಹೋಗಲು ಬಸ್ ಹತ್ತುತ್ತಿದ್ದ ಆಸಾಮಿಯ ಪ್ಯಾಂಟ್ ಜೇಬಿನಲ್ಲಿದ್ದ 2 ಲಕ್ಷರೂಗಳನ್ನು ಕಳುವು ಮಾಡಿದ್ದು ಈ ಪೈಕಿ ಹಣವನ್ನು ಖರ್ಚು ಮಾಡಿಕೊಂಡು ಉಳಿದಿದ್ದ 50,000 ರೂಗಳನ್ನು ಹಾಗೂ ಒಂದು ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 1 ಲಕ್ಷ ರೂ ಆಗಿರುತ್ತೆ.

ಆರೋಪಿಗಳ ಹೆಸರು-ವಿಳಾಸ

1] ಅಸ್ಲಂಪಾಷ @ ಅಸ್ಲಂ,ಬಿನ್ ಸೈಯದ್ ಪಾಷ, 38 ವರ್ಷ, ಆಟೋ ಚಾಲಕ, ವಾಸ ಕೇರಾಫ್ ಸಾಮಿದಾ ಬೇಗಂ, ಪುಲಿಕೇಶಿ ರಸ್ತೆ ಕೈಲಾಸ್ ಪುರಂ, ಕನ್ನಡ ಸ್ಕೂಲ್ ಹಿಂಬಾಗ ಮೈಸೂರು ಸಿಟಿ,

2] ಮುಕ್ರಂ ಬಿನ್ ಗೌಸ್ ಅಹಮದ್, 28 ವರ್ಷ, ಮುಸ್ಲಿಂ, ಪೈಂಟ್ ಕೆಲಸ, ಬೀಡಿ ಕಾಲೋನಿ ಹತ್ತಿರ, 5 ನೇ ಬ್ಲಾಕ್, ಚಾಮರಾಜನಗರ ಟೌನ್,

3] ಜಾಕೀರ್ ಬಿನ್ ಲೇ|| ಷರೀಫ್ ಅಹಮದ್, 32 ವರ್ಷ, ಮುಸ್ಲಿಂ, ಸ್ಟೀಮ್ ಇಟ್ಟಿಗೆ ಕೆಲಸ, ನಂ 170, 6 ನೇ ಕ್ರಾಸ್, ಗಾಳಿಪುರ, ಚಾಮರಾಜನಗರ ಟೌನ್

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ ಕೆ.ಆರ್. ಕಾಂತರಾಜ್ ಮತ್ತು ಮಂಡ್ಯ ಉಪ-ವಿಭಾಗದ ಅಪರಾಧ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳಾದ ಶ್ರೀ. ಕೌಶಲೇಂದ್ರಕುಮಾರ್ ರವರು ಪ್ರಶಂಶಿಸಿರುತ್ತಾರೆ.