Moving text

Mandya District Police

Daily Crime Report 28-05-2011

ಜಿಲ್ಲೆಯಲ್ಲಿ ಈ ದಿನ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 8 ರಸ್ತೆ ಅಪಘಾತ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣ, 1 ಅಪಹರಣ ಪ್ರಕರಣ, 1 ಕಳ್ಳತನ ಪ್ರಕರಣ, 1 ಯು.ಡಿ.ಆರ್. ಪ್ರಕರಣ, ಮತ್ತು 12 ಇತರೆ ಪ್ರಕರಣಗಳು ವರದಿಯಾಗಿರುತ್ತೆ.

ಮನುಷ್ಯ ಕಾಣೆಯಾದ ಪ್ರಕರಣ
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ
1] ಮೊ.ಸಂ 90/11 ಕಲಂ ಹುಡುಗಿ ಕಾಣೆಯಾಗಿದ್ದಾಳೆ ಕಾಣೆಯಾದ ಹುಡುಗಿ ಎಂ.ಡಿ. ಶೋಭಾ ಬಿನ್ ದೇಶಿಗೌಡ 18 ವರ್ಷ ರವರು ದಿನಾಂಕ 06-05-11 ರಂದು ಮನೆಯಿಂದ ಹೊರಗೇ ಹೋದವಳು ವಾಪಸ್ಸು ಹಿಂದಿರುಗಿ ಬಂದಿರುವುದಿಲ್ಲ.

ಮಂಡ್ಯ ಪೂರ್ವ ಪೊಲೀಸ್ ಠಾಣೆ
2] ಮೊ.ಸಂ 146/11 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 06-05-11 ರಂದು ಕಾಣೆಯಾದ ಮನುಷ್ಯ ಬಿ.ಸಿ. ದೇವರಾಜು 27 ವರ್ಷ ರವರ ಹೊಳ್ಳಿಯ ಅವರ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೇ ಹೋದವರು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

ಅಪಹರಣ ಪ್ರಕರಣ
ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ
1] ಮೊ.ಸಂ 130/11 ಕಲಂ 143-366 [ಎ] 114 ರ/ಡ 149 ಐಪಿಸಿ ದಿನಾಂಕ 28-05-11 ರಂದು ಆರೋಪಿ ಅಶೋಕ ರವರು ಪಿರ್ಯಾದಿ ನಿಂಗೇಗೌಡ ರವರ ಮಗಳಾದ ಕೆ.ಎನ್. ರಶ್ಮಿ ರವರನ್ನು ಕಾಲೇಜಿಗೆ ಹೋಗಿದ್ದಾಗ ಅಪಹರಿಸಿಕೊಂಡು ಹೋಗಿರುತ್ತಾನೆ.

ಕಳ್ಳತನ ಪ್ರಕರಣ
ಶ್ರೀರಂಗಪಟ್ಟಣ ಪೊಲೀಸ್ ಠಾಣೆ
1] ಮೊ.ಸಂ 355/11 ಕಲಂ 379 ಐಪಿಸಿ ದಿನಾಂಕ 21-05-11 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ನಾಗುವನ ಹಳ್ಳಿಯ ಕಾಲೋನಿಯಿಂದ ನಂಜನಗೂಡಿನ ಪಿರ್ಯಾದಿ ಪುಟ್ಟಮ್ಮ ನವರ ಚಿಕ್ಕಮ್ಮ ವಿಜಿಯಮ್ಮ ರವರಿಗೆ ವಡೆವೆಗಳನ್ನು ಕೊಡುವುದಕ್ಕಾಗಿ ಮೈಸೂರಿಗೆ ಹೋಗಲು ನಗುವನ ಹಳ್ಳಿಯ ಕಾಲೋನಿಯ ಅರಳಿಕಟ್ಟೆಯ ಬಳಿ ವೆಡವೆಗಳನ್ನು ಪರ್ಸ್ ಜೊತೆಗೆ ಬಸ್ಸ್ ಗಾಗಿ ಕಾಯುತ್ತಾ ಕುಳಿತ್ತಿದ್ದಾಗ ಬಸ್ ಬಂದಕೂಡಲೇ ಬಸ್ಸ್ ಹತ್ತಿ ಮೈಸೂರಿಗೆ ಹೋಗಿ ನಂಜನಗೂಡಿನಲ್ಲಿ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರನ್ನು ಒಳಗಡೆ ಪರ್ಸ್ ಇದೆ ಎಂದು ನೋಡಿಕೊಂಡಾಗ ಪರ್ಸ್ ಇರಲಿಲ್ಲ, ಪುನಃ ಅದೇ ದಿನ ಸಂಜೆಯೇ ನಗುವನ ಹಳ್ಳಿಯ ಕಾಲೋನಗೆ ಬಂದು ಅರಳಿಮ,ರದ ಬಳಿ ಮತ್ತು ಮನೆಯಲೆಲ್ಲಾ ಹುಡುಕಾಡಿ ವಡವೆಗಳು ಹೋಗಿತು ಎಂದು ಆಳುತ್ತಿದ್ದಾಗ ನಮ್ಮ ಕಾಲೋನಿಯ ಮಹೇಶ ರವರು ಬೆಳಿಗ್ಗೆ ನೀವು ಅರಳಿಕಟ್ಟೆಯ ಬಳಿ ಬಸ್ಸ್ ಹತ್ತಿದ್ದಾಗ ನೀವು ಕುಳಿತ್ತಿದ್ದ ಸ್ಥಳದಲ್ಲಿ ಒಂದು ಪರ್ಸ್ ಬಿದ್ದಿತ್ತು. ಅದನ್ನು ನಾರಾಯಣಪ್ಪ ತೆಗೆದು ಕೊಂಡು ಹೋದ ರಂದು ತಿಳಿಸಿದರು. ಅದರಲ್ಲಿ ವಡವೆಗಳು ಮೋಬೈಲ್ ಸೆಟ್ಟ್ 1200/-, ರೂ ನಗದು ಹಣ ಒಟ್ಟು ಬೆಲೆ 75.000/ ರೂ ಅಗಿದ್ದು ಅವುಗಳನ್ನು ನಗುವನಹಳ್ಳಿ ನಾರಾಯಣಪ್ಪ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರು.

ಯು.ಡಿ.ಆರ್. ಪ್ರಕರಣ
ಮದ್ದೂರು ಪೊಲೀಸ್ ಠಾಣೆ
1] ಯು.ಡಿ.ಆರ್. ನಂ 18/11 ಕಲಂ 174 ಸಿ.ಆರ್.ಪಿ.ಸಿ ದಿನಾಂಕ 28-05-11 ರಂದು ಪಿರ್ಯಾದಿ ಎನ್. ರಾಮಚಂದ್ರ ಸಿ.ಪಿ.ಸಿ 183 ಮದ್ದೂರು ಪೊಲೀಸ್ ಠಾಣೆ ರವರ ಗಸ್ತಿನಲ್ಲಿದ್ದಾಗ ಜಯಲಕ್ಷ್ಮಿ ಮಂಟಪದ ರಸ್ತೆಯಲ್ಲಿರುವ ರೈಲ್ವೆ ಕ್ರಾಸ್ ಸೇತುವೆ ಕೆಳಗೆ ಕಾಲುವೆ ನೀರಿನಲ್ಲಿ ಒಂದು ಅಪರಿಚಿತ ಗಂಡಸಿನ ಶವ ಸುಮಾರು 40-45 ವರ್ಷ ಬಿದ್ದಿದ್ದು. ಈತನು ಸುಮಾರು ದಿನಗಳ ಹಿಂದೆ ಎಲ್ಲಿಯೋ ಕಾಲುವೆ ನೀರಿನಲ್ಲಿ ಬಿದ್ದು ಸಾವನ್ನಪ್ಪಿರುತ್ತಾರೆ

No comments:

Post a Comment