Moving text

Mandya District Police

Raid as 22-12-11

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 345/11 ಕಲಂ 285 ಐಪಿಸಿ ಮತ್ತು ಕಲಂ 3 [ಬಿ] [ಸಿ] 4 [1] [] 6 & 7 ಎಲ್.ಪಿ.ಜಿ ರೆಗ್ಯೂಲೇಷನ್ ಫಾರ್ ಸಪ್ಲೈಸ್ ಮತ್ತು ಡಿಸ್ಟ್ರಿಬ್ಯುಷನ್ ಆರ್ಡರ್ 2000 ಮತ್ತು 3 & 7 .ಸಿ. ಆಕ್ಸ್

ದಿನಾಂಕ: 22-12-11 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಆರೋಪಿ -1 ಸೈಯದ್ ಬುರಾನ್ ರವರು ಅವರ ಮನೆಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆಂದು ಪಿರ್ಯಾದಿ ಎನ್.ಸಿ ನಾಗೇಗೌಡ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಎಸ್.ಬಿ ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿ ದೊರೆತ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಪಂಚರನ್ನು ಕರೆದುಕೊಂಡು ಆರೋಪಿ-1 ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಆರೋಪಿ-1 ರವರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು ಆತನನ್ನು ಹಿಡಿದು ವಿಚಾರಿಸಲಾಗಿ ತಾನು ಕಿರುಗಾವಲಿನ ಆರೋಪಿ-3 ರವರಿಂದ ಆರೋಪಿ- ವಿನೋದ್ ರವರ ಮುಖಾಂತರ ಹೆಚ್ಚಿನ ಹಣ ಕೊಟ್ಟು ಗ್ಯಾಸ್ ಸಿಲಿಂಡರ್ಗಳನ್ನು ಮಾರುತಿ ಆಮ್ನಿ ಕಾರಿನಲ್ಲಿ ತಂದು ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿದ್ದು ನಂತರ ಆರೋಪಿಯನ್ನು ಕರೆದುಕೊಂಡು ಕಿರುಗಾವಲಿಗೆ ಹೋಗಿ ಆರೋಪಿ- ಪುಟ್ಟಸ್ವಾಮಿ ರವರ ಮನೆಯನ್ನು ಪರಿಶೀಲಿಸಿ ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದು ಗ್ಯಾಸ್ ಸಿಲಿಂಡರ್ಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಆರೋಪಿ-ಪುಟ್ಟಸ್ವಾಮಿ ರವರ ಕೋಳಿ ಅಂಗಡಿಯಲ್ಲಿದ್ದ ಆರೋಪಿ-2 ರವರನ್ನು ವಶಕ್ಕೆ ತೆಗೆದುಕೊಂಡಿದ್ದು ಒಟ್ಟು ಭಾರತ್ ಕಂಪನಿಯ 8 ಗೃಹ ಬಳಕೆಯ ಎಲ್ಪಿಜಿ ಭರತ್ ಸಿಲಿಂಡರ್, ಭಾರತ್ ಕಂಪನಿಯ 2 ವಾಣಿಜ್ಯ ಬಳಕೆಯ ಖಾಲಿ ಸಿಲಿಂಡರ್, ಇಂಡೇನ್ ಕಂಪನಿಯ 10 ಗೃಹ ಬಳಕೆಯ ಖಾಲಿ ಸಿಲಿಂಡರ್, 3 ಚಿಕ್ಕ ಖಾಲಿ ಸಿಲಿಂಡರ್, ಒಂದು ರೀಫಿಲ್ಲಿಂಗ್ ರಾಡ್, ನಂ. ಸಿಟಿಎಕ್ಸ್ 4495 ರ ಮಾರುತಿ ಓಮ್ನಿ ಕಾರು ಮತ್ತು ನಗದು ಹಣ 1225-00 ರೂ. ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿ-1 & 2 ರವರನ್ನು ಮುಂದಿನ ಕ್ರಮದ ಬಗ್ಗೆ ಠಾಣೆಗೆ ಹಾಜರುಪಡಿಸಿರುವುದಾಗಿ ಇತ್ಯಾದಿ

No comments:

Post a Comment