Moving text

Mandya District Police

press Note: West PS On 14-12-2011

ಪತ್ರಿಕಾ ಪ್ರಕಟಣೆ

ಸ್ನೇಹಿತನಿಂದಲೇ ಮನೆ ಕಳವು ಃ ಚಿನ್ನಾಭರಣ, ನಗದು ವಶ

ದಿನಾಂಕ 07-12-2011 ರಂದು ನಾಗಮಂಗಲ ತಾಲ್ಲೂಕು, ಬಿಂಡಿಗನವಿಲೆ ಠಾಣಾ ವ್ಯಾಪ್ತಿಯ ಡಿ.ಕೋಡಿಹಳ್ಳಿ ಗ್ರಾಮದ ತಿಮ್ಮಯ್ಯ ಬಿನ್ ಲೇ ತಿಮ್ಮಯ್ಯ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಹೊಲ ಕುಯ್ಯಲು ಹೋಗಿದ್ದು ಮತ್ತು ವಾಪಸ್ಸ್ ಬಂದು ನೋಡಲಾಗಿ ಮನೆಯ ಚಿಲಕವನ್ನು ಮುರಿದು ಮನೆಯಲ್ಲಿನ ಬೀರುವಿನಲ್ಲಿದ್ದ 60.000/- ರೂ ಮೌಲ್ಯದ ಚಿನ್ನ, ಬೆಳ್ಳಿ ವಡವೆ ಹಾಗೂ 10.000 ರೂ ನಗದು ಹಣವನ್ನು ಕಳುವು ಮಾಡಿದ್ದು, ಅದೇ ರೀತಿ ತಿಮ್ಮೇಗೌಡ ಬಿನ್ ಲೇ ಗೌಡೇಗೌಡ ಮನೆಯಲ್ಲಿಯೂ ಸಹ 48500/- ರೂ ನಗದನ್ನು ಕಳವು ಮಾಡಿದ್ದು ಈ ಬಗ್ಗೆ ಬಿಂಡಿಗನವಿಲೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣಗಳ ತನಿಖೆಯನ್ನು ಸಿಪಿಐ, ನಾಗಮಂಗಲ ವೃತ್ತ ರವರು ಕೈಗೊಂಡಿದ್ದು, ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಸಿಬ್ಬಂದಿಯೊಡನೆ ಮಾಹಿತಿ ಪಡೆದಿದ್ದು, ಮೇಲ್ಕಂಡ ಕೃತ್ಯ ನಡೆಯುವ ಹಿಂದಿನ ದಿನದಲ್ಲಿ ಡಿ. ಕೋಡಿಹಳ್ಳಿ ಗ್ರಾಮದ ನಂಜುಂಡೇಗೌಡರ ಮಗ ಹರೀಶ, ರಾಮೇಗೌಡನ ಮಗ ಕಿರಣ ಮತ್ತು ಕೇಸಿನ ಪಿರ್ಯಾದಿ ಪೂಜಾರಿ ತಿಮ್ಮಯ್ಯನ ಮಗ ಮಹೇಶ ಎಂಬುವವರು ಜೊತೆಯಲ್ಲಿದ್ದು, ಈ ಘಟನೆ ನಡೆದ ನಂತರ ಆರೋಪಿ ಹರೀಶನು ಗ್ರಾಮದಲ್ಲಿಲ್ಲದೆ ಬೆಂಗಳೂರಿಗೆ ಹೋಗಿರುವುದಾಗಿ ಮಾಹಿತಿ ತಿಳಿದುಬಂದಿದ್ದು, ಸ್ಥಳೀಯ ಪೊಲೀಸ್ ಅದಿಕಾರಿಗಳು ಹಾಗೂ ಸಿಬ್ಬಂದಿಗಳು ಆತನ ಚಲನ ವಲನಗಳ ಮೇಲೆ ನಿಗಾ ಇಟ್ಟು ನಂತರ ಆತನನ್ನು ದಿನಾಂಕಃ 13-12-2011 ರಂದು ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಂಡು ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ತಮ್ಮ ಗ್ರಾಮದ ರಾಮೇಗೌಡನ ಮಗ ಕಿರಣ್ ಎಂಬಾತನು ಆಟೋರಿಕ್ಷಾ ಸಾಲ ಕಟ್ಟಲು ಹಳ್ಳದ ಹೊಸಹಳ್ಳಿ ಗ್ರಾಮದಲ್ಲಿ 50.000 ರೂಗಳನ್ನು ಬಡ್ಡಿಗೆ ತೆಗೆದುಕೊಂಡಿದ್ದು, ಆಗ ತಾನು ಸಹ ಆತನ ಜೊತೆಯಲ್ಲಿ ಹೋಗಿದ್ದು, ಆ ದುಡ್ಡನ್ನು ಪೂಜಾರಿ ತಿಮ್ಮಯ್ಯನವರ ಮಗ ಮಹೇಶನ ಮನೆಯಲ್ಲಿಟ್ಟಿದ್ದನು. ತಾನು ಸ್ವಲ್ಪ ಸಾಲ ಮಾಡಿಕೊಂಡಿದ್ದರಿಂದ ಅದನ್ನು ತೀರಿಸುವ ಸಲುವಾಗಿ ಮೆಲ್ಕಂಡ ಎರಡು ಮನೆಗಳಲ್ಲಿ ಕಳ್ಳತನ ಮಾಡಿದ್ದಾಗಿ ತಿಳಿಸಿರುತ್ತಾನೆ. ನಂತರ ಆತನನ್ನು ದಸ್ತಗಿರಿ ಮಾಡಿ ಆತನು ನೀಡಿದ ಸುಳಿವಿನ ಮೇರೆಗೆ ಕಳವು ಮಾಡಿದ್ದ 60,000/- ರೂ ಬೆಲೆ ಬಾಳುವ ಒಡವೆಗಳು ಹಾಗೂ 32.500/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗಬಂದನಕ್ಕೆ ಒಪ್ಪಿಸಿರುತ್ತಾರೆ.

ಆರೋಪಿಯನ್ನು ಪತ್ತೆ ಮಾಡಲು ಶ್ರಮ ವಹಿಸಿದ ನಾಗಮಂಗಲ ವೃತ್ತನಿರೀಕ್ಷಕರಾದ ಶ್ರೀ. ಟಿ.ಡಿ.ರಾಜು, ಸಿಬ್ಬಂದಿಯವರಾದ ಸಿಪಿಸಿ 404, ಜಿ.ನಾಗರಾಜು, ಬಿಂಡಿಗನವಿಲೆ ಠಾಣೆ ರವರು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.

No comments:

Post a Comment