Moving text

Mandya District Police

Keragodu PS Cr.No. 50/2012 u/s 302-201 IPC

     ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ
ಮಂಡ್ಯಜಿಲ್ಲೆ. ಮಂಡ್ಯ 
  ದಿನಾಂಕಃ 28-03-2012 
                                 
                                                 ಪತ್ರಿಕಾ ಪ್ರಕಟಣೆ.
 
            ಕೆರಗೋಡು ಪೊಲೀಸ್ ಠಾಣಾ ಮೊ.ಸಂ  50/2012 ಕಲಂ 302-201 ಐಪಿಸಿ.

      ದಿನಾಂಕಃ21-3-2012 ರ ಬೆಳಿಗ್ಗೆ 8-30 ಗಂಟೆಯಲ್ಲಿ ಕೆ.ಗೌಡಗೆರೆಯ ಶಿವರಾಮುರವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಒಂದು ಗಂಡಸಿನ ಸುಮಾರು 26ವರ್ಷ ಪ್ರಾಯದ ಶವ ತೇಲುತ್ತಿದ್ದು.  ಶವದ ಎರಡು ಕಾಲುಗಳನ್ನು ಕಲ್ಲು ಸೇರಿಸಿ ಕಟ್ಟಿದ್ದು ತಲೆಯ ಭಾಗದಿಂದ ಪ್ಲಾಸ್ಟಿಕ್ ಕವರಿಗೆ ಕಲ್ಲು ಸೇರಿಸಿ ಹಾಕಿ ಕಟ್ಟಿದ್ದು ಶವದ ತಲೆಯಲ್ಲಿ , ಬಲ ಕೆನ್ನೆಯಲ್ಲಿ, ಕುತ್ತಿಗೆಯಲ್ಲಿ ಹರಿತವಾದ ರಕ್ತಗಾಯಗಳಿದ್ದು , ಮೃತನು ಎಸ್.ಐ.ಕೋಡಿಹಳ್ಳಿಯ ಶಿವಣ್ಣರವರ ಮಗ ಕೆ.ಎಸ್.ಸುನೀಲ್ ಆಗಿದ್ದು.  ಈತನನ್ನು ಯಾರೋ ದುಷ್ಕಮರ್ಿಗಳು ಯಾವುದೋ ದ್ವೇಷದಿಂದ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಬಾವಿ ನೀರಿಗೆ ಹಾಕಿ ಮೃತನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು.  ಈ ಬಗ್ಗೆ ಬಿ.ಎಸ್.ಕಾಂತರವರು ಕೊಟ್ಟ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಯಿತು.

   ಈ ಕೇಸಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಿಪಿಐ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು. ಈ ತಂಡವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಗಳಾದ 1. ರವಿ 2. ವರದರಾಜು 3. ಮಹೇಶ ರವರುಗಳನ್ನು ದಿಃ26-03-2012 ರಂದು ಬಂಧಿಸಿ ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿ ಮೃತ ಸುನೀಲನಿಂದ ತೆಗೆದುಕೊಂಡು ಹೋಗಿದ್ದ 60,000=00 ಬೆಲೆ ಬಾಳುವ ಹೊಸ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ಅಮಾನತ್ತುಪಡಿಸಿರುತ್ತಾರೆ.  

   ಈ ತಂಡದಲ್ಲಿ ಸಿಪಿಐ ಕೃಷ್ಣಮೂರ್ತಿ ರವರು ಮಂಡ್ಯ ಗ್ರಾಮಾಂತರ ವೈತ್ತ ಹಾಗು ಎ.ಎಸ್.ಐ. ಜಾರ್ಜ್ ವಿಲ್ಸನ್, ಸಿಬ್ಬಂದಿಗಳಾದ ರಮೇಶ್, ಚಿಕ್ಕಯ್ಯ, ಬಾಲಾಜಿ,  ಪ್ರದೀಪ್ಕುಮಾರ್, ಮರಿಯಪ್ಪ ಆರ್.ಬ್ಯಾಳಿ, ರಾಘವೇಂದ್ರ ಇಂಗಳಗಿ, ಶ್ರೀರಾಮ, ಸೋಮಶೇಖರ ರವರು ಕಾರ್ಯ ನಿರ್ವಹಿಸಿದ್ದು.  ಇವರ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಸಂಶಿಸಿ ಮೆಚ್ಚಿ ಬಹುಮಾನ ಘೋಷಿಸಿರುತ್ತಾರೆ. 

1 comment:

  1. The work of the Mandya Rural Inspector is appreciated and detected the case within a week and done a wonderfull job.

    I think that Krishna Murthy who is the Former DCIB Inspector. He was working hardly against the crime in the District. In the same way he is also performing the duty in the Rural Station also.

    I Wish all the best for the CPI Krishna Murthy in his future and request him to perform the work in the same direction.

    I also appreciate the work of the SP Shri. Kaushlendra Kumar who is awarded with the Chief Minister Medal 2012.

    Wish you all the best on behalf of the peoples of Mandya.

    ReplyDelete