Moving text

Mandya District Police

DAILY CRIME REPORT DATED : 15-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-01-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,    1 ಕಳ್ಳತನ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 17 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.     


ಅಪಹರಣ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 363 ಕೂಡ 34 ಐ.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಶಿವಣ್ಣ ಬಿನ್ ಲೇಟ್. ಚಿಕ್ಕಬೋರೇಗೌಡ, ಕುದರಗುಂಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಜಯಂತ್ @ ಜಯಂತ್ ಕುಮಾರ್ ಮತ್ತು 2] ಶ್ರೀನಿವಾಸ ರವರುಗಳು ಪಿರ್ಯಾದಿಯವರ ಮಗಳನ್ನು ಎತ್ತಿಹಾಕಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು ಹಾಗೂ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 323-504-506-498(ಎ) ಐ.ಪಿ.ಸಿ. 

ದಿನಾಂಕ: 15-01-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಮರೀಗೌಡ, ಕರಡಿಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಲಕ್ಷ್ಮಿ ಕೋಂ ಮರೀಗೌಡ ಕರಡಿಕೊಪ್ಪಲು ಗ್ರಾಮ ರವರು ನೆನ್ನೆ ರಾತ್ರಿ ಜಗಳ ಮಾಡಿ ಮನೆಯಿಂದ ಹೊರ ಕಳುಹಿಸಿದ್ದು ಮನೆಯ ಬಳಿ ಹೋದಾಗ ಆಕೆಯ ತಲೆಕೂದಲು ಹಿಡಿದು ಎಳದಾಡಿ ಕೈಗಳಿಂದ ಎದೆ, ಮೈಕೈಯ ಮೇಲೆ ಹೊಡೆದು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದು ತನಗೆ ಎರಡು ಹೆಣ್ಣು ಮಕ್ಕಳಾಗಿವೆ ಎಂಬ ವಿಚಾರವಾಗಿ ಹಿಂದಿನಿಂದಲೂ ಕಿರುಕುಳ ನೀಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 498 (ಎ)506 ಐ.ಪಿ.ಸಿ. 

      ದಿನಾಂಕ: 15-01-2013 ರಂದು ಪಿರ್ಯಾದಿ ವರಲಕ್ಷ್ಮಿ, ಎಂ. ಕೋಂ ಸತೀಶ, ಮನೆ ನಂ: 690/1, 7ನೇ ಅಡ್ಡರಸ್ತೆ, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಸತೀಶ 2) ನಾಗರಾಜು ಸ್ವರ್ಣಸಂದ್ರ, ಮಂಡ್ಯ ಸಿಟಿ. ಪೂರ್ಣ ವಿಳಾಸ  ತಿಳಿಯಬೇಕಾಗಿದೆ ಇವರುಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದು ಕೊಲೆ ಬೆದರಿಕೆ ಹಾಕಿ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ರಸ್ತೆಯಲ್ಲಿ ಕಂಡರೆ ಸಾಯಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿದ್ದಾನೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಮಂಗಳಮ್ಮ ಕೊಂ. ಶಿವಬೋರಯ್ಯ ರವರು ನೀಡಿದ ದೂರು ಏನೆಂದರೆ ಅವರ ಪತ್ನಿ ಶಿವಬೋರಯ್ಯ ಬಿನ್. ಮುಲಗೂಡಯ್ಯ, 38 ವರ್ಷ, ಗಂಗಾಮಸ್ಥರು, ಹುಲಿಕೆರೆಕೊಪ್ಪಲು ಗ್ರಾಮ ರವರು ಮುಖ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಹರಿಯುತ್ತಿದ್ದ ಕಾಲುವೆ ಒಳಗೆ  ಮುಗ್ಗರಿಸಿ ಬಿದ್ದಿದ್ದಾರೆಂದು ಈ  ದಿವಸ ನನ್ನ ಗಂಡನ ಶವ ಹುಲಿಕೆರೆ ಗ್ರಾಮದಿಂದ ಮಳವಳ್ಳಿ ಕಡೆಗೆ ಹೋಗುವ ಕಾಲುವೆಯಲ್ಲಿ ನೀರು ನಿಂತು ಹೋಗಿದ್ದು ಕಾಲುವೆಯ ಒಳಭಾಗದಲ್ಲಿ ನೀರಿನ ಮೇಲೆ ಇರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ಭಾಗ್ಯಮ್ಮ ಕೋಂ. ಗುರುಸ್ವಾಮಿ, 40 ವರ್ಷ, ಒಕ್ಕಲಿಗರು, ಮನೆಕೆಲಸ, ಭೂತನ ಹೊಸೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ನಿವೇದಿತಾ ಕೋಂ. ಅಭಿಷೇಕ್ಗೌಡ, 19 ವರ್ಷ, ಭೂತನಹೊಸೂರು ಗ್ರಾಮ ರವರು ಜೀವನದಲ್ಲಿ ಜಿಗುಪ್ಸೆಗೊಂಡು ಕಾವೇರಿ ನದಿಯ ನೀರಿಗೆ ಬಿದ್ದು ಮೃತಪಟ್ಟಿರುತ್ತಾಳೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-01-2013 ರಂದು ಪಿರ್ಯಾದಿ ತಮ್ಮಯ್ಯ ಬಿನ್. ಲೇ|| ನರಸಿಂಹಯ್ಯ, ಅಗ್ರಹಾರ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರು ಏನೆಂದರೆ ನನ್ನ ಹೆಂಡತಿ ಬೋರಮ್ಮ ಕೊಂ ತಮ್ಮಯ್ಯ, 60 ವರ್ಷ, ಅಗ್ರಹಾರ ರವರು ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಆಕೆಯ ಕೈಗೆ ಪೆಟ್ಟಾಗಿದ್ದು ಆ ನೋವಿನ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಬಿದ್ದು ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 457-380 ಐಪಿಸಿ.

       ದಿನಾಂಕ: 15-01-2013 ರಂದು ಪಿರ್ಯಾದಿ ಸಿಸ್ಟರ್ ಗ್ರೇಸ್ ಲಿಮಾ, ಮುಖ್ಯ ಶಿಕ್ಷಕರು, ಸೆಂಟ್ ಜೋಸೆಫ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ, ಎಂ.ಸಿ. ರೋಡ್, ಮಂಡ್ಯ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಶಾಲೆಯ ಒಂದು ಕಿಟಕಿಯ ವೆಂಟಿಲೇಟರ್ ಗ್ಲಾಸ್ ನ್ನು ಮುರಿದು ಒಳಗಿನ ಡೋರ್ನ ಚಿಲಕದ ಕೊಂಡಿ ಮೀಟಿ ಒಳಗೆ ಬಂದು ನಮ್ಮ ಶಾಲೆಯ ಕಛೇರಿಯ ಬೀಗವನ್ನು  ಹಾಗೂ ಡೋರ್ಲಾಕನ್ನು ಯಾವುದೋ ಆಯುಧದಿಂದ  ಮೀಟಿ ಒಳಗೆ ಬಂದು ಕಛೇರಿಯ ಕಬೋರ್ಡ್ ಡ್ರಾಯರ್ ನ,  ಡೋರ್ಲಾಕ್ ಮೀಟಿ ಓಳಗೆ ಇಟ್ಟಿದ್ದ  ಶಾಲಾ ಮಕ್ಕಳ ಫೀಜ್ ಹಣ 3,000/- ರೂ, ಚರ್ಚ್ ನ,  ಕಾಂಟ್ರಿಬ್ಯೂಷನ್ ಗೆ,  ಸಂಗ್ರಹಿಸಿದ ಹಣ 1,800/- ರೂ, ಇತರೆ ಕಂಟೇಜೆನ್ಸಿ ಖರೀದಿಸಲು ಇಟ್ಟಿದ್ದ 2,000/- ರೂ, ಹಾಗೂ ಕಾಯಿನ್ ಬೂತಿನ ಹಣ ಚಿಲ್ಲರೆ ಸುಮಾರು 700/- ರೂ ಕಾಯಿನ್ ಬೂತ್ ಹಣವನ್ನು ನನ್ನ ಟೇಬಲ್ ಡ್ರಾಯರ್ ನಲ್ಲಿಟ್ಟಿದ್ದುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 15-01-2013 ರಂದು ಪಿರ್ಯಾದಿ ಚಲುವರಾಜು ಬಿನ್. ಚನ್ನಕಣ್ಣನ್, ತಿಮ್ಮನಹೊಸೂರು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ಚನ್ನಕಣ್ಣನ್ ಬಿನ್. ಲೇಟ್ ರಂಗಪ್ಪನಾಡ್ಡು, 70ವರ್ಷ, ತಿಮ್ಮನಹೊಸೂರು ಗ್ರಾಮರವರು ತಿರುಪತಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ದಿನಾಂಕ: 27-12-2012ರಂದು ಹೋದವರು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment