Moving text

Mandya District Police

DAILY CRIME REPORT DATED : 25-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,   1 ಅಪಹರಣ ಪ್ರಕರಣ,  2 ವಾಹನ ಹಾಗು ಸಾಮಾನ್ಯ ಕಳವು ಪ್ರಕರಣಗಳು ದಾಖಲಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

1. ಕಿರುಗಾವಲು ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. - 174 ಸಿ.ಆರ್.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಕೆ, ಸಿದ್ದೇಗೌಡ ಎ.ಎಸ್.ಐ, ಕಿರುಗಾವಲು ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೃಷ್ಣಾಚಾರಿ ಬಿನ್ ಲೇಃ ಸಣ್ಣಾಚಾರಿ, ದೋರನಹಳ್ಳಿ ಎಂಬುವವರು ಹೊಟ್ಟೆನೋವು ತಾಳಲಾರದೆ ಕಬ್ಬಿನ ಗದ್ದೆಗೆ ಸಿಂಪಡಿಸುವ ಔಷದವನ್ನು ಕುಡಿದಿದ್ದು ಚಿಕಿತ್ಸೆಗೆ ಆಸ್ಪತ್ರಗೆ ದಾಖಲು ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಜೆ.ಜಿ.ಶಿವಮಂಜು ಎ.ಎಸ್.ಐ ಅರಕೆರೆ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ಪುಟ್ಟೇಗೌಡ ಬಿನ್. ಲೇ. ನಾಥೇಗೌಡ, 85 ವರ್ಷ,  ದಮ್ಮು (ಅಸ್ತಮ) ಜಾಸ್ತಿಯಾಗಿ ಬೇನೆ ತಾಳಲಾರದೆ ಮನೆಯ ಹಜಾರದಲ್ಲಿ ತರಕಾರಿ ಗಿಡಗಳಿಗೆ ತಂದಿದ್ದ ಕ್ರಿಮಿನಾಷಕ ಔಷದಿಯನ್ನು ದಮ್ಮಿಗೆ ತಂದಿರುವ ಔಷಧಿ ಎಂದು ತಿಳಿದು ಕುಡಿದು ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

 ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 143-498(ಎ)-341-504-506 ಕೂಡ 149 ಐ.ಪಿ.ಸಿ.

        ದಿನಾಂಕ: 25-01-2013 ರಂದು ಪಿರ್ಯಾದಿ ಡಿ.ಎನ್.ಪೂಣರ್ಿಮ ಕೋಂ. ಹೆಚ್.ಸತೀಶ, ಆರೋಪಿ.1 ಸತೀಶ ಹೆಚ್. ಪಿರ್ಯಾದಿಯವರನ್ನು ಮದುವೆಯಾಗಿ 8 ವರ್ಷವಾಗಿದ್ದು ಇಬ್ಬರೂ ಬೆಂಗಳೂರಿನಲ್ಲಿ ಇದ್ದು ಆರೋಪಿ-1 ರವರು ವಾಸದ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಎತ್ತಿಕೊಂಡು ಊರಿಗೆ ಬಂದಿದ್ದು ಈ ದಿವಸ ಪಿರ್ಯಾದಿಯವರು ಸಾಮಾಗ್ರಿಗಳನ್ನು ಕೇಳಿದ್ದಕ್ಕೆ ಆರೋಪಿಗಳೆಲ್ಲರು ಪಿರ್ಯಾದಿಯವರನ್ನು ತಡೆದು ಅವಾಚ್ಯವಾಗಿ ಬೈದು, ಕೊಲೆಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಇದಕ್ಕೆ ಇತರೆ 8 ಜನರು  ಎಲ್ಲರೂ ಕರಡಕೆರೆ ಗ್ರಾಮ, ಮದ್ದೂರು ತಾ. ರವರುಗಳು ಸಹ ಕುಮ್ಮಕ್ಕು ನೀಡಿರುತ್ತಾರೆ.  


ಅಪಹರಣ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 365,324,506 ಕೂಡ 34 ಐ.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಶ್ರೀನಿವಾಸ ಬಿನ್. ದೊಡ್ಡರಾಮಣ್ಣ, 26ವರ್ಷ, ವಕ್ಕಲಿಗರು, ವ್ಯವಸಾಯ ಮತ್ತು ಟೈಲ್ಸ್ ಫಿಟ್ಟಿಂಗ್ ಕೆಲಸ, ಆಡಿಲಿಂಗನಪಾಳ್ಯ ಗ್ರಾಮ, ಸಂಕೇಘಟ್ಟ ಅಂಚೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಹಾಗು ಸಾಮಾನ್ಯ ಕಳವು ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.

ದಿನಾಂಕ: 25-01-2013 ರಂದು ಪಿರ್ಯಾದಿ ಸಜ್ಜಾದ್ ಅಹಮದ್ ಬಿನ್. ರುಹುಲ್ಲಾ, ಫಿರ್ದೋಷ್ ಸಾಮಿಲ್ ಮಾಲೀಕರು, ಕಲ್ಕುಣಿ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಬಾಬ್ತು ಕೆಎ-11 ಆರ್.-3052 ನಂಬರಿನ ಹೀರೊಹೊಂಡ ಪ್ಯಾಷನ್ ಮೋಟಾರ್ ಸೈಕಲನ್ನು ಮಂಡ್ಯದ ಹಡರ್ಿಕರ್ ಭವನದ ಮುಂಭಾಗ ಬೀಗ ಹಾಕಿ ನಿಲ್ಲಿಸಿ ಹರ್ಡಿಕರ್ ಭವನದಲ್ಲಿದ್ದ ಸಾಮೀಲ್ ಮಾಲೀಕರ ಸಮಾವೇಶಕ್ಕೆ ಹೋಗಿ ನಂತರ ವಾಪಸ್ ಮಧ್ಯಾಹ್ನ     02-30 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 40/13 ಕಲಂ. 379  ಐ.ಪಿಸಿ. 

ದಿನಾಂಕ: 25-01-2013 ರಂದು ಪಿರ್ಯಾದಿ ಸತ್ಯನಾರಯಣ ಬಿನ್. ಲೇಟ್. ನರಸಿಂಹಯ್ಯ, ಗೋಸೇಗೌಡರ ಬೀದಿ, ಶ್ರಿರಂಗಪಟ್ಟಣ ಟೌನ್ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಅವರ ತೋಟದಲ್ಲಿ 70 ಗೊನೆಗಳನ್ನು ಕಳ್ಳತನ ಮಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment