Moving text

Mandya District Police

DAILY CRIME REPORT DATED : 17-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-02-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅತ್ಯಾಚಾರ ಪ್ರಕರಣ,  5 ಸಾಮಾನ್ಯ / ವಾಹನ ಕಳವು ಪ್ರಕರಣಗಳು ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಅತ್ಯಾಚಾರ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. 341-506-376 ಕೂಡ 34 ಐ.ಪಿ.ಸಿ.

ದಿನಾಂಕ: 17-02-2013 ರಂದು ತಮ್ಮಯ್ಯ, ಲಿಂಗಾಪುರ ಗ್ರಾಮ, ಕಿಕ್ಕೇರಿ ಹೋಬಳಿ ರವರ ಮಗಳು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿರವರುಗಳಾದ 1)ಅರುಣ, 2)ನಾಗರಾಜು ಇಬ್ಬರೂ ಲಿಂಗಾಪುರ ಗ್ರಾಮರವರು  ಬಂದು ನನ್ನನ್ನು ಹಿಡಿದುಕೊಂಡು ಶಿವರುದ್ರನ ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ಕೈ ಕಾಲುಗಳನ್ನು ಹಿಡಿದು ಕೆಳಕ್ಕೆ ಕೆಡವಿಕೊಂಡು ಬಾಯಿಗೆ ಬಟ್ಟೆಯನ್ನು ಹಾಕಿ ಅಮುಕಿ ಹಿಡಿದುಕೊಂಡು ಅರುಣ ಎಂಬುವನು ತನ್ನ ಬಟ್ಟೆಯನ್ನು ಬಿಚ್ಚಿ ಬಲಾತ್ಕಾರವಾಗಿ ಅತ್ಯಚಾರ ಮಾಡಿರುತ್ತಾನೆಂದು, ನಾಗರಾಜುರವರು ಪಕ್ಕದಲ್ಲಿ ನಿಂತಕೊಂಡು ಯಾರಾದರೂ ಬರುತ್ತಾರೆಯೇ ಎಂದು ನೊಡಿಕೊಳ್ಳುತ್ತಿದ್ದನೆಂದು ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ತನಗೆ ಚಾಕು ಹಾಕುತ್ತೆನೆ, ಆಸಿಡ್ ಹಾಕುತ್ತೆನೆ ಎಂದು ಹೆದರಿಸಿದ್ದರಿಂದ ಬಂದು ದೂರು ಕೊಡುತ್ತಿದ್ದೆನೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಸಾಮಾನ್ಯ / ವಾಹನ ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 379 ಐ.ಪಿ.ಸಿ.

     ದಿನಾಂಕ: 17-02-2013 ರಂದು ಪಿರ್ಯಾದಿ ಸುಬ್ಬಲಕ್ಷ್ಮೀ ಕೋಂ. ಲೇಟ್. ನಾರಾಯಣ, ವಾಸ- 2 ನೇ ಕ್ರಾಸ್, ರಂಗನಾಥ ನಗರ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ದೇವಸ್ಥಾನಕ್ಕೆ ಸರದಿಯಲ್ಲಿ ಹೋಗುವಾಗ ಯಾರೋ ಕಳ್ಳರು ನನಗೆ ಅರಿವಿಲ್ಲದಂತೆ ನನ್ನ ಕತ್ತಿನಲ್ಲಿದ್ದ ಲಕ್ಷ್ಮೀಡಾಲರ್ ಸಹಿತವಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ. ಚಿನ್ನದ ಸರ ಸುಮಾರು 45 ಗ್ರಾಂ ತೂಕವಿರುತ್ತದೆ.  ಈ ಚಿನ್ನದ ಸರದ ಬೆಲೆ ಸುಮಾರು 1 ಲಕ್ಷ 20 ಸಾವಿರ ರೂಪಾಯಿಗಳಾಗಿರಬಹುದು. ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 379 ಐ.ಪಿ.ಸಿ.

      ದಿನಾಂಕ: 17-02-2013 ರಂದು ಪಿರ್ಯಾದಿ ನಂಜಮ್ಮ, ವಾಸ- # 46, ವಿಜಯತೇ ನಿಲಯ, ವಿ.ವಿ ಲೇ. ಔಟ್, 3 ನೇ ಅಡ್ಡ ರಸ್ತೆ, ಗುತ್ತಲು ಪೋಸ್ಟ್, ಮಂಡ್ಯ ಸಿಟಿ ರವರು ನೀಡಿದ ದೂರಿನ  ವಿವರವೇನೆಂದರೆ ಪಿರ್ಯಾಧಿಯವರು ತನ್ನ ಕುಟುಂಬದೊಡನೆ ರಥಸಪ್ತಮಿಯ ಪ್ರಯುಕ್ತ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗದಲ್ಲಿದ್ದಾಗ ಜನಜಂಗುಳಿಯಲ್ಲಿ ತನ್ನ ಕತ್ತಿನಲ್ಲಿದ್ದ ಸುಮಾರು 26 ಗ್ರಾಂ ತೂಕದ ಚಿನ್ನದ ಸರವನ್ನು (ಅವಲಕ್ಕಿ ಸರ) ಕಳ್ಳರು ಪಿರ್ಯಾದಿಯರಿಗೆ ಅರಿವಿಲ್ಲದಂತೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಮೌಲ್ಯ ಸುಮಾರು 48 ಸಾವಿರ ರೂ. ಆಗಿರಬಹುದು ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 379 ಐ.ಪಿ.ಸಿ.

ದಿನಾಂಕ: 17-02-2013 ರಂದು ಪಿರ್ಯಾದಿ ಹೆಚ್.ಸಿ.ನಿಶ್ಚಿತ ಕೋಂ. ಚಂದ್ರಶೇಖರ್, 24 ವರ್ಷ, ಒಕ್ಕಲಿಗರು, ಗೃಹಿಣಿ, ವಾಸ 1781/ಬಿ, ಪಾಪೇಗೌಡರ ಬೀದಿ, 14ನೇ ಕ್ರಾಸ್, ಮಂಗಳವಾರಪೇಟೆ, ಚನ್ನಪಟ್ಟಣ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ತಮ್ಮ ಗಂಡನ ಊರಿಗೆ ಹೋಗಲು ಚನ್ನಪಟ್ಟಣ ಕಡೆಗೆ ಹೋಗುವ ಉದಯರಂಗ ಖಾಸಗಿ ಬಸ್ಸನ್ನು ಹತ್ತಿ ಕುಳಿತುಕೊಂಡು ತನ್ನ ವ್ಯಾನಿಟಿ ಬ್ಯಾಗನ್ನು ನೋಡಿಕೊಂಡಾಗ ಜಿಪ್ ಓಪನ್ ಆಗಿದ್ದು ಒಳಗಡೆ ಇಟ್ಟಿದ್ದ ವಡವೆ ಬಾಕ್ಸ್ ಇರಲಿಲ್ಲ. ಸದರಿ ವಡವೆ ಬಾಕ್ಸ್ನಲ್ಲಿದ್ದ 25 ಗ್ರಾಂ ತೂಕದ ನೆಕ್ಲೆಸ್ ಇದರಲ್ಲಿ ಹಸಿರು ಬಣ್ಣದ ಹರಳುಗಳು ಮತ್ತು ಡಾಲರ್ ಇರುತ್ತೆ, 7 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ ಮತ್ತು ಹ್ಯಾಂಗಿಂಗ್ಸ್ ಇವು ಹಸಿರು ಹರಳಿನಿಂದ ಕೂಡಿರುತ್ತೆ, ಇವುಗಳನ್ನು ವಡವೆ ಬಾಕ್ಸ್ ಸಮೇತ ಯಾರೋ ಕಳ್ಳರು ಮೇಲ್ಕಂಡ ವಡವೆಗಳನ್ನು ಕಳವು ಮಾಡಿರುತ್ತಾರೆ. ಇವುಗಳ ಒಟ್ಟು ಬೆಲೆ 85,000-00 ರೂ.ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 379 ಐ.ಪಿ.ಸಿ.

  ದಿನಾಂಕ: 17-02-2013 ರಂದು ಪಿರ್ಯಾದಿ ಎಂ ಮಹದೇವಪ್ಪ ಬಿನ್. ಲೇಟ್. ಮಲ್ಲಣ್ಣ, ಮನೆ ನಂ. ಕೆಟಿ 681, ಚಾಮುಂಡೇಶ್ವರಿನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಹುಷಾರಿಲ್ಲದರಿಂದ ಡಾ.ಕ್ಟರ್ ಬಳಿ ತೋರಿಸಲು ವಿಕ್ರಮ್ ಆಸ್ಪತ್ರೆ ಮುಂಭಾಗ ರಸ್ತೆಯಲ್ಲಿ ಕೆಎ 11-ಕೆ-1076 ಟಿವಿಎಸ್ ಎಕ್ಸ್.ಎಲ್.ಸೂಪರ್ ಸುಜುಕಿ ಮೊಪೆಡ್ ಬೀಗ ಹಾಕಿ ನಿಲ್ಲಿಸಿ ಮೊಪೆಡ್ನ ಕವರ್ ನಲ್ಲಿ ಮಂಡ್ಯ ವಿವಿದ ಬ್ಯಾಂಕಗ್ಗಳ ಪಾಸ್ ಪುಸ್ತಕಗಳಿದ್ದು ಎ.ಪಿ.ಎಲ್. ರೇಷನ್ ಕಾಡರ್್ನ್ನು ಇಟ್ಟು ಚಿಕಿತ್ಸೆಗೆ ಚಿಕಿತ್ಸೆ ಪಡೆದು ಅಲ್ಲಿಂದ   ವಾಪಸ್ಸು ಬಂದು ನೋಡಲಾಗಿ ನನ್ನ ಮೊಪೆಡ್ ಇರಲಿಲ್ಲ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿ ಕೊಡಬೇಕೆಂದು ನಿಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


5. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 41 ಕ್ಲಾಸ್[ಡಿ.]  ಕೂಡ 102 ಸಿ,ಆರ್.ಪಿ.ಸಿ. ಹಾಗು 379 ಐ.ಪಿ.ಸಿ.

ದಿನಾಂಕ: 17-02-2013 ರಂದು ಪಿರ್ಯಾದಿ ಬಿ.ಎಂ ಸತ್ಯನಾರಾಯಣ, ಎ.ಎಸ್.ಐ. ಶಿವಳ್ಳಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಸಿಬ್ಬಂದಿಯವರಾದ   ಸಿ.ಪಿ.ಸಿ-128 ಜಿ.ಆರ್ ಆನಂದರವರನ್ನು ಆರೋಪಿ ಮತ್ತು ಕಳುವು ಮಾಲಿನ ಬಗ್ಗೆ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಒಂದು ಹುಡುಗನು ನಮ್ಮನ್ನು ನೋಡಿ ಮೊಪೆಡ್ ನ್ನು  ಬೀಳಿಸಿ ಓಡಿ ಹೋಗಲು ಯತ್ನಿಸಿದ್ದು ತಕ್ಷಣ ಹಿಡಿದುಕೊಂಡು ಆತನು ತಂದಿದ್ದ ಟಿ,ವಿ.ಎಸ್. ನ್ನು  ಪರಿಶೀಲಿಸಲಾಗಿ ಹಿಂದೆ ಮುಂದೆ ನಂಬರ್ ಪ್ಲೇಟ್ ಇಲ್ಲದ ಕಾರಣ ಈ ಬಗ್ಗೆ ವಿಚಾರ ಮಾಡಲಾಗಿ ಹುಡುಗನು ನಾನು ಈ ಟಿ.ವಿ.ಎಸ್ ನ್ನು ಮಂಡ್ಯದ ಸರ್ಕಾರಿ ಅಸ್ಪತ್ರೆಯ ಮುಂಭಾಗ ಕಳುವು ಮಾಡಿದ್ದೆಂದು ನುಡಿದ ಮೇರೆಗೆ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment