Moving text

Mandya District Police

DAILY CRIME REPORT DATED : 21-02-2013



ದಿನಾಂಕ: 21-02-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ರಾಬರಿ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 379 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ಯೋಗೇಶ ವಿ ಕೆ ಬಿನ್ ಕೃಷ್ಣೇಗೌಡ 36-ವರ್ಷ, ವಕ್ಕಲಿಗರು, ರೈತ, ವಳಗೆರೆಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮದ್ದೂರಿನ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣದ ಹೊರಾವರಣದಲ್ಲಿ ಕೆಎ-11-ಎಸ್-4084 ಹಿರೊಹೋಂಡಾ ಮೋಟಾರ್ ಸೈಕಲ್ ನಿಲ್ಲಿಸಿ ಮೈಸೂರಿಗೆ ಹೋಗಿದ್ದು ವಾಪಸ್ ಬಂದು ನೋಡಿದಾಗ ಯಾರೋ ಕಳ್ಳರು ಬೈಕ್ ಅನ್ನು ಕಳುವು ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 379 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ಎಂ.ಕೆ. ಕುಮಾರ್ ಬಿನ್. ಲೇ: ಹೆಚ್.ಕೆ.ಕೃಷ್ಣೇಗೌಡ, ಭದ್ರತಾ ರಕ್ಷಕ, ಮಂಡ್ಯ ವಿಭಾಗೀಯ ಕಾರ್ಯಗಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ 20-21 -02-2013 ರಾತ್ರಿ 5-00 ಎಎಂ ಗಂಟೆಗೆ  ಮಂಡ್ಯ ಸಿಟಿ ಕೆ.ಎಸ್. ಆರ್. ಟಿ. ಸಿ ವಿಭಾಗೀಯ ಕಾರ್ಯಗಾರದ ಪೂರ್ವದ ಕಾಂಪೌಂಡ್ ಹತ್ತಿರ ಸ್ಕ್ರಾಪ್ ಯಾರ್ಡ್ ನಿಂದ ಆರೋಪಿ ಮಹಮ್ಮದ್ ಹುಸೇನ್ ಖಾನ್, ಆಲಿಯಾಸ್ ಹುಸೇನ್ ಬಿನ್. ಅಮಿದ್ ಖಾನ್, 25 ವರ್ಷ ಕೂಲಿ,  ಹಾಲಹಳ್ಳಿ ಸ್ಲಂ, ಮಂಡ್ಯ ಸಿಟಿ ರವರು ಅಂದಾಜು  900/-ರೂ. ಬೆಲೆ ಬಾಳುವ ಪ್ಲೇಟ್ ಗಳನ್ನ ಕಳುವು ಮಾಡಿದ್ದು ಮಾಲು ಸಮೇತ ಆಸಾಮಿಯನ್ನು ಕರೆ ತಂದು ಹಾಜರ್ ಪಡಿಸಿ  ಮುಂದಿನ ಕ್ರಮದ ಬಗ್ಗೆ ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 21-02-2013 ರಂದು ಚನ್ನಯ್ಯ ಬಿನ್. ಬೊಮ್ಮಯ್ಯ, ಹರಳಹಳ್ಳಿ ಗ್ರಾಮ, ಪಾಂಡವಪುರ ತಾ. ಮಂಡ್ಯ ಜಿಲ್ಲೆರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು, 21 ವರ್ಷ, ಹರಳಹಳ್ಳಿ ಗ್ರಾಮ, ಪಾ ಪುರ ತಾ. ರವರು ದಿನಾಂಕ: 19-02-2013 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ತಮ್ಮ ಮನೆಯಿಂದ ಪಾಂಡವಪುರ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಹುಡುಗಿ ಕಾಣೆಯಾಗಿದ್ದಾಳೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 21-02-2013 ರಂದು ಪಿರ್ಯಾದಿ ನರಸಿಂಹಯ್ಯ ಬಿನ್ ಗಾಳಪ್ಪ, ಬೈರೋಹಳ್ಳಿ, ಸೂಲಿಕೆರೆ ಪೋಸ್ಟ್, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ತಮ್ಮ ರಾಮಯ್ಯ ಬಿನ್ ಗಾಳಪ್ಪ, 41ಷರ್ವ, ಕೂಲಿಕೆಲಸ, ಬೈರೋಹಳ್ಳಿ, ಸೂಲಿಕೆರೆ ಪೋಸ್ಟ್, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೊಕು ರವರು ಬೆಂಗಳೂರಿನ ಕೆಂಗೇರಿಯಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಲು ಪಾದಯಾತ್ರೆಯಲ್ಲಿ ಚನ್ನಪಟ್ಟಣ ಮಾರ್ಗವಾಗಿ ಹಲಗೂರು, ಬೀಮೇಶ್ವರಿಗೆ ದಿನಾಂಕಃ 19-2-13 ರಂದು ಸಂಜೆ ಬಂದು ಅಲ್ಲಿ ಊಟ ಮಾಡಿ ತಂಗಿದ್ದು ರಾತ್ರಿ 10-30 ಗಂಟೆಯಿಂದ 11 ಗಂಟೆಯ ಸಮಯದಲ್ಲಿ ಮೂತ್ರ ವಿಸರ್ಜನೆಗೆಂದು ಹೋದವರು ವಾಪಸ್ಸು ಬಂದಿರುವುದಿಲ್ಲ ಎಲ್ಲಾ ಕಡೆ ಹುಡಕಲಾಗಿ ಸಿಕ್ಕಿರುವುದಿಲ್ಲ ನಾವು ನಮ್ಮ ಸಂಬಂಧಿಕರ ಮನೆ ಹಾಗೂ ಇತೆ ಕಡೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುವ ನನ್ನ ತಮ್ಮನನ್ನು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

     ದಿನಾಂಕ: 21-02-2013 ರಂದು ಪಿರ್ಯಾದಿ ಹೆಚ್.ಮೆಹಬೂಬ್ ಬಾಷ ಬಿನ್. ಲೇಟ್. ಮಹಮದ್ ಹಾಯಸಾಬ್, ಯಹಲ್ಲಾ ಮಸೀದಿ ಪಕ್ಕ, ಸೋಂಕಳ್ಳಿ ಮೊಹಲ್ಲಾ, ಮೈಸೂರು ರಸ್ತೆ, ನಾಗಮಂಗಲ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯವರ ಸೊಸೆ,  21 ವರ್ಷ, ಮುಸ್ಲೀಂ, ವಾಸ ಯಹಲ್ಲಾ ಮಸೀದಿ ಪಕ್ಕ, ಸೋಂಕಳ್ಳಿ ಮೊಹಲ್ಲಾ, ಮೈಸೂರು ರಸ್ತೆ, ನಾಗಮಂಗಲ ಟೌನ್ ಮತ್ತು ಫಿರ್ಯಾದಿಯ ಮಗಳು, ಮೊಮ್ಮಗಳು ರವರುಗಳು ನಾಗಮಂಗಲದಿಂದ ಮಂಡ್ಯಕ್ಕೆ ಬಂದಿದ್ದು ಮಂಡ್ಯದ ಪಿಡಬ್ಲ್ಯುಡಿಯ ಕಛೇರಿಯ ಮುಂಭಾಗದ ಫುಟ್ಪಾತ್ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ ತಮ್ಮ ಸೊಸೆ ಕಾಣೆಯಾಗಿರುತ್ತಾಳೆ. ಇದುವರೆಗೆ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ತಮ್ಮ ಸೊಸೆರವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 393 ಐ.ಪಿ.ಸಿ.

ದಿನಾಂಕ: 21-02-2013 ರಂದು ಪಿರ್ಯಾದಿ ನಂಜುಂಡಪ್ಪ ಬಿನ್ ಶಿವಪ್ಪ, ಸಾಸಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಆರೋಪಿ ಕೇಶವ ಬಿನ್ ಶಿವಯ್ಯ, ಸುಮಾರು 25 ವರ್ಷ, ಸಾಸಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ಪಿಯರ್ಾದಿಯವರ ಹೆಂಡತಿಯ ಕೊರಳ ಪಟ್ಟಿಗೆ ಕೈ ಹಾಕಿ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿರುತ್ತಾರೆ ತಕ್ಷಣ ಕಿರುಚಿಗೊಂಡಾಗ ಸಾಸಲು ಗ್ರಾಮದವರು ಬಂದು ಆರೋಪಿತನನ್ನು  ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಬಂದು ಹಾಜರ್ ಪಡಿಸಿರುತ್ತಾರೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 35/2013 ಕಲಂ. 279-337-338-304 (ಎ)  ಐಪಿಸಿ ಕೂಡ 184-187 ಐಎಂವಿ ಕಾಯ್ದೆ.

ದಿನಾಂಕ 21-02-2013 ರಂದು ಪಿರ್ಯಾದಿ ಕೆ.ಎಂ ಮಲ್ಲಯ್ಯ ಬಿನ್ ಲೇ|| ಮಹಾಲಿಂಗಯ್ಯ, ನಿವೃತ್ತ ಸರ್ಕಾರಿ  ನೌಕರರು, ವಿಹೆಚ್ ರಸ್ತೆ ಕೆ.ಆರ್ ಪೇಟೆ ಟೌನ್, 571426 ರವರು ನೀಡಿದ ದೂರಿನ ವಿವರವೇನೆಂದರೆ ಕೋಡಿಮಾರನಹಳ್ಳಿ ಗ್ರಾಮದ ಹತ್ತಿರದ ತಿರುವು ರಸ್ತೆಯಲ್ಲಿ, ಕೆ.ಆರ್ ಪೇಟೆ-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ಕೆಎ-02-ಎಂಬಿ-5827 ರ ಟಾಟಾ ಸುಮಾ ಕಾರಿನ ಚಾಲಕ ಹೆಸರು ವಿಳಾಸ ಗೊತ್ತಿಲ್ಲ. ಇವರು ತನ್ನ ಬಾಬ್ತು ಟಾಟಾ ಸುಮೋ ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಅಡ್ಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಮೃತ ಒಡಿಸುತ್ತಿದ್ದ ಮೊಟಾರ್ ಬೈಕ್ ಗೆ  ಡಿಕ್ಕಿ ಮಾಡಿದ ಪರಿಣಾಮ ಮೃತನ ಕಾಲಿಗೆ, ಮರ್ಮಾಂಗಕ್ಕೆ  ಇನ್ನಿತರ ಕಡೆ ಪೆಟ್ಟು ಬಿದ್ದು ಮೃತಪಟ್ಟಿರುತ್ತಾನೆಂದು ಮತ್ತು ಹಿಂದೆ ಕುಳಿತ್ತಿದ್ದ ಅವನ ಸ್ನೇಹಿತ ಅಭಿಷೇಕನಿಗೆ ಕಾಲು ಮುರಿದು ಹೋಗಿದ್ದು ತೀವ್ರತರವಾದ ಪೆಟ್ಟಾಗಿರುತ್ತೆ ಎಂದು ಕೆ.ಆರ್ ಪೇಟೆ ಆಸ್ಪತ್ರೆಯಲ್ಲಿ ಜನರು ತಿಳಿಸಿದರು ಆದ ಕಾರಣ ಮೇಲ್ಕಂಡ ಟಾಟಾ ಸುಮೋ ಕಾರಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಇತ್ಯಾದಿಯಾಗಿ ಕೆ.ಆರ್ ಪೇಟೆ ಸಾರ್ವಜನಿಕ ಆಸ್ಪತ್ರೆಯ ಬಳಿ ದೂರನ್ನು ಸಲ್ಲಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment