Moving text

Mandya District Police

DAILY CRIME REPORT DATED : 24-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-02-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 7 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ವಾಹನ ಕಳವು ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 379 ಐ.ಪಿ.ಸಿ.

ದಿನಾಂಕ: 24-02-2013 ರಂದು ಪಿರ್ಯಾದಿ ಕಿಶೋರ್ ಬಿನ್. ಲೇ| ರಾಜು, ಪಾಲಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 23-02-2013 ರಂದು ಪಿರ್ಯಾದಿಯವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಏಂ-09-ಕ-3474 ಕಾರ್ ನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 2.40.000/- ರೂ ಆಗಿರುತ್ತೆ  ಪತ್ತೆ  ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 143-341-323-506 ಕೂಡ 149 ಐ.ಪಿ.ಸಿ ಮತ್ತು 3 ಕ್ಲಾಸ್ 1 (ಘಿ) ಎಸ್.ಸಿ/ಎಸ್.ಟಿ. ಆಕ್ಟ್.

ದಿನಾಂಕ: 24-02-2013 ರಂದು ಪಿರ್ಯಾದಿ ಪುರುಷೋತ್ತಮ್ ಬಿನ್. ಲೇ: ಸಿ.ಡಿ.ರಾಜು, 35ವರ್ಷ, ಪರಿಶಿಷ್ಟಜಾತಿ, ವ್ಯವಸಾಯ, ಅಣಸಾಲೆ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮನೆಗೆ ಹೋಗುವಾಗ ಆರೋಪಿಗಳಾದ 1 ಭೂಮಿಸಿದ್ದಯ್ಯ, 2. ಮಹೇಶ್, 3. ಕೆಂಚ, 4 ನಾಗರಾಜು, 5.ಭೂಮಿಸಿದ್ದಯ್ಯ ಇಲ್ಲರೂ ರಾಮನಾಥಮೋಳೆ ಗ್ರಾಮ, ಮಳವಳ್ಳಿ ತಾಲ್ಲೂಕು ರವರುಗಳು ಅಡ್ಡಗಟ್ಟಿ ಹೊಡೆದಿರುತ್ತಾರೆ. ಇವರುಗಳು ಹೊಲಯ ನನ್ನ ಮಕ್ಕಳ ಅಂತ ಬೈಯುತ್ತ ಮನೆಯವರೆವಿಗೂ ಓಡಿಸಿಕೊಂಡು ಬಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಮೇಲ್ಕಂಡ ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿ ಇವರುಗಳ ಮೇಲೆ ಕ್ರಮತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಅರಿಕೆ ಮತ್ತು ಈ ಬಗ್ಗೆ ಗ್ರಾಮದಲ್ಲಿ ತೀರ್ಮಾನ ಮಾಡಿಕೊಳ್ಳಲು ಕಾದಿದ್ದು ತೀರ್ಮಾನವಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ.


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-02-2013 ರಂದು ಪಿರ್ಯಾದಿ ನಸೀಬ್ಖಾನ್ ಬಿನ್. ಲೇಟ್. ಮುಸ್ತಾಪ್ ಖಾನ್, 29 ವರ್ಷ ರವರುಗಳು ನೀಡಿದ ದೂರಿನ ವಿವರವೇನೆಂದರೆ ನಮ್ಮ ತಂದೆ  ಮುಸ್ತಾನ್ ಖಾನ್  ಬಿನ್. ಸುಬಾನ್ ಖಾನ್, 50 ವರ್ಷ ರವರು ಅಪಘಾತದಿಂದ ಆದ ಗಾಯಗಳಿಂದ ಮೃತಪಟ್ಟಿರುತ್ತಾರೆಯೋ ಅಥವಾ ಇನ್ಯಾವ ಕಾರಣದಿಂದ ಮೃತಪಟ್ಟಿರುತ್ತಾರೋ ಎಂಬುದರ ಬಗ್ಗೆ ವೈದ್ಯರಿಂದ ಪರೀಕ್ಷಿಸಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ  ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ. 

ದಿನಾಂಕ: 24-02-2013 ರಂದು ಪಿರ್ಯಾದಿ ಕುಳಂದೇರಾಜ್ ಬಿನ್. ಆರೋಗ್ಯಸ್ವಾಮಿ, ನಂಃ 2/156, ನಾರ್ತ್ . ಸ್ಟ್ರೀಟ್, ದವಸಿಮೇಳೈ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಮೌಳಿ ರಾಯ್ ಅಲೆಕ್ಸ್ ಬಿನ್. ಕುಳಂಧೈರಾಜ್, 29ವರ್ಷ, ಕ್ರಿಶ್ಚಿಯನ್ ಜನಾಂಗ ರವರು ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಈಜಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 52/13 ಕಲಂ. 457-380 ಐ.ಪಿ.ಸಿ.

ದಿನಾಂಕ: 24-02-2013 ರಂದು ಪಿರ್ಯಾದಿ ಬಸವರಾಜು, ಮುಖ್ಯೋಪಾಧ್ಯಾಯರು, ಚೀಕನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 23.02.2013 ರ ರಾತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೀಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ 03 [ಮೂರು] ಸಿಲಿಂಡರ್ಗಳು ಅಂದರೆ ಅಕ್ಷರ ದಾಸೋಹದಿಂದ ಕೊಟ್ಟಿರುವ ಹೆಚ್.ಪಿ. ಸಿಲಿಂಡರ್ ಗಳು ಕಳ್ಳತನವಾಗಿರುತ್ತವೆ  ಪತ್ತೆ  ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 24-02-2013 ರಂದು ಪಿರ್ಯಾದಿ ಬಸವಲಿಂಗಯ್ಯ ಬಿನ್. ಲೆಃ ನಿಂಗಯ್ಯ, ಗೊರವಾಲೆ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಮಗಳು 19 ವರ್ಷ ರವರು ದಿನಾಂಕ: 20-02-2013 ರ ಬೆಳಿಗ್ಗೆ 08.30 ಗಂಟೆಯಲ್ಲಿ ಮಂಡ್ಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದಳು ಎಂದು ಗೊತ್ತಾಯಿತು. ಇದುವರೆಗೂ ವಾಪಸ್ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಲಾಗಿ ಇದುವರೆಗೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 279.304 (ಎ) ಐ.ಪಿ.ಸಿ.

ದಿನಾಂಕ: 24-02-2013 ರಂದು ಪಿರ್ಯಾದಿ ಕುಮಾರ ಬಿನ್ ಲೇಟ್ ಮಾದಪ್ಪ, 40ವರ್ಷ. ಲಿಂಗಾಯಿತರು, ವ್ಯವಸಾಯ ವಾಸ ಬಾಚನಹಳ್ಳಿ. ಬಿಜಿಪುರ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ನಂ. ಕೆಎ-06-ಸಿ-4908,  ಟೆಂಪೋ ಚಾಲಕ. ಹೆಸರು ವಿಳಾಸ ತಿಳಿಯಬೇಕಾಗಿದೆ ಅತಿಜೋರಾಗಿ ಓಡಿಸಿಕೊಂಡು ಹೋಗಿ ಮೃತನಿಗೆ ಡಿಕ್ಕಿ ಮಾಡಿಸಿದ ಪರಿಣಾಮ  ಮೃತನಿಗೆ ಮೂಗು ಬಾಯಿ ಕಿವಿಯ ಹತ್ತಿರ ರಕ್ತಸ್ರಾವವಾಗಿ ಚಿಕಿತ್ಸೆಗಾಗಿ ಮಳವಳ್ಳಿ ಸರ್ಕಾರಿ  ಆಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿವಸ ಮದ್ಯಾಹ್ನ 01.00 ಗಂಟೆಯ ಸಮಯದಲ್ಲಿ ಮೃತಪಟ್ಟಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment