Moving text

Mandya District Police

DAILY CRIME REPORT DATED : 15-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-02-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿರುತ್ತವೆ ಅವುಗಳಲ್ಲಿ 5 ಯು.ಡಿ.ಆರ್. ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964 ಅಧಿನಿಯಮ ಪ್ರಕರಣ,  1 ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ದೇವರಾಜು ಬಿನ್. ಲೇ. ಚಲುವಯ್ಯ, ಮರಳಗಾಲ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ವೈಕುಂಟಯ್ಯ    ಬಿನ್ ಲೇ| ಚಲುವಯ್ಯ ರವರಿಗೆ ನೋವು ಜಾಸ್ತಿಯಾಗಿ ಹೊಟ್ಟೆ ನೋವಿನ ಔಷಧ ಕುಡಿಯುವ ಬದಲು ಯಾವುದೋ ಕ್ರಿಮಿನಾಷಕ ಔಷಧಿ ಕುಡಿದು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

       ದಿನಾಂಕ: 15-02-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇ. ಕುಮಾರ, 32 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕುಮಾರ ಬಿನ್. ಲೇ. ಪಳಿನಿ, 60 ವರ್ಷ, ರವರು ಡ್ರೈನೇಜ್ನ್ನು ಸ್ವಚ್ಚಗೊಳಿಸುತ್ತಿದ್ದಾಗ, ಆಕಸ್ಮಿಕವಾಗಿ ಚರಂಡಿಗೆ ಬಿದ್ದಿದ್ದು, ಪೆಟ್ಟಾಗಿದ್ದ ಕುಮಾರರವರನ್ನು ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಮಂಡ್ಯ ಜಿಲ್ಲಾ ಆಸ್ಪತ್ರೆಯ ಬಳಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

3. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

      ದಿನಾಂಕ: 15-02-2013 ರಂದು ಪಿರ್ಯಾದಿ ನರೇಶ್, ಸಹಾಯಕ ಇಂಜಿನಿಯರ್, ಬಿ.ಡಬ್ಯೂ.ಎಸ್.ಎಸ್.ಬಿ.  ಟಿ.ಕೆ.ಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನೆಟ್ಕಲ್ ಎನ್ಬಿಆರ್ ಕೆರೆಯಲ್ಲಿ ಒಂದು ಅಪರಿಚಿತ ಗಂಡಸು, ಸುಮಾರು 45 ರಿಂದ 50 ವರ್ಷ, ಶವ ತೇಲುತ್ತಿರುತ್ತದೆ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

4. ಶಿವಳ್ಳಿ  ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಅರ್.ಪಿ.ಸಿ.

     ದಿನಾಂಕ: 15-02-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ಲೆಃ ಕರೀಗೌಡ, ಪುರದಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಅಪರಿಚಿತ ಗಂಡಸು, ಸುಮಾರು 50-55 ವರ್ಷ ರವರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವನೆ ಮಾಡಿಯೋ ಆಥವಾ ಹೃದಯಾಘಾತದಿಂದಲೋ ಅಥವಾ ಯಾವುದೋ ಖಾಯಿಲೆಯಿಂದ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸತ್ತಿರುತ್ತಾನೆ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

5.ಪಾಂಡವಪುರ ಪೊಲೀಸ್ ಠಾಣೆ ಯುಡಿಆರ್ ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ಈರೇಗೌಡ ಬಿನ್. ಲೇಟ್. ಹೊನ್ನೇಗೌಡ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಜ್ಯೋತಿ ಕೋಂ. ಸೋಮೇಗೌಡ @ ತಮ್ಮೇಗೌಡ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :


ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 279, 304[ಎ] ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 15-02-2013 ರಂದು ಪಿರ್ಯಾದಿ ಡಿ.ಎನ್ ನಟರಾಜು, ಸಿಪಿಸಿ-701, ಮಂಡ್ಯ ಗ್ರಾಮಾಂತರ ಠಾಣೆ ರವರು ನೀಡಿದ ದೂರು ಏನೆಂದರೆ ಒಬ್ಬ ಗಂಡಸು ರಸ್ತೆಯಲ್ಲಿ ಬಿದ್ದಿದ್ದು ಹತ್ತಿರ ಹೋಗಿ ನೋಡಲಾಗಿ ಗಂಡಸಿನ  ತಲೆಯ ಮೇಲೆ ಯಾವುದೋ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಸದರಿ ವಾಹನ, ಚಾಲಕನ ಹೆಸರು ಮತ್ತು ವಿಳಾಸ ಪತ್ತೆ ಮಾಡಬೇಕಾಗಿದೆ.  ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.  


ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964 ಅಧಿನಿಯಮ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 4, 5, 8, 9 ಮತ್ತು 11 [ಡಿ] ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964.

ದಿನಾಂಕ: 15-02-2013 ರಂದು ಪಿರ್ಯಾದಿ ಬಾಲು ಹೆಚ್.ಎನ್. ಆರಕ್ಷಕ ಉಪ ನಿರೀಕ್ಷಕರು, ಮಂಡ್ಯ ಪೂರ್ವ ಪೊಲೀಸ್ ಠಾಣೆ,  ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ. ಬಿ. ಮಂಜು11ಎ 4305 ರ ಚಾಲಕ ಮತ್ತು ಮಾಲೀಕ, 2] ಕೆ, ಎ, 11 ಎ 3960ರ ಚಾಲಕ.  3] ಕೆ, ಎ, 11 ಎ 4640 ರ ಚಾಲಕ
4] ಕೆ,ಎ, 11ಎ 2476ರ ಚಾಲಕ ಮತ್ತು 5] ಸಾಧಿಕ್ ರವರುಗಳು ಗೂಡ್ಸ್ ಟೆಂಪೋದಲ್ಲಿ ಎಮ್ಮೆಗಳನ್ನು ಮತ್ತು ಹಸುಗಳನ್ನು ತುಂಬಿಕೊಂಡು ಬರುತ್ತಿದ್ದಾರೆೆ. ಅವುಗಳನ್ನು ರಕ್ಷಿಸಿ ಎಂದು ಬಂದಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳ ಜೊತೆ ಮತ್ತು ಪಂಚಾಯ್ತುದಾರರ ಸಮಕ್ಷಮ ಮಧ್ಯಾಹ್ನ 12-30 ಗಂಟೆಯಿಂದ 13-30 ಗಂಟೆಯವರೆಗೆ ಕ್ರಮ ಕೈಗೊಂಡು ವಿವರವಾದ ಮಹಜರ್ ಕ್ರಮವನ್ನು ಜರುಗಿಸಿ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 379 ಐ.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ವಿಠಲಾಪುರ ರಸ್ತೆಯಲ್ಲಿರುವ ಕುಂದನಕುಪ್ಪೆ, ಎಲ್ಲೆಯ ಸವರ್ೆ ನಂಬರ್ 401 & 407 ರ ಜಮೀನಿನಲ್ಲಿ ಪಂಪ್ಸೆಟ್ಗೆ ಅಳವಡಿಸಿದ್ದ ಸುಮಾರು 100 ಮೀಟರ್ ಉದ್ದದ್ದ ಕೇಬಲ್ ವೈರನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 324, 323, 498(ಎ) ಐ.ಪಿ.ಸಿ.

ದಿನಾಂಕ: 15-02-2013 ರಂದು ಪಿರ್ಯಾದಿ ಗೋವಿಂದರಾಜು @ ಗೋಪಿ ಬಿನ್. ನಂಜಯ್ಯ, ಯರಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಯು ಬಂದು ಸಂಸಾರದ ವಿಚಾರದಲ್ಲಿ ಜಗಳ ತೆಗೆದು ಇಟ್ಟಿನ ದೊಣ್ಣೆಯಿಂದ ಕಾಯಿ ತುರಿಯುವ ಮಣೆಯಿಂದ, ಮತ್ತು ಚೂರಿಯಿಂದ, ಕೈಯಿಂದ ಹೊಡೆದು ಪಿಯರ್ಾದಿಯವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment