Moving text

Mandya District Police

DAILY CRIME REPORT DATED : 12-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-03-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವರದಕ್ಷಿಣೆ ಕಿರುಕುಳ ಹಾಗು ಕೊಲೆ ಬೆದರಿಕೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 13 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.

ವರದಕ್ಷಿಣೆ ಕಿರುಕುಳ ಹಾಗು ಕೊಲೆ ಬೆದರಿಕೆ ಪ್ರಕರಣ :

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 304(ಬಿ) 302 ಕೂಡ 34 ಐ.ಪಿ.ಸಿ.

ದಿನಾಂಕ: 12-03-2013 ರಂದು ಪಿರ್ಯಾದಿ ಗಂಗಾಧರ್.ಎಸ್.ಟಿ., ಪಿಎಸ್ಐ, ಬಿಂಡಿಗನವಿಲೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ 6 ತಿಂಗಳವರೆಗೆ ಗಂಡ ಹೆಂಡತಿ ಅನ್ಯೋನ್ಯವಾಗಿದ್ದು ನಂತರ ಗಂಡ, ಅತ್ತೆ, ಗಂಡನ ಅಣ್ಣ, ಮತ್ತು ಅತ್ತಿಗೆರವರುಗಳು ವರದಕ್ಷಿಣೆ ಹಣಕ್ಕಾಗಿ ಮಂಗಳಗೌರಿಗೆ ಆಗಾಗ್ಗೆ ಕಿರುಕುಳ ಕೊಡುತ್ತಿದ್ದು. ದಿನಾಂಕಃ 11-03-2013 ರಂದು ಬೆಳಿಗ್ಗೆ 1000 ಗಂಟೆಯಿಂದ ರಾತ್ರಿ 09:30 ಗಂಟೆ ನಡುವೆ ಮಂಗಳಗೌರಿ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆರೋಪಿಗಳಾದ 1] ಕುಮಾರ, 2] ರಂಗಮ್ಮ, 3] ಮೂತರ್ಿ, ಮತ್ತು 4] ನೇತ್ರಾವತಿ ಮಂಚೇನಹಳ್ಳಿ ಗ್ರಾಮ ರವರುಗಳು  ಸೇರಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಕೊಲೆ ಮಾಡಿರುತ್ತಾರೆ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 12-03-2013 ರಂದು ಪಿರ್ಯಾದಿ ಸರಿತಾ ಕೊಂ. ರಮೇಶ, 22 ವರ್ಷ, ಗೃಹಿಣಿ, ಮಹದೇವಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಮೇಶ, ಮಹದೇವಪುರ ಗ್ರಾಮ ರವರು ದಿನಾಂಕ: 10-02-2013 ರ ಬೆಳಿಗ್ಗೆ 10-00 ಗಂಟೆಯಲ್ಲಿ ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ವಾಪಸ್ ಬರಲಿಲ್ಲ. ನಮ್ಮ ನೆಂಟರಿಷ್ಟರ ಮನೆಗಳಲೆಲ್ಲಾ ಹುಡುಕಾಡಿದರೂ ನನ್ನ ಗಂಡ ಪತ್ತೆಯಾಗಿರುವುದಿಲ್ಲ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 12-03-2013 ರಂದು ಪಿರ್ಯಾದಿ ಉಮೇಶ್ನಾಯಕ್, ವೆಂಕಟಗಿರಿ ಗ್ರಾಮ, ಸಂಡೂರು ತಾಃ ಬಳ್ಳಾರಿ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ಪಿರ್ಯಾದಿಯವರು ಮತ್ತು  ಅವರ ಮಕ್ಕಳು ಸಂಸಾರ ಸಮೇತ ಮಲಗಿದ್ದಾಗ ಯಾವುದೋ ವಿಷಜಂತು ಹಾವು ಅವರ ಎರಡು ಮಕ್ಕಳು 1] ರತ್ನಬಾಯಿ ಹಾಗು 2] ಸುಪ್ರಿತಬಾಯಿ ರವರುಗಳಿಗೆ ಕಚ್ಚಿದ ಪರಿಣಾಮ ರತ್ನಬಾಯಿ ಸ್ಥಳದಲ್ಲಿ ಮೃತಪಟ್ಟಿದ್ದು, ಸುಪ್ರಿತಬಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಶವದ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ಲಿಖಿತ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತೆ.


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 447-427-504-506 ಕೂಡ 34 ಐ.ಪಿ.ಸಿ. ಹಾಗು 3 ಕ್ಲಾಸ್.   (X) (XI) ಎಸ್.ಸಿ./ಎಸ್.ಟಿ. ಕಾಯಿದೆ 1989.

ದಿನಾಂಕ: 12-03-2013 ರಂದು ಪಿರ್ಯಾದಿ ಚಿಕ್ಕಬಸಮ್ಮ ಕೋಂ. ಬೋರಯ್ಯ, ಮಾರಸಿಂಗನಹಳ್ಳಿ ಗ್ರಾಮ ಕೊತ್ತತ್ತಿ ಹೋ. ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಸಬ್ಬನಹಳ್ಳಿ ಗ್ರಾಮದ ಸರ್ವೆ. ನಂ.165ರಲ್ಲಿ 0.30ಗುಂಟೆ ಜಮೀನು ಇದ್ದು ಈ ಜಮೀನಿನ ಬಳಿ ವ್ಯವಸಾಯ ಮಾಡಲು ಹೋದಾಗ ಈ ಕೇಸಿನ ಆರೋಪಿಗಳಾದ 1]ಸಿದ್ದರಾಜು 2] ಮಂಗಳ 3] ಜಗದೀಶ 4] ಮಹೇಶ ಎಲ್ಲರೂ ಸಬ್ಬನಹಳ್ಳಿ ಗ್ರಾಮ, ಏಕೊದ್ದೇಶದಿಂದ ಅಕ್ರಮವಾಗಿ ಇವರ ಜಮೀನಿಗೆ ಪ್ರವೇಶ ಮಾಡಿ, ಬೋರ್ ವೆಲ್,  ಪೈಪ್ ಗಳನ್ನು ಹೊಡೆದು ಹಾಕಿ ಕಬ್ಬಿನ ಪೈರನ್ನು ಟ್ರಾಕ್ಟರ್ ನಿಂದ  ಹುತ್ತಿ ನಾಶಪಡಿಸಿರುತ್ತಾರೆ ಹಾಗೂ ಅವಾಚ್ಯವಾಗಿ ಬೈಯ್ದು ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment