Moving text

Mandya District Police

DAILY CRIME REPORT DATED : 27-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-03-2013 ರಂದು ಒಟ್ಟು 48 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ  1 ವಂಚನೆ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಕೊಲೆ ಪ್ರಕರಣ, 2 ಮರಳು ಕಳವು ಹಾಗು ಸರ ಕಳವು ಪ್ರಕರಣಗಳು ಹಾಗು 43 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ವಂಚನೆ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 82/13 ಕಲಂ. 467-468-420 ಐ.ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ಗೋಪಾಲಪ್ಪ, ಮಾಜಿಸ್ಟ್ರೇಟ್, ಜೆ.ಎಂ.ಎಪ್.ಸಿ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಹೊನ್ನಮ್ಮರವರು ತಮ್ಮ 6 ನೇ ಮಗ ಚಂದ್ರ ಮತ್ತು 7 ನೇ ಮಗನಾದ ರವಿರವರುಗಳಿಗೆ ತನ್ನ ಮರಣಾ ನಂತರ ತನ್ನ ಆಸ್ತಿಯನ್ನು ಇಬ್ಬರೂ ಮಕ್ಕಳಿಗೂ ಸಮನಾಗಿ ಹಂಚಿಕೆಯಾಗುವಂತೆ ಮರಣಶಾಸನ ಪತ್ರ ಬರೆದು                 ದಿಃ17-06-1998  ರಂದು ಕೆ.ಆರ್.ಪೇಟೆ ಸಬ್ರಿಜಿಸ್ಟಾರ್ ಕಛೇರಿಯಲ್ಲಿ ರಿಜಿಸ್ಟಾರ್ ಮಾಡಿಸಿದ್ದು ಹಾಜರುಪಡಿಸಿರುವ ಮರಣಾಶಾಸನದ ದಾಖಲಾತಿಗಳನ್ನು ನಕಲಿ ಎಂದು ಪರಿಗಣಿಸಿ ಆರೋಪಿ ಎ.ರವಿ ಬಿನ್. ಅಂದಾನಿಶೆಟ್ಟಿ, ಅರಳಗುಪ್ಪೆ ಗ್ರಾಮ, ಪಾಂಡವಪುರ ತಾ|| ರವರ ಮೇಲೆ ಪ್ರಕರಣ ದಾಖಲಿಸುವಂತೆ ಪತ್ರ ರವಾನೆ ಮಾಡಿದ್ದರ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 304 (ಬಿ) 302, ಕೂಡ 34 ಐ.ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ಇಂದ್ರಮ್ಮ ಕೋಂ. ಪರಮೇಶ, ಮದ್ದೂರು ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಅಳಿಯ ಕುಬೇರ @ ಶಿವಕುಮಾರ ರವರು ಮಗಳಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆನೀಡಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ದಿ;27-03-2013 ರಂದು 10-00 ಗಂಟೆಯಲ್ಲಿ ಪಿರ್ಯಾದಿಯ ಮಗಳನ್ನು  ಹೊಡೆದು ನೇಣುಹಾಕಿ ಮೃತ ದೇಹವು ನೇತಾಡುತ್ತಿತ್ತು  ನನ್ನ ಅಳಿಯ ಕುಬೇರ @ ಶಿವಕುಮಾರ ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿರುತ್ತಾನೆ ಹಾಗು ಇತರೆ ಆರೋಪಿಗಳಾದ 2)ಸರೋಜಮ್ಮ 3)  ನಿಂಗಯ್ಯ  4) ಜ್ಯೋತಿ 5) ಶ್ರೀನಿವಾಸ್ ಚೀಣ್ಯ ಹಾಗು   6) ವೀಣಾ ಮತ್ತು ಅವಳ ಗಂಡ, ಮುತ್ತೇಗೆರೆ ಗ್ರಾಮ ರವರುಗಳು ಇದಕ್ಕೆ ಕಾರಣರಾಗಿರುತ್ತಾರೆ ಆದ್ದರಿಂದ ತಾವು ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕೆಂದು ಮತ್ತು ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ :

1. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 498(ಎ) 323-324-504-506 ಐ..ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ದೇವಮ್ಮ ಕೋಂ. ಪ್ರಕಾಶ, ನಾಗಮಂಗಲ ಟೌನ್ ರವರು ನೀಡಿದ ದೂರು ಏನೆಂದರೆ ಆರೋಪಿ ಪ್ರಕಾಶ, 50 ವರ್ಷ, ಗಾಣಿಗರು, ನಾಗಮಂಗಲ;  ಟೌನ್ ರವರು ಪಿರ್ಯಾದಿಯವರು ಅವರ ಮಗಳ ಮನೆಗೆ ಹೋಗುವ ವಿಚಾರದಲ್ಲಿ ಜಗಳ ತೆಗೆದು ಕೈಯಿಂದ ಎದೆ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಹಲ್ಲೆಮಾಡಿ ಊರಿನಲ್ಲಿ ಇರುವ ಮನೆಯನ್ನು ಮಾರಿ ಹಣ ತೆಗೆದುಕೊಂಡು ಬಾ ಎಂದು ಇಲ್ಲವಾದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾನೆ. 


ಮರಳು ಕಳವು ಹಾಗು ಸರ ಕಳವು ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 119/13 ಕಲಂ. 379-511 ಐ.ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ಡಾ/ ಮಮತ, ತಹಶೀಲ್ದಾರ್, ಮಂಡ್ಯ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಚಿದಾನಂದ, ನರಸಿಂಹಮೂರ್ತಿ,  ವೆಂಕಟೇಶಶೇಖರ್, ಪುಟ್ಟನಂಜ, ಜೆಸಿಬಿ ಡ್ರೈವರ್, ಎಲ್ಲರೂ ಹಟ್ಟಣ ಗ್ರಾಮದವರುಗಳು ಅಕ್ರಮವಾಗಿ ಮರಳು ತೆಗೆದು, ಟ್ರಾಕ್ಟರ್ ಗಳಿಗೆ ಮರಳು ತುಂಬಿಸುತ್ತಿದ್ದು, ಪಿರ್ಯಾದುದಾರರು ಮೇಲ್ಕಂಡ ಟ್ರಾಕ್ಟರ್ ಗಳನ್ನು ಹಾಗೂ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು, ಹಾಗೂ ಇದಕ್ಕೆ ಸಹಕರಿಸಲು ಬಂದಿದ್ದ  ದ್ವಿಚಕ್ರ ವಾಹನಗಳ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ಟ್ರಾಕ್ಟರ್ ಗಳು ಮತ್ತು ಆರೋಪಿಗಳನ್ನು ಮುಂದಿನ ಕ್ರಮ ಜರುಗಿಸಲು ವಶಕ್ಕೆ ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 175/13 ಕಲಂ. 379 ಐ.ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ಮರಿತಿಮ್ಮೇಗೌಡ, ಮಧ್ಯದ ಬೀದಿ, ಪಾಲಹಳ್ಳಿ ಗ್ರಾಮ ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು  ಕೆ.ಬೆಟ್ಟಹಳ್ಳಿ ದೇವಸ್ಥಾನಕ್ಕೆ ಹೋಗಿದ್ದು, ದೇವರನ್ನು ಹೊರಡಿಸುವ ಸಮಯದಲ್ಲಿ ತುಂಬಾ ನೂಕು ನುಗ್ಗಲಿದ್ದು, ನಾನು ದೇವಸ್ಥಾನದ ಮುಂಭಾಗ ನಿಂತಿದ್ದಾಗ ಯಾರೋ ಕಳ್ಳರು ನನಗೆ ಅರಿವಿಲ್ಲದಂತೆ ನನ್ನ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಚೈನನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಅಂದಾಜು ಬೆಲೆ ಸುಮಾರು 80,000/- ರೂ ಗಳಾಗಿರುತ್ತೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment