Moving text

Mandya District Police

DAILY CRIME REPORT DATED : 28-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-03-2013 ರಂದು ಒಟ್ಟು 66 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಸಾಮಾನ್ಯ ಹಾಗು 1 ವಾಹನ ಕಳವು ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,   1 ವಂಚನೆ ಪ್ರಕರಣ,  1 ಅತ್ಯಾಚಾರ ಪ್ರಕರಣ ಹಾಗು 60 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    


ಸಾಮಾನ್ಯ ಹಾಗು ವಾಹನ ಕಳವು ಪ್ರಕರಣಗಳು :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 380 ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ನಸೀಮ್ ಉನ್ನೀಸ, ಪ್ರಾಂಶುಪಾಲರು, ಸರ್ಕಾಠರಿ ಪದವಿ ಪೂರ್ವ ಕಾಲೇಜು, ಬಿಂಡಿಗನವಿಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಯಾವುದೋ ಒಂದು ಆಯುಧದಿಂದ ಕಿಟಕಿಯ ಬಾಗಿಲನ್ನು ಗುದ್ದಿ ಕಿಟಕಿಗಳ ಲಾಕ್ನ್ನು ತೆಗೆದು ತಂತಿಗಳ ಸಹಾಯದಿಂದ ಅಲ್ಲಿದ್ದ 4 ಮೌಸ್ ಗಳು, 1 ಪ್ರೋಜೆಕ್ಟರ್ ರಿಮೋಟ್, 3 ವಿಂಡೋ ಕ್ಲಾತ್ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ ಸುಮಾರು 1390/- ರೂ.ಗಳಷ್ಟಿರುತ್ತದೆ. ಕಂಪ್ಯೂಟರ್ ಉಪಕರಣಗಳನ್ನು ಕಳವು ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.


2. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 54/13 ಕಲಂ. 379 ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ಹೆ.ಕೆ.ರವಿ ಬಿನ್. ಬಾಪೂರಿ ಕೆಂಚೇಗೌಡ, ಒಕ್ಕಲಿಗರು, ವ್ಯವಸಾಯ, ಹೆಮ್ಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಪಿಯರ್ಾದಿಯವರು ತಮ್ಮ ಮನೆಯವರೆಗಿನ ಕಂಪೌಂಡ್ ನಲ್ಲಿ ಕಟ್ಟಿಹಾಕಿದ್ದ ಇಲಾತಿಯ ಹಸುವನ್ನು ಮತ್ತು ಅಲ್ಲದೆ ವೀರೇಗೌಡ ರವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಹಸುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 379 ಐ.ಪಿ.ಸಿ. 

ದಿನಾಂಕ: 28-03-2013 ರಂದು ಪಿರ್ಯಾದಿ ವೆಂಕಟೇಶ ಬಿನ್ ವೆಂಕಟಯ್ಯ, ಹುಲಿಗೆರೆಪುರ ಗ್ರಾಮ, ಕಸಬಾ  ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿಯರ್ಾದಿಯವರು ಹನುಮಂತ ನಗರದ ಶ್ರೀ.ಆತ್ಮ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತಮ್ಮ ಬಾಬ್ತು ಬೈಕ ನಂ:ಕೆ.ಎ 03-ಇಜಿ -3017 ಹಿರೋ ಹೊಂಡಾ ಮೋಟರ್ ಸೈಕಲ್  ದೇವಸ್ಥಾನಕ್ಕೆ ಪೂಜೆಗೆ ಹೋಗಿ ರಾತ್ರಿ ವಾಪಸ್ 01-30 ಗಂಟೆಗೆ ಬಂದು ನೋಡಲಾಗಿ ಬೈಕ್ ಇರಲಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 279-337-304(ಎ] ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ಪ್ರಕಾಶ್ ಡಿ. ಬಿನ್. ದೇವೇಗೌಡ, ದಮ್ಮನಿಂಗಲ ಗ್ರಾಮ, ಕೆ.ಆರ್. ಪೇಟೆ  ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಸೋಮಶೇಖರ್ ಬಿನ್. ಲೇಟ್. ದೇವೇಗೌಡ, ಶ್ಯಾರಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 20-03-2013 ರಂದು ತನ್ನ ಮೋಟಾರ್ ಬೈಕ್ ನಂ: ಕೆಎ-11 ಕ್ಯೂ-679 ರಲ್ಲಿ ಬರುತ್ತಿರುವಾಗ ಚಿಕ್ಕಹೊಸಹಳ್ಳಿ ಗ್ರಾಮದ ಸಾವಿತ್ರಮ್ಮ ಎಂಬುವರಿಗೆ ಡಿಕ್ಕಿ ಹೊಡೆಸಿ ಎಸ್.ಡಿ,ಸೋಮಶೇಖರ್ ರವರು ರಸ್ತೆಯಲ್ಲಿ ಬಿದ್ದು ತಲೆಯಲ್ಲಿ ತೀವ್ರವಾದ ಪೆಟ್ಟು ಬಿದ್ದು  ಗಾಯಾಳುವನ್ನು ಸಕರ್ಾರಿ ಆಸ್ಪತ್ರೆ ಕೆ.ಆರ್.ಪೇಟೆಗೆ ಸೇರಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 419-420-468-417 ಹಾಗು 34 ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ಜಯರಾಮು ಬಿನ್. ಕೆಂಚೇಗೌಡ, ಹುನಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ರಾಮಲಿಂಗಯ್ಯ ಹುನಗನಹಳ್ಳಿ ಗ್ರಾಮ ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸರ್ವೆ. ನಂ.16/1 ಬಿ ಯಲ್ಲಿ 0.28ರ ಗುಂಟೆ ಜಮೀನನ್ನು ರಾಮಲಿಂಗಯ್ಯ ಹಾಗೂ ಇತರೆಯವರು ಪೋರ್ಜರಿ ಮಾಡಿ ಭೋಗ್ಯದ ಖುಲಾಸೆ ಪತ್ರವನ್ನು ಸೃಷ್ಟಿ ಮಾಡಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅತ್ಯಾಚಾರ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. 376-420-506 ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ಶಮರ್ಿಳಾ ದೇವಿ ಬಿನ್. ಹನುಮೇಗೌಡ, ರಾಗಿಮುದ್ದನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ 1]ಆದರ್ಶ @ ಅಂಕೇಗೌಡ, 2]ಜಯಮ್ಮ. 3]ಶೃತಿ ಬಿನ್. ಜಯಮ್ಮ, ಎಲ್ಲರೂ ರಾಗಿಮುದ್ದನಹಳ್ಳಿ ಗ್ರಾಮ ರವರುಗಳು ಬಲವಂತದಿಂದ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಬಲಾತ್ಕಾರಮಾಡಿ ಕೊಲೆ ಮಾಡುವುದಾಗಿ ಹೆದರಿಸಿ ಚಿನ್ನದ ಓಲೆ ವಡವೆ ಕಿತ್ತುಕೊಂಡು ವಾಪಸ್ ಬಿಟ್ಟು ಹೋಗಿರುತ್ತಾರೆ ನನಗೆ ಮೋಸ ಮಾಡಿದವನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment