Moving text

Mandya District Police

DCR Dated : 21-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-03-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  1 ದಿ ಪ್ರೊಟೆಕ್ಷನ್ ಆಫ್ ದಿ ಚಿಲ್ಡ್ರನ್ಸ್ ಫ್ರಮ್ ಸೆಕ್ಸುಯಲ್ ಅಫೆನ್ಸಸ್ ಆಕ್ಟ್-2012 ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಕೊಲೆ ಪ್ರಕರಣ,  2 ಕಳ್ಳತನ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು ಹಾಗು 20 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ವಾಹನ ಕಳವು ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 43/13 ಕಲಂ. 379 ಐ.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ಸೈಯದ್ ಫರಾಜ್ ಬಿನ್ ಸೈಯದ್ ಮಾಸಿನ್, , ಹೆಚ್.ಸಿದ್ದಯ್ಯ ರೋಡ್, ಬೆಂಗಳೂರು-27 ರವರು ನೀಡಿದ ದೂರಿನ ಸಾರಾಂಶವೇನೆಂದರೆ   ದಿನಾಂಕ: 20-03-2013 ರಂದು ಮುತ್ತತ್ತಿ ಗ್ರಾಮದಲ್ಲಿ ಯಾರೋ ಕಳ್ಳರು ಮೋಟಾರ್ ಸೈಕಲ್ ಅನ್ನು ನಿಲ್ಲಿಸಿ ಸ್ನಾನ ಮಾಡಲು ಹೋಗಿದ್ದು ಮತ್ತೆ ವಾಪಸ್ಸು ಸಂಜೆ 4-30 ಗಂಟೆಯಲ್ಲಿ ಬಂದು ನೋಡಲಾಗಿ ಯಾರೋ ಕಳ್ಳರು ಮೋಟಾರ್ ಸೈಕಲ್ ಮತ್ತು ಅಲ್ಲಿ ಇಟ್ಟಿದ್ದ ಬ್ಯಾಗ್, ಬ್ಯಾಗ್ನಲ್ಲಿದ್ದ ಎರಡು ಮೊಬೈಲ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಬೆಲೆ ಸುಮಾರು 40,000/- ರೂಗಳು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ದಿ ಪ್ರೊಟೆಕ್ಷನ್ ಆಫ್ ದಿ ಚಿಲ್ಡ್ರನ್ಸ್ ಫ್ರಮ್ ಸೆಕ್ಸುಯಲ್ ಅಫೆನ್ಸಸ್ ಆಕ್ಟ್-2012 ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 354 ಐಪಿಸಿ & ದಿ ಪ್ರೊಟೆಕ್ಷನ್ ಆಫ್ ದಿ ಚಿಲ್ಡ್ರನ್ಸ್ ಫ್ರಮ್ ಸೆಕ್ಸುಯಲ್ ಅಫೆನ್ಸಸ್ ಆಕ್ಟ್-2012 ರೆ/ವಿ 34 ಐ.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ವೆಂಕಟೇಶ್ , ಮಕ್ಕಳ ಕಲ್ಯಾಣ ಸಮಿತಿಯ ನ್ಯಾಯಾಲಯದ ಅಧ್ಯಕ್ಷರು, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ 1] ಡಾ|| ಮಂಜುನಾಥ್  ಮತ್ತು  2] ರಾಮಚಂದ್ರ ರಾವ್, ಶಂಕರನಗರ, ಮಂಡ್ಯ ಸಿಟಿರವರುಗಳು ಬಾಲಕಿಯನ್ನು ದತ್ತು ಪಡೆದಿದ್ದು, ಮಗು ಪೋಷಕರ ಜೊತೆ ಇರಲು ಇಚ್ಛಿಸದಿರುವ ಬಗ್ಗೆ ಮಗುವನ್ನು ವಿಚಾರಿಸಲಾಗಿ ದತ್ತು ಪಡೆದ ಡಾ|| ಮಂಜುನಾಥ್ ಮತ್ತು ಇವರ ತಂದೆ ರಾಮಚಂದ್ರರಾವ್ ರವರು ತಾನು ಒಬ್ಬಳೆ ಇರುವ ಸಂದರ್ಭಗಳಲ್ಲಿ ಲೈಂಗಿಕ ಕಿರುಕುಳ ನೀಡಿರುತ್ತಾರೆಂದು ತಿಳಿಸಿರುತ್ತಾಳೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 

ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 21-03-2013 ರಂದು ಪಿರ್ಯಾದಿ ಬಾಗ್ಯ ಕೋಂ. ಶ್ರೀಕಂಠ, ವಾಸ ನಂ. 1527, 4 ನೇ ಕ್ರಾಸ್,  ಜಯಲಕ್ಷ್ಮೀ ಸಾಮಿಲ್ ಎದುರು ರಸ್ತೆ, ಗುತ್ತಲು ಕಾಲೋನಿ, ಮಂಡ್ಯ ರವರು ನೀಡಿದ ದೂರು ಏನೆಂದರೆ ಅವರ ಮಗ ಕಿರಣ್  ಬಿನ್. ಶ್ರೀಕಂಠ, ಗುತ್ತಲು ಕಾಲೋನಿ ರವರು ದಿನಾಂಕ: 21-03-2013 ಶಾಲೆಗೆ ಹೋಗಿರುತ್ತಾನೆ. ಸಂಜೆ 04-30 ಗಂಟೆಗೆ  ವಾಪಸ್ಸು ಮನೆಗೆ ಬರಬೇಕಾಗಿತ್ತು ಆದರೆ ಇಲ್ಲಿಯತನಕ ಶಾಲೆಯಿಂದ ನನ್ನ ಮಗ ಮನೆಗೆ ಬಂದಿರುವುದಿಲ್ಲಾ ನಾನು ಎಲ್ಲಾ ಕಡೆ ನನ್ನ ಸಂಬಂಧಿಕರು ಹಾಗು ಶಾಲೆಗೆ ಹೋಗಿ ವಿಚಾರ ಮಾಡಲಾಗಿ ನನ್ನ ಮಗ ಎಲ್ಲೂ ಸಿಕ್ಕಿರುವುದಿಲ್ಲಾ ಅವನನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಕೊಲೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 144/13 ಕಲಂ. 302-201 ಐ.ಪಿ.ಸಿ. 

ದಿನಾಂಕ: 21-03-2013 ರಂದು ಪಿರ್ಯಾದಿ ಎನ್.ಎಸ್. ನಾಗೇಂದ್ರ ಬಿನ್. ದೊಡ್ಡ ಸಂಜಿ ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಮ್ಮ ಚಿಕ್ಕಹನುಮಯ್ಯ ಬಿನ್. ದೊಡ್ಡ ಸಂಜೀವಪ್ಪ, 40 ವರ್ಷ,  ಕೂಲಿ ಕೆಲಸ, ನೆಲಮನೆ ಗ್ರಾಮ ರವರು  ದಿನಾಂಕ 08-02-2013  ರಂದು ರಾತ್ರಿ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರುವುದಿಲ್ಲಾ  ಗ್ರಾಮದಲ್ಲಿ ರಂಗಸ್ವಾಮಿ ರವರೊಡನೆ ಜಗಳ ಆಗಿದ್ದು ದಿನಾಂಕ: 09-02-2013 ರಂದು ರೈಲ್ವೆ ಹಳಿ ಬಳಿ ಶವ ದೊರೆತಿದ್ದು ರಂಗಸ್ವಾಮಿ ಅಥವಾ ಯಾರೋ ಆಸಾಮಿಗಳು ಕೊಲೆ ಮಾಡಿ ತಂದು ಹಾಕಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಕಳ್ಳತನ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 145/13 ಕಲಂ. 457-380 ಐ.ಪಿ.ಸಿ

ದಿನಾಂಕ: 21-03-2013 ರಂದು ಪಿರ್ಯಾದಿ ಕುಮಾರ.ಪಿ ಮುಖ್ಯೋಫಾಧ್ಯಾಯರು, ಸರ್ಕಾರಿ ಕಿರಿಯ .ಪ್ರಾಥಮಿಕ ಪಾಠಶಾಲೆ, ದೊಡ್ಡೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಎಂದಿನಂತೆ ದಿನಾಂಕ: 20-03-2013 ರಂದು ಶಾಲೆಯ ಕೊಠಡಿಯ ಬೀಗ ಹಾಕಿಕೊಂಡು ಕುಳಿತ್ತಿದ್ದು, ಈ ದಿನ ಬೆಳಿಗ್ಗೆ ಬಂದು ನೋಡಲಾಗಿ ಕೊಠಡಿಯ ಬೀಗ ಮುರಿದು  ಒಳಗೆ ಇದ್ದ ಎರಡು ಇಂಡಿಯನ್ ಹೆಚ್.ಪಿ. ಖಾಲಿ ಗ್ಯಾಸ್ ಸಿಲಿಂಡರ್ ಅನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು  ಅವುಗಳ ಬೆಲೆ ಸುಮಾರು 3000/- ರೂ ಆಗಿರುತ್ತೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 146/13 ಕಲಂ. 457-380 ಐ.ಪಿ.ಸಿ.


ದಿನಾಂಕ: 21-03-2013 ರಂದು ಪಿರ್ಯಾದಿ ಕೆ.ವಸಂತ, ಮುಖ್ಯಶಿಕ್ಷಕರು, ಸರ್ಕಾರಿ ಕಿರಿಯ .ಪ್ರಾಥಮಿಕ ಪಾಠಶಾಲೆ, ಅಚ್ಚಪ್ಪನಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಎಂದಿನಂತೆ ದಿನಾಂಕ: 20-03-2013 ರಂದು ಶಾಲಾ ಕೋಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು ಈ  ದಿನ ಬೆಳಿಗ್ಗೆ ಬಂದು ನೋಡಲಾಗಿ ಯಾರೋ ಕಳ್ಳರು ಕೊಠಡಿಯ ಬೀಗ ಮುರಿದು ಒಳಗೆ ಇದ್ದ   ಒಂದು ಗ್ಯಾಸ್ ಸಿಲಿಂಡರ್ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಬೆಲೆ ಸುಮಾರು 1500/-  ಆಗಿರುತ್ತೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಕುಮಾರ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಮನೆಗೆ ಸರಿಯಗಿ ಬರದೆ ಇದುದ್ದರಿಂದ  ಪೊಲೀಸರಿಗೆ ದೂರು ನೀಡಿದ್ದು,  ಅವರು ಠಾಣೆಗ ಕರೆಯಿಸಿ ವಿಚಾರ ಮಾಡಿ ತಿಳುವಳಿಕೆ ನೀಡಿದ್ದು ಕುಮಾರನು ದಿನಾಂಕ: 20-03-2013 ರಂದು ಮನೆಯ ಬಳಿ ವಿಷ ಸೇವನೆ ಮಾಡಿ ಆಸ್ಪತ್ರೆಗೆ  ಚಿಕಿತ್ಸೆಗೆ ಸೇರಿಸಿದರೂ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ರಾಘವನ್ ಬಿನ್. ಹೊನ್ನಪ್ಪ, ನಜರ್ಬಾದ್, ಮೈಸೂರು, ಶ್ರೀ ರಂಗಪಟ್ಟಣ ಪಶ್ಚಿಮವಾಹಿನಿಯಲ್ಲಿ ಕೆಲಸ ಇವರು ನೀಡಿದ ದೂರು ಏನೆಂದರೆ ಅಪರಿಚಿತ ಹೆಂಗಸು ಬರ್ಹಿದೆಸೆಗೆ ಹೋಗಿ ನೀರು ತೆಗೆದುಕೊಳ್ಳಲು ಕಾವೇರಿಯ ಹೊಳೆ ಕಡೆಗೆ ಬಂದಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮರದ ಬೊಡ್ಡೆ ಮತ್ತು ಕಲ್ಲುಗಳ ಮೇಲೆ ಬಿದ್ದು ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment